Thursday, May 7, 2009

ಲಲ್ಲೂ, ಮಾಯಾ ಪ್ರಧಾನಿ ಆದ್ರೆ?

ಭಾಗಶಃ ಮುಂದಿನ ಕೆಲವು ದಿನಗಳು ಡೆಲ್ಲಿ ಯಲ್ಲಿ ಕುರ್ಚಿ ಗಾಗಿ ಬಹು ದೊಡ್ಡ ಸಂಗ್ರಾಮ, ಹಾಗೂ ಹೋರಾಟವೇ ನಡೆಯಲಿದೆ. ಗೌಡ ರಿಂದ ಕಾರಟ್ ವರೆಗೂ, ಜಯ ಇಂದ ಮಾಯಾ ವರೆಗೂ ಎಲ್ಲರಿಗೂ ಪ್ರಧಾನ ಮಂತ್ರಿ ಹುದ್ದೆ ಮೇಲೆ ಕಣ್ಣು. ದೇಶ ಸೇವೆ ಮಾಡಲು ಇಷ್ಟೊಂದು ಜನ ತುದಿ ಗಾಲಲ್ಲಿ ನಿಂತಿರುವುದು ಭಾರತೀಯರಾದ ನಮ್ಮ ಸೌಭಾಗ್ಯ!! (ಯಾವ ಆಂಗಲ್ ನಿಂದ ಸೌಭಾಗ್ಯ ಅಂತ ಕೇಳಬೇಡಿ)


ಸರಿ, ಎಲ್ಲ ಓಕೆ, ವಿಷ್ಯಕ್ಕೆ ಬಂದಿಲ್ಲ ಯಾಕೆ ಅಂತೀರಾ? ಇದೋ ಬಂದೆ. ಈ ಕೆಳ ಕಂಡ ಮಹನೀಯರು ಪ್ರಧಾನಿ ಆದರೆ ಏನಾಗ ಬಹುದು ಅನ್ನೋದು ಈಗಿನ ಚಿಂತನೆ, ಹಾಗೂ ಕಲ್ಪನೆ.


ಮೊದಲಿಗೆ ಮಣ್ಣಿನ ಮಗ ದೇವೆ ಗೌಡ್ರು:













1. ಆಫೀಸ್ ನಲ್ಲಿ ನಿದ್ದೆ ಮಾಡೋರಿಗೆ ನಿದ್ದೆ ಬತ್ಯೆ


2. ಶಾಲೆ ಗಳಲ್ಲಿ ಬಿಸಿ ಊಟಕ್ಕೆ ರಾಗಿ ಮುದ್ದೆ ಮತ್ತೆ ಕೋಳಿ ಸಾರು!!!

3. ಕುಮಾರ ಸ್ವಾಮಿ ಮುಖ್ಯ ಮಂತ್ರಿ ಯನ್ನಾಗಿ ಮಾಡೋಕೆ ಎಲ್ಲ ಪ್ರಯತ್ನ, ರೇವಣ್ಣ ಎಲ್ಲಾದ್ರೂ ರಾಜ್ಯ ಪಾಲ, ಹಾಗೂ ಕುಮಾರಣ್ಣನ ನ ಮಗ ಹರದಾನ ಹಳ್ಳಿ ಪಂಚಾಯಿತಿ ಅಧ್ಯಕ್ಷ ಆಗ್ತಾನೇ.


4. ರಾಧಿಕ ಬಂದು ಪುಕ್ಕಟೆ ಡ್ಯಾನ್ಸ್ ಮಾಡಲಿ ಅನ್ನೋದು ನಮ್ಮ ಶುದ್ದ ಪೋಲಿ ಬೇಡಿಕೆ ಬಿಡಿ.




ದೊಡ್ಡ ರಾಜ್ಯದ ಮುಖ್ಯ ಮಂತ್ರಿ, ಮಾಯವತಿ ಪ್ರಧಾನಿ ಆದರೆ ಹೇಗೆ?ಅದು ಹೇಗೂ ಇರಲಿ, ನಮ್ಮೆಲ್ಲ ಸರ್ಕಾರೇತರ ಸಂಸ್ಥೆಗಳಿಗೆ 3 ದಿನ ಎಕ್ಸ್‌ಟ್ರಾ ರಜೆ ಸಿಗುತ್ತೆ. (ಸರ್ಕಾರಿ ಸಂಸ್ಥೆಗಳಿಗೆ ಬೀದಿ, ಸುಲಬಕ್ಕೆ ಸಿಗುತ್ತೆ)













1. ಅಂಬೇಡ್ಕರ್ ಜಯಂತಿ


2. ಕನ್ಶಿರಮ್ ಜಯಂತಿ

3. ಮಾಯವತಿ ಹುಟ್ಟಿದ ಹಬ್ಬ



ಲಲ್ಲೂ ಪ್ರಸಾದ್ ಯಾದವ್ ಆದ್ರೆ?












1. ಗಂಡ ತಪ್ಪು ಮಾಡಿ ಜೈಲಿಗೆ ಹೋದ್ರೆ ಹೆಂಡತಿಗೆ ಆ ಕೆಲ್ಸಾ (ಲಾಲೂ ಕುಟುಂಬವೇ ಇದಕ್ಕೆ ಆದರ್ಶ)


2. ಹಿಂದೆ ಮೇವು ಹಗರಣ ಮಾಡಿದ ಹಾಗೆ, ಈಗ ಪಶು ಹಗರಣ!!!!

3. ಅಕಸ್ಮಾತ್ ನಾವೇನಾದ್ರೂ ತಪ್ಪು ಮಾಡಿದ್ರೆ ನಮ್ ಮೇಲೆ ರೋಡ್ ರೋಲರ್!!



ಸತ್ಯಂ ರಾಜು ಪ್ರಧಾನಿ ಆದರೆ?

1. INDIA ಹೋಗಿ AIDNI ಆಗುತ್ತೆ!!!


2. ಶ್ರೀನಿವಾಸ್ ಹೊಸ ಅರ್ಥ ಸಚಿವ!!!


3. ಭಾರತ ಅಭಿವೃದ್ದಿ ಹೊಂದಿದ ದೇಶ ಅಂತ ಕಾಗದದಲ್ಲಿ ಘೊಷಣೆ.




ಇನ್ನೂ ನಮ್ಮ ಸಾಫ್ಟ್‌ವೇರ್ ಇಂಜಿನಿಯರ್ ಆದ್ರೆ ಏನಾಗ ಬಹುದು?

1. ಪ್ರತಿಯೊಬ್ಬರಿಗೂ ಓರ್ಕುಟ್ ಅಕೌಂಟ್ ಕ್ರಿಯೇಟ್ ಮಾಡಲಾಗುತ್ತದೆ.


2. ಈ ವೋಟಿಂಗ್ ಸೌಲಬ್ಯ!!!

3. ತಪ್ಪು ಮಾಡಿದವರಿಗೆ ಜೈಲಿಗೆ ಕಳಿಸೋ ಬದಲು, ಅವರ ಕಂಪ್ಯೂಟರ್ ಗೆ ಒಂದಿಷ್ಟು ವೈರುಸ್ ಬಿಡೋದು!!!



ಮೇಲಿನದೆಲ್ಲವು ಸತ್ಯ ಆದರೆ, ಅದಕ್ಕೆ ನಾನು ಜವಾಬುದಾರ ಅಲ್ಲ. ಸತ್ಯ ಆದರೆ ಕಾಕತಾಳೀಯವೂ ಅಲ್ಲ.

15 comments:

shivu.k said...

ಬಾಲು ಸರ್,

ನಿಮ್ಮ ಪ್ರಧಾನಮಂತ್ರಿ ಆದ್ರೆ....ಕಾನ್ಸೆಪ್ಟ್ ತುಂಬಾ ಚೆನ್ನಾಗಿದೆ....ಇನ್ನೊಂದಷ್ಟು ಜನರನ್ನು ಹೀಗೆ ವಿಶ್ಲೇಷಣೆ ಮಾಡಿ....[ಪವಾರ್, ಜಯ, ರಾಹುಲ್, ಇತ್ಯಾದಿ..]

Chandru said...

ತುಂಬಾ ವಿಡಂಬನೆಯ ಚರ್ಚೆಯನ್ನು ಕೊಟ್ಟಿದ್ದಿರಾ. ಇಂತಹ ನಾಯಕರುಗಳಿಗೆ ನಮ್ಮ ದೇಶವನ್ನು ಕೊಟ್ಟರೆ ಇವೆಲ್ಲ ಆಗುವುದರಲ್ಲಿ ಸಂದೇಹವಿಲ್ಲ . ಒಂದು ಕ್ಷಣ ಯೋಚಿಸಿದರೆ ಇವೆಲ್ಲ ಇಂತಹ ನಾಯಕರುಗಳ ಮೂಲಕವೇ ತುಂಬಾ ನಡೆದಿದೆ ಮತ್ತು ನಾವೆಲ್ಲಿದ್ದೇವೆ ಎಂಬ ಅನುಮಾನ ಮೂಡಿಸುವುದಕ್ಕೆ. ಟೈಮ್ ಪಾಸು ಗೂ ಮತ್ತು ನಾಗರಿಕ ಪ್ರಜ್ಞೆಯು ಮೂಡಿಸುವ ಒಂದ್ ಲೇಖನ. ನಮ್ಮಲ್ಲಿ ಹಾಸ್ಯಕೆನು ಕೊರೆತೆಯಿಲ್ಲ ಆದರೆ ಅದನು ಗುರುತಿಸಿ ಅನುಭವಿಸುವ ನನ್ನ ನಿನ್ನಂಥವರ ಅವಶ್ಯಕತೆ ಈ ದೇಶಕಿದೆಯಲ್ವ? ನಿಜವಾಗಲು ಇದನ್ನು ಬರೆಯುವಾಗ ನಿದ್ದೆ ಬರುತ ಇತ್ತು ಆದರು ಟೈಮ್ ಪಾಸ್ ಗೆ ಬರಿದಿದ್ದೇನೆ.. ತಪ್ಪಿದ್ದರೆ ತಿಳಿಸು !

PARAANJAPE K.N. said...

ವಿನೋದ, ವಿಡ೦ಬನೆಗಳ ಸಮ್ಮಿಶ್ರಣ, ಚೆನ್ನಾಗಿದೆ ಬಾಲು, ಖುಷಿಯಾಯಿತು.

Varun said...

Ella Ok Maga. Balu Pradhani adre anu Antha Bareele ella.

Unknown said...

"ಡೊಂಕು ಬಾಲದ ನಾಯಕರೇ ನೀವೇನೂಟ ಮಾಡಿದಿರಿ....." ಹಹ ಚೆನ್ನಾಗಿದೆ ನಿಮ್ಮ ಕಲ್ಪನೆ...

ವಿ.ರಾ.ಹೆ. said...

hhha.. yar kaige kotru otnalli desha ekkuttogodanthu gyaranti bidu.

ಧರಿತ್ರಿ said...

ಬಾಲು ಮತ್ತೆ ಅಪ್ ಡೇಟ್ ಮಾಡಿದ್ದೀರಿ..ಖುಷಿಯಾಯಿತು. ಇನ್ನು ಉಳಿದವರನ್ನೆಲ್ಲಾ ಸೇರಿಸಿ ಲಿಸ್ಟ್ ಮಾಡಬೇಕಿತ್ತು..ಎಡರಂಗ, ಬಲರಂಗ, ಮಧ್ಯದ ರಂಗ..ಎಲ್ಲಾ ರಂಗದವರನ್ನೂ ಬರೆಯಿರಿ. ಕೊನೆಗೆ 'ಬಾಲು ಮಂತ್ರಿಯಾದರೆ'?! ಏನೂಂತ ಬರೀಲೇಬೇಕು..ಅದಕ್ಕಾಗಿ ಕಾಯ್ತಾ ಇದ್ದೇವೆ. ಓದಿ ನಕ್ಕಬಿಟ್ಟೆ..................
ಹ್ಯಾಟ್ಸಾಫ್ ಬಾಲು ಸರ್..

-ಧರಿತ್ರಿ

ಬಾಲು said...

@ಶಿವು: ಪವಾರ್, ಜಯ ಬಗ್ಗೆ ಬರೀಲಿಕ್ಕೆ ಹೋದ್ರೆ ಅಲ್ಲಿ ಶಶಿಕಲ ತರದ ಹೊಸ ವ್ಯಕ್ತಿ ಗಳನ್ನು ಸೇರಿಸ ಬೇಕಾಗುತ್ತೆ. ಅದನ್ನ ಒಂದು ದೊಡ್ಡ ಲೇಖನ ಮಾಡಿ ಬರೆಯೋಣ ಅಂತ. ಕಾನ್ಸೆಪ್ಟ್ ಇಷ್ಟ ಪಟ್ಟಿದ್ದಕ್ಕೆ ಥ್ಯಾಂಕ್ಸ್.

@ಚಂದ್ರು: ಏನು ಮಾಡೋದು, ರಾಜಕಾರಣಿಗಳ ಹೆಂಡತಿ ಮಕ್ಕಳು ಹೇಳಿದರೇನೇ ಕೆಲೊಲ್ಲ, ಇನ್ನೂ ನಾವು ಹೇಳಿಡ್ವಿ ಅಂತ ಒಳ್ಳೆಯವರು ಆಗ್ತಾರ? ನಮಗೆ ಆವರನ್ನ ಗೇಲಿ ಮಾಡೋದು ಒಂದೇ ದಾರಿ ಅನ್ಸುತ್ತೆ. ಕುಮಾರ ರಾಧಿಕ ಜೊತೆ ರಾಜ ರೋಷ ವಾಗಿ ಓಡಾಡುತ್ತಾನೆ, ಇದು ನೈತಿಕ ಅಧಃಪತನ ಅಲ್ಲ, ನೈತಿಕತೆ ಅಂದರೆ ಏನಂತ ಗೊತ್ತಿಲ್ಲದವರ ರಾಜ್ಯ ಭಾರ.

@ಪರಂಜಾಪೆ: ಧನ್ಯವಾದ

@ವರುಣ: ನಾನು ಪ್ರಧಾನಿ ಆದ್ರೆ ನಿಂಗೆ ಬಿಹಾರ ಉಚಿತ!!!

@ರವಿಕಾಂತ: ಅದು ಸಂದರ್ಭೋಚಿತ ಪಧ್ಯ

@ವಿಕಾಸ: ಹೂನ್ ಕಣೋ...

@ಧರಿತ್ರಿ: ಹೌದ್ರೀ ಸೇರಿಸ್‌ಬೇಕಿತ್ತು. ಎಡ ರಂಗ, ಬಲ ರಂಗ, ಮಧ್ಯ ಡ ರಂಗ (ಮಲ್ಯ ಕಡೆದು) ಆದ್ರೆ ತುಂಬಾ ಜಾಸ್ತಿ ಆಗಿ ಬೋರ್ ಹೊಡೆಸುತ್ತೆ ಅಂತ ಬರೀಲಿಲ್ಲ.. ಇನ್ನೊಮ್ಮೆ ಬರೆಯುವೆ. ಇನ್ನೂ ನಾನು ಪ್ರಧಾನಿ ಆದ್ರೆ ಪ್ರತಿಯೊಬ್ಬ ನಾಗರೀಕರು ನಂ ಬ್ಲೋಗ್ ನೋಡಬೇಕು ಅಂತ ರೂಲ್ಸ್ ಮಾಡುವೆ!!! ಏನಂತೀರಿ?
ಬಂದು ಕುಶಿ ಪಟ್ಟಿದ್ದಕ್ಕೆ ಥ್ಯಾಂಕ್ಸ್

Anonymous said...

ಚೆನ್ನಾಗಿದೆ :-)

ಒಂದು ವೇಳೆ ನೀವೇ ಪ್ರಧಾನ ಮಂತ್ರಿ ಆದ್ರೆ??

ಧರಿತ್ರಿ said...

Sir...Namaskara...ni bega pradhani agali anha haraisuthene. nim blog nodorules annu shiravahisi palisutheve...nam bedikegalinda thappisikondre....hushar!!!!:))))
-Dharithri

ಶಿವಪ್ರಕಾಶ್ said...

ha ha ha ..
channagide ri...;

Ittigecement said...

ಬಾಲು ಸರ್....

ಇನ್ನಷ್ಟು ಕೋತಿಗಳನ್ನು ಬಿಟ್ಟು ಬಿಟ್ಟಿದ್ದೀರಿ...

ಬರೆಯಿರಿ ಅವುಗಳ ಬಗೆಗೂ...

ಹಾಸ್ಯವಾದರೂ ಒಂದು ಕಡೆ ನೋವಾಗುತ್ತದೆ...
ಇಂಥವರು ನಮ್ಮ ದೇಶ ಆಳುತ್ತಾರಲ್ಲ ಎಂದು...

ಚಂದದ ಹಾಸ್ಯಕ್ಕೆ
ಅಭಿನಂದನೆಗಳು...

Anonymous said...

ella chennaagittu,, vidambane ittu.. aadare nimma BJP bagge yaake vyangya iralilla..
modi bagge.. advaani bagge..
vaajapeyi bagge,, nimma maatugalalli yaako pakshada virudda maatra barediro aagide,, enu helteera

Prabhuraj Moogi said...

ನಿಮ್ಮ ಪ್ರಧಾನಿಗಳ ಲೇಖನ ಚೆನ್ನಾಗಿತ್ತು.. ಮಾಯಾ ಆಗಿದ್ದರೆ ಅಂತೂ ಸೂಪರ(ಆಗದಿರಲಿ ಎಂದೆ ನನ್ನ ವೈಯಕ್ತಿಕ ಆಶಯ)... ಅಂತೂ ಚುನಾವಣೆ ಮುಗಿದು ರೆಜಲ್ಟ ಬಂದಾಗಿದೆ ಮತ್ತೆ ಮನಮೊಹನರೇ ಪ್ರಧಾನಿ ಆಗಲಿದ್ದಾರೆ...

Anonymous said...

ಶಿವ ಪ್ರಕಾಶ್: ಧನ್ಯವಾದ ಗಳು

ಹೆಗ್ಡೆ ಅವರೇ, ಇದು ನಿಜಕ್ಕೂ ನೋವಿನ ಸಂಗತಿ. ಅದೃಷ್ಟ ವಶಾತ್ ಇ ಮಹನೀಯರು ಪ್ರಧಾನಿ ಆಗುತ್ತಾ ಇಲ್ಲ!!

ಅನಾಮದೆಯರಿಗೆ: ಹಾಗೇನಿಲ್ಲ ಸ್ವಾಮಿ, ನನ್ನ ಹಿಂದಿನ ಕೆಲವು ಬರಹ ಗಳಲ್ಲೂ ಓದಿದರೆ ನಿಮಗೂ ತಿಳಿಯುತ್ತೆ.

ಪ್ರಭು: ಹೌದು ಮಾರಾಯರೇ, ಇವರು ಯಾರು ಆಗುತ್ತಾ ಇಲ್ಲ... :)

ಬಾಲು