Friday, July 31, 2009

ಒಂದು ಫ್ಲಾಶ್ ಬ್ಯಾಕ್!!

ಇದು ಬಹಳ ವರ್ಷಗಳ ಹಿಂದೆ ನಡೆದ ಘಟನೆ. ಒಂಥರಾ ಫ್ಲಾಶ್ ಬ್ಯಾಕ್!!

ನಾನು ಅವಾಗಾ ಭದ್ರಾವತಿ ಯಲ್ಲಿ ಸೆಕೆಂಡ್ ಇಯರ್ ಡಿಗ್ರೀ ಓದುತ್ತಾ ಇದ್ದೆ, ಓದುತ್ತಾ ಇದ್ದೆ ಅನ್ನೋದಕಿಂತ ಕಾಲೇಜಿಗೆ ಕೈ ಬೀಸಿಕೊಂಡು ಹೋಗುತ್ತಾ ಇದ್ದೆ ಅನ್ನೋದೇ ಸೂಕ್ತ ಅನ್ನಿಸುತ್ತೆ, ಇರಲಿ ಅವಾಗ ಇಡಿ ಡಿಗ್ರೀ ಗೆ ಇದ್ದಿದ್ದು ಕೇವಲ 9 ಜನ ಹುಡುಗರು, ಮಿಕ್ಕ ಪೂರ ಹುಡುಗಿಯರ ಸೈನ್ಯ!! ಅವರ ಮದ್ಯೆ ನಾವು ನವಗ್ರಹಗಳು!!


ಕಾಲೇಜು, ಎದುರುಗಡೆ ಒಂದು ಟೀ ಮತ್ತೆ ಸಿಗರೆಟ್ ಸಾಲ ಕೊಡೊ ಅಂಗಡಿ, ಮತ್ತೆ ಕಾಲೇಜಿನ ಎಡ ಭಾಗದಲ್ಲೇ ಉಚಿತ ಊಟಕ್ಕೆ ಒಂದು ಮದುವೆ ಛತ್ರ, ಎಲ್ಲಕಿಂತ ಮಿಗಿಲಾಗಿ ಹುಡುಗಿಯರ ಹಿಂಡು, ಅದು ನಮ್ಮ ಕಾಲೇಜು. ಅಷ್ಟು ಜನ ಹುಡುಗಿಯರಿಗೆ ಜಾತಿ ಮತ ಬೇದ ಇಲ್ಲದೆ, ಬಡವ ಶ್ರೀಮಂತ ಎನ್ನದೆ ಎಲ್ಲಾ ಹುಡುಗಿರಿಗೂ ಲೈನ್ ಹೊಡೆಯೋದು ನಮ್ಮ ಹಿಡನ್ ಅಜೆಂಡಾ. ಆದರೆ ಹೇಗೆ ನವಗ್ರಹಗಳು ಒಂದೇ ತರ ಇರುವುದಿಲ್ಲವೋ, ನಮ್ಮ ಒಂಬತ್ತು ಜನರ ಬುದ್ದಿ ಕೂಡ ಒಂದೇ ತರ ಇರುತ್ತಾ ಇರಲಿಲ್ಲ. ನಮಗೆ ಹುಡುಗಿರನ್ನ ನೋಡಲು ದೈರ್ಯ ಇರ್ತ ಇತ್ತೇ ಹೊರತು ಮಾತನಾಡಿಸಲು ಅಲ್ಲ!! ದೈರ್ಯ ಇದ್ದ 2-3 ಜನಕ್ಕೆ ಗರ್ಲ್ ಫ್ರೆಂಡ್ ಗಿಂತ ಮಲ್ಯ ನೆ ಚೀಪ್ ಅಂತ ನಂಬಿದವರು. ಮತ್ತಿಬ್ಬರು ರಜಿನಿ ಕಾಂತ ಮತ್ತೆ ಉಪೇಂದ್ರ ರ ಅಭಿಮಾನಿಗಳು, ಅವರಿಗೆ ಪ್ರೋಪೋಸೆ ಮಾಡಿ ಮಾತಾಡೋ ಅಷ್ಟು ತಾಳ್ಮೆ ಇರಲಿಲ್ಲ. ಮಗದೊಬ್ಬನಿಗೆ ಪೂರ್ವಾರ್ಜಿತ ಕರ್ಮ ಎಲ್ಲಾ ಸುಂದರ ಹುಡುಗಿಯರು ಅವನನ್ನು ಅಣ್ಣ ಅಂತಲೇ ಕರೀತ ಇದ್ದರು!!! ಉಳಿದ ನಮಗೆ ಯಾವ ತೊಂದರೇನು ಇರಲಿಲ್ಲ, ನಮಗೆ racism ಮಾಡಿ ಗೊತ್ತಿರಲಿಲ್ಲ!! :)


ನಾವುಗಳು ನಮ್ಮ ಕ್ಲಾಸ್ ಹುಡುಗಿಯರನ್ನ ಚುಡಾಯಿಸುವ ಹಾಗೆ ಇರಲಿಲ್ಲ. ಅವರು ನಮ್ಮ ಎ ಟಿ ಎಂ, ಸಿನಿಮಾಕ್ಕೆ ಎಲ್ಲಾ ದುಡ್ಡು ಕೊಡುತ್ತಾ ಇದ್ದಿದ್ದೇ ಅವರು!! ನಾವು ಸಿನಿಮಾಕ್ಕೆ ಅಂತ ತೊಲಗಿದರೆ ತಾವು ಅರಾಂ ಆಗಿ ಪಾಠ ಕೇಳಬಹುದು ಅಂತ ಪ್ಲಾನ್ ಮಾಡ್ತಾ ಇದ್ರೋ ಏನೋ. ಒಟ್ಟಲ್ಲಿ ಅವರು ನಮಗೆ ದುಡ್ದಂತು ಕೊಡ್ತಾ ಇದ್ರೂ. ಅವರ ಹತ್ತಿರ ಸಿಕ್ಕಲಿಲ್ಲ ಅಂದ್ರೆ ಕಾಲೇಜಿನ ಕ್ಲೆರಿಕ್ ಹತ್ತಿರ, ಅಲ್ಲೂ ಗಿಟ್ಟಲಿಲ್ಲ ಅಂದ್ರೆ ಲೆಕ್ಚರರ್ ಗಳ ಹತ್ತಿರ ತೆಗೆದು ಕೊತ ಇದ್ದೆವು.


ಇಂತಿಪ್ಪ ನಮ್ಮ ಗೂಡಿಗೆ ಒಮ್ಮೆ 5-6 ಹುಡುಗಿಯರು ಪಿ ಯು ಸಿ ಗೆ ಹೊಸದಾಗಿ ಸೇರಿಕೊಂಡರು. ಸರಿ ಸುದ್ದಿ ನಮ್ಮ ಕಿವಿಗೂ ಬಿತ್ತು. ಸೇರಿಕೊಂಡರೆ ಸಾಕೆ? ನವಗ್ರಹಗಳ ಆಶಿರ್ವಾದ, ಅನುಗ್ರಹ ಕೂಡ ಬೇಕಲ್ಲ. ಆದರೆ ನಮಗೆ ಮುಂದಿನ ಕ್ಲಾಸ್ ಪ್ರಿನ್ಸಿಪಾಲರೆ ತಗೋತಾ ಇದ್ದಿದ್ದು, ಅವರೇ ಅ ಸಬ್ಜೆಕ್ಟ್ ನ HOD ಬೇರೆ, ಆಮೇಲೆ ಲ್ಯಾಬ್ ನಲ್ಲಿ ಮಾರ್ಕ್ಸ್ ನ ಕಟ್ ಮಾಡಿದರೆ ಅನ್ನೋ ಭಯ. ಆದರು ಅ ಪಿ ಯು ಸಿ ಯಾ ಆಕರ್ಷಣೆ ಜಾಸ್ತಿ ಆದ್ದರಿಂದ ಕ್ಲಾಸ್ ಬೇಡ ಅಂತ ಅತ್ತ ನಡೆದೆವು.


ಅವರ ರೂಂ ಹತ್ತಿರ ಹೋಗಿ ಕಿಟಕಿ ತೆಗೆದು ನಮ್ಮ ತಲೆ ಒಳಗೆ ಹಾಕಿ ನೋಡತೊಡಗಿದೆವು. ಅಲ್ಲೇ ಇದ್ದ ಹುಡುಗರ ಜೊತೆ ಹೊಸದಾಗಿ ಸೇರಿದವರಲ್ಲಿ ಯಾರು ಸುಂದರ, ಯಾರಿಗೆ ಎಷ್ಟು ಮಾರ್ಕ್ಸ್ ಅಂತ ಚರ್ಚೆ ಶುರು ಮಾಡಿದೆವು. ಯಾಕೋ ಏನೋ ನಮ್ಮ ಹುಡುಗರಿಗೆ ಯಾರು ಇಷ್ಟ ಆಗಿಲ್ಲ ಅನ್ನಿಸುತ್ತೆ, ಎಲ್ಲಾ ನಾಪತ್ತೆ ಆದರು. ಕೊನೆಗೆ ಉಳಿದದ್ದು ನಾನು ಮತ್ತೆ ಮಜ್ಜಿಗೆ (ಮಜ್ಜಿಗೆ ಅಂದ್ರೆ ಉಮೇಶ ಅನ್ನುವನನ ಅಡ್ಡ ನಾಮ) ಹೀಗೆ ಒಂದು 5 ನಿಮಿಷ ಕಳೆಯಿತು. ನಾವಿಬ್ಬರೂ ಭಯಂಕರ ಚರ್ಚೆ ಮಾಡ್ತಾ ಇದ್ವಿ. ಅಷ್ಟರಲ್ಲಿ ಯಾರೋ ನನ್ನ ಹೆಗಲ ಮೇಲೆ ಕೈ ಇಟ್ರು, ನಾನು ಅದು ಮಜ್ಜಿಗೆ ಕೈ ಅಂತ ಸುಮ್ಮನಾದೆ. ಅಷ್ಟರಲ್ಲಿ ಮಜ್ಜಿಗೆ ನ ಯಾರೋ ಕ್ಲಾಸ್ ಗೆ ಬಾ ಅಂತ ಕರೆದರು. ಇವನೋ ನಮ್ಮ ಕ್ಲಾಸ್ ನ ದಾವೂದ್ ಇಬ್ರಾಹಿಂ. ಹೀಗೆಲ್ಲ ಡಿಸ್ಟರ್ಬ್ ಮಾಡಿದ್ರೆ ಮುಗೀತು ಕತೆ, ಮುಚ್ಕೊಂಡು ಹೋಗಯ್ಯ ಆಚೆಕಡೆ ಅಂದ. ಸರಿ ನಾವು ಮತ್ತೆ ಕಂಟಿನ್ಯೂ ಮಾಡಿದ್ವಿ. ಸ್ವಲ್ಪ ಹೊತ್ತಾದ ನಂಗು ಯಾರೋ ಕರೆದರು ಬಾ ಕ್ಲಾಸ್ ಗೆ ಅಂತ, ನಂಗು ಉರಿತು, ಅ ಬೋರಿಂಗ್ ಕ್ಲಾಸ್ ನ ಯಾರು ಕೇಳ್ತಾರೆ? ಬರಲ್ಲ ಹೋಗಪ್ಪ ಅಂದೆ. ನಂ ಹೆಗಲ ಮೇಲಿಂದ ಕೈ ಹೋಯಿತು. ಆದ್ರೆ ಮಜ್ಜಿಗೆ ಯಾ ಬೆನ್ನು ತಟ್ಟಿ ಯಾರೋ ಕರೀಲಿಕ್ಕೆ ಶುರು ಮಾಡಿದ್ರು! ಅವನು ನನ್ನ ಮುಖ ನೋಡಿದ, ಯಾಕೋ ಡೌಟ್ ಬಂತು. ಅ ಕಿಟಕಿ ಎಂಬ ಕನಕನ ಕಿಂಡಿ ಇಂದ ಮುಖ ಹೊರತೆಗೆದು ನೋಡಿದರೆ ಎದುರು ಇದ್ದಿದ್ದು ಪ್ರಿನ್ಸಿಪಾಲ್!! ಬನ್ನಿ ಕ್ಲಾಸ್ ಗೆ ಹೋಗೋಣ, ಅ ಹುಡುಗಿಯರು ಇನ್ನು 2 ವರ್ಷ ಇಲ್ಲೇ ಇರ್ತಾರೆ ಅಂದ್ರು. ನಮಗೋ ಸ್ವಲ್ಪ ಅವಮಾನ.. ಅದೂ ಪಿ ಯು ಸಿ ವಿಧ್ಯಾರ್ಥಿಗಳ ಮುಂದೆ!!! (ಅವತ್ತು ಜಾಸ್ತಿ ನೆ ಅವಮಾನ ಆಗಿತ್ತೋ ಏನೋ, ನಮಗೆ ಇಗ ಕ್ಲಾಸ್ ಗೆ ಹೋಗಬೇಕಲ್ಲ ಅನ್ನೋ ಸಂಕಟದಲ್ಲಿ ಅವಮಾನ ಗೊತ್ತಾಗಿಲ್ಲ)


ಆಮೇಲೆ ಕ್ಲಾಸ್ ನಲ್ಲಿ ಅ ಫಿಸಿಕ್ಸ್ ಪಾಠದ ಮಧ್ಯ ನಮ್ಮದೇ ಉದಾಹರಣೆ. ( ಅಲ್ಲಿ ನಮ್ಮ ಉದಾಹರಣೆ ಯಾಕೆ ಕೊಟ್ರು ಅಂತ ಅವತ್ತೂ ಅರ್ಥ ಆಗಿರಲಿಲ್ಲ. ಇವತ್ತು ಆಗಿಲ್ಲ ಕೂಡ!! )


ಇ ಘಟನೆ ನಡೆದ ಮೇಲೆ ನಾವು ಪ್ರಿನ್ಸಿಪಾಲ್ ಕೈಯಲ್ಲಿ ಸಿಕ್ಕಿ ಬೀಳಲಿಲ್ಲ. ಅಂದ್ರೆ ನಾವು ಶ್ರೀ ರಾಮ ಚಂದ್ರ ನ ತರ ಆದೆವು ಅಂತ ಅಲ್ಲ. ಪ್ರಿನ್ಸಿಪಾಲ್ ಕೈಗೆ ಸಿಗದಂತೆ ಎಚ್ಚರಿಕೆ ತೆಗೆದು ಕೊತ ಇದ್ದೆವು ಅಷ್ಟೇ. :)

ಇದು ಯಾಕೆ ನೆನಪಿಗೆ ಬಂತು ಅಂದ್ರೆ ನಿನ್ನೆ ಮಜ್ಜಿಗೆ ಕಾಲ್ ಮಾಡಿದ್ದ. ರೆಸೆಶನ್ !!!!, ಕೆಲಸ ಚೇಂಜ್ ಮಾಡಬೇಕು ಅಂತ ಇದ್ದ. ಹಾಗೆ ಮಾತಾಡುತ್ತ ಮಾತಾಡುತ್ತ ಒಂದಿಷ್ಟು ಫ್ಲಾಶ್ ಬ್ಯಾಕ್ ಗಳು ನೆನಪಿಗೆ ಬಂದವು ಅಷ್ಟೇ.

17 comments:

ರವಿಕಾಂತ ಗೋರೆ said...

Nimma flashback story chennaagide... majjige anno adda hesaraa?? adyaake hange kareetha idri?? :-)

ಬಾಲು said...

ರವಿಕಾಂತ್ ಅವರೇ,
ಮಜ್ಜಿಗೆ ಅಂತ ಯಾಕೆ ಬಂತು ಗೊತ್ತಿಲ್ಲ, ಆದರೆ ಅದಕಿಂತ ವಿಚಿತ್ರವಾದ ಅಡ್ಡ ಹೆಸರು ಇಡ್ತಾ ಇದ್ವಿ. ಅನೂಪ್ ಅನ್ನೋನ್ನ ದುಗ್ಗಪ್ಪ ಅಂತ ಕರೀತಾ ಇದ್ವಿ. !!!

ನೀವು ಕುಶಿ ಪಟ್ಟು ಓದಿದ್ದಕ್ಕೆ ಧನ್ಯವಾದಗಳು.

ರಾಜೀವ said...

ಬಾಲು,

ಕೆಲವೊಂದು ಹಿಂದಿನ ಘಟನೆಗಳು ಇವಾಗ ನಮಗೆ ಎಷ್ಟು ಮಜಾ ಕೊಡತ್ತೆ ಅಲ್ವ. ಒಳ್ಳೆ ಫ್ಲಾಶ್ ಬ್ಯಾಕ್. ಆಮೇಲೆ ಆ ಪಿ.ಯು.ಸಿ ಹುಡುಗೀರನ್ನ ಮಾತಾಡ್ಸಿದ್ರಾ ಇಲ್ವಾ?

ಅಂತು ಪ್ರಿನ್ಸಿಪಾಲ್ ಸಾಹೇಬ್ರು ಮಜ್ಜಿಗೆಗೆ ನೀರು ಕುಡಿಸಿದರು ಅನ್ನಿ.

PARAANJAPE K.N. said...

ನಿಮ್ಮ ಫ್ಲಾಶ್ ಬ್ಯಾಕ್ ಕಥೆ ಚೆನ್ನಾಗಿದೆ. ನಿಮ್ಮನ್ನ ನೋಡಿದರೆ ನೀವು ಇಷ್ಟೆಲ್ಲಾ ಕಾರ್ಬಾರ್ ಮಾಡಿರಬಹುದು ಅನ್ನಿಸೋಲ್ಲ. ಸ್ವಲ್ಪ ಮಸಾಲೆ ಹಚ್ಚಿದಿರಾ ಹೇಗೆ ? ನಿಮ್ಮ ಮಜ್ಜಿಗೆ, ಮೊಸರು, ಉಪ್ಪಿನಕಾಯಿ ಕಥೆಗಳು ಇನ್ನಷ್ಟು ಹೊರಬರಲಿ.

roopa said...

ತು೦ಬಾ ತಮಾಷೆ ಯಾಗಿ ಬರೆದಿದ್ದೀರಿ :-) :-) ಒಳ್ಳೆ ಫ್ಲಾಶ್ ಬ್ಯಾಕ್ ಪುರಾಣ :-) :-) ಖುಷಿಯಾಯಿತು ಓದಿ

Prabhuraj Moogi said...

ಒಳ್ಳೇ ಫ್ಲಾಷಬ್ಯಾಕ... ಈ ಉಪೇಂದ್ರ ಅಭಿಮಾನಿಗಳು ಒಂದು ಉದಾಹರಣೆ ಕೊಟ್ಟಿದೀರಲ್ಲ ಬಹಳ ನಗು ಬಂತು, ಅಲ್ಲಿನ ಸಂದರ್ಭಕ್ಕೆ ಅದು ಬಹಳ ಚೆನ್ನಾಗಿ ಹೊಂದಿಕೊಳ್ಳೊ ಹಾಗಿತ್ತು. ಅಣ್ಣ ಅನಿಸಿಕೊಳ್ಳೊ ಪೂರ್ವಾರ್ಜಿತ ಕರ್ಮ!!! ನಗು ಬಂತು... ಶಾಲೇಲಿ ಇಂಥ ಕರ್ಮ ನಂಗೂ ಇತ್ತು, ಆದ್ರೆ ಆವಾಗ ಅದೇ ಚೆನ್ನಾಗಿತ್ತು...

shivu said...

ಹೋಯ್ ಎಂಥದ್ದು ಮರಾಯ್ರೇ....ನಿಮ್ಮ ಕ್ಲಾಸಿನಲ್ಲಿ ನೀವು ಕೇವಲ ಒಂಬತ್ತು ಜನ ಹುಡುಗರು. ಉಳಿದವರೆಲ್ಲಾ ಹುಡುಗಿಯರು. ಹೀಗೆ ನಿಮ್ಮ ನೆನಪುಗಳನ್ನು ಹೇಳಿ ನಮ್ಮ ಹೊಟ್ಟೆ ಉರಿಸುತ್ತಿರಲ್ರೀ....
ಜೊತೆಗೆ ಸಿನಿಮಾಗೆ ದುಡ್ಡು ಕೊಡುವುದು ಬೇರೆ..

ಪ್ರಿನಿಪಾಲ್ ಘಟನೆ ಒಂಥರ ಸಿನಿಮಾ ನಗುಸನ್ನಿವೇಶದಂತೆ ಇದೆ. ಮುಂದೆ ಅದೇ ಕಾಲೇಜಿನಲ್ಲಿ ನಿಮ್ಮ ಮತ್ತು ಹುಡುಗಿಯರ ನಡುವಿನ ಹಪ್ಪಳ, ಉಪ್ಪಿನಕಾಯಿ, ಪಲ್ಯ ಇತ್ಯಾದಿಗಳ ಬಗ್ಗೆ ಬರೀರಿ...ಕಾಯುತ್ತೇವೆ...

ಧನ್ಯವಾದಗಳು.

ಸಾಗರದಾಚೆಯ ಇಂಚರ said...

ನಿಮ್ಮ ಮಜ್ಜಿಗೆ ಜೊತೆಗಿನ ಕಥೆ ಚೆನ್ನಾಗಿದೆ, ಕಾಲೇಜು ದಿನಗಳಲ್ಲಿ ಇಂಥಹ ಅದೆಷ್ಟೋ ಘಟನೆಗಳು ನೆನಪಾದಾಗ ಈಗಲೂ ಬಹಳ
ಖುಷಿಯಾಗುತ್ತದೆ

Suma said...

oho.. baari kithapati maadiddi haagadre neenu.... Chennagide nimmagaLa kitapati :)

Brunda said...

Hey nin flashback nannu college days nenapige thanthu. Thanx kano

Chands said...

ಲೋ ಇಂಥ ಘಟನೆಗಳು ಆಲ್ಮೋಸ್ಟ್ ಎಲ್ಲ ಕಾಲೇಜು ಹುಡುಗರ ಜೀವನದಲ್ಲಿ ನಡೆಯದಿದ್ದರೂ ನಿನ್ನ ವಿಷಯದಲ್ಲಿ ತುಂಬಾ ಸ್ವಾರಸ್ಯಕರವಾಗಿದೆ. ಗುಡ್ ಮಗನೆ, ನೀ ಇದನ್ನೆಲ್ಲಾ ಹೇಳಿಕೊಂಡು ಉಪೇಂದ್ರನ ಫ್ಯಾನ್ ತರ ತ್ಹೊರಿಸ್ಕೊಂಡಿದ್ಯ!. ಅಂದ ಹಾಗೆ ಮಜ್ಜಿಗೆ ಪ್ಲೈನ್ ಅಥವಾ ಮಸಲನೋ ಗೊತ್ತಾಗಲಿಲ್ಲ. ಹುಡುಗಿಯರಿಂದ ಮತ್ತು ಲೆಕ್ಟುರರಿಂದ ದುಡ್ಡು ಕಿತ್ತು ಕೊಳ್ಳುವ ಪರಿ ನಿನ್ನ ಆಫೀಸ್ ಮತ್ತು ಬಾಸ್ ಗೆ ಮುಂದುವರೆದಿಲ್ಲ ಅನ್ಕೊಂಡಿದ್ದೇನೆ. ಅಂದ ಹಾಗೆ ತುಪ್ಪ ಬೆಣ್ಣೆ ಮೊಸರು (ನಮಗೆ ನಂದಿನಿ ಆಗುವದಿಲ್ಲ ದೇಸಿ ತಳಿಗಳ ಮಲೆನಾಡ ಪ್ರಾಡಕ್ಟ್ಸ್ ಬೇಕು) ಥೀಂ ಇರೋ ಲೇಖನ ಗಳನ್ನೂ ಆಶಿಸುಥಿದ್ದೇನೆ.

ಬಾಲು said...

ರಾಜೀವ:
ಆಮೇಲೆ ನಾವು ಪಿ ಯು ಸಿ ಹುದುಗಿರನ್ನ ಮಾತಾಡಿಸಿಲ್ಲ. ನಮಗೆ ಹುದುಗಿರನ್ನ ನೋಡೋಕೆ ಮಾತ್ರ ದೈರ್ಯ :(
ಮತ್ತೆ ಪ್ರಿನ್ಸಿಪಾಲ್ ಮಜ್ಜಿಗೆ ಗೆ ನೀರು ಮಾತ್ರ ಕುಡಿಸಿದರು, ಆದರೆ ನಂಗೆ ಏಕ್ಸಾಮಿ ನಲ್ಲಿ ಹರಳೆಣ್ಣೆ ನೆ ಕುಡಿಸಿದರು.

ಪರಾಂಜಪೆ ಅವರೇ:
ಇದಕ್ಕೆ ಮಸಾಲೆ ಏನು ಹಚ್ಚಿಲ್ಲ, ಸ್ವಲ್ಪ ಕಟ್ ಮಾಡಿದ್ದೇನೆ, ಯಾಕೆಂದರೆ ನಮ್ಮ ಮಜ್ಜಿಗೆ ಗುಂಪಿನ ಮಾತುಗಳು ಸೆನ್ಸಾರ್ ಮಾಡಬೇಕಾಯಿತು.

ರೂಪ:
ಕುಶಿ ಪಟ್ಟು ಓದಿದ್ದಕ್ಕೆ ಧನ್ಯವಾದಗಳು.

ಪ್ರಭು ರಾಜರೇ:
ಆಗ ಉಪೇಂದ್ರ ದೊಡ್ಡ ಸ್ಟಾರ್ ಆಗಿದ್ದಾತ. ಮತ್ತೆ ಭದ್ರಾವತಿಯಲ್ಲಿ ತಮಿಳರು ತುಂಬಾ ಸಂಖ್ಯೆಯಲ್ಲಿ ಇದ್ದಾರೆ. ಅವರಿಗೆ ರಜನಿ ಕಾಂತ ಮತ್ತೆ ಉಪೇಂದ್ರ ಅಂದ್ರೆ ದೇವರು!!
ಆಮೇಲೆ ಅಣ್ಣ ಅನ್ನಿಸಿಕೊಲ್ಲೋನು ಇದ್ದನಲ್ಲ, ಅವನ ಗೋಳನ್ನು ನೋಡಲಾಗುತ್ತಿರಲಿಲ್ಲ. ಅವನಿಗೆ ರಾಕಿ ಹಬ್ಬದ ದಿಂದ ಕೈ ತುಂಬಾ ರಾಕಿ ಗಳು. ಪಾಪ ಎನ್ನಿಸುವಷ್ಟು!!

ಶಿವೂ:
ನಮ್ಮ ಕ್ಲಾಸ್ ನ ಹುಡುಗಿಯರು ಅತ್ಯಂತ ಸಹೃದಯದವರು. ಸಿನೆಮಾಕ್ಕೆ ದುಡ್ಡು, ಮದ್ಯಾನ ಊಟಕ್ಕೆ ಡಬ್ಬಿ ಎಲ್ಲ ಸಿಗುತ್ತಾ ಇತ್ತು. (ಡಬ್ಬಿ ನಾನು ಕದ್ದು ತಿನ್ನುತ್ತ ಇದ್ದೆ. )
ಮಜ್ಜಿಗೆ ಪುರಾಣ (ಮಜ್ಜಿಗೆ ರಾಮಾಯಣ ತರ) ಮುಂದೆ ಬರಲಿದೆ.

ಬಾಲು said...

ಗುರುರಾಜ ರೆ:
ಕಾಲೇಜು ದಿನಗಳು ಎಂದಿಗೂ ಮರೆಯಲಾಗದ ಸವಿ ನೆನಪುಗಳು.

ಸುಮ : ನಾನು ಅಷ್ಟೆಲ್ಲಾ ಕಿತಾಪತಿ ಮಾಡ್ತಾ ಇರಲಿಲ್ಲ. ತುಂಬಾ ಸಬ್ಯಸ್ಥ ಆಗಿದ್ದೆ. :)

ಬೃಂದಾ: ಥಾಂಕ್ಸ್ ಕಣೆ. :) :) :)

ಚಂದ್ರು: ನಾನು ಇಗ ಆಫೀಸ್ ನ ಹುಡುಗಿಯರಿಂದ ಬಜ್ಜಿ, ಬೋಂಡ, ಊಟ, ಸಿಹಿ ತಿಂಡಿ ಗಳನ್ನು ತರಿಸಿ ಕೊಂಡು ತಿನ್ನುವ ಸದಭಿ ರುಚಿಯ ಹವ್ಯಾಸಗಳನ್ನು ಬೆಳೆಸಿಕೊಂಡಿದ್ದೇನೆ. ಅಚ್ಚ ಮಲೆನಾಡ ಘಟನೆಗಳನ್ನು ಬರೆಯುವೆ. ಓದಿದ್ದಕ್ಕೆ, ಓದಿ ಕಾಮೆಂಟ್ ಮಾಡಿದ್ದಕ್ಕೆ ಥಾಂಕ್ಸ್.

ಏಕಾಂತ said...

ಹಳೇಯ ದೋಸ್ತ್ ಎಲ್ರೂ ಸೇರಿದಾಗ ಇಂತಹ ಹಲವಾರು ಘಟನೆಗಳು ನೆನಪಾಗ್ತವೆ. ಬೆನ್ನ ಹಿಂದೆ ಬುಕ್ ಸಿಕ್ಕಿಸಿ ಮತ್ತೆ ಕಾಲೇಜ್ ಮತ್ತೆ ಕಾಲೇಜ್ ಮೆಟ್ಟಿಲೇರುವ ಆಸೆ... ವಿ ಮಿಸ್ ದಟ್ ಏಜ್..

Ram said...

Get Add-Kannada button widget, It will increase your blog visitors and traffic with top Kannada Social Bookmarking and networking sites. Install button free from www.findindia.net

sham said...

ಈ ಬ್ಲಾಗ್ ಮಾಲಿಕರುಗಳಿಗೆ ನಮಸ್ಕಾರ. (ರಾಣಿ ಮತ್ತು ಬಾಲು)

ಏನೋ ತಡಕಾಡುತ್ತಿದ್ದಾಗ ಟೈಂಪಾಸ್ ಬ್ಲಾಗು ಹೊಕ್ಕು, ಬಾಣಸಿಗನ ಲೇಖನ ಕಣ್ಣಿಗೆ ಬಿತ್ತು. ಒಂದೇ ಏಟಿಗೆ ಓದಿದೆ. ಮರುಘಳಿಗೆ ಲೇಖನವನ್ನು ಕಾಪಿ ಪೇಸ್ಟ್ ಪೋಸ್ಟ್ ಮಾಡಿದೆ ನಮ್ಮ ವೆಬ್ ಸೈಟಿನಲ್ಲಿ. ನಮ್ಮ ಓದುಗರೂ ಮೆಚ್ಚುತ್ತಾರೆ,ಮೆಚ್ಚೇಮೆಚ್ಚುವರು ಎಂಬ ವಿಶ್ವಾಸದಿಂದ! ನಿಜಕ್ಕೂ ಒಳ್ಳೆಯ, ಲವಲವಿಕೆಯ ಬರಹ. ಹೀಗೆ ಬರೆಯುತ್ತಿರಿ.

ಧನ್ಯವಾದ, ಶಾಮ್. ಸಂಪಾದಕ
http://thatskannada.oneindia.in/column/humor/2009/0911-cooking-is-an-art-of-living.html

Ram said...

Just install Add-Kannada widget button on your blog. Then u can easily submit your pages to all top Kannada Social bookmarking and networking sites.

Kannada bookmarking and social networking sites gives more visitors and great traffic to your blog.

Click here for Install Add-Kannada widget

upshapot