Tuesday, September 23, 2008

ಇಲಿ ಕೊಲ್ಲುವುದು ಹೇಗೆ?ಇಲಿಗಳ ಕಾಟ ಎಲ್ಲಿ ಇರೋಲ್ಲ ಹೇಳಿ? ಯಾರ ಮನೇಲಿ ಇರೋಲ್ಲ ಹೇಳಿ? ಮನೆ ಇಂದ ಹಿಡಿದು ವಿಧಾನ ಸೌಧ ತನಕ ಎಲ್ಲ ಕಡೆ ನು ಇವುಗಳದ್ದೇ ಕಾಟ. ( ವಿಧಾನ ಸೌಧ ದಲ್ಲಿ ಭಾರಿ ಹೆಗ್ಗಣ ಗಳೆ ಇವೆ). ಇಲಿ ಗಳನ್ನ ಸಾಯಿಸಲಿಕ್ಕೆ ಹಲವಾರು ಮಾರ್ಗ ಗಳು ಇವೆ. ಆದರೆ ಬೋನು , ವಿಷ.. ಇವೆಲ್ಲ ಬಹಳ ಹಳೆಯ ವಿಧಾನ. ಹೊಸ ಕೊಲ್ಲುವ ತಂತ್ರ ಗಳಿಗೆ ನಾನು ಸಂಶೋದನೆ ನಡೆಸಿ ( ಸುಮ ಕೂಡ ಭಾಗಿ ಆಗಿದ್ದಾರೆ), ಈ ಕೆಳಕಂಡ ವರದಿ ತಯಾರಿಸಿರುವೆ. ನೀವು ಓದಿ, ನಿಮ್ಮ ಮನೆ / ಆಫೀಸ್ ನಲ್ಲಿ ಇರುವ ಇಲಿ ಕಾಟ ವನ್ನು ಕಡಿಮೆ ಮಾಡಿ ಕೊಳ್ಳಿ.
1. ನಿಮ್ಮ ಗರ್ಲ್ ಫ್ರೆಂಡ್ ರಾತ್ರೆ ಕಾಲ್ ಮಾಡಿದಾಗ ( ಅವಳೆಲ್ಲಿ ಮಾಡ್ತಾಳೆ, ಬರಿ ಮಿಸ್ ಕಾಲ್ ಕೊಡ್ತಾಳೆ) "ಅನಿಸುತ್ತಿದೆ ಯಾಕೋ ಇಂದು" ಹಾಡನ್ನ ಹೇಳೋಕೆ ಹೇಳಿ, ಅದನ್ನ ಇಲಿ ಗೆ ಕೇಳಿಸಿ... ಆ ಗಾಧರ್ಬ ಗಾನಕ್ಕೆ ಇಲಿ ಕೋಮ ಸ್ಥಿತಿ ಗೆ ಹೋಗಿ, ನಿದಾನಕ್ಕೆ ಸತ್ತೋಗುತ್ತೆ. ಆಗಲೂ ಸಾಯಲಿಲ್ಲ ಎಂದರೆ ಭೈರವಿ, ಆನಂದ ಭೈರವಿ... . ಕೊನೆಗೆ ಪಾತಾಳ ಭೈರವಿ ರಾಗ ಟ್ರೈ ಮಾಡೋಕೆ ಹೇಳಿ. ( ಇಲಿ ಸತ್ತಿರುತ್ತೆ ಬಿಡಿ, ಆದರೆ ಈ ವಿಷ್ಯಾನ ನಿಮ್ ಗರ್ಲ್ ಫ್ರೆಂಡ್ ಗೆ ಹೇಳಬೇಡಿ. ನನಗೆ ನಿಮ್ಮ ಜೀವ ಮುಖ್ಯ!!! )
2. ಇಲಿಗೆ ಸ್. ನಾರಾಯಣ್ ನಿರ್ಧೇಶನದ, ಅವನ ತುರೆ ಮಣೆ ಮಗನ ಹೊಸ ಸಿನೆಮಾ ತೋರಿಸಿ. ಇಲಿ ಆತ್ಮ ಪಂಚ ಭೂತ ಗಳಲ್ಲಿ ಲೀನ ಆಗುತ್ತೆ.
3. ಅದಕ್ಕೆ ದೇವೇ ಗೌಡರು ಹ್ಯಾಪು ಮೊರೆ ಹಾಕ್ಕೊಂಡಿರೋ ಫೋಟೋ ತೋರಿಸಿ, ( ದೇವೇ ಗೌಡರು ನಗುತ್ತಾ ಇರುವ ಫೋಟೋ ಯಾರು ನೋಡಿಲ್ಲ ಬಿಡಿ) ಇಲಿಗೆ ಜೀವನದಲ್ಲಿ ಜೀಗುಪ್ಸೇ ಬಂದು ಆತ್ಮ ಹತ್ಯೆ ಮಾಡಿಕೊಳ್ಳುತ್ತೆ.
4. ಇಲಿಗೆ ಸರ್ಕಾರಿ ಶಾಲೆ ಯಲ್ಲಿ ಮಾಡಿದ ಬಿಸಿ ಊಟವನ್ನು ಬಡಿಸಿ... ಫುಡ್ ಪಾಯ್ಸನ್ ನಿಂದ ಇಲಿ ಸತ್ತೋಗುತ್ತೆ.
5. ಪೀಜ್ಜ ಹಟ್ ನಿಂದ ಅದಕ್ಕೆ ಪೀಜ್ಜ ತಂದು ತಿನ್ನಿಸಿ, ಆಮೇಲೆ ಪೆಪ್ಸೀ ಕುಡಿಸಿ.. ಇಂಥದನ್ನೆಲ್ಲ ತಿಂದ ಮೇಲೂ ಬದುಕಿರಾ ಬೇಕಾ? ಅಂತ ಯೋಚಿಸುತ್ತೆ..
6. ಇಲಿನ ಟೆರೇಸ್ ತನಕ ಒಡಿಸಿ ಕೊಂಡು ಹೋಗಿ.. ಆಮೇಲೆ ಅದಕ್ಕೆ ಮುಂದೆ ಒಡೊಕೆ ತೋಚದೆ.. ಮೇಲಿಂದ ಬಿದ್ದು ಸತ್ತೋಗುತ್ತೆ. ( ನ್ಯಾಚುರಲ್ ಡೆತ್!! )
7. ಇಲಿಗೆ ಬಿಸಿ ಬಿಸಿ ಕಾಫೀ ಕುಡಿಸಿ, ಅದರ ಬಾಯೀ ಸುಟ್ಟು ಹೋಗಿ, ಬಕ್ಕೆ ಆಗಿ, ತಿನ್ನೋಕೆ ಆಗದೇ.. ಹಸಿವಿನಿಂದ ಸಾಯುತ್ತೆ.
8. ಒಂದು ಗಂಡು / ಹೆಣ್ಣು ಇಲಿ ನ ಹುಡುಕಿ ಅದಕ್ಕೆ ಮದುವೆ ಮಾಡಿ ಬಿಡಿ. ಸಂಸಾರ ತಪತ್ರಯ ತಡೆಯೋಕೆ ಆಗದೇ ಇಲಿ ಸತ್ತೋಗುತ್ತೆ.
9. ಇಲಿನ ನಿಮ್ ಆಫೀಸ್ ಗೆ ಕೆಲ್ಸಕ್ಕೆ ತಗೊಳಿ. ನಿಮ್ ಮ್ಯಾನೇಜರ್ ಕಾಟ ತಡೆಯೋಕೆ ಆಗದೇ ಇಲಿ ಸತ್ತೋಗುತ್ತೆ. (ಆಫೀಸ್ ಪ್ರೆಶರ್).
10.ಇಲಿನ ವಿಪ್ರೊ, ಸೆಪೀಯೆಂಟ್, ಸತ್ಯಂ, TCS , ಮುಂತಾದ ಕಡೆ ಕೆಲ್ಸಕ್ಕೆ ಹಾಕಿ, ಜಾಬ್ ಇನ್‌ಸೆಕ್ಯೂರಿಟೀ ಇಂದ ಇಲಿ ದೇವರ ಪಾದ ಸೇರುತ್ತೆ.
11. ಇಲಿನ ಸಾಫ್ಟ್‌ವೇರ್ ಕಂಪನೀ ಗೆ ಸೇರಿಸಿ, ಅಲ್ಲಿನ BD ಅದನ್ನ ಕ್ಲೈಂಟ್ ಹತ್ತಿರ ಹುಲಿ ಅಂತ ಹೇಳ್ತಾನೇ, PM ಅದನ್ನ ನಾಯಿ ಅಂತ ಅಂದುಕೋತಾನೆ, TL ಕೆಲ್ಸಾ ಬರದೇ ಇರೋ ಗೂಬೆ ಅಂತ ಅಂದುಕೋ ತಾನೆ. ಇಲಿಗೆ ತಾನು ಇಲಿನೊ, ಗೂಬೆನೊ.. ಏನು ಗೊತ್ತಾಗದೇ ಕನ್ಫ್ಯೂಸ್ ಆಗಿ, ಮೆಂಟ್ಲೂ ಆಗಿ........
12. ಆದ್ರೂ ಸಾಯಲಿಲ್ಲ ಅಂದ್ರೆ ಇಲಿಗೆ ಆನ್‌ಸೈಟ್ ಕಳಿಸ್ತೀವಿ ಅಂತ ಹೇಳಿ.... ಅದು ಕಾದು ಕಾದು ಕಾದು.............
13. ಇಷ್ಟೆಲ್ಲಾ ಮಾಡಿನು ಇಲಿ ಸಾಯಲಿಲ್ಲ ಅಂದ್ರೆ ಇಲಿಗೆ ಚೆನ್ನಾಗಿ ಕಚಗುಲಿ ಕೊಡಿ, ಇಲಿ ಕುಶಿ ಆಗಿ ನಗುತ್ತಾ ಇರಬೇಕಾದ್ರೆ ಅದರ ಬಾಯೀ ಒಳಗೆ ನಿದ್ದೆ ಮಾತ್ರೆ ಹಾಕಿ, ಅದು ತಿಂದೂ ನಿದ್ದೆ ಮಾಡಿದ ಮೇಲೆ ಅದನ್ನ ಒಂದು ಕಲ್ಲಿನ ಮೇಲೆ ಇತ್ತು, ತಲೆ ಮೇಲೆ ಇನ್ನೊಂದು ಕಲ್ಲು ಎತ್ತಕಿ ಸಾಯ್ಸಿ.
ವಿಶೇಷ ಸೂಚನೆ ಹಾಗೂ ಅಭಿನಂದನೆ: ನಿಮ್ಮ ಮನೆ ಅಥವಾ ಆಫೀಸ್ ನಲ್ಲಿ ಇಲಿ ಗಳ ಕಾಟ ಅತಿ ಆಡಲ್ಲಿ ಸುಮ(ವಿಪ್ರೊ) ಅವರನ್ನು ಸಂಪರ್ಕಿಸಬಹುದು.

ಸಾರ್ವಜನಿಕರಲ್ಲಿ ವಿನಂತಿ, ಕೃಷ್ಣ ಅಲಿಯಾಸ್ ಅನಂತ ರಾಮ್ ಅವರು ಹೆಣ್ಣು ಇಲಿಗಳನ್ನು ಹಿಡಿಯುವುದರಲ್ಲಿ ಎತ್ತಿದ ಕೈ... ಆಸಕ್ತರು ಸಂಪರ್ಕಿಸಿ.

13 comments:

Vani Santosh said...

hahahaha.......olle maja ......
sakkatagi de..

abhinandane nimagu matte suma gu...idea kottidakke........ :))

Deeksha Bhatt said...

Lo Manyu Ganesha vahana ilee na heegella tapatreya kottu sayistya??
amele ondu mooshaka hatya dosha nivarana homa maadbekagutte :D

Lo adu olle idea kano.. neenu ilee jataka na torsbidu yaavdaru jothishige avr helo doshagalu haage nivaaranegalna ekline ilee sui tapak anta sattogutte :D

Ilee ge ondu operation maadsu yaavdaru dodda aaspatreli operation success aadru ilee baduko chances kammi irutte :D

Suma said...

ayyoooo...Suma lannu samparkisiva aagathya illa. Balu ne samparkisi... astottige avnige innodistu idea galu bandiratte.

Deeksha Bhatt said...

lo innu saaylilla andre aa ilee na ondu reality show ge judge aagi karkondu hogu..
aa kade host koogaata.. participants jagala.. kittata.. doorodu ella keline ilee ede odedu sattu hogutte..
adoo comedu show ge karkondu hogi siddhu pakkdalli koorsidrantu avn hodetakke paapa sattu hogutte adu :D

Manju said...

One more simple suggestion... ilige 'Phoonk' cinema na mejastic na yaavude theatre nalli torisi....
ili alle sattu hogatte :)

Suma avru ee suggestion na yaake kodalillavo gotiila!!!!

ಬಾಲು said...

@ Vani: thanx... Suma avarige kooda thnx thalupiside.


@Suma: elru iligalanna ninge kalisoke helale?

ಬಾಲು said...

@Yashu: adhbutha vaada idea galu kottiruve.. nija reality show ge hodre ili... shivana paada serodu guarantee...

aadaru mooshika hathya dosha barade iro haage enu madodu? daivajna sri sri ***** jyothishi gala hattira homa madisbeka antha!!!

Deeksha Bhatt said...

Neenu baree idea kottirodakek mooshaka hatya homa en maadisbekilla kano.. ondu shaanthi maadisu saaku..
eega neen idea kottu adr tarahaane yaaradru saaysidre ilee na avru hatya homa madisli :D
Elli nan cosultation fees na haage nan a/c ge transfer maadbidu:D

Deeksha Bhatt said...

Manyu innondu kelsa maadu neenu shanti madsoke agilla andre.. mooshaka raksha homa maadisbidu.. illa mooshaka raksha stotra odu dina kai kaal tolkondu saynakala devr munde..
nimam nimam ankoolakke takkante maadi ashte :D

Sri said...

Balu avra office alli Cockroach jaasti agidyante...next Cockroaches kollodu hege anta baritaarante...!! :P

Anonymous said...

ಶಾಸ್ತ್ರಿ ನಂದು ಒಂದ್ ಐಡಿಯಾ ಇದೆ..
ಅದ್ರ ಲವರ್ ನ ಕಿಡ್ನಾಪ್ ಮಾಡಿ, ಅಪ್ಪ ಅಮ್ಮ ಗೆ ಎಲ್ಲ ವಿಷ್ಯ ತಿಳ್ಸಿ ಬಿಡೋದು ...ಆಮೇಲೆ ಇದ್ದೆ ಇದೆಯಲ್ವಾ , ಬೇರೆ ಮದ್ವೆ ಮಡ್ಸ್ತಾರೆ ಆಮೇಲೆ ಅದು ದೇವದಾಸ್ ತರ ಕುಡ್ದು ಕುಡ್ದು ಒಂದ್ ದಿವ್ಸ ನೆಗ್ದ್ ಬೀಳುತ್ತೆ ..
-Shiva

ಬಾಲು said...

@Manju: Suma avaru Phoonk cinema beda, badalu nane aduge madi adakke hakthini... thindu adage saayutte antha iddare. ( cost cutting alochane)

@yashu: Heavy idea :D

@Sri: jirale onde alla, manager na odisodu henge? TL na manga mado methods.. ella barutte. mundina postings nalli.

@Shiva: wow olle idea kottiddiya, ili devdas aagutte, kudiyoke shuru madi, mallya gu labha aagutte.

Suma said...

@Balu : Paapi nanna adigeyannu istu hinayavaagi kanthiya. nanna adige andre amrutha iddante... sattavaru baduki vapas barthare :) (Note: Devva aagalla mnushyaraagi)
@Manju : Neevu Balu maathanna keLkondu nanna adige na yavaglu jiraLe iligalige haako plan maadbedi. ond sala naadru taste maadi amele decide maadi. :D Why to take risk annisidre first ilige haaki... otnalli nan adige use aagattalla ade namma santhosha :)