Thursday, May 28, 2009

ಭರತ ದೇಶದ ಚುನಾವಣಾ ಕಥೆಯು

ಕಲಿಯುಗದ 2065 ವಿರೋಧಿ ನಾಮ ಸಂವತ್ಸರ ದಲ್ಲಿ ಭರತ ಭೂಖ೦ಡದಲ್ಲಿ ಮಹಾ ಚುನಾವಣೆ ಯೊಂದು ನಡೆಯಿತಂತೆ. ಭೂದೇವಿಯಿ೦ದ ನೇರ ನೇಮಕಾತಿ ಆಗಿದ್ದ, ಅರ್ಥಾತ್ ಮಣ್ಣಿನ ಮಗ ನ ಬಳಗವು 33 ಕೊಟಿ ದೇವತೆ ಗಳನ್ನು ಬಗೆ ಬಗೆಯಾಗಿ ಆರಾಧಿಸುತ್ತಾ ವಿಜಯಲಕ್ಷ್ಮಿಯ ಕೈ ಪಿಡಿದು, ಭರತ ರಾಜ ನ ಕುರ್ಚಿಯನ್ನೆರಲು ಇನ್ನಿಲ್ಲದ ಕಸರತ್ತು ಗಳನ್ನು ಮಾಡುತ್ತಿದ್ದನಂತೆ.ಆಳುವ ಪಕ್ಷಕ್ಕು, ತೆಗಳುವ ಪಕ್ಷಕ್ಕು ಯುದ್ದ ಗೆಲ್ಲುವ ನಂಬಿಕೆ ಇಲ್ಲವಾದ್ದರಿಂದ ಸನ್ ಆಫ್ ಸಾಯಿಲ್ ನು ಮಧ್ಯ ರಾಜ್ಯದ ಮಾಯಾಂಗನೆ ಯನ್ನು, ಪಶ್ಚಿಮದ ಕ್ಯಾರೆಟ್ಟು ಮತ್ತು "ವೃ೦ದಾ" ವನ ವನ್ನು ಹೆಗಲಿಗೇರಿಸಿ ಸೇನೆಯನ್ನು ಅಣಿಗೊಳಿಸಿದನಂತೆ. ಮಹಾ ಸಜ್ಜನನೂ , ಪ್ರಾಮಾಣಿಕನು, ದೇಶ ಭಕ್ತನು ಆದ ಅವನು ತನ್ನ ಇಡೀ ಪರಿವಾರವನ್ನೇ ಭರತ ಭೂಖ೦ಡಕ್ಕೆ ಮೀಸಲಿಟ್ಟಿದ್ದ ನಂತೆ.ತನ್ನ ಕೊನೆಯ ಚುನಾವಣೆಯೆಂದು ಘೋಷಿಸಿ, ಕೈಲಾದಷ್ಟು ದಿನ ಮಣ್ಣಿನ ಸೇವೆ ಮಾಡಿ, ತಾಯಿಯ ಋಣ ತೀರಿಸಲು ಪ್ರಯತ್ನ ಪಡುವುದಾಗಿ ಘೊಷಿಸಿದ್ದ ಮಣ್ಣಿನ ಮಗನು, ಚುನಾವಣೆ ಗೆಲ್ಲಲು ಹಣೆಯ ಮೇಲೆ ಬರೆಯ ಬಹುದಾದಂತ ಪೆನ್ನು ಪಿಡಿದಿರುವ ಭ್ರಹ್ಮ ನ ತಪ್ಪಸ್ಸು ಆರಂಬಿಸಿದನಂತೆ, ದೈವ ವನ್ನು ಸಂತೃಪ್ತಿಗೊಳಿಸಲು ಕುರಿ, ಟಗರು ಮುಂತಾದ ಆಹಾರ ಪದಾರ್ಥ ಗಳನ್ನು ಕೊಟ್ಟು, ಅವನಿಗೆ ಚಿಕನ್ 65 ರುಚಿ ತೋರಿಸಿ, ಜೊತೆಗೊಂದು ರಾಗಿ ಮುದ್ದೆ ಯನ್ನು ಇತ್ತು ನೈವೇದ್ಯ ಮಾಡಿದನಂತೆ. ನಂತರ ಥೇಟ್ ಕನ್ನಡ ಸಿನೆಮಾ ದ ತರ ಚಿತ್ರ ನಟಿಯಿ೦ದ ಒಂದು ಐಟಮ್ ಸಾಂಗು ಮಾಡಿಸಿ, ಸಂಗೀತ-ನಾಟ್ಯಂ ಸಮರ್ಪಯಾಮಿ ಅಂದನಂತೆ. ಆಶರೀರ ವಾಣಿಯೊಂದು ತಥಾಸ್ತು ಎಂದು ಮೊಳಗಿಯೂ ಬಿಟ್ಟಿತಂತೆ.ಇತ್ತ ತೆಗಳೋ ಪಕ್ಷದವರು ಮಲೆನಾಡಿನಲ್ಲಿ ಹೋಮ ಹವನ ಮಾಡಿ, ದೇವರಿಗೆ ಪೂಸಿ ಹೊಡೆಯಲು ಪ್ರಯತ್ನಿಸಿದರ೦ತೆ. ಮತದಾರ ಪ್ರಭುಗಳಿಗೆ, ಕೈಗೆ ಬಳೆ, ಉಡಲು ಸೀರೆ ಕೊಟ್ಟು ಮತ ಯಾಚನೆ ಮಾಡಿಠಂತೆ. ಆದರೆ ಅಳುವ ಪಕ್ಷ ಮಾತ್ರ ಜನರ ಕಿವಿಗೆ ಚಂದ ಚಂದ ದ ಹೂವು ಗಳನ್ನು ಮಾಡಿ ಇಟ್ಟು ವಿಶ್ರಮಿಸಿದರಂತೆ.ಅಂತೂ ಚುನಾವಣೆಗಳು ನಡೆದು ಆಡಳಿತ ಪಕ್ಷವು ವಿಜಯಲಕ್ಷ್ಮಿಯನ್ನು ಅಪ್ಪಿಕೊಳ್ಳಲು ಸಫಲರಾದರಂತೆ.ತೆಗಳುವ ಪಕ್ಷಕ್ಕೆ ಇದರಿಂದ ಭಾರಿ ಖೇದ ವಾಗಿ ನೇರವಾಗಿ ಭವಿಷ್ಯ ಪ್ರವಚಕ ರಾದ ಶಾರದೆ ಪುತ್ರ ನ ಬಳಿ ಸಾಗಿದರಂತೆ. ಇವರ ದುಃಖವನ್ನು ಆಲಿಸಿದ ಅವರು, ಇದಕ್ಕೆ ರಾಹುಕಾಟ ವೆಂದು ಹೇಳುತ್ತ “ತಪ್ಪು ನಿಮ್ಮದೇ, ಭೂದೇವಿಯನ್ನು ಕೊಡುತ್ತಾ, ಸರಸ್ವತಿ ಪುತ್ರರಾಗಿರುವರಿಂದ ನೀವು ಆಪರೇಶನ್ ಅನ್ನು ಮಾಡಿದ್ದಲ್ಲಿ, ಯಾವಾಗಲು ರಿನ್ ಶುಭ್ರತೆಯ ರಾಹುಲನು ನಿಮ್ಮ ಪಕ್ಷಕ್ಕೆ ತರಬಹುದಿತ್ತೆಂದು ಹೇಳಿ, ಶೃಂಗೇರಿ ಗೆ ಪುಷ್ಪಕ ವಿಮಾನ ಏರಿದರಂತೆ.”ಇತ್ತ ಮಣ್ಣಿನ ಮಗ ವಿಷಯವನ್ನು ತಿಳಿದು ಸೂತ್ರಧಾರನ ಮೇಲೆ ಕೆಂಡಾ ಮಂಡಲ ವಾದನಂತೆ. ಭಕ್ತನನ್ನು ಮಿಸ್ ಮಾಡಿಕೊಂಡರೆ, ಅವನ ಪಾರ್ಟೀಯವರು ಯಾರೂ ಮುಂದೆ ಹುಂಡಿ ಗೆ ಹಣ ಹಾಕುವುದಿಲ್ಲವೆಂದು ಬೆದರಿದ ಭಗವಂತನು ಭೂದೇವಿಯ ಪುತ್ರ ನಿಗೆ ತನ್ನ ದರುಶನ ಕೊಟ್ಟು ಕಾರಣ ಪೇಳಲು ಶುರು ವಿಟ್ಟ ನಂತೆ . ನೀನು ನನ್ನನ್ನು ಪೂಜಿಸಿ ನನ್ನ ಮತ್ತೆ ಮಗನನ್ನು ಗೆಲ್ಲಿಸೆ೦ದು ಪೂಜಿಸಿದೆ, ಇಷ್ಟ ಪದಾರ್ಥಗಳನೆಲ್ಲ ನೈವೇದ್ಯ ಮಾಡಿದೆ, ಸಂತೃಪ್ತ ಗೊಂಡ ನಾನು ಖುಶಿ ಜಾಸ್ತಿ ಆಗಿ ಒಂದು ಹೆಚ್ಚಿಗೆ ಸೀಟ್ ಕೂಡ ಫ್ರೀ ಆಗಿ ಕೊಟ್ಟಿದ್ದೇನೆ ಎಂದು ಹೇಳಿದನಂತೆ. ನೀನು ಗೆಲ್ಲಲಿ ಎಂದು ಪ್ರಾರ್ಥಿಸಿದೆಯೇ ಹೊರತು ಆಡಳಿತ ಪಕ್ಷ ಸೋಲಲಿ ಎಂದು ಚಿಕನ್ 65 ನೈವೇದ್ಯ ಮಾಡಿರಲಿಲ್ಲ ವೆಂದು…. ಅದಕ್ಕೆ ಅವರು ಗೆದ್ಡಿದ್ದಾರೆ ಎಂದು ಹೇಳುತ್ತ ಅ೦ತರ್ಧಾನ ನಾದನ೦ತೆ .ಇಲ್ಲಿಗೆ ಕಥೆಯೂ ಸಮಾಪ್ತಿಯು.....

19 comments:

PARAANJAPE K.N. said...

ಬಾಲು
ಚೆನ್ನಾಗಿದೆ, ಕಥಾನಕ. ಭರತ ಖ೦ಡದ ಮಣ್ಣಿನ ಮಗನ ಕಥೆಯನ್ನು ಪೇಳುತ್ತಾ ಪಾವನರಾಗಿದ್ದಿರಿ, ಮತ್ತು ಅದನ್ನು ಕೇಳಿದ ನಮ್ಮ೦ತಹ ಪಾಮರರನ್ನು ಪುನೀತರಾಗಿಸಿದ್ದೀರಿ,

shivu said...

ಬಾಲು ಸರ್,

ಕತೆ ಚೆನ್ನಾಗಿದೆ...ಭವಿಷ್ಯದ ಭರತ ಖಂಡದ ಕಥನ ಚೆನ್ನಾಗಿದೆ...ಮಣ್ಣಿನ ಮಕ್ಕಳ ಆಟಕ್ಕೆ ದೇವರು ಕೊಟ್ಟ ಉತ್ತರ ಸೊಗಸಾಗಿದೆ.

"ನೀನು ಗೆಲ್ಲಲಿ ಎಂದು ಪ್ರಾರ್ಥಿಸಿದೆಯೇ ಹೊರತು ಆಡಳಿತ ಪಕ್ಷ ಸೋಲಲಿ ಎಂದು ಚಿಕನ್ 65 ನೈವೇದ್ಯ ಮಾಡಿರಲಿಲ್ಲ ವೆಂದು…."

ಬಲು ಮಜವಾಗಿದೆ...

ಧರಿತ್ರಿ said...

ಶಾಸ್ತ್ರೀಜಿ...
ನಿಮ್ಮ 'ಭರತಖಂಡದ ಮಣ್ಣಿನ ಮಗನ' ಕಥೆಯನ್ನು ಕೇಳಿ ಭೂತಾಯ ಮಡಲಿನ ಸಮಸ್ತರು ಪಾವನವಾಗಿದ್ದೇವೆ! ನಿಜ ಹೇಳಬೇಂಕದ್ರೆ ನಿಮ್ಮ ಕಥೆ ಕೇಳ್ತಾ ಕೇಳ್ತಾ 'ಬೇತಾಳ ಕಥೆ'ಗಳು ಮಂಡೆಯಲ್ಲಿ ಹೊಳೆದುಬಿಟ್ಟವು. ಒಟ್ಟಿನಲ್ಲಿ ಪರೋಕ್ಷವಾಗಿ ಮಣ್ಣಿನ ಮಗನ ತಲೆಗೆ ಮೊಳೆ ಹೊಡೆದ್ರಿ....
-ಧರಿತ್ರಿ

ಶಿವಪ್ರಕಾಶ್ said...

ಹ್ಹಾ ಹ್ಹಾ ಹ್ಹಾ

ರೂಪಾ said...

ಚೆನ್ನಾಗಿದೆ
ಮಣ್ಣಿನ ಮಗನ ಕಥೆ ಅಹಾ ಓದುತ್ತಾ ಓದುತ್ತಾ ಅಂತಹ ಮಣ್ನಿನ ಮಗನ ಕೈಯ್ಯಲ್ಲಿ ಒಂದು ವರ್ಷ ನಲಿ(ರಳಾ)ದಾಡಿದ ಬಾರತಮಾತೆಯ ನೆನೆದು ಕಣ್ಣೀರು ಚಿಮ್ಮಿತು

Anonymous said...

ಹಾಗೆಯೇ ತೆಗುಳುವ ಪಕ್ಷದವರು ಮಠ ಮಾನ್ಯಗಳಿಗೆ ಸುರಿದ ಕೋಟಿಗಟ್ಟಲೇ ಹಣವೂ ಕೈಹಿಡಿಯಲಿಲ್ಲವಲ್ಲಾ ಎಂದು ಶೋಭಾಯ ಮಾನವಾದ ಕರಗಳಿಂದ್ಲೇ ಬಾಯಿ ಬಾಯಿ ಬಡಿಡು ಕೋಳ್ಳುತ್ತಿರಲು, ಗೆದ್ದ ಚಿರಂಜೀವ ರಾಘವನು ಮುದುಕನನ್ನು ಹಣದಿಂದಲೇ ಮಣಿಸಿದ ನನ್ನ ಪರಿಯನೆಂತು ಹೇಳಲೀ ಎಂದೆನ್ನುತ್ತಾ, ಬರುವ ವರ್ಷದ ವರ್ಗಾ ವರ್ಗಿಯ ದಂದೆಗೆ ತಯಾರಾಗುತ್ತಿದ್ದನಂತೆ.

ರವಿಕಾಂತ ಗೋರೆ said...

ಚೆನ್ನಾಗಿದೆ ಬರಹ...

balakrishna Gowda said...

ಸ್ವಾಮಿ, ನೀವು ಯಾರೋ ನನಗೆ ಗೊತ್ತಿಲ್ಲ. ಆದರೆ ದೇವೇಗೌಡರನ್ನು ಅಣಕಿಸುವ, ಟೀಕಿಸುವ ಬರಹ, ಕವಿತೆ ಬರೆಯುವ ಚಾಳಿ ಕೆಲವರಿಗಿದೆ. ಅದನ್ನು ನಿಮ್ಮಲ್ಲೂ ಕಾಣುತ್ತಿದ್ದೇನೆ. ಓಕೆ, ನಿಮ್ಮ ವಾಕ್-ಬರಹ ಸ್ವಾತ೦ತ್ರ್ಯ ದ ಬಗ್ಗೆ ನನ್ನ ಆಕ್ಷೇಪಣೆ ಇಲ್ಲ. ಆದರೆ ನಿಜಜೀವನದಲ್ಲಿ ಅತ್ಯ೦ತ ಸರಳತೆ ಮತ್ತು ಕಪಟರಹಿತ, ಮುಖವಾಡ ವಿಲ್ಲದ, ಮತ್ತು ಥಳಕುಬಳಕಿನ ಆಕರ್ಷಣೆ ಇಲ್ಲದೆ ಬದುಕು ತ್ತಿರುವ ದೇವೇಗೌಡರ ಬಗ್ಗೆ ನಿಮ್ಮ ಅಣಕು-ಕೆಣಕು ನಿಮ್ಮ ಕೀಳು ಅಭಿರುಚಿಯನ್ನು ಎತ್ತಿ ತೋರಿಸುತ್ತದೆ. ಹಾಗೆ ನೋಡಿದರೆ ನಮ್ಮ ನಡುವೆ ಇರುವ ಅನೇಕ ರಾಜಕಾರಣಿಗಳಲ್ಲಿ ದೇವೇಗೌಡರ ವ್ಯಕ್ತಿತ್ವಕ್ಕೆ ಹತ್ತಿರವಾಗ ಬಲ್ಲವರು ವಿರಳ. ಅತ್ಯ೦ತ ಹೇಯ, ಕೀಳು ರಾಜ ಕಾರಣ ಮಾಡುತ್ತಿರುವವರ ಬಗ್ಗೆ ಮಗುಮ್ಮಾಗಿದ್ದು, ದೇವೇ ಗೌಡರ ಕುಟು೦ಬದ ಬಗ್ಗೆಯೇ ನೀವು ಬರೆಯುತ್ತಿರುವುದು ನೋಡಿದರೆ, ನಿಮಗೇನೋ ಪೂರ್ವಾಗ್ರಹ ಪೀಡೆ ಇದ್ದ೦ತಿದೆ. ಸ್ವಲ್ಪ ಸ್ವಾವಲೋಕನ ಮಾಡಿಕೊಳ್ಳಿ. ನೀವೆಷ್ಟು ಸಾಚಾ ಅನ್ನುವುದನ್ನು ಖಚಿತ ಪದಿಸಿಕೊ೦ಡು, ಆ ನ೦ತರ ದೇವೇಗೌಡರನ್ನು ಟೀಕಿಸಲು ಹೊರಡಿ. ನಾನು ಅನಾಮಧೇಯನಾಗಿ ಬರೆಯಲು ಇಷ್ಟ ಪಡುವುದಿಲ್ಲ. ಬೇಕಿದ್ದರೆ ನೇರಾ ನೇರ ಕುಳಿತು ಚರ್ಚೆ ಮಾಡಲು ನಾನು ಸಿದ್ಧ. ನಿಮ್ಮ ವಿಚಾರಗಳ ಬಗ್ಗೆ ನನ್ನೊಡನೆ ಅಳುಕಿಲ್ಲದೆ ಮ೦ಡಿಸುವ ಧೈರ್ಯ ನಿಮಗಿದೆಯೇ, ? ನೀವೆಲ್ಲ ಬ್ಲಾಗಲ್ಲಿ ಬರೆದು ತೆರೆಮರೆಯಲ್ಲಿರುವವರು, ಮು೦ದೆ ಬನ್ನಿ, ಜೀವನದಲ್ಲಿ ಸಾಧಿಸಬೇಕಾದರೆ, ತೆರೆ ಸರಿಸಿ ಮು೦ದೆ ಬ೦ದು ಹೋರಾಟ ಮಾಡಬೇಕು, ಅದು ಗ೦ಡಸ್ತನದ ಲಕ್ಷಣ.

ಸಿಮೆಂಟು ಮರಳಿನ ಮಧ್ಯೆ said...

ಬಾಲು ಸರ್...

ಎಲ್ಲಿಂದ ತರ್ತೀರಿ ಇಂಥಹ ಐಡಿಯಾಗಳನ್ನು...?

ಮಸ್ತಾಗಿದೆ...
ಸತ್ಯನಾರಾಯಣ ಪೂಜಾ ಕಥೆಯಂತಿದೆ....

ಮಣ್ಣಿನ ಮಗನ..
ಮಗನ ತಲೆಗೆ ಮೊಳೆ ಹೊಡೆದ ಪೂಜಾ ವಿಧಿ ವಿಧಾನವು...
ಎಂದು ಬದಲಾಯಿಸಿ....

ನಕ್ಕು ನಕ್ಕು ಸುಸ್ತಾಗಿದ್ದೇನೆ...

ಬಾಲು said...

ಪರಂಜಾಪೇ, ಶಿವೂ, ಧರಿತ್ರಿ, ಶಿವ ಪ್ರಕಾಶ್, ರವಿ ಕಾಂತ ಗೋರೆ ಹಾಗು ಪ್ರಕಾಶ್ ಅವರಿಗೆ ಧನ್ಯವಾದಗಳು.

ರೂಪ ಅವರೇ ನಿಮಗೆ ಟೈಮ್ ಪಾಸ್ ಗೆ ಸ್ವಾಗತ. ನಿಮ್ಮ ಅಭಿಪ್ರಾಯಕ್ಕೆ ಸರಿ ಇದೆ, ಇ ದೇಶ ಇನ್ನೇನು ಕಾಣಬೇಕೊ!!!

ಬಾಲು said...

ಅನಾಮದೇಯರೇ: ನಿಮ್ಮ ಮಾತು ಸರಿ ಇದೆ, ಉಪ ಮುಖ್ಯ ಮಂತ್ರಿ ಆಗಿದ್ದಾಗಲೇ ಶಿವಮೊಗ್ಗ ದ ಅರ್ದ ಊರನ್ನೇ ಕೊಂಡಿದ್ದ ಅ ದೈವ ಭಕ್ತರು, ಈಗ ವರ್ಗ ವಣೆಯ ದಂದೆಗೆ ಸೂಟ್ ಕೇಸ್ ರೆಡಿ ಇಟ್ಟುಕೊಂಡಿದ್ದಾರೆ ಅಂತೆ. ಭದ್ರಾವತಿಯಲ್ಲಿ ಆಡಳಿತ ಪಕ್ಷಕ್ಕೆ ಆಪರೇಷನ್ ಮಾಡಿದ್ದರಿಂದ ಅಲ್ಲಿ ವಿರೋಧವು ಇಲ್ಲವಾಗಿದೆ. ನೋಡುವ ಇ ನಾಡು ಇನ್ನೆಷ್ಟು ಶೋಭಾಯ ಮಾನ ಆಗುತ್ತೆ ಅಂತ.

ಬಾಲು said...
This comment has been removed by the author.
ಬಾಲು said...

Bala Krishna: ನಾನು ಅದನ್ನೇ ಹೇಳಿದ್ದು ಸ್ವಾಮೀ, ಮಣ್ಣಿನ ಮಗ ಮಹಾ ಪ್ರಾಮಾಣಿಕ, ದೇಶ ಭಕ್ತ, ಸಜ್ಜನ, ಸರಳ ಅಂತೆಲ್ಲ. ಹೋಗಲಿ ಬಿಡಿ ನಾವು ಬ್ಲಾಗು ದಾರರು, ಮೀಡಿಯಾ ದವರಿಗೆ ಅವರನ್ನು ಕಂಡರೆ ಹೊಟ್ಟೆ ಕಿಚ್ಚು ಅಷ್ಟೇ.

ನೆಹರು ಕುಟುಂಬ ಇಲ್ಲದೆ ನಾವು ಭಾರತ ವನ್ನು ಹೇಗೆ ಕಲ್ಪಿಸಿ ಕೊಳ್ಳಲು ಸಾಧ್ಯ ವಿಲ್ಲವೋ, ಹಾಗೆಯೇ ಮಣ್ಣಿನ ಮಗನ ಕುಟುಂಬ ಇಲ್ಲದೆ ಕರ್ನಾಟಕ ಸಾಧ್ಯವೇ? ಜಾತ್ಯ ತೀತ ರಾಗಿ ಹೊಸ ಮಠ ವನ್ನೇ ಕಟ್ಟಿದರು. ಮಗನನ್ನು ಮುಖ್ಯ ಮಂತ್ರಿ ಯನ್ನಾಗಿ ಮಾಡಿ ಕಷ್ಟ ದಲ್ಲಿ ನೂಕಿದರು, ಇನ್ನೊಬ್ಬನನ್ನು ಮಂತ್ಹ್ರಿಯನ್ನಗಿಸಿದರು. (ನಮ್ಮ ಸನ್ಮಾನ್ಯ ಅಧಿಕಾರಸ್ತರು ಇವರನ್ನು ನೋಡಿ ಈಗಿನ್ನು ಕಲೀತಾ ಇದ್ದಾರೆ) ಸಂಸತ್ತಿನಲ್ಲಿ ದೇಶದ ಬಗ್ಗೆ ಚಿಂತಿಸುತ್ತ ಯೋಗ ಮುದ್ರೆ ಯಲ್ಲಿ ಇರಬೇಕಾದರೆ ಜನ ಅ ಸ್ಥಿತಿ ಯನ್ನು ನಿದ್ದೆ ಎಂದರು. ಸೊ ಕಾಲ್ಡ್ ಕೋಮುವಾದಿಗಳನ್ನು ದೂರವಿಡಲು ಜಾತ್ಯತೀತರನ್ನು ಒಗ್ಗೂಡಿಸಿದರು. ಇಷ್ಟೆಲ್ಲಾ ಮಾಡಿಯೂ ಜನ ಗುರುತಿಸದೆ ಇದ್ದಾಗ ಅವರು ನೊಂದು ಕರ್ನಾಟಕದಲ್ಲಿ ಹುಟ್ಟಲೇ ಬಾರದಿತ್ತು ಎಂದರು. ಪಾಪ

ಇನ್ನು ಕುಮಾರ ಕಂಠೀರವ ಬೇರೆ ಹೆಣ್ಣೊಡನೆ ಸುತ್ತಿದರೆ ತಪ್ಪೇನಿಲ್ಲ ಬಿಡಿ, ಎಷ್ಟಾದರೂ ಗಂಡಸು. ಹಾಗೆ ಮಾಡಿದರಲ್ಲವೇ ಅವನ "ಗ0ಡಸ್ತನ" ದ ಪ್ರಧರ್ಶನ ಆಗುವುದು.

ನೀವು ಬಂದು ನೋಡಿದ್ದು ಬಹಳ ಕುಶಿ ಕೊಟ್ಟಿತು. ನಿಮಗೆ ಜಯವಾಗಲಿ.

balakrishna Gowda said...

ಬಾಲೂ ಅವರೇ
ನಾನು ಮಾನ್ಯ ದೇವೇಗೌಡರ ಭಕ್ತನೆ೦ಬ ಅಭಿಪ್ರಾಯ ನಿಮ್ಮದಿರಬಹುದು, ಅವರ ಮಗ ಮುಖ್ಯಮ೦ತ್ರಿಯಾಗಿದ್ದು, ಆತ ರಾಧಿಕೆಯರೊಡನೆ ಸರಸವಾಡಿದ್ದು, ಅದೆಲ್ಲ ಇಲ್ಲಿ ಅಪ್ರಸ್ತುತ. ಯಾವ ಅಧಿಕಾರಸ್ತ ಇವನ್ನೆಲ್ಲ ಮಾಡಿಲ್ಲ ಹೇಳಿ? ನಾಳೆ ನಿಮಗೆ ಅಧಿಕಾರ ಬ೦ದರೂ ನೀವು ಮಾಡುವುದು ಅದನ್ನೇ ? ನಾನು ಹೇಳಿದ್ದು ದೇವೇಗೌಡರ ಬಗ್ಗೆ. ರಾಜಕೀಯವಾಗಿ ಅವರು ಇ೦ತಹ ಅನೈತಿಕ ಚಟುವಟಿಕೆಗಳಲ್ಲಿ ತಮ್ಮ ಐವತ್ತು ವರುಷಗಳ ರಾಜಕೀಯ ಜೀವನದಲ್ಲಿ ಒಮ್ಮೆಯೂ ಚರ್ಚೆಗೆ ಗ್ರಾಸವಾಗದೆ ಅತ್ಯ೦ತ ಸರಳವಾಗಿ ನಡಕೊ೦ಡು ಬ೦ದಿದ್ದಾರೆ. ಅವರಿಗೆ ರಾಜ ಕೀಯ ಆಕಾ೦ಕ್ಷೆಗಳಿರಬಹುದು, ಮಕ್ಕಳನ್ನು ಅಧಿಕಾರಕ್ಕೆ ತರಬೇಕೆ೦ಬ ಹಪಹಪಿ ಇರಬಹುದು, ಆದರೆ ವೈಯ್ಯುಕ್ತಿಕ ವಾಗಿ ಗೌಡರು ಒಬ್ಬ ಅಪರೂಪದ ರಾಜಕಾರಣಿ, ಮಹಾನ್ ಸಾಧಕ. ಅವರು ರಾತ್ರೋರಾತ್ರೆ ಅಧಿಕಾರ ಪಡೆದಿಲ್ಲ, ದಶಕಗಳ ಕಾಲ ನೊ೦ದು, ಬೆ೦ದು, ನೋವಿನ ಸ್ವತಹ ಅನುಭವದ ನೆಲೆಗಟ್ಟಿನಿ೦ದ ಬ೦ದವರು, ಅವರನ್ನು ಮಾಧ್ಯಮದವರು ತೀರಾ ಕೆಟ್ಟದಾಗಿ ಅವಹೇಳನ ಮಾಡುವುದು,ಕುಚೋದ್ಯದ ಮಾತುಗಳಿ೦ದ ಅವರಿಗೆ ಟೀಕೆ ಮಾಡುವುದು ನೋಡುವಾಗ ಪಿಚ್ಚೆನಿಸುತ್ತದೆ. ನಿಮ್ಮ ಬ್ಲಾಗಿಗರ ಪೈಕಿಯೇ ಒಬ್ಬರಾದ " ಜೀವನ್ಮುಖಿ" ಬ್ಲಾಗಿನಲ್ಲಿ ಕೆಲ ದಿನಗಳ ಹಿ೦ದೆ ದೇವೇಗೌಡರು ನಿದ್ದೆ ಮಾಡುತ್ತಿರುವ ಫೋಟೋ ಹಾಕಿ ಒ೦ದು ಕವನ ಪ್ರಕಟವಾಗಿತ್ತಲ್ಲ, ಅದನ್ನು ಕೂಡ ನಾನು ಓದಿದ್ದೇನೆ,ಅದು ನನಗೆ ತೀರಾ ಸಿಟ್ಟು ತರಿಸಿತ್ತು. ಪ್ರತಿಕ್ರಿಯೆ ಹಾಕೋಣವೆ೦ದಿದ್ದೆ, ಸಮಯದ ಅಭಾವದಿ೦ದ ಸುಮ್ಮನಿದ್ದೆ. ನೀವೆಲ್ಲ ಬಹುಶಃ ಸಾಫ್ಟ್ವೇರ್ ಉದ್ಯೋಗಿಗೆ೦ದು ನನ್ನೆಣಿಕೆ. ಯಾಕೆ ಗೌಡರ ಬಗ್ಗೆ ನಿಮಗೆ ಅಷ್ಟೊ೦ದು ಕೀಳು ಅಭಿಪ್ರಾಯವೋ ನಾನ ರಿಯೆ. ನಿಮಗೆ ಥಳಕು ಬಳಕು ಮಾಡಿ ಹಿ೦ಬದಿ ಯಿ೦ದ ಚೂರಿ ಹಾಕುವ ನಾಯಕರೇ ಆದರ್ಶಪುರುಶ ರೆನಿಸುತ್ತದೆ. ಗೌಡರ೦ತಹ ಸರಳ ಸಜ್ಜನಿಕೆಯ ವ್ಯಕ್ತಿ ಯೋಬ್ಬರೇ ನಿಮ್ಮ ಟೀಕೆಗಳಿಗೆ ವಸ್ತುವಾಗುತ್ತಿರುವುದು ನನಗೆ ಬೇಸರ ತ೦ದಿದೆ. ಹಾಗಾಗಬಾರದು. ಅವರ ತೇಜೋವಧೆ ಮಾಡುವುದನ್ನು ಇನ್ನಾದರು ನಿಲ್ಲಿಸಿ, ಬೇರೆ ರಾಜಕಿಯಸ್ತರನ್ನು ಹೋಗಲಿ ಅತ್ತಕ್ಕೆರಿಸುವ ನಿಮ್ಮ೦ತಹ ಸುಶಿಕ್ಷಿತರು ಗೌಡರ ಬಗ್ಗೆ ಸಲ್ಲದ ಮಾತುಗಳ ಅಪಹಾಸ್ಯ ಮಾಡುವುದು ನಿಯತ್ತು ನಿಜಾಯಿತಿ ಇರುವವರು ಮಾಡ ಬೇಕಾದ ಕೆಲಸವಲ್ಲ, ಇನ್ನಾದರು ಇ೦ತಹದನ್ನು ನಿಲ್ಲಿಸಿ ಎ೦ದು ನನ್ನ ಆಗ್ರಹ. ನನ್ನ ಪ್ರತಿಕ್ರಿಯೆ ಪ್ರಕಟಿಸಿ, ಉತ್ತರಿಸಿದ್ದಕ್ಕೆ ವ೦ದನೆ. ನಿಮ್ಮ ಮು೦ದಿನ ಬರಹ ವನ್ನು ನಿರೀಕ್ಷಿಸುವೆ, ವ೦ದನೆ.

Chands said...

ಸನ್ಮಾನ್ಯ ಕಾಮೆಂಟ್ ಕೊಟ್ಟಿರುವವರಿಗೆ, ಇಲ್ಲಿ ದೇವೇ ಗೌಡರ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸಲು ವೇದಿಕೆ ಸಿದ್ದ ಪಡಿಸಿದ್ದಕ್ಕಾಗಿ ಅನಂತ ಅನಂತ ವಂದನೆ ಗಳು.

ಕೇವಲ ರಾಧಿಕ ಳೊಂದಿಗೆ ಸರಸ ವಾದಿದ್ದರೆ ರಾಜ್ಯದ ಜನತೆಯ ಅಭ್ಯಂತರ ವಿರಲಿಲ್ಲ. ಆದರೆ ೫ ಕೋಟಿ ಕನ್ನಡಿಗರ ತೆರಿಗೆ ಹಣ ಡಾಲರ್ಸ್ ಕಾಲೋನಿ ಯಲ್ಲಿ ಮನೆ, ಬೆಳ್ಳಿ ಚಡ್ಡಿ ಯಾಗಿ ರೂಪಾಂತರ ಗೊಂಡಿರುವುದು ದುರಂತ. ಆದ್ದರಿಂದ ಕುಮಾರ ಸ್ವಾಮಿ ಮತ್ತು ರಾಧಿಕ ವಿಚಾರ ಸಾರ್ವಜನಿಕ ವಾಗಿದೆ.

ಗೆದ್ದಲ ಮನೆಗೆ ಹಾವು ನುಗ್ಗಿ ಗೆದ್ದಳನ್ನೇ ಓಡಿಸಿದ ಹಾಗೆ ಜನತಾ ದಳ ಕಟ್ಟಿದ ರಾಮ ಕೃಷ್ಣ ಹೆಗಡೆ ಅವರನ್ನ ಓಡಿಸಿದ್ದು, ತನಗೆ ಆಗದವರಿಗೆ ಸಿನ್ದ್ಯ, ಹೆಗಡೆ, ಯಡಿಯೂರಪ್ಪ ಮುಂತಾದವರಿಗೆ ಚಪ್ಪಲಿ ಸೇವೆ ಮಾಡಿರುವುದು ಅವರ ಸಂಕೃತಿ ತೋರಿಸುತ್ತದೆ. ತಾನು ಮುಖ್ಯ ಮಂತ್ರಿ ಆಗಲು ಕಾರಣರಾದ ಪಟೇಲರು, ಸಿದ್ರಾಮಯ್ಯ, ಇಬ್ರಾಹಿಂ, ಬೈರೇಗೌಡ, ಸಿನ್ದ್ಯ, ಪ್ರಕಾಶ್, ಮುಂತಾದವರ ಸ್ಥಿತಿ ಏನಾಗಿದೆ ಎಂದು ಕರ್ನಾಟಕದ ಜನತೆಗೆ ಗೊತ್ತಿದೆ.

ಕೇವಲ ೧೬ ಜನ ಸಂಸದರನ್ನು ಇಟ್ಟುಕೊಂಡು ಪ್ರಧಾನಿ ಆಗಿದ್ದು ಇ ದೇಶದ ಪ್ರಜಾಪ್ರಭುತ್ವ ದ ಅಪಹಾಸ್ಯ ಅಲ್ಲವೇ? ದಿಲ್ಲಿಯಲ್ಲಿ ಕೂತಿದ್ದರು ಹರದನ ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷನ ಹಾಗೆ ವರ್ತಿಸಿದ್ದು ಯಾಕೆ? ಅದು ಸಾಲದೆಂಬಂತೆ ನೊಂದು!!! ಬೆಂದು!!! ನೋವನ್ನು ಅನುಭವಿಸಿ!!! ಪ್ರಧಾನಿ ಆಗಿ ಅನ್ನ ಹಾಕಿದ ಮನೆಗೆ ಕನ್ನ ಹಾಕಿದಂತೆ ... ಅಂದಿನ ಕಾಂಗ್ರೆಸ್ಸ್ ಅಧ್ಯಕ್ಷ ಸಿಥರಂ ಕೇಸರಿ ಮನೆಗೆ ಬೆಹುಗಾರರನ್ನ ಬಿಟ್ಟಿದ್ದು "ಕಷ್ಟದಲ್ಲಿ ಬೆನ್ದದ್ದರ ಪ್ರಥಿಪಲವೇ?"ಮುಂದಿನ ಜನ್ಮದಲ್ಲಿ ಮುಸ್ಲಿಮ ನಾಗಿ ಹುಟ್ಟುವೆ ಎನ್ನುವ ಗೌಡರು ಹಿಂದೆ ವಿಶ್ವಾಸ ಮತ ಯಾಚನೆ ಸಮಯದಲ್ಲಿ ಶಿವಸೇನೆ ಯಾ ಬಾಳ ಠಾಕ್ರೆ ಯಾ ಮನೆಗೆ ರಾತ್ರೆ ಹೊತ್ತು ನುಗ್ಗಿದ್ದರು. ಇನ್ನು ಅವರ ಮನೆ ಸಮೀಪದ ಪೆಟ್ರೋಲ್ ಬಂಕ್ ಯಾವ ಥರ ಅವರ ಕೈ ಸೇರಿದ್ದು ಎನ್ನುವುದು ಎಲ್ಲರಿಗು ಗೊತ್ತಿದೆ.

ಧರಂ ಸಿಂಗ್, ಯಡಿಯೂರಪ್ಪ ಹಾಗು ತೃತಿಯ ರಂಗದ ನಾಯಕರಿಕೆ ಬೆನ್ನಿನಲ್ಲಿ ಚೂರಿ ಹಾಕಿದ್ದು ನಮಗೆ ನೆನಪಿದೆ. ಮುಖ್ಯ ಮಂತ್ರಿ ಆದಾಗ ಜಯಲಲಿತಾ ಗೆ ಹೆದರಿ ರಾತ್ರೋ ರಾತ್ರಿ ತಮಿಳು ನಾಡಿಗೆ ೫ ಟಿ ಎಂ ಸಿ ಅವರ ಮಣ್ಣಿನ ಪ್ರೇಮ ತೋರಿಸುತ್ತದೆ. ಹುಬ್ಬಳ್ಳಿ ಗೆ ದಕ್ಕಬೇಕಗಿದ್ದ ನೈರುತ್ಯ ರೈಲ್ವೆ ಅನ್ನ ತಪ್ಪಿಸಿದ್ದು ಅವರ ಜಾತಿ ಪ್ರೇಮ ಹಾಗು ಪ್ರಾಂತೀಯ ಭಾವನೆ ತೋರಿಸುತ್ತದೆ. ಎಂಪೆರೋರ್ ಹೋಟೆಲ್ ನಲ್ಲಿ ಮೊಮ್ಮಗ ದಂದಲೇ ಮಾಡಿದ್ದರು ಪರಪ್ಪನ ಅಗ್ರಹಾರಕ್ಕೆ ಕಳುಹಿಸದೆ ಇದ್ದದ್ದು ಯಾರು?
ರಾಜಕೀಯವಾಗಿ ತಮ್ಮ ಸೊ ಕಾಲ್ಡ್ ಐವತ್ತು ವರುಷಗಳ ರಾಜಕೀಯ ಜೀವನದಲ್ಲಿ ಸುಮಾರು ಬಾರಿ ಚರ್ಚೆಗೆ ಗ್ರಾಸವಗಿದ್ದರೆ. ಇದಾಕ್ಕೆ ಮೇಲಿನ ಹೇಳಿಕೆಗಳು ಪುಷ್ಟಿ ಕೊಡುತ್ತವೆ.
ಇನ್ನ್ನು ನಂಬಿಕೆ ಬರಲಿಲ್ವ ಕೆಳಗೆ ನೋಡಿ
ನೈಸ್ ಸಂಸ್ಥೆಯ ಅಶೋಕ್ ಕೆನಿಗೆ ಬೆಂಗಳೂರು ಮೈಸೂರ್ ಹೆದ್ದಾರಿ ವಿಚಾರವಾಗಿ ನ್ಯಾಯಾಲಯದ ಮೆತ್ತಿಲೆದ್ದಿದ್ದು ತುಂಬಾ ಹಳೆಯದೆನಲ್ಲ. ಇನ್ಫೋಸಿಸ್ ನ ನಾರಾಯಣಮೂರ್ತಿ ಯವರಉ ಬೆಂಗಳೋರು ಅಜೆಂಡಾ ಟಾಸ್ಕ್ ಪೋರ್ಸೆ (BATF) ನಿಂದ ರಾಜಿನಾಮೆ ನೀಡಿ ಹೊರಬಂದದ್ದು ನಮ್ಮ ಮಾಜಿ ಪ್ರಧಾನಿಗಳಿಂದ ಎಂದು ಬೇರೆಯಾಗಿ ಹೇಳಬೇಕಿಲ್ಲ.
ಅದೆಲ್ಲ ಸ್ವಾಮಿ ೫೦ ವರುಷಗಳು ರಾಜಕ್ಕೆಯದಲ್ಲಿದ್ದು ಮಂತ್ರಿಯಾಗಿ , ಮುಖ್ಯಮಂತ್ರಿಯಾಗಿ ಅನ್ನು ಮುಂದೆ ಅಂದರೆ ದೇಶದ ಉನ್ನತ ಹುದ್ದೆ ಏರಿ ಒಬ್ಬ ಉಚ್ಚ ನ್ಯಾಯಾಲದ ನ್ಯಾಯಮೂರ್ತಿಗೆ ಖಾಸಗಿ ಪತ್ರವನ್ನು ಬರೆದರೆಂದರೆ ೭೦ % ಅಕ್ಷರಸ್ತರಿರುವ ಈ ಪ್ರಜಾಪ್ರಭುತ್ವ ರಾಷ್ಟ್ರ ರಾಜಕೀಯ ಎಷ್ಟು ನೀಚ ಸ್ತಿಯಲ್ಲಿದೆ ಎಂದು ತೋರಿಸಿಕೊಟ್ಟ ಈ ಕನ್ನಡಿಗ ಪ್ರಧಾನಿಗೆ ನೀವೇ ನಾಮಕರಣಮಾಡಿ.

ಇಂತಹ ಮನುಷ್ಯ ನಿಗೆ ನೀವು ಸರಳ, ಸಜ್ಜನ ನಿಷ್ಕಳಂಕ ಅನ್ನುವುದನ್ನು ನೋಡಿ ಪಿಚ್ಚೆನಿಸುತ್ತ ಇದೆ. nimma abhipraaya neravagi helidakke nimage vandane galu.Idu namma abhipraya! yenathiri?

balakrishna Gowda said...

ಬಾಲೂ ಮತ್ತು ಚಾಂದ್ ಅವರೇ,
ನೀವಿಬ್ಬರು ಒಬ್ಬರೆಯೋ ಅಥವಾ ಬೇರೆ ಬೇರೆ ವ್ಯಕ್ತಿಯೋ ನನಗೆ ತಿಳಿದಿಲ್ಲ. ಆದರೆ ನಿಮಗೆ ದೇವೇಗೌಡರ ಬಗ್ಗೆ ಪೂರ್ವಾಗ್ರಹ ಪೀಡೆ ಇರುವುದು ನಿಮ್ಮ ಪ್ರತಿಕ್ರಿಯೆ ಯಿ೦ದ ವ್ಯಕ್ತವಾಗಿದೆ. ಇಲ್ಲಿ ಪ್ರಶ್ನೆ ಇರುವುದು ದೇವೇಗೌಡರ ಬಗ್ಗೆ ಮಾತ್ರ, ಅದನ್ನು ಮತ್ತೆ ಮತ್ತೆ ಇಲ್ಲಿ ಸ್ಪಷ್ಟಪಡಿಸುತ್ತಿದ್ದೇನೆ. ಅವರ ಮಕ್ಕಳ, ಮೊಮ್ಮಕ್ಕಳ ಬಗ್ಗೆ ಉಲ್ಲೇಖ ಬೇಡ. ದೇವೇಗೌಡರು ತಮ್ಮ ರಾಜಕೀಯ ಜೀವನದಲ್ಲಿ ಏನು ಮಾಡಿದ್ದಾರೆ, ಹೇಗೆ ಮೇಲೆ ಬ೦ದಿದ್ದಾರೆ ಎ೦ಬುದು ಮಾತ್ರ ಇಲ್ಲಿ ಪ್ರಸ್ತುತ. ನೀವು ಉಲ್ಲೇಖಿಸಿರುವ ಆರೋಪಗಲೆಲ್ಲವು ಹುರುಳಿಲ್ಲದ್ದು. ದೇವೇಗೌಡರು ಯಾರಿಗೂ ಸ್ವಯಂಪ್ರೇರಿತರಾಗಿ ತೊ೦ದ್ರೆ ಕೊಟ್ಟಿಲ್ಲ. ಅವರೆಲ್ಲ ಅವರವರು ಮಾಡಿದ ಕರ್ಮ ಫಲದಿ೦ದ ಅ೦ತಹ ಪರಿಸ್ಥಿತಿಯನ್ನು ಎದುರಿಸಿದರು. ರೈತರಿಗೆ ಕಡಿಮೆ ಬಡ್ಡಿದರದ ಸಾಲ, ರೈತರ ಸಾಲ ಮನ್ನಾ, ಹುಬ್ಬಳ್ಳಿ ಈದ್ಗಾ ಮೈದಾನ ಸಮಸ್ಯೆ ಪರಿಹಾರ ಇವನ್ನೆಲ್ಲ ಯಾರು ಮಾಡಿದ್ದು ? ದೇವೇಗೌಡರ ಅವಧಿಯ ಒ೦ದೇ ಒ೦ದು ಗುರುತರ ಆಪಾದನೆ ಹೊರಿಸಬಹುದಾದ scandal ಹೇಳಿ ನೋಡೋಣ, ಎಲ್ಲವು ಪೂರ್ವಾಗ್ರಹ ಪೀಡಿತ. ಅವರೇನು ದೇವರೆ೦ದು ನಾನು ಹೇಳುತ್ತಿಲ್ಲ, ಪ್ರಸ್ತುತ ಕಲುಷಿತ ರಾಜಕೀಯ ಸನ್ನಿವೇಶದಲ್ಲಿ ಅವರೊಬ್ಬ ಮುತ್ಸದ್ಧಿ ಎ೦ಬುದಷ್ಟೇ ನನ್ನ ಅ೦ಬ್ವೋಣ. ನೀವೆಲ್ಲ ಸಾಫ್ಟ್ ವೇರ್ ಉದ್ಯೋಗಿಗಳು ತಲೆಕೆಟ್ಟವರ೦ತೆ ಅವರೊಬ್ಬರನ್ನೇ target ಮಾಡಿ ಟೀಕೆ ಮಾಡುವುದು ಸರಿಯಲ್ಲ ಎ೦ಬುದನ್ನು ಹೇಳಲು ನಾನು ಪ್ರತಿಕ್ರಿಯಿಸಿದೆ. ಅದು ಬಿಟ್ಟು ನೀವು ಯಾವುದೋ ಸನ್ನಿಗೆ ಒಳಗಾದವರ೦ತೆ ಹೇಳಿದ್ದೆ ಹೇಳೋ ಕಿಸಬಾಯಿದಾಸರ೦ತೆ ವರ್ತಿಸಿದರೆ ಅದಕ್ಕೆ ನಾನು ಹೊಣೆಯಲ್ಲ. ಹೌದು, ದೇವೇಗೌಡರು ಇ೦ದಿಗೂ ಒಬ್ಬ ಪ೦ಚಾಯಿತಿ ಅಧ್ಯಕ್ಷನ೦ತೆ ಕೆಲಬಾರಿ ವರ್ತಿಸುತ್ತಾರೆ, ಅದು ಅವರ ಸರಳತೆಯ ಪ್ರತೀಕ. ತಮ್ಮ ಕ್ಷೇತ್ರದಲ್ಲಿ ಯಾರಿಗಾದರು ಅನ್ಯಾಯವಾದರೆ ಅದನ್ನು ಪ್ರತಿಭಟಿಸಲು ಅವರು ಬೀದಿಗೂ ಇಲಿದದ್ಡಿದೆ. ಆಗ ಅವರು ತಾನು ಮಾಜಿ ಪ್ರಧಾನಿ ಎ೦ಬ ಹಮ್ಮನ್ನು ಬಿಟ್ಟು ಸಾಮಾನ್ಯರ೦ತೆ ವರ್ತಿಸಿದ್ದು ನಿಮಗೆಲ್ಲಿ ತಿಳಿಯುತ್ತದೆ. ನೀವು ಬೆ೦ಗೂರಿನಲ್ಲಿ ಕುಳಿತು ಯಾವುದೋ ಪೀತ ಪತ್ರಿಕೆ ಓದುತ್ತ ಅಭಿಪ್ರಾಯ ಕ್ರೋಡೀಕರಿಸುವವರು. ಸತ್ಯಾ೦ಶ ಏನಿದೆ ಎ೦ಬುದು ನಿಮ್ಮ ಅರಿವಿಗೆ ಬರಬೇಕಾದರೆ ನೀವು ಒಮ್ಮೆ ಹಳ್ಳಿಗಳೆಡೆ ಭೇಟಿ ಕೊಡಿ, ಅವರ ಸಮಸ್ಯೆಗಳ ಬಗ್ಗೆ ಅರಿಯಿರಿ. ಆವಾಗ ನಿಮಗೆ ಸತ್ಯದರ್ಶನವಾಗ ಬಹುದು.

Chands said...

ಬಾಲ ಕೃಷ್ಣ ಅವರೇ, ಶಾಸ್ತ್ರಿ ಕಥಾ ರೂಪದಲ್ಲಿ ಬರೆದದ್ದು ಇಂದಿನ ರಾಜಕೀಯ ಚುನಾವಣ ಚಿತ್ರಣ. ಅದರಲ್ಲಿ ದೇವೇ ಗೌಡರು ಹಾಗು ಅವರ ಹಿಂಬಾಲಕರು, ಕುಮಾರ ಕಂಠೀರವ ಮತ್ತು ರಾಧಿಕೆ, ಯಡಿಯೂರಪ್ಪ ಮತ್ತೆ ಅವರ ರೆಡ್ಡಿ ಗುಂಪು ಗಳು ಹಾಗು ಇವರೆಲ್ಲರೂ ಮಾಡಿದ ಹೋಮ ಹವನ ಗಳ ಬಗ್ಗೆ ಇದೆ. ಕೊನೆಗೆ ಕಾಂಗ್ರೆಸ್ಸ್ ನವರು ಇಟ್ಟ ಹಾಗು ಇಡುತ್ತಿರುವ ಹೂವಗಳ ಬಗ್ಗೆ ಕೂಡ ಇದೆ. ಅಧಿಕಾರಕ್ಕಾಗಿ ತ್ರಿತೀಯ ರಂಗವನ್ನು ಕಟ್ಟಿದ್ದನ್ನು ಅಪಹಾಸ್ಯ ಮಾಡಲಾಗಿದೆ, ಬಿಜೆಪಿಯ ಆಪರೇಷನ್ ಕಮಲ ವನ್ನು ಹೀಗಳೆಯಾಲಾಗಿದೆ.

ತುಂಬಾ ದನ್ಯವಾದ ನಿಮ್ಮ ಪ್ರತಿಕ್ರಿಯೆಗೆ .ನಾನು ಚಂದ್ರು ಅಂತ ಬಾಲುವಿನ ಹಿಂದಿನಿ ಬ್ಲಾಗ್ ನೋಡಿ ಕಾಮೆಂಟ್ ಬರೆದಿದ್ದೇನೆ.. ಹೋಗಿ ನೋಡಿ ..

ಈಗ ನನಗನಿಸುತಿದೆ ನೀವು ಗೌಡರ ಬಗ್ಗೆ ಹೇಳುತ್ತಿರುವ ಮಾತುಗಳೆಲ್ಲವೂ ಪೂರ್ವಗ್ರಹ ಪೀಡಿಥವೆ ಅಂತ ?


ಕುಂಬಳ ಕಾಯಿ ಕಳ್ಳ ಅಂದರೆ ಹೆಗಲು ಮುತ್ತು ಕೊಂಡಿದ್ದರಂತೆ! ಹಾಗಯ್ತಿ ನಿಮ್ಮ ಕತೆ ....
ನೀವು ಗೌಡರನ್ನು ಸಮರ್ಥಿಸುದ್ದ ಇದ್ದೀರಿ, ಒಳ್ಳೆಯದು. ಆರೋಗ್ಯಕರ ವಾದ ಚರ್ಚೆಯನ್ನೇ ಮಾಡಬಹುದಲ್ಲ? ಅದನ್ನು ಬಿಟ್ಟು ನಮ್ಮನ್ನು ವಯಕ್ತಿಕ ಮಟ್ಟದಲ್ಲಿ ಟೀಕಿಸುವುದು ಏಕೆ? ಇದು ನಿಮ್ಮ ಪಲಾಯನ ವಾದವೋ? ಗೌಡರಿಂದ ಅವಮಾನಿತ ರಾದವರೆಲ್ಲಗಿಗು ಅದು ಅವರು ಮಾಡಿದ ಕರ್ಮ ಅಂತ ಹೇಳುವದಾದರೆ, ಅವರು ಪ್ರಧಾನಿ ಆದದ್ದು ಭಾರತೀಯರ ಕರ್ಮದ ಫಲವೇ?

ಇದ್ದದ್ದು ಇದ್ದಂಗೆ ಹೇಳಿದರೆ ಎದ್ದು ಬಂದು ಎದೆಗೆ ಹೊಡೆದರಂತೆ! ಹಾಗೆ ನಾವು ಇದ್ದ್ದಿದ್ದೆಲ್ಲ್ಲ ಇದ್ದಂಗೆ ಹೇಳಿದ್ರೆ ನಾವು ನಿಮಗೆ ತಲೆ ಕೆಟ್ಟವರಾಗಿ ಕಾಣುತ್ತೇವೆ. ಸ್ವಾಮಿ ಅದು ನಿಮ್ಮ ತಪ್ಪಲ್ಲ ಬಹುಶ ನೀವು ಗೌಡರ ಅಭಿಮನಿಗಳಗಿ "ಅವರ ಮತ್ತು ಅವರ ಮಕ್ಕಳ ತರ ಮಾತಾಡೋದನ್ನ ಕಲಿತಿದ್ದಿರ ಅನ್ನಿಸುತ್ತೆ"

ಅವರು ವಯಕ್ತಿಕ ಜೀವನದಲ್ಲಿ ಸರಳರು ಅಂತ ನಮಗೆ ಚೆನ್ನಾಗಿ ಗೊತ್ತಿದೆ, ಕುಡಿಯುವುದಿಲ್ಲ, ಧೂಮಪಾನ ಮಾಡುವುದಿಲ್ಲ, ಬೇರೆ ಹೆಂಗಸರ ಸೆರಗು ಹಿಡಿದಿಲ್ಲ... ಅದು ಅವರ ವಯಕ್ಥಿಯ ಜೀವನ. ಆದರೆ ಅವರು ಸಾರ್ವ ಜನಿಕವಾಗಿ ಹೇಗಿದ್ದಾರೆ ಅನ್ನುವುದು ನಾಡಿಗೆ ಮುಖ್ಯ. ನಾನು ಮೊದಲೇ ಕೇಳಿದ ಪ್ರಶ್ನೆಗಳಿಗೆ ಸಧ್ಯ ವಾದರೆ ತರ್ಕ ರೀತಿಯ ಉತ್ತರ ಕೊಡಿ, ಅದನ್ನು ಬಿಟ್ಟು ಹುರುಳಿಲ್ಲ ಅನ್ನೋದಾದರೆ ನಿಮ್ಮ ಮಾತಿನಲ್ಲೂ ಹುರುಳಿಲ್ಲ ಅಂತ ನಾವು ಭಾವಿಸಬಹುದಲ್ಲವೇ?

ಇನ್ನು ಸಾಫ್ಟ್ವೇರ್ ನವರ ಬಗ್ಗೆ ನಿಮಗೇಕೆ ಕೋಪ? ಅವರು ಗೌಡರಿಗೆ ಮತ ಹಾಕುವುದು ಕಡಿಮೆ ಅಂಥಾನ?

ಇನ್ನು ನೀವು ಅಂದ್ರಲ್ಲ ಸಾಫ್ಟವೇರ್ ಉದ್ಯೋಗಿಗಳು ಅಂತ ಹಾಗೇಕೆ ಅನ್ನಿಸುತು ನಿಮಗೆ ಅಂತ ಗೊತ್ತಾಗಲಿಲ್ಲ. ಕಂಡಿತ ನಾವು ಹೈಟೆಕ್ ಅಲ್ಲ.. ಒಬ್ಬ ಸಾಮಾನ್ಯ ಚಿಕ್ಕ ಹಳ್ಳಿ ಕುಟುಂಬದಿಂದ ಬಂದವ ನಾನು. ಹಳ್ಳಿಗಳ ಬಗ್ಗೆ ಮಾತಾಡುವ ಅವಶ್ಯಕತೆ ನನಗಿಲ್ಲ. ಯಾವ ರೀತಿಯಲ್ಲಿ ಯಾರು ರೈತರನ್ನು ಬಳಸಿಕೊಲ್ಲುತ್ತರೆಮ್ಬುದು ನನಗೆ ಗೊತ್ತು.. ಇಂದು ಯಾವ ಯಾವ ಸಮಸ್ಯೆ ಎದುರಿಸುತಿದ್ದರೆ ನಮ್ಮ ರೈತರೆಂಬುದು ಗೊತ್ತು. ಸೊ ಕಾಲ್ಡ್ ಹಾಸನ ಜಿಲ್ಲೆಯಲ್ಲಿ ಆಲು ಬೆಳೆಗಾರರು ಆತ್ಮಹತ್ಯಾ ಮಾಡಿಕೊಂಡಿದ್ದು ಗೊತ್ತು. ಅದಕ್ಕೆ ಯಾರ್ಯಾರು ಹೇಗೆ ಸ್ಪಂದಿಸಿದರು ಅಂತಾನು ಗೊತ್ತು. ನೀವು ನಮಗೆ ರೈತರ ಬಗ್ಗ್ಗೆ ಹೇಳುವ ಅವಶ್ಯಕತೆಯಿಲ್ಲ. ಅವರ ಸಮಸ್ಯೆ ಏನೆಂದು ಒಬ್ಬ ರೈತನ ಮಗನಾಗಿ ೨೦ ವರ್ಷ ಗಳಿಂದ ನೋಡಿದ್ದೇನೆ.. ನೋಡುತ್ತಿರುವೆ.

ನೋಡಿ ಸ್ವಾಮಿ ನಾವು ಬೆಂಗಳುರಿನಲ್ಲೋ, ಹಾಸನ ಚಿಕ್ಕ ಮಗಳೂರು ಎಲ್ಲಾದರೂ ಇರಬಹುದು, ನಾವು ಎಲ್ಲಿದ್ದರು ಸತ್ಯ ಬದಲಾಗದು, ಗೌಡರು ಬದಲಾಗರು. ಹೋಗಲಿ ಬಿಡಿ, ನಿಮಗೆ ಅವರು ಒಳ್ಳೆಯದನ್ನು ಮಾಡಲಿ.
ಕೊನೆಯದಾಗಿ ಒಂದು ವಿಷಯ.

ನಾನು ಮತ್ತೆ ನಿಮಗೆ ಹೇಳಿದ್ದೆ ಹೇಳೋ ಕಿಸ ಬಾಯಿ ದಾಸ ತರ ರಿಪ್ಲೈ ಮಾಡೋಕೆ ಇಷ್ಟಪಡುವುದಿಲ್ಲ.

ನಾನು ಚಂದ್ರು ಅಂತ, ಬಾಲಸುಬ್ರಹ್ಮಣ್ಯ ಶಾಸ್ತ್ರಿ ಯಾ ಸ್ನೇಹಿತ. ನೀವು ಕೃಪೆ ತೋರಿ ನಿಮ್ಮ ನಿಜ ನಾಮದೆಯ ವನ್ನು ತಿಳಿಸಿ.

balakrishna Gowda said...

ಚ೦ದ್ರು ಮತ್ತು ಬಾಲು
ನಿಮ್ಮ ಜೊತೆ ವೃಥಾ ಚರ್ಚೆ ಮಾಡುವಷ್ಟು ಸಮಯ ನನಗಿಲ್ಲ, ನನ್ನ ಕುದುರೆಗೆ ಮೂರೇ ಕಾಲು ಎನ್ನುವ ಜಾಯಮಾನ
ದವರು ನೀವು. ನಿಮಗೆ ನನ್ನ ಮಾತುಗಳ ಅ೦ತರಾರ್ಥ ಅರಿಯುವ ಶಕ್ತಿ ಇಲ್ಲ, ನಿಮ್ಮ ಮೂಗಿನ ನೇರಕ್ಕೆ ನೀವು ಮಾತನಾದುತ್ತಿರಿ. ಆದ್ದರಿ೦ದ ಈ ಚರ್ಚೆಯನ್ನು ಇಲ್ಲಿಗೆ ಮುಗಿಸುತ್ತಿದ್ದೇನೆ.

Naagu said...

Antu mugisidralla saami, thanks..!

raajakaaraNigaLA bagge maataaDode Waste, antadralli neevu putta charche'ne maaDbiTri..

ibralli obru mugisdralla waste charche'na thanks..!!

ee maNNige, maNNina maganige jai..!