Monday, June 22, 2009

ಸ್ಲಿಮ್ ಆಗೋ ಮಾರ್ಗಗಳುತೆಳ್ಳಗೆ ಸುಂದರವಾಗಿ , ಅರೋಗ್ಯ ವಾಗಿ ಇರಬೇಕೆಂದು ಯಾರಿಗೆ ಆಸೆ ಇರೋಲ್ಲ ಹೇಳಿ. ಆದ್ರೆ ಮೂರು ಹೊತ್ತು ಕಂಪ್ಯೂಟರ್ ಮುಂದೆ ಕೂತ್ಹೋ , ಅಥವಾ ಫೈಲೇ ಹಿಡ್ಕೊಂಡು ಕೂತಿದರ ಪಲ್ಹವೋ ... ಬಹು ಪಾಲು ಜನರಿಗೆ ಡೊಳ್ಳು ಹೊಟ್ಟೆ !!! ಕೆಲವರಂತು ಒಳ್ಳೆ 9 ತಿಂಗಳ ಬಸರಿ ತರ ಕಾಣ್ತಾರೆ !!! ಅದೇ ವಿಚಾರವಾಗಿ ಇಂಟರ್ನೆಟ್ ಸರ್ಫ್ ಮಾಡಿದೆ ಅಲ್ಲಿ ತಿಳಿಸಿದ ಮಾರ್ಗಗಳು ನನಗೆ ಭಯಾನಕ ಅನ್ನಿಸಿದವು, ಮಾಡಲು ಸಾದ್ಯನಾ ಅನ್ನಿಸ್ದ್ವು.ಕಾಲೇಜ್ ದಿನಗಳಲ್ಲಿ ಮಿಂಚಿನ ಬಳ್ಳಿ ತರ ಇದ್ದ ನಾನು, ಈಗ ಆನೆ ಮರಿ ಥರನೆ ಆಗಿದ್ದೀನಿ (ಅನೆ ಮರಿ ಅಲ್ಲ, ಅದಕ್ಕೂ ಜಾಸ್ತಿ) ಮೊದಲು ಮನೆಲ್ಲಿ ವಾಶಿಂಗ್ ಮಷಿನ್ ಇರಲ್ಲಿಲ್ಲ , ಮನೆಗೆ ಕೆಲಸಕ್ಕೆ ಕೆಲಸದವರು ಇರಲಿಲ್ಲ್ಲ , ಅಂಗಳಕ್ಕೆ ಆಳು ಇರಲಿಲ್ಲ , ಗಂಗಳ ತೊಳೊಯೊಕ್ಕೆ ಯಾರು ಬರ್ತಿರಲಿಲ್ಲ ...
ಈಗ ?... ಹೇಳೋ ಅವಶ್ಯಕತೆ ಇಲ್ಲ ಅರ್ಥ ಆಗಿರ ಬೇಕಲ್ಲ. ಏನು ಕೆಲಸ ಮಾಡದೆ ತೆಳ್ಳಗೆ ಆಗು ಅಂದ್ರೆ ದೇಹ ಕೇಳುತ್ತಾ? ಹೋಗಲಿ ಡಯೆಟ್ ಮಾಡೋಣ ಅಂದ್ರೆ ನಾಲಿಗೆ ಸುಮ್ಮನಿರುತ್ತ ? ಹೊಟ್ಟೆ ಕಟ್ಟಿದೆ, ಯೋಗ ಶುರು ಮಾಡಿದೆ, ಒಂದೆರಡು ಕೆಜಿ ತೂಕನು ಕಮ್ಮಿ ಆಯಿತು ....ಆಮೇಲೆ ಸೋಮಾರಿ ತನ. ಹಿಂಗಿರೋವಾಗ ತೆಳ್ಳಗೆ ಆಗೋದು ಹೇಗೆ? ಇದು ನನ್ನದೊಬ್ಬಳ ಸಮಸ್ಯೆ ಅಲ್ಲ, ಬಹು ಪಾಲು ಜನರದ್ದು . ಇದೊಂದು ಸಾರ್ವತ್ರಿಕ ಸಮಸ್ಯೆ ಆದುದರಿಂದ ಸುಲಭಕ್ಕೆ ತೆಳ್ಳಗೆ ಆಗೋ ಉಪಾಯಗಳನ್ನೂ ಕೊಟ್ಟಿರುವೆ . ಆಸಕ್ತರು , ನಡೆದಾಡುವ ಮಾಂಸ ಪರ್ವತ ಗಳು ಉಪಯೋಗಿಸ ಬಹುದು ......

1) ಜೋಗ್ಗಿಂಗ್ ಮಾಡೋಕೆ ಸೋಮಾರಿತನ ಇದ್ರೆ .. ಸುಮ್ನೆ ರಸ್ತೆ ಲಿ ಹೋಗೋವಾಗ ಬೀದೀಲ್ಲಿ ಇರೋ ನಾಯಿ ಗಳಿಗೆ ಕಲ್ಲು ಹೊಡಿರಿ ...


2) ಸದಾ ಚಿಂತೆ ಮಾಡುತ್ತಿರಿ. ..ಸದಾ ಚಿಂತಾಕ್ರಾಂತರಾಗಿ , ದೇಶದ ಬಗ್ಗೆ ಯೋಚಿಸಿ, ನಿಮ್ಮ ಮ್ಯಾನೇಜರ್ ಗಳ ಬಗ್ಗೆ ಯೋಚಿಸಿ, ಮನೆ ಮತ್ತೆ ವರ್ಕ್ ಬ್ಯಾಲೆನ್ಸ್ ಬಗ್ಗೆ, ಬ್ಯಾಂಕ್ ಬ್ಯಾಲೆನ್ಸ್ ಬಗ್ಗೆ ಯೋಚಿಸಿ, ಇತ್ಯಾದಿ .....ಹಸಿವು ನಿದ್ದ ಏನೂ ತಿಳಿಯೋಲ್ಲ .... ಸೊ ತಿಂಗಳೊಳಗಾಗಿ ನೀವು ಸ್ಲಿಮ್ ಅಂಡ್ ಟ್ರಿಂ (ಬದುಕಿದ್ದರೆ )3) ನಿಮ್ಮ ಹತ್ತಿರ ದುಡ್ಡು ಇದೆ ಅಂತ ತಿಳಿದರೆ ಯಾರಾದರೊಬ್ಬರು ಸಾಲ ಕೇಳೆ ಕೇಳುತ್ತಾರೆ ಹಾಗಿರ ಬೇಕಾದರೆ, ನೀವು ಕಿತ್ತೋದ ಒಬ್ಬನಿಗೆ ಸಾಲ ಕೊಡಿ ಅದರ ವಸೂಲಿಗೆ ಅವನನ್ನು ಅಟ್ಟಿಸಿ ಕೊಂಡು ಹೋಗಿ !! ಇದರಲ್ಲಿ ರಿಸ್ಕ್ ಇದೆ ಆದ್ರೆ ದುಡ್ಡಿನ ವಸೂಲಿ ಮಾಡೋ ನೆಪದಲ್ಲಿ ನೀವು ತೆಳ್ಳಗಾಗೊದ್ರಲ್ಲಿ ಸಂದೇಹನೆ ಇಲ್ಲ.4) ೧೦೦ ಗ್ರಾಮ್ಸ್ ಸಾಸಿವೆ ಅಥವಾ ರಾಗಿ ತೆಗೆದುಕೊಂಡು ಒಂದು ರೂಂ ನಲ್ಲಿ ಚೆಲ್ಲಿ ಆಮೇಲೆ ಒಂದೊಂದನ್ನೇ ಹೆಕ್ಕಿ ಹೆಕ್ಕಿ ಮತ್ತೆ ಡಬ್ಬಿಗೆ ತುಂಬಿ.. ಇದೆ ತರಹ ದಿನಕ್ಕೆ 2 ಬಾರಿ ಮಾಡಿ , ಹಾಗೆ 30 ದಿನ ಮಾಡಿ.... ಆಗ ನಿಮ್ಮ ಕನ್ನಡಿ ನಿಮಗೆ " ಇದು ನೀವೇನಾ? " ಅಂತ ಪ್ರಶ್ನೆ ಕೇಳುತ್ತೆ !!!!5) ದೊಡ್ಡೋರು , ಅನುಭವಿಗಳು ಹೇಳ್ತಾರೆ ....ಮಧ್ಯಾನ್ನ ನಿದ್ದೆ ಮಾಡಿದ್ರೆ ದಪ್ಪಗೆ ಆಗ್ತಾರೆ ಅಂತ - ಅದಕ್ಕೆ ಮಧ್ಯಾನ್ನದ ಹೊತ್ತು ನಿದ್ದೆ ಮಾಡೇ ಇರೋ ಹಾಗೆ , ಬೀದಿಲ್ಲಿ ಆಡುವ ಮಕ್ಕಳನ್ನ ಕರೆದು ೫ ರೂಪಾಯಿ ಕೊಟ್ಟು ಪ್ರತಿ ೫ ನಿಮಿಷಕ್ಕೊಮ್ಮೆ ಮನೆ ಕಾಲಿಂಗ್ ಬೆಲ್ ಒತ್ತುವ ವ್ಯವಸ್ಥೆ ಮಾಡಿ ಕೊಳ್ಳಿ( ಮತ್ತೆ ಈ ವಿಷಯನ ನೀವು ಮರೆತು ಬಿಡಿ). ಒಂದು ನಿಮಗೆ ತಾಳ್ಮೆ ಜಾಸ್ತಿ ಆಗುತ್ತೆ ಅಥವಾ ಯಾರು ಮನೆಗೆ ಬಂದ್ರು ಅಂತ ಎದ್ದು ಓಡಾಡಿ ನೀವು ಖಂಡಿತ ತೆಳ್ಳಗೆ ಆಗ್ತೀರ.6) ಬೆಂಗಳೂರು ಮಹಾನಗರಿ ಸಾರಿಗೆ ಸಂಸ್ಥೆ ಯವರಿಂದ ಇರುವ ಕರೀ ಹಲಗೆ ಬಸ್ಸು ಗಳನ್ನೇ ದಿನನಿತ್ಯ ಬಳಸಿ . ಅದರಲ್ಲೂ ನೀವು ಒಂದು ಕಿಟಕಿ ಸೀಟ್ ಹಿಡಿಯಲು ಪ್ರಯತ್ನಿಸಿ ...ಹೀಗೆ ೩೦ ದಿನಗಳ ಕಾಲ ಮಾಡಿ .... ಖಂಡಿತ ನೀವು ಬಳಕುವ (ಅಥವಾ ಉಳಕುವ ) ಸೊಂಟದವರಾಗುತ್ತಿರಿ.7) ಬೆಂಗಳೊರಿನಲ್ಲಿ ಬಾಡಿಗೆ ಮನೆ ಹುಡುಕುವ ಅನುಭವ ಇರಬೇಕಲ್ಲ ? ..... ಹೀಗಿರುವಾಗ ನೀವು ಗೊತ್ತಿದ್ದೂ ಗೊತ್ತಿದ್ದೂ ನಿಮ್ಮ ಗೆಳಯ ಅಥವಾ ಗೆಳತಿಗೆ ಮನೆ ಹುಡುಕಲು ಸ್ವಯಂ ಪ್ರೇರಣೆ ಇಂದ ಹೊರಡಿ . (ಮನೆಗಾಗಿ ಅಲೆದೂ ಅಲೆದೂ...... )8) ಈಗ ನಾನು ತಿಳಿಸುತ್ತಿರುವ ಮಾರ್ಗ ತುಂಬಾ ಹಳೆಯದು ತುಂಬಾ ಸಕ್ಸೆಸ್ಸ್ ಆಗಿರೋ ಮೆಥಡ್ ...ನೀವು ಪ್ರಯತ್ನಿಸಬಹುದು.
೧/೨ ಘಂಟೆ ಗೆ ಒಮ್ಮೆ ಅಂತೆ ಒಂದು ಚಂಬು ನೀರು ಕುಡೀರಿ......ಬಚ್ಚಲ ಮನೆಗೆ ಓಡಾಡಿ ಓಡಾಡಿ ಸಣ್ಣ ಆಗೇ ಆಗ್ತೀರ. (ಮೊದಲೇ ನೀರಿನ ವ್ಯವಸ್ಥೆ ಚೆನ್ನಾಗಿ ಮಾಡಿಕೊಳ್ಳಿ )9) ದಿನನಿತ್ಯದ ಒಗ್ಗರಣೆಗೆ ತುಪ್ಪ , ಸಾಸಿವೆ ಜೀರಿಗೆ ಹಾಕುವ ಅಭ್ಯಾಸವಿದ್ದರೆ ಇದನ್ನು ಪ್ರಯತ್ನಿಸ ಬಹುದು.... ತುಪ್ಪದ ಬದಲು ಹರಳುಎಣ್ಣೆ ಉಪಯೋಗಿಸಿ ...10) ಎಲ್ಲ ಕಿಟಕಿ ಬಾಗಿಲು ಮುಚ್ಚಿ ಪರದೆ ಎಳೆದು ಕೊಂಡು, ಕತ್ತಲು ಕೋಣೆ ಮಾಡಿ ಕೊಂಡು, ನಿಮ್ಮ ನೆಚ್ಚಿನ ಟಿವಿ ಮುಂದೆ ಪೀಠಾರೊಹಣ ಮಾಡಿ , ನಿಮಿಷಕ್ಕೆ ೪ ಚಾನೆಲ್ ಚೇಂಜ್ ಮಾಡಿಕೊಂಡು ನೋಡಿದ್ರೆ ಎಂತಹ ಸುಖ ಅಲ್ಲವಾ? ಸುಖ ಪಟ್ಟರೆ ದಪ್ಪಗಾಗ್ತಿರ , ಇದಕ್ಕೆ ನನ್ನಲ್ಲಿ ಒಂದು ಉಪಾಯವಿದೆ ,... ಟಿವಿ ರಿಮೋಟ್ ಬ್ಯಾಟೆರಿ ಹೋಗಿದ್ರು ಸಹ ಅದನ್ನ ಚೇಂಜ್ ಮಾಡ ಬೇಡಿ ! ಇದರಿಂದ ೨ ಉಪಯೋಗಗಳು ಇವೆ.


೧) ನಿಮಿಷಕ್ಕೆ ೪ ಸಲ ಟಿವಿ ಹತ್ತಿರಾನೆ ಎದ್ದು ಹೋಗಿ ಚಾನೆಲ್ ಚೇಂಜ್ ಮಾಡೋದ್ರಿಂದ ಸ್ಲಿಮ್ ಆಗೇ ಆಗ್ತೀರ ..
೨) ಟಿವಿ ಚನ್ನೆಲ್ಸ್ ಚೇಂಜ್ ಮಾಡೋಕ್ಕೆ ಸೋಮರಿತನವಾದ್ರೆ ಟಿವಿ ಹುಚ್ಚು ಬಿಡುತ್ತೆ
ಕೊನೆಗೆ ನೋಟ್ : ಈ ಉಪಯಗಳಿಗೆ ಪೇಟೆಂಟ್ ಮಾಡಿಸಿರುವುದಿಲ್ಲ , ಕಾಪಿ ರೈಟೆ ಇಲ್ಲವೇ ಇಲ್ಲಾ, ಯಾರು ಬೇಕಾದರು ನನಗೆ ಹಣ ಕೊಡದೆ ಉಪಯೋಗಿಸಿ ಜಿಂಕೆ ಮರಿ ಆಗ ಬಹುದು . :)

19 comments:

Chands said...

ನಾಯಿ ಓಡಿಸ್ಕೊಂಡು ಹೋಗೋದು, ಚಿಂತೆ ಮಾಡೋದು, ಬಾಡಿಗೆ ಮನೆ ಹುಡುಕೋದು, ರಿಮೋಟ್ ನ ರಿಮೋಟ್ ಅಯ್ದಿಯ, ಬಚಲು ಮನೆ ಎಲ್ಲ್ಲ ಐದಿಯ ಚೆನಗಿವೆ . ಉಳಿದವುಗಳಲ್ಲು ಸ್ವಲ್ಪ ಸೈಡ್ ಯೇಫ್ಫೆಚ್ತ್ ಜಾಸ್ತಿ ಅನ್ನಿಸುತ್ತೆ ಅಂದ್ರೆ ಹರಳನ್ನೇ ಹಕಿಂದ್ರೆ ಗ್ಯಾರಂಟೀ ಅವ ನೀರಿನ ಹತ್ರನೇ ಇರಬೇಕಗಬಹುದು, ರಾಗಿ ಒರ ಸಾಸಿವೆ ನನ್ನಂಥವನಿಗೆ ಕಣ್ಣಿನ ನೋವು ಕೊಡಬಹುದು.. ನೀವು ಬೆಂಗಳುರರಿಗೆ ಸ್ಪೆಷಲ್ ಟ್ರೆಕ್ಕಿಂಗ್ ವ್ಯವಸ್ತೆ ಮಾಡಬಹುದು, ಅದು ಬನಶಂಕರಿ ೩ನೆ ಹಂತ, ನಂದಿನಿ ಲೇ ಲೌಟ್, ಮಹಲಕ್ಷ್ಮಿ ಲೇ ಲೌಟ್, ಗಳ ಬೆಟ್ಟ ಗುಡ್ಡಗಳಲ್ಲಿ.. ಸ್ಲಿಮ್ ಯಾಕೆ ಆಗೋಲ್ಲ ಇದು ಕಾಸ್ಟ್ ಎಫ್ಫ್ಕ್ಟಿವೆ ಐಡಿಯಾ .

Rani said...

ಚಂದು ರವರೆ,
ಟೈಮ್ ಪಾಸ್ಸ್ ಮಾಡಿದಕ್ಕೆ ಖುಷಿ ಆಯಿತು, ಅಟ್ ಲೀಸ್ಟ್ ೨೦ ಕ್ಯಾಲೋರಿಎಸ್ ಆದರು ಖರ್ಚು ಮಾಡಿದ್ದಿರಿ.. ಗುಡ್ ಸ್ಟಾರ್ಟ್ .
ಟ್ರೆಕಿಂಗ್ ಯಾಕೆ, ಕಪ್ಪು ಹಲಗೆ ಬಸ್ಗೆ (೨೦೧ ದೊಮ್ಮಲೂರು - ಶ್ರೀನಗರ ) ಜೋತಾಡಿ ಸಾಕು...
ನಿಮ್ಮ ಕೋಸ್ಟ್ ಎಫೆಕ್ಟ್ ...ಐಡಿಯಾಗಳಿಗೆ ನನ್ನ ಸ್ವಾಗತ ....

ಸಿಮೆಂಟು ಮರಳಿನ ಮಧ್ಯೆ said...

ಭಯಂಕರ ಐಡಿಯಾಗಳು ಮಾರಾಯ್ರೆ...!!!!

ನಿಮ್ಮ ಉಪಾಯ ಓದಿ....
ನಕ್ಕೂ ನಕ್ಕೂ ನನ್ನ ತೂಕ ಕಡಿಮೆ ಆಯ್ತು....

roopa said...

:-) :-) super !!!!

Rani said...

@ ಸಿಮೆಂಟು ಮರಳಿನ ಮಧ್ಯೆ ರವರೆ,

ಅಂತು ಇಂತೂ ತೂಕ ಕಮ್ಮಿ ಆಯ್ತಲ್ಲ .....ಸ್ಲಿಮ್ ಆಗೋಕ್ಕೆ ನನ್ನ ಲೇಖನ ಕೂಡ ಒಳ್ಳೆಯ ಮಾರ್ಗ ಅಂದ ಹಾಗಾಯಿತು :)

@ ರೂಪ ರವರೆ,
ಧನ್ಯವಾದಗಳು ... :)

ರಾಜೀವ said...

"... ಯಾರು ಬೇಕಾದರು ನನಗೆ ಹಣ ಕೊಡದೆ ಉಪಯೋಗಿಸಿ ಜಿಂಕೆ ಮರಿ ಆಗ ಬಹುದು" ಬೇರೆಯವರು ನಿಮಗೆ ಹಣ ಕೊಡುವುದು ಹಾಗಿರಲಿ, ಚೆಲ್ಲಿದ ಸಾಸಿವೆಗೆ ಪರಿಹಾರ, ನಾಯಿ ಕಚ್ಚಿದ್ದಕ್ಕೆ ಡಾಕ್ಟರ ಶುಲ್ಕ ಅಂತ ನೀವು ಬೇರೆಯವರಿಗೆ ಹಣ ಕೊಡಬೇಕಾಗಿ ಬರಬಹುದು :-)

ನಿಮ್ಮ ಬರಹ ಮನಸ್ಸಿಗೆ ವಿಶ್ರಾಂತಿ ನೀಡಿತು. ಧನ್ಯವಾದಗಳು.

Rani said...

ರಾಜೀವ ರವರೆ, ಸುಸ್ವಾಗತ .
ಮಾಡಿದ್ದುಣ್ಣೋ ಮಹರಾಯ !!
ತಿಂದದ್ದು ಕರಗಿಸೋ ಪರಿಹಾರ !!
ನಾಯಿ ಕಚ್ಚದೆ ಇರೋಕೆ ಏನು ಮಾಡಬೇಕು ಅಂತ idea ಗಳನು ಕೊಡುವೆ ..ಆದರೆ ಅದು FREE ಅಲ್ಲಾ ಅಷ್ಟೇ !!!
ಹೀಗೆ ಬಂದು ಅಭಿಪ್ರಾಯ ಹೇಳ್ತಾ ಇರಿ..:)

shivu said...

ಬಾಲು ಸರ್,

ಸ್ಲಿಮ್ ಆಂಡ್ ಟ್ರಿಮ್ ಟಿಪ್ಸ್‌ಗಳು ತುಂಬಾ ಚೆನ್ನಾಗಿವೆ...

ನಾನೇನು ದಪ್ಪವಿಲ್ಲ ನೀವು ನನ್ನನ್ನು ನೋಡಿದ್ದಿರಲ್ಲ.....ನೀವು ತಮಾಷೆಗೆ ಬರೆದರೂ ಚೆನ್ನಾಗಿವೆ.

೧೦೦ ಗ್ರಾಂ ರಾಗಿ ಅಥವ ಸಾಸುವೆ ಕಾಳು ಕಾನ್ಸೆಪ್ಟ್ ತುಂಬಾ ಚೆನ್ನಾಗಿದೆ....

ಧನ್ಯವಾದಗಳು..

ಬಾಲು said...

ಶಿವೂ ಅವರೇ ಹೌದು, ನಿಮಗೆ ಇ ಐಡಿಯಾ ಗಳು ಉಪಯೋಗಕ್ಕೆ ಬರುವುದಿಲ್ಲ, ಆದರೆ ಯಾರಾದರು ಡುಮ್ಮುಕೆ ಇದ್ದು ತೆಲ್ಲಗಾಗಳು ಪ್ರಯತ್ನಿಸುತ್ತಾ ಇದ್ದರೆ ಅವರಿಗೆ ಕೊಡಬಹುದು. (ಹೇಗಿದ್ದರೂ ಪೇಟೆಂಟ್ ಇಲ್ಲ ).....

ರಾಣಿ ನೀನು ಎಷ್ಟು ತೆಳ್ಳಗೆ ಆಗಿದ್ದಿ? ನೀನು ಕೂತರೆ ಮಾರುತಿ ೮೦೦ ಕಾರು ಚಲಿಸುತ್ತ?
ಆಮೇಲೆ ನನ್ ತರ ದವರು ಸ್ವಲ್ಪ ದಪ್ಪಗೆ ಆಗೋದು ಹೇಗೆ ಅಂತ ಹೇಳಿ ಕೊಡು. ವ್ಯಾಯಾಮ, ಯೋಗ ಅಂತೆಲ್ಲ ಕುಯಬೇಡ.

Rani said...

ಬಾಲು,

ಈ ಐಡಿಯಾ ಗಳನ್ನ ಉಪಯೋಗಿಸಿ ನಾನು ಈಗ ಗಾಳಿ ಜೋರಾಗಿ ಬೀಸಿದರೆ ಹಾರಿಕೊಂಡು ಹೋಗ್ಬಿಡ್ತೀನಿ[ ;) ]ಅಷ್ಟು ತೆಳ್ಳಗೆ ಆಗಿದ್ದೀನಿ :)
ನೀನು ಪ್ರಯತ್ನಿಸಿದರೆ ಬೇಕಾದರೆ ಅದ್ರುಸ್ಯ ಆದರು ಆಗ ಬಹುದು !!!

ಶಿವಪ್ರಕಾಶ್ said...

ಹ್ಹಾ ಹ್ಹಾ ಹ್ಹಾ..
ಒಳ್ಳೆ ಉಪಾಯಗಳು

PARAANJAPE K.N. said...

ಬಾಲು ಮತ್ತು ರಾಣಿ,
ಸ್ಲಿಮ್ ಆಗೋದಕ್ಕೆ ನೀವು ಕೊಟ್ಟ ಸೂತ್ರಗಳು ಚೆನ್ನಾಗಿವೆ. ನಿಮ್ಮ ಸೂತ್ರ ಉಪಯೋಗಿಸಿ ತೆಳ್ಳಗಾದವರು ಯಾರಾದರು ಇದ್ದರೆ ತಿಳಿಸಿ, ಅವರನ್ನು ನೋಡಿ ಕೇಳಿ ಅನುಭವ ತಿಳಿದು ದಪ್ಪವಿರುವವರಿಗೆ ಸೂತ್ರ ಪಾಲಿಸಲು ಸಲಹೆ ಕೊಡಬಹುದು. ನೀವು ತೆಳ್ಳಗಿರೋದು (ಬಾಲು ನ ನೋಡಿದ್ದೀನಿ, ಅವರು ಸ್ಲಿಮ್ ಆಗಿದ್ದಾರೆ), ಈ ಸೂತ್ರ ಪಾಲಿಸಿದ್ದರಿ೦ದಲೇ ಅ೦ತ ಭಾವಿಸಲೇ ?

Rani said...

@ ಶಿವಪ್ರಕಾಶ್ ,
ಧನ್ಯವಾದಗಳು


@ ಪರಾಂಜಪೆ ,
ಈ ಐಡಿಯಾ ಉಪಯೋಗಿಸಿ ನಾನು ಜಿಂಕೆ ಮರಿ ತರಹ ಆಗಿದ್ದೀನಿ.....;)

Prabhuraj Moogi said...

ಸ್ಲಿಮ್ ಆಗೋದೇನೊ ಸರಿ, ನಮ್ಮಂಥಾ ಸ್ಲಿಮ್?!!! ಲೀನ್ ಸರಿ ಅನಿಸತ್ತೆ, ಆಥರಾ ಇರೋರಿಗೆ ಏನಾದ್ರೂ ಉಪಾಯಕೊಡಿ... ಈಗಾಗಲೇ ಐಟಿ ಕಂಪನಿ ಕೆಲ್ಸದಲ್ಲಿದೀನಿ, ಹೊಟ್ಟೆ ಆಕಾರ ತಪ್ತಿದೆ, ಇನ್ನೂ ಜಾಸ್ತಿ ಉಪಾಯಗಳು ನಿಮ್ಮಲ್ಲಿರಬಹುದು ಅಂತ ಕುತೂಹಲ! :)
ಸಾಸಿವೆ ಪರಿಹಾರ ಸಕತ್ತಾಗಿದೆ

Rani said...

@ ಪ್ರಭುರಾಜ್ ,
ಕಮೆಂಟಿಸಿದ್ದಕ್ಕೆ ಧನ್ಯವಾದಗಳು , ಇನ್ನು ಜಾಸ್ತಿ ಉಪಾಯಗಳಿವೆ ,ಮುಂದಿನ ಲೇಖನಗಳಿಗೆ ಕಾದು ನೋಡಿ!!

ರವಿಕಾಂತ ಗೋರೆ said...

ಹುಹ್... ಅದ್ಭುತ ಐಡಿಯಾ ಗಳು.... ಏನು?? ಈ ಐಡಿಯಾ ಉಪಯೋಗಿಸಿ ಗಾಳಿಗೆ ಹಾರೋಸ್ತು ತೆಲ್ಲಗಾಗಿದ್ದೀರ?? ದಪ್ಪ ಆಗೋಕೆ ನಾನೊಂದು ಐಡಿಯಾ ಕೊಡ್ತೀನಿ... ಜೇನುಗೂಡಿಗೆ ಕಲ್ಲು ಹೊಡೆಯಿರಿ.. :-)

Rani said...

@ ರವಿಕಾಂತ್ ,

ಸ್ವಾಮಿ ... ಜೀನು ಗೂಡಿಗೆ ಕಲ್ಲು ಹೊಡೆದರೆ ಒಂದು ದಿನ ದಪ್ಪಗೆ ಅಷ್ಟೇ ...ಮತ್ತೆ ಜೀನಿನಿಂದ ತಪ್ಪಿಸಿಕೊಳ್ಳಲು ಓಡಿ ಓಡಿ ಮತ್ತೆ ತೆಳ್ಳಗಾಗ ಬಹುದು !!!!
ಈ ಐಡಿಯಾ ದಿಂದ ನಾನು ಮೋಸ್ಟ್ಲಿ ಈಗ ಅದೃಶ್ಯ ಆದರು ಆಗ ಬಹುದು ಹೆಹೆಹೆಹ್ಹೆಹೆ !!!!

Arun K R said...

ನೀನ್ಯಾಕೆ ಒಂದು ಸಲ ಜಯಲಲಿತಾನ ಭೇಟಿ ಮಾಡಬಾರದು?

Rani said...

ಅರುಣ್ ,

ಅದೇ ಪ್ಲಾನ್ ನಲ್ಲಿ ಇರುವೆ ... ಹೇಗೂ ಒಂದಿಷ್ಟು ಕಾಸು ಸಂಪಾದಿಸಬಹುದು.. ಆದ್ರೆ ನನಗೆ ಒಂದು ಡೌಟ್ ... ಆವಮ್ಮ ತೆಳ್ಳಗಾದ್ರೆ ಯಾರು ಗುರಿತಿಸಿಲ್ಲದಿದ್ರೆ ?