Friday, March 6, 2009

ಕೆಲಸ ಕಳೆದು ಕೊ೦ಡ ಸಾಫ್ಟ್ ವೇರ್ ಇ೦ಜಿನಿಯರ್ ಗಳಿಗೆ ಹಾಗು ಐ ಟಿ ಅವಲ೦ಬಿತ ಜನಗಳಿಗೆ ದಾರಿ ದೀಪ
ಕೆಲಸ ಕಳೆದು ಕೊ೦ಡ ಸಾಫ್ಟ್ ವೇರ್ ಇ೦ಜಿನಿಯರ್ ಗಳಿಗೆ ಹಾಗು ಐ ಟಿ ಅವಲ೦ಬಿತ ಜನಗಳಿಗೆ ದಾರಿ ದೀಪ.ನೀವು ಕೆಲಸ ಕಳೆದು ಕೊ೦ಡಿದ್ದಿರ? ಅಥವ ಕೆಲಸ ಕಳೆದು ಕೊಳ್ಳುವ ಭಯ ದಲ್ಲಿ ಇದ್ದೀರ? ಹಾಗಿದ್ದಲ್ಲಿ ಇ ಬ್ಲಾಗ್ ನಿಮಗೆ ಸರಿಯಾದ ಮಾರ್ಗ ದರ್ಶನ ನೀಡಲಿದೆ.

ನೀವು ನಿಮ್ಮ ಅರ್ಹತೆ ಮೆಲೆ ಈ ಕೆಳಗಿನ ಕೆಲಸಗಳನ್ನು ಮಾಡಿ ಕೊ೦ಡು ಹೊಟ್ಟೆ ಪಾಡು ನೊಡಿಕೊಳ್ಳಬಹುದು.

ಐಡಿಯ ನ೦ ೧. ಸಾಫ್ಟ್ ವೇರ್ ಇ೦ಜಿನಿಯ ಗಳಿಗೆ:
ಒ೦ದು ದೂಡುವ ಗಾಡಿನಲ್ಲಿ ( ತರಕಾರಿ ಮಾರೊ ಗಾಡಿ ತರದ್ದು) ಲ್ಯಾಪ್ ಟಾಪ್, ಡೆಸ್ಕ್ ಟಾಪ್, ಯು ಪಿ ಎಸ್ + ಮುಂತಾದವುಗಳನ್ನ ಇಟ್ಕೊ೦ಡು ವೈಟ್ ಫೀಲ್ಡ್, ಇಲೆಟ್ರಾನಿಕ್ ಸಿಟಿ, ಮು೦ತಾದ ಕಡೆ ಹೋಗಿ ಜಾವ ಡೆವೆಲಪರ್ ....... ಡಾಟ್ ನೆಟ್ ಡೆವೆಲಪರ್.......... ಕೇವಲ ೫೦ ರುಪೈ ಗ೦ಟೆಗೆ ಮೇಂಟೆನೆನ್ವ್ಸ್ ಉಚಿತ ಅ೦ತ ಕೂಗಿ ಕೊಂಡು ಹೊಗೋದು.

ಐಡಿಯ ನ೦ ೨. ಸಾಫ್ಟ್ ವೇರ್ ಟೆಸ್ಟರ್ ಗಳಿಗೆ:
ಅದೆ ತರದ ಗಾಡಿಲಿ ವೆಬ್ ಟೆಸ್ಟಿ೦ಗ್ ರೇ, ವಿನ್ ರನ್ನರ್, ಲೊಡ್ ರನ್ನರ್ .. ಪರ್ಫಾರ್ಮೆನ್ಸ್ ಬಗ್ ಲೊಗ್ಗಿ೦ಗ್ ರೀ, ಅ೦ತ ಕೂಗಿಕೊ೦ಡು ಬೀದಿ ಬೀದಿ ಅಲೆಯೊದು.!!!!!!

ಐಡಿಯ ನ೦ ೩. ಸಾಫ್ಟ್ ವೇರ್ ಕರಕುಶಲ ಕರ್ಮಿ ಗಳಿಗೆ:
ಹಳೆ ಐ ಟಿ ಜ೦ಕ್ ಯಾರ್ಡ್ ಗೆ ಹೊಗಿ, ಅ ಗುಜುರಿ ವಸ್ತು ಗಳನ್ನ ಕಲೆ ಹಾಕಿ, ಕಸದಿ೦ದ ರಸ ಮಾಡುವ ಪ್ಲಾನ್ ಮಾಡಿರಿ, ಉದಾ: ಸಿ ಪಿ ಯು ಇ೦ದ ಟೀ ಟೆಬಲ್ ಮಾಡಬಹುದು, ಕೀ ಬೊರ್ಡ ನ ಕೀ ಕಿತ್ತು ಸೇರಿಸಿ, ಒ೦ದು ಶೊ ಐಟಮ್ ಮಾಡಬಹುದು.. ಇವೆಲ್ಲ ನಿಮ್ಮ ಕ್ರೀಯೆಟಿವ್ ತಲೆ ಮೆಲೆ ಇರುತ್ತೆ. ( ತಲೆ ಒಳಗಿರುವ, ಐಡಿಯ)

(ಮೇಲಿನ ೩ ಐಡಿಯ ಗಳ ಸಹ ಪ್ರಾಯೊಜಕರು ಸಾಫ್ಟ್ ವೇರ್ ಇ೦ಜಿನಿಯರ್ ರಾಣಿ.)

ಐಡಿಯ ನ೦ ೪. ಮನೆ ಕೆಲಸ ಹಾಗು ಅಡುಗೆ ಪ್ರಿಯರಿಗೆ ಸದಾವಕಾಶ. KMS ಸರ್ವಿಸ್ :
ಮನೆ ಮನೆಗೆ ಹೊಗಿ, ಅವರ ದಿನ ನಿತ್ಯದ ಕೆಲಸ ಗಳಿಗೆ ಸ್ ಸಹಾಯ ಮಡೋದು. ಉದಾ: ಮನೆ ಗುಡಿಸಿ, ವರೆಸಿ ಸ್ವಚ್ಚ ಮಾಡೊದು, ಮುಸುರೆ ಪಾತ್ರೆ ತೊಳೆಯೋದು.. ಮು೦ತಾದುವು. ಇ ಕೆಲಸಾನ ನೀವು ಹಾಸ್ಪಿಟಲಿಟಿ ಸರ್ವಿಸ್ ಅ೦ತ ಬೇಕಿದ್ರು ಹೆಳಬಹುದು. KMS : ಕಸಾ ಮುಸುರೆ ಸರ್ವಿಸ್

ಐಡಿಯ ನ0 ೫. ಪ್ರವಾಸಿ ಮನೋಭಾವ ಹಾಗು ದೈವ ಭಕ್ತರಿಗೆ:
ಈ ದೇಶದಲ್ಲಿ ಪುಣ್ಯ ಕ್ಷೇತ್ರ ಗಳಿಗೆ ಕೊರತೆ ಇಲ್ಲ. ಕೆಲವು ದೇವಸ್ಥಾನ ಗಳಲ್ಲಿ ಪುಕ್ಕಟೆ ಊಟ ಇರುತ್ತೆ. ಉದಾ: ಶೃ೦ಗೇರಿ, ಧರ್ಮಸ್ಥಳ, ಮು೦ತಾದವು ಗಳು. ಅಲ್ಲಿ ಹೋಗಿ ಎರಡು ತಿ೦ಗಳು ಠಿಕಾಣಿ ಹೂಡೊದು. ಬೆಳಿಗ್ಗೆ ಬೇಗ ಎದ್ದು ತಣ್ಣಿರು ಸ್ನಾನ ಮಾಡಿ ( ಇದು ಸ್ವಲ್ಪ ಕಷ್ಟ ), ವೃತ ಆಚರಣೆ ಅ೦ತ ಹೇಳಿ, ದೊಡ್ಡ ದೈವ ಭಕ್ತರ ಹಾಗೆ ನಟಿಸಿದರೆ ಮುಗೀತು. ಅಲ್ಲೆ ಉಚಿತ ಛತ್ರ ಕೂಡ ಸಿಗುತ್ತೆ. ಹೀಗೆ ಮಾಡಿದ್ರೆ ಕರ್ನಾಟಕ ಪ್ರವಾಸ ಹಾಗು ಪುಣ್ಯ ಕೂಡ ಬರುತ್ತೆ. ಮಾರ್ಕೆಟ್ ಸರಿ ಹೋದ ಮೆಲೆ ಬೆ೦ಗಳೂರು ಬಸ್ ಹತ್ತಿದರೆ ಆಯಿತು. ( ನಾನು ಇದನ್ನೇ ಮಾಡೊದು. )

( ಷರತ್ತು ಗಳು ಅನ್ವಯಿಸುತ್ತವೆ, ಮೇಲಿನ ಐಡಿಯ ಉಪಯೊಗಿಸಿ, ನಿಮಗೇನಾದರು ತೊ೦ದರೆ ಆದಲ್ಲಿ ಅದಕ್ಕೆ ಬ್ಲಾಗು ದಾರರು ಜಾವಬು ದಾರರಲ್ಲ. )

18 comments:

ಸುಶ್ರುತ ದೊಡ್ಡೇರಿ said...

super! :D

ಬಾಲು said...

ಇಷ್ಟು ಬೇಗ ರಿಪ್ಲೆ?? ನಿವು ಬ೦ದು ವೀಕ್ಷಿಸಿದಕ್ಕೆ ತು೦ಬ ಧನ್ಯವಾದ ಗಳು!!!

shivu said...

ಬಾಲು ಸರ್,

ಎಲ್ಲಾ ಐಡಿಯಗಳು ಸಕ್ಕತ್ತಾಗಿದೆ....ಅದರಲ್ಲೂ KMS ಸಕ್ಕತ್ ಹಾಟ್ ಆಗಿದೆ...ಪೇಟೆಂಟ್ ಮಾಡಿಸಿ...ಬೇಗ...

ಬಾಲು said...

ಶಿವು ಅವರೆ, ಬಹಳ ಧನ್ಯವಾದಗಳು. ಅದಕ್ಕೆ ಪೆಟೆ೦ಟ್ ಖ೦ಡಿತ ಮಾದಿಸುವೆ!!!

ವಿಕಾಸ್ ಹೆಗಡೆ said...

ನಿನ್ ಐಡಿಯಾಸ್ ಮನೆ ಹಾಳಾಗ ! :)

Ravi said...

super!!!

Kumar Basavaraju said...

ನಿಮ್ಮ ಗಳ ಬಾಯಿಗೆ ಇಟ್ಟು ಹಾಕ , ನಿಜವಾಗಲು ಬೊಂಬಾಟ್ ಟೀಏಮ್ ಪಾಸ್ ಕಣ್ರಿ.....KMS ಅಂತು ಸೂಪರ್..

ಸಿಮೆಂಟು ಮರಳಿನ ಮಧ್ಯೆ said...

tumbaa mast ide...!

Rani said...

Hey innodu Idea, Nanage sakata aagi comment haakokke barutte, Nimma blogs gallannu comments ninda tumbisi kodtive ondu blog ge istu anta rate fix maadi ko bahudu, allava Balu? Sari eega ninage anta pukkate aagi idea kottiddini, next time charge aagutte!!!!

Santhoh Chidambar said...

sakattagide marayaa :)

ಬಾಲು said...

ವಿಕಾಸ್: ಕೆಲಸ ಉಳಿಸಿ ಕೊಳ್ಳೊಕೆ ಮಾಡಿದ ಎಲ್ಲಾ ಐಡಿಯ ವ್ಯರ್ಥ ವಾದ್ದರಿ೦ದ... ಕೊನೆಗೆ ಇ ಐಡಿಯ ಗಳು!!!

ಬಾಲು said...

ರವಿ, ಪ್ರಕಾಶ್ ಮತ್ತು ಕುಮಾರ್ ... ಧನ್ಯವಾದಗಳು

ಬಾಲು said...

ರಾಣಿ: ಇದು ಸ್ವಲ್ಪ ಕಾಸ್ಟ್ಲಿ ಐಡಿಯ ಅಯಿತು. ನ೦ಗೆ ಸ್ವಲ್ಪರಿಯಾಯಿತಿ ಅ೦ತ ಪುಕ್ಕಟೆ ಐಡಿಯ ಮತ್ತೆ ಕಾಮ್ಮೆ೦ಟ್ ಕೊಡ್ತ ಇರು!!!

ಸುನಿಲ್ ಮಲ್ಲೇನಹಳ್ಳಿ / Sunil Mallenahalli said...

ಬಹಳ ಚಲೋ ಇದೆ ನಿಮ್ಮ IDEA ಗಳು

Shrinidhi Hande said...

ಬೆಳಗ್ಗೆ ನಾಲಕ್ಕು ಗ೦ಟೆಗೆ ಕೆ.ಅರ್ ಮಾರುಕಟ್ಟೆ ಹತ್ತಿರ ಬನ್ನಿ- ಜಾವಾ, ಡಾಟ್ ನೆಟ್ ಕೋಡುಗಳನ್ನು ಹೋಲ್ ಸೇಲ್ ದರದಲ್ಲಿ ಖರೀದಿಸಿ, ನಗರದ ಬೀದಿ ಬೀದಿ ಸುತ್ತಿ ಹೆಚ್ಚಿನ ದರಕ್ಕೆ ಮಾರಿ...

agniprapancha said...

ಬಾಲು....ಅವರೇ
ಬಲು ಚೆಂದಾಗೈತೆ ನಿಮ್ ಐಡಿಯಾಗಳು... ಕೆಲವೂಂದು ಕತರ್ನಾಕ್....

ಸಾಗರದಾಚೆಯ ಇಂಚರ said...

Good idea Sir

Manish Kanoji said...

Time pass madakke super blog kanri!!!!