Friday, September 18, 2009

ಕುಡುಕರು ಮತ್ತು ಕು.ರ.ವೇ


ಕಳೆದ ವಾರ ಕಛೆರಿ ಕೆಲ್ಸ ಮುಗಿಸಿ ಕೊ೦ಡು ಮನೆ ಕಡೆ ಹೊಗ್ತಾ ಇದ್ದೆ, ಮನೆ ಸಮೀಪನೆ ನೆ ಜನರೆಲ್ಲ ಗು೦ಪು ಗೂಡಿದ್ದರು, ಎನೆನೋ ಗುಸು ಗುಸು, ಕೆಲವರು ಗಾಬರಿಯಲ್ಲಿ, ಇನ್ನು ಕೆಲವರು ಮನೆ ಟೆರೇಸ್ ನಿ೦ದ ನೋಡ್ತಾ ಇದ್ದರು. ಒನ್ದು ಜೋರಾಗಿ ಹೆಣ್ಣು ದ್ವನಿ ಕೇಳುತ್ತಾ ಇತ್ತು, ಮದ್ಯೆ ಮದ್ಯೆ ಅಳು ಬೇರೆ, ಒಹ್ ಯಾವುದೊ ವರದಕ್ಷಿಣೆ ಗಲಾಟೆ ಇರಬೆಕೆ೦ದು ನೋಡಿದರೆ ಹೆ೦ಡತಿ ಕೈಯಲ್ಲಿ ಪೊರಕೆ ಹಿಡಿದು ನಿ೦ತಿದ್ದರೆ, ಗ೦ಡ ದೂರದಲ್ಲಿ ನಿ೦ತಿದ್ದ. "ದಿನಾ ಕುಡಿದು ಬರುತ್ತಿಯ? ಎಷ್ಟು ಸಲ ಹೆಳೊದು ನಿ೦ಗೆ?" ಅ೦ತ ಹೇಳಿ ಸಾರ್ವಜನಿಕವಾಗಿಯೆ ತದುಕುತ್ತಾ ಇದ್ದಳು!! ಆತ ಹೆ೦ಡತಿಯ ಕೈಯಿ೦ದ ಪೆಟ್ಟು ತಿ೦ದು ಇ೦ಗು ತಿ೦ದ ಮ೦ಗನ ತರ ಆಗಿದ್ದ!!

ಪಾಪ ಒ೦ದು ಬಾಟಲು ಕುಡಿದರೆ ಇಷ್ಟೆಲ್ಲಾ ಕಷ್ಟ ಪಡಬೇಕ? ಅದಕ್ಕಾಗಿ ಸಮಾಜದಿ೦ದ ತಿರಸ್ಕಾರ ಗೊಳಗಾಗ ಬೇಕ?

ನಂಗೆ ಅನ್ನಿಸುತ್ತೆ ಕುಡುಕರ ಬಗ್ಗೆ ಈ ಸಮಾಜಕ್ಕೆ ಒಳ್ಳೆಯ ಭಾವನೆಯೇ ಇಲ್ಲ, ಅವರನ್ನು ಮನುಷ್ಯರಂತೆ ನೋಡೋದೇ ಕಡಿಮೆ! ಕುಡುಕನ ಹೆ೦ಡತಿ ಅ೦ದರೆ ಹೊಟ್ಟೆಗೆ ಇಲ್ಲದವಳು, ದಿನಾ ಗ೦ಡನ ಕೈಲಿ ಪೆಟ್ಟು ತಿನ್ನುವವಳು, ಅವನು ಮಕ್ಕಳಿಗೆ ಮದುವೆ ಮಾಡುವುದೇ ಇಲ್ಲ, ಇನ್ನು ಮು೦ತಾದುವು ಎಲ್ಲರ ಅಭಿಪ್ರಾಯ! ಅವನು ಎಷ್ಟೇ ಒಳ್ಳೆ ಮಾತು ಹೇಳಿದ್ದರು ಅದು ಗಣನೆಗೆ ಬರೋಲ್ಲ. ಭಾಗಷ್ಯ ಇಂತಹ ಸಮಸ್ಯೆಯನ್ನು ಹೋಗಲಾಡಿಸಲಿಕ್ಕೆ ಕುಡುಕರೆಲ್ಲ ಸೇರಿ ಚಳುವಳಿ ಮಾಡಬೇಕೇನೋ, ಎಂ ಜಿ ರಸ್ತೆ ಲಿ, ಗಾಂಧಿ ಪ್ರತಿಮೆ ಬಳಿ ಸಮಾನ ಹಕ್ಕಿಗಾಗಿ ಹೋರಾಟ ನಡೆಸಬೇಕಾದ ಜರೂರತ್ತು ಇದೆ.

ನನ್ನ ಮಟ್ಟಿಗೆ ಹೇಳೋದಾದ್ರೆ ಕುಡುಕರೇ ನಿಜವಾದ ದೇಶಪ್ರೇಮಿಗಳು, ಹಾಗು ಮಾನವತಾ ವಾದಿಗಳು. ಕುಡಿಯುವುದರಿ೦ದ ಆಗುವ ಲಾಭ, ಅದರ ಸತ್ಪರಿಣಾಮಗಳು ಎಲ್ಲಾ ಇದೆ. ಹೆಗಂತಿರೋ... ಮುಂದೆ ಓದಿ

1. ಒಬ್ಬ ನೂರು ರುಪಾಯಿಯ ಹೆಂಡ ಕುಡಿದ ಅಂದ್ರೆ ದೇಶದ ಬೊಕ್ಕಸಕ್ಕೆ ನೂರು ರೂಪಾಯಿ ಬಂತು ಅಂತ ಅರ್ಥ!! ಇ ದೇಶಕ್ಕೆ, ದೇಶದ ಉದ್ಯಮಿಗಳಿಗೆ ಕುಡುಕರಿಂದ ಎಷ್ಟೆಲ್ಲ ಪ್ರಯೋಜನ ಇದೆ. ಕುಡುಕರೇ ಇಲ್ಲದಿದ್ದರೆ ಮಲ್ಯ ಇರುತ್ತಿದ್ದನ? (ಅವನ ಕ್ಯಾಲೆಂಡರ್ ಇರುತ್ತಿತ್ತಾ? ) ದೇಶದ ಗಡಿ ಯನ್ನ ಸೈನಿಕರು ಕಾಯುತ್ತಾ ಇದ್ದರೆ, ಕುಡುಕರು ತಮ್ಮ ಜೇಬಿನಿಂದ ದೇಶದ ಅರ್ಥ ವ್ಯವಸ್ಥೆಯನ್ನು ಬಲಪಡಿಸುತ್ತಾ ಇದ್ದಾರೆ. ಈಗ ನೀವೇ ಹೇಳಿ ಯಾರು ನಿಜವಾದ ದೇಶ ಪ್ರೇಮಿಗಳು?

2. ಇಂದು ಮಾರುಕಟ್ಟೆಯಲ್ಲಿ ಲಬ್ಯವಿರುವ ಬಹು ಪಾಲು ಮಧ್ಯ ಗಳು ಸಸ್ಯಾಹಾರಿ ವಸ್ತುಗಳಿಂದ ತಯಾರಾಗಿದೆ. ಆದ್ದರಿಂದ ಪೀಟ ಸಂಘಟನೆಯು ಬೆತ್ತಲೆ ಹುಡುಗಿರನ್ನು ಬಿಟ್ಟು ಕಂಠ ಪೂರ ಕುಡಿದವರನ್ನು ರೂಪದರ್ಶಿಗಲಾಗಿ ನೆಮಿಸಿಕೊಳ್ಳ ಬೇಕಿದೆ!!

3. ಕುಡಿದವರು ಸಾಮಾನ್ಯವಾಗಿ ಪ್ರಾಮಾಣಿಕವಾಗಿ ನಡೆದುಕೊತಾರೆ, ಹಾಗು ಬಹಳಷ್ಟು ಸಮಯದಲ್ಲಿ ಸತ್ಯವನ್ನೇ ಹೇಳುತ್ತಾರೆ. ಆದರೆ ಕುಡಿದು ಊಟ ಮಾಡುವಾಗ ಅಡುಗೆ ಚೆನ್ನಾಗಿಲ್ಲ ಅಂದರೆ, ಅವನು ಕುಡಿದು ಮನೆಗೆ ಬಂದು ಗಲಾಟೆ ಮಾಡುವ ಪತಿರಾಯ ಆಗಿ ಬಿಡುತ್ತಾನೆ.!!

4. ಕುಡಿಯುವುದರಿ೦ದ ನೆನಪಿನ ಶಕ್ತಿ ಕಡಿಮೆ ಆಗುತ್ತದೆ ಇದರಿಂದಲೇ ದಿನ ಬೆಳಿಗ್ಗೆ ಅದೇ ಹೆ೦ಡತಿ ಯ ಮುಖ ನೊಡಲು ಸಾದ್ಯವಾಗುತ್ತಾ ಇರುವುದು!!

5. ಜನಸ೦ಖ್ಯೆ ಕಡಿಮೆ ಮಾಡಲು ಸರ್ಕಾರಗಳು ಎಷ್ಟೆಲ್ಲಾ ಬ೦ಬಡ ಹೊಡೆದುಕೊ೦ಡರು ಎನೂ ಸಾದ್ಯ ಆಗ್ತ ಇಲ್ಲ. ನಮ್ಮ ಕುಡುಕರು, ಕುಡಿದು ವಾಹನ ಚಲಾಯಿಸಿ, ದೇಶಕ್ಕೆ ತಮ್ಮ ಕೈಲಾದ ಸಹಾಯ ಮಾಡುತ್ತಾ ಇದ್ದಾರೆ!!

6. ಜೀವನವನ್ನು ಸುಖ ಮತ್ತು ಕುಶಿಯಿ೦ದ ಕಳೆಯಲು ಹಲವು ಮಾರ್ಗಗಳು ಇವೆ, ಆದರೆ ಅವುಗಳಲ್ಲಿ ಬಹುಪಾಲು ಸಿಕ್ಕಪಟ್ಟೆ ದುಭಾರಿ. ಉದಾ: ಡ್ರಗ್ಸ್, ಮತ್ತೆ ಗರ್ಲ್ ಫೆ೦ಡ್!! ಇದನ್ನ ಗಮನಿಸಿದಾಗ ಕುಡಿತವೊ೦ದೆ ಸುಲಭ ಮಾರ್ಗ!!

7. ಹಕ್ಕಿತರ ಹಾರಬೇಕು ಅ೦ತ ಎಲ್ಲರಿಗೂ ಆಸೆ ಇರುತ್ತದೆ, ಆದರೆ ಎಲ್ಲರಿಗು ಎಲ್ಲಿ ಸಾದ್ಯ? ಒಮ್ಮೆ ವಿಮಾನ ಹತ್ತಿ ಬ೦ದರೆ ಜೇಬು ಹಗುರ ಆಗಿ ಬಿಡುತ್ತದೆ, ಹಾಗಾಗಿ ಹಕ್ಕಿ ತರ ಹಾರಬೇಕು ಅ೦ತ ಅನ್ನಿಸಿದಲ್ಲಿ, ಒಂದು 90 ಹೊಡಿಬೇಕು!!! ಅಕಾಶದಲ್ಲಿ ತೇಲಿದ ಹಾಗೆ ಆಗುತ್ತದೆ.!!!


ಈಗ ನೀವೆ ಹೇಳಿ ಆತ ಕುಡಿತಾನೆ ಅ೦ದ ಮಾತ್ರಕ್ಕೆ ಅವನು ಕೆಟ್ಟವನ?ಚುನಾವಣಾ ಸಮಯದಲ್ಲಿ ಮಾತ್ರ ಕುಡುಕರ ಬಗ್ಗೆ ಚಿಂತಿಸುವ ರಾಜಕೀಯ ಪಕ್ಷಗಳು, ಚುನಾವಣಾ ನಂತರವೂ ಅವರಿಗೆ ಸುಲಭವಾಗಿ ಕುಡಿಯುವಂತೆ ಆಗಲು ಸಾಕಷ್ಟು ಕೆಲಸಗಳನ್ನು ಮಾಡಬೇಕಿದೆ. ಚುನಾವಣೆಯಲ್ಲಿ ಹೆಂಡ ಹಂಚೋಕೆ ಅಂತಲೇ ಒಬ್ಬ ಮಂತ್ರಿಯನ್ನು ಮಾಡಿದರೆ ಚೆನ್ನಾಗಿರುವುದು. ಮಹಿಳೆ ಮತ್ತು ಮದಿರೆ ಇಷ್ಟ ಅಂತ ಹೇಳಿಕೆ ಕೊಟ್ಟಿದ್ದ ದಿವಂಗತ ಪಟೇಲರನ್ನ ಇದಕ್ಕೆ ಪ್ರೇರಣೆ ಅಂತ ಕೊಚ್ಚಿಕೊಳ್ಳಬಹುದು.


ಕುಡುಕರ ರಕ್ಷಣೆಗೆ ಕುರವೇ ಸ್ಥಾಪನೆ ಮಾಡಬೇಕು. (ಕುಡುಕರ ರಕ್ಷಣಾ ವೇದಿಕೆ) ಹಾಗೂ ಅದರ ಸದಸ್ಯರಿಗೆ ಸಬ್ಸಿಡಿ ದರದಲ್ಲಿ ಮದ್ಯ ದೊರೆಯುವಂತೆ ಮಾಡಬೇಕು.

ಇವುಗಳು ನನ್ನ ಹಾಗೂ ಸಮಸ್ತ ಕುಡುಕರ ಆಲೋಚನೆ, ಅನಿಸಿಕೆ ಮತ್ತು ಅಗತ್ಯ ಎಂದು ಕೊಟ್ಟೆ ಸಾರಾಯಿ ಮೇಲೆ ಪ್ರಮಾಣಿಸಲಾಗಿದೆ.


ಸೂಚನೆ: ಸ್ತ್ರೀವ್ಯಾದಿಗಳು ಯಾರೂ ನನ್ನ ಮೇಲೆ ದ೦ಡೆತ್ತಿ ಬರಬಾರದಾಗಿ ವಿನ೦ತಿ!! (ಬೆ೦ಗಳೂರ೦ತ ಊರಲ್ಲಿ ಹುಡುಗ ಇರಲಿ, ಹುಡುಗಿ ಕುಡಿಯೊದು ಕೂಡ ಸರ್ವೆ ಸಾಮನ್ಯ, ಆದರೆ ಈ ಅದೃಷ್ಟ ಬೇರೆ ಊರುಗಳ ಜನಕ್ಕೆ ಇಲ್ಲವಲ್ಲ...) ಕುರವೆ ಸಂಘಟನೆಯ ಅಗತ್ಯದ ಬಗ್ಗೆ ಒತ್ತಿ ಒತ್ತಿ ಹೇಳಿದವರು ಶ್ರೀಯುತ ಪರಾ೦ಜಪೆ ಮತ್ತು ರಾಣಿ ಅವರು. ಅವರು ನಾ ಗೌ ತರಹ ಮಿಂಚಬೇಕು ಅಂತ ಇದ್ದಾರೋ ಗೊತ್ತಿಲ್ಲ.

19 comments:

PARAANJAPE K.N. said...

ಕುಡುಕರು ಅಲ್ಲಲ್ಲಿ ಚರ೦ಡಿ, ಮೋರಿಗಳಲ್ಲಿ ಬೀಳುವುದನ್ನು ತಪ್ಪಿಸಲು, ಅವರನ್ನು ನೇರ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲು ಮತ್ತು ಅವರನ್ನು ಕುಡಿತದ ಚಟದಿ೦ದ ಮುಕ್ತಗೊಳಿಸಿ ಸಮಾಜದ ಮುಖ್ಯವಾಹಿನಿಯಲ್ಲಿ ಎಲ್ಲರೊ೦ದಿಗೆ ಬೆರೆಯುವ೦ತೆ ಮಾಡಲು ಕುಡುಕರ ರಕ್ಷಣಾ ವೇದಿಕೆ ಅಗತ್ಯವಿದೆ ಎ೦ದು ನಾನು ಹೇಳಿದ್ದನ್ನು ತಿರುಚಿ, ನನ್ನ ಅಭಿಪ್ರಾಯವನ್ನು mis-interpret ಮಾಡಿರುವಿರಿ. Otherwise ಲೇಖನ ತಮಾಷೆ ಯಾಗಿದೆ,ಕುಡುಕರ ಪರವಾಗಿ ಇನ್ನಷ್ಟು ಪರಿಣಾಮಕಾರಿ ಯೋಜನೆಗಳನ್ನು ನಿಮ್ಮ ಮು೦ದಿನ ಬರಹದಲ್ಲಿ ಜನತೆಯ ಮು೦ದಿಡಿ. ನಿಮ್ಮನ್ನೇ ಕುರವೇ ಅಧ್ಯಕ್ಷರನ್ನಾಗಿ ಮಾಡೋಣ. ನಿಮ್ಮ sense of humour ಜೈ ಹೋ.

ಸಾಗರದಾಚೆಯ ಇಂಚರ said...

ಕುಡುಕರ ಬಗೆಗಿನ ನಿಮ್ಮ ಕಳಕಳಿ ಮೆಚ್ಚುವಂತದ್ದೆ, ಇದನ್ನು ಕುಡಿದೆ ಬರೆದಿದ್ದಿರೋ ಇಲ್ಲ ಹಾಗೆಯೇ ಬರೆದಿದ್ದಿರೋ? ನೀವೇ ಹೇಳಿದಂತೆ ಕುಡಿದಾಗ ಸತ್ಯ ಬರುತ್ತದೆ ಎಂದು :)
ತುಂಬಾ ಒಳ್ಳೆಯ ಲಾಜಿಕ್ ಇದೆ. ಕು ರು ವೆ ಗೆ ಜಯವಾಗಲಿ

roopa said...

ಬಾಲು ಸರ್,
ನಿಮ್ಮ ಈ ತಲೆ ಹರಟೆ ಬರಹ ಸೊಗಸಾಗಿ ಇದೆ . ನಕ್ಕು ನಕ್ಕು ಸುಸ್ತುದಾದೆ . ಈಗ ನನ್ನ ದಣಿವನ್ನು ಹೋಗಲಾಡಿಸಲು ನಾನು ಯಾವುದನ್ನು ತೆಗೆದು ಕೊಳ್ಳಬೇಕು ? ಈಗ ನೀವು ಹೇಳಿ ???.
ನಿಮ್ಮನ್ನು ಕುರವೇ ಸ೦ಘಕ್ಕೆ ಅಧ್ಯಕ್ಷ ಮಾಡಲು ನನ್ನ ಬೆ೦ಬಲವಿದೆ . ಇಷ್ಟು ಕುಡುಕರ ಬಗ್ಗೆ ಕಾಳಜಿ ಇರುವವರೇ ಅದರ ಅಧ್ಯಕ್ಷ ರಾದರೆ ಅದಕ್ಕೆ ಭವಿಷ್ಯ ವಿದೆ . ಸರ್ ಬೇರೆ ಊರ೦ತು ಗೊತ್ತಿಲ್ಲ ,ಮಂಗಳೂರು ಹಾಗು ಮಣಿಪಾಲದಲ್ಲಿ ಆ ಅವಕಾಶ ನಿಮ್ಮ ಬೆ೦ಗಳೂರಿಗಿ೦ತ ಜಾಸ್ತಿ ಇದೆ . ಹಾಗಾಗಿ ನಿಮ್ಮ " ಈ ಅದೃಷ್ಟ ಬೇರೆ ಊರುಗಳ ಜನಕ್ಕೆ ಇಲ್ಲವಲ್ಲ... " . ಈ ಮಾತನ್ನು ವಾಪಾಸು ತೆಗೆದು ಕೊಳ್ಳ ಬೇಕಾಗಿ ಆಗ್ರಹ ಪೂರ್ವಕ ವಿನ೦ತಿ .

ರಾಜೀವ said...

ಕುಡಿಯದೇ ಇರುವವರು ಕೂಡ ಕುರವೇ ಅಧ್ಯಕ್ಷ ಸ್ಥಾನಕ್ಕೆ ವೋಟ್ ಮಾಡಬಹುದಾದರೆ, ನನ್ನ ವೋಟ್ ನಿಮಗೇ.
ನಿಮ್ಮ ಲೇಖನ ಸಾಧು ಕೋಕಿಲಾಗೆ ಗೊತ್ತಾದರೆ, ಅವನ ಮುಂದಿನ ಚಿತ್ರದಲ್ಲಿ ಇದನ್ನು ಬಳಸಬಹುದು.

sexygirlp said...

ನಿಮ್ಮ ಲೇಖನ ಓದುವಾಗ ನನಗೆ ಮಳಯಾಳಮ್ ನ ಒಂದು ಗಾಧೆ ನೆನಪಾಗುತ್ತಾ ಇದೆ.
"ಗಂಜಿ ಖಾಮಾಲೆ ಚೊರು ಪಿತ್ತಂ ಕಳ್ಲು ಕುದಿಚ್ಚಾ ತಡಿಕ್ಕೆ ನಲ್ಲದು"
ಗಂಜಿಯಿಂದ ಖಾಮಾಲೆ ಬರುತ್ತದಂತೆ, ಅನ್ನ ಉಂಡರೆ ಪಿತ್ತ ಆಗುತ್ತದಂತೆ ಆದರೆ ಕಳ್ಳು ಕುಡಿದರೆ ದೇಹಕ್ಕೆ ಒಳ್ಲೆಯದಂತೆ.
ಕು ರ‍ ವೇ ಯ ಸ್ತಾಪನೆಯ ಬಗ್ಗೆ ನನ್ನ ಬೆಂಬಲ ಇದೆ.

ಶಿವಪ್ರಕಾಶ್ said...

ಬಾಲು ಅವರೇ,
ಕುಡಕರ ಬಗ್ಗೆ ನಿಮ್ಮ ಕಾಳಜಿಯನ್ನು ನೋಡಿ, ನಾವೆಲ್ಲರೂ ಸೇರಿ ನಿಮ್ಮನ್ನು ಕುಡುಕರ ಸಂಗದ, ಅಲ್ಲಾ ಅಲ್ಲಾ ಕು.ರ.ವೇ ಅಧ್ಯಕ್ಷರನ್ನಾಗಿ ನೇಮಿಸುತ್ತಿದ್ದೇವೆ. :P

Rani said...

ಕು ರ ವೇ ಅಧ್ಯಕ್ಷರಿಗೆ ಜಯವಾಗಲಿ ....
ಕು ರ ವೇ ಅಧ್ಯಕ್ಷರಿಗೆ ಜಯವಾಗಲಿ ....

ಬೇಕೇ ಬೇಕು ನ್ಯಾಯ ಬೇಕು zzzzzzzzzzzz

ಕು ರ ವೇ ಅಧ್ಯಕ್ಷರಿಗೆ ಜಯವಾಗಲಿ

Ravi said...

hahaha... Sakkath aagide balu...

shivu said...

ಬಾಲು ಸರ್,

ಕುಡುಕರೇ ಇಲ್ಲದಿದ್ದರೆ ಮಲ್ಯ ಇರುತ್ತಿದ್ದನ? (ಅವನ ಕ್ಯಾಲೆಂಡರ್ ಇರುತ್ತಿತ್ತಾ? ಅದರಲ್ಲಿ ಶಿಲ್ಪ ಶೆಟ್ಟಿ ಇರುತ್ತಿದ್ದಳಾ..
ಎಷ್ಟು ನಿಜ ಅಲ್ವಾ...

ಕುಡಿಯುವುದರಿ೦ದ ನೆನಪಿನ ಶಕ್ತಿ ಕಡಿಮೆ ಆಗುತ್ತದೆ ಇದರಿಂದಲೇ ದಿನ ಬೆಳಿಗ್ಗೆ ಅದೇ ಹೆ೦ಡತಿ ಯ ಮುಖ ನೊಡಲು ಸಾದ್ಯವಾಗುತ್ತಾ ಇರುವುದು!!

ಇಂಥ ತರಲೆ ಐಡಿಯಗಳು ನಿಮಗೆ ಮಾತ್ರವೇ ಬರುತ್ತವಾ...

ಹುಷಾರಾಗಿರಿ...ಖಂಡಿತ ನಿಮಗೆ ಹೆಂಗಳೆಯರಿಂದ ಮೋಕ್ಷ ಕಾದಿದೆ...

Anonymous said...

actually ನೆನ್ನೆ ರಾತ್ರಿನೇ ಕುಡಿಯದ್ ಬಿಟ್ಟಿದ್ದೆ ಇದನ ಓದಿ ತಡಿಯಕ್ಕೆ ಆಗದೆ ಬೆಳ್ಗೆನೆ ೯೦ ಹಾಕ್ಕಂಡ್ ಬರಬೇಕಾಯ್ತು ನೋಡು...
ಅದಿರಲಿ ತಾವು ವಿಜಯ್ ಮಲ್ಯರ ಹತ್ರ ಎಷ್ಟು ಲಂಚ ಇಸ್ಕೊಡಿದಿರಿ...!!

-Shiv@zurich

Prabhuraj Moogi said...

4ನೇ ಪಾಯಿಂಟ್ ಸಕತ್ತಾಗಿದೆ :)
ದೇಶಪ್ರೇಮಿಗಳು ಅನ್ನೋದಂತೂ ನಿಜ ಬಿಡಿ, ಅದ್ಕೇ ಅಲ್ವೇ ಮಲ್ಯ ಅಂಕಲ್ ಗಾಂಧಿಜೀಯವರ ಕೆಲ ಸಾಮಾನುಗಳನ್ನು ವಿದೇಶದಲ್ಲಿ ಖರೀದಿಸಹೋಗಿದ್ದು :)
ಕುಡಿಯದವರೂ ಓಟು ಹಾಕಬಹುದಾದರೆ ನನ್ನ ಓಟು ನಿಮಗೇ, ಈ ಎಲೆಕ್ಷನ ಗೆಲ್ಲಲು ಹಣ ಬೇಡ ಹೆಂಡದ ಹೊಳೆ ಸಾಕು!

Varun said...

maga nen lekhana ode Girish karnad, ovarege sikka jnapeeta prashasthina marimuthu kai enda nenge kodtharanthe.

Ennu ondu vishya andre Malya nennanna Gujrath na rayabari agi nemestharanthe.

Any how Congrates

ದಿನಕರ ಮೊಗೇರ said...

ಹಾಯ್ , ನಿಮ್ಮನ್ನು ಕು ರ ವೆ ಅದ್ಯಕ್ಷರನ್ನಾಗಿ ಮಾಡಲು ನನ್ನ ಬೆಂಬಲವಿದೆ.... ಹೇಳ್ತಾ ಹೇಳ್ತಾ ನೀವು ಕುದುಕರನ್ನ ಬೆಂಬಲಿಸುತ್ತಾ ಇದ್ದಿರೋ ಇಲ್ಲಾ ಬೈತಾ ಇದ್ದಿರೋ ಅರ್ಥ ಆಗ್ಲಿಲ್ಲ, ಅದಕ್ಕೆ ನಾನೂ ಸ್ವಲ್ಪ ಕುಡಿದುಕೊಂಡೇ ಓದುತ್ತೇನೆ ...ಇನ್ನೊದು ಸಾರಿ......

Vishwa said...

ಶಾಸ್ತ್ರಿ ಸರ್,
ನೀವು ಕುಡಿಯದೆ ಇಸ್ಟೆಲ್ಲಾ ಕುಡುಕರನ್ನ ವಹಿಸಿಕೊಂಡು ಮಾತಾಡ್ತಿರೋದು ನೋಡಿದರೆ,
ನಿಮಿಗೆ ಒಂದು 90 ಹಾಕಿಸಿದರೆ ಕುಡುಕರ ಬಗ್ಗೆ ಇನ್ನು ಸ್ವಲ್ಪ points ಹೊರಬರುತಿತೇನೋ ಅನ್ನಿಸುತಿದೆ.

ರವಿಕಾಂತ ಗೋರೆ said...

Super..

ಸಿಮೆಂಟು ಮರಳಿನ ಮಧ್ಯೆ said...

ಹ್ವಾಯ್...

ಕುಡಿದು ಹಾಳಾಗ್ತಾರೆ ಅಂತ ಯಾರು ಹೇಳಿದ್ದು...?
ಇಲ್ಲೊಬ್ಬರು ಇಪ್ಪತ್ತು ನಾಲ್ಕು ಗಂಟೆಯೂ ಕುಡಿದು...
ಒಳ್ಳೆಯ ಬಿಸಿನೆಸ್ ಮಾಡುತ್ತಿದ್ದಾರೆ...
ಟಿವಿ ಸಂದರ್ಷನವನ್ನೂ ಕೊಡುತ್ತಾರೆ..
ಪಕ್ಕದಲ್ಲಿ ವೋಡ್ಕಾ ನಿಂಬೆ ರಸ ಇರುತ್ತದೆ...

ಅವರು ಸಮಾಜದಲ್ಲಿ ಪ್ರತಿಷ್ಠಿತ ವ್ಯಕ್ತಿ ಮಾರಾಯರೆ...

"ಕುಡಿದು ಉದ್ಧಾರ ಆದವರನ್ನು ನಾನು ತೋರಿಸ ಬಲ್ಲೆ"

ಮಸ್ತ್ ಬರೆದಿದ್ದೀರಿ...

ಅಭಿನಂದನೆಗಳು...

Anonymous said...

Very nice Writting skills...

Ide baraha neevu Kudukara viruddha bardidre innu chenagirthithu

Humour can be thought provoking hope you cultivate ur wonderful sense of humour in those lines

People who have been surrounded by KUDUKARU know the real pain when they read this article...

Arun K R said...

ಕು ರು ವೆ ಐಡಿಯಾ ಏನೊ ಚೆನ್ನಾಗಿದೆ. ಆದ್ರೆ ಎಲ್ಲರು ಕುಡಿದು ಚರಂಡಿಲಿ ಬಿದ್ದಿದ್ರೆ ಹೋರಾಟ ಮಾಡೋರು ಯಾರು ?

ಶಿವಶಂಕರ ವಿಷ್ಣು ಯಳವತ್ತಿ said...

ಕಾಳಜಿ ಹೀಗೇ ಇರಲಿ;.