Tuesday, October 28, 2008

ಸಾಯುವ ಸುಲಭ ಮಾರ್ಗಗಳು!!


ನೋಡಿ ಬದುಕು ಸಿಕ್ಕಾಪಟ್ಟೆ ಕಷ್ಟ ಆಗಿದೆ, ಆಫೀಸ್ ಹೋದ್ರೆ ಮ್ಯಾನೇಜರ್ ಗಳು ಅನ್ನೋ ಅನ್ಯ ಗ್ರಹ ಜೀವಿಗಳ ಕಾಟ, ರಸ್ತೇಲಿ ನಡಕೊಂಡು ಹೊರಟರೆ ಸಾಲ ಗಾರರ ಕಾಟ, ಮನೆಗೆ ಹೋದ್ರೆ ಹೆಂಡತಿ ಕಾಟ, (ಮದುವೆ ಆಗಿಲ್ಲದೇ ಇದ್ರೆ ಗರ್ಲ್ ಫ್ರೆಂಡ್.. ಫೋನ್ ನಲ್ಲಿ) ಯಾರು ಇಲ್ಲ ಅಂದ್ರೆ ಮತ್ತದೇ ಹಳೆ ಗೆಳಯರ ಜೊತೆ, ಯಾವತ್ತು ಕೇಳಿದ ಜೋಕು ಅದೇ ಬಾರು, ಏನು ಬದಲಾವಣೆ ನೆ ಇಲ್ಲ.
ಮಾರ್ಕೆಟ್ ತೀರ ಕುಸಿದು ಹೋಗಿದೆ, ನೀನು ಮನೆಗೆ ಹೋಗಪ್ಪ ಅಂತ ಮ್ಯಾನೇಜರ್ ಹೇಳ್ತಾನೆ, ಮನೇಲಿ ಹಬ್ಬಕ್ಕೆ ಏನು ಗಿಫ್ಟ್ ಕೊಡ್ತಿರಿ ಅಂತ ಕೇಳ್ತಾಳೆ? ಬದುಕು ಎಷ್ಟು ಬರಬಾತ್ ಅಲ್ವ? ನಮ್ಮ ಕರ್ಮಕ್ಕೆ ಜೀವನ ಬೇಜಾರ್ ಆಗಿದೆ ನಾನು ಸಾಯ್ತೀನಿ ಅಂತ ಹೇಳೋದು ಕೂಡ ತಪ್ಪೆ, ಅಕಸ್ಮಾತ್ ಜೀವ ಹೋಗಲಿಲ್ಲ ಅಂದ್ರೆ ಸೆರೆಮನೆ ಗೆ ಹೋಗಬೇಕು!!!
ನಂಗಂತೂ ಅ ನೇಣು, ವಿಷ, ರೈಲಿನ ಕೆಳಗೆ ತಲೆ ಕೊಡೋದು.. ಎಲ್ಲ ಹಳೆದು ಅಂತ ಅನ್ನಿಸ್ತ ಇದೆ. ಸಾಯೋಕೆ ಏನಾದ್ರು ಹೋಸ ಐಡಿಯಾ ಇದೆಯಾ ಅಂತ ಯೋಚಿಸಿದಾಗ ತಿಳಿದವು ಇಷ್ಟು. (ನಾನೇನು ಪ್ರಯೋಗ ಮಾಡಿ ಇದನ್ನ ಹೇಳ್ತಿಲ್ಲ, ನಾನು ಇನ್ನು ಜೀವಂತ ಇದ್ದೀನಿ. ದಿವಂಗತ ಆಗಿಲ್ಲ. ಇದು ಸಾಯೋ ಮಾರ್ಗ ಗಳು ಅಷ್ಟೆ.)


೧. ನೀವು ಕನ್ನಡ ಅಭಿಮಾನಿ ಆಗಿದ್ದರೆ, ಸತತ ವಾಗಿ ಉದಯ ಟಿವಿ ನೋಡಿ, ಅವರ ಕೆಟ್ಟ ಕನ್ನಡ ನೋಡಿ, ನಿಮ್ಮ ಆತ್ಮ ನೊಂದು ದೇಹ ದಿಂದ ಹೊರ ಹೋಗುತ್ತೆ!!!
೨. ದೂರದರ್ಶನ್ ಹಾಕಿ, ಲೋಕ ಸಭಾ ಕಾರ್ಯ ಕ್ರಮ ನೋಡಿ, ನಿಮ್ಮ ಹಣ ಹೇಗೆ ಪೋಲು ಆಗುತ್ತಾ ಇದೆ ಅಂತಅ ತಿಳಿದು ನಿಮಗೆ ಬೇಸರ ಆಗಿ, ಬೇಸರ ಜಿಗುಪ್ಸೆ ಆಗಿ, ಅದು ಪ್ರಾಣಂತಿಕ ಆಗುತ್ತೆ.
೩. ನಿಮ್ಮ ಇರೋ ಬಾರೋ ಆಸ್ತಿ ನೆಲ್ಲ ಮಾರಿ ಷೇರು ಮಾರುಕಟ್ಟೆ ಲಿ ಹಾಕಿರಿ. ( ಇಗ ಮಾರುಕಟ್ಟೆ ತುಂಬ ಚೆನ್ನಾಗಿದೆ) ನಿಮ್ಮ ಹಣ ತಕ್ಷಣ ತಿರುಪತಿ ಹುಂಡಿ ಗೆ ಸೇರುತ್ತೆ.. ನಿಮಗೆ ಕಂಡಿತ ಹಾರ್ಟ್ ಅಟ್ಯಾಕ್ ಆಗುತ್ತೆ!!!
೪. ನಿಮ್ಮ ತಲೆ ಕೆರಕೊಂಡು, ಸಣ್ಣಕೆ ಗಾಯ ಮಾಡಿಕೊಂಡು ಸರ್ಕಾರೀ ಹಾಸ್ಪಿಟಲ್ ಸೇರ್ಕೊಳ್ಳಿ, ಅವರು ಕೊಡೊ ಔಷಧಿ ಇಂದ ಯಾವುದಾದರು ೭ ದೊಡ್ಡ ಆಗಿ, ರಸಿಗೆ ಆಗಿ, ಕೊನೆಗೆ ಡಾಕ್ಟರ್ ನಿಮ್ಮ ತಲೆ ನೆ ತೆಗಿಬೇಕು ಅಂತಾರೆ. ( ಮುಂಗಾರು ಮಳೆ ಕೃಪೆ)
೫. ನಮ್ಮ ಆಫೀಸ್ ಅಡ್ರೆಸ್ ಕೊಡ್ತಿನಿ, ಬಂದು ನಮ್ ಟಿಮ್ ಸೆರ್ಕೊಳ್ಳಿ ಕಂಡಿತಾ ನೀವು ಭಗವಂತ ನ ಪಾದ ಸೇರ್ತಿರ. ( ನಾನು ಹೇಗೆ ಬದುಕಿದ್ದೇನೆ ಅನ್ನೋದು ನಂಗೆ ಗೊತ್ತಾಗ್ತಾ ಇಲ್ಲ... ಪಾಪಿ ಚಿರಾಯು ಅನ್ಸುತ್ತೆ)
೬. ನೀವು ಸಿಕ್ಕಪಟ್ಟೆ ಪ್ರಾಮಾಣಿಕವಾಗಿ ಯಾರನ್ನಾದರೂ ಪ್ರೀತಿಸಿ... ಆಮೇಲೆ ದಿನ ಸಾಯ್‌ತನೆ ಇರ್ತೀರ. ( ಇದು ಮಾತ್ರ ಅನುಭವ ಹೊಂದಿದವರ ಮಾತು.)7. ಇಷ್ಟೆಲ್ಲಾ ಮಾಡಿನು ನೀವು ಇನ್ನು ಬದುಕೇ ಇದ್ದಿರೋ... ಏನು ಚಿಂತಿಸ ಬೇಡಿ. ನೀವು ಬೆಂಗಳೂರಲ್ಲಿ ಮಳೆ ಬಂದಾಗ, ನೀರೆಲ್ಲ ರಸ್ತೆ ಮೇಲೆ ಹರೀತ ಇರೋವಾಗ, ನೀವು ರಸ್ತೆ ಮೇಲೆ ಓಡಾಡಿ, ನೀವು ನೀರಲ್ಲಿ ಕೊಚ್ಚಿ ಹೋಗೋ ಸಾದ್ಯತೆ ಇರುತ್ತದೆ, ಇಲ್ಲವೇ ಯಾವುದಾದರೂ ಮ್ಯಾನ್ ಹೋಲ್ ನಲ್ಲಿ ಬೀಳುವ ಸಾಧ್ಯತೆ ಇದೆ.

ಸೂಚನೆ: ಈ ಮಾರ್ಗಗಳನ್ನ ಅನುಸರಿಸಿ ನೀವು ದೆವ್ವ ಆಗಿ ಬಂದು ನನ್ನ ಗೋಳು ಹೋಯಕೋ ಬೇಡಿ!!!

6 comments:

Arun K R said...

Enta saavu maaraya nindu....

Chands said...

ನೀವು ಯಾವುದಾದರು ಕ್ರೆಡಿಟ್ ಕಾರ್ಡ್ ತಗೊಂಡಿದ್ರೆ ಅದರ ಬಿಲ್ ಪೆ ಮಾಡದೇ ಇದ್ದರ , ತೆಲೆಕಾಲೆರ್ಸ್ ಫೋನ್ ಮಾಡಿ, ಮಾಡಿ, ಮತ್ತು ನಿಮ್ಮ ಮನೆಗೆ ಆಫೀಸಿಗೆ ಆ agents ಬಂದು ಬಂದು, ಅವರ tarture ತಾಳಲಾರದೆ, ಹಿಂಸೆ ಪಟ್ಟು ಹಾಗೆ ಬ್ಯಾಂಕ್ ಮುಂದೆ ಆತ್ಮಹತ್ಯ ಮಾಡ್ಕೋ ಬಹುದು.

shivu K said...

ಬಾಲು,
ಏನ್ರೀ ಹೀಗೆ ಬರೆದಿದ್ದೀರಿ. ನಿಮ್ಮ ಸಹವಾಸ ಬೇಡಪ್ಪ! ಅದ್ರೂ ನೀವೂ ಹೇಳಿದಂಗೆ ಎಲ್ಲಾ ಮಾಡಿದ್ರೂ ನನಗೇ ಏನೂ ವರ್ಕೌಂಟ್ ಆಗಲಿಲ್ಲ. ಬದುಕಿ ಉಳಿದಿದ್ದಕ್ಕೆ ಬ್ಲಾಗಿನಲ್ಲಿ ಬರಿತ್ತಿದ್ದೀನಿ. ನೋಡೋಣ ಇದರಿಂದೇನಾದ್ರು ಸಾದ್ಯನಾ ಅಂತ !

ವಿಕಾಸ್ ಹೆಗಡೆ said...

ಉದಯ ಟಿ.ವಿ ಹಳೇದಾಯ್ತು ಗುರು . ಈಗ ಟಿ.ವಿ ೯ ನೋಡ್ಬೇಕು.

Jayanthi jyothi said...

ನನಗೆ ಇಷ್ಟ ಆಯ್ತು... ನನ್ನ ಪರಿಸ್ಥಿತಿನು ಹಾಗೆ ಆಗಿದೆ... ವ್ಯತ್ಯಾಸ ಅಂದರೆ ನಾನು ಹುಡುಗಿ ಹೆಂಡ್ತಿ ಕಾಟ ಇಲ್ಲ.. ಗಂಡನ ಕಾಟ ಇಲ್ಲಾ... ಜನಗಳ ಕಾಟ ಜಾಸ್ತಿ ಆಗಿದೆ.. ನೆಮ್ಮದಿ ಇಲ್ಲದಂತಾಗಿದೆ...

Jayanthi jyothi said...

ನನಗೆ ಇಷ್ಟ ಆಯ್ತು... ನನ್ನ ಪರಿಸ್ಥಿತಿನು ಹಾಗೆ ಆಗಿದೆ... ವ್ಯತ್ಯಾಸ ಅಂದರೆ ನಾನು ಹುಡುಗಿ ಹೆಂಡ್ತಿ ಕಾಟ ಇಲ್ಲ.. ಗಂಡನ ಕಾಟ ಇಲ್ಲಾ... ಜನಗಳ ಕಾಟ ಜಾಸ್ತಿ ಆಗಿದೆ.. ನೆಮ್ಮದಿ ಇಲ್ಲದಂತಾಗಿದೆ...