Friday, August 7, 2009

ಯಮಪುರಿಯಲ್ಲಿ ರಾಜಕೀಯ!!!!


ಒಂದು ಕಥೆ ಹೆಂಗೆ ಶುರು ಆಗಬೇಕು? ನಾನು ಚಿಕ್ಕವನಿದ್ದಾಗ ಕೇಳುತ್ತಿದ್ದ ಕಥೆಗಳೆಲ್ಲವೂ "ಒಂದಾನೊಂದು ಕಾಲದಲ್ಲಿ.." ಅಂತಲೇ ಶುರು ಆಗುತ್ತಾ ಇದ್ದುವು. ಈಗೆಲ್ಲ ಕಥೆ ಮಧ್ಯದಿಂದ ಶುರು ಆಗುತ್ತವೆ, ಕೊನೇಲಿ ಒಂದು ಪಂಚ್, ಅರ್ಥವಾಗದ ಒಂದು ಕ್ಲೈಮಾಕ್ಸ್. ಹೋಗಲಿ ಬಿಡಿ, ನಾನು ಜಾಸ್ತಿ ಕಥೆಗಳನ್ನು ಓದಿಲ್ಲ, ಓದಿದರಲ್ಲಿ ಅರ್ಥವಾಗಿದ್ದು ಕೂಡ ಸ್ವಲ್ಪ ಕಡಿಮೆ ನೆ. (ನನ್ನ ಕವನ ಗಳ ಮೇಲಿನ ಜ್ಞಾನಕ್ಕೆ ಹೋಲಿಸಿದರೆ, ಕಥೆ, ಕಾದಂಬರಿ ಗಳಲ್ಲಿ ನಾನು RANK. ) ಇರಲಿ ಇಗ ನಿಮಗೊಂದು ಕಥೆ ಹೇಳಲಿದ್ದೇನೆ, ಇದು ನಾನು ಮಾಡಿದ ಅಡುಗೆ ಇದ್ದಂತೆ, ಒಂದಿಷ್ಟು ಸಾಂಬಾರ ಪದಾರ್ಥ ಮರೆತಿದೆ, ಒಂದಿಷ್ಟು ಉಪಯೋಗಿಸುವುದು ಹೇಗೆಂದು ತಿಳಿಯದೆ ಹಾಗೆ ಕುಳಿತಿವೆ. ಆದರೂ ಇದು ಆಜೀರ್ಣ ವಾಗಲಾರದು ಅನ್ನೋ ಆಸೆ.

------------------------------------------------------------------





ಒಂದಾನೊಂದು ಕಾಲದಲ್ಲಿ ನರಕಾದಿಪತಿ ಯಮನು ತನ್ನ ಸಾಮ್ರಾಜ್ಯವನ್ನು ಅತ್ಯಂತ ಯಶಸ್ವಿ ಯಾಗಿ ಆಡಳಿತ ನಡೆಸಿಕೊಂಡು ಬರುತ್ತಾ ಲಿದ್ದನು. ಬ್ರಹ್ಮನು ಯಾರ ಹಣೆಯ ಮೇಲೆ ಎಷ್ಟು ಆಯಸ್ಸು ಬರೆದಿದ್ದಾನೆ ಎಂಬುದನ್ನು ನೋಡಿ, ಅವರನ್ನು ಆಸ್ಥಾನಕ್ಕೆ ಹಿಡಿ ತಂದು, ಅವರು ಭೂಲೋಕದಲ್ಲಿ ಮಾಡಿದ ಪಾಪ ಕಾರ್ಯಗಳ ಬಗ್ಗೆ ಚಿತ್ರಗುಪ್ತಾದಿ ಗಳೊಡನೆ ಸಮಾಲೋಚಿಸಿ, ಶಿಕ್ಷೆ ಅಥವಾ ಸ್ವರ್ಗಕ್ಕೆ ಕಳುಹಿಸುತ್ತಾ ಇದ್ದನು. ಅಲ್ಲಿನ ಕಾರ್ಮಿಕರಾದ ಯಮ ಕಿಂಕರರು ಭೂಮಂಡಲ ವೆಲ್ಲಾ ಅಲೆದಾಡಿ ಯಮ ಪಾಶದಿಂದ ಆತ್ಮ ವನ್ನು ಹೊತ್ತೊಯ್ಯುತ್ತಾ ಇದ್ದರು. ಅಲ್ಲಿನ ಎಲ್ಲರೂ 24/7 , ಇಂದಿನ ಕಾಲ್ ಸೆಂಟರ್ ನು ನಾಚಿಸುವಂತೆ ಕೆಲಸ ಮಾಡುತ್ತಾ ಇದ್ದರು.


ಇಂತಿಪ್ಪ ನರಕಕ್ಕೆ ಒಮ್ಮೆ ಭಾರತ ದಿಂದ ಒಬ್ಬ ಯುವ ರಾಜಕಾರಣಿಯ ಆತ್ಮ ವನ್ನು ಹಿಡಿದು ತರಲಾಯಿತು.
ಎಂದಿನಂತೆ ಯಮನ ಎದುರು ವಿಚಾರಣೆ ಯು ಶುರು ಆಯಿತು. ಚಿತ್ರ ಗುಪ್ತನು ತನ್ನ ಪುಸ್ತಕವನ್ನು ನಾಲ್ಕಾರು ಬಾರಿ ಜಾಲಾಡಿದರು ಒಂದೇ ಒಂದು ಪುಣ್ಯ ಕೆಲಸ ಕಾಣಿಸದೆ, ಘನ ಘೋರ ಅಕೃತ್ಯ ಗಳೇ ಕಂಡವು. ಪಾಪ ಕಾರ್ಯವನ್ನು ಎಂದು ಸಹಿಸದ ಯಮನು ಶಿಕ್ಷೆಯ ಬಗ್ಗೆ ಯೋಚಿಸಲರಂಬಿಸಿದನು.


ಇತ್ತ ಇದೆ ಸಮಯದಲ್ಲಿ ಭಾರತದಲ್ಲಿ ರಾಜಕಾರಣಿಯ ಸಾವಿಗೆ ಸಂತಾಪ ಸೂಚಕವಾಗಿ ಒಂದು ವಾರ ರಾಷ್ಟ್ರೀಯ ಶೋಕಾಚರಣೆ ಘೋಷಿಸ ಲಾಯಿತು. ಆದರೆ ರಾಜಕಾರಣಿಯ ಮನೆಯಲ್ಲಿ, ಆತನ ಆಪ್ತ ಬೆಂಬಲಿಗರಲ್ಲಿ ಒಂದು ಸಮಸ್ಯೆ ತಲೆದೋರಿತು. ರಾಜಕಾರಣಿಯ ಅಪ್ಪ, ಅಮ್ಮ ಒಂದೊಂದು ಧರ್ಮೀಯರು. ತಾನು ಜಾತ್ಯಾತೀತ ಎಂದು, ಮುಂದಿನ ಜನ್ಮದಲ್ಲಿ ಮತ್ತೊಂದು ದರ್ಮದಲ್ಲಿ ಹುಟ್ಟುವೆ ಎಂದು ಹೇಳಿಕೊಳ್ಳುತ್ತಲಿದ್ದನು. ಹಾಗಾಗಿ ಶವ ಸಂಸ್ಕಾರದ ಬಗ್ಗೆ ದಿಲ್ಲಿಯಲ್ಲಿ ಬಹು ದೊಡ್ಡ ಸಭೆ ನಡೆಯಿತು. ಹೂಳುವುದೋ, ಸುಡುವುದೋ ತಿಳಿಯದೆ.. ಕೊನೆಗೆ ಟಿ ವಿ ಯಲ್ಲಿ ನೇರ ಪ್ರದರ್ಶನಕ್ಕೆ ಶವ ವನ್ನು ಧಹಿಸುವುದೇ ಸೂಕ್ತವೆಂದು ವಿದೇಶಿ ಮಾದ್ಯಮಗಳು ಹೇಳಿದ್ದರಿಂದ ನಗರ ಮದ್ಯೆ ಸುಡಲಾಯಿತು. ಹೈಕಮಾಂಡಿನ ಪ್ರೀತಿ ಗಿಟ್ಟಿಸಲು ಕೆಲವರು ಸತ್ತ ರಾಜಕಾರಣಿಗೆ ಸ್ವರ್ಗ ಸಿಗಲೆಂದು ಹೋಮ ಹವನಾದಿಗಳನ್ನು ಮಾಡಿದರು, ಇನ್ನು ಕೆಲವರು ಜಂಟಿ ಪ್ರಾರ್ಥನೆ ಯನ್ನು ಮಾಡಿದರು. ಆದರೆ ಇವಾವು ಯಮನ ಮೇಲೆ ಪ್ರಭಾವ ಬೀರಲು ವಿಫಲ ವಾಗಿ ರಾಜಕಾರಣಿಗೆ ನರಕ ದ ಶಿಕ್ಷೆ ಕಾಯಂ ಆಯಿತು.


ಇವನು ತೀರ ಮಾಹತ್ವಾಕಾಂಕ್ಷೆ ಹೊಂದಿದ್ದ ರಾಜಕಾರಣಿ, ಬದುಕಿನಲ್ಲಿ ಹಲವು ಸಹಸ್ರ ಲಕ್ಷ ಕೋಟಿ ಹಣ ಮಾಡಬೇಕೆಂದು ಆಸೆ ಪಟ್ಟಿ ದನು. ಇಡಿ ಭಾರತದಲ್ಲಿ ತನ್ನ ಆಳ್ವಿಕೆಯನ್ನು ವಿಸ್ತರಿಸಿ, ಅಲೆಕ್ಸಾಂಡರ ತರ ತನ್ನ ಹೆಸರು ಮಕ್ಕಳ ಶಾಲಾ ಇತಿಹಾಸದ ಪುಸ್ತಕದಲ್ಲಿ ಚಿರಾಯು ಇರಬೇಕೆಂದು ಕನಸು ಕಂಡಿದ್ದನು. ಅದೂ ಅಲ್ಲದೆ ಸಾಯುವಾಗ ಇದ್ದದ್ದು ಒಬ್ಬಳೇ ಒಬ್ಬಳು ಹೆಂಡತಿ. ಸಾಧಿಸುವ ಅವಕಾಶವಿದ್ದಾಗ, ಕನಸು ನನಸಾಗುವ ಸಮಯದಲ್ಲಿ ತನ್ನನ್ನು ನರಕಕ್ಕೆ ತಳ್ಳಿದ ಯಮನ ಮೇಲೆ ನಖಶಿಖಾಂತ ಕೋಪವು ಬಂದಿತು. ಇದಕ್ಕೆ ತಕ್ಕ ಪ್ರತಿಕಾರ ತೆಗೆದು ಕೊಳ್ಳಲೆ ಬೇಕೆಂದು ತೀರ್ಮಾನಿಸಿ, ನರಕದಲ್ಲಿ ಶಿಕ್ಷೆ ಅನುಭವಿಸುತ್ತಾ ಇದ್ದ, ತನ್ನ ಪಕ್ಷದ ಕಾರ್ಯ ಕರ್ತರನ್ನು ಗುರುತಿಸಿದನು. ಅವರಿಗೆಲ್ಲ ಸ್ವರ್ಗದ ಆಸೆ ತೋರಿಸಿ ಒಗ್ಗುಡಿಸಿದನು. ಸ್ವರ್ಗದಲ್ಲಿ ಇರಬಹುದಾದ ಗಣಿಕೆಯರ ಬಗ್ಗೆ ವಿವರಿಸಿದಾಗ ಆತ್ಮ ಗಳು ಜಾತಿ ಬೇದ, ಮತ ದರ್ಮ ಮರೆತು ಜಾತ್ಯ ತೀತ ಆದವು. ಕೆಸರು ಹಾಗು ಮಣ್ಣಿನ ಪಕ್ಷವು ಕೈ ಜೋಡಿಸಿದವು ಹುಡುಗಿ ಅಂದರೆ ಮಂದಿ, ಜಾತಿ ಗೀತಿ ಚಿಂದಿ ಎನ್ನುವ ಸಿಲ್ಕ್ ಸ್ಮಿತಾ ಕುಣಿತದ ಹಾಡು ಅಲ್ಲಿ ಸತ್ಯ ವಾಯಿತು.


ಸಂಘಟನೆಯ ರೂಪ ಬಂದ ಕೂಡಲೇ ಅವರೆಲ್ಲ ತಡ ಮಾಡದೆ ಯಮ ನ ವಿರುದ್ದ ದಂಗೆ ಎದ್ದರು. ಮೂಲಭೂತ ಸೌಕರ್ಯ ಕೊರತೆಯನ್ನ ಅಸ್ತ್ರ ಮಾಡಿಕೊಂಡರು. ಸ್ವರ್ಗ ಇಸ್ ಶೈನಿಂಗ್, ಇಲ್ಲಿ ಗರೀಬಿ ಓಡಿಸಿ ಅಂತ ಕೂಗಾಡಿದರು. ನರಕದಲ್ಲೆಲ್ಲ ಕೋಲಹಲವೆಬ್ಬಿತು, ರಂಬೆಯ ಕನಸಿನಲ್ಲಿದ್ದ ಕೆಲವರು ತೀವ್ರ ಗಾಮಿಗಳಾದರು, ಒಟ್ಟಿನಲ್ಲಿ ನರಕ ಶಾಂತಿ ಇಲ್ಲದ ಕಾಶ್ಮೀರ ತರ ಆಯಿತು. ಇದರಿಂದ ಭ್ರಮ ನಿರಸನ ಗೊಂಡ ಯಮನು ಚಿತ್ರಗುಪ್ತರು ಮೊದಲಾದವರೊಡನೆ ಸಮಾಲೋಚನೆ ನಡೆಸಿ, ಇದಕ್ಕೆಲ್ಲ ಅ ಹೊಸ ರಾಜಕಾರಣಿಯ ಕೈಗೂಡದ ಮಹತ್ವ ಕಾಂಕ್ಷೆ ಗಳೇ ಕಾರಣವೆಂದು ತೀರ್ಮಾನಿಸಲಾಯಿತು. ಆದರೆ ಅ ರಾಜಕಾರಣಿಯನ್ನು ಮತ್ತೆ ಭೂಮಿಗೆ ಕಳಿಸುವುದು ಸಾಧ್ಯವಿಲ್ಲದಿದ್ದರಿಂದ, ಹಾಗು ಮತ್ತೊಂದು ಯಮನಿಗೆ ಮತ್ತೊಂದು ಸೋಲು ಬೇಕಿಲ್ಲ ವಾದ್ದರಿಂದ ಆತನ ವಿರುದ್ದ ಇದ್ದ ಎಲ್ಲಾ ಆರೋಪ ಗಳನ್ನೂ ಖುಲಾಸೆ ಮಾಡಿ ಸ್ವರ್ಗಕ್ಕೆ ಕಳುಸಿಹಲಾಯಿತು. ಭೂಲೋಕದಲ್ಲೂ ಇ ತರದ ನೀರಸೆ ಅನುಭವಿಸಿದ್ದ ಹೋರಾಟಗಾರರು (ಕಾರ್ಯಕರ್ತರು) ಸುಮ್ಮನೆ ಕುದಿಯುವ ಎಣ್ಣೆಯ ಬಾಣಲೆಗೆ ಹಾರಲಾರಂಬಿಸಿದರು.


ಇ ಎಲ್ಲ ಘಟನೆಯ ನಂತರ ಯಮನು ತನ್ನ ಕಾರ್ಯ ವೈಕರಿಯನ್ನು ಬದಲಿಸಿ ಕೊಂಡನು. ರಾಜಕಾರಣಿಗಳು ತೀರ ಮುದುಕ ರಾಗದ ಹೊರತು ಸಾಯುವುದು ಸಾದುವಲ್ಲವೆಂದು ಬ್ರಹ್ಮನ ಬಳಿ ವಾದಿಸಿ ಅದನ್ನು ಕಾರ್ಯರೂಪಕ್ಕೂ ತಂದನು.



ಅದಕ್ಕೆ ಅಂತೆ ನಮ್ಮ ರಾಜಕಾರಣಿಗಳ ಪಾಪ ಕಾರ್ಯವು ಗಣಿ ಲಾರಿ, ಟ್ರಕ್ಕು ಗಳಲ್ಲಿ ಲೋಡ್ ಗಟ್ಟಲೆ ತುಂಬಿದ್ದರೂ ಯಾರೂ ಸಾಯುತ್ತಾ ಇಲ್ಲವಂತೆ.

10 comments:

Unknown said...

ಬಾಲು ಸರ್,
ಒಳ್ಳೆಯ ಕಥೆ. ಛೆ !!! ಈ ರಾಜಕಾರಣಿಗಳು ನರಕಕ್ಕೆ ಹೋದರೂ ತಮ್ಮ ಬುದ್ದಿ ಬಿಡುವುದಿಲ್ಲ .. ಇವರಿಗೆ ತ್ರಿಶ೦ಕು ಸ್ವರ್ಗವೇ ಸರಿ ಎ೦ದು ನನ್ನ ಅನಿಸಿಕೆ .. ಭೂಮಿ ಯಲ್ಲಿ ಹಾಳು ಮಾಡುವಷ್ಟು ಮಾಡಿ ಈಗ ನರಕವನ್ನು ಹಾಳು ಮಾಡಿ ಸ್ವರ್ಗ ವನ್ನು ಬಿಡದೆ ತಮ್ಮ ಕೆಟ್ಟ ಬುದ್ದಿ ತೋರಿಸುತ್ತಿದ್ದಾರೆ .. ನಿಮ್ಮ ಅಬಿಪ್ರಾಯವೇನು ??? ಈಗ ಆಧುನಿಕ ವಿಶ್ವಾಮಿತ್ರಯಾರು ??? ನೀವೇ ಹೇಳಿ ??

shivu.k said...

ಬಾಲು ಸರ್,

ಇದೆನಿದು ನಿಮ್ಮ ಹೊಸ ಶೈಲಿ ಅಂದುಕೊಂಡೆ. ಕಥೆ ಬರೆದಿರುವ ಶೈಲಿಯೂ ತುಂಬಾ ಚೆನ್ನಾಗಿದೆ. ಮಗುವಿನ ಹಾಗೆ ಓದಿದೆ. ಖುಷಿಯಾಯ್ತು...ನಮ್ಮ ರಾಜಕಾರಣಿಗಳ ಬಗ್ಗೆ ಕಥೆಯಲ್ಲಿ ಪಕ್ಕಾ ಚಿತ್ರಣವನ್ನೇ ಕೊಟ್ಟಿದ್ದೀರಿ...

ಧನ್ಯವಾದಗಳು.

PARAANJAPE K.N. said...

ಇಂಥ ಕಥೆಗಳ ಹೊಸ trend ನಿಮ್ಮಿ೦ದ ಶುರುವಾಗಲಿ. ಬಹಳ ಚೆನ್ನಾಗಿದೆ. ಇದನ್ನು ರಾಜಕಾರಣಿಗಳು ಓದಿದರೆ ಚೆನ್ನ. ನಿಮ್ಮಲ್ಲಿರುವ ಹೊಸ ಹೊಸ idea ಗಳಿಗೆ ಸೂಕ್ತ ಮನ್ನಣೆ ಸರಕಾರದಿ೦ದ, ಅಧಿಕಾರಸ್ತರಿ೦ದ ಸಿಗಬಹುದು.

ರಾಜೀವ said...

ಬಾಲು,

ಯೇನ್ರಿ, ಕಥೆ ಹೇಳಕ್ಕೆ ಶುರು ಮಾಡ್ಬಿಟ್ರಿ? ಇನ್ನು ಯಾವ ಯಾವ ಪ್ರತಿಭೆಗಳನ್ನ ಹಾಗೇ ಬಚ್ಚಿಟ್ಟುಕೊಂಡಿದ್ದೀರ?

ರಾಜಕಾರಿಣಿಗಳು ಅಷ್ಟು ಸುಲಭವಾಗಿ ಸಾಯುವುದಿಲ್ಲ ನಿಜ. ಯಮನ ಸ್ತಿತಿ ನೋಡುದ್ರೆ ಪಾಪ ಅನ್ಸತ್ತೆ. ಆದರೆ, ಯಮನಿಗೆ ಆಗದೇ ಇದ್ದದ್ದು, ಭೂಲೋಕದಲ್ಲಿ ಇರುವ ನಮಗೆ ಆಗುವುದೇ? ನಮ್ಮ ಪರಿಸ್ತಿತಿ ನೋಡಿಕೊಂಡರೆ ಇನ್ನು ಪಾಪ ಅನ್ಸತ್ತೆ. ಏನು ಮಾಡುವುದು, ಪಾಲಿಗೆ ಬಂದದ್ದು ಪಂಚಾಮೃತ ಅಂತ ಅನುಭವಿಸಬೇಕು.

ಹಾಗೇ, ಸಾಫ್ಟ್ವೇರ್ ಇಂಜಿನಿಯರ್ ಸತ್ತಮೇಲೆ ಯಮಲೋಕದಲ್ಲಿ ಏನಾಗಬಹುದು ಎಂಬುದನ್ನೂ ಕಲ್ಪಿಸಿಕೊಂಡು ಬರೆಯಿರಿ ;)

Ittigecement said...

ಬಾಲು ಸರ್....

ಬಹಳ ಸತ್ಯವಾದ ಮಾತು....
ಪಾಪಿ ಚಿರಾಯು....!

ಓದುತ್ತ... ಓದುತ್ತ ನಗು ಬಂದರೂ...
ನಮ್ಮ ದುರ್ಗತಿ...
ನಮ್ಮನ್ನು ಆಳುವವರ ನೆನಪಾಗಿ ಬೇಸರವೂ ಆಯಿತು...

ಒಮ್ಮೆ ಈ ಎಲ್ಲ ಧರಿದ್ರ ರಾಜಕಾರಣಿಗಳ ಮುಖ ನೆನಪಾಗಿ ಅಸಹ್ಯ ಎನಿಸಿತು.....

ಆ ಅಸಹ್ಯ ಮುಖಗಳನ್ನು ನೆನಪಿಸಿ ಉಗಿಸಿದ್ದಕ್ಕೆ ಧನ್ಯವಾದಗಳು...

ತುಂಬಾ ಚಂದದ ಬರಹ...
ನನ್ನ ಸ್ನೇಹಿತರಿಗೆ ಲಿಂಕ್ ಕಳಿಸಿದ್ದೇನೆ....

Prabhuraj Moogi said...

ಬಾಲು ಸರ್ ಕಥೆ ಸೂಪರ... ಅದಕ್ಕೆ ಇರಬೇಕು ಕರ್ನಾಟಕದಲ್ಲೂ ಇನ್ನೂ ನಿವೃತ್ತಿ ಹೊಂದದೇ ಹಲವು ರಾಜಕಾರಣಿಗಳು ಹಾಗೇ ಕಾಲ ತಳ್ಳುತ್ತಿದ್ದಾರೆ!
ಆ ರಾಜಕಾರಣಿ ಸ್ವರ್ಗದಲ್ಲಿ ಎಲ್ಲಿ ಇಂದ್ರನ ಪದವಿಗೆ ಧಕ್ಕೆ ತಂದಿದಾನೋ ಅಂತ ಅನುಮಾನ ಗೊತ್ತಿದ್ದರೆ ವಿಚಾರಿಸಿ ಹೇಳಿ, ಯಮನೋ ತಪ್ಪಿಸಿಕೊಂಡ ಪಾಪ ಇಂದ್ರನ ಗತಿ :)

bhadra said...

ಹ ಹ ಹ ಬಹಳ ಚಂದವಾದ ಬರಹ!

sunaath said...

ಬಾಲು,
ಒಳ್ಳೇ ತರ್ಕಬದ್ಧ ಕತೆ. "ಯಮನ ಸೋಲು(Modern)" ಎಂದು ಕರಿಯಬಹುದು ಇದಕ್ಕೆ!

ಬಾಲು said...

ರೂಪ:
ಅವರಿಗೆ ತ್ರಿಶಂಕು ಸ್ವರ್ಗ ಬೇಡ, ತ್ರಿಶಂಕು ಸ್ಥಿತಿ ಬರಲಿ. ಅದನ್ನು ಶೃಷ್ಟಿ ಮಾಡೋಕೆ ಯಾರದ್ರು ಪುಣ್ಯ ಪುರುಷ ಹುಟ್ಟಿ
ಬರಬೇಕೇನೋ...

ಶಿವೂ:
ನೋಡಿ, ಓದಿ ಅನಂದಿಸಿದ್ದಕ್ಕೆ ಧನ್ಯವಾದಗಳು.

ಪರಾಂಜಪೆ ಅವರೇ:
ನಿಮಗೆ ತುಂಬಾನೆ ಧನ್ಯವಾದಗಳು, ಯಾಕೆಂದರೆ ಕಥೆ ಯಾ ಶೀರ್ಷಿಕೆ ಕೊಟ್ಟದ್ದು ನೀವು.

ರಾಜೀವ:
ನಂಗೆ ಇನ್ನು ಒಂದು ಅನುಮಾನ ಇದೆ. ಯಮ ನಮ್ಮಂಥ ಜನ ಸಾಮನ್ಯ ರ ಮೇಲೆ ಏನಾದ್ರೂ ಕೋಪ ಗೊಂದಿದ್ದನ ಅಂತ, ಅದಕ್ಕಾಗಿ ಪಾಪಿ ಗಳನ್ನೂ ಸಾಯಿಸದೇ ನಮ್ಮ ಮೇಲೆ ಸಿಕ್ಕಾಪಟ್ಟೆ ರೆವೆಂಜ್ ತಗೋತಾ ಇರಬಹುದು.
ಇನ್ನು ಸಾಫ್ಟ್ ವರೆ ನವರು ಯಮಲೋಕ ದಲ್ಲಿ.. ಒಳ್ಳೆಯ ಕಾನ್ಸೆಪ್ಟ್

ಬಾಲು said...

ಪ್ರಕಾಶ್ ರವರೆ:
ನಿಮ್ಮ ಸ್ನೇಹಿತರಿಗೆ ಲಿಂಕ್ ಕಳುಹಿಸಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು.

ಪ್ರಭು ರಾಜರೇ:
ಇಂದ್ರ ನಿಗೆ ಭಯ ಇಲ್ಲ ಅನ್ಸುತ್ತೆ. ಯಾಕೆಂದರೆ ಅಲ್ಲಿ ರಂಭೆ ಊರ್ವಶಿ, ಮೇನಕೆ... ಮುಂತಾದವರ ಸಂಗಡ ಇರುವಾಗ ಬೇರೆಲ್ಲ ಎಲ್ಲಿ ನೆನಪು ಆಗುತ್ತದೆ?

ಶ್ರೀನಿವಾಸ್:
ನನ್ನ ಬ್ಲಾಗಿಗೆ ಸ್ವಾಗತ, ಬರುತ್ತಾ ಇರಿ.

ಸುನಾತ್ ರವರೆ: ಹ್ಞೂ ಇದು ಯಮನ ಮಾಡರ್ನ್ ಸೋಲು ಎಂದು ಕರೆಯ ಬಹುದು. ನಿಮಗೆ ನನ್ನ ಬ್ಲಾಗಿಗೆ ಸ್ವಾಗತ. ಬರುತ್ತಾ ಇರಿ.