Thursday, February 12, 2009

ಸೇನೆ ಹಾಗು ಪಬ್!!!


ಈಗ ಎಲ್ಲಿ ನೋಡಿದರು ಶ್ರೀ ರಾಮ ಸೇನಾ ಯ ಸುದ್ದಿ ಯೋ ಸುದ್ದಿ!! ಮಂಗಳೂರಿನ ಪಬ್ ಧಾಳಿ ಇಂದ ಹಿಡಿದು, ವ್ಯಾಲಿಂಟೈನ್ಸ್ ಡೇ ತನಕ ಅವರದ್ದೇ ಮಾತು. ಈ ಸಂದರ್ಭದಲ್ಲಿ ಸಮಾಜದಲ್ಲಿ ಆಯಾ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಕೆಲವು ಆಯ್ದ ವ್ಯಕ್ತಿಗಳ ಅನಿಸಿಕೆ ಯನ್ನು ಕೇಳಲಾಯಿತು, ಅವರ ಮಾತನ್ನು ನೇರವಾಗಿ ಹಾಗೆ ಕೊಡಲಾಗಿದೆ.


ರೋಹಿತ್ ಶೆಟ್ಟಿ ( ಪ್ರಭಾವಿ ಇಂಡಸ್ಟ್ರಿಯಲಿಸ್ಟ್ ಒಬ್ಬರ ಮಗ, ಮಂಗಳೂರು ) . ನೋಡಿ ಈ ಶ್ರೀ ರಾಮ ಸೇನೆ ಯವರಿಗೆ ಬುದ್ದಿ ಎ ಇಲ್ಲ, ಬರಿ ಪ್ರಚಾರಕ್ಕೆ ಹೀಗೆ ಮಾಡ್ತಾ ಇದ್ದಾರೆ, ನಾವು ಇಲ್ಲಿ ದುಡ್ಡು ಕೊಟ್ಟು ವಿದೇಶಿ ಮದ್ಯ ವನ್ನು ಕುಡಿತ ಇರಬೇಕಾದರೆ, ಅವರು ಒಮ್ಮೆಲೇ ಧಾಳಿ ಮಾಡಿ, ವದೆ ಕೊಟ್ಟರು, ಆ ಏಟಿಗೆ ನನಗೆ ಕುಡಿದ ಮತ್ತೆಲ್ಲ ಹೊರಟು ಹೋಯಿತು, ನೋಡಿ ನಾನು ಇನ್ನೊಮ್ಮೆ ಹೇಳ್ತೇನೆ, ಇವರಿಗೆ ಬುದ್ದಿಯೆ ಇಲ್ಲ, ನಾನು ಅಷ್ಟು ದುಡ್ಡು ಕೊಟ್ಟು ಕುಡಿದ ಮದ್ಯದ ಅಮಲನ್ನು ಒಮ್ಮೆಲೇ ಇಳಿಯುವ ಹಾಗೆ ಮಾಡಿದರು. ಸಾವಿರ ರೂಪೈ ಪಾಕೆಟ್ ಮನೀ ತಗೋಬೇಕಾದ್ರೆ ನನಗೆ ಎಷ್ಟು ಕಷ್ಟ ಆಗ್ತದೆ, ಅಂತದ ರಲ್ಲಿ ಇವರು ಹೀಗೆ ಮಾಡಿದ್ದು ಸರಿನ? ಸೇನೆ ಗೆ ದಿಕ್ಕಾರ!!!!


ಸ್ವದೇಶಿ ವಸ್ತು ಜಾಗರನ ಮಂಚ್ ಅಧ್ಯಕ್ಷ ಹಾಗೂ ಧರ್ಮ ಪ್ರಚಾರಕ: ಹಿಂದೂ ಧರ್ಮ ದಲ್ಲಿ ಎಲ್ಲೂ ಕುಡಿತವನ್ನು ತಪ್ಪು ಎಂದು ಹೇಳಿಲ್ಲ, ಹಿಂದೆಲ್ಲ ರಾಜ ರು ರಾಮ ರಸ ವನ್ನು ಕುಡಿಯುತ್ತಾ ಇದ್ದರು, ಇಂದ್ರ ನು ರಂಭೆ ಮೇನಕೆ ಯರ ನೃತ್ಯ ವನ್ನು ಆನಂದಿಸುತ್ತಾ ಇದ್ದರು, ಆದ್ದರಿಂದ ಅದೋ ತಪ್ಪಲ್ಲ. ತಪ್ಪು ಅಂದ್ರೆ ವಿದೇಶಿ ಮಧ್ಯ, ವಿದೇಶಿ ಮದ್ಯ ವನ್ನು ಬಿಡಿ, ಕೇವಲ ರಾಮ ರಸ, ಕಳ್ಳು, ಕೊಟ್ಟೆ ಸಾರಾಯಿ ಯನ್ನು ಕುಡಿಯಿರಿ, ಆವಾಗ ನೀವು ಕೂಡ ಹಿಂದೂ ಸೇವಕ ರೆಂದು ಪ್ರೇರೇಪಿತ ರಾಗಿ ಯಾವ ಸೇನೆ ಯವರು ಧಾಳಿ ಮಾಡಲಾರರು. ಭಗವಂತನು ನಿಮಗೆ ಒಳ್ಳೆಯದು ಮಾಡಲಿ.


ಅಂಬಿಕಾ, ಕೈ ಪಕ್ಷದ ಸಚಿವೆ: ಶ್ರೀ ರಾಮ ಸೇನೆ ಅವರು ಕೋಮುವಾದ ಹರಡುತ್ತಾ ಇದ್ದಾರೆ, ಇದು ಭಾರತ, ಇಲ್ಲಿ ಎಲ್ಲರಿಗೂ ಸ್ವಾತಂತ್ರ್ಯ ಇದೆ, ಪಬ್ ಗೆ ಹೋಗಬೇಡ ಅನ್ನಲು ಅವರು ಯಾರು? ನಮ್ಮದು ಮಹಾತ್ಮ ಗಾಂಧಿ ಪಕ್ಷ, ಅವರು ಅಂದು ಅರೆ ಬೆತ್ತಲೆ ಆಗಿ, ಉಪವಾಸ ಮಾಡಿ ಫ್ರೀಡಮ್ ಬಂದ ಮೇಲೂ ಕುಡಿ ಬೇಡಿ, ಹುಡುಗಿ ಸೊಂಟ ಹೂಡಿದು ಕುಣಿಬೇಡಿಅನ್ನಲು ಅವರಾರು? ನಾನು, ನಂ ಮಗಳು ಎಲ್ಲರೂ ಪಬ್ ಗೆ ಹೋಗ್ತೀವಿ, ಗಾಂಧಿ ಉಪ್ಪಿನ ಸತ್ಯಾಗ್ರಹ ಮಾಡಿದ ಹಾಗೆ ನಾವು ಪಬ್ ಚಳುವಳಿ ಮಾಡ್ತೀವಿ, ಎಲ್ಲರೂ ಕುಡಿಬೇಕು, ಕುಣೀಬೇಕು, ಇದು ಜಾತ್ಯತೀತ, ಬಹು ಸಂಸ್ಕೃತಿ ದೇಶ!!!!!


ಜಯಂತ ಮೂರ್ತಿ( ಸ್ವಘೊಷಿತ ಬುದ್ದಿ ಜೀವಿ): ಇದು ಹಿಂದೂ ತಾಲಿಬಾನಿಕರಣ , ಕೇಂದ್ರ ಸರ್ಕಾರವು ಕೂಡಲೇ ರಾಜ್ಯ ಸರ್ಕಾರವನ್ನು ವಜಾ ಮಾಡಬೇಕು, ಹಾಗೂ ಪಬ್ ಗೆ ಹೋಗುವ ವರಿಗೆ ಪ್ರೋತ್ಸಾಹ ವನ್ನು ಕೊಡಬೇಕು, ನಾನು ಹಿಂದೆ ಪಬ್ ರಾತ್ರೆ ಬೇಗ ಮುಚ್ಚುವುದರ ಬಗ್ಗೆ ಬೀದಿ ಗಲಾಟೆ ಮಾಡಿದ್ದೆ,ಈಗಲೂ ಗಲಾಟೆ ಮಾಡುವೆ!!!