Wednesday, June 3, 2009

ಸ್ವಂತ ಪ್ರಚಾರಕ್ಕೆ 10 ಮಾರ್ಗ!!!

ಪ್ರಚಾರದ ಆಸೆ ಯಾರಿಗೆ ಇರೋಲ್ಲ ಹೇಳಿ? ನಮ್ಮ ಮೂತಿ ಕಲರ್ ಟಿವಿ ನಲ್ಲಿ ನಾವು ಕಾಣಿಸ್ಕೊಬೇಕು ಅಂತ ಇದ್ರೂ ಅದು ಸಾಧ್ಯ ಆಗೋದು ದುರ್ಲಭ. ಆದ್ದರಿಂದ ಸಡನ್ ಆಗಿ ಸುದ್ದಿ ಮಾಡೋದು ಹೇಗೆ ಅಂತ ಕೆಲವು ಸುಲಭೋಪಾಯ ಗಳು ಇಲ್ಲಿವೆ ಆಸಕ್ತರು ಪ್ರಯತ್ನಿಸಬಹುದು.

1. ವಿನಿ ವಿಂಕ್ ಸ್ಕ್ಯಾ೦ಡಲ್ ನಲ್ಲಿ ಭಾಗಿ ಆಗಿದ್ದೀನಿ ಅಂತ ಹೇಳಿ, ಥಟ್ ಅಂತ ಪ್ರಚಾರ ಸಿಗುತ್ತೆ!!


2. ನಿಮ್ಮ ಪಕ್ಕದ ಮನೆ ಮುಂದೆ ಒಂದು ಗುಂಡಿ ತೋಡಿ, ಅದರಲ್ಲಿ ಒಂದು ಬೀದಿ ನಾಯಿ ನ ಹಾಕಿ. ಆಮೇಲೆ ಟಿವಿ ೯, ಮುಂತಾದ ಚಾನೆಲ್ ನವರಿಗೆ ಫೋನ್ ಮಾಡಿ "ಡಾಗ್ ರೆಸ್ಕ್ಯೂ" ಲೈವ್ ಶೋ ಅಂತ ಹೇಳಿ, ನೀವು ಎಲ್ಲ ಕಡೆ ಬ್ರೆಕಿಂಗ್ ನ್ಯೂಸ್ ಆಗ್ತೀರ.


3. ನಿಮ್ಮ ಫೋಟೋ ನ ದೊಡ್ಡ ಫ್ಲೆಕ್ಷ ಪ್ರಿಂಟ್ ತೆಗೆಸಿ, ರಸ್ತೆ ಲಿ ಬ್ಯಾನರ್ ಹಾಕಿ "ನಂಗೆ ಹ್ಯಾಪಿ ಬರ್ತ್ ಡೇ" ಅಂತ ಬರೆಸಿ ಕೊಳ್ಳಿ.


4. ಯಾವುದಾದರು ರಾಜಕಾರಣಿ ಭಾಷಣ ಮಾಡ್ತಾ ಇರಬೇಕಾದ್ರೆ ಚಪ್ಪಲಿ ಬಿಸಾಕಿ. (ಇದು ಮಾತ್ರ ಸಿಕ್ಕಾಪಟ್ಟೆ ಸಕ್ಸಸ್ ಆಗಿದೆ, ಪ್ರಪಂಚದೆಲ್ಲೆಡೆ )


5. ಇಲ್ಲಿ ತುಂಬ ಭ್ರಷ್ಟಾಚಾರ ಆಗಿದೆ, ಅದಕ್ಕೆ ಸಾಕ್ಷಿ ಆಗಿ ನನ್ ಬಳಿ ಸಿಡಿ ಇದೆ ಅಂತ ಹೇಳಿ ಎರಡು ಬ್ಲಾಂಕ್ ಸಿಡಿ ಇಟ್ಕೊಂಡು ಮಾಧ್ಯಮದ ಮುಂದೆ ಪೋಸ್ ಕೊಡಿ.


6. ನಿಮಗೆ ಒಂದು ಅಕ್ಷರ ಬರೀಲಿಕ್ಕೆ ಬರದೆ ಇದ್ರೂ ಪರವಾಗಿಲ್ಲ, ಜನಪ್ರೀಯ ಕಾದಂಬರಿ ಕಾರ ಭ್ಯರಪ್ಪ ಅವರಿಗೆ ಬರೆಯಲು ಬರೋಲ್ಲ, ಅವರು ಕಾದಂಬರಿ ಕಾರ ನೆ ಅಲ್ಲ ಅನ್ನಿ!!!


7. ಒಂದಿಷ್ಟು ಲಕ್ಷ್ಮಿ ಪಟಾಕಿ ನ ಸೇರ್ಸಿ... ಯಾವುದಾದರು ಸರ್ಕಾರಿ ಕಚೇರಿ ಲಿ ಇಡಿ. ಬಾಂಬ್ ಎಸೈ ಗಿರೀಶ್ ಮಟ್ಟೆನವರ ತರ ಹೆಸರು ಬರುತ್ತೆ, ಅವರಂತೆ ಉದ್ದೇಶಗಳು ಇಲ್ಲದೆ ಹೋದ್ರು ನಿಮಗೆ ಪ್ರಚಾರ ಅಂತು ಸಿಗುತ್ತೆ. (ಗಿರೀಶ್ ಒರಿಜಿನಲ್ ಬಾಂಬ್ ಇಟ್ಟಿದ್ರು, ನೀವು ಅಂಥಹ ಸಾಹಸ ಮಾಡೋದು ಬೇಡ)


8. ಮುಂಗಾರು ಮಳೆ ಯಾ ಮೊಲ ನನ್ನ ಬಳಿ ಮಾರಟಕ್ಕೆ ಇದೆ ಅಂತ ಜಾಹಿರಾತು ಕೊಡಿ.


9.ರಸ್ತೆ ಮಧ್ಯೆ ಒಂದು ರುಬ್ಬೋ ಕಲ್ಲನ್ನ ನೆಟ್ಟು, ಅದಕ್ಕೆ ಹೂವು ಹಾರ ಹಾಕಿ, ಇದು ಉಧ್ಬವ ಮೂರ್ತಿ ಅಂತ ಪುಂಗಿ ಊದಿ. ಆಮೇಲೆ ಅದನ್ನ ಫೋಟೋ ತೆಗೆದು ಸ್ಕ್ಯಾನ್ ಮಾಡಿ, ಇದನ್ನ ೧೦ ಜನಕ್ಕೆ ೧೦ ನಿಮಿಷ ದಲ್ಲಿ ಇಮೇಲ್ ಮಾಡಿದ್ರೆ ನಿಮಗೆ ೧೦ ದಿನದಲ್ಲಿ ಪ್ರಮೋಷನ್ ಸಿಗುತ್ತೆ ಇಲ್ಲ ಅಂದ್ರೆ ೧೦ ನಿಮಿಷ ದಲ್ಲಿ ಫೈರ್ ಆಗ್ತೀರ ಅಂತ ಬರೆದು ಎಲ್ಲರಿಗೂ ಮೇಲ್ ಕಳ್ಸಿ.


10. ಯಾವುದಾದರು ವೆಬ್ ಸೈಟ್ ನಲ್ಲಿ ರೆಸಿಪಿ ಕದ್ದು, ಅದನ್ನ ಟಿವಿ ನಲ್ಲಿ ಹೊಸ ರುಚಿ ಅಂತ ಮಾಡಿ ತೋರಿಸಿ. ಟೇಸ್ಟ್ ನೋಡಿದವರ ಗತಿ ಗೋವಿಂದ. :)ವಿನಂತಿ: ಇ ಐಡಿಯಾ ಉಪಯೋಗಿಸಿ ನೀವು ಜನಪ್ರೀಯ ಆಗಿ ನಾಳೆ ಮಂತ್ರಿಯೊ ಏನಾದ್ರು ಆದ್ರೆ ನನ್ನ ಮೇಲೆ ಕೇಸು ಹಾಕಬೇಡಿ. ಯಾಕೆಂದರೆ ಇದರಲ್ಲಿ ರಾಣಿ ಮತ್ತು ಚಂದ್ರು ಕೂಡ ಸಹ ಭಾಗಿ ಗಳು ಆಗಿದ್ದಾರೆ ಹಾಗು ಇ ಐಡಿಯಾ ಗಳಿಂದ ಆಗುವ ಪರಿಣಾಮಗಳಿಗೆ ನಾವು ಜಾವಬು ದಾರರಲ್ಲ.

12 comments:

ಸುಶ್ರುತ ದೊಡ್ಡೇರಿ said...

ತುಂಬಾ ಚನಾಗ್ ಬರೀತೀರ ನೀವು. ಎಕ್ಸಲೆಂಟ್ ಸೆನ್ಸಾಫ್ ಹ್ಯೂಮರ್. ಕೀಪ್ ಬ್ಲಾಗಿಂಗು. :-)

PARAANJAPE K.N. said...

ಬಾಲು

ನಿಮ್ಮ ಸೂತ್ರಗಳನ್ನು ಓದಿ ತಲೆಕೆಟ್ಟು ಹೋಗಿದೆ.ಅದ್ಯಾರು ಮಾರಾಯರೇ ರಾಣಿ ಮತ್ತು ಚಂದ್ರು ?? ಬೇಗ ದುಡ್ಡು ಮಾಡೋದಕ್ಕೆ ಏನಾದ್ರೂ ಸೂತ್ರ ಹೇಳಿ ಕೊಡಿ ಗುರು

shivu said...

ಬಾಲು ಸರ್,

ಎಲ್ಲಾ ಐಡಿಯಾ ಕೊಟ್ಟು ರಾಣಿ ಮತ್ತು ಚಂದ್ರು ಅಂತ ಬೇರೇ ಹೇಳ್ತೀರಾ...ಹೀಗೆ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲೂ ನೀವು ಸ್ವಂತ ಪ್ರಚಾರ ಗಿಟ್ಟಿಸುವ ತಂತ್ರವಿದೆಯೇ...?

ಶಿವಪ್ರಕಾಶ್ said...

ಹ್ಹಾ ಹ್ಹಾ ಹ್ಹಾ...
ಚನ್ನಾಗಿದವೇ ಸೂತ್ರಗಳು...
ಇದನ್ನು fallow ಮಾಡಿದ್ರೆ ಮುಕ್ತಿ ಗ್ಯಾರೆಂಟಿ...
ಏನ್ರಿ ? ನಮಗೆ ಡೈರೆಕ್ಟ್ ಆಗಿ ಮಾವನ ಮನೆಗೆ (ಪೋಲಿಸ್ ಸ್ಟೇಷನ್) ಕಳಿಸಬೇಕು ಅಂತ ಅನ್ಕೊಂದಿದಿರಾ ?... ಹ್ಹಾ ಹ್ಹಾ ಹ್ಹಾ...

ಬಾಲು said...

ಶುಶ್ರುತ : ಬಂದು ನೋಡಿ, ಅನಂದಿಸಿದಕ್ಕೆ ತುಂಬ ಧನ್ಯವಾದಗಳು!!

ಪರಾಂಜಪೆ: ದುಡ್ಡು ಮಾಡೋದು ಹೇಗೆ ಅಂತ ಹಿಂದೆ ಒಮ್ಮೆ ಬರೆದಿದ್ದೆ, ಇಗ ಬೇರೆ ಹೊಸ ಆಲೋಚನೆ ಹೊಳೆದರೆ ಫೋನ್ ಮಡಿ ಹೇಳುವೆ, consulting ಚಾರ್ಜ್ ತಗೋಳದೆ!!

ಶಿವೂ: ರಾಣಿ ಅಂದರೆ ಇ ಬ್ಲಾಗ್ ನ ಸಧಸ್ಯೆ. ಅ ಐಡಿಯಾ ಗಳಲ್ಲಿ ಅವರ ಪಾಲು ಇದೆ, ಅದ್ದರಿಂದ ಕಷ್ಟ ಬಂದರೆ ಅವರು ಹಂಚಿ ಕೊಳ್ಳಬೇಕು ಅಲ್ವ? ಇನ್ನು ಚಂದ್ರು ಅನ್ನುವ ಜೀವಿ ನನ್ನ ಖಾಸ ದೋಸ್ತ್.

ಶಿವ ಪ್ರಕಾಶ್: ಮಾವನ ಮನೆಗೆ ಹೋಗುವ ಸಧ್ಯತೆ ಇಲ್ಲ ಅನ್ಸುತ್ತೆ, ಅಷ್ಟಕ್ಕೂ ಅವರು ಒತ್ತಾಯ ಮಡಿ ಪ್ರೀತಿ ಇಂದ ಕರೆದರೆ ಹೊರ ಬರಲು ಐಡಿಯಾ ಗಳು ಉಚಿತ ವಾಗಿ ಕೊಡುವೆ!!! (ಯಾರು ಕೂಡ ಮಾವನ ಮನೆಗೆ ಹೋಗದೆ ಇರಲಿ ಎನ್ನುವುದು ನನ್ನ ಹಾರೈಕೆ!! )

ರವಿಕಾಂತ ಗೋರೆ said...

An IDEA can change your life!!! :-)

ಮಲ್ಲಿಕಾರ್ಜುನ.ಡಿ.ಜಿ. said...

ಬಾಲು ಅವರೆ,
ನಿಮ್ಮ ಸೂತ್ರಗಳು ಸುಸೂತ್ರವಾಗಿರುತ್ತೆ ಅಂತೀರಾ? ಒಳ್ಳೆ ಮಜವಾಗಿದೆ.

ಸಿಮೆಂಟು ಮರಳಿನ ಮಧ್ಯೆ said...

ಬಾಲು ಸರ್....

ನಿಮ್ಮ ಈ ಥರಹದ ಲೇಖನಗಳ ಫ್ಯಾನ್ ಅಗಿಬಿಟ್ಟಿದ್ದೇನೆ....

ನಿಮ್ಮ ಉಪಾಯಗಳು ಮಸ್ತ್ ಇವೆ....

ನಕ್ಕು ನಕ್ಕು ಸುಸ್ತಾದೆ....ಒಂದಕ್ಕಿಂತ ಒಂದು ಭರ್ಜರಿ ಇದೆ....

ನಿಮ್ಮ ಹಾಸ್ಯ ಪ್ರಜ್ಞೆಗೆ ನನ್ನದೊಂದು ಸಲಾಮ್....

ನಿಮಗೂ...
ನಿಮ್ಮ ಟೀಮಿಗೂ ಅಭಿನಂದನೆಗಳು....

ತೆನಾಲಿ ರಾಮ said...

ಶಾಸಕರ ಭವನಕ್ಕೆ ಬಾಂಬ್ ಇಡುವ ವಿಚಾರದಲ್ಲಿ ಮಾತ್ರ ಒಂದು ಮುಂಜಾಗೂರುಕತೆಯನ್ನು ನೀವು ತೆಗೆದು ಕೊಳ್ಳಲೇ ಬೇಕು, ಆದೇನೆಂದರೆ ನಿಮ್ಮ ಹೆಸರು ಗಿರೀಶ್ ಆಗಿದ್ದರೆ ನಿಮಗೆ ಶಿಕ್ಷೆಯೂ ಇಲ್ಲಾ ಮಣ್ಣೂ ಇಲ್ಲಾ ಬದಲಿಗೆ ಬೀಜೇಪಿಯಲ್ಲಿ ಸ್ಥಾನಮಾನ, ಅದೇ ನಿಮ್ಮ ಹೆಸರು ಅಫಜಲ್ ಆದರೆ ನಿಮಗೆ ಖಂಡಿತ ಜೈಲು ಶಿಕ್ಷೆ ಸಾಲದ್ದಕ್ಕೆ ಬೀಜೇಪಿಯವರಿಂದ ನೇಣಿಗೆ ಹಾಕಲು ಶಿಫಾರಸ್ಸು.
ಹೇಗಿದೆ ಈ ಪರಿ?

Prabhuraj Moogi said...

ಡಾಗ್ ರೆಸ್ಕ್ಯೂ ಮತ್ತು ಭೈರಪ್ಪಾ ಅವರಿಗೆ ಬರ್ಯೋಕೆ ಬರಲ್ಲ ಅಂತ ಹೇಳಿ ಪ್ರಚಾರ ಗಿಟ್ಟಿಸೋದು ಅಂತೂ ಸೂಪರಾಗಿದೆ.. ಅದೆಲ್ಲಿಮ್ದಾ ತರ್ತೀರೀ ಇಂತಾ ಐದಿಯಾಗಳನ್ನ

ಧರಿತ್ರಿ said...

ಬಾಲು..ಭಾರೀ ಚಾಲು ಐಡಿಯಾ ಸರ್! ಈ ಐಡಿಯಾಗಳ ಕ್ರೆಡಿಟ್ಟು ನಿಮಗಾ? ಅಥವಾ ರಾಣಿ, ಚಂದ್ರು ರವರಿಗೋ ಗೊತ್ತಾಗ್ತಿಲ್ಲ!! ಇಷ್ಟೆಲ್ಲಾ ಚೆನ್ನಾಗ್ ಬರೆದಿರೋ ನೀವೇ ಒಂದು ಕೈ ಯಾಕ್ ನೋಡಬಾರದು...?! ನಾವೆಲ್ಲ ಬೆಂಬಲ ಕೊಡ್ತೀವಿ..ಒಂದ್ಸಲ ನಿಮ್ಮನ್ನು 'ಬ್ರೇಕಿಂಗ್ ನ್ಯೂಸ್' ಆಗಿ ನೋಡೋ ಭಾಗ್ಯ ಒದಗಿಬರಲಿ...ಬಾಲೂ ಜೀ..
-ಧರಿತ್ರಿ

raj said...

Really this type of idea's can make some sort of dream's come true, keep it up