Tuesday, February 8, 2011

ಯಡ್ಡಿಯ ನವ ಸೂತ್ರಗಳು.


ಇಷ್ಟು ದಿನ ಬರೀ ಬ್ಲಾಕ್ ಮ್ಯಾಜಿಕ್ ಅಂತ ಹೇಳುತ್ತಾ ಇದ್ದ ನಮ್ಮ ಸನ್ಮಾನ್ಯ ಯೆಡ್ಡಿ ಅವರು, ಈಗ ತಮ್ಮ ಬಳಿ ಇರುವ ವೈಟ್ ಮನಿ ಬಗ್ಗೆ ಹೇಳಲು ಶುರು ಮಾಡಿದ್ದಾರೆ. ಒಟ್ಟಾರೆ ತಮ್ಮ ಜೀವನ ಬ್ಲಾಕ್ ಅಂಡ್ ವೈಟ್ ಅಂತ ಸಿಕ್ಕಾಪಟ್ಟೆ ಸಾಕ್ಷಾ ಕೊಟ್ಟು ಪ್ರಮಾಣಿಸಿದ್ದಾರೆ. ತಮ್ಮ ಉಸೀರು ಇರುವ ವರೆಗೂ ತಾವೇ ಮು ಮಂ ಅಂತ ಬೇರೆ ಹೇಳಿಕೊಳ್ಳುತ್ತಾ ಇದ್ದಾರೆ. ಅವರ ಅದೃಷ್ಟ ವಶಾತ್ ಅವರು ಮುಂದಿನ 5-10 ವರುಷಗಳ ಕಾಲ ಮು ಮಂ ಆಗಿ ಮುಂದುವರಿದರೆ ಕರ್ನಾಟಕ ಹೇಗೆ ಇರಬಹುದು, ಯಾವೆಲ್ಲಾ ನಿಯಮಗಳನ್ನು ಮಾಡಬಹುದು, ಏನೆಲ್ಲಾ ಬದಲಾವಣೆಗಳನ್ನು ತರ ಬಹುದು ಅಂತ ಟೈಮ್ ಪಾಸ್ ತಂಡದ ಏಕ ಸದಸ್ಯ ಪೀಠವು ದೀರ್ಘ ಸಮಾಲೋಚನೆ, ಚಿಂತನೆ ಹಾಗು ಚರ್ಚೆ! ಗಳನ್ನು ನಡೆಸಿ ಈ ಕೆಳಕಂಡ ವರದಿ ಸಿದ್ದ ಪಡಿಸಿದೆ.


1. ನಮ್ಮ ಮನೆಯ ಬಾಡಿಗೆ ಕರಾರು ಪತ್ರವನ್ನ ನೇರವಾಗಿ ಮು ಮಂ ಜೊತೆ ಮಾಡಿ ಕೊಳ್ಳಬೇಕು. (ಇಡೀ ಕರ್ನಾಟಕ ನೆ ತನ್ನ ಹೆಸರಿಗೆ ಬರಕೊಂಡು ಇರ್ತಾನೆ ಅಲ್ವ? )

2. ಕೃಷಿ ಚಟುವಟಿಕೆ ಗಳಿಗೆ ಭಾರಿ ಬೆಂಬಲ. ಮುಖ್ಯವಾಗಿ ನಿಂಬೆ ಹಣ್ಣು ಮಾತು ಕುಂಬಳ ಕಾಯಿ ಬೆಳಿಯೋರಿಗೆ ಬಹಳ ಉಪಯೋಗ. (ಮಾಟ ಮಾಡಕ್ಕೆ ಬೇಕಲ್ಲ.. )

3. ಮಾಟ ಮಾಡೋರಿಗೆ ಮುಜರಾಯಿ ಇಲಾಖೆ ಇಂದ ಮಾಶಾಸನ.

4. ನ್ಯಾಯಾಂಗ ವ್ಯವಸ್ತೆ ನ ತೆಗೆದು ಹಾಕಿ, ಅದರ ಬದಲಿಗೆ ಕಳ್ಳರ ಮೇಲೆ ವಾಮಾಚಾರ ಪ್ರಯೋಗ. :) ಪೋಲಿಸರನ್ನು ಕಳ್ಳರ ಕೂದಲು ಮತ್ತೆ ಉಗುರು ಹಿಡಿಯಲು ಉಪಯೋಗಿಸಿ ಕೊಳ್ಳಬಹುದು.

5. ಮಹಿಳೆಯರಿಗೆ ಸೀರೆ ಕೊಡ್ತಾ ಇದ್ರು, ಇನ್ನು ಮುಂದೆ ಚೂಡಿದಾರ ಕೂಡ ಕೊಡಬಹುದು.

6. ಮನೆ ಕಟ್ಟಿಸುವಾಗ ವಾಸ್ತು ತಜ್ಞರ ಪರಿಶೀಲನೆ ಕಡ್ಡಾಯ.

7. ವಿರೋದ ಪಕ್ಷ ಅನ್ನೋದೇ ಇರೋಲ್ಲ, ಎಲ್ಲರನ್ನು ಸಾಮೂಹಿಕ ಅಪರೇಷನ್ ಮಾಡಿ ಕಮಲಕ್ಕೆ ದಳ ದಳಗಳನ್ನು ಕೂಡಿಸಲಾಗುವುದು.

8. ಎಡ್ಡಿ ಅವರಿಗೆ ಗೊಳೋ ಅನ್ನುವು ಅತ್ಯಂತ ಪ್ರೀತಿಯ ಹವ್ಯಾಸ ಆಗಿರುವುದರಿಂದ, ಗೊಳೋ ಸಿನೆಮ ಗಳಿಗೆ ತೆರಿಗೆ ಕಡಿತ. (ಸಾಯಿ ಪ್ರಕಾಶ್ ತೆಗಿಯೋ ಸಿನಿಮಾ ತರದ್ದು ಮಾತ್ರ, ಮೈಲಾರಿ ಗೆ ಅಲ್ಲ. )

9. ಕಾಸರಗೋಡು ಮತ್ತೆ ಬೆಳಗಾವಿ ಸಮಸ್ಯೆ ಪರಿಹಾರ. ವಾಸ್ತು ಚೆನ್ನಾಗಿದ್ದರೆ ಮಾತ್ರ ಕರ್ನಾಟಕಕ್ಕೆ. ಚೆನ್ನಾಗಿಲ್ಲ ಅಂದ್ರೆ ಕೇರಳ ಮತ್ತೆ ಮಹಾರಾಷ್ಟ್ರ ದ ಜೊತೆ ಶಾಂತಿಯುತ ಒಪ್ಪಂದ. ಬೆಳಗಾವಿ ಅವರಿಗೆ ದಾನ.ಸೂಚನೆ: ಈ ವರದಿ ಯನ್ನು ಯಾವುದೇ ಬಲಪಂಥೀಯ ಪಂಗಡಗಳ ಒತ್ತಡಗಳಿಗೆ ಮಣಿದು ಸಿದ್ದ ಪಡಿಸಿರುವುದಿಲ್ಲ. ಉಪೇಂದ್ರ ಅವರ ಸೂಪರ್ ಕಲ್ಪನೆ ಯನ್ನು ಕದ್ದು ಇಲ್ಲಿ ಹಾಕಿರುವುದಿಲ್ಲ. ಇಲ್ಲಿ ಒಂಬತ್ತೇ ಸೂತ್ರ ಗಳನ್ನು ಯಾಕೆ ಮಂಡಿಸಲಾಗಿದೆ ಅಂದರೆ ಅದು ಸನ್ಮಾನ್ಯರಿಗೆ ಶುಭ ಸೂಚಕ!!

7 comments:

PARAANJAPE K.N. said...

ಯೆಡ್ಡಿ " ಮಾಟ ಮ೦ತ್ರ ನಿರ್ವಹಣಾ ಪ್ರಾಧಿಕಾರ " ರಚನೆ ಮಾಡ್ತಾರಂತೆ, ಅದಕ್ಕೊಬ್ಬ ಅಧ್ಯಕ್ಷರ ಹುಡುಕಾಟ ನಡೆದಿದೆ. ಹೇಗೂ ನಿಮ್ಮ ಹೆಸರಲ್ಲಿ"ಶಾಸ್ತ್ರಿ" ಇದೆ. ಗೂಟದ ಕಾರು ಬೇರೆ ಸಿಗುತ್ತೆ, ನಿಮ್ಮ ಹೆಸರನ್ನು ಸೂಚಿಸಲೇ ??

ಸಂತೋಷ್ ಚಿದಂಬರ್ said...

Sakath maja ide...

shivu.k said...

ಬಾಲು ಸರ್,
ನಿಮ್ಮ ಹತ್ತು ಸೂತ್ರಗಳನ್ನು ಓದಿದಾಗ ನಿಮ್ಮ ಬರಹದ ಹಾಸ್ಯದಾಟಿಗೆ ಇಷ್ಟವಾಯಿತು. ಜೊತೆಗೆ ದಿಗಿಲಾಯಿತು ಕೂಡ..ಇವರನ್ನು ಮುಂದಿನ ಹತ್ತು ಹದಿನೈದು ವರ್ಷ ಮು ಮಂ ಮಾಡಿದ್ರೆ ನಮ್ಮ ಗತಿ ಅಷ್ಟೇ...

ಕಲರವ said...

niruupana shaili sogssaagide.dhanyavaadagalu.

ದೀಪಸ್ಮಿತಾ said...

ಕ್ರಿಕೆಟ್ ಆಟಗಾರರಿಗೆ IPL, JPL, XPL, ZPL ಹೀಗೆ ಯಾವುದರಲ್ಲಾದರು ಒಂದೊಂದು ರನ್ನಿಗೂ ಒಂದೊಂದು ಲಕ್ಷ ಎಂದು ಘೋಷಣೆ. ಕ್ಯಾಚ್ ಹಿಡಿದರೆ ಐವತ್ತು ಸಾವಿರ, ಒಂದು ವಿಕೆಟ್ ಪಡೆದರೆ ಐವತ್ತು ಸಾವಿರ....ಇವನ್ನೂ ಸೇರಿಬಿಡಿ

ಸೀತಾರಾಮ. ಕೆ. / SITARAM.K said...

nice....

ಧರಿತ್ರಿ said...

baalu writeup super...jothege paranjape comment innu super...
-chitra