Thursday, October 9, 2008

ರೆಸಿಗ್ನೇಶನ್ ಲೆಟರ್ ಬರೆಯೋದು ಹೇಗೆ?

ಹಲವಾರು ಜನ ಅಗಾಗ ಕೇಳ್ತಾ ಇರ್ತಾರೆ, ರೆಸಿಗ್ನಶನ್ ಲೆಟರ್ ಹೇಗೆ ರೆಡಿ ಮಾಡೋದು ಅಂತ. ಅದ್ದರಿಂದ ಇಲ್ಲಿ ಕೆಳಗೆ ಕೆಲವು ಕ್ರಿಯೇಟಿವ್ ರಾಜಿನಾಮೆ ಪತ್ರ ಗಳ ಮಾದರಿ ಕೊಟ್ಟಿರುವೆ. ನೀವು ಉಪಯೋಗಿಸಿ ಕೊಳ್ಳ ಬಹುದು.


ಮಾದರಿ ಒಂದು.


------------------------------------------------------------------


ಡಿಯರ್ ಬಾಸ್,


ನಾನು ಯಾಕೆ ರಿಸೈನ್ ಮಾಡ್ತಾ ಇದ್ದೀನಿ ಗೊತ್ತಾ?


ನಾನು ನಿಮ್ಮ ಕಂಪನೀ ಗಾಗಿ ಬಹಳ ಪ್ರಾಮಾಣಿಕ ವಾಗಿ ಕೆಲ್ಸಾ ಮಾಡ್ತಾ ಇದ್ದೇನೆ, ಹೀಗಾಗಿ ನನಗೆ ನನ್ ಬ್ಲಾಗ್ ಗೆ ಬರೆಯಲು ಸಮಯ ಸಿಗುತ್ತಾ ಇಲ್ಲ. ಬ್ಲಾಗ್ ಓದುಗರು ನನ್ನ ದ್ವೇಷಿಸ್ತ ಇದ್ದಾರೆ. ಓದುಗರು ದ್ವೇಷಿಸಲಿಕ್ಕೆ ಶುರು ಮಾಡಿದ ಮೇಲೆ ಅವರು ನನ್ನ ಬ್ಲಾಗ್ ಗೆ ಬರೋಲ್ಲ, ಅವರು ಬರದೇ ಇದ್ದಾರೆ ನನ್ನ ಹಿಟ್ ಕೌಂಟ್ಸ್ ಕಡಿಮೆ ಆಗುತ್ತದೆ. ಆವಾಗ ನಾನು ಬಹಳ ದುಃಖಿತ ನಾಗುತ್ತೇನೆ. ನನಗೆ ದುಃಖವಾದಾಗ ಹೆಚ್ಚಾಗಿ ತಿನ್ನಲು ಶುರು ಮಾಡುವೆ , ಹೆಚ್ಚು ತಿಂದರೆ ದೇಹದಲ್ಲಿ ಕೊಬ್ಬು ಶೇಕರಣೆ ಗೊಂದು ಡುಮ್ಮ ಆಗುವೆ, ಅದು ಕಂಪನೀ ಯ ಇಮೇಜ್ ಗೆ ತೊಂದರೆ ಆಗುತ್ತದೆ. ಆಗ ನಿಮ್ಮ ಬಿಸಿನೆಸ್ ಗೆ ತೊಂದರೆ ಆಗುತ್ತದೆ. ಬುಸಿನೆಸ್ಸ್ ಗೆ ತೊಂದರೆ ಆದರೆ ನೀವು ಕೂಡ ದುಃಖಿತರಾಗುತ್ತೀರಿ, ಪರಿಣಾಮವಾಗಿ ನೀವು ಕೂಡ ತುಂಬಾ ತಿನ್ನಲು ಶುರು ಮಾಡುತ್ತೀರಿ. ಆಮೇಲೆ ನೀವು ಕೂಡ ದಪ್ಪ ಆಗುತ್ತೀರಿ. ನನಗೆ ನಿಮ್ಮನ್ನು ಡುಮ್ಮಗೆ ಕಲ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.


ನೋಡಿ ಬಾಸ್ ಇದೊಂದು ದೊಡ್ಡ ವಿಷ ಚಕ್ರ, ನಾನು ಇಲ್ಲಿ ತನಕ ಕಂಪನೀ ಯ ಒಳಿತೆಗೆ ಕೆಲಸ ಮಾಡಿರುವೆ, ಈಗಲೂ ಒಳಿತಿಗಾಗಿ ಕೆಲಸ ಬಿಡುತ್ತಾ ಇರುವೆ.


ಆದ್ದರಿಂದ ನನಗೆ ಹೋಗಲು ಬಿಡಿ.


ನಿಮ್ಮ ಅತ್ಯಂತ ನಂಬುಗೆಯ ಹಾಗೂ ನಿಮ್ಮ ಹಿತೈಷಿ!!!


( ಸಹಿ)


------------------------------------------------------------------


ಮಾದರಿ ಎರಡು.


------------------------------------------------------------------


ಡಿಯರ್ ಬಾಸ್,


ನಿಮಗೆ ನೆನಪಿರಬಹುದು, ಎರಡು ತಿಂಗಳ ಹಿಂದೆ ನೇ ಹೇಳಿದ್ದೆ, ನನ್ನ ಸಂಬಳ ಜಾಸ್ತಿ ಮಾಡದೇ ಇದ್ದಲ್ಲಿ ಕೆಲಸ ಬಿಡುವೆ ಅಂತ. ಆದರೂ ನೀವು ಜಾಸ್ತಿ ಮಾಡಿಲ್ಲ. ಆದ್ದರಿಂದ ನಾನು ಕೆಲಸ ಬಿಡುತ್ತಾ ಇದ್ದೇನೆ. ನನಗೆ ಮತ್ತೊಂದು MNC ನಲ್ಲಿ ಶೇಕಡ ನೂರು ಹೈಕ್ ಸಿಕ್ಕಿದೆ, ಸತತ ಮೂರು ವರ್ಷ ಆನ್‌ಸೈಟ್ ಗೆ ಪ್ರಯತ್ನಿಸಿದರು ನಂಗೆ ಇಲ್ಲಿ ಅವಕಾಶ ಸಿಕ್ಕಲಿಲ್ಲ, ಆ ಕಂಪನೀ ಯಲ್ಲಿ ಆನ್‌ಸೈಟ್ ಅವಕಾಶಗಳು ವಿಫುಲ ವಾಗಿ ಇದೆ. ಅದು ಇಲ್ಲದೇ ಹೋದರೂ ಸ್ಯಾಲರೀ ಕುಶಿ ಕೊಡೋ ಅಷ್ಟು ಇದೆ. ಸೋ ಇಂದಿಗೆ ಸರಿಯಾಗಿ ಒಂದು ತಿಂಗಳ ನಂತರ ನನ್ನನ್ನು ರಿಲೀವ್ ಮಾಡಿ.


ನಿಮ್ಮನ್ನು ಆ ದಯಾಮಯ ನಾದ ಭಗವಂತನು ಸದಾ ಕಾಪಾಡಲಿ.


ಇಂತೀ ನಿಮ್ಮಿಂದ ಸತತ ಮೂರು ವರ್ಷ ದೌರ್ಜನ್ಯಕ್ಕೆ ಒಳಗಾದ ಅಮಾಯಾಕ ನೌಕರ!!


( ಸಹಿ)


------------------------------------------------------------------


ಮಾದರಿ ಮೂರು.


------------------------------------------------------------------


ಡಿಯರ್ ಬಾಸ್,


ಇದು ನನ್ನ ರಾಜೀನಾಮೆ ಪತ್ರ.


ದನ್ಯವಾದಗಳು


(ಸಹಿ)


------------------------------------------------------------------


ಮಾದರಿ ನಾಲ್ಕು.


-----------------------------------------------------------------

ಸಧ್ಯದಲ್ಲೇ ನಾನು ಕೆಲಸ ಬಿಡಬೇಕಾಗಿ ಬರಬಹುದು, ಅಥವಾ ಅವರೇ ಒಡಿಸ ಬಹುದು... ಸೊ ಕೊನೆಯ ಮಾದರಿಯನ್ನು ಕೊಡೋಣ ಅಂಥ ಇದ್ದೇನೆ!!! ಎನಂತಿರಿ?

3 comments:

Veena said...

Helloo Shashtry, even i too liked ur last option...probably even i'll use it... :D thank you for the idea....!!!

shivu K said...

ಶಾಸ್ತ್ರಿ ಸಾರ್, ನಿಮ್ಮ ರಾಜಿನಾಮೆ ಪತ್ರಗಳು ನಿಜಕ್ಕೂ ಟೈಮ್ ಪಾಸ್ ಕಡ್ಲೆಕಾಯಿಯೇ ಸರಿ ಓಳ್ಳೇ ಮಜ ಇದೆ.
ಧನ್ಯವಾದಗಳು.

ಶಿವು.ಕೆ

Lakshmi S said...

4th one sakathaagide. very real...

Thanks for such brilliant ideas.