Tuesday, June 9, 2009

ನಾನ್ಸೆನ್ಸ್ ಜನಗಳ ಮುಗ್ಧ ಪ್ರಶ್ನೆಗಳಿಗೆ ನಮ್ಮ (ಅ)ಪ್ರಾಮಾಣಿಕ ಉತ್ತರಗಳು



ಬ್ಯುಸಿ ಬೆಂಗಳೂರಿನಲ್ಲಿ ದಿನ ಶುರು ಆಗೋದೇ ನಾನ್ಸೆನ್ಸ್ ಪ್ರಶ್ನೆ ಇಂದ - ಪೇಪರ್ ಬಾಗಿಲಿನ ಹತ್ತಿರ ಕಾಣದೆ ಇದ್ರೆ ಅಯ್ಯೋ ಪೇಪರ್ ಬಂದೆ ಇಲ್ಲ ಅಂತ ನಮ್ಮಷ್ಟಕ್ಕೆ ನಾವೇ ಪೆದ್ದು ಪ್ರಶ್ನೆ ಹಾಕಿ ಕೊಂಡಿರುತ್ತಿವೆ !!! ಇನ್ನು ರೇಡಿಯೋ ಕಿವಿ ಹಿಂಡೋಣ ಅಂತ ಹೋದರೆ ರೇಡಿಯೋ ಜೋಕಿ ಗಳ ಮುಗ್ಧ ಪ್ರಶ್ನೆಗಳ ಸುರಿಮಳೆ .. (ಆಹಾ ಆ ಅವರ ಮ್ಯಾನೇಜರ್ ಗೆ ,ಕೆಳುಗರಿ ಗೆ , ಎಸ್ ಎಂ ಎಸ್ ಕಳುಹಿಸುವ ಅಭಿಮಾನಿ ದೇವರುಗಳಿಗೆ ಇಷ್ಟ ಆಗ ಬೇಕು ಆ ಕಿರುಚಾಟ.) ಮೊನ್ನೆ ರೇಡಿಯೋ ದಲ್ಲಿ ನಡೆತಿತ್ತು ರೀತಿ ಪ್ರಶ್ನಾವಳಿ(ಯಾವುದೋ ಒಂದು ಅಮ್ಯುಸ್ಮೆಂಟ್ ಪಾರ್ಕ್ ನಲ್ಲಿ )


"ಸರ್ ನಮಸ್ಕಾರ ನಾನು ________ಇಂದ ಬಂದಿದೀನಿ"

ನಮಸ್ಕಾರ ಹೇಳಿ ಸರ್... (ವಾಯ್ಸ್ ನಲ್ಲಿ ನೆರ್ವೋಸನೆಸ್ಸ್ ಫಸ್ಟ್ ಟೈಮ್ ಇನ್ ರೇಡಿಯೋ ಪಾಪ )
"ಸರ್ ನೀವು ವೀಕೆಂಡ್ ನ ಕಳಿಯೋಕೆ ಇಲ್ಲಿಗೆ ಬಂದ್ರ ?"
ಹೌದು ವೀಕೆಂಡ್ ಗೆ ಮಜ್ಜ ಮಾಡೋಣ ಅಂತ ಬಂದ್ವಿ (ಅಮ್ಯುಸ್ಮೆಂಟ್ ಪಾರ್ಕ್ ಜನ ಏನು ಎಮ್ಮೆ ಕಾಯೋಕ ಬರ್ತಾರೆ ? )


ಇನ್ನು ಮಳೆ ಗಾಳದಲ್ಲಿ ಬೆಂಗಳೂರ್ನಲ್ಲಿ ಓಡಾಡೋದೇ ಕಷ್ಟ , ರಸ್ತೆ ಮೇಲೆ ನೆ ಇರ್ತಿವೋ , ಯಾವುದಾದರು ಮ್ಯಾನ್ ಹೋಲ್ನಲ್ಲಿ ಬಿದ್ದು ಮೇಲೆ ಹೋಗ್ತ್ಹಿವೋ ಗೊತ್ತಿರೋಲ್ಲ .. ಹಂಗೆನದ್ರು ಬಿದ್ದು, ಅದೃಷ್ಟವಶಾತ್ ಬದುಕಿ ಬಂದ್ರೆ.. ಟಿವಿ 9ನವರು ಬಂದು .. ಮೇಡಂ ನೀವು ಗುಂಡಿಲಿ ಬಿದ್ದು ಬಂದ್ರಲ್ಲ್ಲ ನಿಮಗೆ ಏನು ಅನ್ನಿಸುತ್ತೆ ?
ಜೀವ ಉಳಿಸ್ಕೊಂದು ಬಂದಿರೋದೆ ದೊಡ್ಡ ವಿಚಾರ !!! ಇದರ ಮದ್ಯೆ , ಇವರಿಗೆ ಅನಿಸಿಗೆ ಬೇರೆ ಹೇಳ್ಬೇಕು(ಗಬ್ಬು ವಾಸನೆ ಬೇರೆ ).


ಹೀಗೆ ಬೇರೆ ಬೇರೆ ಕಡೆ ಈ ನಾನ್ಸೆನ್ಸ್ ಜನಗಳ ಮುಗ್ಧ ಪ್ರಶ್ನೆಗಳ ಹಾವಳಿ ಉದಾಹರಣೆಗಳು ಹೀಗಿದೆ......
ಎಲ್ಲಿಯಾದರೂ ಹೋಗ್ತಾ ಇರ ಬೇಕಾದರೆ ಹಲ್ಲು ಕಿರಿದು ನಿಲ್ತಾರೆ " ಎಲ್ಲೋ ಹೋಗ್ತಾ ಇದ್ದಂಗಿದೆ ? " (ನೀಟ್ ಆಗಿ ರೆಡಿಆಗಿದ್ದು ನೋಡಿ ಕೂಡ ...+ ಕೈಲಿ ಚೀಲ. ನಿನಗೆ ಯಾಕಪ್ಪಾ ನಾನು ಎಲ್ಲಿಗೆ ಬೇಕಾದ್ರು ಹೋಗ್ತೀನಿ) "ಇಲ್ಲೇ ಸಾಮಾನು ತರೋಕ್ಕೆ " (ಇವೊತ್ತು ನನಗೆ ಸಾಮಾನು ಸಿಕ್ಕಂಗೆ , ಒಳ್ಳೆ ಬೆಕ್ಕು ಅಡ್ಡ ಬಂದಂಗೆ ಬರ್ತಾರೆ )


ರಜೆ ಗೆ ಮನೇಗೆ ಊರಿಗೆ ಹೋಗೋಕ್ಕೆ ಕೈ ನಲ್ಲಿ ಬ್ಯಾಗ್ ,ಸೂಟ್ಕೇಸ್ ಹಿಡಿದು ಬಸ್ ಸ್ಟ್ಯಾಂಡ್ ನಲ್ಲಿ ನಿಂತಿದ್ದೆ - ಅಲ್ಲೂ ಬಿಡದ ಬಾಯಿ ಬದಕಿ ಶಾಂತಮ್ಮ " ಏನು ಊರಿಗೆ ಹೊಗ್ತಿದ್ದಂಗಿದೆ ಯಾವಾಗ ಬರೋದು ? "
( ಕ್ಕೊ ಕ್ಕೊ ಆಡೋಕ್ಕೆ ಬಸ್ ಸ್ಟ್ಯಾಂಡ್ ಕರೆಕ್ಟ್ ಜಾಗ ಅದಕ್ಕೆ ನಿಂತಿರುವೆ , ನಾನು ಎಲ್ಲಿಗಾದ್ರೂ ಹೋಗಿ ಸಾಯಿತಿನಿ ನಿಮಗ್ಯಾಕ್ರಿ ಬೇಕು? ) ನಾನು ಹಲ್ಲು ಕಿರಿದು - " ಹೂನ್ ರೀ ಅಮ್ಮ ತುಂಬಾ ದಿನದಿಂದ ಮನೇಗೆ ಬಾ ಅಂತಿದ್ರು "



ಸದ್ಯ ಅಪರೂಪಕ್ಕೆ ಒಳ್ಳೆ ಫಿಲಂ ಬಂದಿದೆ ನೋಡಿ ಬರೋಣ ಅಂತ ಫಿಲಂ ಥಿಯೇಟರ್ ಗೆ ಹೋದೆ ಅಲ್ಲಿ ನಮ್ಮ - ಓಣಿ ಬಡ್ಡಿ ಸಾವಿತ್ರಮ್ಮ ಪ್ರತ್ಯಕ್ಷ ವಾಗಿದರು ಅವರ ಕಣ್ಣಿಗೆ ಬಿದ್ದರೆ ಸಾಕು ಫುಲ್ ಗರಗಸ ... ಹಾಗು ಹೀಗೂ ಅವರಿಂದ ತಪ್ಪಿಸಿ ಕೊಂದು ಟಿಕೆಟ್ ತೆಗೆದು ಸೀಟ್ ನಲ್ಲಿ ಕೂತಿದ್ದೆ ತಡ ಹಿಂದಿನಿಂದ ಬಂತು ಹೆಣ್ಣು ದ್ವ್ಹನಿ "ಓಹ್ ಹೀ ಹೀ - ಏನ್ರಿ ಫಿಲಂ ನೋಡೋಕ್ಕ ? --- ( ಇಲ್ಲಮ್ಮ ತಾಯಿ ಇಲ್ಲೇ ನಾನು ವಾಸ ಮಾಡೊದು ) - " ಹೂನ್ರಿ ಹೊಸ ಫಿಲಂ ಚೆನ್ನಾಗಿದೆ ಅಂತೆ "



ವಾರದ ಮಧ್ಯದಲ್ಲಿ ಯಾರ ಕಾಟನು ಇಲ್ಲದೆ ದೇವರ ದರ್ಶನ ಮಾಡೋಣ ಅಂತ ದೇವಸ್ಥಾನಕ್ಕೆ ಬಂದ್ರೆ - " ಮುಂದಿನ ಬೀದಿ ಸುಬ್ಬಣ್ಣ ಏನ್ರಿ ನೀವಿಲ್ಲಿ ?" (ಯಾಕಪ್ಪ ದೇವರು ನಿನ್ನ ಸ್ವತ್ತೋ ?) - " ದರ್ಶನ ಮಾಡೋಣ ಅಂತ " ಕಣ್ಣು ಮುಚ್ಚಿ ದೇವರಿಗೆ ಏನಪ್ಪಾ ಇದು ರಾಮೇಶ್ವರಕ್ಕೆ ಹೋದ್ರು ಶನೀಶ್ವರ ಬಿಡಲಿಲ್ಲ ಅಂತ ಗೋಗರೆದೆ.



ನನ್ನ ಕಸಿನ್ ನಿಶ್ಚಿತಾರ್ಥ ಪಾರ್ಟಿ ಗೆ ಅಂತ ಹೋಟೆಲ್ ಗೆ ಹೋಗಿದ್ವಿ ಅಲ್ಲಿ ನಮ್ಮ ಪಕ್ಕದ ಮನೆ ಬ್ಯಾಂಕ ಅಂಕಲ್ ಮನೆಯವರನ್ನು ತವರಿಗೆ ಕಳಿಸಿದ ಗಂಡ ಹಾಯಾಗಿ ಹೋಟೆಲ್ ನಲ್ಲಿ ಊಟಕ್ಕೆ ಬಂದ್ರೆ ಅಲ್ಲಿ ಆಟಕಾಯಿಸಿಕೊಂಡ ಅವರ ಹಳೆ ಪರಿಚಯದ ಪ್ರಾಣಿ - " ಓಹ್ ಹೋ ಹೋ ಏನ್ರಿ ಊಟಕ್ಕಾ ? ( ಇಲ್ಲಾ ಇಲ್ಲಿ ಪಾರ್ಟ್ ಟೈಮ್ ಕೆಲ್ಸ ಮಾಡ್ತಿನಿ ಅಂತ ಹೇಳುವ ಹಾಗಿತ್ತು ಅಂಕಲ್ ಮುಖ ಪಾಪ ) - " ಹೆಂಡತಿ ಊರಲ್ಲಿ ಇಲ್ಲಾ ರೀ "



ಸೂಪರ್ ಮಾರ್ಕೆಟ್ ನಲ್ಲ ದುಬಾರಿ ಅಂತ ಕೃ ರಾ. ಮಾರ್ಕೆಟ್ ಗೆ ಕಷ್ಟ ಪಟ್ಟು ಬಸ್ ನಲ್ಲಿ ಬಂದು ತರಕಾರಿ ಕೊಳ್ಳುವಾಗ - ಅಲ್ಲಿ ಸಿಕ್ಕ ನನ್ನ ಗೆಳತಿ " ಏನೇ ರಾಣಿ ತರಕಾರಿ ತರೋಕ್ಕೆ ಬಂದ್ಯಾ ?" (ಇಲ್ಲ ಇಲ್ಲಿ ಅದೇನೋ ಫ್ರೀ ಆಗಿ ಚಿನ್ನ ಹಂಚ್ತಿದ್ದರಂತೆ ಅದಕ್ಕೆ) - "ಹೂನ್" ಇದು ಇಲ್ಲಿ ಗೆ ಮುಗಿಯೊಲ್ಲ ಅದೇನೋ ಅಂತಾರಲ್ಲ ಹಾಗೆ ....( ಏನು ಅಂತಾರೋ ನನಗೂ ಗೊತ್ತಿಲ್ಲ ಗೊತ್ತಿದ್ರೆ ಹೇಳಿ ).



ನಮ್ಮ ದೂರದ ನೆಂಟರ ಮದುವೆ ಗೆ ಹೋಗಿದ್ದೆ ಅಲ್ಲಿಗೆ ಆಗಮಿಸಿದ್ದ ನಮ್ಮ ದೂರದ ಚಿಕ್ಕಮ್ಮ -" ಓಹ್ ಏನೂ ಮದುವೆಗೆ ಬಂದಿದ್ದ ?" (ಒಳಗಿಂದ ಬಂದ ಸಿಟ್ಟನ್ನು ಕಂಟ್ರೋಲ್ ಮಾಡಿಕೊಳ್ಳುತ್ತಾ -ಇಲ್ಲಾ ಕಳ್ಳ ಪೋಲಿಸ್ ಆಡ್ತ ಇದ್ವಿ , ಬಚ್ಚಿಟ್ಟು ಕೊಳ್ಳೋಕೆ ಬಂದೆ !!) " ಹೂನ್ರಿ ಚಿಕ್ಕಮ್ಮ .. ನೀವು ಹೇಗಿದ್ದೀರಾ ? ಆರೋಗ್ಯನಾ ? " ಅನ್ತ ಟಾಪಿಕ್ ಚೇಂಜ್ ಮಾಡಿದೆ.



ಇನ್ನು ಆಫೀಸ್ ನಲ್ಲಿ ಕೇಳುವ ಜಾಣ ಮುಗ್ಧ ಪ್ರಶ್ನೆಗಳಿಗೆ ಏನು ಕಮ್ಮಿ ಇರೋಲ್ಲ - ಮಾಡೋಕ್ಕೆ ಏನು ಕೆಲಸ ಇಲ್ಲದವರಂತು ಕೇಳುವ ಪ್ರಶ್ನಾವಳಿಗೆ ನೆ ಸಂಬಳ ತೆಗೆದು ಕೊಳ್ಳುತ್ತಾರೆ ಅನ್ನಿಸುತ್ತೆ -- ಇದು ಮನೆಯಿಂದ ಹೊರ ಬೀಳಬೇಕದ್ರೆ ನೆ ಶಕುನ ಸ್ಟಾರ್ಟ್ ಆಗೋದು ಹೀಗೆ - ಆಫೀಸ್ ಗೆ ಹೋಗ್ತಾ ಇರಬೇಕಾದ್ರೆ ಬೀಗ ಬಾಗಿಲಿಗೆ ಜಡಿದು ಇನ್ನೇನು ಮೆಲ್ಲಗೆ ಶಬ್ದ ಮಾಡದೆ ಗೇಟ್ ಹಾಕೋಸ್ಟರಲ್ಲಿ ಓನರ್ ಆಂಟಿ ಕಿಟಕಿ ಇಂದ -" ಓಹ್ ನೀವಾ? ಆಫೀಸಿಗೆ ಹೊರಟ್ರ "? ( ಇಲ್ಲಾ ಮ್ಯಾನೇಜರ್ ದು ಮ್ಯಾಜಿಕ್ ಶೋ ಅದಕ್ಕೆ ಹೊರಟೆ !! ಈ ದಿನ ಗೋವಿಂದಾ ...) " ಹೂನ್ ರೀ ಹೊಟ್ಟೆ ಪಾಡು "( ಗೊತ್ತಿದ್ದೂ ಗೊತ್ತಿದ್ದೂ ಯಾಕೆ ಹೀಗೆ ಪ್ರಾಣ ತಿಂತಾರೆ ? ದೇವರೇ ಮ್ಯಾನೇಜರ್ ಇವೊತ್ತು ಲೇಟ್ ಆಗಿ ಬರಲಿ ಆಫೀಸ್ ಗೆ ..ಅವರ ಮೂಡ್ ಸರಿ ಇರಲಿ )


ಇತ್ತೀಚಿನ ದಿನಗಳಲ್ಲಿ ಸೀರೆ ಉಡೋದೇ ಅಪರೂಪ ವಾಗಿದೆ , ದಿನಾ ಜೀನ್ಸ್ ಷರ್ಟ್ ನೋಡಿ ನೋಡಿ ಅಭ್ಯಾಸವಾಗಿರುವ ನಮ್ಮ ಜನಗಳಿಗೆ ನಮ್ಮಂಥವರು ನಮ್ಮ ಸಂಸ್ಕೃತಿಯಂತೆ ವಾರಕೊಮ್ಮೆ ಯಾದರು (?) ಸೀರೆ ಉಟ್ಟಿ ಕೊಂಡು ಹೋದ್ರೆ
- " ಏನ್ರಿ ವಿಷೇಶ ಸೀರೆ ಇವೊತ್ತು ಮದುವೆ ಏನಾದ್ರು ಗೊತ್ತಾಯಿತಾ ? ಹುಟ್ಟಿದ ಹಬ್ಬಾನ ? ಯರದದ್ರು ಮಾಡುವೆಗೆ ಹೊರಟಿದ್ದಿರ?
( ಅಯ್ಯೋ ನನ್ನ ಕರ್ಮ ಸರಿ ಇಲ್ಲದೆ ಸೀರೆ ಉಟ್ಟೆ ತಪ್ಪು ಆಯಿತು ದೇವರೇ ನನ್ನ ಕಾಪಾಡು ) - " ಎನಿಲ್ಲರಿ ಶುಕ್ರವಾರ ಅಲ್ಲವಾ "




ಸಿಗೋ ಒಂದು ಭಾನುವಾರ , ಎಲ್ಲ ಕೆಲಸ ಮುಗಿಸಿ , ಮಧ್ಯಾನ್ನ ಒಳ್ಳೆ ಊಟ ಆಗಿ ನಿದ್ದೆ ಹತ್ತುವ ಟೈಮ್ ನಲಿ ಫೋನ್ ಕೂಗಿ ಕೊಳ್ಳುತ್ತೆ - " ಮಲಗಿದ್ರಿ ಅನಿಸುತ್ತೆ ಡಿಸ್ಟರ್ಬ್ ಆಯ್ತಾ? " (ನಮ್ಮ ಧ್ವನಿನೇ ಹೇಳ್ತಿರುತ್ತೆ ಫುಲ್ ನಿದ್ದೆ ನಿದ್ದೆ ಅಂತ, ನಿಮಗೆ ಫೋನ್ ಮಾಡೋಕ್ಕೆ ಇದೇ ಟೈಮ್ ಬೇಕಿತ್ತಾ? ) " ಇಲ್ಲಾ ರೀ ಜಸ್ಟ್ ಬೆನ್ನಿಗೆ ರೆಸ್ಟ್ ಕೊಟ್ಟಿದ್ದೆ ....ಎನು ವಿಷಯ ಆಆಆಆಆಆಆಆಆಅ (ಗೊತ್ತಾಗುವ ರೀತಿನಲ್ಲಿ ದೊಡ್ಡ ಆಕಳಿಕೆ )?"



ಇನ್ನು ಶನಿವಾರ ಆಫೀಸ್ ಗೆ ರಜೆ , ಬೆಳಿಗ್ಗೆ ಬೆಳಿಗ್ಗೆ ಅಕ್ಕ ಪಕ್ಕದವರು ಯಾರು ಬಟ್ಟೆ ಒಣಗೋಕ್ಕೆ ಹಾಕಿರೋಲ್ಲ , ಬೇಗ ಬೇಗ ಬಟ್ಟೆ ಒಗೆಯೋಕ್ಕೆ ಶುರು ಮಾಡಿದ್ರೆ - ":ಏನ್ರಿ ಬಟ್ಟೆ ಒಗೀತಿದ್ದಿರಾ ?"
ಇಲ್ಲಾ ಕಲ್ಲು ಸುಮ್ಮನೆ ಮಾತಾಡ್ತಿತ್ತು ಅದಕ್ಕೆ ಒದೀತಿದ್ದಿನಿ - " ಹ್ಞೂ "
ಹೀಗೆ ದಿನ ಶುರು ಆಗೋದ್ರಿಂದ ಮುಗಿಯೋತನ ಒಂದಲ್ಲ ಒಂದು ರೀತಿ ನಾನಾ ತರಹದ ಮುಗ್ಧ ಪ್ರಶ್ನೆಗಳು ನನಗೆ ಎದಿರಾಗುತ್ತವೆ. ನಿಮಗೂ ಸಹ ಇಂತಹ ಇಕ್ಕಟ್ಟಿನಲ್ಲಿ ಸಿಕ್ಕ ಪ್ರಶ್ನೆಗಳು ಮತ್ತೆ ಅದರ ()ಪ್ರಾಮಾಣಿಕ ಉತ್ತರಗಳು ಇದ್ದಲ್ಲಿ ನಮ್ಮೊಡನೆ ಹಂಚಿಕೊಳ್ಳಿ.


ವಿ. ಸೂ: ಅಪ್ಪಿ ತಪ್ಪಿ ನಿಮ್ಮ ಪ್ರಾಮಾಣಿಕ ಉತ್ತರಗಳು ನಿಮ್ಮ ಬಾಯಿಂದ ಹೊರಗೆ ಎಸ್ಕಪೆ ಆಗಿ ಬಂದ್ರೆ ಅದಕ್ಕೆ ನಾನು ಜವಾಬ್ದಾರಳಲ್ಲ

14 comments:

ತೆನಾಲಿ ರಾಮ said...

ಹಂಗೇ ಇನ್ನೊಂದು ಪ್ರಶ್ನೆ.
ಕಂಪ್ಯೂಟರ್ ಮುಂದೆ ಕುಳಿತ ಟೆಕ್ಕಿಯನ್ನು ಸಹೋದ್ಯೋಗಿ ಕೇಳುತ್ತಾನೆ " ಏನೋ ಕೆಲಸಾ ಮಾಡ್ತಾ ಇದ್ದಿಯಾ?".
< ಇಲ್ಲಪ್ಪ ನಾನು ನನ್ನ ಬ್ಲಾಗಲ್ಲಿ ಕಥೆ ಹೆಣಿತಾ ಇದ್ದೆ/ಇತರರ ಬ್ಲಾಗಿನಲ್ಲಿ ಹಣಿಕಿ ಕಮೆಂಟಿಸುತ್ತಿದ್ದೆ>

Rani said...

ತೆನಾಲಿ ಅವರೇ, ನೀವು ಹೇಳಿದ್ದು ಖಂಡಿತ ಸರಿ ಇದೆ. :)

PARAANJAPE K.N. said...

ರಾಣಿಯವರೇ,
ಚೆನ್ನಾಗಿದೆ, ಇದು ಜನ ಮಾತನಾಡಿಸುವ ರೀತಿ. ನೀವು ಏನು ಮಾಡ್ತಾ ಇದ್ದಿರೋ, ಅದು ಗೊತ್ತಿದ್ದೂ ಕೂಡ ಅದನ್ನೇ ಪ್ರಶ್ನೆಯಾಗಿಸಿ ಕೇಳುವ ಅಭ್ಯಾಸ ಬಹಳ ಜನರಲ್ಲಿದೆ. ಹಾಸ್ಯಮಯವಾಗಿ ಅದನ್ನು ಪ್ರಸ್ತುತಪಡಿಸಿದ್ದೀರಿ.

shivu.k said...

ಬಾಲು ಸರ್,

ಈ ರೀತಿ ಮಾತಾಡುವುದು ಸರಿ ತಪ್ಪು ಅನ್ನುವುದಕ್ಕಿಂತ ಅವರಿಗೆ ಬಾಯಿ ಚಪಲ..ಯಾರ ಬಳಿ..ಏನಾದರೂ ಮಾತಾಡಬೇಕು ಅಂತ. ಆಗ ಹೀಗೆಲ್ಲಾ ಆಗಬಹುದು ಅಂತ ನನ್ನ ಅನಿಸಿಕೆ..ನೀವೇನಂತೀರಿ...

Unknown said...

baraha chennagittu.. aadare neevu yaake avaranna nonsense jana antiddeeraa anta gottaagalilla!!!

Chandru said...

"ಮಹಾರಾಣಿಯವರೇ" ತುಂಬಾ ಚೆನಾಗಿದೆ ನೀವು ನಾವೆಲ್ಲ "ಭಾರತೀಯರು" ಅಂತ ಉದಾ ಮೂಲಕ ತಿಳಿಸಿದ್ದೀರ.. ಏಕೆಂದರೆ ಇಂತ ನಾನ್ಸೆನ್ಸ್ ಪ್ರಶ್ನೆಗಳನ್ನು ನಾವೆಲ್ಲರೂ ಒಂದಲ್ಲ ಒಮ್ಮೆ ಕೇಳಿರುತ್ತೇವೆ. ಈ ಎಲ್ಲ ಸನ್ನಿವೇಶಗಳನ್ನು ನೀಟಾಗಿ ಪ್ರಸ್ತುತಿ ಮಾಡಿದ್ದಕ್ಕೆ ನಿಮಗೆ ವಂದನೆಗಳು. ಕೆಳಗೆ ಕೇಳಿ ನನ್ನ ಕೆಲವು ಅನುಭವಗಳು ...
ನಮ್ಮ ಬಾಸ್ ಮಗಕೆಳಿದ ಮುಗ್ದ ಪ್ರಶ್ನೆಗಳು ನನಗನಿಸಿದ ಉತ್ತರಗಳು :
೧- ಕ್ರಿಕೆಟಲ್ಲಿ ಯಾಕೆ ಇಬ್ಬರು ಬ್ಯಾಟ್ಟಿಂಗ್ ಮಾಡ್ತಾ ಇರುತ್ತಾರೆ:
ನಾನೇನು ಅವನಿಗೆ ಹೇಳಲ್ಲಿಲ. ಅನ್ಕೊಂಡೆ ... " ಆ ಕಡೆ ಬ್ಯಾಟ್ಸಮನ್ LB ಯಾಗಿ ಔಟ್ ಅಂತ ಕೊಟ್ಟರೆ ಇನ್ನೊಬ್ಬ ಈ ಕಡೆ ಅಂಪಿರಣ ತಲೆ ಗೆ ಹೊಡೆಯೋಕೆ!".
೨- ವಿಕೆಟ್ ಕೀಪರ್ ಯಾಕೆ ಗ್ಲೌಸ್ ಹಕೊಥಾನೆ ಬೇರೆ ಯಾರು ಯಾಕೆ ಹಾಕೊಳಲ್ಲ?.
ನಾ ಅನ್ಕೊಂಡೆ "ಬಾಲ್ ಮೇಲೆ ಫಿಂಗರ್ ಪ್ರಿಂಟ್ ಬೀಳಬಾರದು ಅಂತ"!

ಹೀಗೆ ನಾನು ಪದವಿ ಓದುತ್ತಿರುವಾಗ ಅಪರ್ರೋಪಕ್ಕೆ ಎಮ್ಮೆ ಮೇಯಿಸಲು ಹೋಗಿದ್ದೆ .. " ನಮ್ಮುರಿನವ ಆಶ್ಚರ್ಯ ದಿಂದ ನೀನೆಲ್ಲಿಗೆ ಮೇಯಿಸಲು ಹೊರಟೇ" ಅಂದ? ಇರಿರಿಸು ಮುರುಸಾಗಿ ಹೇಳಿದೆ "ಇಲ್ಲೇ ಕೆರೆ ಕಡೆ ಅಂದೇ"..... ಆದರೆ ಮನಸಿಲ್ಲಿ ಇದ್ದದ್ದು ("ನಮ್ಮ ಊರಿನ ಹತ್ತಿರವಿರುವ ಕೃಷಿ ವಿದ್ಯಾಲಯಕ್ಕೆ ಪದವಿ ಕೊಡಿಸಲು ಅಂತ!!" )

Anonymous said...

@ಪರಾಂಜಪೆ:
ಹೌದು ಅ ದುರಭ್ಯಾಸ ನನ್ನಲ್ಲೂ ಕೂಡ ಇದೆ. ಕಡಿಮೆ ಮಾಡಿಕೊಳ್ಳುವತ್ತ ನನ್ನ ಪ್ರಯತ್ನ ಸಾಗುತ್ತ ಇದೆ. ಇದು ನನ್ನ ಮೊದಲ ಬರಹ, ನೀವು ಮೆಚ್ಚಿ, ಪ್ರೋತ್ಸಾಹ ಕೊಟ್ಟಿದ್ದಿರಿ.

@ಶಿವೂ:
ನೀವು ಹೇಳುವುದು ನೂರಕ್ಕೆ ನೂರು ಸತ್ಯ. ಮತಾಡಬೇಕೆನ್ನುವ ಚಪಲವೇ ಇದಕ್ಕೆ ಮೂಲ ಕಾರಣ.

@ರವಿಕಾಂತ:
ಬರಹ ಮೆಚ್ಚಿದ್ದಕ್ಕೆ ಧನ್ಯವಾದ, nonsence ಪ್ರಶ್ನೆ ಕೇಳೋದರಿಂದ ನಾನ್ಸೆನ್ಸ್ ಜನ ಅಂದೇ ಅಷ್ಟೇ. ಮತ್ತೆ ಬೇರಾವ ದುರುದ್ದೇಶ ಅಂತು ಇಲ್ಲ. ಯಾಕೆಂದರೆ ಅ ನಾನ್ಸೆನ್ಸ್ ಲಿಸ್ಟ್ ನಲ್ಲಿ ನನ್ನ ಹೆಸರು ಮೊದಲೇ ಬರುತ್ತೆ!!

@ಚಂದ್ರು:
ನಾವೆಲ್ಲಾ ಭಾರತೀಯರ? ಹ ಹ ಹ ... ಒಳ್ಳೆಯ ಉದಾಹರಣೆ.
ಇ ಥರದ ಸನ್ನಿವೇಶ ನಾವೆಲ್ಲ ಎದುರಿಸಿರುತ್ತೇವೆ. ಆಮೇಲೆ ನೀವು ದನ ಗಳಿಗೆ ಪದವಿ ಕೊಡಿಸಬೇಡಿ. ಆಮೇಲೆ ಅವುಗಳು ಕೂಡ ಯುನಿಅನ್ ಮಾಡಿಕೊಂಡು ನಮ್ಮೆಲ್ಲರ ಮೇಲೆ ದಂಗೆ ಎದ್ದರೆ ಕಷ್ಟ!!
ಬರಹ ಮೆಚ್ಚಿ, ನಿಮ್ಮ ಅನುಭವ ಹಂಚಿಕೊಂಡಿದ್ದಕ್ಕೆ ತುಂಬ ಧನ್ಯವಾದ.

- ರಾಣಿ

Chandru said...

ಅಲ್ಲರಿ ನಾವು ಮನುಷ್ಯರು ಅಂತ ದನಗಳ ಹೆಸರಲ್ಲಿ "ಮೇವು ಹಗರಣ ಮಾಡಿದರೆ" ಪಾಪ ಕನಿಸ್ಥ್ತ ಯೂನಿಯನ್ ಮುಲಕನಾದ್ರು ಪ್ರತಿಭಟನೆ ಮಾಡಲಿ ಬಿಡಿ. ಸಾಮಾನ್ಯ ಜನರ ಕಿವಿಗೊಡದ ಈ ರಾಜಕಾರಣಿಗಳು ದನಗಳ ಪ್ರತಿಭಟನೆ ಮತ್ತು ಅದರ ಟಿವಿ ೯ ನೇರ ಸಪ್ರಸರ ಮಾಡಿದರೆ ಇತ್ತ ಗಮನ ಕೊಡಬಹುದು. ಅಲ್ಲವೇ. .

Ittigecement said...

ನಾವೆಲ್ಲ ದಿನನಿತ್ಯ ಆಡೋ ಮಾತುಗಳು....
ಸುಮ್ಮನೆ ಹಲ್ಲುಗಿಂಜೋದಕ್ಕಿಂತ ಏನಾದರೂ ಎರಡು ಶಬ್ಧ ಹೇಳ ಬೇಕಲ್ಲ ಅಂತ ..
ಹೇಳುವ ಔಪಚಾರಿಕ ಮಾತುಗಳು ಇವು...

ಇದರಲ್ಲೂ ನಮ್ಮನ್ನು ನಗಿಸಿದ್ದೀರಲ್ಲ...!!

ನಾನಂತೂ ಇನ್ನು ಇಂಥಹ ಮಾತುಗಳನ್ನು ಆಡುವಾಗ ಎಚ್ಚರಿಕೆಯಲ್ಲಿರ್ತೇನೆ...

ನಗಿಸಿದ್ದಕ್ಕೆ ಅಭಿನಂದನೆಗಳು...

ಸಾಗರದಾಚೆಯ ಇಂಚರ said...

ತುಂಬಾ ಚೆನ್ನಾಗಿದೆ, ಕೆಲವೊಮ್ಮೆ ಅಂಥಹ ಮಾತುಗಳು ಗೊತ್ತಿಲ್ಲದೆ ಬಾಯಲ್ಲಿ ಬಂದು ಬಿಡುತ್ತವೆ, ಮನುಜ ಸ್ವಭಾವ

Rani said...

@ ಚಂದು ರವರೆ ,
ನಿಜ ನಿಜ ಪಾಪ ಮೂಕ ಪ್ರನಿಅಲಿಗು ನ್ಯಾಯ ಸಿಗಲಿ,

@ ಸಿಮೆಂಟು ಮರಳಿನ ಮಧ್ಯೆ ,
ನಕ್ಕು ನಲಿದಿದ್ದಕ್ಕೆ ಧನ್ಯವಾದಗಳು, ಇದು ನನ್ನ ಮೊದಲನೇ ಬರಹ. ಹೀಗೆ ಬರ್ತಾ ಇರಿ. ನಾವು ಎಸ್ಟೆ ಎಚ್ಚರದಿಂದ ಇದ್ದರು ಈ ರೀತಿ ಮಾತುಗಳು ನಮ್ಮಿಂದ ಎಸ್ಕೇಪ್ ಆಗಿ ಹೊರ ಬರುತ್ತವೆ :) ನಾನು ಅದೇ ಪ್ರಯತ್ನದಲ್ಲಿದ್ದೀನಿ.

@ ಸಾಗರದಾಚೆಯ ಇಂಚರ,
ನಿಜ , ಹೀಗೆ ನಿನ್ನೆ ಆಫೀಸ್ ನಲ್ಲಿ ಮ್ಯಾನೇಜರ್ ಒಂದು ಗಂಟೆ ಲೇಟ್ ಆಗಿ ಬಂದ್ರು ಆಗ ನಾನು - ಏನು ಸರ್ ಲೇಟ್ ಅನ್ನಿಸುತ್ತೆ ..ಪಾಪ ಮ್ಯಾನೇಜರ್ ಹೇ ಹೇ ಹೇ ಅಂತ ಹಲ್ಲು ಕಿರಿದರು . ನನ್ನ ತಲೆ ಗೆ ನಾನೇ ಹೊಡೆದು ಕೊಂಡೆ " ಪೆದ್ದು"

ಧರಿತ್ರಿ said...

ಹೆಹೆಹೆ...ಇತ್ತೀಚಿನ ದಿನಗಳಲ್ಲಿ ಸೀರೆ ಉಡೋದೇ ಅಪರೂಪ ವಾಗಿದೆ , ದಿನಾ ಜೀನ್ಸ್ ಷರ್ಟ್ ನೋಡಿ ನೋಡಿ ಅಭ್ಯಾಸವಾಗಿರುವ ನಮ್ಮ ಜನಗಳಿಗೆ ನಮ್ಮಂಥವರು ನಮ್ಮ ಸಂಸ್ಕೃತಿಯಂತೆ ವಾರಕೊಮ್ಮೆ ಯಾದರು (?) ಸೀರೆ ಉಟ್ಟಿ ಕೊಂಡು ಹೋದ್ರೆ
- " ಏನ್ರಿ ವಿಷೇಶ ಸೀರೆ ಇವೊತ್ತು ಮದುವೆ ಏನಾದ್ರು ಗೊತ್ತಾಯಿತಾ ? ಹುಟ್ಟಿದ ಹಬ್ಬಾನ ? ಯರದದ್ರು ಮಾಡುವೆಗೆ ಹೊರಟಿದ್ದಿರ?
( ಅಯ್ಯೋ ನನ್ನ ಕರ್ಮ ಸರಿ ಇಲ್ಲದೆ ಸೀರೆ ಉಟ್ಟೆ ತಪ್ಪು ಆಯಿತು ದೇವರೇ ನನ್ನ ಕಾಪಾಡು ) - " ಎನಿಲ್ಲರಿ ಶುಕ್ರವಾರ ಅಲ್ಲವಾ "

ಎಂಥದ್ದೂ ಜೀ..ಚೆನ್ನಾಗಿದೆರೀ...
ಏನು ಪ್ರತಿ ಬರಹದಲ್ಲೂ ಟಿವಿ 999 ಅಂತೀರಲ್ಲಾ? ಟಿವಿ9ಕ್ಕೆ ಜಾಸ್ತಿ ಪ್ರಚಾರ ಕೊಡ್ತಾ ಇದ್ದೀರೇನು?:)))))
-ಧರಿತ್ರಿ

Rani said...

@ ಧರಿತ್ರಿ
ಧನ್ಯವಾದಗಳು. ಟಿವಿ ೯ ಜಾಸ್ತಿ ಪ್ರಚಾರ ಮಾಡ್ತಿಲ್ಲ. ಅವರು ಬಹಳ ಎಚ್ಚರಿಕೆ ಇಂದ ಹುಡುಕಿ ಹುಡುಕಿ ವಿಷಯಗಳನ್ನ ನಮಗೆ ಪ್ರಚರಮಾಡುತ್ತಾರೆ. ನಮ್ಮದು ಒಂದು ಅಳಿಲು ಸೇವೆ. ಹೆಹೆಹ್ಹೆ.

Anonymous said...

estondu sala enadaru matanadisabekalla anta question keluvudu. Nijavada answer agatya iruvudilla..