Friday, September 12, 2008

ಸುಲಭವಾಗಿ ಹಣ ಸಂಪಾದನೆ ಹೇಗೆ?

ಹಣ ಸಂಪಾದಿಸುವುದು ಹೇಗೆ? ನಿಮ್ಮ ವ್ಯಕ್ತಿತ್ವ ಚಂದ ಮಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ಹಲವಾರು ಪುಸ್ತಕ ಗಳು ಇವೆ, ಆದರೆ ಪ್ರಯೋಜನ ಮಾತ್ರ ಕಾಣೆ, ಪ್ರಕಾಶಕ ಮಾತ್ರ ದುಡ್ಡು ಮಾಡಿರುವುದು ಸತ್ಯ. ಆದರಿಂದ ಸುಲಭವಾಗಿ, ನ್ಯಾಯಮಾರ್ಗ ವಾಗಿ ( ಕಾನೂನಿನ ಕಣ್ಣಿನಲ್ಲಿ ಸರಿ ) ಹಣ ಸಂಪಾದಿಸುವುದು ಹೇಗೆಂದು ತಿಳಿದು ಕೊಳ್ಳಲು ಘನ ಘೋರ ತಪಸ್ಸನ್ನು ಆಚರಿಸಿ ( ದೇವರಿಗೂ ಸ್ವಲ್ಪ ಹಣ ಕೊಟ್ಟು ಒಲಿಸಿಕೊಂದಿರುವೆ, ಅದು ಆತನ ಹಣ ಮಾಡುವ ವಿಧಾನ ದಲ್ಲಿ ಒಂದು!!!), ಕೆಲ ವಿಧಾನ ಗಳನ್ನೂ ತಿಳಿದು ಕೊಂಡು ಬಂದಿರುವೆ. ನೋಡಿ ನೀವು ಕೂಡ ಹಣ ಗಳಿಸಿ.
ಇಲ್ಲಿರುವ ಎಲ್ಲಾ ಪ್ರಯೋಗಗಳು ನಿಮ್ಮ ವ್ಯಕ್ತಿತ್ವವನ್ನು ಅವಲಂಬಿಸಿರುತ್ತದೆ!೧. ನಿಮಗೆ ಕಂಡವರ ಮನೆ ವಿಷಯದಲ್ಲಿ ಮೂಗು ತೂರಿಸಿ, ಫಿಟ್ಟಿಂಗ್ ಇದೋ ಅಬ್ಯಾಸ ಇದೆಯಾ? ಹಾಗಿದ್ದಲ್ಲಿ ಯೋಚಿಸ ಬೇಡಿ, ಫ್ಯಾಮಿಲಿ ಕೌನ್ಸೆಲ್ಲಿಂಗ್ ಶುರು ಮಾಡಿ. ನಿಮ್ಮ ಫಿಟ್ಟಿಂಗ್ ಪ್ರವೃತ್ತಿ ಕೂಡ ಇರುತ್ತೆ, ಒಳ್ಳೆ ಹಣ ಕೂಡ ಬರುತ್ತೆ!!! ( ಸಧ್ಯಕ್ಕೆ ಬೆಂಗಳೂರ್ ನಲ್ಲಿ ಒಳ್ಳೆ ಅವಕಾಶ ಗಳು ಇದೆ.)

2. ನಿಮಗೆ ಉತ್ತಮವಾಗಿ ಪ್ರವಚನ ಕೊಡಲು ಬರುತ್ತದಾ? ತಡ ಮಾಡಬೇಡಿ... ಒಂದು ಆಶ್ರಮ ತೆರೆಯಿರಿ, ನಿಮಗೆ ಇಂಟರ್ ನ್ಯಾಶನಲ್ ಕ್ಲೈಂಟ್ಸ್ ಸಿಗ್ತಾರೆ. ಸಂಪಾದನೆ ಡಾಲರ್ ಗಳಲ್ಲಿ ಆಗುತ್ತೆ. ( ಇದನ್ನು ಉಪಯೋಗಿಸಿ ಬಹಳಷ್ಟು ಜನ ಶ್ರೀಮಂತ ರಾಗಿದ್ದಾರೆ. )3. ನಿಮಗೆ ಸಿಕ್ಕ ಪಟ್ಟೇ ಗರ್ಲ್ / ಬಾಯ್ ಫ್ರೆಂಡ್ಸ್ ಇದ್ದರೆ ಒಂದು ಗಿಫ್ಟ್ ಅಂಗಡಿ ಇಡಿ ಅಥವಾ ಹೊಸ ಪ್ರೇಮಿಗಳಿಗೆ ಸಲಹೆ ಕೋಡೋದನ್ನ ಶುರು ಮಾಡಿ. ( ಮುಖ್ಯವಾಗಿ ಗಿಫ್ಟ್ ಕೋಡೋದರ ಬಗ್ಗೆ, ಒಳ್ಳೇ ಸಂಪಾದನೆ ಆಗದೇ ಇದ್ರೆ ಕೇಳಿ. ಯಾವ ತರದ ಗಿಫ್ಟ್ ಕೊಡಬೇಕು ಅನ್ನೋದರ ಬಗ್ಗೆ ಅವರು ಸಿಕ್ಕಪಟ್ಟೆ ತಲೆ ಕೆಡಿಸಿ ಕೊಂಡಿರುತ್ತಾರೆ) - ಕೃಷ್ಣಾ ಅಲಿಯಾಸ್ ಅನಂತ ರಾಮ ಭಟ್ಟ ಇ ಐಡಿಯಾ ವನ್ನು ನನಗೆ ದಯಪಾಲಿಸಿದ್ದಾನೆ!!!4.ನಿಮ್ಮ ಹಳೆ ಗರ್ಲ್ / ಬಾಯ್ ಫ್ರೆಂಡ್ಸ್ ಗಳಿಗೆ ಪೇರ್ ಗಳನ್ನ ಹುಡುಕಿ... ಅವರ ಕಾಟ ತಪ್ಪಿತು ಅನ್ನೋ ಕುಶಿ ಜೊತೆಗೆ... ಮದುವೆ ಲೀ ಗಿಫ್ಟ್ ಕೂಡ ಸಿಗುತ್ತೆ.
5. ನಿಮ್ಗೆ ನೂರಾರು ಇಂಟರ್‌ವ್ಯೂ ಅಟೆಂಡ್ ಮಾಡಿ ಕೆಲ್ಸಾ ಇನ್ನೂ ಸಿಕ್ಕಿಲ್ವೇ? ಚಿಂತೆ ಬೇಡ, ಬೇರೆಯವರಿಗೆ ಕೆಲ್ಸ ಕೊಡಿಸೋದಕ್ಕೆ ಶುರು ಮಾಡಿ. ಎಲ್ಲಿಲ್ಲಿ ಕೆಲ್ಸ ಖಾಲಿ ಇದೆ, ಅದಕ್ಕೆ ಯಾವ ಅರ್ಹತೆ ಇರಬೇಕು, ಹೇಗೆ ಇಂಟರ್‌ವ್ಯೂ ಅಟೆಂಡ್ ಮಾಡಬಾರದು ಅಂತ ಗೊತ್ತಿರುತ್ತೆ. ನೀವು ಒಬ್ಬ ಒಳ್ಳೆಯ ಜಾಬ್ ಕನ್ಸಲ್ಟೆಂಟ್ ಆಗ ಬಹುದು. ( ಜೀವಂತ ಉದಾಹರಣೆ ನಾನೇ!!!! )


6. ನಿಮ್ಗೆ ಸ್ವಲ್ಪ ಪಂಚಾಂಗ, ಆಕಾಶದಲ್ಲಿ ಇರೋ ಗ್ರಹ ಗಳ ಬಗ್ಗೆ ಜ್ಞಾನ ಇದೆಯಾ? ಹಾಗಿದಲ್ಲಿ ಒಂದಿಷ್ಟು ಕವಡೆ ಕೊಂಡು ತಂದು ಭವಿಷ್ಯ ಹೇಳಲು ಶುರು ಮಾಡಿ. ಬೀದಿಲಿ ಹೋಗೋ ದಾಸಯ್ಯ ನಿಂದ ಹಿಡಿದು ದೇವೆ ಗೌಡರ ತನಕ ಎಲ್ರೂ ನಿಮ್ ಹತ್ತಿರ ಬರುತ್ತಾರೆ.


ನಿಮಗೆ ಇದಲ್ಲದೇ ಇನ್ನು ಹಲವು ಐಡಿಯಾ ಗಳು ತಲೆಯಲ್ಲಿ ಇದ್ದಲ್ಲಿ ದಯಮಾಡಿ ತಿಳಿಸಿ. ಅಥವಾ ನೀವು ಈಗಾಗಲೇ ಯರ್ರ್ ಬಿರ್ರಿ ಹಣ ಸಂಪಾದನೆ ಮಾಡಿದ್ದರೆ, ಅದನ್ನು ಕರ್ಚು ಮಾಡುವುದು ಹೇಗೆಂದು ತಲೆ ಬಿಸಿ ಮಾಡಿಕೊಂಡಿದ್ದಾರೆ, ನನಗೆ ತಿಳಿಸಿ.

8 comments:

varun said...

Dhuddu madodu hegantha gothaythu karchu madodu hegantha hele kodu

Chands said...

Maga Evella Scenario galige Nana Ninna Idea Haaki Partnership Madonava?

yashika said...

Oh Manyu adbuthavagide.. idralli yaav yaavdna try maadidya?? eega haage nin bank balance eshtide antanmu helbidu..
adr mele decide maadteeni yaav thara naanu dudd madodu anta..

Balu said...

@Varun: duddu hechhagidre nan account ge haaki bidu. ninge olledu aagutte!!!

@Chandru: Sari kano... partnerhip nalli bhavishya heloke shuru madona.. sadhyakke olle demand ide.

@yashu: ayyo olle question, but answer mado haage illa. IT ( Income Tax ) navaru bandu raidu madidre kashta.... ninge detailed email maduve.

yashika said...

@manyu varun esht haakida nin a/c ge annodnu specify maadbidu aa mail alli ayto.. yaav tharanaaru sari otnalli nin bank balance n details kalsu..

Balu said...

@Yashu: varun avana credit card na nange kodabeku antha decide madidane anthe. ulida vivara galu mail nalli haakuve.

yashika said...

Lo manyu neenaa credit card na nanage kodtidya alva?? ningadrinda en prayojna helu?? ninge mele neenu barediruva ashtella daari gottu duddu sampadisoke.. innu varun du card yaake??
sumne nan kade tallu.. mundindu naanu nodkoteeni..

Arun K R said...

Intha idea kottu neenestu duddu maadideeyappa?