Saturday, October 25, 2008

ಚಂದಿರ ನ ಬಗ್ಗೆ.... ದೂರಾಲೋಚನೆ!!!

ನಾನು ಬ್ಲಾಗ್ ಕಡೆ ತಲೆ ಹಾಕದೆ ೨ ವಾರ ಆಗಿತ್ತು!! ಯಾಕೆ ಅಂದ್ರೆ ಇಸ್ರೋ ದವರು ಚಂದಿರನ ಹತ್ತಿರ ಉಪಗ್ರಹ ಬಿಟ್ಟ ಹಾಗೆ ನಾವು ಸೂರ್ಯನ ಬಳಿಗೆ ಮಾನವ ಸಹಿತ ನೌಕೆ ಯನ್ನು ಕಳಿಸುವ ಯೋಜನೆ ಯನ್ನು ಹಂಮಿಕೊಂಡಿದ್ದಿವಿ, ಆದರೆ ಕೊನೆಯ ಸಮಯ ದಲ್ಲಿ ಕೆಲವು ಧಾರ್ಮಿಕ ಕಾರಣ ಗಳು ಅಡ್ಡ ಬಂದು ಯೋಜನೆಯನ್ನೇ ನಿಲ್ಲಿಸ ಬೇಕಾಯಿತು. ( ಸೂರ್ಯ ಕಣ್ಣಿಗೆ ಕಾಣೋ ದೇವರು, ಹಾಗೆಲ್ಲ ಪ್ರಯೋಗ ಮಾಡೋಕೆ ಹೋಗಬಾರದು ಅಂಥ ಮಠದಿ ಪತಿಗಳು ಅಡ್ಡಿ ಪಡಿಸಿದರು, ಅದೆಲ್ಲೋ ವ್ಯಟಿಕಾನ್ ನಲ್ಲಿ ಕೂತಿರೋ ವೃದ್ದ ಪೋಪ್ ಹಿಂದೂ ಗಳು ದೇವರ ಹತ್ತಿರ ಡೈರೆಕ್ಟ್ ಹೋಗಿ ಬಿಟ್ಟರೆ ಅಂತ ಹೆದರಿ , ಅವರ ಮತದ ದೇವರ ಹಾಗು ಜನರ ಮದ್ಯೆ ಇರುವ ಮಧ್ಯವರ್ತಿಗೆ ಬೆಲೆ ಇಲ್ಲ ಆಗುತ್ತೆ ಅಂಥ ಅವರು ಬೆದರಿಕೆ ಹಾಕಿದರು.... ). ಒಟ್ಟಿನಲ್ಲಿ ನಮ್ಮ ಸೂರ್ಯ ಯಾನ - ೧ ಕ್ಕೆ ತೊಂದರೆ ಆಗಿ ಪ್ರಯೋಗವನ್ನೇ ನಿಲ್ಲಿಸಬೇಕಾಯಿತು.

ಆದರೇನು ಇಸ್ರೋ ದವರ ಪ್ರಯೋಗದ ದಿಂದ ಚಂದ್ರನಲ್ಲಿ ಏನೆಲ್ಲಾ ಇವೆ, ಅದರಿಂದ ಏನೆಲ್ಲಾ ಪ್ರಯೋಜನ ಇದೆ ಅಂತ ಲೆಕ್ಕ ಹಾಕಲಿದ್ದಾರೆ. ಅಲ್ಲೂ ಕಬ್ಬಿಣ ಮುಂತಾದ ಲೋಹ ಗಳು ಸಿಗುತ್ತೆ ಅನ್ನುವುದಾದರೆ ನಮ್ಮ ಗಣಿ ಧಣಿ ಗಳು ಅಲ್ಲೂ ಮೈನಿಂಗ್ ಮಾಡಿ ಚೀನಾ ಕೆ ಕಳಿಸುವ ಯೋಜನೆ ಹಾಕಿದ್ದರಂತೆ. ಬೆಂಗಳೂರಿನಲ್ಲಿ ಇರೋ ಬರೊ ಕೆರೆ ನೆಲ್ಲ ನುಂಗಿರುವ ನಮ್ಮ ರಿಯಲ್ ಎಸ್ಟೇಟ್ ನಾಯಕರು ಅಲ್ಲಿ ಭೂಮಿ ಕೊಳ್ಳೋ ಪ್ಲಾನ್ ಮಾಡಿದ್ದರೆ ಅಂತ ವರದಿ ಇದೆ. ಆದರಿಂದ ಭವಿಷ್ಯದಲ್ಲಿ ಮಕ್ಕಳಿಗೆ ಊಟ ಮಾಡಿಸ ಬೇಕಾದರೆ ಚಂದಿರನ ತೋರಿಸ ಬೇಕಾದರೂ ಟ್ಯಾಕ್ಸ್ ಕಟ್ಟ ಬೇಕಾಗಬಹುದು.

ಚಂದ್ರ ಯಾನ ಯಶಾಸ್ಸಾಗಿ, ಅಲ್ಲೂ ಮಾನವ ವಾಸ ಶುರು ಆದರೆ, ಗೌಡರು ತಮ್ಮ ಎರಡನೆ ಮಗನನ್ನು ಅಲ್ಲಿ ಮುಖ್ಯ ಮಂತ್ರಿ ಮಾಡುವ ಆಲೋಚನೆ ಇದೆ ಅಂತೆ. ಇನ್ನೂ ಲಾಲು ಅಲ್ಲಿನ ರಿಕ್ರೂಟ್ ಮೆಂಟ್ ಗೆ ಬಿಹಾರ ದಿಂದ ಚಂದ್ರ ನಿಗೆ ರೈಲು ಬಿಡವ ಯೋಜನೆ ಹಾಕಿದ್ದು, ರಾಜ್ ಟಾಕ್ರೆ ಅದನ್ನು ವಿರೋಧಿಸಿ ಮುಂಬೈ ಬಂಧ್ ಮಾಡಲು ಕರೆ ಮುಂದಾಗಿದ್ದಾರೆ. ಇನ್ನು ಉಳಿದ ನಾಯಕರು ಗಳಿಗೆ ಈ ಯೋಜನೆ ಯ ಬಗ್ಗೆ ಅಷ್ಟಾಗಿ ಆಸಕ್ತಿ ಇದ್ದಂತಿಲ್ಲ. ಇಸ್ರೋ ದವರು ಬಿಟ್ಟಿದ್ದು, ಉಪಗ್ರಹವೋ, ಕ್ಶಿಪಣಿಯೊ ಅನ್ನೋದು ಗೊತ್ತಿಲ್ಲ ಅನ್ಸುತ್ತೆ, ಅವರೆಲ್ಲ ಪೋಲೀಸ್ ರನ್ನ ಟ್ರಾನ್ಸ್ಫರ್ ಮಾಡೋದ್ರಲ್ಲಿ, ಮುಂದಿನ ಬೈ ಎಲೆಕ್ಶನ್ ಗೆ ಹೆಂಡ ಹಂಚೋಡ್ರಲ್ಲಿ ಬ್ಯೂಸಿ ಇದ್ದಾರೆ ಅಂತ ಕಾಣಿಸುತ್ತಾ ಇದೆ.

ಮುಂದೊಂದು ದಿನ ಹಚ್ ನಾಯಿ ಗಗನ ಯಾನಿ ನ ಅಟ್ಟಿಸಿ ಕೊಂಡು ಹೋಗುತ್ತಿರುವ ಜಾಹಿರಾತು ಬರಬಹುದು. ನೀವು ಚಂದಿರನ ಬಳಿ ಹೋದರೂ ನಮ್ಮ ನೆಟ್‌ವರ್ಕ್ ಇರುತ್ತೆ ಅಂತ ಅವರು ಹೇಳಬಹುದು. ಮೈಕ್ರೋಸಾಫ್ಟ್ ನವರು ವಿಂಡೊಸ್ ಮೂನ್ ಎಡಿಶನ್ ತರಬಹುದು. ಟಾಟಾ ದವರು ಅಲ್ಲಿ ನ್ಯಾನೋ ಬದಲು ಮೂನೋ ಅನ್ನೋ ಕಾರು ತರುವ ಎಲ್ಲ ಸಾಧ್ಯತೆ ಇದೆ.

ಒಂಟಿ ಕೊಪ್ಪಲ್ ಪಂಚಾಂಗ ಮಂದಿರದಲ್ಲಿ ಚಂದ್ರ ನಿಗೆ ಅಂತೇಲೆ ಬೇರೆ ಪಂಚಾಗ ಬರುವ ಸಾದ್ಯಾತೆಯನ್ನು ಅಲ್ಲ ಗೆಳೆಯುವಂತಿಲ್ಲ. ಶ್ರೀ ಶ್ರೀ ಶ್ರೀ ----- ಸ್ವಾಮಿ ಗಳು ಅಲ್ಲೊಂದು ಮಠ ಮಾಡಲು ಶಿಷ್ಯ ರನ್ನು ಹುಡುಕುತ್ತಾ ಇದ್ದಾರಂತೆ. ಈ ಬಗ್ಗೆ ವಿಸ್ರುತ ವರದಿಗೆ ಹಾಯ್ ಬೆಂಗಳೂರ್ ಮುಂದಿನ ದಿನಗಳಲ್ಲಿ ನೋಡಬಹುದು.

ಏನೇ ಆಗಲಿ ಚಂದ್ರ ಭೂಮಿ ತರ ಆದರೆ, ಕವಿ ಗಳಿಗೆ ಹೋಲಿಕೆಗೆ ಕಷ್ಟ ವಾಗಬಹುದು. ಚಂದ್ರ ಮುಖಿ ಅನ್ನೋದು ನಾಪತ್ತೆ ಆಗಬಹುದು. ಪ್ರೇಮಿಗಳಿಗೆ ಚಂದ್ರ ಈಗಿನಷ್ಟು ರೊಮ್ಯಾಂಟಿಕ್ ಆಗದೆ ಹೋಗಬಹುದು.!!!!!

2 comments:

varun said...

maga shas3, chandra lokakke hodavaru amavase dena alle erthare.

preethi said...

nice writing.