Tuesday, July 21, 2009

ಎಲ್ಲಾ ದೇವರಿಗಾಗಿ!!

ನಿಮಗೆಲ್ಲ ನೆನಪು ಇರಬಹುದು, ಇತ್ತೀಚಿಗೆ ರೆಡ್ಡಿ ಗಳು ತಿರುಪತಿ ತಿಮ್ಮಪ್ಪ ಗೆ ೪೫ ಕೋಟಿ ಬೆಲೆ ಬಾಳೋ ಟೋಪಿ ಹಾಕಿದ್ರು. ಯೆಡಿಯುರಪ್ಪ ಅವಾಗ ಅವಾಗ ದಕ್ಷಿಣ ಭಾರತದ ಎಲ್ಲ ದೇವಸ್ತಾನಕ್ಕು ಭೇಟಿ ಕೊಡ್ತಾ ಇರ್ತಾರೆ. ಇನ್ನು ನಮ್ಮ ಗೌಡರು ಅಂತು ಕೇರಳದಲ್ಲೇ ಠಿಕಾಣಿ ಹಾಕ್ತಾರೆ, ಅಥವಾ ಅಲ್ಲಿಯವರನ್ನೇ ಇಲ್ಲಿಗೆ ಕರೆಸ್ತಾರೆ. (ದೇವರನಲ್ಲ, ಬರಿ ಮಾಟ ಮಂತ್ರ ಮಾಡೋರನ್ನ)


ಅಂತು ನಮ್ಮ ನಾಡಿನ ಬಹು ಪಾಲು ದುಡ್ಡು ಪಕ್ಕದ ರಾಜ್ಯದ ದೇವರಿಗೆ ಸಲ್ಲುತ್ತೆ. ಹೋಗ್ಲಿ ಜನ ಸಾಮಾನ್ಯರು ನಮ್ಮಲ್ಲಿರೋ ದೇವಸ್ತಾನಕ್ಕೆ ಹೋಗಿ ದುಡ್ಡು ಹಾಕ್ತರ? ಅದು ಇಲ್ಲ, ಬಹಳಷ್ಟು ಸಮಯದಲ್ಲಿ ದೇವಸ್ತಾನದಲ್ಲಿ ವಯಸ್ಸಾದವರೇ ಇರ್ತಾರೆ. ಅವರು ಜಾಸ್ತಿ ಕಾಣಿಕೆ ಹಾಕೋಲ್ಲ. ಯುವಜನರು ಅ ಕಡೆ ಸುಳಿಯೋಲ್ಲ. (ರೆಸೆಶನ್ ನಿಂದ ಸ್ವಲ್ಪ ಭಕ್ತಿ ಜಾಸ್ತಿ ಆಗಿದೆ ಅದು ಬೇರೆ ವಿಷ್ಯ) ಪರಿಸ್ತಿತಿ ಹೀಗೆ ಇರಬೇಕಾದ್ರೆ ನಮ್ಮ ದೇವರು ಬಡವನು ಖ೦ಡಿತ ಆಗುತ್ತಾನೆ. ಅದ್ಯಾರೋ ಒಬ್ಬ ಕೆಟ್ಟ ನಿರ್ದೇಶಕ, ಕತ್ತಿ ಮಚ್ಚು ಅಂತ ಸಿನಿಮಾ ಮಾಡಿದ್ರೆ ಜನ ಕ್ಯು ನಲ್ಲಿ ನಿಂತು ಹೋಗಿ ನೋಡಿ ಬರ್ತಾರೆ, ಆದ್ರೆ ದೇವಸ್ತಾನಕ್ಕೆ ಮಾತ್ರ ಬರಲ್ಲ. ಆದ್ದರಿಂದ ನಾನು ಇ ಮೂಲಕ ಕೃಷ್ಣಯ್ಯ ಶೆಟ್ಟರಿಗೆ ಕೆಲವು ಸಲಹೆ ಗಳನ್ನೂ ಕೊಡುತ್ತಾ ರಾಜ್ಯದ ಬೊಕ್ಕಸಕ್ಕೆ ಸಹಾಯ ಮಾಡುತ್ತಾ ಇದ್ದೇನೆ. (ಎಂತ ಮಹಾ ನಾಡ ಭಕ್ತ ಅಲ್ಲವೇ ನಾನು? )

1. ಕೆಲವೊಂದು ಸಂಪ್ರದಾಯಸ್ತ ದೇವಸ್ತಾನಕ್ಕೆ ಪುರುಷರು ಶರ್ಟ್ ಮತ್ತೆ ಬನಿಯನ್ ತೆಗೆದು ಪ್ರವೇಶಿಸ ಬೇಕು, ಇದು ಈಗಿನ ಕಾಲದ ಯುವಕರಿಗೆ ಸರಿ ಬರುವುದಿಲ್ಲ. ಆದ್ದರಿಂದ ಮುಜರಾಯಿ ಇಲಾಕೆ ಹಾಗು ದೇವಸ್ಥಾನಗಳ ಆಡಳಿತ ಮಂಡಳಿಗಳು ಸಲ್ಮಾನ್ ಖಾನ್ ಮತ್ತು ಜಾನ್ ಅಬ್ರಹಾಂ ಅವರನ್ನು ಬ್ರಾಂಡ್ ರಾಯಭಾರಿಗಳನ್ನಾಗಿ ಮಾಡಿಕೊಳ್ಳಬೇಕು. ಇ ಮಹಾನು ಭಾವರು ಶರ್ಟ್ ಪ್ಯಾಂಟ್ ಇಲ್ಲದೆ ಕುಣಿಯುದನ್ನು ಕಂಡು ಕುಶಿ ಪಡೋ ಯುವ ಜನರು ದೇವಸ್ತಾನಕ್ಕೆ ಯಾವ ಹಿಂಜರಿಕೆನು ಇಲ್ಲದೆ ಬರುವರು. (ಇದು ಕೋಮು ಸೌಹಾರ್ದ ಅಂತ ಬೇಕಿದ್ರೆ ಪುಂಗಿ ಊದಿಕೊಂಡು ಮುಂದಿನ ಚುನಾವಣೆ ಗೆ ಹೋಗಬಹುದು)


2. ಅಷ್ಟೋತ್ತರ ಮಾಡಿಸಿದರೆ ಅರ್ಚನೆ ಫ್ರೀ ಅಂತ ಘೋಷಿಸಬೇಕು.3. ಸಕ್ಕರೆ ಕಾಯಿಲೆ ಪೀಡಿತರಿಗೆ ಶುಗರ್ ಫ್ರೀ ಪ್ರಸಾದ ದ ವ್ಯವಸ್ಥೆ ಮಾಡಬೇಕು.


4. ಅಂದಿನ ಕಾಲದಿಂದಲೂ ನಮ್ಮ ಭಕ್ತಿ ಗೀತೆಗಳು ಹಾಗೆ ಇದೆ, ಅದೇ ರಾಗ, ಅದೇ ಸಾಹಿತ್ಯ. ಆದ್ದರಿಂದ ನಮ್ಮ ಕಲಬೆರಕೆ ರಾಜ ರಿಮಿಕ್ಸ್ ಕಿಂಗ್ ಗುರುಕಿರಣ್ ಹತ್ತಿರ ಭಕ್ತಿ ಗೀತೆಗಳಿಗೆ ಹೊಸ ರಾಗ ಹಾಕಿಸಬೇಕು. (ಹೊಡಿ ಮಗ ಹೊಡಿ ಮಗ ಟ್ಯೂನ್ ನಲ್ಲಿ ಭಕ್ತಿ ಗೀತೆ ಕೇಳಿ ನಾನು ಪುನೀತ ನಾಗಿದ್ದೇನೆ. )


5. ರಕ್ತ ಸಿಕ್ತ ಸಿನಿಮಾ ಗಳ ಸರದಾರ ಪಿ ಏನ್ ಸತ್ಯ ಹಾಗು ಮಚ್ಚು ವೀರ ದರ್ಶನ್ ಇಬ್ಬರು ಸೇರಿ ಒಂದು ಭಕ್ತಿ ಪ್ರಧಾನ ಸಿನಿಮಾ ಮಾಡಬೇಕು. ಅವಾಗ ಜನ ಥಿಯೇಟರ್ ಮುಂದೆ ಮಾತ್ರ ಅಲ್ಲ, ದೇವಸ್ತಾನಕ್ಕು ನುಗ್ಗುವರು. (ಇವರಿಬ್ಬರಿಗಿಂತಲೂ ಹೆಚ್ಚಿನ ಕಲಾ ನೈಪುಣ್ಯರು ಇನ್ನೂ ಇದ್ದಾರೆ, ಆದರೆ ಇಲ್ಲಿ ಬರೆಯಲಾಗಿಲ್ಲ, ಅವರುಗಳ ಆತ್ಮ ದುಃಖ ಪಡದೆ ಇರಲಿ. ) ರವಿ ಚಂದ್ರನ್ ಮತ್ತು ನಮೀತ ಮಾಡಿದರು ನಮ್ಮದೇನು ಅಭ್ಯಂತರವಿಲ್ಲ. !!! :)


6. ಕೊನೆಗೆ ನಮ್ಮ ರವಿ ಬೆಳಗೆರೆ ಕೈಯಲ್ಲಿ ಟೆಂಪಲ್ ಡೈರಿ ಅಂತ ಒಂದು ಪ್ರೊಗ್ರಾಮ್ ಮಾಡಿಸ ಬೇಕು!!! ಎರಡು ಹೆಣ ಬಿದ್ದ ಮೇಲೆ ಮಲಗೊದನ್ನ ಕಲಿತಿದ್ದ ಜನ ಒಂದೆರಡು ದೇವರಿಗೆ ಜೈ ಹೇಳಿ ಮಲಗುವರು.


ಸಲಹೆಗಳೆಲ್ಲವು ಸರ್ಕಾರಕ್ಕೆ, ಜನಕ್ಕೆ ಹಾಗು ಬೊಕ್ಕಸಕ್ಕೆ!!! ನಾನು, ಇಗಷ್ಟೆ ಹೊಸ ಕುರ್ಚಿ ನ ದೂಳು ಒರಸಿ ಕೂತಿರೋ ಶೆಟ್ಟರು, ಅಥವಾ ಸೋಮಣ್ಣ ಅವರ ಸ್ಥಾನದ ಆಕಾಂಕ್ಷಿ ಅಲ್ಲ ಎಂದು ಹೇಳಲು ಇಷ್ಟ ಪಡುತ್ತೇನೆ.

9 comments:

ಶಿವಶಂಕರ ವಿಷ್ಣು ಯಳವತ್ತಿ said...

ಒಳ್ಳೆ ಸಲಹೆಗಳು.......ಹರೆ ರಾಮಾ.. ಹರೇ ಕೃಷ್ಣಾ....

www.shivagadag.blogspot.com

shivu said...

ಬಾಲು ಸರ್,

ಸಲ್ಮಾನ್ ಖಾನ್, ಜಾನ್ ಅಬ್ರಹಂ ಅರೆಬೆತ್ತಲೆ ಐಡಿಯಾದಿಂದ ಸಕ್ಕತ್ ಕಲೆಕ್ಷನ್ ಆಗಬಹುದು. ನಮ್ಮ ಹುಡುಗರು ಹಾಗೆ ಸುಮಾರು ಪ್ಯಾಕ್ ಬೆಳೆಸಿಕೊಂಡು ದೇವಾಲಯಕ್ಕೆ ಬಂದರೇ ಹುಡುಗಿಯರ ಕ್ಯೂಗಳು ಹೆಚ್ಚಾಗುವುದಲ್ಲದೆ,ಪರೋಕ್ಷವಾಗಿ ಹರಕೆಗಳಿಂದ ದೇವಸ್ಥಾನದ ಆಧಾಯ ಹೆಚ್ಚುವುದು ಖಚಿತ...

ಮತ್ತೆ ರವಿಬೆಳೆಗೆರೆಯ ಟೆಂಪಲ್ ಡೈರಿ ಕೂಡ ಒಳ್ಳೆಯದು...ಆದರೇ ಅದರೊಳಗಿನ ವಿಚಾರವನ್ನು ಅಲೋಚಿಸಿದಾಗ ಮಾತ್ರ ತಲೆಯೊಳಗೆ ಹುಳುಬಿಟ್ಟಂತೆ ಆಗುತ್ತಿದೆ....

ಮತ್ತೆ ಮುಜರಾಯಿ ಸಚಿವ ಸ್ಥಾನಕ್ಕೆ ನಿಮ್ಮನ್ನು ಎತ್ತಾಕಿಕೊಂಡು ಬರಲು ಯಡ್ಡಿ cod ಬಿಟ್ಟಿದ್ದಾರಂತಲ್ಲ....ಛೇ...ನಮ್ಮ ಬ್ಲಾಗ್ ಲೋಕಕ್ಕೆ ನಷ್ಟವಾಗುತ್ತಿದೆ....!

roopa said...

ಬಾಲು ಸಾರ್,
ನೀವು ಕತ್ರಿನಳನ್ನು ಹೆಸರಿಸದೆ ಬಿಟ್ಟದ್ದು ನನಗೆ ತು೦ಬಾ ಬೇಸರವಾಯಿತು .. ಸಲ್ಮಾನ್ ಇರುವಲ್ಲಿ ಅವಳು ಇರದಿದ್ದರೆ ದೇವರಿಗೆ ಬೇಸರವಾಗಬಹುದು .. ಕತ್ರೀನಾ ಇದ್ದಾಗ ಅಕ್ಷಯ್ ಬರದಿದ್ದರೆ ?? ಒಳ್ಳೆಯ ಸರಣಿಯನ್ನು ತಪ್ಪಿಸಿದ್ದಿರಿ .. ಹೀಗೆ ನೀವು ದೇವರ ಖಾಸಾ ಭಕ್ತರ ಬಗ್ಗೆ ಹೇಳದಿದ್ದರೆ ನಿಮಗೆ ರೌರವ ನರಕ ಪ್ರಾಪ್ತ ವಾಗುತ್ತದೆ ಎಚ್ಚರ !!!! :-) :-) :-)
ಬಾಲು ಸಾರ್,
ನಿಮ್ಮ ಬರಹಕ್ಕೆ ಹೊಟ್ಟೆ ಹುಣ್ಣು ಆಗುವಷ್ಟು ನಕ್ಕೆ .. ಹಾಗಾಗಿ ಆ ಗಾಯವನ್ನು ವಾಸಿ ಮಾಡಲು ಯಾವ ದೇವರ ಹತ್ತಿರ ಹೋಗಲು ಎ೦ದು ನಿಮ್ಮ ಸಲಹೆಯನ್ನು ಕೇಳುತ್ತೇನೆ ... ದಯವಿಟ್ಟು ತಿಳಿಸುವರ೦ತವರಾಗಿ .. !!! !!!

ಬಾಲು said...

ಶಿವ ಶಂಕರ್:
ಜೈ ಜೈ ಶಂಕರ!!

ಶಿವೂ:
ನೀವು ಹೇಳೋದು ನಿಜ, ಸಲ್ಮಾನ್ ಖಾನ್ ಎಫೆಕ್ಟ್ ನಿಂದ ಹುಡುಗೀರ ಸಂಖ್ಯೆ ಜಾಸ್ತಿ ಖಂಡಿತಾ ಆಗುತ್ತದೆ. ಇನ್ನು ಕ್ರೈಂ ಡೈರಿ ಬಗ್ಗೆ ಹೇಳೋದೇ ಬೇಡ ಅನ್ನಿಸುತ್ತೆ. ಇಗ ಬರುತ್ತಿರುವ ರಕ್ತ ಸಿಕ್ತ ಸಿನಿಮಾ ಗಳಿಗೆ ಕ್ರೈಂ ಡೈರಿ, ಕ್ರೈಮೆ ಸ್ಟೋರಿ ತರದ ಕಾರ್ಯಕ್ರಮ ಗಳು ಒಂದು ರೀತಿಯ ಕಾರಣ ಅನ್ನಿಸುತ್ತ ಇದೆ. ರೌಡಿ ಗಳನ್ನ ಸಮಾಜದ ಮುಖ್ಯ ವಾಹಿನಿ ಗೆ ತಂದು, ಸಮಾಜದ ಸ್ವಾಸ್ಥವನ್ನೇ ಹಾಳು ಮಾಡುತ್ತ ಇದ್ದಾರೆ.

ಆಮೇಲೆ ಸನ್ಮಾನ್ಯ ಮುಖ್ಯ ಮಂತ್ರಿಗಳು ನನ್ನನ್ನು ಹಿಡಿಯಲು ಜನರನ್ನು ಬಿಟ್ಟಿದ್ದರೆ ಎಂದು ತಿಳಿದು ಬಹಳ ಸಂತಸ ವಾಯಿತು, ಅದು ನಿಜ ಆದಲ್ಲಿ ಎಲ್ಲ ಸರ್ಕಾರಿ ದೇವಸ್ಥಾನದಲ್ಲಿ ನಿಮ್ಮ ಹೆಸರಿಗೆ ಉಚಿತ ಅರ್ಚನೆ ಮಾಡಿಸುವೆ!!! :)

ರೂಪ:
ಹೌದು ಮಾರೈರೆ.. ಕತ್ರೀನಾ ಬಿಟ್ಟು ಹೋಗಿದ್ದಾಳೆ. ಇಗ ನನಗೆ ಬರಬಹುದಾದ ರೌರವ ನರಕ ವನ್ನು ತಪ್ಪಿಸುವುದು ಹೇಗೆ? ಉಪಾಯ ತಿಳಿಸಿ ಪುಣ್ಯ ಕಟ್ಟಿ ಕೊಳ್ಳಿ.!!!

ಆಮೇಲೆ ನಿಮಗೆ ಯಾವ ದೇವರು ಅಗತ್ಯ ಇಲ್ಲ. ಉದಯ ಟಿ ವಿ ಯಾ ಜೈನ್ ಅಥವಾ ಇ ಟಿ ವಿ ಯಾ ಸೋಮಯಾಜಿ ಗಳಿಗೆ ೫೦೦೧ ರು ಕೊಡಿರಿ, ಅವರು ಶಾಂತಿ ಮಾಡಿಸುವರು!!! ಹ್ಹ ಹ್ಹ
ಆಮೇಲೆ ನೀವೀಗ ನಕ್ಕು ಸುಸ್ತಾಗಿದ್ದಕ್ಕೆ ಧನ್ಯವಾದಗಳು.

ರವಿಕಾಂತ ಗೋರೆ said...

ಬಾಲುಸಾರ್,
ತುಂಬಾ ತುಂಬಾ ಕೆಲಸದ ಒತ್ತಡದ ನಡುವೆ ಈಗ್ಗೆ ಕೆಲವು ದಿನಗಳಿಂದ ಬ್ಲಾಗ್ ಬರೆಯಲು ಅಥವಾ ಓದಲು ಸಮಯ ಸಿಕ್ಕಿರಲಿಲ್ಲ... ಕ್ಷಮೆಯಿರಲಿ.. :-) ... ಬರಹ ಚೆನ್ನಾಗಿತ್ತು... ಓದಿ ನಕ್ಕು ಬಿಟ್ಟೆ... ನಿಮ್ಮ ಸಲಹೆಗಳಿಗೆ ನಮೋನ್ನಮಃ...

ರಾಜೀವ said...

ಬಾಲಣ್ಣ,

ಅಂತೂ ದೇವರನ್ನೂ ನಿಮ್ಮ ಬ್ಲಾಗಿಗೆ ಯೆಳಿದ್ಬಿಟ್ರಿ. ಅವನನ್ನಾದ್ರೂ ಬಿಟ್ಬಿಡ್ರಿ ಪಾಪ.

<< ಅಂತು ನಮ್ಮ ನಾಡಿನ ಬಹು ಪಾಲು ದುಡ್ಡು ಪಕ್ಕದ ರಾಜ್ಯದ ದೇವರಿಗೆ ಸಲ್ಲುತ್ತೆ >>
ದುಡ್ಡಿನ ಜೊತೆಗೆ ಪಾಪ ಕರ್ಮಗಳೂ ತೊಲಗತ್ತೆ. ಒಳ್ಳೆಯದೇ ಅಲ್ಲವೇ?

<< ಯುವಜನರು ಅ ಕಡೆ ಸುಳಿಯೋಲ್ಲ >>
ವೈಕುಂಠ ಏಕಾದಶಿಯ ದಿನ ದೇವಸ್ತಾನಕ್ಕೆ ಹೋಗಿದೀರಾ ಸರ್? ಕಿಲೋಮೀಟರು ಗಟ್ಟಲೆ ಕ್ಯೂ ಇರತ್ತೆ.

೩ನೆ ಪಾಯಿಂಟು ಬೇಕಿತ್ತಾ?

ಬಾಲು said...

ರವಿಕಾಂತ:
ಧನ್ಯೋಸ್ಮಿ!!

ರಾಜೀವ ಅವರೇ :
ನನಗೆ ಯಾರನ್ನು ಹೀಗಳೆಯುವ ಉದ್ದೇಶ ಇಲ್ಲ, ನಮ್ಮ ಎಷ್ಟೋ ಜನ ತಮ್ಮ ತಂದೆ ತಾಯಿಯರಿಗೆ ಮನೇಲಿ ಬಿದ್ದಿರಿ, ದೇವಸ್ತಾನಕ್ಕೆ ಹೋಗಿ ಟೈಮ್ ಪಾಸು ಮಾಡಿ ಅಂತಾರೆ. !! ಕಟು ಸತ್ಯ ಆದರು ನಿಜ. ನನ್ನ ಸಿಟ್ಟು ಅಂತವರ ಮೇಲೆ, ಹಿಡ್ಕೊಂಡು ವದಿಬೇಕು ಅನ್ಸುತ್ತೆ, ದುರದೃಷ್ಟಕ್ಕೆ ಸಾಧ್ಯ ಆಗಿಲ್ಲ.

ಆಮೇಲೆ ಇ (ಸೊ ಕಾಲ್ಡ್ )ಲೇಖನ ದಲ್ಲಿ ದೇವರು ಎಲ್ಲಿದ್ದಾನೆ, ಬರಿ ಸಿನೆಮದವರನ್ನ, ಸ್ವಲ್ಪ ರಾಜಕೀಯದವರನ್ನ ತೀಕಿಸಿರುವೆ ಅಷ್ಟೇ.

ದುಡ್ಡಿನ ಜೊತೆಗೆ ಕೇವಲ ಪಾಪ ಕರ್ಮ ಅಲ್ಲ, ಅ ಪಾಪಿ ಗಳು ತೊಲಗಿದರೆ ತುಂಬ ಚೆನ್ನಾಗಿರುವುದು.

ಮೂರನೇ ಪಾಯಿಂಟ್ ನಮ್ಮ ಹಳ್ಳಿಗಳಲ್ಲಿ ಕೆಲವು ಹಬ್ಬಗಳಂದು ಕುರಿ ಬಲಿ ಕೊಟ್ಟು, ಫುಲ್ ನಾನ್ ವೆಜ್ ನೈವೇದ್ಯ ಮಾಡ್ತಾರೆ. ಅ ಹಬ್ಬಕ್ಕೆ ನಗರಲ್ಲಿ ವಾಸವಿರೋ ಯುವಕರು ತಮ್ಮ ಹಳ್ಳಿಗೆ ಹೋಗಿ ಹಬ್ಬ ಆಚರಿಸುತ್ತಾರೆ. ಇದೆ ತಾರಾ ದೊಡ್ಡ ಊರುಗಳಲ್ಲಿ ಕೂಡ ಮಾಡಬಹುದು. ಅವಾಗ ಸ್ವಲ್ಪ ದೊಡ್ಡ ಕಾರ್ಪೊರೇಟ್ ಭಕ್ತರು ಸಿಗ್ತಾರೆ ಅಂತ ನನ್ನ ಭಾವನೆ. ನಮ್ಮ ಇಸ್ಕೊನ್ ನಲ್ಲಿ ಕೆಲ ಅಂತಸ್ತಿನಲ್ಲಿ ಕೇವಲ ಬಟ್ಟೆ, ಮತ್ತೆ ತಿಂಡಿ ಮಾರ್ತಾರೆ!! ಅ ಐಡಿಯಾ ನೆ ಸ್ವಲ್ಪ ಜಾಸ್ತಿ ಮಾಡಿದ್ರೆ ಹೇಗೆ ಅಂತ !! ಆದರು ನವು ನನ್ನ ತಲೆ ಒಳಗೆ ಹೆವಿ ಹುಳ ಬಿಟ್ಟಿದ್ದಿರಿ. ನಿಮ್ಮ ಕಾಮೆಂಟ್ ನನ್ನ ಮತ್ತೆ ಯೋಚನೆಗೆ ದೂಡಿತು.

PARAANJAPE K.N. said...

ಯಾಕೋ ನೀವು ಕೃಷ್ಣಯ್ಯ ಶೆಟ್ಟರ ಹುದ್ದೆಗೆ ಪೈಪೋಟಿ ನಡೆಸುತ್ತಿರುವ ಹಾಗಿದೆ. ಶುಭವಾಗಲಿ.

ಸಂತೋಷ್ ಚಿದಂಬರ್ said...

Hi Balu,

tumba chennagide..