ಮಾಡೋಕೆ ಏನು ಕೆಲಸ ಇಲ್ಲದೇ ಇದ್ದಾಗ, ಬೋರ್ ಆಗ್ತಾ ಇದೆ ಅಂದಾಗ, ಮ್ಯಾನೇಜರ್ ತಲೆ ಮೇಲೆ ಕೂತು, ತಲೆ ಕೆಡಿಸಿದಾಗ... ತುಟಿ ಗಳ ಮೇಲೆ ಕಿರು ನಗೆ ಗೆ... ಈ ಬ್ಲಾಗ್.
Monday, December 15, 2008
ದೆವ್ವ ಗಳು ಸಾರ್ ದೆವ್ವಗಳು!!!
ದೆವ್ವಗಳು ಅಥವಾ ಭೂತ ಅನ್ನೋದು ನಂಗೆ ಮೊದಲಿನಿಂದಲೂ ಬಹಳ ಕೂತುಹಲಕರ ವಿಷಯ, ಅಪ್ಪಿ ತಪ್ಪಿನು ದೇವಸ್ತಾನದ ಹತ್ತಿರ ಸುಳಿಯಾದ ನಾನು ದೆವ್ವ ನ ಹುಡುಕಿ ಕೊಂಡು ಸ್ಮಶಾನ ದ ಹತ್ತಿರ, ಮದ್ಯ ರಾತ್ರೆ ಹೊಳೆ ದಂಡೇ ಹೀಗೆ ಮುಂತಾದ ಕಡೆ ಹುಡುಕಾಡಿದ್ದು ಇದೆ. ಆದ್ರೆ ದುರ ದೃಷ್ಟಕ್ಕೆ ಒಂದಾದ್ರೂ ದೆವ್ವ ಕಣ್ಣಿಗೆ ಬೀಳ ಬಾರದೇ? ದೇವರಂತೂ ಸಿಗೋಲ್ಲ ಬಿಡಿ, ಕೊನೇ ಪಕ್ಷ ದೆವ್ವ ನದರೂ ಕಾಣಿಸ ಬಾರದೇ? ಅವುಗಳ ಕಣ್ಣಿಗೂ ನಾನು ನಾನೊಬ್ಬ ಯಕಶ್ಚಿತ್ ಮಾನವ ಪ್ರಾಣಿ ಆದೇನ? ಗೊತ್ತಿಲ್ಲ.. ಅಂತೂ ಇಂತೂ ನನ್ನ ಅದೃಷ್ಟ ವೋ ಏನೋ ಒಂದು ದೆವ್ವ ಮೊನ್ನೆ ಕನಸಲ್ಲಿ ಬಂತು, ಇಂತಹ ಅವಕಾಶಕ್ಕೆ ಕಾದಿದ್ದ ನಾನು ಸಡನ್ ಆಗಿ ಆ ದೆವ್ವದ ಸಂದರ್ಶನ ಮಾಡಿದೆ. ಅದರ ಸಾರಾಂಶ ಇಲ್ಲಿ ಕೊಟ್ಟಿರುವೆ…
1. ದೇವ್ವಗಳು ರಾತ್ರೆ ನೇ ಯಾಕೆ ಬಂದು ಕಾಟ ಕೊಡುತ್ತೆ?
ಡೇ ಟೈಮ್ ನಲ್ಲಿ ಸಿಕ್ಕಪಟ್ಟೆ ಟ್ರ್ಯಾಫಿಕ್ ಇರುತ್ತೆ, ನಾವು ಆನ್ಟೈಮ್ ಗೆ ಹೋಗಿ ಕ್ಲೈಂಟ್ ಗೆ ಕಾಟ ಕೊಡೋಕೆ ಆಗೋಲ್ಲ.. ಸೋ ನಾವು ರಾತ್ರೆ ನ ಪ್ರಿಫರ್ ಮಾಡ್ತಿವಿ!!
2. ಮೋಸ್ಟ್ ಆಫ್ ಟೈಮ್ಸ್ ಕೈಯಲ್ಲಿ ಮೊಂಬತ್ಟಿ ಇರುತ್ತೆ ಯಾಕೆ?
ಬೆಳಕು ಬರಲಿ ಅಂತ!!! ( ನಂಗೆ ಗೊತ್ತೇ ಇರಲಿಲ್ಲ)
3. ದೆವ್ವ ಒಳಗೆ ಬಂದಾಗ ಹಚ್ಚಿದ ಕ್ಯಾಂಡಲ್ ಕೆಟ್ಟೊಗುತ್ತೆ ಯಾಕೆ?
ನಾವು ಹ್ಯಾಪೀ ಬರ್ತ್ ಡೇ ಮಡ್ಕೋತೀವಿ…
4.ಯಾವಾಗ್ಲೂ ಮಹಿಳಾ ದೆವ್ವಗಳೆ ಯಾಕೆ ಕಾಣುತ್ತೆ? ಸಿನಿಮಾ ಗಳಲ್ಲೂ ಲೇಡೀ ದೆವ್ವ ಗಳೆ ಜಾಸ್ತಿ.. ಗಂಡಸರು ದೆವ್ವ ಆಗೋದು ಕಡಿಮೆ ನ?
ಗ್ಲ್ಯಾಮರ್ ಲೋಕ ಸ್ವಾಮಿ, ರಾಜ್ ಫಿಲ್ಮ್ ನೋಡಿ, ಒಳ್ಳೇ ಸೆಕ್ಸೀ ಹುಡುಗಿ ಇದ್ದರೆ, ಅದನ್ನ ಜನ ಕಣ್ಣು ಬಾಯೀ ಬಿಟ್ಟು ನೋಡ್ತಾರೆ!!! ಗಂಡಸರು ದೆವ್ವ ಆಗ್ತಾರೆ, ಬಟ್ ಸಿನಿಮಾ ದವರು ನಮ್ಮನ್ನ ಅಷ್ಟಾಗಿ ಪರಿಗಣಿಸಿಲ್ಲ!!
5. ನಿಮ್ ಮೆಚ್ಚಿನ ಕನ್ನಡ ನಟ ಯಾರು?
ರವಿ ಚಂದ್ರನ್, ( ಶ್ರೀ ರಾಮ ಚಂದ್ರ ಮೂವೀ ನಲ್ಲಿ ಗಂಡು ದೆವ್ವ ಇದೆ!!!)
6. ನಿಮಗೆ ಇಷ್ಟವಾಗುವ ಆಹಾರ ಯಾವುದು? ಬಿಸಿ ರಕ್ತ ಅಂಡ್ ಹಸಿ ಮಾಂಸ ಅಂತಾರೆ ನಿಜ ನ?
ಬಿಸಿ ರಕ್ತ? ಹಸಿ ಮಾಂಸ? ರಿ ಸ್ವಾಮಿ ನೀವು ಮಾತ್ರ ಪೆಪ್ಸೀ ಕೋಕ್ ಕುಡಿದು, ಚಿಕನ್ 65, ಮಟನ್ ಬಿರಿಯಾನಿ ತಿನ್ನ ಬೇಕು, ನಾವು ಉಪ್ಪು ಕಾರ ಇಲ್ಲದ ಹಸಿ ಮಾಂಸ ತಿನ್ನೋಕೆ ನಾವೇನೂ ಕಾಡು ಮನುಷ್ರ? ನಮ್ಗೆ ಅದು ಇಷ್ಟ ಇಲ್ಲ. ಇನ್ಮೂಂದೆ ನಂಗೆ ಒಳ್ಳೇ ನಾನ್ ವೆಜ್ ಡಿಶಸ್ ಕೊಡಿ. ( ಕೋಲಿ ಬಲಿ ಬದಲು ಒಳ್ಳೇ ಒಳ್ಳೇ ಚಿಕನ್ 65 ಕೊಡಿ)
7. ದೆವ್ವಗಳದ್ದು ಏನಾದ್ರೂ ಕಾಲ್ ಸೆಂಟರ್ ಇದೆಯಾ? ನಮ್ಗೆ ಏನಾದ್ರೂ ಡೌಟ್ ಬಂದ್ರೆ ಆನ್ಸರ್ ಮಾಡೋಕೆ.
ಒಂದು ಕಾಲ್ ಸೆಂಟರ್ ಓಪನ್ ಮಾಡೋ ಪ್ಲಾನ್ ಇತ್ತು, ಈಗ ರಿಸೆಶನ್ ನೋಡಿ, ಅದಕ್ಕೆ ಇಡೀ ಪ್ರಾಜೆಕ್ಟ್ ಆನ್ ಹೋಲ್ಡ್ ನಲ್ಲಿ ಇದೆ.
8. ನೀವು ಬರಿ ಕಾಟ ಕೊಡ್ತೀರೋ ಅಥವಾ ಹೆಲ್ಪ್ ಕೂಡ ಮಾಡ್ತೀರೋ? ಹೆಲ್ಪ್ ಮಾಡೋದಾದ್ರೆ ನಂ ಹತ್ತಿರ ದೊಡ್ಡ ಲಿಸ್ಟ್ ಇದೆ.
ಅದೆಲ್ಲ ನಂ ಮ್ಯಾನೇಜರ್ ಹೇಳಿದ ಹಾಗೆ ಆಗುತ್ತೆ, ಕಾಟ ಕೊಡು ಅಂದ್ರೆ ಕಾಟ, ಹೆಲ್ಪ್ ಅಂದ್ರೆ ಹೆಲ್ಪ್. ಹೆಲ್ಪ್ ಬೇಕಿದ್ರೆ ಬೇಗ ಸತ್ತು ದೆವ್ವ ಆಗಿ, ಮ್ಯಾನೇಜರ್ ನ ಮೀಟ್ ಮಾಡಿ!!!
9. ನಿಮ್ಮ ವರ್ಕಿಂಗ್ ಅವರ್ಸ್ ಏನು?
ಜಸ್ಟ್ 8 ಘಂಟೆ. .ಮದ್ಯ 3 ಬ್ರೇಕ್!!!
10. ನಿಮ್ಗು ಟಾರ್ಗೆಟ್ಸ್ ಇರುತ್ತ?
ಹೂನ್… ನಂಗೂ ಮ್ಯಾನೇಜರ್ ಗಳು ಇರ್ತವೆ ಅಂತ ಹೇಳಿಡ್ನಲ್ಲ…( ಅಳುತ್ತಾ!!!)
11. ನೀವು ಗಳು ಹಳೆ ಕಿತ್ಟೋದ ಬಂಗಲೇ ಗಳಲ್ಲೇ ಯಾಕೆ ಜಾಸ್ತಿ ಇರೋದು?ಹೊಸ ಮನೆ ಪೈಂಟ್ ವಾಸನೆ ಮೂಗಿಗೆ ಆಗೋಲ್ವಾ?
ರೆಂಟ್ ಪ್ರಾಬ್ಲಮ್ ಸ್ವಾಮಿ, ಹಳೆ ಮನೆಗೆ ರೆಂಟ್ ಕಡಿಮೆ, ಈಗ ರಿಯಲ್ ಎಸ್ಟೇಟ್ ಬಿದ್ದೊಗೀರೊದ್ರಿಂದ ನಾವು ಹೊಸ ಫ್ಲಾಟ್ ಗಳಲ್ಲಿ ಸೆಟ್ಲ್ ಆಗ ಬಹುದು ಅನ್ಸುತ್ತೆ!!
12. ನೀವು ಕ್ಯಾಮರ ಗಳಲ್ಲಿ ಕೆಲವು ಸಲ ಕಾಣಿಸಿ ಕೋತೀರ, ನಂ ಕಣ್ಣಿಗೆ ಕಾಣೋಲ್ಲ ಯಾಕೆ?
ಯಾಕೆ ನಾವು ಫೋಟೋ ಗೆ ಪೋಸ್ ಕೊಡ ಬಾರದ?
ಇನ್ನೇನು ಮುಂದಿನ ಪ್ರಶ್ನೆ ಕೇಳ ಬೇಕು ಅನ್ನುವುದರಲ್ಲಿ .. ಇಲ್ಲಿ ನಂ ರೂಮ್ ಮೇಟ್ ಜಿತಿನ್ ಅನ್ನೋ ಜೀವಿ ಜೋರಾಗಿ ಗೊರಕೆ ಹೊಡೆದು ನಾನು ಎದ್ದೆಳೊ ಹಾಗೆ ಆಯಿತು!! ದೆವ್ವ ನು ಡಿಸಪಿಯರ್ ಆಯಿತು.!!!
Friday, December 5, 2008
ಮೊಬೈಲ್ ಬಿಲ್ ಕಡಿಮೆ ಮಾಡೋದು ಹೇಗೆ?
೧.ನಿಮ್ ಗರ್ಲ್ ಫ್ರೆಂಡ್ ಜೊತೇನೆ ಮಲಕ್ಕೊಳಿ, ಸೊ ಅವಳು ರಾತ್ರೆ ಇಡಿ ನಿಮಗೆ ಮಿಸ್ ಕಾಲ್ ಕೊಟ್ಟು, ನೀವು ಮತ್ತೆ ಕಾಲ್ ಮಾಡಿ, ನಿಮಗೆ ಹೆವಿ ಬಿಲ್ ಬರೋದು ಎಲ್ಲ ತಪ್ಪುತ್ತೆ... ( ತುಂಬ ಅಧ್ಬುತ ವಾದ ಐಡಿಯಾ ಅಲ್ವ? )
೨. ಮಾಹಿತಿ ಕಳಿಸೋಕೆ ಕಾಳಿದಾಸನ ಮೇಘ ಸಂದೇಶ ಹೇಗೆ? ನೀವು ಆಫೀಸ್ ಗೆ ಬರ್ತಾ ಇಲ್ಲ ಅಂತ ನಿಮ್ ಮ್ಯಾನೇಜರ್ ಗೆ ಒಂದು ಮೇಘ ಸಂದೇಶ ಕಳ್ಸಿ!!!!
3. ಕಂಡ ಕಂಡವರಿಗೆ ಮೊಬೈಲ್ ನಿಂದ ಆರೋಗ್ಯಕ್ಕೆ ಹಾನಿ, ಅದರಿಂದ ಪ್ರೈವಸಿ ಅನ್ನೋದೇ ಹೋಗಿದೆ, ನಾನು ಮೊಬೈಲ್ ಕಡಿಮೆ ಉಪಯೋಗಿಸುವೆ ಅಂತ ಪುಂಗಿ ಊದಿ. ನೀವು ಯಾರಿಗೂ ಫೋನ್ ಮಾಡದೇ ಇದ್ರೂ ಯಾರು ನಿಮ್ಮನ್ನ ತಪ್ಪು ತಿಳಿಯೋಲ್ಲ.
4.ಅ ದಯಾಮಯ ನಾದ ಭಗವಂತ ಆಫೀಸ್ ನಲ್ಲಿ ಫೋನ್ ಗಳನ್ನ ಕೊಟ್ಟಿರೋದೆ ನಾವು ನಮಗೆ ಬೇಕಾದವರಿಗೆ, ಬೇಕಾದಷ್ಟು ಹೊತ್ತು ಮಾತಾಡಲಿ ಅಂತ... ದಯಮಾಡಿ ಉಪಯೋಗಿಸಿ....
೫.ಅಗತ್ಯ ಬಿದ್ದಾಗ ಮಾತ್ರ ಫೋನ್ ಮಾಡಿ.. ಆದರೆ ಮಾತಿನ ನಡುವೆ.. ಏನು ಹೇಳ್ಬೇಕು ಅಂತ ಇದ್ದೆ ಅಂದ್ರೆ, ........ ಯಾಕೋ ಸರಿಯಾಗಿ ಕೇಳಿಸ್ತಾ ಇಲ್ಲ. ಸಿಗ್ನಲ್ ಕಡಿಮೆ ಇದೆ, ಕೇಳಿಸ್ತಾ ಇಲ್ಲ.. ಅಂತ ಬಡಕೊಂಡು ಲೈನ್ ಕಟ್ ಮಾಡಿಬಿಡಿ, ಆಮೇಲೆ ಅವರೇ ಕಾಲ್ ಮಾಡ್ತಾರೆ, ನೀವು ಆರಾಮಾಗಿ ಮಾತಾಡಿ.
೬. ಬಿ.ಎಸ್.ಏನ್.ಎಲ್ ಕನೆಕ್ಷನ್ ತಗೊಂಡು ಬಿಡಿ, ನೀವು ಕಾಲ್ ಮಾಡಬೇಕು ಅಂದ್ರು ನಿಮಗೆ ಸಿಗ್ನಲ್ ಸಿಗೋಲ್ಲ... ನಾನು ಅ ಬಿ ಎಸ್ ಏನ್ ಎಲ್ ನೆ ಉಪಯೋಗಿಸ್ತಾ ಇರೋದು... ನಂಗೆ ಸಿಕ್ಕಾಪಟ್ಟೆ ಕಡಿಮೆ ಬಿಲ್ ಬರುತ್ತೆ... ಇಗ ದುಬೈ ನಲ್ಲಿ ಆಫೀಸ್ ಮೊಬೈಲ್ ಇದೆ... ಚೆನ್ನಾಗಿ ಉಪಯೋಗಿಸುತ್ತಾ ಇರುವೆ!!!
೭. ಆದಷ್ಟು ಮಿಸ್ ಕಾಲ್ ಕೊಟ್ಟು ಅವರೇ ಕಾಲ್ ಮಾಡೋ ಹಾಗೆ ಮಾಡಿ, ಆದ್ರೆ ನಿಮ್ ಮನೆಗೆ ಬೆಂಕಿ ಬಿದ್ರೆ, ಅಥವಾ ನೀವು ಲಿಫ್ಟ್ ನಲ್ಲಿ ಸಿಕ್ಕಿ ಹಾಕಿ ಕೊಂಡರೆ, ಫೈರ್ ಇಂಜಿನ್ ಗೆ, ಪೋಲಿಸ್ ಸ್ಟೇಷನ್ ಗೆ ಮಿಸ್ ಕಾಲ್ ಕೊಡ ಬೇಡಿ ಕಾಲ್ ಮಾಡಿ.
೮. ಇನ್ನು ಸಿಕ್ಕಾಪಟ್ಟೆ ಒಳ್ಳೆ ಪ್ಲಾನ್ ಅಂದ್ರೆ ನಿಮ್ ಮೊಬೈಲ್ ಕನೆಕ್ಷನ್ ತೆಗೆದು ಬಿಡಿ. ಮೊಬೈಲ್ ಲೇ ಇಲ್ಲ ಅಂದ್ರೆ ಬಿಲ್ ಹೇಗೆ ಬರುತ್ತೆ?
ಹೀಗೆ ಮಾಡಿದ್ರೆ ನಿಮ್ ಮೊಬೈಲ್ ಬೀ ಸಿಕ್ಕಪಟ್ಟೆ ಉಳಿಯುತ್ತೆ, ಆ ದುಡ್ಡನ್ನ ನಂಗೆ ದಾನ ಮಾಡಿ ಕೃತಾರ್ತರಾಗಿ.
Tuesday, October 28, 2008
ಸಾಯುವ ಸುಲಭ ಮಾರ್ಗಗಳು!!

Saturday, October 25, 2008
ಚಂದಿರ ನ ಬಗ್ಗೆ.... ದೂರಾಲೋಚನೆ!!!
ನಾನು ಬ್ಲಾಗ್ ಕಡೆ ತಲೆ ಹಾಕದೆ ೨ ವಾರ ಆಗಿತ್ತು!! ಯಾಕೆ ಅಂದ್ರೆ ಇಸ್ರೋ ದವರು ಚಂದಿರನ ಹತ್ತಿರ ಉಪಗ್ರಹ ಬಿಟ್ಟ ಹಾಗೆ ನಾವು ಸೂರ್ಯನ ಬಳಿಗೆ ಮಾನವ ಸಹಿತ ನೌಕೆ ಯನ್ನು ಕಳಿಸುವ ಯೋಜನೆ ಯನ್ನು ಹಂಮಿಕೊಂಡಿದ್ದಿವಿ, ಆದರೆ ಕೊನೆಯ ಸಮಯ ದಲ್ಲಿ ಕೆಲವು ಧಾರ್ಮಿಕ ಕಾರಣ ಗಳು ಅಡ್ಡ ಬಂದು ಯೋಜನೆಯನ್ನೇ ನಿಲ್ಲಿಸ ಬೇಕಾಯಿತು. ( ಸೂರ್ಯ ಕಣ್ಣಿಗೆ ಕಾಣೋ ದೇವರು, ಹಾಗೆಲ್ಲ ಪ್ರಯೋಗ ಮಾಡೋಕೆ ಹೋಗಬಾರದು ಅಂಥ ಮಠದಿ ಪತಿಗಳು ಅಡ್ಡಿ ಪಡಿಸಿದರು, ಅದೆಲ್ಲೋ ವ್ಯಟಿಕಾನ್ ನಲ್ಲಿ ಕೂತಿರೋ ವೃದ್ದ ಪೋಪ್ ಹಿಂದೂ ಗಳು ದೇವರ ಹತ್ತಿರ ಡೈರೆಕ್ಟ್ ಹೋಗಿ ಬಿಟ್ಟರೆ ಅಂತ ಹೆದರಿ , ಅವರ ಮತದ ದೇವರ ಹಾಗು ಜನರ ಮದ್ಯೆ ಇರುವ ಮಧ್ಯವರ್ತಿಗೆ ಬೆಲೆ ಇಲ್ಲ ಆಗುತ್ತೆ ಅಂಥ ಅವರು ಬೆದರಿಕೆ ಹಾಕಿದರು.... ). ಒಟ್ಟಿನಲ್ಲಿ ನಮ್ಮ ಸೂರ್ಯ ಯಾನ - ೧ ಕ್ಕೆ ತೊಂದರೆ ಆಗಿ ಪ್ರಯೋಗವನ್ನೇ ನಿಲ್ಲಿಸಬೇಕಾಯಿತು.
ಆದರೇನು ಇಸ್ರೋ ದವರ ಪ್ರಯೋಗದ ದಿಂದ ಚಂದ್ರನಲ್ಲಿ ಏನೆಲ್ಲಾ ಇವೆ, ಅದರಿಂದ ಏನೆಲ್ಲಾ ಪ್ರಯೋಜನ ಇದೆ ಅಂತ ಲೆಕ್ಕ ಹಾಕಲಿದ್ದಾರೆ. ಅಲ್ಲೂ ಕಬ್ಬಿಣ ಮುಂತಾದ ಲೋಹ ಗಳು ಸಿಗುತ್ತೆ ಅನ್ನುವುದಾದರೆ ನಮ್ಮ ಗಣಿ ಧಣಿ ಗಳು ಅಲ್ಲೂ ಮೈನಿಂಗ್ ಮಾಡಿ ಚೀನಾ ಕೆ ಕಳಿಸುವ ಯೋಜನೆ ಹಾಕಿದ್ದರಂತೆ. ಬೆಂಗಳೂರಿನಲ್ಲಿ ಇರೋ ಬರೊ ಕೆರೆ ನೆಲ್ಲ ನುಂಗಿರುವ ನಮ್ಮ ರಿಯಲ್ ಎಸ್ಟೇಟ್ ನಾಯಕರು ಅಲ್ಲಿ ಭೂಮಿ ಕೊಳ್ಳೋ ಪ್ಲಾನ್ ಮಾಡಿದ್ದರೆ ಅಂತ ವರದಿ ಇದೆ. ಆದರಿಂದ ಭವಿಷ್ಯದಲ್ಲಿ ಮಕ್ಕಳಿಗೆ ಊಟ ಮಾಡಿಸ ಬೇಕಾದರೆ ಚಂದಿರನ ತೋರಿಸ ಬೇಕಾದರೂ ಟ್ಯಾಕ್ಸ್ ಕಟ್ಟ ಬೇಕಾಗಬಹುದು.
ಚಂದ್ರ ಯಾನ ಯಶಾಸ್ಸಾಗಿ, ಅಲ್ಲೂ ಮಾನವ ವಾಸ ಶುರು ಆದರೆ, ಗೌಡರು ತಮ್ಮ ಎರಡನೆ ಮಗನನ್ನು ಅಲ್ಲಿ ಮುಖ್ಯ ಮಂತ್ರಿ ಮಾಡುವ ಆಲೋಚನೆ ಇದೆ ಅಂತೆ. ಇನ್ನೂ ಲಾಲು ಅಲ್ಲಿನ ರಿಕ್ರೂಟ್ ಮೆಂಟ್ ಗೆ ಬಿಹಾರ ದಿಂದ ಚಂದ್ರ ನಿಗೆ ರೈಲು ಬಿಡವ ಯೋಜನೆ ಹಾಕಿದ್ದು, ರಾಜ್ ಟಾಕ್ರೆ ಅದನ್ನು ವಿರೋಧಿಸಿ ಮುಂಬೈ ಬಂಧ್ ಮಾಡಲು ಕರೆ ಮುಂದಾಗಿದ್ದಾರೆ. ಇನ್ನು ಉಳಿದ ನಾಯಕರು ಗಳಿಗೆ ಈ ಯೋಜನೆ ಯ ಬಗ್ಗೆ ಅಷ್ಟಾಗಿ ಆಸಕ್ತಿ ಇದ್ದಂತಿಲ್ಲ. ಇಸ್ರೋ ದವರು ಬಿಟ್ಟಿದ್ದು, ಉಪಗ್ರಹವೋ, ಕ್ಶಿಪಣಿಯೊ ಅನ್ನೋದು ಗೊತ್ತಿಲ್ಲ ಅನ್ಸುತ್ತೆ, ಅವರೆಲ್ಲ ಪೋಲೀಸ್ ರನ್ನ ಟ್ರಾನ್ಸ್ಫರ್ ಮಾಡೋದ್ರಲ್ಲಿ, ಮುಂದಿನ ಬೈ ಎಲೆಕ್ಶನ್ ಗೆ ಹೆಂಡ ಹಂಚೋಡ್ರಲ್ಲಿ ಬ್ಯೂಸಿ ಇದ್ದಾರೆ ಅಂತ ಕಾಣಿಸುತ್ತಾ ಇದೆ.
ಮುಂದೊಂದು ದಿನ ಹಚ್ ನಾಯಿ ಗಗನ ಯಾನಿ ನ ಅಟ್ಟಿಸಿ ಕೊಂಡು ಹೋಗುತ್ತಿರುವ ಜಾಹಿರಾತು ಬರಬಹುದು. ನೀವು ಚಂದಿರನ ಬಳಿ ಹೋದರೂ ನಮ್ಮ ನೆಟ್ವರ್ಕ್ ಇರುತ್ತೆ ಅಂತ ಅವರು ಹೇಳಬಹುದು. ಮೈಕ್ರೋಸಾಫ್ಟ್ ನವರು ವಿಂಡೊಸ್ ಮೂನ್ ಎಡಿಶನ್ ತರಬಹುದು. ಟಾಟಾ ದವರು ಅಲ್ಲಿ ನ್ಯಾನೋ ಬದಲು ಮೂನೋ ಅನ್ನೋ ಕಾರು ತರುವ ಎಲ್ಲ ಸಾಧ್ಯತೆ ಇದೆ.
ಒಂಟಿ ಕೊಪ್ಪಲ್ ಪಂಚಾಂಗ ಮಂದಿರದಲ್ಲಿ ಚಂದ್ರ ನಿಗೆ ಅಂತೇಲೆ ಬೇರೆ ಪಂಚಾಗ ಬರುವ ಸಾದ್ಯಾತೆಯನ್ನು ಅಲ್ಲ ಗೆಳೆಯುವಂತಿಲ್ಲ. ಶ್ರೀ ಶ್ರೀ ಶ್ರೀ ----- ಸ್ವಾಮಿ ಗಳು ಅಲ್ಲೊಂದು ಮಠ ಮಾಡಲು ಶಿಷ್ಯ ರನ್ನು ಹುಡುಕುತ್ತಾ ಇದ್ದಾರಂತೆ. ಈ ಬಗ್ಗೆ ವಿಸ್ರುತ ವರದಿಗೆ ಹಾಯ್ ಬೆಂಗಳೂರ್ ಮುಂದಿನ ದಿನಗಳಲ್ಲಿ ನೋಡಬಹುದು.
ಏನೇ ಆಗಲಿ ಚಂದ್ರ ಭೂಮಿ ತರ ಆದರೆ, ಕವಿ ಗಳಿಗೆ ಹೋಲಿಕೆಗೆ ಕಷ್ಟ ವಾಗಬಹುದು. ಚಂದ್ರ ಮುಖಿ ಅನ್ನೋದು ನಾಪತ್ತೆ ಆಗಬಹುದು. ಪ್ರೇಮಿಗಳಿಗೆ ಚಂದ್ರ ಈಗಿನಷ್ಟು ರೊಮ್ಯಾಂಟಿಕ್ ಆಗದೆ ಹೋಗಬಹುದು.!!!!!
Thursday, October 9, 2008
ರೆಸಿಗ್ನೇಶನ್ ಲೆಟರ್ ಬರೆಯೋದು ಹೇಗೆ?
ಹಲವಾರು ಜನ ಅಗಾಗ ಕೇಳ್ತಾ ಇರ್ತಾರೆ, ರೆಸಿಗ್ನಶನ್ ಲೆಟರ್ ಹೇಗೆ ರೆಡಿ ಮಾಡೋದು ಅಂತ. ಅದ್ದರಿಂದ ಇಲ್ಲಿ ಕೆಳಗೆ ಕೆಲವು ಕ್ರಿಯೇಟಿವ್ ರಾಜಿನಾಮೆ ಪತ್ರ ಗಳ ಮಾದರಿ ಕೊಟ್ಟಿರುವೆ. ನೀವು ಉಪಯೋಗಿಸಿ ಕೊಳ್ಳ ಬಹುದು.
ಮಾದರಿ ಒಂದು.
------------------------------------------------------------------
ಡಿಯರ್ ಬಾಸ್,
ನಾನು ಯಾಕೆ ರಿಸೈನ್ ಮಾಡ್ತಾ ಇದ್ದೀನಿ ಗೊತ್ತಾ?
ನಾನು ನಿಮ್ಮ ಕಂಪನೀ ಗಾಗಿ ಬಹಳ ಪ್ರಾಮಾಣಿಕ ವಾಗಿ ಕೆಲ್ಸಾ ಮಾಡ್ತಾ ಇದ್ದೇನೆ, ಹೀಗಾಗಿ ನನಗೆ ನನ್ ಬ್ಲಾಗ್ ಗೆ ಬರೆಯಲು ಸಮಯ ಸಿಗುತ್ತಾ ಇಲ್ಲ. ಬ್ಲಾಗ್ ಓದುಗರು ನನ್ನ ದ್ವೇಷಿಸ್ತ ಇದ್ದಾರೆ. ಓದುಗರು ದ್ವೇಷಿಸಲಿಕ್ಕೆ ಶುರು ಮಾಡಿದ ಮೇಲೆ ಅವರು ನನ್ನ ಬ್ಲಾಗ್ ಗೆ ಬರೋಲ್ಲ, ಅವರು ಬರದೇ ಇದ್ದಾರೆ ನನ್ನ ಹಿಟ್ ಕೌಂಟ್ಸ್ ಕಡಿಮೆ ಆಗುತ್ತದೆ. ಆವಾಗ ನಾನು ಬಹಳ ದುಃಖಿತ ನಾಗುತ್ತೇನೆ. ನನಗೆ ದುಃಖವಾದಾಗ ಹೆಚ್ಚಾಗಿ ತಿನ್ನಲು ಶುರು ಮಾಡುವೆ , ಹೆಚ್ಚು ತಿಂದರೆ ದೇಹದಲ್ಲಿ ಕೊಬ್ಬು ಶೇಕರಣೆ ಗೊಂದು ಡುಮ್ಮ ಆಗುವೆ, ಅದು ಕಂಪನೀ ಯ ಇಮೇಜ್ ಗೆ ತೊಂದರೆ ಆಗುತ್ತದೆ. ಆಗ ನಿಮ್ಮ ಬಿಸಿನೆಸ್ ಗೆ ತೊಂದರೆ ಆಗುತ್ತದೆ. ಬುಸಿನೆಸ್ಸ್ ಗೆ ತೊಂದರೆ ಆದರೆ ನೀವು ಕೂಡ ದುಃಖಿತರಾಗುತ್ತೀರಿ, ಪರಿಣಾಮವಾಗಿ ನೀವು ಕೂಡ ತುಂಬಾ ತಿನ್ನಲು ಶುರು ಮಾಡುತ್ತೀರಿ. ಆಮೇಲೆ ನೀವು ಕೂಡ ದಪ್ಪ ಆಗುತ್ತೀರಿ. ನನಗೆ ನಿಮ್ಮನ್ನು ಡುಮ್ಮಗೆ ಕಲ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
ನೋಡಿ ಬಾಸ್ ಇದೊಂದು ದೊಡ್ಡ ವಿಷ ಚಕ್ರ, ನಾನು ಇಲ್ಲಿ ತನಕ ಕಂಪನೀ ಯ ಒಳಿತೆಗೆ ಕೆಲಸ ಮಾಡಿರುವೆ, ಈಗಲೂ ಒಳಿತಿಗಾಗಿ ಕೆಲಸ ಬಿಡುತ್ತಾ ಇರುವೆ.
ಆದ್ದರಿಂದ ನನಗೆ ಹೋಗಲು ಬಿಡಿ.
ನಿಮ್ಮ ಅತ್ಯಂತ ನಂಬುಗೆಯ ಹಾಗೂ ನಿಮ್ಮ ಹಿತೈಷಿ!!!
( ಸಹಿ)
------------------------------------------------------------------
ಮಾದರಿ ಎರಡು.
------------------------------------------------------------------
ಡಿಯರ್ ಬಾಸ್,
ನಿಮಗೆ ನೆನಪಿರಬಹುದು, ಎರಡು ತಿಂಗಳ ಹಿಂದೆ ನೇ ಹೇಳಿದ್ದೆ, ನನ್ನ ಸಂಬಳ ಜಾಸ್ತಿ ಮಾಡದೇ ಇದ್ದಲ್ಲಿ ಕೆಲಸ ಬಿಡುವೆ ಅಂತ. ಆದರೂ ನೀವು ಜಾಸ್ತಿ ಮಾಡಿಲ್ಲ. ಆದ್ದರಿಂದ ನಾನು ಕೆಲಸ ಬಿಡುತ್ತಾ ಇದ್ದೇನೆ. ನನಗೆ ಮತ್ತೊಂದು MNC ನಲ್ಲಿ ಶೇಕಡ ನೂರು ಹೈಕ್ ಸಿಕ್ಕಿದೆ, ಸತತ ಮೂರು ವರ್ಷ ಆನ್ಸೈಟ್ ಗೆ ಪ್ರಯತ್ನಿಸಿದರು ನಂಗೆ ಇಲ್ಲಿ ಅವಕಾಶ ಸಿಕ್ಕಲಿಲ್ಲ, ಆ ಕಂಪನೀ ಯಲ್ಲಿ ಆನ್ಸೈಟ್ ಅವಕಾಶಗಳು ವಿಫುಲ ವಾಗಿ ಇದೆ. ಅದು ಇಲ್ಲದೇ ಹೋದರೂ ಸ್ಯಾಲರೀ ಕುಶಿ ಕೊಡೋ ಅಷ್ಟು ಇದೆ. ಸೋ ಇಂದಿಗೆ ಸರಿಯಾಗಿ ಒಂದು ತಿಂಗಳ ನಂತರ ನನ್ನನ್ನು ರಿಲೀವ್ ಮಾಡಿ.
ನಿಮ್ಮನ್ನು ಆ ದಯಾಮಯ ನಾದ ಭಗವಂತನು ಸದಾ ಕಾಪಾಡಲಿ.
ಇಂತೀ ನಿಮ್ಮಿಂದ ಸತತ ಮೂರು ವರ್ಷ ದೌರ್ಜನ್ಯಕ್ಕೆ ಒಳಗಾದ ಅಮಾಯಾಕ ನೌಕರ!!
( ಸಹಿ)
------------------------------------------------------------------
ಮಾದರಿ ಮೂರು.
------------------------------------------------------------------
ಡಿಯರ್ ಬಾಸ್,
ಇದು ನನ್ನ ರಾಜೀನಾಮೆ ಪತ್ರ.
ದನ್ಯವಾದಗಳು
(ಸಹಿ)
------------------------------------------------------------------
ಮಾದರಿ ನಾಲ್ಕು.
-----------------------------------------------------------------
ಸಧ್ಯದಲ್ಲೇ ನಾನು ಕೆಲಸ ಬಿಡಬೇಕಾಗಿ ಬರಬಹುದು, ಅಥವಾ ಅವರೇ ಒಡಿಸ ಬಹುದು... ಸೊ ಕೊನೆಯ ಮಾದರಿಯನ್ನು ಕೊಡೋಣ ಅಂಥ ಇದ್ದೇನೆ!!! ಎನಂತಿರಿ?
Tuesday, September 30, 2008
ಎಲ್ಲ ಓಕೇ, ಮದುವೆ ಯಾಕೆ?

ಹುಡುಗರಿಗೆ ಈ ಕೆಳಕಂಡಂತ ಉಪಯೋಗ ಗಳು ಮಧುವೆ ಆಗೋದರಿಂದ ಇದೆ.
1. ಹುಡುಗರಿಗೆ ಬೆಂಗಳೂರ್ ನಲ್ಲಿ ಮನೆ ಬಾಡಿಗೆಗೆ ಸಿಗೋದು ಕಷ್ಟ.. ಬ್ಯಾಚಲರ್ಸ್ ಅಂತ ಹೇಳಿ.. ಕೊಡೋಲ್ಲ.. ಮದುವೆ ಆದ್ರೆ ಮನೆ ಸುಲಭವಾಗಿ ಹುಡುಕ ಬಹುದು…
2. ಮಾಡಿದ ತಪ್ಪುಗಳಿಂದ ಬುದ್ದಿ ಕಲಿ ಬೇಕು… ಹೆಂಡತಿ ಅನ್ನೊಳು ಇದ್ರೆ.. ನಿಮ್ಮ ತಪ್ಪುಗಳನ್ನು ಯಾವಾಗಲೂ ಎತ್ತಿ ತೋರಿಸ್ತ ಇರ್ತಾಳೆ. (ಹೆಂಡತಿ ಒಂಥರ ಪರ್ಮನೆಂಟ್ ಮೆಮೋರೀ )
3. ನಿಮ್ಮ ಸೋಮಾರಿ ಜಿಪುಣ ಶೆಟ್ಟಿ ಗೆಳೆಯರಿಂದ,ಉಡುಗೊರೆ ಗಳನ್ನ ತಗೊಳೊಕೆ ಮದುವೆ ಒಂದು ಹೇಳಿ ಮಾಡಿಸಿದ ಕಾರ್ಯಕ್ರಮ
4. ಎಷ್ಟು ದಿನ ಅಂತ ಮ್ಯಾನೇಜರ್ ಜೊತೆ. ಫ್ರೆಂಡ್ಸ್ ಜೊತೆ ಜಗಳ ಆಡ್ತೀರಿ? ಮನೇಲಿ ಅದಕ್ಕೆ ಅಂತ ಒಬ್ರು ಪರ್ಮನೆಂಟ್ ಆಗಿ ಇದ್ರೆ ಲಾಭ ಅಲ್ಲವೇ??
5. ಹೊಟೆಲ್ ಗಳು 24/7 ಓಪನ್ ಆಗಿರೋಲ್ಲ…
6. ಜೀವನದಲ್ಲಿ ಕುಶಿ ಆಗಿ ಇರುವು ದೊಂಧೆ ದ್ಯೆಯ ಅಲ್ಲ… ಸೋ ಮದುವೆ ಆಗಿ.
ಹುಡುಗಿಯರಿಗೆ ಮಧುವೆ ಆಗೋದರಿಂದ ಇ ಲಾಭ ಗಳು ಇವೆ!!
1. ಸಂತೆ ಗೆ / ಮಾರ್ಕೆಟ್ ಗೆ ಹೋದಾಗ ಸಾಮಾನು ಹಿಡ್ಕೊಳಕ್ಕೆ ಗಂಡ ಅನ್ನೋನು ಇದ್ರೆ ನಿಯತ್ತಾಗಿ ಮನೆ ತನಕ ಹಿಡ್ಕೊಂಡು ಬರ್ತನೆ ( ಹುಡುಗಿಯರೇ ಗಮನಿಸಿ, ಈ ಮಾತನ್ನು ಹೇಳಿದವನು ಕೃಷ್ಣ….. ಯಾರು ಬೇಕಾದ್ರೂ ಅವನಿಗೆ ಅಪ್ಲೈ ಮಾಡಬಹುದು.)
2. ಕೆಲವೊಂದು ಸಲ ATM ವರ್ಕ್ ಆಗದೇ ಇರೋ ಚಾನ್ಸಸ್ ಇರುತ್ತೆ
3. ಒಳ್ಳೇ ಕೆಲಸ ದವರು ಈಗಿನ ಕಾಲದಲ್ಲಿ ಸಿಗೋದು ಕಷ್ಟ.. ಸೋ
4. ಫ್ರೀ ಪಿಕ್ ಅಪ್ ಅಂಡ್ ಡ್ರಾಪ್ ಫೇಸಿಲಿಟೀ ಸಿಗುತ್ತೆ, ಆಫೀಸ್ ಗೆ.
5. ಹೊಸ ರುಚಿ ಪ್ರಯೋಗ ಮಾಡೋಕೆ ಗಂಡಂಗಿಂತ ಒಳ್ಳೇ ಬಕ್ರ ಯಾರು ಸಿಗೋಲ್ಲ.
ಚೀಕು ಅವರು ಭಯಾನಕ ಐಡಿಯಾ ಗಳನ್ನ ಕೊಡ್ತಾ ಇದ್ದಾರೆ, ಅವರನ್ನು ಮಧುವೆ ಆಗೋ ಹುಡುಗನಿಗೆ ನನ್ನ ಕಡೆ ಇಂದ ಎರಡು ನಿಮಿಷದ ಮೌನಾಚರಣೆ. ( ದುಃಖಕ್ಕೆ .. ಪಾಪ ಅ ವ್ಯಕ್ತಿ. )
Tuesday, September 23, 2008
ಇಲಿ ಕೊಲ್ಲುವುದು ಹೇಗೆ?

ಸಾರ್ವಜನಿಕರಲ್ಲಿ ವಿನಂತಿ, ಕೃಷ್ಣ ಅಲಿಯಾಸ್ ಅನಂತ ರಾಮ್ ಅವರು ಹೆಣ್ಣು ಇಲಿಗಳನ್ನು ಹಿಡಿಯುವುದರಲ್ಲಿ ಎತ್ತಿದ ಕೈ... ಆಸಕ್ತರು ಸಂಪರ್ಕಿಸಿ.
Friday, September 12, 2008
ಸುಲಭವಾಗಿ ಹಣ ಸಂಪಾದನೆ ಹೇಗೆ?
ಇಲ್ಲಿರುವ ಎಲ್ಲಾ ಪ್ರಯೋಗಗಳು ನಿಮ್ಮ ವ್ಯಕ್ತಿತ್ವವನ್ನು ಅವಲಂಬಿಸಿರುತ್ತದೆ!
೧. ನಿಮಗೆ ಕಂಡವರ ಮನೆ ವಿಷಯದಲ್ಲಿ ಮೂಗು ತೂರಿಸಿ, ಫಿಟ್ಟಿಂಗ್ ಇದೋ ಅಬ್ಯಾಸ ಇದೆಯಾ? ಹಾಗಿದ್ದಲ್ಲಿ ಯೋಚಿಸ ಬೇಡಿ, ಫ್ಯಾಮಿಲಿ ಕೌನ್ಸೆಲ್ಲಿಂಗ್ ಶುರು ಮಾಡಿ. ನಿಮ್ಮ ಫಿಟ್ಟಿಂಗ್ ಪ್ರವೃತ್ತಿ ಕೂಡ ಇರುತ್ತೆ, ಒಳ್ಳೆ ಹಣ ಕೂಡ ಬರುತ್ತೆ!!! ( ಸಧ್ಯಕ್ಕೆ ಬೆಂಗಳೂರ್ ನಲ್ಲಿ ಒಳ್ಳೆ ಅವಕಾಶ ಗಳು ಇದೆ.)
2. ನಿಮಗೆ ಉತ್ತಮವಾಗಿ ಪ್ರವಚನ ಕೊಡಲು ಬರುತ್ತದಾ? ತಡ ಮಾಡಬೇಡಿ... ಒಂದು ಆಶ್ರಮ ತೆರೆಯಿರಿ, ನಿಮಗೆ ಇಂಟರ್ ನ್ಯಾಶನಲ್ ಕ್ಲೈಂಟ್ಸ್ ಸಿಗ್ತಾರೆ. ಸಂಪಾದನೆ ಡಾಲರ್ ಗಳಲ್ಲಿ ಆಗುತ್ತೆ. ( ಇದನ್ನು ಉಪಯೋಗಿಸಿ ಬಹಳಷ್ಟು ಜನ ಶ್ರೀಮಂತ ರಾಗಿದ್ದಾರೆ. )
3. ನಿಮಗೆ ಸಿಕ್ಕ ಪಟ್ಟೇ ಗರ್ಲ್ / ಬಾಯ್ ಫ್ರೆಂಡ್ಸ್ ಇದ್ದರೆ ಒಂದು ಗಿಫ್ಟ್ ಅಂಗಡಿ ಇಡಿ ಅಥವಾ ಹೊಸ ಪ್ರೇಮಿಗಳಿಗೆ ಸಲಹೆ ಕೋಡೋದನ್ನ ಶುರು ಮಾಡಿ. ( ಮುಖ್ಯವಾಗಿ ಗಿಫ್ಟ್ ಕೋಡೋದರ ಬಗ್ಗೆ, ಒಳ್ಳೇ ಸಂಪಾದನೆ ಆಗದೇ ಇದ್ರೆ ಕೇಳಿ. ಯಾವ ತರದ ಗಿಫ್ಟ್ ಕೊಡಬೇಕು ಅನ್ನೋದರ ಬಗ್ಗೆ ಅವರು ಸಿಕ್ಕಪಟ್ಟೆ ತಲೆ ಕೆಡಿಸಿ ಕೊಂಡಿರುತ್ತಾರೆ) - ಕೃಷ್ಣಾ ಅಲಿಯಾಸ್ ಅನಂತ ರಾಮ ಭಟ್ಟ ಇ ಐಡಿಯಾ ವನ್ನು ನನಗೆ ದಯಪಾಲಿಸಿದ್ದಾನೆ!!!
4.ನಿಮ್ಮ ಹಳೆ ಗರ್ಲ್ / ಬಾಯ್ ಫ್ರೆಂಡ್ಸ್ ಗಳಿಗೆ ಪೇರ್ ಗಳನ್ನ ಹುಡುಕಿ... ಅವರ ಕಾಟ ತಪ್ಪಿತು ಅನ್ನೋ ಕುಶಿ ಜೊತೆಗೆ... ಮದುವೆ ಲೀ ಗಿಫ್ಟ್ ಕೂಡ ಸಿಗುತ್ತೆ.
5. ನಿಮ್ಗೆ ನೂರಾರು ಇಂಟರ್ವ್ಯೂ ಅಟೆಂಡ್ ಮಾಡಿ ಕೆಲ್ಸಾ ಇನ್ನೂ ಸಿಕ್ಕಿಲ್ವೇ? ಚಿಂತೆ ಬೇಡ, ಬೇರೆಯವರಿಗೆ ಕೆಲ್ಸ ಕೊಡಿಸೋದಕ್ಕೆ ಶುರು ಮಾಡಿ. ಎಲ್ಲಿಲ್ಲಿ ಕೆಲ್ಸ ಖಾಲಿ ಇದೆ, ಅದಕ್ಕೆ ಯಾವ ಅರ್ಹತೆ ಇರಬೇಕು, ಹೇಗೆ ಇಂಟರ್ವ್ಯೂ ಅಟೆಂಡ್ ಮಾಡಬಾರದು ಅಂತ ಗೊತ್ತಿರುತ್ತೆ. ನೀವು ಒಬ್ಬ ಒಳ್ಳೆಯ ಜಾಬ್ ಕನ್ಸಲ್ಟೆಂಟ್ ಆಗ ಬಹುದು. ( ಜೀವಂತ ಉದಾಹರಣೆ ನಾನೇ!!!! )
6. ನಿಮ್ಗೆ ಸ್ವಲ್ಪ ಪಂಚಾಂಗ, ಆಕಾಶದಲ್ಲಿ ಇರೋ ಗ್ರಹ ಗಳ ಬಗ್ಗೆ ಜ್ಞಾನ ಇದೆಯಾ? ಹಾಗಿದಲ್ಲಿ ಒಂದಿಷ್ಟು ಕವಡೆ ಕೊಂಡು ತಂದು ಭವಿಷ್ಯ ಹೇಳಲು ಶುರು ಮಾಡಿ. ಬೀದಿಲಿ ಹೋಗೋ ದಾಸಯ್ಯ ನಿಂದ ಹಿಡಿದು ದೇವೆ ಗೌಡರ ತನಕ ಎಲ್ರೂ ನಿಮ್ ಹತ್ತಿರ ಬರುತ್ತಾರೆ.
ನಿಮಗೆ ಇದಲ್ಲದೇ ಇನ್ನು ಹಲವು ಐಡಿಯಾ ಗಳು ತಲೆಯಲ್ಲಿ ಇದ್ದಲ್ಲಿ ದಯಮಾಡಿ ತಿಳಿಸಿ. ಅಥವಾ ನೀವು ಈಗಾಗಲೇ ಯರ್ರ್ ಬಿರ್ರಿ ಹಣ ಸಂಪಾದನೆ ಮಾಡಿದ್ದರೆ, ಅದನ್ನು ಕರ್ಚು ಮಾಡುವುದು ಹೇಗೆಂದು ತಲೆ ಬಿಸಿ ಮಾಡಿಕೊಂಡಿದ್ದಾರೆ, ನನಗೆ ತಿಳಿಸಿ.
Monday, September 8, 2008
ಸುಳ್ಳು ಗಳು ಮತ್ತು ಇಂಟರ್ವ್ಯೂ
ನೋಡಿ ಟೀಚರ್ ಗಳಿಗೆ ಸುಳ್ಳು ಹೇಳೋದಕ್ಕೆ ಸಂಬಳ ಕೊಡ್ತಾರೆ, ರಾಜಕಾರಣಿಗಳು ಸುಳ್ಳು ಹೇಳಿ ವೋಟು ಹಾಕಿಸ್ಕೊತಾರೆ, ವ್ಯಾಪಾರಿಗಳಿಗೆ ಸುಳ್ಳು ಹೇಳೋದು ಧರ್ಮ, ಮಧುವೆ ಆದವರಿಗೆ ಸುಳ್ಳು ಹೇಳೋದು ಬದುಕೋ ಮಾರ್ಗ!!!( ಮುಖ್ಯವಾಗಿ ಗಂಡಸರಿಗೆ, ಇಲ್ಲ ದಿದ್ದರೆ, ಹೆಂಡತಿ ಯಿಂದ ಲಟ್ಟಣಿಗೆ ಏಟು ಗಳು ಬೀಳುವ ಸಾಧ್ಯತೆ ಇರುತ್ತದೆ. ) ಆದರೆ ಗಮನಿಸಿ ಕೆಲಸ ಬದಲಾಯಿಸ ಬೇಕು ಅನ್ನೋರಿಗೂ ಸುಳ್ಳುಗಳು ಅನಿವಾರ್ಯ.
ಸರಿ ಈಗ ನಾವು ಒಂದು HR ಇಂಟರ್ವ್ಯೂ ಹೇಗೆ ಇರುತ್ತೆ ನೋಡೋಣ. ಬ್ರ್ಯಾಕೆಟ್ಸ್ ಒಳಗೆ ಇರೋದು ಮನಸಿನ ಸತ್ಯವಾದ ಮಾತು
ಇಂಟರ್ವ್ಯೂವರ್: ಪ್ಲೀಸ್ ಕಮ್ ಮಿಸ್ಟರ್….
ನೀವು: ಥ್ಯಾಂಕ್ ಯು ವೆರೀ ಮಚ್. ( ಸ್ವಾಮಿ ಏಸೀ ಆನ್ ಮಾಡಿದ್ರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ? ಏನು ಅದರಲ್ಲೂ ಕಾಸ್ಟ್ ಕಟಿಂಗ್ ಗ? )
ಇಂಟರ್ವ್ಯೂವರ್: Can you tell me about your self?
ನೀವು: my self my name is…. I have done my Graduation from VTU…. Bla bla( ರೀ ಸ್ವಾಮಿ ನಿಂಗೆನು ಕಣ್ಣು ಕಾಣೋಲ್ವ? ರೆಸ್ಯೂಮೆ ನಿನ್ ಕೈಯಲ್ಲಿ ಇಟ್ಕೊನ್ಡು ಪೋಸ್ ಕೊಡ್ತಾ ಇದ್ದೀಯಾ? ಓದೋಕೆ ನಿಂಗೆನು ರೋಗ? ನಾನೇ ಬಾಯೀ ಬಿಟ್ಟು ಹೇಳ್ಬೇಕ? ಮುಚ್ಕೊಂದು ರೆಸ್ಯೂಮೆ ನೋಡು, ನಿಂಗೆ ಗೊತ್ತಾಗತ್ತೆ. )
ಇಂಟರ್ವ್ಯೂವರ್: You are working in a big company and your responsibility is also good there, then why are looking for a job change?
ನೀವು: Yes, you are right, but I am looking for some more responsibility, interested in people and client management. Etc etc bla bla..... ( ಅಲ್ಲ ಮಾರಾಯ, ನೀನು ಯಾವ ಕಾರಣಕ್ಕೆ ನಿನ್ ಹಳೆ ಕಂಪನೀ ಬಿಟ್ಟು ಇಲ್ಲಿ ಬಂದು ಸೇರಿದ್ಡೀಯೋ, ನಾನು ಅದೇ ಕಾರಣಕ್ಕೆ ಆ ಕಂಪನೀ ಬಿಡ್ತಾ ಇದ್ದೀನಿ. ಇನ್ನೂ ಸ್ಪೆಸಿಫಿಕ್ ಆಗಿ ಹೇಳ್ಬೇಕು ಅಂದ್ರೆ ಸ್ಯಾಲರೀ!!! )
ಇಂಟರ್ವ್ಯೂವರ್: ನಿಮ್ ಕಂಪನೀ ಗೆ ನೀವೇನೂ ಕೊಟ್ಟಿದ್ದೀರಿ ಮತ್ತೆ ನಮ್ಮಿಂದ ಏನು ಎಕ್ಸ್ಪೆಕ್ಟ್ ಮಾಡ್ತೀರಿ?
ನೀವು: ???? ( ಕಂಪನೀ ಗೆ ಕೋಡೋದ? ಪ್ರತಿ ದಿನ 10 ಗಂಟೆ ವರ್ಕ್ ಮಾಡ್ತೀನಿ… ವೀಕೆಂಡ್ ಕೂಡ ಇಲ್ಲ… ನಿಮ್ ಕಂಪನೀ ಇಂದ ನಾನು ಪ್ರತಿ ದಿನ 6 ಗಂಟೆ ಕೆಲ್ಸಾ, ವೀಕೆಂಡ್ ದೆವ್ರಾನೇ ಕೆಲ್ಸಾ ಮಾಡೋಲ್ಲ, 3 ತಿಂಗಳಿಗೆ ಗೆ ಒಂದು ಸಲ ಸ್ಯಾಲರೀ ಹೈಕ್, US ಗೆ ಆನ್ಸೈಟ್, ಒಳ್ಳೇ ಟೀಮ್, ನನ್ ಮೇಲೆ ಪ್ರೆಶರ್ ಹಾಕದೆ ಎಲ್ಲ ಕೆಲ್ಸಾ ನು ತಾವೇ ಮಾಡಿಕೊಳ್ಳೋ.. TL ಅಂಡ್ PM ಗಳು!!! )
ಇಂಟರ್ವ್ಯೂವರ್ : ನಿಮ್ ಮ್ಯಾನೇಜರ್ ಬಗ್ಗೆ ಹೇಳಿ
ನೀವು : he is really a wonderful person… bla bla(ಅವನೊಬ್ಬ ದೊಡ್ಡ ಮೂರ್ಕ, ಗಬ್ಬು, ಹತ್ತಿರ ಹೋದ್ರೆ ವಾಸನೆ ಬರುತ್ತೆ, ಮೊರು ಹೊತ್ತು ಕಿವಿ ಒಳಗೆ, ಮೂಗಿನ ಒಳಗೆ ಕೈ ಹಾಕ್ಕೊಂದು ಇರ್ತಾನೆ. ಸಿಕ್ಕಪಟ್ಟೆ ತಲೆ ನೋವು ಆ ಮ್ಯಾನೇಜರ್.)
ಇಂಟರ್ವ್ಯೂವರ್ : ನಿಮ್ colleagues??
ನೀವು: are really good and supportive( ಅವೇರೆಲ್ಲ ಮ್ಯಾನೇಜರ್ ಚೇಲ ಗಳು, ಸ್ಯಾಲರೀ ಹೈಕ್ ಗೆ, ಪ್ರಮೋಶನ್ ಗೆ ಅವನ ಹಿಂದೆ ಬಿದ್ದಿದ್ದಾರೆ, ಎಲ್ಲ ಸರಿ ಇದ್ದಿದ್ರೆ ನಾನ್ಯಾಕೆ ಕೆಲ್ಸಾ ಚೇಂಜ್ ಮಾಡಬೇಕು ಅಂತ ಇರ್ತಿದ್ದೆ???. )
ಇಂಟರ್ವ್ಯೂವರ್: ನೀವು ಫೇಸ್ ಮಾಡಿದ ಬಿಗ್ಗೆಸ್ಟ್ ಚ್ಯಾಲೆಂಜ್ ಯಾವುದು? ನೀವು : ( ತುಂಬಾ ಸಲ ಫೇಸ್ ಮಾಡಿದ್ದೀನಿ, GF ಗೆ ಮೂವೀ ಗೆ ಹೋಗೋಣ ಅಂತ ಪ್ರಾಮಿಸ್ ಮಾಡಿರ್ತೀನಿ, PVR ನಲ್ಲಿ ಟಿಕೆಟ್ ಕೂಡ ಸಿಕ್ಕಿರುತ್ತೆ, ಆದರೆ ಮ್ಯಾನೇಜರ್ ಬಂದು ಟಾರ್ಗೆಟ್ ಕೊಡ್ತಾನೆ… ಎಲ್ಲದನ್ನೂ ಮ್ಯಾನೇಜ್ ಮಾಡೋದು ದೊಡ್ಡ ಚ್ಯಾಲೆಂಜ್)
ಇಂಟರ್ವ್ಯೂವರ್: ನಿಮ್ ವೀಕ್ ನೆಸ್ ಏನು?
ನೀವು: Bla bla
( 1. ಹುಡುಗಿರು ಸಾರ್ ಹುಡುಗಿರು
2. ಕರೆಂಟ್ ಹೋದಾಗ ಟಾಯ್ಲೆಟ್ ಗೆ ಹೂಗೋಕೆ ಹೆದರಿಕೆ ಆಗುತ್ತೆ!! )
ಇಂಟರ್ವ್ಯೂವರ್: ನಿಮ್ಮ ಸ್ಯಾಲರೀ ಎಕ್ಸ್ಪೆಕ್ಟೇಶನ್ ಎಷ್ಟು? ನೀವು: ( ನಾನು ಕೇಳಿದಷ್ಟು ಕಂಡಿತಾ ಕೊಡೋಲ್ಲ, ಸೋ ನೀನು ಎಷ್ಟು ಕೊಡ್ತಿಯಾ ಮೊದ್ಲು ಬೊಗಳು) I expect minimum 50% hike on my current ctc
ಇಂಟರ್ವ್ಯೂವರ್:no.. that is very difficut, 20% I can give
ನೀವು: no.. 20% is very less…
ಇಂಟರ್ವ್ಯೂವರ್: ok ok, according to our company rules n regulations… ನಾನು ೨೫% ಕೊಡಬಲ್ಲೆ..
ನೀವು: no.. 25 also very less, I wl get appraisal next month
ಇಂಟರ್ವ್ಯೂವರ್: I had discussed with that technical panel, your performance is good, so we offer you 35% is hike… and it is the maximum
ನೀವು: ಓಕೇ, ಓಕೇ… ಥ್ಯಾಂಕ್ ಯೂ ವೆರೀ ಮಚ್(ನಾನು ನನ್ ಸ್ಯಾಲರೀ ನ ಆಲ್ರೆಡೀ 40% ಹೈಕ್ ಮಾಡಿ ನೇ ನಿಮ್ಗೆ ಹೇಳಿದ್ದು, ಸೋ ಒಳ್ಳೇ ಪ್ಯಾಕೇಜ್ ಸಿಗುತ್ತೆ …. )
ಇಂಟರ್ವ್ಯೂವರ್: how soon you can us?
ನೀವು: as soon as possible.
( ಇನ್ನೂ 3-4 ಒಳ್ಳೊಳ್ಳೇ ಕಂಪನೀ ಗಳ ಇಂಟರ್ವ್ಯೂ ಪ್ರೋಸೆಸ್ ನಲ್ಲಿ ಇದೆ, ಅವರ ಸ್ಯಾಲರೀ ನೋಡಿ ನಿಮ್ಗೆ ಹೇಳ್ತೀನಿ )
ಇಂಟರ್ವ್ಯೂವರ್: ಥ್ಯಾಂಕ್ ಯೂ, all the best, ನಿಮ್ಗೆ ಈಮೇಲ್ ಮಾಡಿ ಆಫರ್ ಲೆಟರ್ ಕಳಿಸ್ತೀನಿ. ನೀವು: ಒಹ್ಹ್ ಥ್ಯಾಂಕ್ ಯೂ ( ಬೇಗ ಕಳಿಸು, ನಾನು ಆಲ್ರೆಡೀ ರಿಸೈನ್ ಮಾಡಿದ್ದೀನಿ)
ನಾನು ಕೂಡ ಈ ತರದ ಸುಳ್ಳು ಹೆಳೀನೇ ಕೆಲಸ ಚೇಂಜ್ ಮಾಡಿದ್ದೂ, ಸೊ ಹೆದರದೆ ಬಾಯಿಗೆ ಬಂದಷ್ಟು ಸುಳ್ಳು ಹೇಳಿ ಕೆಲಸ ಗಿಟ್ಟಿಸಿ!!!.
(ಷರತ್ತು ಗಳು ಅನ್ವಯ : ಜಾಸ್ತಿ ಸುಳ್ಳು ಹೇಳಿ ಕೆಲಸ ಕಳೆದು ಕೊಂಡರೆ ಅದಕ್ಕೆ ನಾನು ಜವಾಬ್ದಾರ ನಲ್ಲ )
Saturday, August 30, 2008
ಆಫೀಸ್ ನಲ್ಲಿ ಟೈಮ್ ಪಾಸ್ ಮಾಡೋ ವಿಧಾನ ಗಳು
1. ಬೆಳಿಗ್ಗೆ ಬಂದ ಕೂಡಲೇ ಟೀ, ಕಾಫೀ ಮತ್ತೆ ತಿಂಡಿ ಗೆ ಸಾಕಷ್ಟು ಟೈಮ್ ತಗೋಳಿ
2. ಅವತ್ತು ಬಂದ ಎಲ್ಲ ಈಮೇಲ್ ನೋಡಿ, ಅದನ್ನ ಮತ್ತೆ ಎಲರಿಗೂ ಫಾರ್ವರ್ಡ್ ಮಾಡಿ.
3. ಆಫೀಸ್ ನಲ್ಲಿ ಯಾವ ಯಾವ ಹುಡುಗೀರು ಹೇಗೆ ಡ್ರೆಸ್ ಮಾಡಿ ಕೊಂಡು ಬಂದಿದ್ದಾರೆ ಅಂತ ಗಮನಿಸಿ
4.ಜಿ ಟಾಕ್, ಯಾಹೂ ಮೆಸೆಂಜರ್ ನಲ್ಲಿ ಲೊಗಿನ್ ಆಗಿರಿ
5. ಓರ್ಕುಟ್ ನಲ್ಲಿ ಯಾರು ಸ್ಕ್ರ್ಯಾಪ್ ಮಾಡದೇ ಇದ್ರೆ ನೀವೇ ಎಲರಿಗೂ ಸ್ಕ್ರ್ಯಾಪ್ಸ್ ಮಾಡಿ, ರಿಪ್ಲೈ ಗೆ ವೇಟ್ ಮಾಡಿ
6. ಸಾಕಷ್ಟು ಗೇಮ್ಸ್ ಆನ್ಲೈನ್ ನಲ್ಲಿ ಇರುತ್ತೆ, ಆಟ ಆದಿ, ನೆಟ್ ಕನೆಕ್ಶನ್ ಇಲ್ಲ ಅಂದ್ರೆ, ನಿಮ್ ಕಂಪ್ಯೂಟರ್ ನಲ್ಲಿ ಸಾಲಿಟೇರ್ ಅನ್ನೋ ಗೇಮ್ ಇದೆ ಅನ್ನೋದನ್ನ ಮರೀಬೇಡಿ.
7. ನಿಮ್ಮ ಪಕ್ಕದಲ್ಲಿ ಇರೋರಿಗೆ ಬಗ್ ಫಿಕ್ಸ್ ಮಾಡೋದಿಕ್ಕೆ ನಿಮ್ಮಿಂದ ಹೆಲ್ಪ್ ಬೇಕಾ ಕೇಳಿ, ಬಟ್ ಮಾಡಬೇಡಿ.
8. ನಿಮ್ ಮ್ಯಾನೇಜರ್ ಮೇಲೆ ಒಂದು ಒಳ್ಳೇ ಹಾಡನ್ನ ರೀಮಿಕ್ಸ್ ಮಾಡೋಕೆ ಆಗುತ್ತಾ ಟ್ರೈ ಮಾಡಿ
9. ಕಂಪ್ಯೂಟರ್ ನ ರಸ್ಟಾರ್ಟ್ ಮಾಡಿ, ಅದು ತಗೊಳೊ ಟೈಮ್ ನ ಕ್ಯಾಲ್ಕ್ಯುಲೇಟ್ ಮಾಡಿ
10. ಪರ್ಸನೆಲ್ ಮೈಲ್ ಅಂಡ್ ಅಫೀಶಿಯಲ್ ಮೇಲ್ಸ್ ನಲ್ಲಿ ಯಾವುದು ಸ್ಪೀಡ್ ಅಂತ ಚೆಕ್ ಮಾಡಿ.
11. ಆಫೀಸ್ ನಲ್ಲಿ ಯಾರು ಯಾರು ಕೆಲ್ಸಾ ಬಿಡಬೇಕು ಅಂತ ಇದ್ದಾರೆ ಅನ್ನೋದನ್ನ ಸರ್ಚ್ ಮಾಡಿ, ಆಕ್ಟ್ ಲೈಕ್ ಆ ಡೀಟೆಕ್ಟಿವ್ ಏಜೆಂಟ್.
12. ನಿಮ್ಮ ರೆಸ್ಯೂಮೆ ನ ಅಪ್ಡೇಟ್ ಮಾಡಿ
13. ಆಫೀಸ್ ಲೆಟರ್ ಹೆಡ್ ನ ಉಂಡೆ ಮಾಡಿ, ಡಸ್ಟ್ ಬಿನ್ ಗೆ ಥ್ರೋ ಮಾಡಿ. ( ಅಭಿನವ್ ಬಿಂದ್ರ ತರ ಗೋಲ್ಡ್ ಬರಬಹುದು)
14. ಆಫೀಸ್ ಫೋನ್ ಇರೋದು ನಿಮ್ಮ ಗರ್ಲ್ / ಬಾಯ್ ಫ್ರೆಂಡ್ ಜೊತೆ ಡೇಟ್ ಫಿಕ್ಸ್ ಮಾಡೋಕೆ ಅನ್ಸುತ್ತೆ...
15. ಆಫೀಸ್ ಟೈಮ್ 9 ಕ್ಕೆ ಇದ್ರೆ ಟ್ರ್ಯಾಫಿಕ್ ಜಾಮ್ ಪ್ರಯುಕ್ತ 10:30 ಆರ್ 11 ಕ್ಕೆ ಆಫೀಸ್ ಬರುವುದು.
16. ಎಲ್ಲರೂ ಆಫೀಸ್ ಗೆ ಬರುವ ಮುಂಚೆ ಅಂದ್ರೆ 8:45 ಗೆ ಆಫೀಸ್ ಗೆ ಬಂದು 7 ಕ್ಕೆ ಬಂದೆ ಅಂತ ಬೈ ಬಡ್ಕೊಂಡು ಬೇಗ ಮನೆಗೆ ಹೋಗೋದು.
17. ಬೇಗ ಆಫೀಸ್ ಬಂದ ದಿನ ಊಟಕ್ಕೆ 11 ಕ್ಕೆ ಹೋಗಿ ಒಂದು ಮಾರ್ನಿಂಗ್ ಶೋ ನೋಡಿ ಕೊಂಡು 2 ಕ್ಕೆ ವಾಪಸ್ ಆಫೀಸ್ ಗೆ ಬರೋದು
18. ಆಫೀಸ್ ನಲ್ಲಿ ಏಸೀ ಸರಿ ಇಲ್ಲ ಜಾಸ್ತಿ / ಕಮ್ಮಿ ಇದೆ ಅಂತ ಫೇಸಿಲಿಟೀ ಡಿಪಾರ್ಟ್ಮೆಂಟ್ ಗೆ ಫೋನ್ ಮಾಡಿ ಅವರ ತಲೆ ತಿನ್ನೋದು
19. ಪೇಪರ್ ನ ಪ್ರಿಂಟರ್ ನಲ್ಲಿ ಬೇಕಂತ ಜಾಮ್ ಮಾಡಿಸಿ.. ಹೀರೊ ತರಹ ಫೇಸಿಲಿಟೀ ಡಿಪಾರ್ಟ್ ಮೆಂಟ್ ನವರಿಗೆ ಕಾಲ್ ಮಾಡಿ ಪ್ರಿಂಟರ್ ರೇಪೇರಿ ಮಾಡಿಸೋದು.
20. ಟೆಸ್ಟ್ / ಡೆವೆಲಪ್ ಮಾಡೋ ಅಪ್ಲಿಕೇಶನ್ ಓಪನ್ ಮಾಡಿ ಅದ್ರ ಮದ್ಯ ಚಾಟ್ ವಿಂಡೊ ನ ಸಿಕ್ಕಿಸಿ ಚಾಟ್ ಮಾಡೋದು ( ಬ್ಯಾಕ್ ಗ್ರೌಂಡ್ ನಲ್ಲಿ ಅಪ್ಲಿಕೇಶನ್ ಇರುತ್ತೆ, ಫೋರ್ಗ್ರೌಂಡ್ ನಲ್ಲಿ ಚ್ಯಾಟ್ ವಿಂಡೊ / ಬ್ರೌಸರ್ ಇರುತ್ತೆ)
21. ಬೇರೆ ಕ್ಯೂಬಿಕಲ್ ಮೇಟ್ಸ್ ಗೆ ಯಾವುದೋ ಕಿತ್ತೋಡಾ ಫಿಲ್ಮ್ ಕಥೆ ಹೇಳೋದು.
22. ಇನ್ನೊಬ್ಬರ ಕ್ಯೂಬಿಕಲ್ ಗೆ ಹೋಗಿ ಅವರು ತಂದ ಟಿಫಿನ್ ಬಾಕ್ಸ್ ನಲ್ಲಿ ಏನಿದೆ ಅಂತ ಇನ್ವೆಸ್ಟಿಗೇಶನ್ ಮಾಡೋದು
23. ಆವ್ರು ಬಿಸೀ ಇದ್ದಾಗ ಹೋಗಿ ಹೋಗಿ ಸಿಲ್ಲೀ ಸಿಲ್ಲೀ ಆದ ಡೌಟ್ಸ್ ಕೇಳಿ ಅವರಿಗೆ ರೇಗಿಸಿ ಮಜ ತೊಗೋಳ್ಳೋದು
24. ಅವರಿಗೆ ವೀಕ್ ಎಂಡ್ ನೀನು ಹೇಗೆ ಕಳಿದೆ ಅನ್ನೋಬಗ್ಗೆ ಡೀಟೇಲ್ ಮಾಹಿತಿ ಕೊಟ್ಟು ಹುಚ್ಚು ಹಿಡಿಸೋದು
25. ಇನ್ನೂ ಟೈಮ್ ಪಾಸ್ ಆಗದೇ ಇದ್ರೆ... ಟೈಮ್ ಪಾಸ್ ಮಾಡೋ ಹೊಸ ವಿಧಾನ ಕಂಡು ಹಿಡಿದು ನಮಗೆ ತಿಳಿಸಿ!!!
ನನ್ನೊಡನೆ ಸಂಶೋದನೆ ಮಾಡಿದ ರಾಣಿ, ಚೀಕು ಹಾಗು ನಾನು ಅತ್ಯುತ್ತಮ ಕೆಲಸಗಾರ ನೆಂದು ಕುರುಡು ನಂಬಿಕೆ ಯಿಂದ ನನ್ನನು ಅಷ್ಟಾಗಿ ಗಮನಿಸದೆ ಸಹಕರಿಸಿದ ಶ್ರೀಮಾನ್ / ಶ್ರೀ/ ಶ್ರೀಮತಿ .... ಮ್ಯಾನೇಜರ್ ಅವರಿಗೆ ನನ್ನ ಸಹಸ್ರ ವಂದನೆಗಳು!!!