Monday, September 8, 2008

ಸುಳ್ಳು ಗಳು ಮತ್ತು ಇಂಟರ್‌ವ್ಯೂ

ಅಲ್ಲಾ ಸುಳ್ಳುಗಳ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಅದನ್ನ ಹೇಳೋ ಸಮಯ ಯಾವುದು? ನನ್ ಪ್ರಕಾರ ಸುಳ್ಳು ಗಳು ನಮ್ಮ ಜೀವನದ ಒಂದು ಭಾಗ. ನಾವು ಉಸಿರಾಡೋಕೆ ಶುರು ಮಾಡಿದಾಗಿಂದ ಅದನ್ನು ನಿಲ್ಲಿಸೋ ವರೆಗೂ ಎಲ್ಲ ಸಮಯವೂ ಸುಳ್ಳು ಹೇಳೋದಕ್ಕೆ ಪ್ರಶಸ್ತ ವಾದದ್ದೆ.

ನೋಡಿ ಟೀಚರ್ ಗಳಿಗೆ ಸುಳ್ಳು ಹೇಳೋದಕ್ಕೆ ಸಂಬಳ ಕೊಡ್ತಾರೆ, ರಾಜಕಾರಣಿಗಳು ಸುಳ್ಳು ಹೇಳಿ ವೋಟು ಹಾಕಿಸ್ಕೊತಾರೆ, ವ್ಯಾಪಾರಿಗಳಿಗೆ ಸುಳ್ಳು ಹೇಳೋದು ಧರ್ಮ, ಮಧುವೆ ಆದವರಿಗೆ ಸುಳ್ಳು ಹೇಳೋದು ಬದುಕೋ ಮಾರ್ಗ!!!( ಮುಖ್ಯವಾಗಿ ಗಂಡಸರಿಗೆ, ಇಲ್ಲ ದಿದ್ದರೆ, ಹೆಂಡತಿ ಯಿಂದ ಲಟ್ಟಣಿಗೆ ಏಟು ಗಳು ಬೀಳುವ ಸಾಧ್ಯತೆ ಇರುತ್ತದೆ. ) ಆದರೆ ಗಮನಿಸಿ ಕೆಲಸ ಬದಲಾಯಿಸ ಬೇಕು ಅನ್ನೋರಿಗೂ ಸುಳ್ಳುಗಳು ಅನಿವಾರ್ಯ.

ಸರಿ ಈಗ ನಾವು ಒಂದು HR ಇಂಟರ್‌ವ್ಯೂ ಹೇಗೆ ಇರುತ್ತೆ ನೋಡೋಣ. ಬ್ರ್ಯಾಕೆಟ್ಸ್ ಒಳಗೆ ಇರೋದು ಮನಸಿನ ಸತ್ಯವಾದ ಮಾತು


ಇಂಟರ್‌ವ್ಯೂವರ್: ಪ್ಲೀಸ್ ಕಮ್ ಮಿಸ್ಟರ್….


ನೀವು: ಥ್ಯಾಂಕ್ ಯು ವೆರೀ ಮಚ್. ( ಸ್ವಾಮಿ ಏಸೀ ಆನ್ ಮಾಡಿದ್ರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ? ಏನು ಅದರಲ್ಲೂ ಕಾಸ್ಟ್ ಕಟಿಂಗ್ ಗ? )





ಇಂಟರ್‌ವ್ಯೂವರ್: Can you tell me about your self?


ನೀವು: my self my name is…. I have done my Graduation from VTU…. Bla bla( ರೀ ಸ್ವಾಮಿ ನಿಂಗೆನು ಕಣ್ಣು ಕಾಣೋಲ್ವ? ರೆಸ್ಯೂಮೆ ನಿನ್ ಕೈಯಲ್ಲಿ ಇಟ್ಕೊನ್ಡು ಪೋಸ್ ಕೊಡ್ತಾ ಇದ್ದೀಯಾ? ಓದೋಕೆ ನಿಂಗೆನು ರೋಗ? ನಾನೇ ಬಾಯೀ ಬಿಟ್ಟು ಹೇಳ್‌ಬೇಕ? ಮುಚ್‌ಕೊಂದು ರೆಸ್ಯೂಮೆ ನೋಡು, ನಿಂಗೆ ಗೊತ್ತಾಗತ್ತೆ. )



ಇಂಟರ್‌ವ್ಯೂವರ್: You are working in a big company and your responsibility is also good there, then why are looking for a job change?

ನೀವು: Yes, you are right, but I am looking for some more responsibility, interested in people and client management. Etc etc bla bla..... ( ಅಲ್ಲ ಮಾರಾಯ, ನೀನು ಯಾವ ಕಾರಣಕ್ಕೆ ನಿನ್ ಹಳೆ ಕಂಪನೀ ಬಿಟ್ಟು ಇಲ್ಲಿ ಬಂದು ಸೇರಿದ್ಡೀಯೋ, ನಾನು ಅದೇ ಕಾರಣಕ್ಕೆ ಆ ಕಂಪನೀ ಬಿಡ್ತಾ ಇದ್ದೀನಿ. ಇನ್ನೂ ಸ್ಪೆಸಿಫಿಕ್ ಆಗಿ ಹೇಳ್‌ಬೇಕು ಅಂದ್ರೆ ಸ್ಯಾಲರೀ!!! )



ಇಂಟರ್‌ವ್ಯೂವರ್: ನಿಮ್ ಕಂಪನೀ ಗೆ ನೀವೇನೂ ಕೊಟ್ಟಿದ್ದೀರಿ ಮತ್ತೆ ನಮ್ಮಿಂದ ಏನು ಎಕ್ಸ್‌ಪೆಕ್ಟ್ ಮಾಡ್ತೀರಿ?

ನೀವು: ???? ( ಕಂಪನೀ ಗೆ ಕೋಡೋದ? ಪ್ರತಿ ದಿನ 10 ಗಂಟೆ ವರ್ಕ್ ಮಾಡ್ತೀನಿ… ವೀಕೆಂಡ್ ಕೂಡ ಇಲ್ಲ… ನಿಮ್ ಕಂಪನೀ ಇಂದ ನಾನು ಪ್ರತಿ ದಿನ 6 ಗಂಟೆ ಕೆಲ್ಸಾ, ವೀಕೆಂಡ್ ದೆವ್ರಾನೇ ಕೆಲ್ಸಾ ಮಾಡೋಲ್ಲ, 3 ತಿಂಗಳಿಗೆ ಗೆ ಒಂದು ಸಲ ಸ್ಯಾಲರೀ ಹೈಕ್, US ಗೆ ಆನ್‌ಸೈಟ್, ಒಳ್ಳೇ ಟೀಮ್, ನನ್ ಮೇಲೆ ಪ್ರೆಶರ್ ಹಾಕದೆ ಎಲ್ಲ ಕೆಲ್ಸಾ ನು ತಾವೇ ಮಾಡಿಕೊಳ್ಳೋ.. TL ಅಂಡ್ PM ಗಳು!!! )



ಇಂಟರ್‌ವ್ಯೂವರ್ : ನಿಮ್ ಮ್ಯಾನೇಜರ್ ಬಗ್ಗೆ ಹೇಳಿ

ನೀವು : he is really a wonderful person… bla bla(ಅವನೊಬ್ಬ ದೊಡ್ಡ ಮೂರ್ಕ, ಗಬ್ಬು, ಹತ್ತಿರ ಹೋದ್ರೆ ವಾಸನೆ ಬರುತ್ತೆ, ಮೊರು ಹೊತ್ತು ಕಿವಿ ಒಳಗೆ, ಮೂಗಿನ ಒಳಗೆ ಕೈ ಹಾಕ್ಕೊಂದು ಇರ್ತಾನೆ. ಸಿಕ್ಕಪಟ್ಟೆ ತಲೆ ನೋವು ಆ ಮ್ಯಾನೇಜರ್.)



ಇಂಟರ್‌ವ್ಯೂವರ್ : ನಿಮ್ colleagues??

ನೀವು: are really good and supportive( ಅವೇರೆಲ್ಲ ಮ್ಯಾನೇಜರ್ ಚೇಲ ಗಳು, ಸ್ಯಾಲರೀ ಹೈಕ್ ಗೆ, ಪ್ರಮೋಶನ್ ಗೆ ಅವನ ಹಿಂದೆ ಬಿದ್ದಿದ್ದಾರೆ, ಎಲ್ಲ ಸರಿ ಇದ್ದಿದ್ರೆ ನಾನ್ಯಾಕೆ ಕೆಲ್ಸಾ ಚೇಂಜ್ ಮಾಡಬೇಕು ಅಂತ ಇರ್ತಿದ್ದೆ???. )



ಇಂಟರ್‌ವ್ಯೂವರ್: ನೀವು ಫೇಸ್ ಮಾಡಿದ ಬಿಗ್ಗೆಸ್ಟ್ ಚ್ಯಾಲೆಂಜ್ ಯಾವುದು? ನೀವು : ( ತುಂಬಾ ಸಲ ಫೇಸ್ ಮಾಡಿದ್ದೀನಿ, GF ಗೆ ಮೂವೀ ಗೆ ಹೋಗೋಣ ಅಂತ ಪ್ರಾಮಿಸ್ ಮಾಡಿರ್ತೀನಿ, PVR ನಲ್ಲಿ ಟಿಕೆಟ್ ಕೂಡ ಸಿಕ್ಕಿರುತ್ತೆ, ಆದರೆ ಮ್ಯಾನೇಜರ್ ಬಂದು ಟಾರ್ಗೆಟ್ ಕೊಡ್ತಾನೆ… ಎಲ್ಲದನ್ನೂ ಮ್ಯಾನೇಜ್ ಮಾಡೋದು ದೊಡ್ಡ ಚ್ಯಾಲೆಂಜ್)



ಇಂಟರ್‌ವ್ಯೂವರ್: ನಿಮ್ ವೀಕ್ ನೆಸ್ ಏನು?

ನೀವು: Bla bla


( 1. ಹುಡುಗಿರು ಸಾರ್ ಹುಡುಗಿರು


2. ಕರೆಂಟ್ ಹೋದಾಗ ಟಾಯ್ಲೆಟ್ ಗೆ ಹೂಗೋಕೆ ಹೆದರಿಕೆ ಆಗುತ್ತೆ!! )



ಇಂಟರ್‌ವ್ಯೂವರ್: ನಿಮ್ಮ ಸ್ಯಾಲರೀ ಎಕ್ಸ್‌ಪೆಕ್ಟೇಶನ್ ಎಷ್ಟು? ನೀವು: ( ನಾನು ಕೇಳಿದಷ್ಟು ಕಂಡಿತಾ ಕೊಡೋಲ್ಲ, ಸೋ ನೀನು ಎಷ್ಟು ಕೊಡ್ತಿಯಾ ಮೊದ್ಲು ಬೊಗಳು) I expect minimum 50% hike on my current ctc


ಇಂಟರ್‌ವ್ಯೂವರ್:no.. that is very difficut, 20% I can give


ನೀವು: no.. 20% is very less…


ಇಂಟರ್‌ವ್ಯೂವರ್: ok ok, according to our company rules n regulations… ನಾನು ೨೫% ಕೊಡಬಲ್ಲೆ..


ನೀವು: no.. 25 also very less, I wl get appraisal next month


ಇಂಟರ್‌ವ್ಯೂವರ್: I had discussed with that technical panel, your performance is good, so we offer you 35% is hike… and it is the maximum


ನೀವು: ಓಕೇ, ಓಕೇ… ಥ್ಯಾಂಕ್ ಯೂ ವೆರೀ ಮಚ್(ನಾನು ನನ್ ಸ್ಯಾಲರೀ ನ ಆಲ್‌ರೆಡೀ 40% ಹೈಕ್ ಮಾಡಿ ನೇ ನಿಮ್ಗೆ ಹೇಳಿದ್ದು, ಸೋ ಒಳ್ಳೇ ಪ್ಯಾಕೇಜ್ ಸಿಗುತ್ತೆ …. )



ಇಂಟರ್‌ವ್ಯೂವರ್: how soon you can us?


ನೀವು: as soon as possible.


( ಇನ್ನೂ 3-4 ಒಳ್ಳೊಳ್ಳೇ ಕಂಪನೀ ಗಳ ಇಂಟರ್‌ವ್ಯೂ ಪ್ರೋಸೆಸ್ ನಲ್ಲಿ ಇದೆ, ಅವರ ಸ್ಯಾಲರೀ ನೋಡಿ ನಿಮ್ಗೆ ಹೇಳ್ತೀನಿ )



ಇಂಟರ್‌ವ್ಯೂವರ್: ಥ್ಯಾಂಕ್ ಯೂ, all the best, ನಿಮ್ಗೆ ಈಮೇಲ್ ಮಾಡಿ ಆಫರ್ ಲೆಟರ್ ಕಳಿಸ್ತೀನಿ. ನೀವು: ಒಹ್ಹ್ ಥ್ಯಾಂಕ್ ಯೂ ( ಬೇಗ ಕಳಿಸು, ನಾನು ಆಲ್‌ರೆಡೀ ರಿಸೈನ್ ಮಾಡಿದ್ದೀನಿ)



ನಾನು ಕೂಡ ಈ ತರದ ಸುಳ್ಳು ಹೆಳೀನೇ ಕೆಲಸ ಚೇಂಜ್ ಮಾಡಿದ್ದೂ, ಸೊ ಹೆದರದೆ ಬಾಯಿಗೆ ಬಂದಷ್ಟು ಸುಳ್ಳು ಹೇಳಿ ಕೆಲಸ ಗಿಟ್ಟಿಸಿ!!!.

(ಷರತ್ತು ಗಳು ಅನ್ವಯ : ಜಾಸ್ತಿ ಸುಳ್ಳು ಹೇಳಿ ಕೆಲಸ ಕಳೆದು ಕೊಂಡರೆ ಅದಕ್ಕೆ ನಾನು ಜವಾಬ್ದಾರ ನಲ್ಲ )

5 comments:

Charan Mithun said...

:-) Chennagide chenagide...

Chandru said...

ಮಗ ಸಕ್ಕಥಾಗಿದೆ. ಅದು ಸರಿ ನೀನು ಎಲ್ಲ ಕೆಲಸ ಹೇಗೆ ಥಗೊಂದಿರೋದು ಅನ್ನಿಸುಥೆ !.. ಮುಂದಿನ ಇಂಟರ್ವ್ಯೂ ಯಾವಾಗ ?

ಬಾಲು said...

@Mithun: Dhanyavadagalu

@Chandru: illi fire aagokintha chur munche next interview... :)

Unknown said...

sakatagide ri.
infact nangu sullu helo time hatra bartide :)

ಬಾಲು said...

@Vishwanath: sullu helodikke sahaya, salahe beke?