Wednesday, December 2, 2009

ಹೀಗೊಂದು ಸಾಹಿತ್ಯ ಪ್ರಸವ!!



ಈ ತರದ ಹುಚ್ಚು ಯಾವಾಗ ನನಗೆ ಹಿಡಿತು ಗೊತ್ತಿಲ್ಲ, ತುಂಬಾ ದಿನಗಳಿಂದ ಕೂತಲ್ಲಿ ನಿಂತಲ್ಲಿ, ಮನೆಯಲ್ಲಿ, ಆಫೀಸ್ ನಲ್ಲಿ ನಿದ್ದೆ ಮಾಡುವಾಗ ಒಂದೇ ಯೋಚನೆ, ಒಂದೇ ಆಸೆ, "ನಾನು ಒಂದು ಕಾದಂಬರಿ ಬರೀಬೇಕು" ಅಂತ. ಕಾದಂಬರಿ ಅಂದ್ರೆ ಉಡುಪಿ ಉಪಹಾರ ನಲ್ಲಿ ಮಸಾಲೆ ದೋಸೆ ತಿಂದಷ್ಟು ಸುಲಭಾನ? ಬರಹಗಾರರಿಗೆ ಇನ್ನು ಬರೆಯದೇ ಇರಲು ಸಾದ್ಯವೇ ಇಲ್ಲ ಅಂತ ಅನ್ನಿಸಿದಾಗ ಅವರು ಬರೀತಾರೆ ಅಂತೆ, ಅವರ ತಲೇಲಿ ಕಥೆ ಮೊಟ್ಟೆ ತರ ಕೂತು, ಕಾವು ಪಡೆದು ಕೊನೆಗೆ ಪ್ರಸವ ವೇದನೆ ಅನುಭವಿಸಿ ಬರೀತಾರೆ ಅಂತ ಎಲ್ಲೋ ಕೇಳಿದ್ದ ನೆನಪು. ನಂಗು ಹೆಚ್ಚು ಕಡಿಮೆ ಇದೆ ತರದ ಸ್ಥಿತಿ!! ಆದ್ರೆ ಏನು ಬರೀಬೇಕು ಅಂತ ಮಾತ್ರ ಹೊಳಿತ ಇಲ್ಲ.


ಹಿಂದೆ ಎಲ್ಲೋ ಕೇಳಿದ್ದ ನೆನಪು, ಕುಮಾರವ್ಯಾಸ ಐ ಮೀನ್ ಗದುಗಿನ ನಾರಣಪ್ಪ ಬೆಳಗಿನ ಮುಂಜಾವು ಸ್ನಾನ ಮಾಡಿ, ಮಡಿ ಉಟ್ಟು ಗುಡಿಯ ನಿರ್ದಿಷ್ಟ ಜಾಗದಲ್ಲಿ ಕೂತು ಬರೀತಾ ಇದ್ದನಂತೆ . ಹಾಗೆ ಧ್ಯಾನಸ್ತನಾಗಿ ಕೂತಾಗ ಅವನಲ್ಲಿ ಕಾವ್ಯ ಮೂಡುತ್ತಿತ್ತು ಅಂತೆ.


ಸರಿ ಹೇಗೂ ಬರೆಯಲೇಬೇಕು ಅಂತ ತೀರ್ಮಾನ ಮಾಡಿ ಆಗಿರುವುದರಿಂದ ನಾನು ಕೂಡ ಕುಮಾರವ್ಯಾಸನ ಮಾದರಿಯನ್ನೇ ಅನುಸರಿಸಿ ಬಿಡುವುದು ಎಂದುಕೊಂಡೆ. ಬೆಂಗಳೂರಿನಲ್ಲಿ 3-4 ಗಂಟೆಗೆ ದೇವಸ್ತಾನಕ್ಕೆ ಹೊರಟರೆ ಬೀದಿ ನಾಯಿಗಳು ಅಟ್ಟಿಸಿಕೊಂಡು ಬರುವ ಸಾದ್ಯತೆ ಇರುವುದರಿಂದ ಮನೆಯಲ್ಲೇ ಕೂತು, ಆಥವಾ ಟೆರೇಸಿಗೆ ಹೋಗಿ ಬರೆಯುವುದು ಅಂತ ತೀರ್ಮಾನಿಸಿದೆ. ಅಂಗಡಿಯಿಂದ ಒಂದಿಷ್ಟು A4 ಪೇಪರ್, ಒಂದು ರಟ್ಟು ಮತ್ತೆ ರೆನಾಲ್ಡ್ ಪೆನ್ ತಗೊಂಡು ಬಂದೆ. ಶುಭಸ್ಯ ಶೀಘ್ರಂ ಅಂತ ಒಂದು ಶುಭ ಶನಿವಾರದ ಬೆಳಿಗ್ಗೆ ಶುರುಮಾಡುವುದು ಅಂತ ತಯಾರಾದೆ. 2 ದಿನ ರಜೆ ಇರುವುದರಿಂದ ಯಾವ ಮ್ಯಾನೇಜರ್ ಗಳ ತೊಂದರೆ ಇಲ್ಲದೇನೆ ಅಧ್ಬುತ ಕಾವ್ಯ ಕೃಷಿಯ ಕನಸು ಕಂಡೆ.


ಶುಕ್ರವಾದ ಸಂಜೆ ಆಫೀಸ್ ನಿಂದ ಬೇಗನೆ ಹೊರಬಿದ್ದು, ಮನೆಗೆ ಹೋದರೂ ಮಾರನೆ ದಿನದ ಬೆಳಿಗಿನ ಬಗ್ಗೆಯೇ ಚಿಂತೆ. ಪಕ್ಕದ ದರ್ಶಿನಿಯಲ್ಲಿ ಚೆನ್ನಾಗಿ ತಿಂದು ಬಂದರೂ ಸರಿಯಾಗಿ ನಿದ್ದೆ ಬರಲಿಲ್ಲ. 4 ಗಂಟೆಗೆ ಅಲರಾಂ ಇಟ್ಟಿದ್ದರಿಂದ ಬೇಗನೆ ಎದ್ದು ನೀರು ಕಾಯಿಸಿ, ಸ್ನಾನ ಮಾಡಿ, ಮಡಿ ಉಟ್ಟು ಪೇಪರ್ ಮುಂತಾದ ಸಾಮಗ್ರಿಗಲೊಡನೆ ಟೆರೆಸ್ ಗೆ ನಡೆದೆ. ನೀರಿನ ಟ್ಯಾಂಕ್ ಬಳಿ ಪ್ರತಿಷ್ಟಾಪನೆ ಆಗಿದ್ದೂ ಆಯಿತು. ಹುಮ್ಮಸ್ಸಿನಲ್ಲಿ ಪೆನ್ನು ಹಿಡಿದು ಕೂತೆ. 5 ನಿಮಿಷ ಆಯಿತು ಏನೂ ತೋಚಲಿಲ್ಲ, 10 ನಿಮಿಷ, ನಿಮಿಷಗಳು ಕಳೆದಂತೆ ಬೆಂಗಳೂರಲ್ಲಿ ಬೆಳಗ್ಗೆ ಮುಂಚೆ ಸ್ವಲ್ಪ ಚಳಿ ಇರುತ್ತೆ ಅನ್ನುವ ಸತ್ಯ ಗೊತ್ತಾಯಿತೆ ಹೊರತು ಬೇರೇನೂ ಆಗಲಿಲ್ಲ. ವದ್ದೆ ಬಟ್ಟೆ ಉಟ್ಟ ಪರಿಣಾಮ ಸ್ವಲ್ಪ ಜಾಸ್ತಿ ಚಳಿ ನೆ ಆಯಿತು. ಇದೊಳ್ಳೆ ಕಥೆ ಆಯಿತಲ್ಲ, ನಮ್ಮ ಏಕಾಗ್ರತೆಯನ್ನು ಕೆಡಿಸಲು ವಾಯು ದೇವ ಏನಾದರು ಮಸಲತ್ತು ಮಾಡುತ್ತಿದ್ದನೋ ಏನೋ ಅನ್ನುವ ಅನುಮಾನವೂ ಕಾಡಿತು. ಸಮ್ಮ ಕೆಲವು ಸಾಹಿತಿಗಳಿಗೆ ಬರೆಯುವಾಗ ಸಿಗರೆಟ್ ಸೇದುವರಂತೆ, ಅದು ತಲೆಯಲ್ಲಿ ಇರುವ ಕಥೆಗಳಿಗೆ ಕಾವು ಕೊಡುತ್ತದಂತೆ, ಆದರೆ ನನ್ನಂತ ಸಾಹಿತ್ಯ ಲೋಕದ "ಫ್ರೆಶರ್" ಗಳು ಏನು ಮಾಡುತ್ತಾರೋ ತಿಳಿಯದು. ಆದರೂ ಕೆಲ ಸಮಯದ ದ ನಂತರ ಈ ಚಳಿಗೆ ಕಾಫಿ ಕುಡಿಯುವ ಮನಸಾಗಿ ಓಡೋಡಿ ಕೆಳಗಿದು ಬಂದು ಬಿಸಿ ಹಾಲಿನಲ್ಲಿ ಬ್ರೂ ಸೇರಿಸಿ ಕುಡಿದಾಗ ಚಳಿ ಮಾಯಾವಗಿತ್ತು. ಅಂತು ಮೊದಲ ವೈರಿಯ ವಿರುದ್ದ ಸೆಣೆಸಿ ಜಯ ದಾಖಲಿಸಿದ ಕುಶಿ ಸಿಕ್ಕಿತು, ಸರಿ ಇನ್ನು ತಡ ಮಾಡಬಾರದು ಬರೆಯಬೇಕು ಅಂತ ಅನ್ನಿಸಿ ಪೇಪರ್ ಕೈಗೆ ತೆಗೆದು ಕೊಳ್ಳುವಷ್ಟರಲ್ಲಿ ಸೂರ್ಯ ಮೂಡುತ್ತಾ ಇದ್ದ, ಅಕ್ಕ ಪಕ್ಕದ ಮನೆಯವರು ತಮ್ಮ ತಮ್ಮ ನೇಯ್ಗೆ ಯಂತ್ರಗಳಿಂದ ಕಟ ಕಟ ಶಬ್ದ ಶುರು ಮಾಡಿದ್ದರು. (ಬೆಂಗಳೂರಿನ ಸಂಪಂಗಿ ರಾಮ ನಗರ ಉದಯೋನ್ಮುಖ ಸಾಹಿತಿಗಳಿಗೆ ತಕ್ಕು ದಾದ ಸ್ಥಳ ಅಲ್ಲವೋ ಏನೋ? ) ಇನ್ನು ಕೂತು ಪ್ರಯೋಜನ ಇಲ್ಲವೆಂದು ಕೆಳಗೆ ಬಂದೆ. ಆದರೂ ಬರೆಯುವ ಹಂಬಲ ಎಳ್ಳಷ್ಟೂ ಕಡಿಮೆ ಆಗಿರಲಿಲ್ಲ. ಸೋಲೇ ಗೆಲುವಿನ ಮೊದಲ ಮೆಟ್ಟಿಲು ಎಂಬ ಥೇಟ್ ಭಾರತೀಯ ಕ್ರೀಡಾ ಪಟು ತರ ಸಮಾಧಾನ ಮಾಡಿಕೊಂಡೆ.


ಭಾನುವಾರ ಬೆಳಿಗ್ಗೆ ಬರೆಯಲು ಶುರು ಮಾಡಲೇ ಬೇಕು ಎನ್ನುವ ಹಂಬಲ ಇದ್ದಿದ್ದರಿಂದ ಕೆಲವು ಮುಂಜಾಗೃತಾ ಕ್ರಮ ಕೈಗೊಂಡೆ, ಸ್ನಾನದ ನಂತರ ಒದ್ದೆ ಬಟ್ಟೆ ಬೇಡ, ಚಳಿ ಆಗುವುದರಿಂದ ಸ್ವೆಟರ್ ಹಾಕ್ಕೊಂಡು ಹೋಗೋದು, ಕಿವಿಗೆ ಹತ್ತಿ ಅಥವಾ ಮಂಕಿ ಕ್ಯಾಪ್, ಮದ್ಯೆ ಮದ್ಯೆ ಕುಡಿಯಲು ಫ್ಲಾಸ್ಕ್ ಪೂರ ಕಾಫಿ, ಹಾಗು 4 ಗಂಟೆ ಬದಲು 2 ಗಂಟೆ ಗೆ ಬರೆಯಲು ಶುರು ಮಾಡುವುದು ಅಂತೆಲ್ಲ ಪಟ್ಟಿ ಮಾಡಿದೆ. ಹಿಂದಿನ ದಿನ ನಿದ್ದೆ ಇಲ್ಲದ್ದಕ್ಕೋ ಏನೋ ಶನಿವಾರ ರಾತ್ರೆ ಕಣ್ಣು ಮುಚ್ಚಿದಾಕ್ಷಣ ನಿದ್ದೆ ಬಂತು. ಹಿಂದಿನ ದಿನದಂತೆ ಅಲರಾಂ ಬಾರಿಸಿದಾಗ ಎದ್ದು ನೀರು ಕಾಯಿಸಿ ಸ್ನಾನ ಮಾಡಿ, ಯುದ್ದಕ್ಕೆ ಸಿದ್ದನಾದ ಸೈನಿಕನ ಹಾಗೆ ಸಿದ್ದ ನಾದೆ, ಜೆನ್ಸ್ ಪ್ಯಾಂಟು, ಸ್ವೆಟರ್, ಮಂಕಿ ಕ್ಯಾಪ್, ಕಾಲಿಗೆ ಸಾಕ್ಸ್ ಎಲ್ಲ ಧರಿಸಿ, ಟೆರೆಸ್ ಗೆ ನುಗ್ಗಿದೆ. ಬೀಸುವ ತಂಗಾಳಿ, ಬೆಚ್ಚನೆ ಸ್ವೆಟರ್, ಹಭೆ ಯಾಡುವ ಕಾಫಿ, ಅಹಹ್ ಸ್ವರ್ಗ ಸುಖ ಎನ್ನಿಸಿತು. ಹಾಗೆಯೇ ಅಲ್ಲೇ ಇದ್ದ ನೀರಿನ ಟ್ಯಾಂಕ್ ಗೆ ಒರಗಿ ಕೊಂಡು, ಧ್ಯಾನಸ್ತ ಸ್ಥಿತಿಯಲ್ಲಿ ಯೋಚಿಸ ತೊಡಗಿದೆ, ಕಥೆ ಹೇಗಿರಬೇಕು, ಸಂಸಾರಿಕ ಕಥೆನೋ, ಜನಾರ್ಧನ ಮಹರ್ಷಿ ಸಿನೆಮಾ ಕಥೆ ಬರೆದ ಹಾಗೆ ಅವರಿವರದ್ದನ್ನು ಕದ್ದು ಒಂದು ರಚನೆ ಮಾಡಬೇಕೋ, ಅಥವಾ ಈಗಿನ ಕತೆಗಾರರ ತರ ತಲೆ ಬುಡ ಅರ್ಥ ಆಗದ ಹಾಗೆ ಬರೆಯಲೋ ಯೋಚಿಸ ತೊಡಗಿದೆ. ಹಾಗೆ ಎಷ್ಟು ಹೊತ್ತು ಯೋಚಿಸಿದೆನೋ ತಿಳಿಯದು, ಕಣ್ಣು ಬಿಟ್ಟಾಗ ಸೂರ್ಯ ಕುಕ್ಕುತ್ತಾ ಇದ್ದ, ಅಕ್ಕ ಪಕ್ಕದ ಮಕ್ಕಳು ಅಲ್ಲಿ ಕುಣಿತಾ ಇದ್ವು ಪರಿಸ್ಥಿತಿಯ ಅರ್ಥ ಮಾಡಿಕೊಳ್ಳಲು ಹಲವು ನಿಮಿಷಗಳೇ ಬೇಕಾದವು, ನಂತರ ನಿದ್ರಾ ದೇವಿಗೆ ಒಂದೆರಡು ದಿಕ್ಕಾರ ಕೂಗಿ ರೂಮಿಗೆ ಬಂದು, ನನ್ನ ಕಾದಂಬರಿಯ ಕನಸನ್ನ ಅನಿರ್ದಿಷ್ಟಾವಧಿ ಕಾಲಕ್ಕೆ ಮುಂದೂಡಿ, ಪಕ್ಕದ ಉಡುಪಿ ಉಪಹಾರದಲ್ಲಿ ಮಸಾಲೆ ದೋಸೆ ತಿನ್ನಲು ಹೊರ ನಡೆದೆ.

ವಿ ಸೂ: ಶೀರ್ಷಿಕೆಯನ್ನ ಚಂದ್ರು ಇಂದ ಕಡ ತಂದದ್ದು.

Friday, November 20, 2009

ಗ೦ಡಾ೦ತರ ವಿಲ್ಲದ ಗ೦ಡಸರು


ನಿನ್ನೆ "ವಿಶ್ವ ಗಂಡಸರ ದಿನ" ಆಚರಣೆ ಆಗಿದೆ. ಅದರ ಅರ್ಥ ಈ ಪ್ರಪಂಚದಲ್ಲಿ ಗಂಡಸರು ಕೂಡ ಗುರುತಿಸಲ್ಪಟ್ಟಿದ್ದಾರೆ. :) ನಮ್ಮಲ್ಲಿ ತುಳಿತಕ್ಕೆ ಒಳಪಟ್ಟವರು, ದೌರ್ಜನ್ಯಕ್ಕೆ ಒಳಗಾದವರ ಬಗ್ಗೆ ಹೋರಾಡಲು ಸಾಕಷ್ಟು ಸಂಘ ಸಂಸ್ಥೆ ಗಳು ಇವೆ, ಆದರೆ ಅವು ಯಾವುದು ಕೂಡ ಮದುವೆ ಯಾದ ಗಂಡಸರನ್ನು ರಕ್ಷಿಸುವ ಕೆಲಸ ಮಾಡಿದ್ದು ಕೇಳಿಲ್ಲ. ಇರಲಿ ನಾನು ಈಗ ಗಂಡಸಾಗಿ ಹುಟ್ಟುವುದರ ಲಾಭಗಳನ್ನು ಅಥವಾ ಗಂಡಸರಿಗಿರುವ ಅನುಕೂಲತೆ ಗಳ ಬಗ್ಗೆ ಹೇಳುವೆ, ಇವೆಲ್ಲವೂ ಗಳನ್ನೂ ಓದಿದರೆ ಗಂಡಸರಿಗೆ ಸ್ವಲ್ಪ ವಾದರೂ ಹೆಮ್ಮೆ, ಗೌರವ ಬರುತ್ತದೆ ಅಂತ ನನ್ನ ಭಾವನೆ.


1. ಸುಖ ಎಂದರೆ ಏನು? ಅಂದರೆ ನನ್ನ ಮಟ್ಟಿಗೆ, ಕಜ್ಜೀನ ತುರಿಸಿ ಕೊಂಡಾಗ ಅಥವಾ ಬಹಳ ಸಮಯದ ನಂತರ ಪ್ರಕೃತಿ ಕರೆಗೆ ಓಗೊಟ್ಟಾಗ! ಗಂಡಸರಿಗೆ ಈ ಪ್ರಪಂಚವೇ ದೊಡ್ಡ ಮೂತ್ರಲಯ, ಎಲ್ಲಿ, ಯಾವಾಗ ಹೇಗಿದ್ದರೂ.. ಉಪಯೋಗಿಸ ಬಹುದು.

2.ಅಪ್ಪಿ ತಪ್ಪಿ ಎಲ್ಲಾದರು ಏನಾದ್ರೂ ಆದ್ರೆ, ಗಂಡಸರು "ಬಸುರಿ" ಆಗೋಲ್ಲ. ಇದಕಿಂತ ದೊಡ್ಡ ಲಾಭ ಮತ್ತೊಂದು ಸಿಗಲಾರದು.

3. ಮನೆ ಇಂದ ಹೊರ ಹೋಗಬೇಕು ಅಂದರೆ ಕೈಗೆ ಸಿಕ್ಕ ಯಾವುದೋ ಒಂದು ಅಂಗಿ ಹಾಕಿಕೊಂಡು ಹೋಗಬಹುದು. ಯಾವುದೂ ಸಿಗಲಿಲ್ಲ ಅಂದರೆ ಶರ್ಟ್ ಇಲ್ಲದೆ ಹೋದರು ನಡೆಯುತ್ತೆ. ಇಷ್ಟೇ ಅಲ್ಲ ಸಿನಿಮಾ ರಂಗದಲ್ಲಿ ಸಲ್ಮಾನ್ ಖಾನ್ ತರ ಖಾಲಿ ಚಡ್ಡಿ ಹಾಕ್ಕೊಂಡು ಕುಣಿದರೂ ಅದು ಅಶ್ಲೀಲ ಆಗೋಲ್ಲ.

4. ಯಾರ ಜೊತೆಗಾದರೂ ಮಾತನಾಡುವಾಗ ಕಣ್ಣಲ್ಲಿ ಕಣ್ಣಿಟ್ಟು ಮಾತಾಡಬಹುದು. ಅರ್ಥ ಆಯಿತು ಅಂದುಕೊಳ್ಳುವೆ.

5. ಇಂಟರ್ವ್ಯೂ ಗಳಿಗೆ ಹೋದಾಗ ನಮ್ಮ ಫಿಗರ್ ಮುಖ್ಯ ಆಗೋಲ್ಲ.

6. ಸಮಯದ ಉಳಿತಾಯ ಗಂಡಸರಿಂದ ಮಾತ್ರ ಸಾದ್ಯ, ಹೊರಗೆ ಅಡ್ಡಾಡೋಕೆ ಹೊರಡಲು ಕೇವಲ ೫-೧೦ ನಿಮಿಷ ಸಾಕು.

7. 5-6 ದಿನಗಳ ಪ್ರವಾಸಕ್ಕೆ ಕೇವಲ ಒಂದು ಸೂಟ್ ಕೇಸ್ ಸಾಕು.

8. ಒಂದು ಜೊತೆ ಶೂ ಮತ್ತೆ ೩ ಜೊತೆ ಸಾಕ್ಸ್ ಸಾಕೋ ಸಾಕು. ಸಾಕ್ಸ್ ಗಳನ್ನ ಯಾವಾಗಲು ತೊಳಿತಾ ಇರಬೇಕು ಅನ್ನುವ ಕಾಯಿದೆ ಯಾವುದು ಇಲ್ಲ.

9 ಕೆಂಪು, ಕಪ್ಪು, ಬಿಳಿ, ಹಸಿರು .. ಬಿಟ್ಟು ಇನ್ಯಾವುದೇ ಬಣ್ಣ ಗುರುತಿಸದೆ ಇದ್ದರೆ ಜನ ತಪ್ಪು ತಿಳಿಯೋಲ್ಲ.

10. ನಮ್ಮ ಕೊನೆಯ ಹೆಸರು ಯಾವಾಗಲು ಒಂದೇ ಆಗಿರುತ್ತದೆ. (ಲಾಸ್ಟ್ ನೇಮ್)

11. ಮೊಬೈಲ್ ಮಾತು ಕಥೆ ಕೇವಲ ೩೦ ಸೆಕಂಡ್ ನಲ್ಲಿ ಮುಗಿಯುತ್ತದೆ.

12. ಯಾರಾದರು ಒಂದು ಸಮಾರಂಭಕ್ಕೆ ಕರೆಯಲಿಲ್ಲ ಅಂದರೂ ಕೂಡ ಅವರು ನಮ್ಮ ಸ್ನೇಹಿತರಾಗೆ ಇರುತ್ತಾರೆ.

13. ವಯಸ್ಸು ಮೂವತ್ತಕಿಂತ ಜಾಸ್ತಿ ಆಗಿ, ಇನ್ನು ಮದುವೆ ಆಗಿಲ್ಲ ಅಂದ್ರೂನು ಯಾರು ಗಮನಿಸೋಲ್ಲ, ಅಥವಾ ಕಣ್ಣು ಹಾಕೋಲ್ಲ.. :D

14. ಅಮ್ಮ ನ ಜೊತೆ ಜಗಳ ಆಡದೇನೆ ಇರಲು ಸಾಧ್ಯವಿದೆ. (ನನ್ನ ಮೇಲೆ ದಯವಿಟ್ಟು ಜಗಳಕ್ಕೆ ಬರಬೇಡಿ, ಕಣ್ಣಾರೆ ಕಂಡಿರುವೆ, ನೋಡುತ್ತಲೂ ಇರುವೆ. )

15. ಕಡೇ ಪಕ್ಷ ಸರ್ಕಾರಿ ಲೆಕ್ಕದಲ್ಲಿ ಮನೆಯ ಯೆಜಮಾನ ಅನ್ನುವ ಬಿರುದು ಬಾವಲಿ ಸಿಗುತ್ತದೆ.


ಇನ್ನೂ ಸಾಕಷ್ಟು ಇದೆ, ಆದರೆ ಈಗ ಇಷ್ಟು ಸಾಕು ಬಿಡಿ.
ನನ್ನೆಲ್ಲಾ ಮಾತುಗಳನ್ನ ಎಲ್ಲಾ ಗಂಡಸರು ಮತ್ತು ಅವರ ಮಕ್ಕಳು ಒಪ್ಪುತ್ತಾರೆ ಅಂತ ಭಾವಿಸುವೆ. :) :)

Wednesday, November 11, 2009

ಕೇಳುಗನ ಕ(ವ್ಯ)ಥೆ



ಒಂದು ಊರು, ಅ ಊರಲ್ಲಿ ನಮ್ಮ ಕಥಾ ನಾಯಕ ತನ್ನ ಕುಟುಂಬ ದವರೊಡನೆ ಸುಖವಾಗಿ ಇದ್ದ. ಒಳ್ಳೆಯ ಕೆಲಸ, ತಲೆ ತಿನ್ನದ ಮ್ಯಾನೇಜರ್, ಮನೆಯಲ್ಲಿ ಶಾಪಿಂಗ್ ಅಂತ ಬಾಯಿ ಬಡಿದುಕೊಳ್ಳದೆ ಇರುವ ಹೆಂಡತಿ, ಸ್ಕೂಲ್ ಗೆ ಹೋಗುವ ಬುದ್ದಿವಂತ ಮಕ್ಕಳು, ಆರೋಗ್ಯವಂತ ಅಪ್ಪ ಅಮ್ಮ ಮತ್ತೆ ಸ್ವಂತದ ಮನೆ. ಇದಕ್ಕಿಂತ ಇನ್ನೇನು ಬೇಕು ಅನ್ನುವ ಹಾಗೆ ಎಲ್ಲರೂ ಇದ್ದರು.


ಎಲ್ಲರೂ ಸುಖವಾಗಿ ಇದ್ದರೆ ಅದು ಕಥೆ ಹೇಗಾದೀತು. ಅಲ್ಲೊಬ್ಬ ದುಷ್ಮನ್ ಇರಲೇ ಬೇಕಲ್ಲವೇ? ಒಮ್ಮೆ ಇವರ ಸುಖಿ ಕುಟುಂಬದ ಬಗ್ಗೆ ತ್ರಿಲೋಕ ಸಂಚಾರಿ ನಾರದರು ಗಮನಿಸಿದರು, ಗಮನಿಸಿ ಸುಮ್ಮ ನಿರಲಾಗದೆ ದೇವರಿಗೂ ವಿಷಯ ತಿಳಿಸಿ ಬಿಟ್ಟರು. ಭೂಮಿಲಿ ಕೆಲವರು ನೆಮ್ಮದಿಯ ಜೀವನ ನಡೆಸುತ್ತಾ ಇದ್ದಾರೆ ಅಂದರೆ ನಂಬುವುದು ಹೇಗೆ? ಇಲ್ಲಿ ಪ್ರಜಾಭುತ್ವ ಇದೆ, ರಸ್ತೇಲಿ ಖಾಕಿ ರೌಡಿಗಳು ಇದ್ದಾರೆ, ಒಂದು ಕಡೆ ಸುನಾಮಿ, ಮತ್ತೊಂದೆಡೆ ಪ್ರವಾಹ, ಇನ್ನೆಲ್ಲೋ ಬರಗಾಲ, ಹೀಗಿದ್ದೂ ನೆಮ್ಮದಿ ಇಂದ ಒಂದು ಕುಟುಂಬ ಇದೆ!!. ಸುಖವಾಗಿ ಇರುವುವರನ್ನು ದೇವರು ಹೇಗೆ ತಾನೆ ಸಹಿಸ ಬಲ್ಲ? ಅವರಿಗೆ ಒಂದಿಷ್ಟು ಕಷ್ಟ ಗಳನ್ನು ಗಿಫ್ಟ್ ಮಾಡಿ ಪರೀಕ್ಷೆ ಮಾಡಲೇ ಬೇಕಲ್ಲವೇ? ಕಷ್ಟ ಬಂದರೆ ತಾನೇ ಮನುಷ್ಯರು ದೇವರ ನಾಮ ಜಪಿಸುವುದು? ಸರಿ ನಮ್ಮ ಕಥಾನಾಯಕನಿಗು ಒಂದಿಷ್ಟು ಕಷ್ಟ ಕೊಡಲೇ ಬೇಕೆಂದು ದೇವರು ತೀರ್ಮಾನಿಸಿ ಬಿಟ್ಟ.


ಅದು ಯಾವ ಸೀಮೆ ಶಾಪವೋ ಏನೋ ನಮ್ಮ ನಾಯಕ ನಿಧಾನವಾಗಿ ಮಂಕಾಗುತ್ತಾ ಹೋದ. ಸುಮ್ಮ ಸುಮ್ಮನೆ ಕಿರಿಚುವುದು, ತನ್ನಷ್ಟಕ್ಕೆ ತಾನೆ ಮಾತಾಡೋದು, ಗೊಣಗೋದು, ಎಲ್ಲಾ ಶುರು ಮಾಡಿದ. ಆಫೀಸ್ ನಲ್ಲೂ ಅವನ ವಿಚಿತ್ರ ವರ್ತನೆ ಶುರು ಆಯಿತು. ಸ್ವಲ್ಪ ದಿನ ನೋಡಿದ ಮ್ಯಾನೇಜರ್ ಇವನನ್ನು ಒತ್ತಾಯ ಪೂರ್ವಕವಾಗಿ ಸಂಬಳ ಇಲ್ಲದೆ ರಜೆ ಮೇಲೆ ಕಳುಹಿಸಿದರು. ಮನೆಯಲ್ಲಿ ಅಪ್ಪ ಅಮ್ಮ ತಾವು ಕಂಡ ದೇವರಿಗೆಲ್ಲ ಹರಕೆ ಹೊತ್ತರು, ಆದರೆ ದೇವರು ಸಹಾಯ ಮಾಡಲಿಲ್ಲ. ಲಂಚ ಕೊಟ್ಟ ಕೂಡಲೇ ಕೆಲಸ ಮಾಡೋಕೆ ದೇವರೇನು ಸರ್ಕಾರಿ ನೌಕರನೇ?ಹಲವು ದಿನಗಳು ಕಳೆದರು ಏನೂ ಪ್ರಯೋಜನ ಆಗಲಿಲ್ಲ.


ಹಲವಾರು ಪುಣ್ಯ ಕ್ಷೇತ್ರಗಳ ಪ್ರವಾಸ ಮಾಡಿದ್ದಾಯಿತು, ಕೇರಳದ ಮಾಂತ್ರಿಕರಿಂದ ಹೋಮ ಹವನ ಮಾಡಿಸಿದ್ದಾಯಿತು, ಪ್ರಸಿದ್ದ ಮಾನಸಿಕ ರೋಗ ತಜ್ಞರ ಬಳಿ ಹೋದದ್ದಾಯಿತು .. ಉಹ್ಹ್ಞೂ ಏನು ಉಪಯೋಗ ಆಗಲಿಲ್ಲ, ಕೊನೆಗೆ ಹುಚ್ಚ ಎಂಬ ಹಣೆ ಪಟ್ಟಿ ಕಾಯಂ ಆಗಿ ಬಿಟ್ಟಿತು.


ಕೊನೆಗೊಮ್ಮೆ ನನ್ನ ತರದ ಸಹೃದಯ ಮಿತ್ರರ ಅಣತಿಯಂತೆ ನಾಯಕನನ್ನು ಹೆಸರಾಂತ ಸಿನಿಮಾ ನಿರ್ದೇಶಕ ಯೋಗರಾಜ್ ಭಟ್ಟ ರ ಬಳಿ ಕರೆದೊಯ್ಯಲಾಯಿತು. (ಮನಸಾರೆ ಎಫೆಕ್ಟ್) ತಮ್ಮ ಕುರುಚಲು ಗಡ್ಡವನ್ನು ಒಮ್ಮೆ ಕೆರೆದು ಕೊಂಡ ಭಟ್ಟರು ಅಡುಗೆ ಮನೆ ಒಳಗೆ ಹೋದರು. ೨ ನಿಮಿಷದ ನಂತರ ಒಂದು ಭಾರಿ ಚಾಕುವಿನೊಡನೆ ಬಂದರು. ಏನಪ್ಪಾ ಭಟ್ಟರು ಕೂಡ ಮಚ್ಚು ಲಾಂಗು ಹಿಡಿಯಲು ಶುರು ಮಾಡಿದರ ಅಂತ ಯೋಚಿಸುವುದರೊಳಗೆ ಕಥಾನಾಯಕನ ಕಿವಿಗೆ ಅಂಟಿದ್ದ ಎರಡು ವೈರ್ ಗಳನ್ನು ಕಟ್ಟು ಮಾಡಿ ಬಿಟ್ಟರು!! ಏನಾಶ್ಚರ್ಯ.. ನಾಯಕ ಮೊದಲಿನ ಹಾಗೆ ನಾರ್ಮಲ್ ಆಗಿ ಬಿಟ್ಟ.


ಇತ್ತ ದೇವರು ತನ್ನ ಪ್ಲಾನ್ ಪಲಿಸಿದ್ದಕ್ಕೆ, ಒಂದಿಷ್ಟು ಹರಕೆಗಳು ಸಂದಿಕ್ಕೆ ಕುಶಿ ಗೊಂಡು ಬೇರೆ ಯಾವ ಕಷ್ಟವು ಕೊಡಲಿಲ್ಲ. ನಾಯಕನ ಕುಟುಂಬದವರು ನೂರ್ಕಾಲ ಬಾಳಿ ಬದುಕಿದರು.ಅವರ ಕಥೆ ಏನೋ ಸರಿ ಹೋಯಿತು, ಆದರೆ ಹೀಗಾಗಲು ಕಾರಣ ತಿಳಿಯದ ನಾರದರು ಗೊಂದಲ ಗೊಂಡರು, ಕಿವಿ ಗು, ವೈರ್ ಗು, ಅವನ ಹುಚ್ಚು ತನಕ್ಕು ಸಂಬಂದ ಕಲ್ಪಿಸಲಾಗದೆ ಭಗವಂತನ ಬಳಿ ಅವನ ಲೀಲೆಗಳನ್ನ ಕೇಳಿದರು.


ನಗುತ್ತ ಉತ್ತರಿಸಿದ ದೇವರು ಮಾನವನಿಗೆ ನರಕ ದರ್ಶನ ಮಾಡಿಸಲು ಹೆಂಡತಿ, ಗರ್ಲ್ ಫ್ರೆಂಡ್ ಮತ್ತೆ ಮ್ಯಾನೇಜರ್ ಎಂಬ ಜಂತು ಗಳನ್ನು ಶೃಷ್ಟಿಸಿದೆ, ಆದರೆ ಕೆಲವೊಮ್ಮೆ ಕೆಲವೊಂದು ಅದೃಷ್ಟವಂಥರಿಗೆ ಎಲ್ಲ ಸರಿ ಇರುತ್ತಿತ್ತು. ಅಂತಹವರಿಗೆ ಕಷ್ಟ ಕೊಡುವ ಸಲುವಾಗಿ ಎಫ್ ಎಂ ಗಳಲ್ಲಿ ವಿಚಿತ್ರ RJ ಗಳನ್ನು ಕಳುಹಿಸಿದೆ. "RJ ಗಳು ಬಾಯಿ ಬಿಟ್ಟಾಗ" ಜನ ತಲೆ ಚಚ್ಚಿ ಕೊಳ್ಳಲು ಶುರು ಮಾಡಿದರು. ಕಾಲಸಿಪಾಲ್ಯದ ರೌಡಿಗಳ ಹಾಗೆ ರೇಡಿಯೋ ದವರು ಕಿರಿಚಲು ಶುರು ಮಾಡಿದರು. ಅವರ ಹಾಗೆ ಅಡ್ಡ ಹೆಸರು ಇಟ್ಟು ಕೊಂಡರು. ಕೋಳಿ ಮಂಜನ ಹಾಗೆ ಇಲ್ಲಿ ಬೀಟ್ ರಾಜ, ಬ್ಲೇಡ್ ದೀಪು ಮುಂತಾದವರು ಬಂದರು, ಕಂಡ ಕಂಡವರಿಗೆ ಫೋನ್ ಮಾಡಿ ಅವರು ಉಗಿಯೋ ಆಟ ಆಡಿದರು. ಸುಪ್ರೀಂ ಕೋರ್ಟ್ ಗೇ ಗಳ ಬಗ್ಗೆ ತೀರ್ಪು ಕೊಟ್ಟಿದ್ದೆ ತಡ, ಗೇ, ಲೆಸ್ಬೋ ಅಂತ ಬಡ ಕೊಳ್ಳೋಕೆ ಶುರು ಮಾಡಿದರು, ಪಾಪದ ಜನ ಬಿ ಎಂ ಟಿ ಸಿ ಬಸ್ಸು ಗಳಲ್ಲಿ ನಿಂತು ಪಕ್ಕದವರ ಬೆವರ ವಾಸನೆ ಮರೆಯಲು ಜನ ಅದನ್ನು ಕೇಳಲೇ ಬೇಕಿತ್ತು. ಜನರು ಹಿಡಿ ಶಾಪ ಹಾಕುತ್ತ ಕಷ್ಟ ಪಡುತ್ತಾ ಇದ್ದರು.


ಹೀಗೆ ಮಾಡುತ್ತಲಿರುವಾಗಿ ಜನಕ್ಕೆ ದೇವರಿಗೆ ಇನ್ನು ದೇವರ ಮೇಲೆ ನಂಬಿಕೆ ಹಾಗು ಭಕ್ತಿ ಇರುವುದೆಂದು ವಿವರಿಸಲು, ಸಂತುಷ್ಟಗೊಂಡ ನಾರದನು ಹರಿ ನಾಮ ಸ್ಮರಣೆ ಮಾಡುತ್ತಾ ಮತ್ತೆ ತನ್ನ ಸಂಚಾರವನ್ನು ಆರಂಬಿಸಿದನು.


ಕೊನೇ ಮಾತು: ನಿಮಗೆ ನನ್ನ ಮಾತು ಅತೀ ಅನ್ನಿಸಬಹುದು, ಆದರೆ "ರಾತ್ರೆ ರಹಸ್ಯ" ಅಂತ ಕಾರ್ಯಕ್ರಮದ ಹೆಸರು ಕೇಳಿದರೆ ಹೇಗಾಗಬೇಡ? ಕಾರ್ಯಕ್ರಮದ ಉದ್ದೇಶ ಒಳ್ಳೆಯದಿದ್ದರೆ ಹೆಸರು ಕೂಡ ಒಳ್ಳೆಯದಿರಬೇಕಲ್ಲ. ಅದನ್ನು ಬಿಟ್ಟು ಜನರನ್ನು ಸೆಲೆಯಲು, ಶೆಕೀಲ ಸಿನಿಮಾ ತರ ಹೆಸರಿಟ್ಟರೆ?


ಅಷ್ಟೇ ಅಲ್ಲ ಇವರು ಯಾಕೆ ಕಿರುಚುತ್ತಾರೆ, ನಗುತ್ತಾರೆ ಅಂತ ಅರ್ಥ ಆಗೋದೆ ಕಡಿಮೆ. ಸುಮ್ನೇ ಕೂಡಗೋದು, ತಲೆ ಬುಡ ಇಲ್ಲದೇ ಮಾತಾಡೊಡೇ ನಿರೂಪಣೆ ಅಂತ ಭಾವಿಸಿದ ಹಾಗಿದೆ. ಡೇಟಿಂಗ್, ಗೇ ಅನ್ನೋದೇ ಇವರಿಗೆ ದೊಡ್ಡ ವಿಷಯಗಳು ಅನ್ಸುತ್ತೆ. ಭಾಗಶ್ಯ ಇವರಾರು ಎಸ್ ಎಸ್ ಎಲ್ ಸಿ ಕೂಡ ಪಾಸಾಗಿರೋದು ಅನುಮಾನ. ಇವರಿಗೆಲ್ಲ ಲೂಯಿ ಪಾಸ್ಚರ್ ಎನ್ನುವ ಮಾಹಾನುಭಾವ ಕಂಡುಹಿಡಿದ ರೇಬಿಸ್ ಔಷದವನ್ನು ಕೊಟ್ಟರೆ ಸರಿ ಹೋಗಬಹುದೇನೋ.


ರವಿ ಹೆಗಡೆಯವರು, ಅವರ ಬ್ಲಾಗಿನಲ್ಲಿ ಬರೆದಿದ್ದರು ಅಮೇರಿಕದಲ್ಲಿ ಟಾಕಿ ರಡಿಯೋ ಇದೆ ಅಂತ, ಸದ್ಯ ಅಷ್ಟರ ಮಟ್ಟಿಗೆ ನಾವು ಅದೃಷ್ಟವಂತರು, ಅದು ಇಲ್ಲಿಗೆ ಇನ್ನೂ ಕಾಲಿಟ್ಟಿಲ್ಲ. ಸರ್ಕಾರಿ ರೇಡಿಯೋ ಬಿಟ್ಟು ಉಳಿದೆಲ್ಲವೂ ಕೂಡ ಒಂದು ರೀತಿಯ ಹುಚ್ಚಾಸ್ಪತ್ರೆ. ಇದು ಬೆಂಗಳೂರಿನ ಎಫ್ ಎಂ ಕೇಳುಗನಾದ ನನ್ನ ಅಭಿಪ್ರಾಯ, ನೀವೇನು ಅಂತೀರೋ..

Thursday, October 29, 2009

ದಿನ ಭವಿಷ್ಯವೂ, ಪ್ರಳಯವೂ

ಅದ್ಯಾವುದೋ ಕಾಲದವರು ಬರೆದಿರೋ ಅದೇನೋ ಕ್ಯಾಲೆಂಡರ್ ಪ್ರಕಾರ ಸದ್ಯದಲ್ಲೇ ಜಗತ್ತು ನಾಶ ಆಗುತ್ತೆ ಅಂತೆ. ಅದಕ್ಕೆ ಪೂರಕವಾಗಿ ವಿಶ್ವ ಪ್ರಸಿದ್ದಿ ಜ್ಯೋತಿಷಿ "ಚಂದ್ರಶೇಖರ ಸ್ವಾಮೀಜಿ" ಅವರು ಗಾಳಿಯಿಂದ ರೋಗ ಹರಡಿ ಮನುಷ್ಯನ ಮುಖ ಮಂಗನ ತರ ಆಗುತ್ತೆ ಅಂತ ಸಂಡೆ ಟೈಮ್ಸ್ ಗೆ ಹೇಳಿದ್ದಾರೆ. (ಕಳೆದ ಭಾನುವಾರದ ಟೈಮ್ಸ್ ಆಫ್ ಇಂಡಿಯಾ - ಕನ್ನಡ) ಇದರ ಜೊತೆಗೆ ನಮ್ಮ ಕೊಡಿ ಹಳ್ಳಿ ಸ್ವಾಮಿಜಿ ಭವಿಷ್ಯ ಇನ್ನೂ ಪ್ರಕಟವಾಗಬೇಕಿದೆ. ಇರಲಿ ನನಗಂತೂ ಈ ಭವಿಷ್ಯದಲ್ಲಿ ನಂಬಿಕೇನು ಇಲ್ಲ, ಆಸಕ್ತಿನು ಇಲ್ಲ ಆದ್ರೆ ನಂಬಿಕೆ ಇಲ್ಲದ ಸ್ವಲ್ಪ ಹೆದರಿಕೆ ಮಾತ್ರ ಇದೆ!!

ಕೆಲವು ವರುಷಗಳ ಹಿಂದೆ ನಾನು ಒಂದು ಚಿಕ್ಕ ಸಂಜೆ ಪತ್ರಿಕೆಯಲ್ಲಿ ಕೆಲಸ ಮಾಡುತ್ತಾ ಇದ್ದೆ. ದಿನ ಇಡಿ ಆವತ್ತಿನ ಘಟನಾವಳಿಗಳನ್ನು ನೋಡಿ, ಗುಡ್ಡೆ ಹಾಕಿಕೊಂಡು, ಅದಕ್ಕೆ ಅಕ್ಷರದ ರೂಪ ಕೊಡೋದು ಮುಖ್ಯ ಕೆಲಸ. ಈ ಕೆಲ್ಸಕ್ಕೆ ಇದ್ದವರು ೩ ಜನ. ನಾನು, ಒಬ್ಬ ಹುಡುಗಿ (ಸುನೀತಾ ಅನ್ಸುತ್ತೆ ಅವಳ ಹೆಸರು) ಮತ್ತೆ ನಮ್ಮ ಎಡಿಟರಮ್ಮ.

ರಾಜಕೀಯ, ಮತ್ತೆ ನಗರದಲ್ಲಿ ನಡೆಯುವ ಸಭೆ, ಸಮಾರ೦ಭದ ವರದಿ ಮಾಡುವುದು ನನ್ನ ಕೆಲಸ. ಅದರ ಜೊತೆಗೆ ವಾರದಲೊಮ್ಮೆ ಸಿನಿಮಾ, ರಾಜಕೀಯದ ಬಗ್ಗೆ ಹಾಸ್ಯ ಲೇಖನ, ಪದ ಬಂದ ಅಡಿಷನಲ್ ಕೆಲಸ. ಮತ್ತೆ ಹಿಂದಿನ ದಿನ ಸಂಜೆ ಮತ್ತೆ ರಾತ್ರೆಯ ಎಲ್ಲಾ ಸುದ್ದಿಗಳು ಎಲ್ಲಾ ದಿನಪತ್ರಿಕೆಗಳಲ್ಲಿ ಬಂದಿರುತ್ತದೆ. ಅದನ್ನು ಓದಿ ಶೀರ್ಷಿಕೆ ಬದಲಿಸಿ, ಸ್ವಲ್ಪ ಉಪ್ಪು ಕಾರ ಹಚ್ಚಿ ಹಿಂದೆ ಮುಂದೆ ಮಾಡಿ ಬರೆಯೋದು ಹಿಡನ್ ಜವಾಬ್ದಾರಿ.

ನಮ್ಮ ಕೆಲಸ ಚೆನ್ನಾಗೇ ನಡೀತಾ ಇತ್ತು. ಆ ಊರಲ್ಲಿ ರಾಜಕೀಯ ಚಟುವಟಿಕೆಗಳಿಗೆ ಏನೂ ಕೊರತೆ ಇರಲಿಲ್ಲ. ದಿನಾಲೂ ಕನಿಷ್ಠ ಒಂದಾದರು ಚಿಕ್ಕ ಗಲಭೆ, ಅವಾಗ ಅವಾಗ ಹೊಳೆಯಲ್ಲಿ ಗುರುತು ಸಿಗದ ಹೆಣಗಳೂ ಸಿಗುತ್ತಾ ಇದ್ದವು. ನಾವುಗಳು ಕೂಡ ತಪ್ಪದೆ ವಿಷಯ ಸಿಕ್ಕಿದ ಕುಶಿಯಲ್ಲಿ ಬರೀತಾ ಇದ್ದೆವು. ಅಕಸ್ಮಾತ್ ಬರೀಲಿಕ್ಕೆ ಏನೂ ಸಿಗಲಿಲ್ಲ ಅಂದ್ರೆ "ನಗರದಲ್ಲಿ ಹದ ಗೆಟ್ಟ ರಸ್ತೆ", "ಹಂದಿ ಕಾಟ" ಜಾಸ್ತಿ ಅಂತೆಲ್ಲ ಸಂಪಾದಕೀಯ ಬರೆದು ಹಾಕ್ತಾ ಇದ್ದೆವು.

ಇಂತಿಪ್ಪ ನಮ್ಮ ಪತ್ರಿಕೆಯಲ್ಲಿ ವಾರ ಭವಿಷ್ಯವು ಪ್ರಕಟವಾಗ್ತಾ ಇತ್ತು. ನಮ್ಮ ಎಡಿಟರ್ ಅದ್ಯಾರೋ ಜ್ಯೋತಿಷಿ ಹತ್ತಿರ ಬರೆಸ್ತಾ ಇದ್ರು.

ಹೀಗಿರುವಾಗ ಒಮ್ಮೆ ನಮ್ಮ ಎಡಿಟರ್ 2 ದಿನಗಳ ಮಟ್ಟಿಗೆ ಕಚೇರಿ ಕೆಲಸ ನಮ್ಮ ಹೆಗಲಿಗೆ ಹಾಕಿ ಬೆಂಗಳೊರಿಗೆ ಒಂದು ಮದುವೆಗೆ ಹೊರಟರು. ಗುರುವಾರ ಮತ್ತೆ ಶುಕ್ರವಾರದ ಜವಾಬ್ದಾರಿ ನಮ್ಮದಾಗಿತ್ತು. ನಾವು ಕೂಡ ಪೇಜ್ ತುಂಬಿಸೋ ಕೆಲಸ ನಿಷ್ಠೆಯಿಂದ ಮಾಡುವ ಅಲೂಚನೆಯಲ್ಲಿ ಇದ್ದೆವು. ಮೊದಲ ದಿನ ಒಬ್ಬ ಗೃಹಿಣಿ ಆತ್ಮ ಹತ್ಯೆ ಮಾಡಿಕೊಂಡಿದ್ದಳು. ಅದು ವರದಕ್ಷಿಣೆ ಕೊಲೆ ಎಂದು ಅವಳ ತಂದೆ ತಾಯಿ ಆಸ್ಪತ್ರೆಯಲ್ಲಿ ಗಲಾಟೆ ಮಾಡುತ್ತಾ ಇದ್ದರು, ಗಂಡನ ಮನೆಯವರು ಅವಳು ಬಂಜೆ, ಆದ್ದರಿಂದ ಬೇಸತ್ತು ಸತ್ತಿದ್ದಾಳೆ ಎಂದು ದೂರುತ್ತಿದ್ದರು. (ಯಾರಾದರು ಸತ್ತರೆ ಕುಶಿ ಪಡುತ್ತಾ ಇದ್ದಿದ್ದು ನನ್ನಂತ ಸೊ ಕಾಲ್ಡ್ ಪತ್ರ ಕರ್ತರು ಮಾತ್ರ ಅನ್ಸುತ್ತೆ) ನಾವು ಇದನ್ನು ಸುಂದರವಾಗಿ ರಕ್ತ ಸಿಕ್ತವಾಗಿ ಬರೆದುದು ಆಯಿತು.

ಆದರೆ ಮಾರನೆ ದಿನ ಶುಕ್ರವಾರ, ಡಿ ಟಿ ಪಿ ಶ್ರೀನಿವಾಸ್ ಬಂದು "ಸಾರ್ ಇನ್ನು ಭವಿಷ್ಯ ಬಂದಿಲ್ಲ, ಅ ಭಟ್ಟರ ಮನೆ ಫೋನ್ ನ ಯಾರು ಅಟೆಂಡ್ ಮಾಡ್ತಾ ಇಲ್ಲ" ಅಂದಾಗ ಯಾಕೋ ನನಗೆ ಸಮಸ್ಯೆಯ ಅರಿವು ಆಗಿದ್ದು. ವಾರ ಭವಿಷ್ಯ ಇಲ್ಲದೆ ಪತ್ರಿಕೆ ಹೊರ ತರುವುದು ಹೇಗೆ? ಏನು ಮಾಡುವುದು ಅಂತ ತಲೆಕೆಡಿಸಿಕೊಂಡು ಕುಳಿತೆ. ಬೆಳ ಬೆಳಗ್ಗೆ ಯಾವ ಜ್ಯೋತಿಷಿಗಳನ್ನ ಹುಡುಕುತ್ತಾ ಕೂರುವುದು? ಅದು ಅರ್ಜೆಂಟ್ ಅಂದ್ರೆ ಯಾರು ಬರೆದು ಕೊಟ್ಟಾರು ಎಂಬ ಚಿಂತೆ. ಅಷ್ಟರಲ್ಲಿ ಶ್ರೀನಿವಾಸ್ ಅದೆಲ್ಲಿಂದನೋ ಒಂದು "ಒಂಟಿ ಕೊಪ್ಪಲ್" ಪಂಚಾಗ ತಂದು ಕೊಟ್ಟು "ಸಾರ್ ನೀವೇ ಬರದು ಬಿಡಿ ಅಂದ್ರು" ಹೆಸರಲ್ಲಿ ಶಾಸ್ತ್ರಿ ಅಂತ ಇರೋದ್ರಿಂದ ಆತ ಏನೇನೋ ಕಲ್ಪಿಸಿ ಕೊಂಡಿದ್ದ ಅನ್ಸುತ್ತೆ. ಏನು ಅರ್ಜೆಂಟ್ ಇಲ್ಲ, ಅರ್ದ ಘಂಟೆ ಟೈಮ್ ತಗೊಂಡು ಬರೀರಿ, ನಾನು ಕಾಲಂ ಖಾಲಿ ಬಿಟ್ಟಿರ್ತೀನಿ ಅಂತ ಹೇಳಿ ನಾಪತ್ತೆ ಆದ!!

ಈ ವಿಷಯನ ಸುನೀತಾಗು ಹೇಳಿದರೂ ಏನು ಪ್ರಯೋಜನ ಆಗಲಿಲ್ಲ. ನೀವೇ ಬರೀರಿ ಅಂದ್ಲು, ಇದೊಳ್ಳೆ ಕಥೆ ಆಯಿತಲ್ಲ, ನನಗೆ ಎಷ್ಟು ರಾಶಿ, ನಕ್ಷತ್ರ ಇದೆ ಅಂತಾನೆ ಗೊತ್ತಿಲ್ಲ. ಪಂಚಾಂಗ ನೋಡಿ ಅಂತೂ - ಇಂತೂ ಬರೆದು ಮುಗಿಸಿದೆ, ಕನ್ಯಾ ರಾಶಿಯವರಿಗೆ ತೀವ್ರ ಆರೋಗ್ಯ ಹಾನಿ, ಮಕರ ದವರಿಗೆ ಪ್ರವಾಸ ಅಂತ ಏನೇನೋ ಬರೆದಿದ್ದೆ. ಅಂದಿನ ಎಲ್ಲಾ ಕೆಲಸ ಮುಗಿಸಿ ಮನೆಗೆ ಬಂದಾಗ ರಾತ್ರೆ ಆಗ್ತಾ ಇತ್ತು.

ನಾನು ಆವಾಗ ಚಿಕ್ಕಪ್ಪನ ಮನೇಲಿ ಇದ್ದೆ. ಮನೆಗೆ ಹೋದ ಸ್ವಲ್ಪ ಹೊತ್ತಿನಲ್ಲಿ ಚಿಕ್ಕಪ್ಪನು ಬಂದ್ರು. ಅಂದು ಅವರಿಗೆ ತೀವ್ರವಾದ ಕ್ಯಾನ್ಸರ್ ಇರುವುದು ಪತ್ತೆ ಆಗಿತ್ತು, ಹಾಗು ಅವರು ಕನ್ಯಾ ರಾಶಿ ಯವರು ಆಗಿದ್ದರು. ಇ ಘಟನೆ ನಂತರ ನಾನು ಮತ್ತೆ ಭವಿಷ್ಯ ಬರೆಯುವ ಸಾಹಸ ಮಾಡಲಿಲ್ಲ. ಸ್ವಲ್ಪ ದಿನಗಳ ನಂತರ ಅ ಕೆಲ್ಸನೂ ಬಿಟ್ಟೆ.

ಇದಾಗಿ ಹಲವು ವರುಷಗಳೇ ಕಳೆದಿದ್ದರೂ ನನಗೆ ನೆನಪು ಮಾಸಿಲ್ಲ.

ನಾನು ಜ್ಯೋತಿಷ್ಯ ಸುಳ್ಳು, ಅದನ್ನು ನ೦ಬಬೇಡಿ ಅ೦ತ ಪ್ರಚಾರ ಮಾಡಲು ಹೊರಟಿಲ್ಲ. ಜ್ಯೋತಿಷ್ಯ ವಿಜ್ಞಾನವೂ, ಆಗಿರಬಹುದು. ಅದು ವಿಜ್ಞಾನವೇ ಆಗಿದ್ದರೂ ಮೂಢನ೦ಬಿಕೆಯನ್ನು ಅದರೊ೦ದಿಗೆ ತಳಕು ಹಾಕುವ ಮ೦ದಿಯಿ೦ದ ಅದರ ವೈಜ್ಞಾನಿಕ ತಳಹದಿ ಹದಗೆಟ್ಟಿದೆ ಎನ್ನಬಹುದು . ಹಾಗಂತ ಹಾದಿ ಬೀದಿಯಲ್ಲಿ ಕುಳಿತು ಮುಂದಾಗಲಿರುವ ವಿದ್ಯಮಾನಗಳ ಬಗ್ಗೆ ತಮಗೆ ತೋಚಿದ೦ತೆ ಬೊಗಳುವ ಮತ್ತು ಅದರಿ೦ದ ಜನರನ್ನು ತಪ್ಪುದಾರಿಗೆಳಸುವ ಕ್ರಮ ನೋಡಿದಾಗ ಬೇಸರ ವೆನಿಸುತ್ತದೆ ಮತ್ತು ಜ್ಯೋತಿಷಿಗಳನ್ನು ಕ೦ಡಾಗ ಸಿಟ್ಟು ಬರುತ್ತದೆ.

Superstition is to religion what astrology is to astronomy; the mad daughter of a wise mother. (ಯಾವುದೇ ಒ೦ದು ಧರ್ಮಕ್ಕೆ ಅ೦ಟಿಕೊ೦ಡಿರುವ ಕುರುಡುನ೦ಬಿಕೆಗಳ೦ತೆ, ಖಗೋಳವಿಜ್ನಾನಕ್ಕೆ ಅ೦ಟಿಕೊ೦ಡಿರುವ ಈ ಜ್ಯೋತಿಷ್ಯವೆ೦ಬುದು ಕೂಡ ಹಾಗೆ - ಜಾಣ ತಾಯಿಯ ಹುಚ್ಚು ಮಗಳು ) - ಹೀಗ೦ತ ಒಬ್ಬ ತತ್ವಜ್ಞಾನಿ ಹೇಳಿದ್ದಾರೆ. ಇದು ಸರಿಯೋ, ತಪ್ಪೋ ವಾದಿಸುವ ಇಚ್ಚೆ ನನಗಿಲ್ಲ. ಇಲ್ಲಿ ನನ್ನ ಮುಂದಿರುವ ಪ್ರಶ್ನೆ ಜ್ಯೋತಿಷ್ಯ ಶಾಸ್ತ್ರವೆ೦ಬ ಅಸ್ತ್ರವನ್ನು ಇಟ್ಟುಕೊ೦ಡು ತಮ್ಮ ಮನಸ್ಸಿಗೆ ತೋಚಿದ೦ತೆ ಇಲ್ಲಸಲ್ಲದ ಹೇಳಿಕೆಗಳನ್ನು ಕೊಟ್ಟು ಜನರನ್ನು ತಪ್ಪುದಾರಿಗೆಳೆಯುವ ಜನರನ್ನು ಕ೦ಡಾಗ ಮೈಯೆಲ್ಲಾ ಉರಿಯುತ್ತದೆ. ಇ೦ಥವರಿ೦ದ ಜ್ಯೋತಿಷ್ಯಕ್ಕೆ ಇದ್ದಿರಬಹುದಾದ ಅಲ್ಪ ಮೌಲ್ಯ ಕುಸಿಯುತ್ತಿದೆ, ಅದನ್ನು ಬುದ್ಧಿಜೀವಿಗಳು ಮತ್ತು ಪ್ರಗತಿಪರ ಚಿಂತಕರು ಹೀಗಳೆಯುವ ಪರಿಸ್ಥಿತಿ ಬಂದಿದೆ.

Nature may be as selfishly studied as trade. Astronomy to the selfish becomes astrology; and anatomy and physiology become phrenology and palmistry - ಹೀಗ೦ತ ರಾಲ್ಪ್ ಎಮರ್ಸನ್ ಹೇಳಿದ ಮಾತುಗಳು ಇ೦ದು ಸಕಾಲಿಕವೆನಿಸುತ್ತಿವೆ.

ಮೊನ್ನೆ ಸಂಡೆ ಟೈಮ್ಸ್ - ಕನ್ನಡ ಓದುತ್ತಾ ಇದ್ದಾಗ ಇದೆಲ್ಲ ನೆನಪಿಗೆ ಬಂತು, ಹಾಗು ನಿಮಗೆ ಹೇಳಬೇಕೆನಿಸಿತು.


Friday, October 16, 2009

ಒಬಾಮ, ಶಾಂತಿ ಮತ್ತು ಮಲ್ಯ

ಅಂತು ಇಂತೂ ನಮ್ಮ ದೊಡ್ದಣ್ಣಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಕ್ಕಿದೆ, ವಿಶ್ವದ ಎಲ್ಲ ಉಗ್ರರನ್ನು ಮಟ್ಟ ಹಾಕಲು ಗುತ್ತಿಗೆ ಪಡೆದಿರುವ ಒಬಾಮಾಗೆ ಇ ಪ್ರಶಸ್ತಿಯು ಅತ್ಯಂತ ಸೂಕ್ತ ಎಂದು ಹಲವಾರು ಜನ ಅಭಿಪ್ರಾಯಿಸಿದ್ದಾರೆ.

ಇಂದು ಇ ಪ್ರಪಂಚ ಇಷ್ಟೆಲ್ಲಾ ಶಾಂತಿ, ನೆಮ್ಮದಿ ಮತ್ತು ಕುಶಿ ಇಂದ ಇರಲು ಅಮೆರಿಕ ಮತ್ತು ಅಮೇರಿಕಾವೇ ಕಾರಣವಾಗಿದೆ ಎಂದರೂ ತಪ್ಪಾಗಾಲಾರದು. ಅದರೂ ಅವರಿಗಿಂತ ಹೆಚ್ಚು ಶಾಂತಿ ಪ್ರಿಯ ಜನನಾಯಕರು ನಮ್ಮ ಸುತ್ತಮುತ್ತಲ ಇದ್ದರೂ ನಾವು ಅವರನ್ನು ಗುರುತಿಸದೆ ಇರುವುದು ಅತ್ಯಂತ ದೌರ್ಭಾಗ್ಯ. ಅ ಪ್ರಶಸ್ತಿಗೆ ಒಬಾಮಾನಷ್ಟೇ ಸೂಕ್ತವಾದ ವ್ಯಕ್ತಿಗಳ ಪಟ್ಟಿ ಇ ಕೆಳಕಂಡಂತೆ ತಯಾರಿಸಿರುವೆ.

ಇವರು ಕೇವಲ ೧೦ ತಿಂಗಳು ಪ್ರಧಾನಿ ಆಗಿದ್ದರು, ಜನಸೇವೆಗೆ ತಮ್ಮ ಇಡೀ ಕುಟುಂಬವನ್ನೇ ಮುಡುಪು ಇಟ್ಟಿರುವರು. ಕೋಮುವಾದಿಗಳಿಗೆ ಅಧಿಕಾರ ಕೊಟ್ಟು ಜನ ಗಲಭೆಗಳಲ್ಲಿ ತೊಡಗಿ ಸಾಯುವುದನ್ನು ತಪ್ಪಿಸಲು ಶತ್ರುವಿನೊಡನೆ ಮೈತ್ರಿ ಮಾಡಿಕೊಂಡರು, ನಂತರ ಮುಖ್ಯ ಮಂತ್ರಿ ಎಂಬ ಕೆಟ್ಟ ಖಾತೆಗೆ ಮಗನನ್ನು ಕೂಡಿಸಿ ಜನಕ್ಕೆ ಹರುಷವನ್ನು ಉಂಟುಮಾಡಿದರು. ರಾಜ್ಯದ ೫ ಕೋಟಿ ಜನರ ಸುಖ, ಶಾಂತಿಗಾಗಿ ಹಲವಾರು ಜನರಿಗೆ ರಾಜಕೀಯ ಸನ್ಯಾಸ ದೀಕ್ಷೆ ನೀಡಿ, ಎಲ್ಲ ಕಷ್ಟಗಳನ್ನು ತಮ್ಮ ಹೆಗಲ ಮೇಲೆ ಹೊತ್ತು ನಡೆಯುತ್ತಿರುವರು, ಸಭೆ, ಸಮಾರಂಬ, ಸಂಸತ್ತು ಮುಂತಾದೆಡೆ ಧ್ಯಾನವಸ್ತೆಯಲ್ಲಿ ದೇಶದ ಬಗ್ಗೆ ಚಿಂತಿಸುವ ಇವರು ಯಾವ ಶಾಂತಿ ಧೂತನಿಗು ಕಡಿಮೆ ಇಲ್ಲವೆಂಬುದು ನಮ್ಮ ಅನಿಸಿಕೆ.

ಮಹಾನುಭಾವರು ಜನಹಿತಕ್ಕಾಗಿ, ಸ್ವ ಹಿತವನ್ನು ಬಳಿ ಕೊಟ್ಟಿರುವುದನ್ನು ನಾವು ಇತಿಹಾಸದಲ್ಲಿ ಕಾಣಬಹುದು. ಆದರೆ ವರ್ತಮಾನದಲ್ಲಿ ಅ ಕೆಲಸವನ್ನು ಮಾಡಿರುವುದು ನಮ್ಮ ಯಡ್ಡಿ ಮತ್ತು ರೆಡ್ಡಿ ಗಳು, ಜನಕ್ಕೆ ಸ್ಥಿರ ಸರ್ಕಾರವನ್ನು ನೀಡಲು ಪಕ್ಷದ ಹಿತವನ್ನು ಕಡೆಗಣಿಸಿದರು, ಗಡಿಗಳನ್ನು ಮಾರಟಕ್ಕೆ ಇಟ್ಟರು. ಆಪರೇಷನ್ ಕಮಲ ಮಾಡಿ ರುವ ಇರನ್ನು ನಾವು ಮರೆಯುವ ಹಾಗೆಯೇ ಇಲ್ಲ. ನೊಬೆಲ್ ಸಂಘಟನೆಯು ಇವರ ಸಾಧನೆಯನ್ನು ಗಮನಿಸಿ ಶಾಂತಿ ಪ್ರಶಸ್ತಿಯನ್ನು ಮುಂದಿನ ದಿನಗಳಲ್ಲಿ ನೀಡಬಹುದು ಎಂದು ನಾವು ಆಶಿಸುತ್ತೇವೆ.

"ಮುಂದೆ ಬಂದರೆ ಹಾಯಬೇಡಿ, ಹಿಂದೆ ಬಂದರೆ ಓದೆಯ ಬೇಡಿ" ಎನ್ನುವ ಇವರು ಥೇಟ್ ಕಾಮಧೇನು ಇದ್ದ ಹಾಗೆ, ಇಪ್ಪತ್ತು ತಿಂಗಳು ಮುಖ್ಯಮಂತ್ರಿ ಆಗಿ ಇದ್ದರು, ದೇವೇ ಗೌಡ ಎಂಬ ಪತ್ರಕರ್ತ ( ಸರ್ಕಾರಕ್ಕೆ ಒಂದರ ಮೇಲೆ ಒಂದು ಪತ್ರ ಬರೀತಾ ಇದ್ರಲ್ಲ ಅದಕ್ಕೆ ಹಾಗೆ ಹೇಳಿದ್ದು) ಕಾಟವನ್ನು ತಡೆದುಕೊಂಡು ಸೂಜಿಯ ಮೊನೆಯ ಮೇಲೆ ಅಷ್ಟು ಕಾಲ ಕೂತಿದ್ದು ಮಹಾನ್ ಸಾಧನೆಯೇ ಸರಿ!! ನಮ್ಮ ದರ್ಮ ಸಿಂಗರಿಗೊಂದು ಜೈ ಇರಲಿ.

ಮನಮೋಹನ ಸಿಂಗರು ನಮ್ಮ ಧರ್ಮು ದೊಡ್ಡಣ್ಣ ಇದ್ದಂಗೆ, ಮೇಡಂ ಮುಂದೆ ಕೈ ಕಟ್ಟಿ, ಚಿಕ್ಕ ಸಾಹೇಬರಿಗೆ ಸೀಟು ಕಾದಿರಿಸಿ, ಚೀನಾಕ್ಕೆ ನಮಸ್ಕರಿಸಿ, ಪಾಕಿಸ್ತಾನದ ಉಗ್ರರ ಬಗ್ಗೆ ಅನುಕಂಪ ಹೊಂದಿರುವ ಇವರು ಅನೇಕ ಯುದ್ದ ಗಳನ್ನು ಕೆಲವೇ ಕೆಲವು ಜನರ ಬಲಿಯೊಂದಿಗೆ ನಿಲ್ಲಿಸಿದ್ದಾರೆ. ಮುಂಬೈ ಧಾಳಿಯ ನಂತರ ಪಾಕಿಗೆ ದೊಡ್ದಗೊಂದು ಸಂದೇಶ ತಲುಪಿಸಲು ವಿಫಲವಾಗಿರುವ ಇವರು ನಮ್ಮ ಕಾಲದ ಶಾಂತಿ ಪ್ರಿಯ ರಾಜಕಾರಣಿಯೇ ಸರಿ!!

ಇ ಕಲಿಯುಗದಲ್ಲಿ ಜನರ ಸಮಾಜಿಕ ಸ್ಥಿತಿಗತಿಗಳನ್ನು ಕಾಯಲು, ತೆತ್ರಾಯುಗದ ರಾಮನ ಪರಮ ಭಕ್ತರಾದ ಮತಾಲಿಕರು ಕೆಲವೇ ಕೆಲವು ಹೆಂಗಳೆಯರಿಗೆ ಒದೆ ಕೊಡುವ ಮೂಲಕ ಶಾಂತಿಯುತ ಚಳುವಳಿಯನ್ನು ಆರಂಬಿಸಿದ್ದಾರೆ. ಅವರೂ ಕೂಡ ಅ ಪ್ರಶಸ್ತಿಗೆ ಅರ್ಹರು. ಇಷ್ಟೇ ಅಲ್ಲದೆ ಮಚ್ಚು ಕತ್ತಿ ಉಪಯೋಗಿಸುವುದರಿಂದ ರಕ್ತ ಬರುತ್ತದೆ, ಎಂಬಂತಾ ಸಂದೇಶ ಹೊತ್ತ ಸಿನಿಮಾಗಳನ್ನು ಇಡೀ ಚಿತ್ರರಂಗ ಮಾಡುತ್ತಾ ಇದೆ. ಇವರಿಗೆ ನೊಬೆಲ್ ಶಾಂತಿ ಪುರಸ್ಕಾರ ಕೊಡಲು ಸಾಧ್ಯವಾಗದೆ ಇದ್ದಲ್ಲಿ ಶಾಂತಿ ಆಸ್ಕರ್ ಕೊಡಬೇಕಿದೆ.

ಇರಲಿ ನನ್ನೆಲ್ಲ ತಲೆಹರಟೆ ಬರಹ (ಬರಹ!! ???) ಗಳನ್ನು ಅತ್ಯಂತ ಕಷ್ಟಪಟ್ಟು ಓದುವ ನಿಮಗಳಿಗೆ, ನಿಮ್ಮ ಶಾಂತಿ, ಸಹನೆಗೆ ಒಂದು ಸಲಾಮು. ನಾನೇನಾದ್ರು ಅ ಆಯ್ಕೆ ಸಮಿತಿಯಲ್ಲಿ ಇದ್ದಲ್ಲಿ ನಿಮ್ಮಗಳ ಹೆಸರನ್ನು ರೆಕಮಂಡ್ ಮಾಡುತ್ತಿದ್ದೆ.

ಇ ಸಂಚಿಕೆಯ ಎಲ್ಲಾ ಪ್ರಾಯೋಜಕರು ಮಲ್ಯ ಬ್ರಾಂಡ್ಸ್!! ಹೊಟ್ಟೆಯಲ್ಲಿ ನಮ್ಮ ಪಾನೀಯ ಇದ್ದರೆ, ಲೋಕಕ್ಕೆ ನೀವೇ ಕಿಂಗು, ಗಾಂದಿ ತಾತನ ಕನ್ನಡಕ ತಂದಿರುವ ನಾವುಗಳು ನಿಮಗಳಿಗೆ ನೆಮ್ಮದಿಯ ಜೀವನ ಕೋರುವೆ. - ಶ್ರೀ ಮಲ್ಯ.

Friday, September 18, 2009

ಕುಡುಕರು ಮತ್ತು ಕು.ರ.ವೇ


ಕಳೆದ ವಾರ ಕಛೆರಿ ಕೆಲ್ಸ ಮುಗಿಸಿ ಕೊ೦ಡು ಮನೆ ಕಡೆ ಹೊಗ್ತಾ ಇದ್ದೆ, ಮನೆ ಸಮೀಪನೆ ನೆ ಜನರೆಲ್ಲ ಗು೦ಪು ಗೂಡಿದ್ದರು, ಎನೆನೋ ಗುಸು ಗುಸು, ಕೆಲವರು ಗಾಬರಿಯಲ್ಲಿ, ಇನ್ನು ಕೆಲವರು ಮನೆ ಟೆರೇಸ್ ನಿ೦ದ ನೋಡ್ತಾ ಇದ್ದರು. ಒನ್ದು ಜೋರಾಗಿ ಹೆಣ್ಣು ದ್ವನಿ ಕೇಳುತ್ತಾ ಇತ್ತು, ಮದ್ಯೆ ಮದ್ಯೆ ಅಳು ಬೇರೆ, ಒಹ್ ಯಾವುದೊ ವರದಕ್ಷಿಣೆ ಗಲಾಟೆ ಇರಬೆಕೆ೦ದು ನೋಡಿದರೆ ಹೆ೦ಡತಿ ಕೈಯಲ್ಲಿ ಪೊರಕೆ ಹಿಡಿದು ನಿ೦ತಿದ್ದರೆ, ಗ೦ಡ ದೂರದಲ್ಲಿ ನಿ೦ತಿದ್ದ. "ದಿನಾ ಕುಡಿದು ಬರುತ್ತಿಯ? ಎಷ್ಟು ಸಲ ಹೆಳೊದು ನಿ೦ಗೆ?" ಅ೦ತ ಹೇಳಿ ಸಾರ್ವಜನಿಕವಾಗಿಯೆ ತದುಕುತ್ತಾ ಇದ್ದಳು!! ಆತ ಹೆ೦ಡತಿಯ ಕೈಯಿ೦ದ ಪೆಟ್ಟು ತಿ೦ದು ಇ೦ಗು ತಿ೦ದ ಮ೦ಗನ ತರ ಆಗಿದ್ದ!!

ಪಾಪ ಒ೦ದು ಬಾಟಲು ಕುಡಿದರೆ ಇಷ್ಟೆಲ್ಲಾ ಕಷ್ಟ ಪಡಬೇಕ? ಅದಕ್ಕಾಗಿ ಸಮಾಜದಿ೦ದ ತಿರಸ್ಕಾರ ಗೊಳಗಾಗ ಬೇಕ?

ನಂಗೆ ಅನ್ನಿಸುತ್ತೆ ಕುಡುಕರ ಬಗ್ಗೆ ಈ ಸಮಾಜಕ್ಕೆ ಒಳ್ಳೆಯ ಭಾವನೆಯೇ ಇಲ್ಲ, ಅವರನ್ನು ಮನುಷ್ಯರಂತೆ ನೋಡೋದೇ ಕಡಿಮೆ! ಕುಡುಕನ ಹೆ೦ಡತಿ ಅ೦ದರೆ ಹೊಟ್ಟೆಗೆ ಇಲ್ಲದವಳು, ದಿನಾ ಗ೦ಡನ ಕೈಲಿ ಪೆಟ್ಟು ತಿನ್ನುವವಳು, ಅವನು ಮಕ್ಕಳಿಗೆ ಮದುವೆ ಮಾಡುವುದೇ ಇಲ್ಲ, ಇನ್ನು ಮು೦ತಾದುವು ಎಲ್ಲರ ಅಭಿಪ್ರಾಯ! ಅವನು ಎಷ್ಟೇ ಒಳ್ಳೆ ಮಾತು ಹೇಳಿದ್ದರು ಅದು ಗಣನೆಗೆ ಬರೋಲ್ಲ. ಭಾಗಷ್ಯ ಇಂತಹ ಸಮಸ್ಯೆಯನ್ನು ಹೋಗಲಾಡಿಸಲಿಕ್ಕೆ ಕುಡುಕರೆಲ್ಲ ಸೇರಿ ಚಳುವಳಿ ಮಾಡಬೇಕೇನೋ, ಎಂ ಜಿ ರಸ್ತೆ ಲಿ, ಗಾಂಧಿ ಪ್ರತಿಮೆ ಬಳಿ ಸಮಾನ ಹಕ್ಕಿಗಾಗಿ ಹೋರಾಟ ನಡೆಸಬೇಕಾದ ಜರೂರತ್ತು ಇದೆ.

ನನ್ನ ಮಟ್ಟಿಗೆ ಹೇಳೋದಾದ್ರೆ ಕುಡುಕರೇ ನಿಜವಾದ ದೇಶಪ್ರೇಮಿಗಳು, ಹಾಗು ಮಾನವತಾ ವಾದಿಗಳು. ಕುಡಿಯುವುದರಿ೦ದ ಆಗುವ ಲಾಭ, ಅದರ ಸತ್ಪರಿಣಾಮಗಳು ಎಲ್ಲಾ ಇದೆ. ಹೆಗಂತಿರೋ... ಮುಂದೆ ಓದಿ

1. ಒಬ್ಬ ನೂರು ರುಪಾಯಿಯ ಹೆಂಡ ಕುಡಿದ ಅಂದ್ರೆ ದೇಶದ ಬೊಕ್ಕಸಕ್ಕೆ ನೂರು ರೂಪಾಯಿ ಬಂತು ಅಂತ ಅರ್ಥ!! ಇ ದೇಶಕ್ಕೆ, ದೇಶದ ಉದ್ಯಮಿಗಳಿಗೆ ಕುಡುಕರಿಂದ ಎಷ್ಟೆಲ್ಲ ಪ್ರಯೋಜನ ಇದೆ. ಕುಡುಕರೇ ಇಲ್ಲದಿದ್ದರೆ ಮಲ್ಯ ಇರುತ್ತಿದ್ದನ? (ಅವನ ಕ್ಯಾಲೆಂಡರ್ ಇರುತ್ತಿತ್ತಾ? ) ದೇಶದ ಗಡಿ ಯನ್ನ ಸೈನಿಕರು ಕಾಯುತ್ತಾ ಇದ್ದರೆ, ಕುಡುಕರು ತಮ್ಮ ಜೇಬಿನಿಂದ ದೇಶದ ಅರ್ಥ ವ್ಯವಸ್ಥೆಯನ್ನು ಬಲಪಡಿಸುತ್ತಾ ಇದ್ದಾರೆ. ಈಗ ನೀವೇ ಹೇಳಿ ಯಾರು ನಿಜವಾದ ದೇಶ ಪ್ರೇಮಿಗಳು?

2. ಇಂದು ಮಾರುಕಟ್ಟೆಯಲ್ಲಿ ಲಬ್ಯವಿರುವ ಬಹು ಪಾಲು ಮಧ್ಯ ಗಳು ಸಸ್ಯಾಹಾರಿ ವಸ್ತುಗಳಿಂದ ತಯಾರಾಗಿದೆ. ಆದ್ದರಿಂದ ಪೀಟ ಸಂಘಟನೆಯು ಬೆತ್ತಲೆ ಹುಡುಗಿರನ್ನು ಬಿಟ್ಟು ಕಂಠ ಪೂರ ಕುಡಿದವರನ್ನು ರೂಪದರ್ಶಿಗಲಾಗಿ ನೆಮಿಸಿಕೊಳ್ಳ ಬೇಕಿದೆ!!

3. ಕುಡಿದವರು ಸಾಮಾನ್ಯವಾಗಿ ಪ್ರಾಮಾಣಿಕವಾಗಿ ನಡೆದುಕೊತಾರೆ, ಹಾಗು ಬಹಳಷ್ಟು ಸಮಯದಲ್ಲಿ ಸತ್ಯವನ್ನೇ ಹೇಳುತ್ತಾರೆ. ಆದರೆ ಕುಡಿದು ಊಟ ಮಾಡುವಾಗ ಅಡುಗೆ ಚೆನ್ನಾಗಿಲ್ಲ ಅಂದರೆ, ಅವನು ಕುಡಿದು ಮನೆಗೆ ಬಂದು ಗಲಾಟೆ ಮಾಡುವ ಪತಿರಾಯ ಆಗಿ ಬಿಡುತ್ತಾನೆ.!!

4. ಕುಡಿಯುವುದರಿ೦ದ ನೆನಪಿನ ಶಕ್ತಿ ಕಡಿಮೆ ಆಗುತ್ತದೆ ಇದರಿಂದಲೇ ದಿನ ಬೆಳಿಗ್ಗೆ ಅದೇ ಹೆ೦ಡತಿ ಯ ಮುಖ ನೊಡಲು ಸಾದ್ಯವಾಗುತ್ತಾ ಇರುವುದು!!

5. ಜನಸ೦ಖ್ಯೆ ಕಡಿಮೆ ಮಾಡಲು ಸರ್ಕಾರಗಳು ಎಷ್ಟೆಲ್ಲಾ ಬ೦ಬಡ ಹೊಡೆದುಕೊ೦ಡರು ಎನೂ ಸಾದ್ಯ ಆಗ್ತ ಇಲ್ಲ. ನಮ್ಮ ಕುಡುಕರು, ಕುಡಿದು ವಾಹನ ಚಲಾಯಿಸಿ, ದೇಶಕ್ಕೆ ತಮ್ಮ ಕೈಲಾದ ಸಹಾಯ ಮಾಡುತ್ತಾ ಇದ್ದಾರೆ!!

6. ಜೀವನವನ್ನು ಸುಖ ಮತ್ತು ಕುಶಿಯಿ೦ದ ಕಳೆಯಲು ಹಲವು ಮಾರ್ಗಗಳು ಇವೆ, ಆದರೆ ಅವುಗಳಲ್ಲಿ ಬಹುಪಾಲು ಸಿಕ್ಕಪಟ್ಟೆ ದುಭಾರಿ. ಉದಾ: ಡ್ರಗ್ಸ್, ಮತ್ತೆ ಗರ್ಲ್ ಫೆ೦ಡ್!! ಇದನ್ನ ಗಮನಿಸಿದಾಗ ಕುಡಿತವೊ೦ದೆ ಸುಲಭ ಮಾರ್ಗ!!

7. ಹಕ್ಕಿತರ ಹಾರಬೇಕು ಅ೦ತ ಎಲ್ಲರಿಗೂ ಆಸೆ ಇರುತ್ತದೆ, ಆದರೆ ಎಲ್ಲರಿಗು ಎಲ್ಲಿ ಸಾದ್ಯ? ಒಮ್ಮೆ ವಿಮಾನ ಹತ್ತಿ ಬ೦ದರೆ ಜೇಬು ಹಗುರ ಆಗಿ ಬಿಡುತ್ತದೆ, ಹಾಗಾಗಿ ಹಕ್ಕಿ ತರ ಹಾರಬೇಕು ಅ೦ತ ಅನ್ನಿಸಿದಲ್ಲಿ, ಒಂದು 90 ಹೊಡಿಬೇಕು!!! ಅಕಾಶದಲ್ಲಿ ತೇಲಿದ ಹಾಗೆ ಆಗುತ್ತದೆ.!!!


ಈಗ ನೀವೆ ಹೇಳಿ ಆತ ಕುಡಿತಾನೆ ಅ೦ದ ಮಾತ್ರಕ್ಕೆ ಅವನು ಕೆಟ್ಟವನ?



ಚುನಾವಣಾ ಸಮಯದಲ್ಲಿ ಮಾತ್ರ ಕುಡುಕರ ಬಗ್ಗೆ ಚಿಂತಿಸುವ ರಾಜಕೀಯ ಪಕ್ಷಗಳು, ಚುನಾವಣಾ ನಂತರವೂ ಅವರಿಗೆ ಸುಲಭವಾಗಿ ಕುಡಿಯುವಂತೆ ಆಗಲು ಸಾಕಷ್ಟು ಕೆಲಸಗಳನ್ನು ಮಾಡಬೇಕಿದೆ. ಚುನಾವಣೆಯಲ್ಲಿ ಹೆಂಡ ಹಂಚೋಕೆ ಅಂತಲೇ ಒಬ್ಬ ಮಂತ್ರಿಯನ್ನು ಮಾಡಿದರೆ ಚೆನ್ನಾಗಿರುವುದು. ಮಹಿಳೆ ಮತ್ತು ಮದಿರೆ ಇಷ್ಟ ಅಂತ ಹೇಳಿಕೆ ಕೊಟ್ಟಿದ್ದ ದಿವಂಗತ ಪಟೇಲರನ್ನ ಇದಕ್ಕೆ ಪ್ರೇರಣೆ ಅಂತ ಕೊಚ್ಚಿಕೊಳ್ಳಬಹುದು.


ಕುಡುಕರ ರಕ್ಷಣೆಗೆ ಕುರವೇ ಸ್ಥಾಪನೆ ಮಾಡಬೇಕು. (ಕುಡುಕರ ರಕ್ಷಣಾ ವೇದಿಕೆ) ಹಾಗೂ ಅದರ ಸದಸ್ಯರಿಗೆ ಸಬ್ಸಿಡಿ ದರದಲ್ಲಿ ಮದ್ಯ ದೊರೆಯುವಂತೆ ಮಾಡಬೇಕು.

ಇವುಗಳು ನನ್ನ ಹಾಗೂ ಸಮಸ್ತ ಕುಡುಕರ ಆಲೋಚನೆ, ಅನಿಸಿಕೆ ಮತ್ತು ಅಗತ್ಯ ಎಂದು ಕೊಟ್ಟೆ ಸಾರಾಯಿ ಮೇಲೆ ಪ್ರಮಾಣಿಸಲಾಗಿದೆ.


ಸೂಚನೆ: ಸ್ತ್ರೀವ್ಯಾದಿಗಳು ಯಾರೂ ನನ್ನ ಮೇಲೆ ದ೦ಡೆತ್ತಿ ಬರಬಾರದಾಗಿ ವಿನ೦ತಿ!! (ಬೆ೦ಗಳೂರ೦ತ ಊರಲ್ಲಿ ಹುಡುಗ ಇರಲಿ, ಹುಡುಗಿ ಕುಡಿಯೊದು ಕೂಡ ಸರ್ವೆ ಸಾಮನ್ಯ, ಆದರೆ ಈ ಅದೃಷ್ಟ ಬೇರೆ ಊರುಗಳ ಜನಕ್ಕೆ ಇಲ್ಲವಲ್ಲ...) ಕುರವೆ ಸಂಘಟನೆಯ ಅಗತ್ಯದ ಬಗ್ಗೆ ಒತ್ತಿ ಒತ್ತಿ ಹೇಳಿದವರು ಶ್ರೀಯುತ ಪರಾ೦ಜಪೆ ಮತ್ತು ರಾಣಿ ಅವರು. ಅವರು ನಾ ಗೌ ತರಹ ಮಿಂಚಬೇಕು ಅಂತ ಇದ್ದಾರೋ ಗೊತ್ತಿಲ್ಲ.

Monday, August 31, 2009

ಧೃತರಾಷ್ಟ್ರ ವೃತ್ತಾ೦ತ ಮತ್ತು ಬ್ಲಾಗು!!



ಕಳೆದೊ೦ದು ವಾರದಿ೦ದ ರಾಜ್ಯದೆಲ್ಲೆಡೆ ಮಣ್ಣು, ಕೆಸರಿನ ಮಕ್ಕಳದ್ದೆ ವಿಚಾರ. ಚುನಾವಣೆ ಯಲ್ಲಿ ಕಮಲ 2 ಗೆದ್ದರೆ, ಜಾತಿವಾದಿ ದಳ 2 ಗೆದ್ದಿದೆ, ಮತ್ತೊ೦ದೆಡೆ ಮಾಡರ್ನ್ ಕುಬೇರ ಗೆದ್ದಿದ್ದಾನೆ. ಇರ್ಲಿ ಬಿಡಿ, ನ೦ಗೆ ಇವುಯಾವುದು ಪ್ರಮುಖ ವಿಷಯಗಳಾಗೆ ಇಲ್ಲ. ನನ್ನನ್ನು ಚಿ೦ತೆಗೆ ಈಡು ಮಾಡಿರುವುದು ಮತ್ತೋ೦ದು ಆಘಾತಕಾರಿಯಾದ ಸುದ್ದಿಯೆ೦ದರೆ "ಹೆದರಿಕೆ/ಭಯ/ಫೊಬಿಯ" ವಿಚಾರ!! ಪೋಲಿಸರಿಗೆ ಕಳ್ಳರ ಭಯ, ಹೈ ಕೋರ್ಟ್ ನಲ್ಲಿ ಇರೋರಿಗೆ ಮೊಹಿನಿ ಭಯ, ಪಾದಚಾರಿಗಳಿಗೆ ವಾಹನಗಳ ಭಯ, ಕೆಲವು ಬ್ಲಾಗಿಗರಿಗೆ ಕಾಮೆ೦ಟ್ ಭಯ, ಜನಕ್ಕೆ ಹ೦ದಿ ಜ್ವರದ ಭಯ, ಆದ್ರೆ ರಾಜಕಾರಣಿಗಳಿಗೆ ಮಾತ್ರ ಗೌಡರ ಭಯ.


ನಮ್ಮ ಗೌಡರು ಜೀವನ ಚರಿತ್ರಿಯೊ, ಅತ್ಮಕತೆಯೊ ಎನೊ ಬರೀತ ಇರೊದು, ಅದೂ 5 ಸ೦ಪುಟಗಳಲ್ಲಿ!!!

ಈ ವರ್ತಮಾನವು ಗೌಡರ ಬಾಯಿ೦ದ ಹಾದು, ದತ್ತನ ಶ೦ಖದಿ೦ದ ಖಚಿತವಾಗಿ, ಕನ್ನಡದ ಸಮಸ್ತ ಸುದ್ದಿ ಮಾದ್ಯಮಗಳ ಮೂಲಕ ಭೂಮ೦ಡಲವೆಲ್ಲಾ ವ್ಯಾಪಿಸಿದೆ. ಇ ಸುದ್ದಿಯು "ವೊಟ್ ಕೊಡದಿದ್ದರೆ ವಿಷ ಕುಡಿತೀನಿ" ಅ೦ತ ಬೆದರಿಕೆ ಹಾಕಿದ್ದ ಕುಮಾರಣ್ಣ, ಆಪ್ತ ಸಖಿ ರಾಧಿಕೆ, ಮಣ್ಣಿನ ಮೊಮ್ಮಗ ರೇವು ಅವರುಗಳನ್ನು ಅಶ್ಚರ್ಯಚಿಕಿತರನ್ನಾಗಿ ಮಾಡಿದೆ. ಅಷ್ಟೇ ಅಲ್ಲ, ಮತ್ತೊಬ್ಬ ಮಣ್ಣಿನ ಮಗ ಬಳ್ಳಾರಿ ತೆಲುಗು ಧಣಿ ರೆಡ್ಡಿಯನ್ನು, ಕ್ಲಿನಿಕ್ ಪ್ಲಸ್ ಶಾ೦ಪು ಬ್ರಾ೦ಡ್ ಅ೦ಬಾಸಡರ್ ನೈಸ್ ಖೆಣಿ, ಮು೦ತಾದವರಿಗೆ ವಿಚಿತ್ರವೇದನೆಯನ್ನು ತರುತ್ತಾ ಇದೆ ಅ೦ತೆ. ಇವರುಗಳು ಎನು ಬೇಕಾದರು ಮಾಡಿಕೊ೦ಡು ಹಾಳಗಲಿ ಎ೦ದು ಸುಮ್ಮನಿರುವ ಹಾಗೆ ಇಲ್ಲ, ಯಾಕೆ೦ದರೆ ಇದು ನೇರವಾಗಿ ನನಗೆ ಸಮಸ್ಯೆಯನ್ನು ಶ್ರುಷ್ಟಿ ಮಾಡುತ್ತಾಇದೆ. ಹೇಗ೦ತೀರೊ, ಮು೦ದೆ ಒದಿ.

ಆತ್ಮಕತೆಯ ವಿಚಾರ ಹೊರಬ೦ದ ನ೦ತರ ನನ್ನ ಮೊಬೈಲ್ ರಿ೦ಗುಣಿಸುತ್ತಲೇ ಇದೆ, ಅಕ್ಕಪಕ್ಕದವರು, ಸುದ್ದಿ ಮಾದ್ಯಮದವರು ನನ್ನ ಬೆನ್ನು ಬಿದ್ದಿದ್ದಾರೆ. ಗೌಡರೇ ಬರೀತಾರ೦ತೆ, ನಿವು ಯವಾಗ ಬರೆಯುವುದು ಅ೦ತ ಎಲ್ಲರ ಪ್ರಶ್ನೆ. ದೂರದ ಪೆ೦ಗ್ವಿನ್ ಪ್ರಕಾಶನ ದಿ೦ದ ಹಿಡಿದು, ನಮ್ಮ "ಬಾಗಿಲುತಳ್ಳಿ ಪ್ರಕಾಶ್" ತನಕ ಎಲ್ಲರಿಗೂ ನಾನು ಆತ್ಮ ಕತೆ ಬರೆದು ಕೊಡಬೇಕ೦ತೆ, ಅದೂ 10 ಸ೦ಪುಟಗಳಲ್ಲಿ!!

ಅಲ್ಲ ಅ ಪಕ್ಷದ ಶಿಸ್ತಿನ ಸಿಪಾಯಿಹಾಗೆ ದುಡಿದಿದ್ದು ಇ ಪರಿ ತೊ೦ದರೆ ಕೊಡುತ್ತೆ ಅ೦ತ ನಾನು ಕನಸು ಮನಸಿನಲ್ಲಿ ಅ೦ದು ಕೊ೦ಡಿರಲಿಲ್ಲ. ನಾನು ಎಷ್ಟೆ ಗುಣಾಕಾರ ಭಾಗಕಾರ ಹಾಕಿದರೂ, ಯಾವ ಮಾಟ, ಮ೦ತ್ರವಾದಿಯನ್ನು ಭೆಟಿ ಇತ್ತು ಬ೦ದರೂ ಬರೆಯುವ ಮನಸ್ಸು ಬರುತ್ತಾ ಇಲ್ಲ, ಅದಕ್ಕೆ ಕಾರಣಗಳು ಇ ಕೆಳಕ೦ಡತೆ ಇದೆ.

1. 5-10 ಸ೦ಪುಟಗಳಲ್ಲಿ ಬರೆಯುವಷ್ಟು ಪಾಪ ಕಾರ್ಯಗಳನ್ನು ನಾನು ಇನ್ನೂ ಮಾಡಿಲ್ಲ.

2. ಅವರಷ್ಟು ಸಭೆ, ಸಮಾರ೦ಭಗಳಲ್ಲಿ ನಿದ್ದೆ ಮಾಡಿಲ್ಲ!! ಇತ್ತೀಚೆಗೆ ರಾತ್ರೆ ಹೊತ್ತೇ ನಿದ್ದೆ ಬರ್ತಾ ಇಲ್ಲ, ಇನ್ನು ಹಗಲು ಎಲ್ಲಿ೦ದ ಬ೦ದೀತು?

3. ಜೀವಮಾನದಲ್ಲಿ ದೇವಸ್ಥಾನಗಳಿಗೇ ಹೊಗದ ನಾನು, ಇನ್ನು ಜಾತಿ ಹೆಸರು ಹೇಳಿಕೊ೦ಡು ಮಠ ಸ್ಥಾಪನೆ ಮಾಡಲು ಸಾದ್ಯವೆ?

4. ಜೀವನದ ಕಾಲು ಶತಮಾನದಲ್ಲಿ ಇನ್ನು ಒ೦ದು ಹುಡುಗಿಯು ಸಿಕ್ಕಿಲ್ಲ, ಕೈ ಕೊಡೋಣ ಎ೦ದರೆ.... ಇ೦ತಹ ಮನುಷ್ಯ ಬೆರೆಯವರಿಗೆ ಟೋಪಿ ಹಾಕಲು ಸಾದ್ಯವಿಲ್ಲ. ಜೊತೆಗಿವವರನ್ನು ಒದ್ದು ಮು೦ದೆ ಹೋಗೋಣ ಎ೦ದರೆ ಇಲ್ಲಿ ತನಕ ಜೀವನ್ದಲ್ಲಿ ಎಕಾ೦ಗಿ!!!

ಇನ್ನೂ ಮು೦ತಾದ ಕಾರಣಗಳಿ೦ದ ನಾನು ಅತ್ಮ ಚರಿತ್ರೆಯನ್ನು ಬರವಣಿಗೆಗೆ ತಡೆ ಹಾಕಿದ್ದೆನೆ. ನನಗೆ ತಿಳಿದಿದೆ, ಇ ಸುದ್ದಿಯು ನನ್ನ ಲಕ್ಷಾ೦ತರ ಟೈಮ್ ಪಾಸ್ ಕಾರ್ಯಕರ್ತರಿಗೆ ಭರಿಸಲಾಗದ ದುಖವನ್ನು ನೀಡುತ್ತದೆ ಎ೦ದು. ಸೀಡಿ ರೆಡ್ಡಿಗಳು ನನ್ನ ಮೇಲೆ ಇಟ್ಟಿದ್ದ ನ೦ಬಿಕೆಗೆ ನಾನು ಅಭಾರಿ, ಅವರಿಗೆ ಕಡೇ ಪಕ್ಷ ಒ೦ದು ಸೀಡಿ ಮಾಡಿ ಕೊಡಲು ಆಗದಿದ್ದಕ್ಕೆ ನನಗೆ ಬೇಜಾರಿದೆ, ಹಾಗು ಖೇಣಿ ಅವರು ನನ್ನ ಹೆಸರಲ್ಲಿ ಮಾಡಿದ್ದ ರಸ್ತೆಯನ್ನು ನಾನು ತಿರಸ್ಕರಿಸುತ್ತಾ ಇದ್ದೇನೆ. ಸಿದ್ರಮು, ಪ್ರಕಾಸು ಮು೦ತಾದ ಎಲ್ಲಾ ನನ್ನ ಶ್ರೇಯೋಭಿಲಾಷಿಗಳು ನನ್ನ ನಿರ್ದಾರದಿ೦ದ ದಿಗ್ಮೂಡರಾಗುವರೆ೦ದು ಬಲ್ಲೆ, ಆದರೂ .. ನಾನು ಬರೆಯಲಾರೆ.


ಹೋಗಲಿ ನಮ್ಮ ಗೌಡರದ್ದು ಒ೦ದು ಕಥೆ ಆದರೆ ಬ್ಲಾಗಿಗರದ್ದು ಮತ್ತೊ೦ದು ಕಥೆ (ಆದರೆ ಆ ಕಥೆ ಬ್ಲಾಗಿಗರನ್ನು ಬಿಟ್ಟು ಮತ್ಯಾವ ದಾಸಯ್ಯನಿಗು ಅರ್ಥವಾಗದು ಅನ್ನೊದು ವಿಜಯ ಕರ್ನಾಟಕ ಒದುಗರ ವ್ಯಥೆ!!) ಅವರಿಗೆಲ್ಲಾ ಯಾರ್ಯರೊ, ಇನ್ಯಾರದ್ದೋ ಹೆಸ್ರಲ್ಲಿ ಕಾಮೆ೦ಟ್ ಹಾಕ್ತಾ ಇದ್ದಾರ೦ತೆ. ಇನ್ನೂ ಕೆಲವರು ಗುಪ್ತ ನಾಮದಲ್ಲಿ ಮಗದೊಬ್ಬರ ಗುಪ್ತ ವಿಚಾರ ಬರೀತ ಇದ್ದಾರೆ ಅ೦ತೆ. ಇಷ್ಟವಾಗದ ಕಾಮೆ೦ಟ್ ಬ೦ದರೆ ದಯಾಮಯಿಗಳಾದ ಗೂಗಲ್ ನವರು ಕರುಣಿಸಿರುವ "ಕಾಮೆ೦ಟ್ ರಿಜೆಕ್ಟ್" ಅಪ್ಶನ್ ನ ಉಪಯೊಗಿಸಬಹುದು, ಸತ್ಯ ಹೆಳ್ತೀನಿ ಅ೦ತ ಹೆಳೋರಿಗೆ, ಅದರ ಪರಿಣಾಮಗಳನ್ನ ಎದುರಿಸಲು ದೈರ್ಯವಿಲ್ಲದೆ ಹೋದರೆ ಹೇಗೆ? ಕನ್ನಡಿಗರ ದೌರ್ಭಾಗ್ಯ ಅ೦ದರೆ ಗೌಡರು, ರೆಡ್ಡಿಗಳು, ಯೆಡ್ಯುರಪ್ಪ, ಅನ೦ತು.... ಮತ್ತು ಪಟಾಲ೦, ಬ್ಲಾಗ್ ಮಾಡದೆ ಇರುವುದು. ಅವರೇನಾದರು ಬರೀತಾ ಇದ್ದಿದ್ದರೆ, ಕಾಮೆ೦ಟ್ ಗಳಿಗೆ, ಇನ್ನಿತರ ಅನಾಮಧೆಯ ಬ್ಲಾಗಿಗೆ ಹೆದರಿ ಸನ್ಯಾಸ ಸ್ವೀಕರಿಸುತ್ತ ಇದ್ದರೊ ಎನೊ!!!

ಕಾಮೆ೦ಟುಗಳ "ಗುಮ್ಮ" ಕ್ಕೆ ಹೆದರಿ ಬ್ಲಾಗು ಮುಚ್ಚಿರುವ ಅಥವಾ ಮುಚ್ಚುವ ತೀರ್ಮಾನ ತೆಗೆದುಕೊ೦ದಿರುವ ಬ್ಲಾಗಿಗರ ಬಗ್ಗೆ ಅಯ್ಯೋ ಅನಿಸುತ್ತದೆ. ಎಲ್ಲರೂ ಒ೦ದೇ ರೀತಿಯ ದೃಷ್ಟಿಕೋನ ಹೊ೦ದಿರುವುದಿಲ್ಲ, ಈ ಜಗದಲ್ಲಿ, ಒಳ್ಳ್ರೆಯವರು, ಕೆಟ್ಟವರು, ಕಾಲೆಳೆಯುವವರು, ಕೈಕೊಡುವವರು, ಕಳ್ಳರು, ಸುಳ್ಳರು, ಸುಭಗರು ಎಲ್ಲರೂ ಇದ್ದಾರೆ, ಈ ಬ್ಲಾಗೆ೦ಬ ಸಾರ್ವಜನಿಕ ವೀಕ್ಷಣೆಗೆ ಮುಕ್ತ ಅವಕಾಶ ಇರುವ ಮಾಧ್ಯಮದಲ್ಲಿ ತನ್ನ ಬರಹಕ್ಕೆ ಯಾವ್ಯಾವ ತರಹದ ಪ್ರತಿಕ್ರಿಯೆ ಬರಬಹುದು, ಅಥವಾ ಬರಬೇಕು ಎ೦ಬ ನಿರ್ದಿಷ್ಟ ನಿರೀಕ್ಷೆ ಇಟ್ಟುಕೊಳ್ಳಲಾಗದು. ಹಾಗೊ೦ದು ವೇಳೆ ಅ೦ತಹ ಏಕಮುಖ ಪ್ರತಿಕ್ರಿಯೆ ಬೇಕೆ೦ದಿದ್ದಲ್ಲಿ, ಸಾರ್ವಜನಿಕ ಮಾಧ್ಯಮದಲ್ಲಿ ಅ೦ದರೆ ಬ್ಲಾಗಿನಲ್ಲಿ ಬರೆಯಲೇ ಬಾರದು, ತಾವೇ ಬರೆದು, ತಾವೇ ಓದಿ ಖುಶಿಪಟ್ಟುಕೊಳ್ಳಬೇಕು. ಈಗ ನೋಡಿ ನಮ್ಮ ಭೈರಪ್ಪ, ಅನ೦ತಮೂರ್ತಿಯವರನ್ನು ಎಷ್ಟೊ೦ದು ಜನ, ಲಭ್ಯವಿರುವ ಎಲ್ಲ ಮಾಧ್ಯಮಗಳ ಮೂಲಕ ಟೀಕಿಸುತ್ತಿಲ್ಲ (ನಾನು ಸೇರಿದ೦ತೆ), ಅವರೆ೦ದಾದರೂ ಹೆದರಿ ತಾವು ಬರೆಯುವುದನ್ನು, ಮಾತನಾಡುವುದನ್ನು ನಿಲ್ಲಿಸಿದ್ದಾರೆಯೇ ? ಪ್ರತಿಕ್ರಿಯೆಗೆ ಹೆದರಿ ಬರೆಯುವುದನ್ನ ನಿಲ್ಲಿಸುವುದೆ೦ದರೆ, ಅದು ತಮಗೆ ತಾವೇ ಮಾಡಿಕೊಳ್ಳುವ ಆತ್ಮವ೦ಚನೆ ಎ೦ದು ಅರಿಯಬೇಕು. ಯಾರೋ ಒಬ್ಬ ಮಹಾನುಭಾವ ಗಾಳಿ-ಮಳೆ-ಗುಡುಗಿಗೆ ಹೆದರಿ ರಸ್ತೆಗಿಳಿದವನೂ ಹೆದರಿ ಓಡಿ ಹೋಗಿ ಮನೆಯೊಳಗೇ ಕುಳಿತಿದ್ದನಂತೆ. ಇನ್ನು ನಾನು ಹೊರಬರುವುದಿಲ್ಲ ಎ೦ದು ಶಪಥ ಮಾಡಿ ಬಾಗಿಲು ಮುಚ್ಚಿ ಕುಳಿತಿದ್ದನಂತೆ. ಮಳೆಯಿರಲಿ, ಸಿಡಿಲು-ಗುಡುಗೆ ಇರಲಿ, ರೋಡಿಗಿಳಿದ ಮೇಲೆ ಅದನ್ನು ಎದುರಿಸುವ ಮನೋಬಲ ಮೈಗೂಡಿಸಿಕೊಳ್ಳಬೇಕು, ಆಗ ಮಾತ್ರ ಗಮ್ಯ ತಲುಪುವುದು ಸಾಧ್ಯ. ಬೇಕಾದರೆ ಛತ್ರಿ ಹಿಡಿದುಕೊಳ್ಳಿ, ಮಳೆ ಇದೆ ಅ೦ತ ಮನೆಯಿ೦ದ ಹೊರಬರಲೇ ಹೆದರಿದರೆ ಹೇಗೆ ಸ್ವಾಮಿ ?

Friday, August 14, 2009

ಬಾಣಸಿಗನ ಬವಣೆಗಳು!!!



ಭಾಗಶಃ ಎಲ್ಲಾ ಗಂಡಸರು ಒಮ್ಮೆ ಯಾದರು ಅಡುಗೆ ಮನೆಗೆ ನುಗ್ಗಿ ನಳ ಮಹಾರಾಜನ ತರ ಪೋಸ್ ಕೊಟ್ಟು ಅಡುಗೆ ಮಾಡಿರ್ತಾರೆ. (ನುಗ್ಗದೆ ಇದ್ದವರು ಇರಬಹುದು, ನಾನು ಕಂಡಿಲ್ಲ) ಇರಲಿ ನಾನಂತೂ ಇ ಪಾಕ ಗೃಹಕ್ಕೆ ಕಾಲೇಜು ದಿನಗಳಲ್ಲೇ ಕಾಲಿರಿಸಿದ್ದೆ. ಆದರೆ ಅದು ನಮ್ಮ ಮನೇಲಿ ಅಲ್ಲ ಅನ್ನೋದು ಅಷ್ಟೇ ವ್ಯತ್ಯಾಸ. ನಾನು ಅಡುಗೆ ಭಟ್ಟರ ಗ್ಯಾಂಗ್ ಕಾಲೇಜು ದಿನಗಳಲ್ಲಿ ಸೇರಿದ್ದೆ. .!! ತೀರ ಉಪ್ಪು ಕಾರ ಹಾಕೋ ಲೆವೆಲ್ ನಲ್ಲಿ ಕೆಲಸ ಮಾಡ್ತಾ ಇರಲಿಲ್ಲ ವಾದರೂ ತರಕಾರಿ ಹೆಚ್ಚೋದು, ಬಡಿಸೋದು ನಮ್ಮ ಕೆಲಸ. ಅಲ್ಲಿ ಸಿಗೋ ದುಡ್ಡು ಪಾಕೆಟ್ ಮನಿ.


ಒಮ್ಮೆ ಹೀಗೆ ಒಂದು ಗೃಹ ಪ್ರವೇಶ ಕಾರ್ಯ ಕ್ರಮಕ್ಕೆ ಹೋಗಬೇಕಾಯಿತು. ಗೃಹ ಪ್ರವೇಶ ಅದರಲ್ಲೂ ಮಲೆನಾಡಿನಲ್ಲಿ ಅಂದರೆ ಮುಗಿತು. ಅಡುಗೆ ಮಾಡೋರಿಗೆ ಸರಿಯಾದ ಜಾಗ ಇರೋಲ್ಲ, ಸಾಕಷ್ಟು ಸಂದರ್ಬ ದಲ್ಲಿ ಮನೆ ಕೆಲಸ ಕೂಡ ಪೂರ ಮುಗಿದಿರೋಲ್ಲ. ಆದರು ಅದರಲ್ಲೇ ರಾತ್ರೆ ಪೂರ ಹೋಮ ಹವನಾದಿ ಗಳು ನಡಿಬೇಕು ಹಾಗು ಅದೇ ಮನೆಯ ಹಿತ್ತಿಲಲ್ಲಿ ನಾವು ಅಡುಗೆ ಮಾಡಬೇಕು. ಸರಿ ಅವತ್ತು ಇದ್ದವರು 3 ಜನ, ಸುಮಾರು 150 ಜನಕ್ಕೆ ಮರುದಿನ ಊಟವಿತ್ತು. ಮೂವರಲ್ಲಿ ಒಬ್ಬ ನಾನು, "ಮೈನ್ ಭಟ್ಟರು", ಮತ್ತೊಬ್ಬ ಅವರ ಅವರ ಅಣ್ಣನ ಮಗ ರಘು. ರಘು ಶಿವಮೊಗ್ಗೆ ಯಲ್ಲಿ ಅಡುಗೆ ಕೆಲಸ ಮಾಡ್ತಾ ಇದ್ದ. ನಾವುಗಳು ಸಂಜೆ ನಾಲ್ಕಕ್ಕೆ ಕೆಲಸ ಶುರು ಮಾಡಿದೆವು. ಭಟ್ಟರು ಸಾರಿನ ಪುಡಿ, ಸಾಂಬಾರ್ ಪುಡಿ, ಪುಳಿಯೋಗರೆ ಗೆ ಹುರಿತಾ ಇದ್ದರು. ನಾನು ಅದನ್ನ ಒಂದು ಕೆಟ್ಟ mixer ನಲ್ಲಿ ಪುಡಿ ಮಾಡ್ತಾ ಇದ್ದೆ. (ಸಾಮನ್ಯ ವಾಗಿ ಅಡುಗೆ ಭಟ್ಟರಿಗೆ ಒಳ್ಳೆ ಮಿಕ್ಸರ್ ಕೊಡೋಲ್ಲ, ಬೇಕಾಬಿಟ್ಟಿ ತುಂಬಿ ಕೆಡಿಸ್ತಾರೆ ಅಂತ. ) ಭಟ್ಟರು ತರಾ ತುರಿ ಯಲ್ಲಿ ಹುರಿದು, ರಘು ಗೆ ನಾಳಿನ ಅಡುಗೆ ಗಳ ಬಗ್ಗೆ ವಿವರಿಸಿ ಬಾದುಶ ಮಾಡಲು ಹಿಟ್ಟು ಕಲೆಸಿ ದರು. ಆಮೇಲೆ ನಂಗೆ ಸುಮಾರು 250 ಬಾದುಶ ಮಾಡಲು, ಹಾಗು ರಘು ಗೆ ಸಿಹಿ ಬೂಂದಿ ಕಾಲು ಮಾಡಲು ಹೇಳುತ್ತಾ ಹೊರಡಲು ಅನುವಾದರು. ನಾವು ಮುಖ ಮುಖ ನೋಡುವ ಹೊತ್ತಿಗೆ, ಅವರು ಸ್ನಾನ ದ ಮನೆಗೆ ಹೋಗಿಬಿಟ್ಟಿದ್ದರು. ಆಮೇಲೆ ತಿಳಿಯಿತು... ಗೃಹ ಪ್ರವೇಶದ ಪುರೋಹಿತರು ಕೂಡ ಅವರೇ ಅಂತ. ಭಾಗಶಃ buy one get one free ಅಂತ ಘೋಷಣೆ ಮಾಡಿದ್ರೋ ಏನೋ..


ನಾನು ಅಂದು ಕೊಂಡೆ ರಘು ದೊಡ್ಡ ಅಡುಗೆ ಭಟ್ಟ, ಅವನಿಗೆ ಎಲ್ಲಾ ಬರುತ್ತೆ, ಸಧ್ಯಕ್ಕೆ ಅವನೇ ನನ್ನ ಟೀಂ ಲೀಡರ್ ಅಂತ. ನನ್ನ ಮುಂದೆ ಸುಮಾರು 250ಬಾದುಶ ಕರಿಯಲಿಕ್ಕೆ ಇತ್ತು. ನಾನು ಕಷ್ಟ ಪಟ್ಟು ಸೌದೆ ಒಲೆಲಿ ಎಣ್ಣೆ ಕಾಯಿಸಿ, ಅ ಹೊಗೆಗೆ ಕಣ್ಣು ಕೆಂಪಾಗಿಸಿ ಕೊಂಡು ಕಾರ್ಯೋನ್ಮುಕ ನಾದೆ. ರಘು ತರಕಾರಿ ಹೆಚ್ಚಲನುವಾದ. ಸುಮಾರು ರಾತ್ರೆ 12 ರ ಹೊತ್ತಿಗೆ ನಮ್ಮ ಕೆಲಸಗಳು ಮುಗಿಯಿತು. ಇನ್ನು ಬೂಂದಿ ಕಾಳು ಮಾಡೋದು ಒಂದೇ ಬಾಕಿ ಇತ್ತು. ರಘು ಗೆ ಅದನ್ನು ಮಾಡಲು ಹೇಳಿದೆ, ಎಣ್ಣೆ ಬಿಸಿ ಇರೋದ್ರಿಂದ 10 ನಿಮ್ಷ ದಲ್ಲಿ ಕೆಲಸ ಮುಗಿಸಿ ಮಲಗ ಬಹುದು ಅಂತ. ರಘು ಗೆ ಒಮ್ಮೆಲೇ ಆಶ್ಚರ್ಯ, ನೀನೆ ಮಾಡು, ನಾನು ಯಾವತ್ತು ಬೂಂದಿ ಕಾಳು ಇರಲಿ, ಹಪ್ಪಳ ಕೂಡ ಕರಿದು ಗೊತ್ತಿಲ್ಲ ಅಂದ. ಅವನ ಕಣ್ಣಿಗೆ ನಾನು ನಳ ಮಹಾರಾಜನೋ, ಭೀಮನೂ.. ಏನೋ. ಅ ಸಮಯ ಹೆಂಗಿತ್ತು ಅಂದರೆ ಅನಕ್ಷರಸ್ತರು IAS ಬರೀಲಿಕ್ಕೆ ಹೋದಂಗೆ ಇತ್ತು. ನಮ್ಮ ಸಮಸ್ಯೆ ಬೂಂದಿ ಕಾಳು ಮಾತ್ರ ಆಗಿರಲಿಲ್ಲ, ನಾಳೆ 150 ಜನಕ್ಕೆ ಹೇಗೆ ಅಡುಗೆ ಮಾಡೋದು, ಎಷ್ಟು ಅನ್ನ, ಸಂಬಾರ ಮಾಡಬೇಕು? ಇಬ್ಬರ ಸ್ಥಿತಿ ಕರೆಂಟ್ ಹೊಡೆದ ಕಾಗೆ ತರ ಆಗಿತ್ತು.


ಭಟ್ಟರು ರಘು ಗೆ ಎಲ್ಲ ಅಡುಗೆ ಮಾಡೋಕೆ ಬರುತ್ತೆ ಅಂತ ತಿಳಿದಿದ್ದರು ಅನ್ಸುತ್ತೆ. ಅದೂ ಅಲ್ಲದೆ ಅವನು ಇದ್ದಿದ್ದು ಶಿವಮೊಗ್ಗ ದಂತ ಪೇಟೆ ಲಿ, ಅವರು ಅವನ ಬಗ್ಗೆ ಹಾಗೆ ತಿಳಿದಿದ್ದು ತಪ್ಪೇನು ಇರಲಿಲ್ಲ. ಸರಿ ಇಬ್ಬರು ಸೇರಿ ಬೂಂದಿ ಮಾಡಲು ಹಿಟ್ಟು ಕಲೆಸಿ, ಕರಿಯಲು ಶುರು ಮಾಡಿದೆವು. ಆದರೆ ಮೊದಲ ಹೆಜ್ಜೆ ನೆ ತಪ್ಪು. ನಮಗೆ ಅದನ್ನ ಹೆಂಗೆ ಮಾಡೋದು ಗೊತ್ತಿಲ್ಲ. (ಬೂ೦ದಿಕಾಳಿಗೆ ಸ್ವಲ್ಪ ದೊಡ್ಡ ಬೂಂದಿ ಬೇಕು, ಲಾಡಿನ ಉಂಡೆ ಮಾಡಲು ಚಿಕ್ಕ ಕಾಳುಗಳು ಬೇಕು) ಕರಿದೆವು.. ಅದು ಪೂರ ಚಿಕ್ಕ ಚಿಕ್ಕ ಕಾಳುಗಳು ಆಗಿತ್ತು. ಅದನ್ನ ಬಡಿಸಲು ಸಾಧ್ಯವೇ ಇರಲಿಲ್ಲ. ನಾಳೆಗೆ ಸಿಹಿ ಬೂಂದಿ ಬೇಕೇ ಬೇಕು. ಸಮಯ ಬೇರೆ ಮೀರುತ್ತಾ ಇತ್ತು. ರಘು ಒಂದು ಬೀಡಿ ಹಚ್ಚಿ ಕೂತ. ಸ್ವಲ್ಪ ಹೊತ್ತಿನ ನಂತರ ನಾವು ಲಾಡಿನ ಉಂಡೆ ಮಾಡೋಣ ಎಂದ. ಬೀಡೀಲಿ ಐಡಿಯಾ ಗಳನ್ನೂ ಹಿಡಿಯೋ ಅಂಟೆನಾ ಏನಾದ್ರು ಇತ್ತ ಅಂತ. ಅಂತು ಮಧ್ಯ ರಾತ್ರೆ ಸಕ್ಕರೆ ಪಾಕ ಮಾಡಲು ಕುಳಿತೆವು. ಪಾಕ ರೆಡಿ ಆದಮೇಲೆ ಕಾಳಿಗೆ ಮಿಕ್ಸ್ ಮಾಡಿದೆವು. ದುರದೃಷ್ಟಕ್ಕೆ ಪಾಕ ನೀರಾಗಿತ್ತು, ಉಂಡೆ ಮಾಡುವ ಹಾಗೆ ಇರಲಿಲ್ಲ. ಅಷ್ಟು ಕಡಲೆ ಹಿಟ್ಟು, ಸಕ್ಕರೆ.. ಎಲ್ಲಾ ವೇಸ್ಟ್ ಆಗುತ್ತಲ್ಲ ಅಂತ ಬೇಜಾರು... ರಘು ಮತ್ತೆ ಒಂದು ಬೀಡಿ ಗೆ ಮೊರೆ ಹೋದ. ಬೀಡಿ ಇಂದ ಐಡಿಯಾ ಬೇಗನೆ ಅವನಿಗೆ ಬಂತು, ಸ್ವಲ್ಪ ಏರಿದ ಪಾಕ ಮಾಡಿ ಹಾಕಿದರೆ ಸರಿ ಆಗುತ್ತೆ ಅಂದ. ಕೈಯಲ್ಲಿ ಬೀಡಿ ಇಟ್ಟುಕೊಂಡು ಪಾಕ ಮಾಡೋಕೆ ಶುರು ಮಾಡಿದ, . ನಾನು ಅವನ ಬೀಡಿ ಯಾರಿಗೂ ಗೊತ್ತಾಗದೆ ಇರಲಿ ಅಂತ ಹಿತ್ತಿಲನ್ನ ಹೊಗೆ ಮಾಡಿ ಬಿಟ್ಟೆ. (ಇದ್ದಕ್ಕಿದ್ದಂತೆ ಅಡುಗೆ ಮನೆ ಇಂದ ಹೊಗೆ ಬರ್ತಾ ಇದೆ ಅಂದ್ರೆ, ಏನೋ ಕಿತಾ ಪತಿ ನಡೀತಾ ಇದೆ ಅಂತ ಅರ್ಥ.. ). ಪಾಕ ರೆಡಿ ಆದಮೇಲೆ ಕಾಳಿಗೆ ಮಿಕ್ಸ್ ಮಾಡಿ ದೇವು. ಸ್ವಲ್ಪ ಅದೃಷ್ಟ ಅನ್ಸುತ್ತೆ, ಉಂಡೆ ಮಾಡಲು ಬಂತು. ಒಂದಷ್ಟು ದೊಡ್ಡ , ಒಂದಷ್ಟು ಚಿಕ್ಕ.. ಅನನುಬವಿ ಗಳು. ಅಂತು 150 ಲಾಡು ಕಟ್ಟಿ ಮಲಗಲು ತಯಾರಾದೆವು.


ಆದರೆ ನಿದ್ದೆ ಎಲ್ಲಿಂದ ಬಂದೀತು? ಮಾರನೆಯ ದಿನಕ್ಕೆ ಎಲ್ಲಾ ತಯಾರು ಮಾಡಬೇಕು, ಅದೇ ಯೋಚನೆ. ಕಣ್ಣು ಮುಚ್ಚಿದರೆ ಹೊಗೆಯ ಪ್ರಭಾವ, ಸಿಕ್ಕಾಪಟ್ಟೆ ಉರಿ. ಅಂತು ಬೆಳಿಗ್ಗೆ 5 ಕೆ ಎದ್ದು ಸ್ನಾನ ಮಾಡಿ ಹಾಲು ಕಾಯಿಸಿ, 2 ಕಪ್ ಕಾಫಿ ಕುಡಿದು ಕೆಲಸ ಶುರು ಮಾಡಿದೆವು. ಬೀಳೆ ಬೇಯಲು, ತರಕಾರಿ ಬೇಯಿಸಲು ಹಾಕಿದೆವು. ಎಷ್ಟು ಸಾರು, ಸಾಂಬಾರು, ಪಾಯಸ ಬೇಕು ಅಂತ ಗೊತ್ತಿಲ್ಲ. ಸುಮ್ಮನೆ ಒಂದು ಅಂದಾಜಿಗೆ ಹಾಕಿದೆವು. ಸಾರು ಮುಂತಾದವು ಟ್ರಯಲ್ ಅಂದ ಎರರ್ ಮೆಥಡ್. ಸ್ವಲ್ಪ ಕುಡಿದು ನೋಡೋದು, ಉಪ್ಪು ಕಡಿಮೆ ಇದ್ರೆ ಉಪ್ಪು ಸೇರಿಸೋದು, ಮತ್ತೆ ಟೇಸ್ಟ್ ಮಾಡೋದು. ಹೀಗೆ ನಡೀತು. ಅಂತು 12 ರ ಸುಮಾರಿಗೆ ಎಲ್ಲಾ ಕೆಲಸ ಮುಗೀತು. ಸ್ವಲ್ಪ ಹೊತ್ತಲ್ಲಿ ಊಟದ ಕಾರ್ಯಕ್ರಮ ಶುರು ಆಯಿತು. ಮಲೆನಾಡಲ್ಲಿ ಬಡಿಸಲಿಕ್ಕೆ ವಾಲಂಟೀರ್ ಗಳು ತುಂಬಾ ಇರೋದ್ರಿಂದ ಅವರೇ ಬಡಿಸ್ತಾರೆ. ನಮ್ಮದೇನಿದ್ದರೂ ಅಡುಗೆ ಮಾತ್ರ. ಸ್ವಲ್ಪ ಜನರ ಊಟ ಆಗ್ತಾ ಇದ್ದ ಹಾಗೆ ಸಾಂಬಾರು ಖಾಲಿ!! ಆಲೂಗಡ್ಡೆ ಬೀನ್ಸ್ ಹುಳಿ ಮುಗಿದೇ ಹೋಯಿತು. ಟೊಮೇಟೊ ಸಾರು ಮಾತ್ರ ಸಿಕ್ಕಾಪಟ್ಟೆ ಇದೆ. ಏನು ಮಾಡೋದು? ರಘು ಮತ್ತೆ ಬೀಡಿ ಗೆ ಶರಣಾದ. 2 ನಿಮಿಷ ದ ನಂತರ ಒಂದು ಬರೋಬ್ಬರಿ ಐಡಿಯಾ ಜೊತೆ ಬಂದ. ಜಾಸ್ತಿ ಇದ್ದ ತೊಂಡೆ ಕಾಯಿ ಪಲ್ಯ, ಟೊಮೇಟೊ ಸಾರು ಎರಡು ಮಿಕ್ಸ್!!! ಇನ್ಸ್ಟಂಟ್ ಸಾಂಬಾರು ರೆಡಿ!! ಒಂದು ಸಮಸ್ಯೆ ಮುಗೀತು ಅಂದ್ರೆ ಮತ್ತೊಂದು, ಪಾಯಸ ಖಾಲಿ, ಏನು ಮಾಡೋದು, ರಘು ಗೆ ಬೀಡಿ ಲೂ ಐಡಿಯಾ ಖಾಲಿ. 5 ನಿಮಿಷ ದಲ್ಲಿ ಪಾಯಸ ಬೇಕು. ನಂಗೆ ತಲೆ ಕೆಡುತ್ತಾ ಇತ್ತು. ಅನ್ನ ಬಸಿದಿದ್ದ , ಗಂಜಿ ತೆಗೆದು ಶಾವಿಗೆ ಪಾಯಸಕ್ಕೆ ಹಾಕಿದೆ, ಅರ್ದ ಲೀಟರ್ ಹಾಲು, ಒಂದು ಕೆಜಿ ಸಕ್ಕರೆ ಹಾಕಿದೆ. ರಘು ಒಂದಿಷ್ಟು ಏಲಕ್ಕಿ, ಲವಂಗ, ದ್ರಾಕ್ಷಿ, ಗೋಡಂಬಿ ಎಲ್ಲಾ ಹಾಕಿ ಸುವಾಸನೆ ಮಾಡಿಬಿಟ್ಟ. ಎರಡೇ ನಿಮಿಷ ದಲ್ಲಿ ಘಮ ಘಮ ಪಾಯಸ ರೆಡಿ!!


ಅಂತು ಕೊನೆಗೆ ಊಟದ ಕಾರ್ಯ ಕ್ರಮ ಮುಗಿತು. ನಮಗೆ ಭಟ್ಟರು ಎಲ್ಲಿ ಬಂದು ಉಗಿತಾರೋ ಅನ್ನೋ ಭಯ. ರಘು ಗೆ ಚಿಕ್ಕಪ್ಪ ನ ಕಂಡು ಸ್ವಲ್ಪ ಹೆದರಿಕೆ. ಭಟ್ಟರ ಬಳಿ ದುಡ್ಡನ್ನ ಇನ್ನೊಮ್ಮೆ ತಗೋಬಹುದು ಅಂತ ಮನೆಗೆ ಹೊರಟು ಬಿಟ್ಟೆ. ರಘು ನು ಅರ್ಜೆಂಟ್ ಅಂತ ಶಿವಮೊಗ್ಗೆ ಗೆ ಹೊರಟ. ಸುಮಾರು 15-20 ದಿನ ಆದ ಮೇಲೆ ಸಂತೇಲಿ ಸಿಕ್ಕ ಭಟ್ಟರು ಅವತ್ತು ಹಂಗೆ ಓದಿ ಬಿಟ್ಯಲ್ಲೋ ಶಾಸ್ತ್ರೀ, ತಗೋ ಅಂತ 200 ರುಪಾಯಿ ಕೊಟ್ಟರು. ಭಾಗಶ್ಯಃ ಅವತ್ತು ನಮ್ ಅಡುಗೆ ತಿಂದು ಯಾರ ಆರೋಗ್ಯ ನು ಕೆಟ್ಟಿರಲಿಲ್ಲ ಅನ್ಸುತ್ತೆ.


ಇ ಪ್ರಸಂಗ ಆದಮೇಲೆ ನಾನು ಯಾವತ್ತು ಪ್ರಯೋಗ ಮಾಡಲಿಕ್ಕೆ ಹೋಗಲಿಲ್ಲ. ಇತ್ತೀಚಿಗೆ ಮಾಡೋ ಸಣ್ಣ ಪುಟ್ಟ ಪ್ರಯೋಗ ಗಳು ನಂ ರೂಂ ಮೆಟ್ ವರುಣ ನ ಮೇಲೆ ಮಾತ್ರ!. ಪಾಪ ಅವನು ನಾನು ಎಂತ ಕರಾಬು ಅಡುಗೆ ಮಾಡಿದ್ರು ನಂಗೆ ಗೊತ್ತಾಗೋ ಹಾಗೆ ಬೈದು ಕೊಳ್ಳಲ್ಲ.




ಇಷ್ಟೆಲ್ಲಾ ವಿಷ್ಯ ಯಾಕೆ ನೆನಪಿಗೆ ಬಂತು ಅಂದ್ರೆ, ರೆಸೆಶನ್!! ಕೈಯಲ್ಲಿ ಇರೋ ಕೆಲಸ ಹೋದ್ರೆ ವಾಪಾಸ್ ಕೈಯಲ್ಲಿ ಸೌಟು ಹಿಡಿಯೋ ಪ್ಲಾನ್ ಇದೆ!! ನಿಮ್ಮಗಳ ಮನೇಲಿ ಏನಾದ್ರು ಕಾರ್ಯಕ್ರಮ ಇದ್ದರೆ ದಯವಿಟ್ಟು ಅಡುಗೆ ಕಂಟ್ರಾಕ್ಟ್ ನ ನಂಗೆ ಕೊಡಬೇಕಾಗಿ ವಿನಂತಿ.

ವಿ ಸೂ : ಶೀರ್ಷಿಕೆಯನ್ನ ಪರಾಂಜಪೆ ಅವರಿಂದ ಕಡ ತಂದದ್ದು.

Friday, August 7, 2009

ಯಮಪುರಿಯಲ್ಲಿ ರಾಜಕೀಯ!!!!


ಒಂದು ಕಥೆ ಹೆಂಗೆ ಶುರು ಆಗಬೇಕು? ನಾನು ಚಿಕ್ಕವನಿದ್ದಾಗ ಕೇಳುತ್ತಿದ್ದ ಕಥೆಗಳೆಲ್ಲವೂ "ಒಂದಾನೊಂದು ಕಾಲದಲ್ಲಿ.." ಅಂತಲೇ ಶುರು ಆಗುತ್ತಾ ಇದ್ದುವು. ಈಗೆಲ್ಲ ಕಥೆ ಮಧ್ಯದಿಂದ ಶುರು ಆಗುತ್ತವೆ, ಕೊನೇಲಿ ಒಂದು ಪಂಚ್, ಅರ್ಥವಾಗದ ಒಂದು ಕ್ಲೈಮಾಕ್ಸ್. ಹೋಗಲಿ ಬಿಡಿ, ನಾನು ಜಾಸ್ತಿ ಕಥೆಗಳನ್ನು ಓದಿಲ್ಲ, ಓದಿದರಲ್ಲಿ ಅರ್ಥವಾಗಿದ್ದು ಕೂಡ ಸ್ವಲ್ಪ ಕಡಿಮೆ ನೆ. (ನನ್ನ ಕವನ ಗಳ ಮೇಲಿನ ಜ್ಞಾನಕ್ಕೆ ಹೋಲಿಸಿದರೆ, ಕಥೆ, ಕಾದಂಬರಿ ಗಳಲ್ಲಿ ನಾನು RANK. ) ಇರಲಿ ಇಗ ನಿಮಗೊಂದು ಕಥೆ ಹೇಳಲಿದ್ದೇನೆ, ಇದು ನಾನು ಮಾಡಿದ ಅಡುಗೆ ಇದ್ದಂತೆ, ಒಂದಿಷ್ಟು ಸಾಂಬಾರ ಪದಾರ್ಥ ಮರೆತಿದೆ, ಒಂದಿಷ್ಟು ಉಪಯೋಗಿಸುವುದು ಹೇಗೆಂದು ತಿಳಿಯದೆ ಹಾಗೆ ಕುಳಿತಿವೆ. ಆದರೂ ಇದು ಆಜೀರ್ಣ ವಾಗಲಾರದು ಅನ್ನೋ ಆಸೆ.

------------------------------------------------------------------





ಒಂದಾನೊಂದು ಕಾಲದಲ್ಲಿ ನರಕಾದಿಪತಿ ಯಮನು ತನ್ನ ಸಾಮ್ರಾಜ್ಯವನ್ನು ಅತ್ಯಂತ ಯಶಸ್ವಿ ಯಾಗಿ ಆಡಳಿತ ನಡೆಸಿಕೊಂಡು ಬರುತ್ತಾ ಲಿದ್ದನು. ಬ್ರಹ್ಮನು ಯಾರ ಹಣೆಯ ಮೇಲೆ ಎಷ್ಟು ಆಯಸ್ಸು ಬರೆದಿದ್ದಾನೆ ಎಂಬುದನ್ನು ನೋಡಿ, ಅವರನ್ನು ಆಸ್ಥಾನಕ್ಕೆ ಹಿಡಿ ತಂದು, ಅವರು ಭೂಲೋಕದಲ್ಲಿ ಮಾಡಿದ ಪಾಪ ಕಾರ್ಯಗಳ ಬಗ್ಗೆ ಚಿತ್ರಗುಪ್ತಾದಿ ಗಳೊಡನೆ ಸಮಾಲೋಚಿಸಿ, ಶಿಕ್ಷೆ ಅಥವಾ ಸ್ವರ್ಗಕ್ಕೆ ಕಳುಹಿಸುತ್ತಾ ಇದ್ದನು. ಅಲ್ಲಿನ ಕಾರ್ಮಿಕರಾದ ಯಮ ಕಿಂಕರರು ಭೂಮಂಡಲ ವೆಲ್ಲಾ ಅಲೆದಾಡಿ ಯಮ ಪಾಶದಿಂದ ಆತ್ಮ ವನ್ನು ಹೊತ್ತೊಯ್ಯುತ್ತಾ ಇದ್ದರು. ಅಲ್ಲಿನ ಎಲ್ಲರೂ 24/7 , ಇಂದಿನ ಕಾಲ್ ಸೆಂಟರ್ ನು ನಾಚಿಸುವಂತೆ ಕೆಲಸ ಮಾಡುತ್ತಾ ಇದ್ದರು.


ಇಂತಿಪ್ಪ ನರಕಕ್ಕೆ ಒಮ್ಮೆ ಭಾರತ ದಿಂದ ಒಬ್ಬ ಯುವ ರಾಜಕಾರಣಿಯ ಆತ್ಮ ವನ್ನು ಹಿಡಿದು ತರಲಾಯಿತು.
ಎಂದಿನಂತೆ ಯಮನ ಎದುರು ವಿಚಾರಣೆ ಯು ಶುರು ಆಯಿತು. ಚಿತ್ರ ಗುಪ್ತನು ತನ್ನ ಪುಸ್ತಕವನ್ನು ನಾಲ್ಕಾರು ಬಾರಿ ಜಾಲಾಡಿದರು ಒಂದೇ ಒಂದು ಪುಣ್ಯ ಕೆಲಸ ಕಾಣಿಸದೆ, ಘನ ಘೋರ ಅಕೃತ್ಯ ಗಳೇ ಕಂಡವು. ಪಾಪ ಕಾರ್ಯವನ್ನು ಎಂದು ಸಹಿಸದ ಯಮನು ಶಿಕ್ಷೆಯ ಬಗ್ಗೆ ಯೋಚಿಸಲರಂಬಿಸಿದನು.


ಇತ್ತ ಇದೆ ಸಮಯದಲ್ಲಿ ಭಾರತದಲ್ಲಿ ರಾಜಕಾರಣಿಯ ಸಾವಿಗೆ ಸಂತಾಪ ಸೂಚಕವಾಗಿ ಒಂದು ವಾರ ರಾಷ್ಟ್ರೀಯ ಶೋಕಾಚರಣೆ ಘೋಷಿಸ ಲಾಯಿತು. ಆದರೆ ರಾಜಕಾರಣಿಯ ಮನೆಯಲ್ಲಿ, ಆತನ ಆಪ್ತ ಬೆಂಬಲಿಗರಲ್ಲಿ ಒಂದು ಸಮಸ್ಯೆ ತಲೆದೋರಿತು. ರಾಜಕಾರಣಿಯ ಅಪ್ಪ, ಅಮ್ಮ ಒಂದೊಂದು ಧರ್ಮೀಯರು. ತಾನು ಜಾತ್ಯಾತೀತ ಎಂದು, ಮುಂದಿನ ಜನ್ಮದಲ್ಲಿ ಮತ್ತೊಂದು ದರ್ಮದಲ್ಲಿ ಹುಟ್ಟುವೆ ಎಂದು ಹೇಳಿಕೊಳ್ಳುತ್ತಲಿದ್ದನು. ಹಾಗಾಗಿ ಶವ ಸಂಸ್ಕಾರದ ಬಗ್ಗೆ ದಿಲ್ಲಿಯಲ್ಲಿ ಬಹು ದೊಡ್ಡ ಸಭೆ ನಡೆಯಿತು. ಹೂಳುವುದೋ, ಸುಡುವುದೋ ತಿಳಿಯದೆ.. ಕೊನೆಗೆ ಟಿ ವಿ ಯಲ್ಲಿ ನೇರ ಪ್ರದರ್ಶನಕ್ಕೆ ಶವ ವನ್ನು ಧಹಿಸುವುದೇ ಸೂಕ್ತವೆಂದು ವಿದೇಶಿ ಮಾದ್ಯಮಗಳು ಹೇಳಿದ್ದರಿಂದ ನಗರ ಮದ್ಯೆ ಸುಡಲಾಯಿತು. ಹೈಕಮಾಂಡಿನ ಪ್ರೀತಿ ಗಿಟ್ಟಿಸಲು ಕೆಲವರು ಸತ್ತ ರಾಜಕಾರಣಿಗೆ ಸ್ವರ್ಗ ಸಿಗಲೆಂದು ಹೋಮ ಹವನಾದಿಗಳನ್ನು ಮಾಡಿದರು, ಇನ್ನು ಕೆಲವರು ಜಂಟಿ ಪ್ರಾರ್ಥನೆ ಯನ್ನು ಮಾಡಿದರು. ಆದರೆ ಇವಾವು ಯಮನ ಮೇಲೆ ಪ್ರಭಾವ ಬೀರಲು ವಿಫಲ ವಾಗಿ ರಾಜಕಾರಣಿಗೆ ನರಕ ದ ಶಿಕ್ಷೆ ಕಾಯಂ ಆಯಿತು.


ಇವನು ತೀರ ಮಾಹತ್ವಾಕಾಂಕ್ಷೆ ಹೊಂದಿದ್ದ ರಾಜಕಾರಣಿ, ಬದುಕಿನಲ್ಲಿ ಹಲವು ಸಹಸ್ರ ಲಕ್ಷ ಕೋಟಿ ಹಣ ಮಾಡಬೇಕೆಂದು ಆಸೆ ಪಟ್ಟಿ ದನು. ಇಡಿ ಭಾರತದಲ್ಲಿ ತನ್ನ ಆಳ್ವಿಕೆಯನ್ನು ವಿಸ್ತರಿಸಿ, ಅಲೆಕ್ಸಾಂಡರ ತರ ತನ್ನ ಹೆಸರು ಮಕ್ಕಳ ಶಾಲಾ ಇತಿಹಾಸದ ಪುಸ್ತಕದಲ್ಲಿ ಚಿರಾಯು ಇರಬೇಕೆಂದು ಕನಸು ಕಂಡಿದ್ದನು. ಅದೂ ಅಲ್ಲದೆ ಸಾಯುವಾಗ ಇದ್ದದ್ದು ಒಬ್ಬಳೇ ಒಬ್ಬಳು ಹೆಂಡತಿ. ಸಾಧಿಸುವ ಅವಕಾಶವಿದ್ದಾಗ, ಕನಸು ನನಸಾಗುವ ಸಮಯದಲ್ಲಿ ತನ್ನನ್ನು ನರಕಕ್ಕೆ ತಳ್ಳಿದ ಯಮನ ಮೇಲೆ ನಖಶಿಖಾಂತ ಕೋಪವು ಬಂದಿತು. ಇದಕ್ಕೆ ತಕ್ಕ ಪ್ರತಿಕಾರ ತೆಗೆದು ಕೊಳ್ಳಲೆ ಬೇಕೆಂದು ತೀರ್ಮಾನಿಸಿ, ನರಕದಲ್ಲಿ ಶಿಕ್ಷೆ ಅನುಭವಿಸುತ್ತಾ ಇದ್ದ, ತನ್ನ ಪಕ್ಷದ ಕಾರ್ಯ ಕರ್ತರನ್ನು ಗುರುತಿಸಿದನು. ಅವರಿಗೆಲ್ಲ ಸ್ವರ್ಗದ ಆಸೆ ತೋರಿಸಿ ಒಗ್ಗುಡಿಸಿದನು. ಸ್ವರ್ಗದಲ್ಲಿ ಇರಬಹುದಾದ ಗಣಿಕೆಯರ ಬಗ್ಗೆ ವಿವರಿಸಿದಾಗ ಆತ್ಮ ಗಳು ಜಾತಿ ಬೇದ, ಮತ ದರ್ಮ ಮರೆತು ಜಾತ್ಯ ತೀತ ಆದವು. ಕೆಸರು ಹಾಗು ಮಣ್ಣಿನ ಪಕ್ಷವು ಕೈ ಜೋಡಿಸಿದವು ಹುಡುಗಿ ಅಂದರೆ ಮಂದಿ, ಜಾತಿ ಗೀತಿ ಚಿಂದಿ ಎನ್ನುವ ಸಿಲ್ಕ್ ಸ್ಮಿತಾ ಕುಣಿತದ ಹಾಡು ಅಲ್ಲಿ ಸತ್ಯ ವಾಯಿತು.


ಸಂಘಟನೆಯ ರೂಪ ಬಂದ ಕೂಡಲೇ ಅವರೆಲ್ಲ ತಡ ಮಾಡದೆ ಯಮ ನ ವಿರುದ್ದ ದಂಗೆ ಎದ್ದರು. ಮೂಲಭೂತ ಸೌಕರ್ಯ ಕೊರತೆಯನ್ನ ಅಸ್ತ್ರ ಮಾಡಿಕೊಂಡರು. ಸ್ವರ್ಗ ಇಸ್ ಶೈನಿಂಗ್, ಇಲ್ಲಿ ಗರೀಬಿ ಓಡಿಸಿ ಅಂತ ಕೂಗಾಡಿದರು. ನರಕದಲ್ಲೆಲ್ಲ ಕೋಲಹಲವೆಬ್ಬಿತು, ರಂಬೆಯ ಕನಸಿನಲ್ಲಿದ್ದ ಕೆಲವರು ತೀವ್ರ ಗಾಮಿಗಳಾದರು, ಒಟ್ಟಿನಲ್ಲಿ ನರಕ ಶಾಂತಿ ಇಲ್ಲದ ಕಾಶ್ಮೀರ ತರ ಆಯಿತು. ಇದರಿಂದ ಭ್ರಮ ನಿರಸನ ಗೊಂಡ ಯಮನು ಚಿತ್ರಗುಪ್ತರು ಮೊದಲಾದವರೊಡನೆ ಸಮಾಲೋಚನೆ ನಡೆಸಿ, ಇದಕ್ಕೆಲ್ಲ ಅ ಹೊಸ ರಾಜಕಾರಣಿಯ ಕೈಗೂಡದ ಮಹತ್ವ ಕಾಂಕ್ಷೆ ಗಳೇ ಕಾರಣವೆಂದು ತೀರ್ಮಾನಿಸಲಾಯಿತು. ಆದರೆ ಅ ರಾಜಕಾರಣಿಯನ್ನು ಮತ್ತೆ ಭೂಮಿಗೆ ಕಳಿಸುವುದು ಸಾಧ್ಯವಿಲ್ಲದಿದ್ದರಿಂದ, ಹಾಗು ಮತ್ತೊಂದು ಯಮನಿಗೆ ಮತ್ತೊಂದು ಸೋಲು ಬೇಕಿಲ್ಲ ವಾದ್ದರಿಂದ ಆತನ ವಿರುದ್ದ ಇದ್ದ ಎಲ್ಲಾ ಆರೋಪ ಗಳನ್ನೂ ಖುಲಾಸೆ ಮಾಡಿ ಸ್ವರ್ಗಕ್ಕೆ ಕಳುಸಿಹಲಾಯಿತು. ಭೂಲೋಕದಲ್ಲೂ ಇ ತರದ ನೀರಸೆ ಅನುಭವಿಸಿದ್ದ ಹೋರಾಟಗಾರರು (ಕಾರ್ಯಕರ್ತರು) ಸುಮ್ಮನೆ ಕುದಿಯುವ ಎಣ್ಣೆಯ ಬಾಣಲೆಗೆ ಹಾರಲಾರಂಬಿಸಿದರು.


ಇ ಎಲ್ಲ ಘಟನೆಯ ನಂತರ ಯಮನು ತನ್ನ ಕಾರ್ಯ ವೈಕರಿಯನ್ನು ಬದಲಿಸಿ ಕೊಂಡನು. ರಾಜಕಾರಣಿಗಳು ತೀರ ಮುದುಕ ರಾಗದ ಹೊರತು ಸಾಯುವುದು ಸಾದುವಲ್ಲವೆಂದು ಬ್ರಹ್ಮನ ಬಳಿ ವಾದಿಸಿ ಅದನ್ನು ಕಾರ್ಯರೂಪಕ್ಕೂ ತಂದನು.



ಅದಕ್ಕೆ ಅಂತೆ ನಮ್ಮ ರಾಜಕಾರಣಿಗಳ ಪಾಪ ಕಾರ್ಯವು ಗಣಿ ಲಾರಿ, ಟ್ರಕ್ಕು ಗಳಲ್ಲಿ ಲೋಡ್ ಗಟ್ಟಲೆ ತುಂಬಿದ್ದರೂ ಯಾರೂ ಸಾಯುತ್ತಾ ಇಲ್ಲವಂತೆ.

Friday, July 31, 2009

ಒಂದು ಫ್ಲಾಶ್ ಬ್ಯಾಕ್!!

ಇದು ಬಹಳ ವರ್ಷಗಳ ಹಿಂದೆ ನಡೆದ ಘಟನೆ. ಒಂಥರಾ ಫ್ಲಾಶ್ ಬ್ಯಾಕ್!!

ನಾನು ಅವಾಗಾ ಭದ್ರಾವತಿ ಯಲ್ಲಿ ಸೆಕೆಂಡ್ ಇಯರ್ ಡಿಗ್ರೀ ಓದುತ್ತಾ ಇದ್ದೆ, ಓದುತ್ತಾ ಇದ್ದೆ ಅನ್ನೋದಕಿಂತ ಕಾಲೇಜಿಗೆ ಕೈ ಬೀಸಿಕೊಂಡು ಹೋಗುತ್ತಾ ಇದ್ದೆ ಅನ್ನೋದೇ ಸೂಕ್ತ ಅನ್ನಿಸುತ್ತೆ, ಇರಲಿ ಅವಾಗ ಇಡಿ ಡಿಗ್ರೀ ಗೆ ಇದ್ದಿದ್ದು ಕೇವಲ 9 ಜನ ಹುಡುಗರು, ಮಿಕ್ಕ ಪೂರ ಹುಡುಗಿಯರ ಸೈನ್ಯ!! ಅವರ ಮದ್ಯೆ ನಾವು ನವಗ್ರಹಗಳು!!


ಕಾಲೇಜು, ಎದುರುಗಡೆ ಒಂದು ಟೀ ಮತ್ತೆ ಸಿಗರೆಟ್ ಸಾಲ ಕೊಡೊ ಅಂಗಡಿ, ಮತ್ತೆ ಕಾಲೇಜಿನ ಎಡ ಭಾಗದಲ್ಲೇ ಉಚಿತ ಊಟಕ್ಕೆ ಒಂದು ಮದುವೆ ಛತ್ರ, ಎಲ್ಲಕಿಂತ ಮಿಗಿಲಾಗಿ ಹುಡುಗಿಯರ ಹಿಂಡು, ಅದು ನಮ್ಮ ಕಾಲೇಜು. ಅಷ್ಟು ಜನ ಹುಡುಗಿಯರಿಗೆ ಜಾತಿ ಮತ ಬೇದ ಇಲ್ಲದೆ, ಬಡವ ಶ್ರೀಮಂತ ಎನ್ನದೆ ಎಲ್ಲಾ ಹುಡುಗಿರಿಗೂ ಲೈನ್ ಹೊಡೆಯೋದು ನಮ್ಮ ಹಿಡನ್ ಅಜೆಂಡಾ. ಆದರೆ ಹೇಗೆ ನವಗ್ರಹಗಳು ಒಂದೇ ತರ ಇರುವುದಿಲ್ಲವೋ, ನಮ್ಮ ಒಂಬತ್ತು ಜನರ ಬುದ್ದಿ ಕೂಡ ಒಂದೇ ತರ ಇರುತ್ತಾ ಇರಲಿಲ್ಲ. ನಮಗೆ ಹುಡುಗಿರನ್ನ ನೋಡಲು ದೈರ್ಯ ಇರ್ತ ಇತ್ತೇ ಹೊರತು ಮಾತನಾಡಿಸಲು ಅಲ್ಲ!! ದೈರ್ಯ ಇದ್ದ 2-3 ಜನಕ್ಕೆ ಗರ್ಲ್ ಫ್ರೆಂಡ್ ಗಿಂತ ಮಲ್ಯ ನೆ ಚೀಪ್ ಅಂತ ನಂಬಿದವರು. ಮತ್ತಿಬ್ಬರು ರಜಿನಿ ಕಾಂತ ಮತ್ತೆ ಉಪೇಂದ್ರ ರ ಅಭಿಮಾನಿಗಳು, ಅವರಿಗೆ ಪ್ರೋಪೋಸೆ ಮಾಡಿ ಮಾತಾಡೋ ಅಷ್ಟು ತಾಳ್ಮೆ ಇರಲಿಲ್ಲ. ಮಗದೊಬ್ಬನಿಗೆ ಪೂರ್ವಾರ್ಜಿತ ಕರ್ಮ ಎಲ್ಲಾ ಸುಂದರ ಹುಡುಗಿಯರು ಅವನನ್ನು ಅಣ್ಣ ಅಂತಲೇ ಕರೀತ ಇದ್ದರು!!! ಉಳಿದ ನಮಗೆ ಯಾವ ತೊಂದರೇನು ಇರಲಿಲ್ಲ, ನಮಗೆ racism ಮಾಡಿ ಗೊತ್ತಿರಲಿಲ್ಲ!! :)


ನಾವುಗಳು ನಮ್ಮ ಕ್ಲಾಸ್ ಹುಡುಗಿಯರನ್ನ ಚುಡಾಯಿಸುವ ಹಾಗೆ ಇರಲಿಲ್ಲ. ಅವರು ನಮ್ಮ ಎ ಟಿ ಎಂ, ಸಿನಿಮಾಕ್ಕೆ ಎಲ್ಲಾ ದುಡ್ಡು ಕೊಡುತ್ತಾ ಇದ್ದಿದ್ದೇ ಅವರು!! ನಾವು ಸಿನಿಮಾಕ್ಕೆ ಅಂತ ತೊಲಗಿದರೆ ತಾವು ಅರಾಂ ಆಗಿ ಪಾಠ ಕೇಳಬಹುದು ಅಂತ ಪ್ಲಾನ್ ಮಾಡ್ತಾ ಇದ್ರೋ ಏನೋ. ಒಟ್ಟಲ್ಲಿ ಅವರು ನಮಗೆ ದುಡ್ದಂತು ಕೊಡ್ತಾ ಇದ್ರೂ. ಅವರ ಹತ್ತಿರ ಸಿಕ್ಕಲಿಲ್ಲ ಅಂದ್ರೆ ಕಾಲೇಜಿನ ಕ್ಲೆರಿಕ್ ಹತ್ತಿರ, ಅಲ್ಲೂ ಗಿಟ್ಟಲಿಲ್ಲ ಅಂದ್ರೆ ಲೆಕ್ಚರರ್ ಗಳ ಹತ್ತಿರ ತೆಗೆದು ಕೊತ ಇದ್ದೆವು.


ಇಂತಿಪ್ಪ ನಮ್ಮ ಗೂಡಿಗೆ ಒಮ್ಮೆ 5-6 ಹುಡುಗಿಯರು ಪಿ ಯು ಸಿ ಗೆ ಹೊಸದಾಗಿ ಸೇರಿಕೊಂಡರು. ಸರಿ ಸುದ್ದಿ ನಮ್ಮ ಕಿವಿಗೂ ಬಿತ್ತು. ಸೇರಿಕೊಂಡರೆ ಸಾಕೆ? ನವಗ್ರಹಗಳ ಆಶಿರ್ವಾದ, ಅನುಗ್ರಹ ಕೂಡ ಬೇಕಲ್ಲ. ಆದರೆ ನಮಗೆ ಮುಂದಿನ ಕ್ಲಾಸ್ ಪ್ರಿನ್ಸಿಪಾಲರೆ ತಗೋತಾ ಇದ್ದಿದ್ದು, ಅವರೇ ಅ ಸಬ್ಜೆಕ್ಟ್ ನ HOD ಬೇರೆ, ಆಮೇಲೆ ಲ್ಯಾಬ್ ನಲ್ಲಿ ಮಾರ್ಕ್ಸ್ ನ ಕಟ್ ಮಾಡಿದರೆ ಅನ್ನೋ ಭಯ. ಆದರು ಅ ಪಿ ಯು ಸಿ ಯಾ ಆಕರ್ಷಣೆ ಜಾಸ್ತಿ ಆದ್ದರಿಂದ ಕ್ಲಾಸ್ ಬೇಡ ಅಂತ ಅತ್ತ ನಡೆದೆವು.


ಅವರ ರೂಂ ಹತ್ತಿರ ಹೋಗಿ ಕಿಟಕಿ ತೆಗೆದು ನಮ್ಮ ತಲೆ ಒಳಗೆ ಹಾಕಿ ನೋಡತೊಡಗಿದೆವು. ಅಲ್ಲೇ ಇದ್ದ ಹುಡುಗರ ಜೊತೆ ಹೊಸದಾಗಿ ಸೇರಿದವರಲ್ಲಿ ಯಾರು ಸುಂದರ, ಯಾರಿಗೆ ಎಷ್ಟು ಮಾರ್ಕ್ಸ್ ಅಂತ ಚರ್ಚೆ ಶುರು ಮಾಡಿದೆವು. ಯಾಕೋ ಏನೋ ನಮ್ಮ ಹುಡುಗರಿಗೆ ಯಾರು ಇಷ್ಟ ಆಗಿಲ್ಲ ಅನ್ನಿಸುತ್ತೆ, ಎಲ್ಲಾ ನಾಪತ್ತೆ ಆದರು. ಕೊನೆಗೆ ಉಳಿದದ್ದು ನಾನು ಮತ್ತೆ ಮಜ್ಜಿಗೆ (ಮಜ್ಜಿಗೆ ಅಂದ್ರೆ ಉಮೇಶ ಅನ್ನುವನನ ಅಡ್ಡ ನಾಮ) ಹೀಗೆ ಒಂದು 5 ನಿಮಿಷ ಕಳೆಯಿತು. ನಾವಿಬ್ಬರೂ ಭಯಂಕರ ಚರ್ಚೆ ಮಾಡ್ತಾ ಇದ್ವಿ. ಅಷ್ಟರಲ್ಲಿ ಯಾರೋ ನನ್ನ ಹೆಗಲ ಮೇಲೆ ಕೈ ಇಟ್ರು, ನಾನು ಅದು ಮಜ್ಜಿಗೆ ಕೈ ಅಂತ ಸುಮ್ಮನಾದೆ. ಅಷ್ಟರಲ್ಲಿ ಮಜ್ಜಿಗೆ ನ ಯಾರೋ ಕ್ಲಾಸ್ ಗೆ ಬಾ ಅಂತ ಕರೆದರು. ಇವನೋ ನಮ್ಮ ಕ್ಲಾಸ್ ನ ದಾವೂದ್ ಇಬ್ರಾಹಿಂ. ಹೀಗೆಲ್ಲ ಡಿಸ್ಟರ್ಬ್ ಮಾಡಿದ್ರೆ ಮುಗೀತು ಕತೆ, ಮುಚ್ಕೊಂಡು ಹೋಗಯ್ಯ ಆಚೆಕಡೆ ಅಂದ. ಸರಿ ನಾವು ಮತ್ತೆ ಕಂಟಿನ್ಯೂ ಮಾಡಿದ್ವಿ. ಸ್ವಲ್ಪ ಹೊತ್ತಾದ ನಂಗು ಯಾರೋ ಕರೆದರು ಬಾ ಕ್ಲಾಸ್ ಗೆ ಅಂತ, ನಂಗು ಉರಿತು, ಅ ಬೋರಿಂಗ್ ಕ್ಲಾಸ್ ನ ಯಾರು ಕೇಳ್ತಾರೆ? ಬರಲ್ಲ ಹೋಗಪ್ಪ ಅಂದೆ. ನಂ ಹೆಗಲ ಮೇಲಿಂದ ಕೈ ಹೋಯಿತು. ಆದ್ರೆ ಮಜ್ಜಿಗೆ ಯಾ ಬೆನ್ನು ತಟ್ಟಿ ಯಾರೋ ಕರೀಲಿಕ್ಕೆ ಶುರು ಮಾಡಿದ್ರು! ಅವನು ನನ್ನ ಮುಖ ನೋಡಿದ, ಯಾಕೋ ಡೌಟ್ ಬಂತು. ಅ ಕಿಟಕಿ ಎಂಬ ಕನಕನ ಕಿಂಡಿ ಇಂದ ಮುಖ ಹೊರತೆಗೆದು ನೋಡಿದರೆ ಎದುರು ಇದ್ದಿದ್ದು ಪ್ರಿನ್ಸಿಪಾಲ್!! ಬನ್ನಿ ಕ್ಲಾಸ್ ಗೆ ಹೋಗೋಣ, ಅ ಹುಡುಗಿಯರು ಇನ್ನು 2 ವರ್ಷ ಇಲ್ಲೇ ಇರ್ತಾರೆ ಅಂದ್ರು. ನಮಗೋ ಸ್ವಲ್ಪ ಅವಮಾನ.. ಅದೂ ಪಿ ಯು ಸಿ ವಿಧ್ಯಾರ್ಥಿಗಳ ಮುಂದೆ!!! (ಅವತ್ತು ಜಾಸ್ತಿ ನೆ ಅವಮಾನ ಆಗಿತ್ತೋ ಏನೋ, ನಮಗೆ ಇಗ ಕ್ಲಾಸ್ ಗೆ ಹೋಗಬೇಕಲ್ಲ ಅನ್ನೋ ಸಂಕಟದಲ್ಲಿ ಅವಮಾನ ಗೊತ್ತಾಗಿಲ್ಲ)


ಆಮೇಲೆ ಕ್ಲಾಸ್ ನಲ್ಲಿ ಅ ಫಿಸಿಕ್ಸ್ ಪಾಠದ ಮಧ್ಯ ನಮ್ಮದೇ ಉದಾಹರಣೆ. ( ಅಲ್ಲಿ ನಮ್ಮ ಉದಾಹರಣೆ ಯಾಕೆ ಕೊಟ್ರು ಅಂತ ಅವತ್ತೂ ಅರ್ಥ ಆಗಿರಲಿಲ್ಲ. ಇವತ್ತು ಆಗಿಲ್ಲ ಕೂಡ!! )


ಇ ಘಟನೆ ನಡೆದ ಮೇಲೆ ನಾವು ಪ್ರಿನ್ಸಿಪಾಲ್ ಕೈಯಲ್ಲಿ ಸಿಕ್ಕಿ ಬೀಳಲಿಲ್ಲ. ಅಂದ್ರೆ ನಾವು ಶ್ರೀ ರಾಮ ಚಂದ್ರ ನ ತರ ಆದೆವು ಅಂತ ಅಲ್ಲ. ಪ್ರಿನ್ಸಿಪಾಲ್ ಕೈಗೆ ಸಿಗದಂತೆ ಎಚ್ಚರಿಕೆ ತೆಗೆದು ಕೊತ ಇದ್ದೆವು ಅಷ್ಟೇ. :)

ಇದು ಯಾಕೆ ನೆನಪಿಗೆ ಬಂತು ಅಂದ್ರೆ ನಿನ್ನೆ ಮಜ್ಜಿಗೆ ಕಾಲ್ ಮಾಡಿದ್ದ. ರೆಸೆಶನ್ !!!!, ಕೆಲಸ ಚೇಂಜ್ ಮಾಡಬೇಕು ಅಂತ ಇದ್ದ. ಹಾಗೆ ಮಾತಾಡುತ್ತ ಮಾತಾಡುತ್ತ ಒಂದಿಷ್ಟು ಫ್ಲಾಶ್ ಬ್ಯಾಕ್ ಗಳು ನೆನಪಿಗೆ ಬಂದವು ಅಷ್ಟೇ.

Tuesday, July 21, 2009

ಎಲ್ಲಾ ದೇವರಿಗಾಗಿ!!

ನಿಮಗೆಲ್ಲ ನೆನಪು ಇರಬಹುದು, ಇತ್ತೀಚಿಗೆ ರೆಡ್ಡಿ ಗಳು ತಿರುಪತಿ ತಿಮ್ಮಪ್ಪ ಗೆ ೪೫ ಕೋಟಿ ಬೆಲೆ ಬಾಳೋ ಟೋಪಿ ಹಾಕಿದ್ರು. ಯೆಡಿಯುರಪ್ಪ ಅವಾಗ ಅವಾಗ ದಕ್ಷಿಣ ಭಾರತದ ಎಲ್ಲ ದೇವಸ್ತಾನಕ್ಕು ಭೇಟಿ ಕೊಡ್ತಾ ಇರ್ತಾರೆ. ಇನ್ನು ನಮ್ಮ ಗೌಡರು ಅಂತು ಕೇರಳದಲ್ಲೇ ಠಿಕಾಣಿ ಹಾಕ್ತಾರೆ, ಅಥವಾ ಅಲ್ಲಿಯವರನ್ನೇ ಇಲ್ಲಿಗೆ ಕರೆಸ್ತಾರೆ. (ದೇವರನಲ್ಲ, ಬರಿ ಮಾಟ ಮಂತ್ರ ಮಾಡೋರನ್ನ)


ಅಂತು ನಮ್ಮ ನಾಡಿನ ಬಹು ಪಾಲು ದುಡ್ಡು ಪಕ್ಕದ ರಾಜ್ಯದ ದೇವರಿಗೆ ಸಲ್ಲುತ್ತೆ. ಹೋಗ್ಲಿ ಜನ ಸಾಮಾನ್ಯರು ನಮ್ಮಲ್ಲಿರೋ ದೇವಸ್ತಾನಕ್ಕೆ ಹೋಗಿ ದುಡ್ಡು ಹಾಕ್ತರ? ಅದು ಇಲ್ಲ, ಬಹಳಷ್ಟು ಸಮಯದಲ್ಲಿ ದೇವಸ್ತಾನದಲ್ಲಿ ವಯಸ್ಸಾದವರೇ ಇರ್ತಾರೆ. ಅವರು ಜಾಸ್ತಿ ಕಾಣಿಕೆ ಹಾಕೋಲ್ಲ. ಯುವಜನರು ಅ ಕಡೆ ಸುಳಿಯೋಲ್ಲ. (ರೆಸೆಶನ್ ನಿಂದ ಸ್ವಲ್ಪ ಭಕ್ತಿ ಜಾಸ್ತಿ ಆಗಿದೆ ಅದು ಬೇರೆ ವಿಷ್ಯ) ಪರಿಸ್ತಿತಿ ಹೀಗೆ ಇರಬೇಕಾದ್ರೆ ನಮ್ಮ ದೇವರು ಬಡವನು ಖ೦ಡಿತ ಆಗುತ್ತಾನೆ. ಅದ್ಯಾರೋ ಒಬ್ಬ ಕೆಟ್ಟ ನಿರ್ದೇಶಕ, ಕತ್ತಿ ಮಚ್ಚು ಅಂತ ಸಿನಿಮಾ ಮಾಡಿದ್ರೆ ಜನ ಕ್ಯು ನಲ್ಲಿ ನಿಂತು ಹೋಗಿ ನೋಡಿ ಬರ್ತಾರೆ, ಆದ್ರೆ ದೇವಸ್ತಾನಕ್ಕೆ ಮಾತ್ರ ಬರಲ್ಲ. ಆದ್ದರಿಂದ ನಾನು ಇ ಮೂಲಕ ಕೃಷ್ಣಯ್ಯ ಶೆಟ್ಟರಿಗೆ ಕೆಲವು ಸಲಹೆ ಗಳನ್ನೂ ಕೊಡುತ್ತಾ ರಾಜ್ಯದ ಬೊಕ್ಕಸಕ್ಕೆ ಸಹಾಯ ಮಾಡುತ್ತಾ ಇದ್ದೇನೆ. (ಎಂತ ಮಹಾ ನಾಡ ಭಕ್ತ ಅಲ್ಲವೇ ನಾನು? )

1. ಕೆಲವೊಂದು ಸಂಪ್ರದಾಯಸ್ತ ದೇವಸ್ತಾನಕ್ಕೆ ಪುರುಷರು ಶರ್ಟ್ ಮತ್ತೆ ಬನಿಯನ್ ತೆಗೆದು ಪ್ರವೇಶಿಸ ಬೇಕು, ಇದು ಈಗಿನ ಕಾಲದ ಯುವಕರಿಗೆ ಸರಿ ಬರುವುದಿಲ್ಲ. ಆದ್ದರಿಂದ ಮುಜರಾಯಿ ಇಲಾಕೆ ಹಾಗು ದೇವಸ್ಥಾನಗಳ ಆಡಳಿತ ಮಂಡಳಿಗಳು ಸಲ್ಮಾನ್ ಖಾನ್ ಮತ್ತು ಜಾನ್ ಅಬ್ರಹಾಂ ಅವರನ್ನು ಬ್ರಾಂಡ್ ರಾಯಭಾರಿಗಳನ್ನಾಗಿ ಮಾಡಿಕೊಳ್ಳಬೇಕು. ಇ ಮಹಾನು ಭಾವರು ಶರ್ಟ್ ಪ್ಯಾಂಟ್ ಇಲ್ಲದೆ ಕುಣಿಯುದನ್ನು ಕಂಡು ಕುಶಿ ಪಡೋ ಯುವ ಜನರು ದೇವಸ್ತಾನಕ್ಕೆ ಯಾವ ಹಿಂಜರಿಕೆನು ಇಲ್ಲದೆ ಬರುವರು. (ಇದು ಕೋಮು ಸೌಹಾರ್ದ ಅಂತ ಬೇಕಿದ್ರೆ ಪುಂಗಿ ಊದಿಕೊಂಡು ಮುಂದಿನ ಚುನಾವಣೆ ಗೆ ಹೋಗಬಹುದು)


2. ಅಷ್ಟೋತ್ತರ ಮಾಡಿಸಿದರೆ ಅರ್ಚನೆ ಫ್ರೀ ಅಂತ ಘೋಷಿಸಬೇಕು.



3. ಸಕ್ಕರೆ ಕಾಯಿಲೆ ಪೀಡಿತರಿಗೆ ಶುಗರ್ ಫ್ರೀ ಪ್ರಸಾದ ದ ವ್ಯವಸ್ಥೆ ಮಾಡಬೇಕು.


4. ಅಂದಿನ ಕಾಲದಿಂದಲೂ ನಮ್ಮ ಭಕ್ತಿ ಗೀತೆಗಳು ಹಾಗೆ ಇದೆ, ಅದೇ ರಾಗ, ಅದೇ ಸಾಹಿತ್ಯ. ಆದ್ದರಿಂದ ನಮ್ಮ ಕಲಬೆರಕೆ ರಾಜ ರಿಮಿಕ್ಸ್ ಕಿಂಗ್ ಗುರುಕಿರಣ್ ಹತ್ತಿರ ಭಕ್ತಿ ಗೀತೆಗಳಿಗೆ ಹೊಸ ರಾಗ ಹಾಕಿಸಬೇಕು. (ಹೊಡಿ ಮಗ ಹೊಡಿ ಮಗ ಟ್ಯೂನ್ ನಲ್ಲಿ ಭಕ್ತಿ ಗೀತೆ ಕೇಳಿ ನಾನು ಪುನೀತ ನಾಗಿದ್ದೇನೆ. )


5. ರಕ್ತ ಸಿಕ್ತ ಸಿನಿಮಾ ಗಳ ಸರದಾರ ಪಿ ಏನ್ ಸತ್ಯ ಹಾಗು ಮಚ್ಚು ವೀರ ದರ್ಶನ್ ಇಬ್ಬರು ಸೇರಿ ಒಂದು ಭಕ್ತಿ ಪ್ರಧಾನ ಸಿನಿಮಾ ಮಾಡಬೇಕು. ಅವಾಗ ಜನ ಥಿಯೇಟರ್ ಮುಂದೆ ಮಾತ್ರ ಅಲ್ಲ, ದೇವಸ್ತಾನಕ್ಕು ನುಗ್ಗುವರು. (ಇವರಿಬ್ಬರಿಗಿಂತಲೂ ಹೆಚ್ಚಿನ ಕಲಾ ನೈಪುಣ್ಯರು ಇನ್ನೂ ಇದ್ದಾರೆ, ಆದರೆ ಇಲ್ಲಿ ಬರೆಯಲಾಗಿಲ್ಲ, ಅವರುಗಳ ಆತ್ಮ ದುಃಖ ಪಡದೆ ಇರಲಿ. ) ರವಿ ಚಂದ್ರನ್ ಮತ್ತು ನಮೀತ ಮಾಡಿದರು ನಮ್ಮದೇನು ಅಭ್ಯಂತರವಿಲ್ಲ. !!! :)


6. ಕೊನೆಗೆ ನಮ್ಮ ರವಿ ಬೆಳಗೆರೆ ಕೈಯಲ್ಲಿ ಟೆಂಪಲ್ ಡೈರಿ ಅಂತ ಒಂದು ಪ್ರೊಗ್ರಾಮ್ ಮಾಡಿಸ ಬೇಕು!!! ಎರಡು ಹೆಣ ಬಿದ್ದ ಮೇಲೆ ಮಲಗೊದನ್ನ ಕಲಿತಿದ್ದ ಜನ ಒಂದೆರಡು ದೇವರಿಗೆ ಜೈ ಹೇಳಿ ಮಲಗುವರು.


ಸಲಹೆಗಳೆಲ್ಲವು ಸರ್ಕಾರಕ್ಕೆ, ಜನಕ್ಕೆ ಹಾಗು ಬೊಕ್ಕಸಕ್ಕೆ!!! ನಾನು, ಇಗಷ್ಟೆ ಹೊಸ ಕುರ್ಚಿ ನ ದೂಳು ಒರಸಿ ಕೂತಿರೋ ಶೆಟ್ಟರು, ಅಥವಾ ಸೋಮಣ್ಣ ಅವರ ಸ್ಥಾನದ ಆಕಾಂಕ್ಷಿ ಅಲ್ಲ ಎಂದು ಹೇಳಲು ಇಷ್ಟ ಪಡುತ್ತೇನೆ.

Friday, July 3, 2009

ಕಾಂಗ್ರೆಸ್ ಗೆ ಒಂದು ಸಲಹೆ...


ಕಳೆದ 2- 3 ದಿನಗಳಿಂದ ನನಗೆ ವಿಪರೀತ ಕುಶಿ ಆಗ್ತಾ ಇದೆ, ಕಾರಣ ಏನು ಅಂತೀರಾ? ಇದೋ ಕೇಳಿ. ಅಂತೂ ಇಂತು ಮುಂಬೈ ನಲ್ಲಿ ಕಟ್ಟಿರೊ ಒಂದು ದೊಡ್ಡ ಸೇತುವೆ ಗೆ ರಾಜೀವ್ ಗಾಂದಿ ಹೆಸ್ರು ಈಡೋ ತೀರ್ಮಾನ ಆಗಿದೆ ಅಂತೆ, ಇದು ಪವಾರ್ ಅವರು ಕೊಡ್ತಾ ಇರೋ ಸಲಹೆ. ಇದನ್ನು ಕೇಳಿ ನಂಗೆ ಹಾಲು ಕುಡಿದಷ್ಟು ಸಂತೋಷ ಆಯಿತು. ರಾಜೀವ್ ವಿಮಾನ ನಿಲ್ದಾಣ, ರಾಜೀವ್ ಬಸ್ ನಿಲ್ದಾಣ, ಇಂದಿರ ಅವಾಸ, ರಾಜೀವ್ ಯುವ ಕೇಂದ್ರ, ಅಂತೆಲ್ಲಾ ಇದ್ರು ನಂಗೆ ಸಮಾಧಾನ ಆಗಿರಲಿಲ್ಲ.


ನವ ಭಾರತ ನಿರ್ಮಾತೃ, ದೇಶಕ್ಕಾಗಿ ಕುಟುಂಬವನೆ ಮುಡುಪು ಇಟ್ಟಿರೋ ನೆಹ್ರು ಮನೆತನದ ದವರ ಹೆಸ್ರು ಇಡೋದು ಅತ್ಯಂತ ಸೂಕ್ತ ಅಂತ ನನ್ನ ಭಾವನೆ. ಆದ್ದರಿಂದ ನನ್ನ ಕಡೆ ಇಂದ ಕೇಂದ್ರ ಸರಕಾರಕ್ಕೆ ಕೆಲವೊಂದು ಸಲಹೆ, ಇನ್ನೂ ಎಲ್ಲೆಲ್ಲಿ ಆ ಮಹಾನು ಭಾವರ ಹೆಸ್ರು ಇಡಬಹುದು ಅಂತ. ದೇಶದಲ್ಲಿ ಇನ್ನೂ ಹಲವು ಯೋಜನೆ ಹಾಗೂ ಸ್ಥಳ ಗಳಿಗೆ ಅವರ ಹೆಸರು ಇಡಬಹುದಾಗಿದೆ. ಇಲ್ಲಿ ಬರೆದಿರುವ ಯೋಜನೆಗಳ ಕರ್ತೃ ನಾನೇ ಆಗಿರುತ್ತೇನೆ, ದಯಮಾಡಿ ಯಾವ ಕಾಂಗ್ರೆಸ್ ಕಾರ್ಯಕರ್ತರು ಇದನ್ನು ಕದಿಯ ಬಾರದು.


ನಮ್ಮ ದೇಶದಲ್ಲಿ ಒಳ್ಳೆಯ ರಾಜಕಾರಣಿ ಗಳು ಬಹಳ ಕಡಿಮೆ, ಒಳ್ಳೆಯ ಜನ ಇದ್ರೂ ಅವರು ರಾಜಕೀಯ ದಿಂದ ನಿವೃತ್ತ ರಾಗಿದ್ದಾರೆ, ಆದ್ದರಿಂದ ಈ ವಂಚಕ ಮಹಾ ಪ್ರಭುಗಳಿಗೆ ಅಂತ ಒಂದು ಜೈಲು ನಿರ್ಮಾಣ ಮಾಡಬೇಕು. ಅವರ ತಪ್ಪು ಗಳು ಸಾಬೀತು ಆಗುವುದು ಬಹಳ ಕಡಿಮೆ, ಆದರೂ ಒಂದು ಜೈಲು ಕಟ್ಟಿಸಬೇಕು, ಹಾಗೂ ಅದಕ್ಕೆ “ರಾಜೀವ್ ಬೋಫರ್ಸ್” ಕಾರಾಗೃಹ ಅಂತ ಹೆಸರಿಸ ಬೇಕು.


ನಮ್ಮ ದೇಶದಲ್ಲಿ ಯಾವಾಗ ಬೇಕಾದ್ರೂ ಬಾಂಬು ಗಳು ಸಿಡಿದು ನಾವೆಲ್ಲ ಸ್ವರ್ಗಸ್ತರಾಗ ಬಹುದು. ಉಗ್ರಗಾಮಿಗಳು ಬಂದು ಗುಂಡಿನ ಮಳೆ ಗೆರೆಯ ಬಹುದು. ಹಾಗಾಗಿ ಉಗ್ರಗಾಮಿಗಳಿಂದ ಸತ್ತವರ ಸಮಾಧಿಗೆ ಅಂತ ರಾಜೀವ್ ರುದ್ರ ಭೂಮಿ ಮಾಡಿಸಬೇಕು. ಮುಂಬೈ, ಕಾಶ್ಮೀರ್ ಗಳಲ್ಲಿ ಜನ ಉಗ್ರರಿಂದ ಸಾಯೋ ಸ0ಖ್ಯೆ ಜಾಸ್ತಿ ಇರೋದ್ರಿಂದ ಅಲ್ಲೆಲ್ಲ ರಾಜೀವ್ ವಿಧ್ಯುತ್ ಚಿತಾಗಾರ ಮಾಡಿದರೆ ಇನ್ನೂ ಒಳ್ಳೇದು.


ನಮ್ಮಲ್ಲಿ ಹಿಂದೂ ಅಂತರ್ಜಾತೀಯ ವಿವಾಹಕ್ಕೆ ಆರ್ಯ ಸಮಾಜ ಇದೆ, ಸರ್ಕಾರವು ಕೂಡಲೇ ಇದನ್ನು ನಿಷೇದಿಸಿ, ಪ್ರತಿ ಊರಲ್ಲೂ ಪ್ರಿಯಾಂಕ ಛತ್ರ ಮಾಡಿಸಬೇಕು. ಮದುವೆ ಏ ಆಗೋಲ್ಲ, ಬರಿ ಇಷ್ಟ ಬಂದಷ್ಟು ದಿನ ಮಜ ಮಾಡ್ಕೊಂಡು ಒಟ್ಟಿಗೆ ಇರ್ತೀವಿ ಅನ್ನೋರಿಗೆ ರಾಹುಲ್ ಗಾಂದಿ ಯೋಜನೆ ಮಾಡಿ ಅವರಿಗೆ ಧನ ಸಹಾಯ ಮಾಡಬೇಕು.


ಬಾಂದ್ರಾ ಮತ್ತು ವೊರ್ಲಿ ಸೇತುವೆ ಗೆ ರಾಜೀವ್ ಹೆಸ್ರು ಇಟ್ಟಾಗಿದೆ, ಆದರೆ ಅದರ ಕೆಳಗಿನ ಸಮುದ್ರದ ಮೀನುಗಳಿಗೆ ರಾಜೀವ್ ಹೆಸ್ರು ಇಟ್ಟಿಲ್ಲ ಅಂತ ಮೀನು ಗಳು ಗೊಳೋ ಅನ್ನುತ್ತಾ ಇದ್ದಾವೆ ಅಂತ ಸುದ್ದಿ ಬಂದಿದೆ. ಆದ್ದರಿಂದ ಸರ್ಕಾರವು ಇನ್ನೂ ಮುಂದೆ ಇಂತಹ ಅವಗಡ ಗಳು ನಡೆಯದಂತೆ , ರಾಜೀವ್ ಅಥವಾ ಇಂದಿರ ಹೆಸರಿಟ್ಟ ಪೋಷಕರಿಗೆ ಉಚಿತ ಸೀರೆ, ಗಂಡಸರಿಗೆ ಎಣ್ಣೆ ಕೊಡಬೇಕು. ಮುಂದೆ ಮಕ್ಕಳಿಗೆ ನಿರುದ್ಯೊಗ ಬತ್ಯೆ ಕೊಡಬೇಕು.


ವಿರೋಧ ಪಕ್ಷಗಳು ಈಗಾಗಲೇ ಈ ಹೆಸರಿಡೊ ಪದ್ದತಿ ಅನುಸರಿಸುತ್ತಾ ಇದ್ದಾವೆ, ಉದಾಹರಣೆಗೆ ಬೆಂಗಳೂರಿನಲ್ಲಿ ಅಟಲ್ ಸಾರಿಗೆ. ಆದ್ದರಿಂದ ಯಾವುದೇ ಸರ್ಕಾರಿ ಯೋಜನೆ ಗಳಿಗೆ ಹೆಸರುಗಳು ಯಾವತ್ತೂ ರಾಜೀವ ಅಥವಾ ಇಂದಿರ ಅಂತಲೇ ಇರಬೇಕೆಂದೂ ಒಂದು ಕಾಯಿದೆ ಅನ್ನು ಹೊರತರ ಬೇಕು..


ನಮ್ಮಲ್ಲಿ ಕೊಡುವ ಬಹುತೇಕ ಪ್ರಶಸ್ತಿ ಗಳಿಗೆ ರಾಜೀವ್ ಮತ್ತೆ ಇಂದಿರ ಹೆಸರಿದೆ. ಆದರೆ ಅತ್ಯುನ್ನತ ಪ್ರಶಸ್ತಿ ಗಳಿಗೆ ಅವರ ಹೆಸರಿಲ್ಲದೇ ಇರುವುದು ನನಗೆ ಪಿಚ್ಚೆನಿಸುತ್ತಾ ಇದೆ. ಕೂಡಲೇ ಭಾರತ ರತ್ನ ವನ್ನು ರಾಜೀವ್ ರತ್ನವೆಂದು, (ರಾಜೀವ್ ಗಾಂದಿ ಖೇಲ್ ರತ್ನ ಇದೆ ಆದ್ರೆ ಅದು ಬೇರೆ) ಜ್ಞಾನ ಪೀಠ ವನ್ನು ಇಂದಿರಾ ಪೀಠ ವೆಂದು ಬದಲಿಸ ಬೇಕು.


ಆಮೇಲೆ ಇಲ್ಲಿ ಬೆಂಗಳೂರಲ್ಲಿ ಇನ್ಫೋಸಿಸ್ ಸುಧಾ ಮೂರ್ತಿ ಅವರು ನಗರದ ಜನನಿಬಿಡ ಸ್ಥಳ ಗಳಲ್ಲಿ “ಪ್ರಕೃತಿ ಕರೆ” ಒಗೋಡಲು ಹಲವು “ನಿರ್ಮಲ ಬೆಂಗಳೂರು” ಮಾಡಿದ್ದಾರೆ, ಕೂಡಲೇ ಸರ್ಕಾರವು ಇದನ್ನು ರಾಷ್ಟ್ರೀಕರಣ ಮಾಡಿ ರಾಜೀವ್ ಹೆಸರು ಇಟ್ಟರೆ ಬಹಳ ಚೆನ್ನಾಗಿರುವುದು.


ಇನ್ನು ಕೋನೇದಾಗಿ ಈ ದೇಶದ ಹೆಸ್ರನ್ನೇ ಬದಲಿಸಿ ಬಿಟ್ಟರೆ ಆಯಿತು, ಇಂಡಿಯಾ ಬದಲು ಇಂದಿರ ಅಂತ ಮಾಡಿದ್ರೆ ಮುಗೀತು.


ಈ ಬೇಡಿಕೆಗಳು ಕೂಡಲೇ ಜಾರಿಗೆ ಬರಬೇಕೆಂದು ನಾನು ಸರ್ಕಾರವನ್ನು ಈ ಬ್ಲಾಗಿನ ಮೂಲಕ ಒತ್ತಾಯ ಪಡಿಸುತ್ತಾ ಇದ್ದೇನೆ. (ಅವರ್ಯಾರು ಇದನ್ನ ನೋಡಲ್ಲ, ಆದ್ರೂ … ಕೂಡ ಹೆವೀ ಒತ್ತಾಯ) ಹಾಗೂ ಸರ್ಕಾರವು ನನ್ನ ಮನವಿ ಯನ್ನು ಅತ್ಯಂತ ಸೂಕ್ಷ್ಮವಾಗಿ ಅವಲೋಕಿಸಿ, ಕಾರ್ಯರೂಪಕ್ಕೆ ತರುತ್ತದೆ ಅಂತ ನಾನು ಭಾವಿಸುವೆ. ನೀವೇನಂತೀರಿ?





ನನ್ನ ಸ್ನೇಹಿತ ಕಳಿಸಿದ ಫೋಟೋ ಇದು. ಸೇತುವೆ ಉದ್ಘಾಟನೆ ಅನಾಮಿಕ ನಿಂದ!!!!!!

Monday, June 22, 2009

ಸ್ಲಿಮ್ ಆಗೋ ಮಾರ್ಗಗಳು



ತೆಳ್ಳಗೆ ಸುಂದರವಾಗಿ , ಅರೋಗ್ಯ ವಾಗಿ ಇರಬೇಕೆಂದು ಯಾರಿಗೆ ಆಸೆ ಇರೋಲ್ಲ ಹೇಳಿ. ಆದ್ರೆ ಮೂರು ಹೊತ್ತು ಕಂಪ್ಯೂಟರ್ ಮುಂದೆ ಕೂತ್ಹೋ , ಅಥವಾ ಫೈಲೇ ಹಿಡ್ಕೊಂಡು ಕೂತಿದರ ಪಲ್ಹವೋ ... ಬಹು ಪಾಲು ಜನರಿಗೆ ಡೊಳ್ಳು ಹೊಟ್ಟೆ !!! ಕೆಲವರಂತು ಒಳ್ಳೆ 9 ತಿಂಗಳ ಬಸರಿ ತರ ಕಾಣ್ತಾರೆ !!! ಅದೇ ವಿಚಾರವಾಗಿ ಇಂಟರ್ನೆಟ್ ಸರ್ಫ್ ಮಾಡಿದೆ ಅಲ್ಲಿ ತಿಳಿಸಿದ ಮಾರ್ಗಗಳು ನನಗೆ ಭಯಾನಕ ಅನ್ನಿಸಿದವು, ಮಾಡಲು ಸಾದ್ಯನಾ ಅನ್ನಿಸ್ದ್ವು.ಕಾಲೇಜ್ ದಿನಗಳಲ್ಲಿ ಮಿಂಚಿನ ಬಳ್ಳಿ ತರ ಇದ್ದ ನಾನು, ಈಗ ಆನೆ ಮರಿ ಥರನೆ ಆಗಿದ್ದೀನಿ (ಅನೆ ಮರಿ ಅಲ್ಲ, ಅದಕ್ಕೂ ಜಾಸ್ತಿ) ಮೊದಲು ಮನೆಲ್ಲಿ ವಾಶಿಂಗ್ ಮಷಿನ್ ಇರಲ್ಲಿಲ್ಲ , ಮನೆಗೆ ಕೆಲಸಕ್ಕೆ ಕೆಲಸದವರು ಇರಲಿಲ್ಲ್ಲ , ಅಂಗಳಕ್ಕೆ ಆಳು ಇರಲಿಲ್ಲ , ಗಂಗಳ ತೊಳೊಯೊಕ್ಕೆ ಯಾರು ಬರ್ತಿರಲಿಲ್ಲ ...




ಈಗ ?... ಹೇಳೋ ಅವಶ್ಯಕತೆ ಇಲ್ಲ ಅರ್ಥ ಆಗಿರ ಬೇಕಲ್ಲ. ಏನು ಕೆಲಸ ಮಾಡದೆ ತೆಳ್ಳಗೆ ಆಗು ಅಂದ್ರೆ ದೇಹ ಕೇಳುತ್ತಾ? ಹೋಗಲಿ ಡಯೆಟ್ ಮಾಡೋಣ ಅಂದ್ರೆ ನಾಲಿಗೆ ಸುಮ್ಮನಿರುತ್ತ ? ಹೊಟ್ಟೆ ಕಟ್ಟಿದೆ, ಯೋಗ ಶುರು ಮಾಡಿದೆ, ಒಂದೆರಡು ಕೆಜಿ ತೂಕನು ಕಮ್ಮಿ ಆಯಿತು ....ಆಮೇಲೆ ಸೋಮಾರಿ ತನ. ಹಿಂಗಿರೋವಾಗ ತೆಳ್ಳಗೆ ಆಗೋದು ಹೇಗೆ? ಇದು ನನ್ನದೊಬ್ಬಳ ಸಮಸ್ಯೆ ಅಲ್ಲ, ಬಹು ಪಾಲು ಜನರದ್ದು . ಇದೊಂದು ಸಾರ್ವತ್ರಿಕ ಸಮಸ್ಯೆ ಆದುದರಿಂದ ಸುಲಭಕ್ಕೆ ತೆಳ್ಳಗೆ ಆಗೋ ಉಪಾಯಗಳನ್ನೂ ಕೊಟ್ಟಿರುವೆ . ಆಸಕ್ತರು , ನಡೆದಾಡುವ ಮಾಂಸ ಪರ್ವತ ಗಳು ಉಪಯೋಗಿಸ ಬಹುದು ......





1) ಜೋಗ್ಗಿಂಗ್ ಮಾಡೋಕೆ ಸೋಮಾರಿತನ ಇದ್ರೆ .. ಸುಮ್ನೆ ರಸ್ತೆ ಲಿ ಹೋಗೋವಾಗ ಬೀದೀಲ್ಲಿ ಇರೋ ನಾಯಿ ಗಳಿಗೆ ಕಲ್ಲು ಹೊಡಿರಿ ...


2) ಸದಾ ಚಿಂತೆ ಮಾಡುತ್ತಿರಿ. ..ಸದಾ ಚಿಂತಾಕ್ರಾಂತರಾಗಿ , ದೇಶದ ಬಗ್ಗೆ ಯೋಚಿಸಿ, ನಿಮ್ಮ ಮ್ಯಾನೇಜರ್ ಗಳ ಬಗ್ಗೆ ಯೋಚಿಸಿ, ಮನೆ ಮತ್ತೆ ವರ್ಕ್ ಬ್ಯಾಲೆನ್ಸ್ ಬಗ್ಗೆ, ಬ್ಯಾಂಕ್ ಬ್ಯಾಲೆನ್ಸ್ ಬಗ್ಗೆ ಯೋಚಿಸಿ, ಇತ್ಯಾದಿ .....ಹಸಿವು ನಿದ್ದ ಏನೂ ತಿಳಿಯೋಲ್ಲ .... ಸೊ ತಿಂಗಳೊಳಗಾಗಿ ನೀವು ಸ್ಲಿಮ್ ಅಂಡ್ ಟ್ರಿಂ (ಬದುಕಿದ್ದರೆ )



3) ನಿಮ್ಮ ಹತ್ತಿರ ದುಡ್ಡು ಇದೆ ಅಂತ ತಿಳಿದರೆ ಯಾರಾದರೊಬ್ಬರು ಸಾಲ ಕೇಳೆ ಕೇಳುತ್ತಾರೆ ಹಾಗಿರ ಬೇಕಾದರೆ, ನೀವು ಕಿತ್ತೋದ ಒಬ್ಬನಿಗೆ ಸಾಲ ಕೊಡಿ ಅದರ ವಸೂಲಿಗೆ ಅವನನ್ನು ಅಟ್ಟಿಸಿ ಕೊಂಡು ಹೋಗಿ !! ಇದರಲ್ಲಿ ರಿಸ್ಕ್ ಇದೆ ಆದ್ರೆ ದುಡ್ಡಿನ ವಸೂಲಿ ಮಾಡೋ ನೆಪದಲ್ಲಿ ನೀವು ತೆಳ್ಳಗಾಗೊದ್ರಲ್ಲಿ ಸಂದೇಹನೆ ಇಲ್ಲ.



4) ೧೦೦ ಗ್ರಾಮ್ಸ್ ಸಾಸಿವೆ ಅಥವಾ ರಾಗಿ ತೆಗೆದುಕೊಂಡು ಒಂದು ರೂಂ ನಲ್ಲಿ ಚೆಲ್ಲಿ ಆಮೇಲೆ ಒಂದೊಂದನ್ನೇ ಹೆಕ್ಕಿ ಹೆಕ್ಕಿ ಮತ್ತೆ ಡಬ್ಬಿಗೆ ತುಂಬಿ.. ಇದೆ ತರಹ ದಿನಕ್ಕೆ 2 ಬಾರಿ ಮಾಡಿ , ಹಾಗೆ 30 ದಿನ ಮಾಡಿ.... ಆಗ ನಿಮ್ಮ ಕನ್ನಡಿ ನಿಮಗೆ " ಇದು ನೀವೇನಾ? " ಅಂತ ಪ್ರಶ್ನೆ ಕೇಳುತ್ತೆ !!!!



5) ದೊಡ್ಡೋರು , ಅನುಭವಿಗಳು ಹೇಳ್ತಾರೆ ....ಮಧ್ಯಾನ್ನ ನಿದ್ದೆ ಮಾಡಿದ್ರೆ ದಪ್ಪಗೆ ಆಗ್ತಾರೆ ಅಂತ - ಅದಕ್ಕೆ ಮಧ್ಯಾನ್ನದ ಹೊತ್ತು ನಿದ್ದೆ ಮಾಡೇ ಇರೋ ಹಾಗೆ , ಬೀದಿಲ್ಲಿ ಆಡುವ ಮಕ್ಕಳನ್ನ ಕರೆದು ೫ ರೂಪಾಯಿ ಕೊಟ್ಟು ಪ್ರತಿ ೫ ನಿಮಿಷಕ್ಕೊಮ್ಮೆ ಮನೆ ಕಾಲಿಂಗ್ ಬೆಲ್ ಒತ್ತುವ ವ್ಯವಸ್ಥೆ ಮಾಡಿ ಕೊಳ್ಳಿ( ಮತ್ತೆ ಈ ವಿಷಯನ ನೀವು ಮರೆತು ಬಿಡಿ). ಒಂದು ನಿಮಗೆ ತಾಳ್ಮೆ ಜಾಸ್ತಿ ಆಗುತ್ತೆ ಅಥವಾ ಯಾರು ಮನೆಗೆ ಬಂದ್ರು ಅಂತ ಎದ್ದು ಓಡಾಡಿ ನೀವು ಖಂಡಿತ ತೆಳ್ಳಗೆ ಆಗ್ತೀರ.



6) ಬೆಂಗಳೂರು ಮಹಾನಗರಿ ಸಾರಿಗೆ ಸಂಸ್ಥೆ ಯವರಿಂದ ಇರುವ ಕರೀ ಹಲಗೆ ಬಸ್ಸು ಗಳನ್ನೇ ದಿನನಿತ್ಯ ಬಳಸಿ . ಅದರಲ್ಲೂ ನೀವು ಒಂದು ಕಿಟಕಿ ಸೀಟ್ ಹಿಡಿಯಲು ಪ್ರಯತ್ನಿಸಿ ...ಹೀಗೆ ೩೦ ದಿನಗಳ ಕಾಲ ಮಾಡಿ .... ಖಂಡಿತ ನೀವು ಬಳಕುವ (ಅಥವಾ ಉಳಕುವ ) ಸೊಂಟದವರಾಗುತ್ತಿರಿ.



7) ಬೆಂಗಳೊರಿನಲ್ಲಿ ಬಾಡಿಗೆ ಮನೆ ಹುಡುಕುವ ಅನುಭವ ಇರಬೇಕಲ್ಲ ? ..... ಹೀಗಿರುವಾಗ ನೀವು ಗೊತ್ತಿದ್ದೂ ಗೊತ್ತಿದ್ದೂ ನಿಮ್ಮ ಗೆಳಯ ಅಥವಾ ಗೆಳತಿಗೆ ಮನೆ ಹುಡುಕಲು ಸ್ವಯಂ ಪ್ರೇರಣೆ ಇಂದ ಹೊರಡಿ . (ಮನೆಗಾಗಿ ಅಲೆದೂ ಅಲೆದೂ...... )



8) ಈಗ ನಾನು ತಿಳಿಸುತ್ತಿರುವ ಮಾರ್ಗ ತುಂಬಾ ಹಳೆಯದು ತುಂಬಾ ಸಕ್ಸೆಸ್ಸ್ ಆಗಿರೋ ಮೆಥಡ್ ...ನೀವು ಪ್ರಯತ್ನಿಸಬಹುದು.
೧/೨ ಘಂಟೆ ಗೆ ಒಮ್ಮೆ ಅಂತೆ ಒಂದು ಚಂಬು ನೀರು ಕುಡೀರಿ......ಬಚ್ಚಲ ಮನೆಗೆ ಓಡಾಡಿ ಓಡಾಡಿ ಸಣ್ಣ ಆಗೇ ಆಗ್ತೀರ. (ಮೊದಲೇ ನೀರಿನ ವ್ಯವಸ್ಥೆ ಚೆನ್ನಾಗಿ ಮಾಡಿಕೊಳ್ಳಿ )



9) ದಿನನಿತ್ಯದ ಒಗ್ಗರಣೆಗೆ ತುಪ್ಪ , ಸಾಸಿವೆ ಜೀರಿಗೆ ಹಾಕುವ ಅಭ್ಯಾಸವಿದ್ದರೆ ಇದನ್ನು ಪ್ರಯತ್ನಿಸ ಬಹುದು.... ತುಪ್ಪದ ಬದಲು ಹರಳುಎಣ್ಣೆ ಉಪಯೋಗಿಸಿ ...



10) ಎಲ್ಲ ಕಿಟಕಿ ಬಾಗಿಲು ಮುಚ್ಚಿ ಪರದೆ ಎಳೆದು ಕೊಂಡು, ಕತ್ತಲು ಕೋಣೆ ಮಾಡಿ ಕೊಂಡು, ನಿಮ್ಮ ನೆಚ್ಚಿನ ಟಿವಿ ಮುಂದೆ ಪೀಠಾರೊಹಣ ಮಾಡಿ , ನಿಮಿಷಕ್ಕೆ ೪ ಚಾನೆಲ್ ಚೇಂಜ್ ಮಾಡಿಕೊಂಡು ನೋಡಿದ್ರೆ ಎಂತಹ ಸುಖ ಅಲ್ಲವಾ? ಸುಖ ಪಟ್ಟರೆ ದಪ್ಪಗಾಗ್ತಿರ , ಇದಕ್ಕೆ ನನ್ನಲ್ಲಿ ಒಂದು ಉಪಾಯವಿದೆ ,... ಟಿವಿ ರಿಮೋಟ್ ಬ್ಯಾಟೆರಿ ಹೋಗಿದ್ರು ಸಹ ಅದನ್ನ ಚೇಂಜ್ ಮಾಡ ಬೇಡಿ ! ಇದರಿಂದ ೨ ಉಪಯೋಗಗಳು ಇವೆ.


೧) ನಿಮಿಷಕ್ಕೆ ೪ ಸಲ ಟಿವಿ ಹತ್ತಿರಾನೆ ಎದ್ದು ಹೋಗಿ ಚಾನೆಲ್ ಚೇಂಜ್ ಮಾಡೋದ್ರಿಂದ ಸ್ಲಿಮ್ ಆಗೇ ಆಗ್ತೀರ ..
೨) ಟಿವಿ ಚನ್ನೆಲ್ಸ್ ಚೇಂಜ್ ಮಾಡೋಕ್ಕೆ ಸೋಮರಿತನವಾದ್ರೆ ಟಿವಿ ಹುಚ್ಚು ಬಿಡುತ್ತೆ




ಕೊನೆಗೆ ನೋಟ್ : ಈ ಉಪಯಗಳಿಗೆ ಪೇಟೆಂಟ್ ಮಾಡಿಸಿರುವುದಿಲ್ಲ , ಕಾಪಿ ರೈಟೆ ಇಲ್ಲವೇ ಇಲ್ಲಾ, ಯಾರು ಬೇಕಾದರು ನನಗೆ ಹಣ ಕೊಡದೆ ಉಪಯೋಗಿಸಿ ಜಿಂಕೆ ಮರಿ ಆಗ ಬಹುದು . :)

Wednesday, June 17, 2009

ನೋಡಿ ಸ್ವಾಮಿ ನಾವಿರೋದೆ ಹೀಗೆ!!!!



ನಮಗೆ ತೀರಾ ನೆಗೇಟಿವ್ ಆಲೋಚನೆ ಗಳೇ ಬರುತ್ತೆ, ಅನ್ನೋದಕ್ಕೆ ಉದಾಹರಣೆ ನಮ್ಮ ಪತ್ರಿಕೆಗಳು, ಸಾಹಿತಿ ಗಳು ಮತ್ತೆ ಸಿನಿಮಾ ದವರೇ ಸಾಕ್ಷಿ. ದಿನ ಬೆಳಿಗ್ಗೆ ಆದ್ರೆ ಸಾಕು, ಆ ರಾಜಕಾರಣಿ ಹಂಗೆ ಮೋಸ ಮಾಡಿದ್ರೂ, ಜನಕ್ಕೆ ಟೋಪಿ ಹಾಕಿದ್ರೂ ಅಂತೆಲ್ಲ ಬರೀಯೋದು. ಇನ್ನೂ ನಾಮ ಸಾಹಿತಿಗಳೋ ಭಾರತ ದಲ್ಲಿ ಅದಿಲ್ಲ, ಮೂಲಭೂತ ವ್ಯವಸ್ತೆ ಇಲ್ಲ, ಮಾತು ಸೋತ ಭಾರತ, ದಾರಿ ತಪ್ಪಿದ ಭಾರತ ಅಂತೆಲ್ಲಾ ಪುಂಗಿ ಊದಿ ಬೂಕರ್, ಪಾಕರ್ ಎಲ್ಲ ತಗೋತಾರೆ. ಇನ್ನೂ ಸಿನಿಮಾ ದವರಂತೂ ಕೇಳೋದೇ ಬೇಡ, ರಾಷ್ಟ್ರೀಯ ಮಟ್ಟದಲ್ಲಿ ಅಂತರ ರಾಷ್ಟ್ರೀಯಮಟ್ಟದಲ್ಲಿ ಕೊಳಚೆ ವಾಸಿ ಗಳ ಬಗ್ಗೆ ಸಿನಿಮಾ ಮಾಡಿ ಜನರಿಗೆ ಭಾರತ ದ ಬಗ್ಗೆ ತೀರಾ ತಪ್ಪು ಕಲ್ಪನೆ ಬರೋ ಹಾಗೆ ಮಾಡ್ತಾ ಇದ್ದಾರೆ.


ಇದು ನಿಜಕ್ಕೂ ಬೇಸರದ ಸಂಗತಿ, ಯಾಕೆ ನಾವೆಲ್ಲಾ ಪಾಸಿಟಿವ್ ಥಿಂಕ್ ಮಾಡೋಲ್ಲ. ಯಾಕೆ ಕಷ್ಟ ದಲ್ಲಿ ಇದ್ದಿವಿ ಅಂತ ಭಾವಿಸ ಬೇಕು? ಪಾಲಿಗೆ ಬಂದದ್ದು ಪಂಚಾಮೃತ, ಹಾಸಿಗೆ ಇದ್ದಷ್ಟೇ ಕಾಲು ಚಾಚು ಎಂಬ ಗಾದೆಗಳನ್ನು ನೆನ್ಪಿಸಿ ಕೊಂಡು, ಇರಬಹುದಲ್ಲ. ನಮಗೆ ಇರಲಿಕ್ಕೆ ಮನೆ ಇಲ್ಲದೆ ಹೋದರೆ ಅದು ದೊಡ್ಡ ಕಷ್ಟ ವೆ? ಪಾಂಡವರು ದಂಡಕಾರಣ್ಯ ದಲ್ಲಿ ವನವಾಸ ಹೋಗಿದ್ದರಲ್ಲ ಅವರಿಗೇನು ಅಲ್ಲಿ ಎ ಸಿ ಸಿ ಸಿಮೆಂಟಿನಿಂದ ಕಟ್ಟಿದ ತಾರಸಿ ಮನೆಗಳು ಇದ್ದವ? ಇಲ್ಲ ತಾನೆ. ಮಲಗಲು ಮನೆ ಇಲ್ಲ ಅಂದರೆ, ಇ ಭೂಮಿಯೇ ಹಾಸಿಗೆ, ಆಕಾಶವೇ ಹೊದಿಕೆ ಎಂದು ಭಾವಿಸಿದರೆ ಆಯಿತು.


ಸರ್ಕಾರ ಕೊಟ್ಟ ಆಶ್ರಯ ಮನೆ ಸೊರ ಬಹುದು , ಗಾಳಿ ಗೆ ಬೀಳಲು ಬಹುದು, ಅದರ ತಪ್ಪು ಗಾಳಿ ಹಾಗು ಮಳೆ. ವರುಣ ಮತ್ತು ವಾಯು ವಿಗೆ ಯಾವುದಾದರು ಕೋರ್ಟ್ ನಲ್ಲಿ ದಾವ ಹಾಕುವುದು ಸಾಧ್ಯವಿದ್ದರೆ ಚೆನ್ನಿತ್ತು. ಅದನ್ನ ಬಿಟ್ಟು ಅಧಿಕಾರಿಗಳನ್ನ, ಕಾಂಟ್ರಾಕ್ಟು ದಾರರಿಗೆ ಬೈದರೆ ಏನು ಪ್ರಯೋಜನ.


ನಮ್ಮ ದೇಶದಲ್ಲಿ ಭಯೋತ್ಪಾದನೆ ಇದೆ ನಿಜ, ಹಾಗಂತ ಅದರ ಬಗ್ಗೆ ನಾವು ಯಾಕೆ ಅಷ್ಟು ಗಂಟಲು ಹರಿಯೋ ಹಾಗೆ ಕೂಗಿಕೋ ಬೇಕು? ಎಲ್ಲೋ ತಿಂಗಳಿಗೆ 2-3 ಕಡೆ ಬಾಂಬ್ ಡಮ್ ಎಂದು ಸಿಡಿದು ಒಂದಿಷ್ಟು ಜನ ಸತ್ತಿರಬಹುದು, ಆದರೆ ನಾವು ಇನ್ನೂ ಬದುಕೇ ಇದ್ದಿವಲ್ಲ! ಉಗ್ರಗಾಮಿ ಗಳು ಇನ್ನೂ ನಮ್ಮ ಮನೆಯೊಳಗೆ ನುಗ್ಗಿ ಬಾಂಬ್ ಇಟ್ಟಿಲ್ಲ, ಇದು ಕುಶಿ ಪಡಬೇಕಾದ ವಿಚಾರ ಅಲ್ವಾ? 110 ಕೊಟಿ ಜನರಲ್ಲಿ ಒಂದು ನೂರು ಹೋದರೆ ತಲೆ ಕೆಡಿಸಿ ಕೋಬೇಕಾ?


ಈಗ ನಮ್ಮ ರಾಜ್ಯನೆ ತಗೋಳಿ, ನಿಜಕ್ಕೂ ನಾವು ಸಿಕ್ಕಾಪಟ್ಟೆ ಅಭಿವೃದ್ದಿ ಆಗಿದ್ದೀವಿ ಅಂತೆ, ಎಲ್ಲ ಕಡೆ ಮೂಲಭೂತ ಸೌಕರ್ಯ ಸಿಕ್ಕಿ, ನಾವೆಲ್ಲಾ ಕುಶಿ ಲೀ ಇದ್ದೀವಿ ಅಂತೆ! ಹಿಂದೆ ಬಿ ಜೆ ಪಿ ನೇತೃತ್ವದ ಎನ್ ಡಿ ಎ ಅಧಿಕಾರದಲ್ಲಿ ಇದ್ದಾಗ ಭಾರತ ಶೈನಿಂಗ್ ಅಂತ ಸಾರಿದ್ರೂ. ಅದು ಸ್ವಲ್ಪ ಹಳೆ ವಿಚಾರ ಆಯಿತು ಬಿಡಿ. ಆದ್ರೆ ನಾವು ಮುಂದುವರಿದಿಲ್ಲ ಅಂತ ಯಾಕೆ ಬಡಕೋ ಬೇಕು? ರೆಡ್ಡಿ ಗಳು ದೊಡ್ಡ ಹಗ್ಗ ಕಟ್ಟಿ ಕರ್ನಾಟಕ ನ ಮುಂದೆ ಯೆಳೀತ ಇದ್ದಾರೆ ಅನ್ಸಲ್ವಾ? ಪಾಪ ಅವರಿಗೆ ಜಯವಾಗಲಿ.


ಎಲ್ಲರೂ ಕೇಳಿರುತ್ತಾರೆ ಯುವಕರೇ ದೇಶದ ಶಕ್ತಿ, ಅವರೇ ದೇಶ ರೂಪಿಸುವವರು ಅಂತ. ಇಂತಹ ಯುವಕರ, ಯುವತಿಯರ ಬಗ್ಗೆ ನಮ್ಮ ಸರ್ಕಾರ ಗಳಿಗೆ ಸಿಕ್ಕಾಪಟ್ಟೆ ಗೌರವ. ಅವರ ಕುಶಿಯೇ ತಮ್ಮ ಕುಶಿ ಎಂದು ಭಾವಿಸಿವೆ. ಯಾವ ರೇಡಿಯೋ, ಟೀವೀ ಹಾಕಿದ್ರೂ ನಿರೋಧ್ ಬಳಸಿ, ನಿರೋಧ್ ಬಳಸಿ ಅಂತ. ಮದುವೆಗೆ ಮುನ್ನ ಅವೆಲ್ಲ ಬೇಡ ಅನ್ನುವ ನೈತಿಕತೆ ಯಾರಿಗೆ ಬೇಕಿದೆ? ಇನ್ನೂ ಸುಪ್ರಸಿದ್ದ ಕಾನ್‌ವೆಂಟ್ ಗಳಲ್ಲಿ ಹುಡುಗಿಯರು ಚಿಕ್ಕ ಚಿಕ್ಕ ಸ್ಕರ್ಟ್ ನ ಯೂನಿಫಾರ್ಮ್ ಅಂತ ಹಾಕ್ಕೊಂದು ಹೋಗ್ತಾರೆ. ಅವರು ಹಾಗೆ ಹೋಗೋದರಿಂದ ತಾನೆ ನನ್ನಂಥ ಬಿಸಿ ರಕ್ತದ ಯುವಕರಿಗೆ ಜೀವನೋತ್ಸಾಹ ಬರುವುದು. ಇದರಿಂದ ಯಾವ ಸಂಸ್ಕೃತಿ ನಾಶ ಆಗ್ತಾ ಇದೆ? ಯುವಕರು ಕುಶಿ ಇಂದ ಇರುವುದನ್ನು ಸಹಿಸದ ಕೆಲವು ಮೂಲಭೂತ ವಾದಿಗಳು ಭಾರತೀಯ ಸಂಸ್ಕೃತಿಯ ಅವನತಿ, ನೈತಿಕ ಅದೊಗತಿ ಅಂತೆಲ್ಲ ಅರ್ಥ ವಾಗದ ಪದಗಳ ಬಳಸಿ ಜನರ ನೆಮ್ಮದಿ ಕೆಡಿಸುವ ಪಿತೂರಿ ಇದು ಎಂಬ ಭಾವನೆ ನನಗೆ.


ಇನ್ನು ಮಧ್ಯ ರಾತ್ರೆ ಟಿ ವಿ ಗಳಲ್ಲಿ ಮಿಡ್ ನೈಟ್ ಮಸಾಲಾ ಕಾರ್ಯಕ್ರಮ ಗಳು ಬರುತ್ತವೆ. ಅವುಗಳು ಬಾಲಕರನ್ನು ಯುವಕರನ್ನಗಿಸಿ, ಯುವಕರನ್ನು ಮಂಚ ವಿದ್ಯಾ ಪ್ರವೀಣ ರನ್ನಾಗಿಸಿ.. ತನ್ಮೂಲಕ ದೇಶದಲ್ಲಿ ಜನ ಸಂಖ್ಯೆಯ ಬೀಜ ಬಿತ್ತ ಬೇಡವೇ? ಹುಡುಗಿಯರ ಸೊಂಟ ಹಿಡಿದು ಸುತ್ತ ಬೇಕಾದ ವಯಸ್ಸಲ್ಲಿ ಕ್ರಾಂತಿ ಯಾರಿಗೆ ಬೇಕಾಗಿದೆ ಸ್ವಾಮೀ? ಅಂದು ವಿವೇಕಾನಂದರು ಹೇಳಿದ್ದರು ಯುವಕರೇ ಏಳಿ, ಎದ್ದೇಳಿ ಅಂತ. ಈಗ ನೀವೇ ಹೇಳಿ ಬೇಗ ಎದ್ದು ಮಾಡುವುದೇನಿದೆ?


ನಮ್ಮ ದೇಶ, ಜನ ಗಳ ಬಗ್ಗೆ ಇಷ್ಟೆಲ್ಲಾ ಮಹಾದೋಪಕಾರ ಮಾಡಿರುವ ನಮ್ಮ ರಾಜಕಾರಣಿಗಳನ್ನ ಬೈಯುವ್ಯುದೇ? ಅಕಟಕಟಾ.. ಇನ್ನೂ ಅವರು ಚುನಾವಣೆ ಸಮಯದಲ್ಲಿ ದುಡ್ಡು ಕೊಟ್ಟು, ಹೆಂಡ, ಸೀರೆ, ನಂಗ ನಾಚ್ ಎಲ್ಲಾ ಮಾಡಿ ವೋಟ್ ಹಾಕಿಸಿಕೊಳ್ಳೋದ್ರಲ್ಲಿ ತಪ್ಪೇನಿದೆ? ನಾವು ಅಷ್ಟೇ ದುಡ್ಡು ತಗೊಂಡು ವೋಟ್ ಮಾಡೋದ್ರಲ್ಲಿ ಏನು ಅಪರಾದ ಅಡಗಿದೆ? ನಮ್ ವೋಟ್ ಏನು ಪುಕ್ಸಟ್ಟೆ ನ? ಅದಕ್ಕೆ ಎಲ್ಲರೂ ಅಬ್ಯರ್ಥಿಯ ಶಕ್ತ್ಯಾನುಸಾರ ದುಡ್ಡು ಪೀಕೊದು.


ಹೋಗಲಿ ಬಿಡಿ, ನಾವೆಲ್ಲಾ ಚೆನ್ನಾಗಿದ್ದೇವೆ. ನಾಳೆಯ ಚಿಂತೆ ನಮಗಿಲ್ಲ. ಅದರ ಅಗತ್ಯವೂ ಇಲ್ಲ. ನಿನ್ನೆಯ ಹಂಗಿಲ್ಲದೆ, ನಾಳೆಯ ಕನಸಿಲ್ಲದೆ, ಇಂದಿನ ಜೀವನ ಮಾತ್ರ ನೋಡುವ ತತ್ವ ಜ್ಞಾನಿಗಳ ನಾಡು ನಮ್ಮದು. ಪಕ್ಕದ ಮನೆಯವರು ಹೊಸ ಫ್ರಿಜ್ ತಗೊಂಡರೆ ಮಾತ್ರ ನಾವು ಯೋಚಿಸ ಬೇಕಾಗಿದೆ ಹೊರತು, ಅವರ ಮನೆ ಮಕ್ಕಳು ಮೋರಿ ಲೀ ಬಿದ್ದು ಸತ್ತರೆ ಯೋಚಿಸ ಬೇಕಾ? ಸುತಾರಾಂ ಇಲ್ಲ. ನಾವೆಲ್ಲಾ ವಿಧ್ಯಾವಂತರೆಂದು ಪೋಸ್ ಕೊಡುತ್ತಾ ಸಂತೋಷವಾಗಿ ಇರೋಣ. ಬೇಕಿದ್ದರೆ ಸತ್ತ ಸೈನಿಕರಿಗೆ ಒಂದು ಸಲಾಂ ಹೊಡೆದು, ನಮ್ಮ ಮಕ್ಕಳನ್ನು ಅಮೆರಿಕೆ ಯಲ್ಲಿ ಪ್ರತಿಷ್ಠಾಪನೆ ಮಾಡುವುದು ಹೇಗೆಂದು ಚಿಂತಿಸುವ.


ನಾವುಗಳು ಇಷ್ಟೆಲ್ಲಾ ಸುಖ, ಶಾಂತಿ ಮತ್ತು ನೆಮ್ಮದಿಲಿ ಇರಲು ಕಾರಣ ರಾಗಿರುವ ಎಲ್ಲ ಮತ ಬಾಂದವರಿಗೆ , ಹಾಗು ನಾಯಕರುಗಳಿಗೆ ಜೈ ಹೋ.

Tuesday, June 9, 2009

ನಾನ್ಸೆನ್ಸ್ ಜನಗಳ ಮುಗ್ಧ ಪ್ರಶ್ನೆಗಳಿಗೆ ನಮ್ಮ (ಅ)ಪ್ರಾಮಾಣಿಕ ಉತ್ತರಗಳು



ಬ್ಯುಸಿ ಬೆಂಗಳೂರಿನಲ್ಲಿ ದಿನ ಶುರು ಆಗೋದೇ ನಾನ್ಸೆನ್ಸ್ ಪ್ರಶ್ನೆ ಇಂದ - ಪೇಪರ್ ಬಾಗಿಲಿನ ಹತ್ತಿರ ಕಾಣದೆ ಇದ್ರೆ ಅಯ್ಯೋ ಪೇಪರ್ ಬಂದೆ ಇಲ್ಲ ಅಂತ ನಮ್ಮಷ್ಟಕ್ಕೆ ನಾವೇ ಪೆದ್ದು ಪ್ರಶ್ನೆ ಹಾಕಿ ಕೊಂಡಿರುತ್ತಿವೆ !!! ಇನ್ನು ರೇಡಿಯೋ ಕಿವಿ ಹಿಂಡೋಣ ಅಂತ ಹೋದರೆ ರೇಡಿಯೋ ಜೋಕಿ ಗಳ ಮುಗ್ಧ ಪ್ರಶ್ನೆಗಳ ಸುರಿಮಳೆ .. (ಆಹಾ ಆ ಅವರ ಮ್ಯಾನೇಜರ್ ಗೆ ,ಕೆಳುಗರಿ ಗೆ , ಎಸ್ ಎಂ ಎಸ್ ಕಳುಹಿಸುವ ಅಭಿಮಾನಿ ದೇವರುಗಳಿಗೆ ಇಷ್ಟ ಆಗ ಬೇಕು ಆ ಕಿರುಚಾಟ.) ಮೊನ್ನೆ ರೇಡಿಯೋ ದಲ್ಲಿ ನಡೆತಿತ್ತು ರೀತಿ ಪ್ರಶ್ನಾವಳಿ(ಯಾವುದೋ ಒಂದು ಅಮ್ಯುಸ್ಮೆಂಟ್ ಪಾರ್ಕ್ ನಲ್ಲಿ )


"ಸರ್ ನಮಸ್ಕಾರ ನಾನು ________ಇಂದ ಬಂದಿದೀನಿ"

ನಮಸ್ಕಾರ ಹೇಳಿ ಸರ್... (ವಾಯ್ಸ್ ನಲ್ಲಿ ನೆರ್ವೋಸನೆಸ್ಸ್ ಫಸ್ಟ್ ಟೈಮ್ ಇನ್ ರೇಡಿಯೋ ಪಾಪ )
"ಸರ್ ನೀವು ವೀಕೆಂಡ್ ನ ಕಳಿಯೋಕೆ ಇಲ್ಲಿಗೆ ಬಂದ್ರ ?"
ಹೌದು ವೀಕೆಂಡ್ ಗೆ ಮಜ್ಜ ಮಾಡೋಣ ಅಂತ ಬಂದ್ವಿ (ಅಮ್ಯುಸ್ಮೆಂಟ್ ಪಾರ್ಕ್ ಜನ ಏನು ಎಮ್ಮೆ ಕಾಯೋಕ ಬರ್ತಾರೆ ? )


ಇನ್ನು ಮಳೆ ಗಾಳದಲ್ಲಿ ಬೆಂಗಳೂರ್ನಲ್ಲಿ ಓಡಾಡೋದೇ ಕಷ್ಟ , ರಸ್ತೆ ಮೇಲೆ ನೆ ಇರ್ತಿವೋ , ಯಾವುದಾದರು ಮ್ಯಾನ್ ಹೋಲ್ನಲ್ಲಿ ಬಿದ್ದು ಮೇಲೆ ಹೋಗ್ತ್ಹಿವೋ ಗೊತ್ತಿರೋಲ್ಲ .. ಹಂಗೆನದ್ರು ಬಿದ್ದು, ಅದೃಷ್ಟವಶಾತ್ ಬದುಕಿ ಬಂದ್ರೆ.. ಟಿವಿ 9ನವರು ಬಂದು .. ಮೇಡಂ ನೀವು ಗುಂಡಿಲಿ ಬಿದ್ದು ಬಂದ್ರಲ್ಲ್ಲ ನಿಮಗೆ ಏನು ಅನ್ನಿಸುತ್ತೆ ?
ಜೀವ ಉಳಿಸ್ಕೊಂದು ಬಂದಿರೋದೆ ದೊಡ್ಡ ವಿಚಾರ !!! ಇದರ ಮದ್ಯೆ , ಇವರಿಗೆ ಅನಿಸಿಗೆ ಬೇರೆ ಹೇಳ್ಬೇಕು(ಗಬ್ಬು ವಾಸನೆ ಬೇರೆ ).


ಹೀಗೆ ಬೇರೆ ಬೇರೆ ಕಡೆ ಈ ನಾನ್ಸೆನ್ಸ್ ಜನಗಳ ಮುಗ್ಧ ಪ್ರಶ್ನೆಗಳ ಹಾವಳಿ ಉದಾಹರಣೆಗಳು ಹೀಗಿದೆ......
ಎಲ್ಲಿಯಾದರೂ ಹೋಗ್ತಾ ಇರ ಬೇಕಾದರೆ ಹಲ್ಲು ಕಿರಿದು ನಿಲ್ತಾರೆ " ಎಲ್ಲೋ ಹೋಗ್ತಾ ಇದ್ದಂಗಿದೆ ? " (ನೀಟ್ ಆಗಿ ರೆಡಿಆಗಿದ್ದು ನೋಡಿ ಕೂಡ ...+ ಕೈಲಿ ಚೀಲ. ನಿನಗೆ ಯಾಕಪ್ಪಾ ನಾನು ಎಲ್ಲಿಗೆ ಬೇಕಾದ್ರು ಹೋಗ್ತೀನಿ) "ಇಲ್ಲೇ ಸಾಮಾನು ತರೋಕ್ಕೆ " (ಇವೊತ್ತು ನನಗೆ ಸಾಮಾನು ಸಿಕ್ಕಂಗೆ , ಒಳ್ಳೆ ಬೆಕ್ಕು ಅಡ್ಡ ಬಂದಂಗೆ ಬರ್ತಾರೆ )


ರಜೆ ಗೆ ಮನೇಗೆ ಊರಿಗೆ ಹೋಗೋಕ್ಕೆ ಕೈ ನಲ್ಲಿ ಬ್ಯಾಗ್ ,ಸೂಟ್ಕೇಸ್ ಹಿಡಿದು ಬಸ್ ಸ್ಟ್ಯಾಂಡ್ ನಲ್ಲಿ ನಿಂತಿದ್ದೆ - ಅಲ್ಲೂ ಬಿಡದ ಬಾಯಿ ಬದಕಿ ಶಾಂತಮ್ಮ " ಏನು ಊರಿಗೆ ಹೊಗ್ತಿದ್ದಂಗಿದೆ ಯಾವಾಗ ಬರೋದು ? "
( ಕ್ಕೊ ಕ್ಕೊ ಆಡೋಕ್ಕೆ ಬಸ್ ಸ್ಟ್ಯಾಂಡ್ ಕರೆಕ್ಟ್ ಜಾಗ ಅದಕ್ಕೆ ನಿಂತಿರುವೆ , ನಾನು ಎಲ್ಲಿಗಾದ್ರೂ ಹೋಗಿ ಸಾಯಿತಿನಿ ನಿಮಗ್ಯಾಕ್ರಿ ಬೇಕು? ) ನಾನು ಹಲ್ಲು ಕಿರಿದು - " ಹೂನ್ ರೀ ಅಮ್ಮ ತುಂಬಾ ದಿನದಿಂದ ಮನೇಗೆ ಬಾ ಅಂತಿದ್ರು "



ಸದ್ಯ ಅಪರೂಪಕ್ಕೆ ಒಳ್ಳೆ ಫಿಲಂ ಬಂದಿದೆ ನೋಡಿ ಬರೋಣ ಅಂತ ಫಿಲಂ ಥಿಯೇಟರ್ ಗೆ ಹೋದೆ ಅಲ್ಲಿ ನಮ್ಮ - ಓಣಿ ಬಡ್ಡಿ ಸಾವಿತ್ರಮ್ಮ ಪ್ರತ್ಯಕ್ಷ ವಾಗಿದರು ಅವರ ಕಣ್ಣಿಗೆ ಬಿದ್ದರೆ ಸಾಕು ಫುಲ್ ಗರಗಸ ... ಹಾಗು ಹೀಗೂ ಅವರಿಂದ ತಪ್ಪಿಸಿ ಕೊಂದು ಟಿಕೆಟ್ ತೆಗೆದು ಸೀಟ್ ನಲ್ಲಿ ಕೂತಿದ್ದೆ ತಡ ಹಿಂದಿನಿಂದ ಬಂತು ಹೆಣ್ಣು ದ್ವ್ಹನಿ "ಓಹ್ ಹೀ ಹೀ - ಏನ್ರಿ ಫಿಲಂ ನೋಡೋಕ್ಕ ? --- ( ಇಲ್ಲಮ್ಮ ತಾಯಿ ಇಲ್ಲೇ ನಾನು ವಾಸ ಮಾಡೊದು ) - " ಹೂನ್ರಿ ಹೊಸ ಫಿಲಂ ಚೆನ್ನಾಗಿದೆ ಅಂತೆ "



ವಾರದ ಮಧ್ಯದಲ್ಲಿ ಯಾರ ಕಾಟನು ಇಲ್ಲದೆ ದೇವರ ದರ್ಶನ ಮಾಡೋಣ ಅಂತ ದೇವಸ್ಥಾನಕ್ಕೆ ಬಂದ್ರೆ - " ಮುಂದಿನ ಬೀದಿ ಸುಬ್ಬಣ್ಣ ಏನ್ರಿ ನೀವಿಲ್ಲಿ ?" (ಯಾಕಪ್ಪ ದೇವರು ನಿನ್ನ ಸ್ವತ್ತೋ ?) - " ದರ್ಶನ ಮಾಡೋಣ ಅಂತ " ಕಣ್ಣು ಮುಚ್ಚಿ ದೇವರಿಗೆ ಏನಪ್ಪಾ ಇದು ರಾಮೇಶ್ವರಕ್ಕೆ ಹೋದ್ರು ಶನೀಶ್ವರ ಬಿಡಲಿಲ್ಲ ಅಂತ ಗೋಗರೆದೆ.



ನನ್ನ ಕಸಿನ್ ನಿಶ್ಚಿತಾರ್ಥ ಪಾರ್ಟಿ ಗೆ ಅಂತ ಹೋಟೆಲ್ ಗೆ ಹೋಗಿದ್ವಿ ಅಲ್ಲಿ ನಮ್ಮ ಪಕ್ಕದ ಮನೆ ಬ್ಯಾಂಕ ಅಂಕಲ್ ಮನೆಯವರನ್ನು ತವರಿಗೆ ಕಳಿಸಿದ ಗಂಡ ಹಾಯಾಗಿ ಹೋಟೆಲ್ ನಲ್ಲಿ ಊಟಕ್ಕೆ ಬಂದ್ರೆ ಅಲ್ಲಿ ಆಟಕಾಯಿಸಿಕೊಂಡ ಅವರ ಹಳೆ ಪರಿಚಯದ ಪ್ರಾಣಿ - " ಓಹ್ ಹೋ ಹೋ ಏನ್ರಿ ಊಟಕ್ಕಾ ? ( ಇಲ್ಲಾ ಇಲ್ಲಿ ಪಾರ್ಟ್ ಟೈಮ್ ಕೆಲ್ಸ ಮಾಡ್ತಿನಿ ಅಂತ ಹೇಳುವ ಹಾಗಿತ್ತು ಅಂಕಲ್ ಮುಖ ಪಾಪ ) - " ಹೆಂಡತಿ ಊರಲ್ಲಿ ಇಲ್ಲಾ ರೀ "



ಸೂಪರ್ ಮಾರ್ಕೆಟ್ ನಲ್ಲ ದುಬಾರಿ ಅಂತ ಕೃ ರಾ. ಮಾರ್ಕೆಟ್ ಗೆ ಕಷ್ಟ ಪಟ್ಟು ಬಸ್ ನಲ್ಲಿ ಬಂದು ತರಕಾರಿ ಕೊಳ್ಳುವಾಗ - ಅಲ್ಲಿ ಸಿಕ್ಕ ನನ್ನ ಗೆಳತಿ " ಏನೇ ರಾಣಿ ತರಕಾರಿ ತರೋಕ್ಕೆ ಬಂದ್ಯಾ ?" (ಇಲ್ಲ ಇಲ್ಲಿ ಅದೇನೋ ಫ್ರೀ ಆಗಿ ಚಿನ್ನ ಹಂಚ್ತಿದ್ದರಂತೆ ಅದಕ್ಕೆ) - "ಹೂನ್" ಇದು ಇಲ್ಲಿ ಗೆ ಮುಗಿಯೊಲ್ಲ ಅದೇನೋ ಅಂತಾರಲ್ಲ ಹಾಗೆ ....( ಏನು ಅಂತಾರೋ ನನಗೂ ಗೊತ್ತಿಲ್ಲ ಗೊತ್ತಿದ್ರೆ ಹೇಳಿ ).



ನಮ್ಮ ದೂರದ ನೆಂಟರ ಮದುವೆ ಗೆ ಹೋಗಿದ್ದೆ ಅಲ್ಲಿಗೆ ಆಗಮಿಸಿದ್ದ ನಮ್ಮ ದೂರದ ಚಿಕ್ಕಮ್ಮ -" ಓಹ್ ಏನೂ ಮದುವೆಗೆ ಬಂದಿದ್ದ ?" (ಒಳಗಿಂದ ಬಂದ ಸಿಟ್ಟನ್ನು ಕಂಟ್ರೋಲ್ ಮಾಡಿಕೊಳ್ಳುತ್ತಾ -ಇಲ್ಲಾ ಕಳ್ಳ ಪೋಲಿಸ್ ಆಡ್ತ ಇದ್ವಿ , ಬಚ್ಚಿಟ್ಟು ಕೊಳ್ಳೋಕೆ ಬಂದೆ !!) " ಹೂನ್ರಿ ಚಿಕ್ಕಮ್ಮ .. ನೀವು ಹೇಗಿದ್ದೀರಾ ? ಆರೋಗ್ಯನಾ ? " ಅನ್ತ ಟಾಪಿಕ್ ಚೇಂಜ್ ಮಾಡಿದೆ.



ಇನ್ನು ಆಫೀಸ್ ನಲ್ಲಿ ಕೇಳುವ ಜಾಣ ಮುಗ್ಧ ಪ್ರಶ್ನೆಗಳಿಗೆ ಏನು ಕಮ್ಮಿ ಇರೋಲ್ಲ - ಮಾಡೋಕ್ಕೆ ಏನು ಕೆಲಸ ಇಲ್ಲದವರಂತು ಕೇಳುವ ಪ್ರಶ್ನಾವಳಿಗೆ ನೆ ಸಂಬಳ ತೆಗೆದು ಕೊಳ್ಳುತ್ತಾರೆ ಅನ್ನಿಸುತ್ತೆ -- ಇದು ಮನೆಯಿಂದ ಹೊರ ಬೀಳಬೇಕದ್ರೆ ನೆ ಶಕುನ ಸ್ಟಾರ್ಟ್ ಆಗೋದು ಹೀಗೆ - ಆಫೀಸ್ ಗೆ ಹೋಗ್ತಾ ಇರಬೇಕಾದ್ರೆ ಬೀಗ ಬಾಗಿಲಿಗೆ ಜಡಿದು ಇನ್ನೇನು ಮೆಲ್ಲಗೆ ಶಬ್ದ ಮಾಡದೆ ಗೇಟ್ ಹಾಕೋಸ್ಟರಲ್ಲಿ ಓನರ್ ಆಂಟಿ ಕಿಟಕಿ ಇಂದ -" ಓಹ್ ನೀವಾ? ಆಫೀಸಿಗೆ ಹೊರಟ್ರ "? ( ಇಲ್ಲಾ ಮ್ಯಾನೇಜರ್ ದು ಮ್ಯಾಜಿಕ್ ಶೋ ಅದಕ್ಕೆ ಹೊರಟೆ !! ಈ ದಿನ ಗೋವಿಂದಾ ...) " ಹೂನ್ ರೀ ಹೊಟ್ಟೆ ಪಾಡು "( ಗೊತ್ತಿದ್ದೂ ಗೊತ್ತಿದ್ದೂ ಯಾಕೆ ಹೀಗೆ ಪ್ರಾಣ ತಿಂತಾರೆ ? ದೇವರೇ ಮ್ಯಾನೇಜರ್ ಇವೊತ್ತು ಲೇಟ್ ಆಗಿ ಬರಲಿ ಆಫೀಸ್ ಗೆ ..ಅವರ ಮೂಡ್ ಸರಿ ಇರಲಿ )


ಇತ್ತೀಚಿನ ದಿನಗಳಲ್ಲಿ ಸೀರೆ ಉಡೋದೇ ಅಪರೂಪ ವಾಗಿದೆ , ದಿನಾ ಜೀನ್ಸ್ ಷರ್ಟ್ ನೋಡಿ ನೋಡಿ ಅಭ್ಯಾಸವಾಗಿರುವ ನಮ್ಮ ಜನಗಳಿಗೆ ನಮ್ಮಂಥವರು ನಮ್ಮ ಸಂಸ್ಕೃತಿಯಂತೆ ವಾರಕೊಮ್ಮೆ ಯಾದರು (?) ಸೀರೆ ಉಟ್ಟಿ ಕೊಂಡು ಹೋದ್ರೆ
- " ಏನ್ರಿ ವಿಷೇಶ ಸೀರೆ ಇವೊತ್ತು ಮದುವೆ ಏನಾದ್ರು ಗೊತ್ತಾಯಿತಾ ? ಹುಟ್ಟಿದ ಹಬ್ಬಾನ ? ಯರದದ್ರು ಮಾಡುವೆಗೆ ಹೊರಟಿದ್ದಿರ?
( ಅಯ್ಯೋ ನನ್ನ ಕರ್ಮ ಸರಿ ಇಲ್ಲದೆ ಸೀರೆ ಉಟ್ಟೆ ತಪ್ಪು ಆಯಿತು ದೇವರೇ ನನ್ನ ಕಾಪಾಡು ) - " ಎನಿಲ್ಲರಿ ಶುಕ್ರವಾರ ಅಲ್ಲವಾ "




ಸಿಗೋ ಒಂದು ಭಾನುವಾರ , ಎಲ್ಲ ಕೆಲಸ ಮುಗಿಸಿ , ಮಧ್ಯಾನ್ನ ಒಳ್ಳೆ ಊಟ ಆಗಿ ನಿದ್ದೆ ಹತ್ತುವ ಟೈಮ್ ನಲಿ ಫೋನ್ ಕೂಗಿ ಕೊಳ್ಳುತ್ತೆ - " ಮಲಗಿದ್ರಿ ಅನಿಸುತ್ತೆ ಡಿಸ್ಟರ್ಬ್ ಆಯ್ತಾ? " (ನಮ್ಮ ಧ್ವನಿನೇ ಹೇಳ್ತಿರುತ್ತೆ ಫುಲ್ ನಿದ್ದೆ ನಿದ್ದೆ ಅಂತ, ನಿಮಗೆ ಫೋನ್ ಮಾಡೋಕ್ಕೆ ಇದೇ ಟೈಮ್ ಬೇಕಿತ್ತಾ? ) " ಇಲ್ಲಾ ರೀ ಜಸ್ಟ್ ಬೆನ್ನಿಗೆ ರೆಸ್ಟ್ ಕೊಟ್ಟಿದ್ದೆ ....ಎನು ವಿಷಯ ಆಆಆಆಆಆಆಆಆಅ (ಗೊತ್ತಾಗುವ ರೀತಿನಲ್ಲಿ ದೊಡ್ಡ ಆಕಳಿಕೆ )?"



ಇನ್ನು ಶನಿವಾರ ಆಫೀಸ್ ಗೆ ರಜೆ , ಬೆಳಿಗ್ಗೆ ಬೆಳಿಗ್ಗೆ ಅಕ್ಕ ಪಕ್ಕದವರು ಯಾರು ಬಟ್ಟೆ ಒಣಗೋಕ್ಕೆ ಹಾಕಿರೋಲ್ಲ , ಬೇಗ ಬೇಗ ಬಟ್ಟೆ ಒಗೆಯೋಕ್ಕೆ ಶುರು ಮಾಡಿದ್ರೆ - ":ಏನ್ರಿ ಬಟ್ಟೆ ಒಗೀತಿದ್ದಿರಾ ?"
ಇಲ್ಲಾ ಕಲ್ಲು ಸುಮ್ಮನೆ ಮಾತಾಡ್ತಿತ್ತು ಅದಕ್ಕೆ ಒದೀತಿದ್ದಿನಿ - " ಹ್ಞೂ "
ಹೀಗೆ ದಿನ ಶುರು ಆಗೋದ್ರಿಂದ ಮುಗಿಯೋತನ ಒಂದಲ್ಲ ಒಂದು ರೀತಿ ನಾನಾ ತರಹದ ಮುಗ್ಧ ಪ್ರಶ್ನೆಗಳು ನನಗೆ ಎದಿರಾಗುತ್ತವೆ. ನಿಮಗೂ ಸಹ ಇಂತಹ ಇಕ್ಕಟ್ಟಿನಲ್ಲಿ ಸಿಕ್ಕ ಪ್ರಶ್ನೆಗಳು ಮತ್ತೆ ಅದರ ()ಪ್ರಾಮಾಣಿಕ ಉತ್ತರಗಳು ಇದ್ದಲ್ಲಿ ನಮ್ಮೊಡನೆ ಹಂಚಿಕೊಳ್ಳಿ.


ವಿ. ಸೂ: ಅಪ್ಪಿ ತಪ್ಪಿ ನಿಮ್ಮ ಪ್ರಾಮಾಣಿಕ ಉತ್ತರಗಳು ನಿಮ್ಮ ಬಾಯಿಂದ ಹೊರಗೆ ಎಸ್ಕಪೆ ಆಗಿ ಬಂದ್ರೆ ಅದಕ್ಕೆ ನಾನು ಜವಾಬ್ದಾರಳಲ್ಲ

Wednesday, June 3, 2009

ಸ್ವಂತ ಪ್ರಚಾರಕ್ಕೆ 10 ಮಾರ್ಗ!!!

ಪ್ರಚಾರದ ಆಸೆ ಯಾರಿಗೆ ಇರೋಲ್ಲ ಹೇಳಿ? ನಮ್ಮ ಮೂತಿ ಕಲರ್ ಟಿವಿ ನಲ್ಲಿ ನಾವು ಕಾಣಿಸ್ಕೊಬೇಕು ಅಂತ ಇದ್ರೂ ಅದು ಸಾಧ್ಯ ಆಗೋದು ದುರ್ಲಭ. ಆದ್ದರಿಂದ ಸಡನ್ ಆಗಿ ಸುದ್ದಿ ಮಾಡೋದು ಹೇಗೆ ಅಂತ ಕೆಲವು ಸುಲಭೋಪಾಯ ಗಳು ಇಲ್ಲಿವೆ ಆಸಕ್ತರು ಪ್ರಯತ್ನಿಸಬಹುದು.

1. ವಿನಿ ವಿಂಕ್ ಸ್ಕ್ಯಾ೦ಡಲ್ ನಲ್ಲಿ ಭಾಗಿ ಆಗಿದ್ದೀನಿ ಅಂತ ಹೇಳಿ, ಥಟ್ ಅಂತ ಪ್ರಚಾರ ಸಿಗುತ್ತೆ!!


2. ನಿಮ್ಮ ಪಕ್ಕದ ಮನೆ ಮುಂದೆ ಒಂದು ಗುಂಡಿ ತೋಡಿ, ಅದರಲ್ಲಿ ಒಂದು ಬೀದಿ ನಾಯಿ ನ ಹಾಕಿ. ಆಮೇಲೆ ಟಿವಿ ೯, ಮುಂತಾದ ಚಾನೆಲ್ ನವರಿಗೆ ಫೋನ್ ಮಾಡಿ "ಡಾಗ್ ರೆಸ್ಕ್ಯೂ" ಲೈವ್ ಶೋ ಅಂತ ಹೇಳಿ, ನೀವು ಎಲ್ಲ ಕಡೆ ಬ್ರೆಕಿಂಗ್ ನ್ಯೂಸ್ ಆಗ್ತೀರ.


3. ನಿಮ್ಮ ಫೋಟೋ ನ ದೊಡ್ಡ ಫ್ಲೆಕ್ಷ ಪ್ರಿಂಟ್ ತೆಗೆಸಿ, ರಸ್ತೆ ಲಿ ಬ್ಯಾನರ್ ಹಾಕಿ "ನಂಗೆ ಹ್ಯಾಪಿ ಬರ್ತ್ ಡೇ" ಅಂತ ಬರೆಸಿ ಕೊಳ್ಳಿ.


4. ಯಾವುದಾದರು ರಾಜಕಾರಣಿ ಭಾಷಣ ಮಾಡ್ತಾ ಇರಬೇಕಾದ್ರೆ ಚಪ್ಪಲಿ ಬಿಸಾಕಿ. (ಇದು ಮಾತ್ರ ಸಿಕ್ಕಾಪಟ್ಟೆ ಸಕ್ಸಸ್ ಆಗಿದೆ, ಪ್ರಪಂಚದೆಲ್ಲೆಡೆ )


5. ಇಲ್ಲಿ ತುಂಬ ಭ್ರಷ್ಟಾಚಾರ ಆಗಿದೆ, ಅದಕ್ಕೆ ಸಾಕ್ಷಿ ಆಗಿ ನನ್ ಬಳಿ ಸಿಡಿ ಇದೆ ಅಂತ ಹೇಳಿ ಎರಡು ಬ್ಲಾಂಕ್ ಸಿಡಿ ಇಟ್ಕೊಂಡು ಮಾಧ್ಯಮದ ಮುಂದೆ ಪೋಸ್ ಕೊಡಿ.


6. ನಿಮಗೆ ಒಂದು ಅಕ್ಷರ ಬರೀಲಿಕ್ಕೆ ಬರದೆ ಇದ್ರೂ ಪರವಾಗಿಲ್ಲ, ಜನಪ್ರೀಯ ಕಾದಂಬರಿ ಕಾರ ಭ್ಯರಪ್ಪ ಅವರಿಗೆ ಬರೆಯಲು ಬರೋಲ್ಲ, ಅವರು ಕಾದಂಬರಿ ಕಾರ ನೆ ಅಲ್ಲ ಅನ್ನಿ!!!


7. ಒಂದಿಷ್ಟು ಲಕ್ಷ್ಮಿ ಪಟಾಕಿ ನ ಸೇರ್ಸಿ... ಯಾವುದಾದರು ಸರ್ಕಾರಿ ಕಚೇರಿ ಲಿ ಇಡಿ. ಬಾಂಬ್ ಎಸೈ ಗಿರೀಶ್ ಮಟ್ಟೆನವರ ತರ ಹೆಸರು ಬರುತ್ತೆ, ಅವರಂತೆ ಉದ್ದೇಶಗಳು ಇಲ್ಲದೆ ಹೋದ್ರು ನಿಮಗೆ ಪ್ರಚಾರ ಅಂತು ಸಿಗುತ್ತೆ. (ಗಿರೀಶ್ ಒರಿಜಿನಲ್ ಬಾಂಬ್ ಇಟ್ಟಿದ್ರು, ನೀವು ಅಂಥಹ ಸಾಹಸ ಮಾಡೋದು ಬೇಡ)


8. ಮುಂಗಾರು ಮಳೆ ಯಾ ಮೊಲ ನನ್ನ ಬಳಿ ಮಾರಟಕ್ಕೆ ಇದೆ ಅಂತ ಜಾಹಿರಾತು ಕೊಡಿ.


9.ರಸ್ತೆ ಮಧ್ಯೆ ಒಂದು ರುಬ್ಬೋ ಕಲ್ಲನ್ನ ನೆಟ್ಟು, ಅದಕ್ಕೆ ಹೂವು ಹಾರ ಹಾಕಿ, ಇದು ಉಧ್ಬವ ಮೂರ್ತಿ ಅಂತ ಪುಂಗಿ ಊದಿ. ಆಮೇಲೆ ಅದನ್ನ ಫೋಟೋ ತೆಗೆದು ಸ್ಕ್ಯಾನ್ ಮಾಡಿ, ಇದನ್ನ ೧೦ ಜನಕ್ಕೆ ೧೦ ನಿಮಿಷ ದಲ್ಲಿ ಇಮೇಲ್ ಮಾಡಿದ್ರೆ ನಿಮಗೆ ೧೦ ದಿನದಲ್ಲಿ ಪ್ರಮೋಷನ್ ಸಿಗುತ್ತೆ ಇಲ್ಲ ಅಂದ್ರೆ ೧೦ ನಿಮಿಷ ದಲ್ಲಿ ಫೈರ್ ಆಗ್ತೀರ ಅಂತ ಬರೆದು ಎಲ್ಲರಿಗೂ ಮೇಲ್ ಕಳ್ಸಿ.


10. ಯಾವುದಾದರು ವೆಬ್ ಸೈಟ್ ನಲ್ಲಿ ರೆಸಿಪಿ ಕದ್ದು, ಅದನ್ನ ಟಿವಿ ನಲ್ಲಿ ಹೊಸ ರುಚಿ ಅಂತ ಮಾಡಿ ತೋರಿಸಿ. ಟೇಸ್ಟ್ ನೋಡಿದವರ ಗತಿ ಗೋವಿಂದ. :)



ವಿನಂತಿ: ಇ ಐಡಿಯಾ ಉಪಯೋಗಿಸಿ ನೀವು ಜನಪ್ರೀಯ ಆಗಿ ನಾಳೆ ಮಂತ್ರಿಯೊ ಏನಾದ್ರು ಆದ್ರೆ ನನ್ನ ಮೇಲೆ ಕೇಸು ಹಾಕಬೇಡಿ. ಯಾಕೆಂದರೆ ಇದರಲ್ಲಿ ರಾಣಿ ಮತ್ತು ಚಂದ್ರು ಕೂಡ ಸಹ ಭಾಗಿ ಗಳು ಆಗಿದ್ದಾರೆ ಹಾಗು ಇ ಐಡಿಯಾ ಗಳಿಂದ ಆಗುವ ಪರಿಣಾಮಗಳಿಗೆ ನಾವು ಜಾವಬು ದಾರರಲ್ಲ.

Thursday, May 28, 2009

ಭರತ ದೇಶದ ಚುನಾವಣಾ ಕಥೆಯು

ಕಲಿಯುಗದ 2065 ವಿರೋಧಿ ನಾಮ ಸಂವತ್ಸರ ದಲ್ಲಿ ಭರತ ಭೂಖ೦ಡದಲ್ಲಿ ಮಹಾ ಚುನಾವಣೆ ಯೊಂದು ನಡೆಯಿತಂತೆ. ಭೂದೇವಿಯಿ೦ದ ನೇರ ನೇಮಕಾತಿ ಆಗಿದ್ದ, ಅರ್ಥಾತ್ ಮಣ್ಣಿನ ಮಗ ನ ಬಳಗವು 33 ಕೊಟಿ ದೇವತೆ ಗಳನ್ನು ಬಗೆ ಬಗೆಯಾಗಿ ಆರಾಧಿಸುತ್ತಾ ವಿಜಯಲಕ್ಷ್ಮಿಯ ಕೈ ಪಿಡಿದು, ಭರತ ರಾಜ ನ ಕುರ್ಚಿಯನ್ನೆರಲು ಇನ್ನಿಲ್ಲದ ಕಸರತ್ತು ಗಳನ್ನು ಮಾಡುತ್ತಿದ್ದನಂತೆ.



ಆಳುವ ಪಕ್ಷಕ್ಕು, ತೆಗಳುವ ಪಕ್ಷಕ್ಕು ಯುದ್ದ ಗೆಲ್ಲುವ ನಂಬಿಕೆ ಇಲ್ಲವಾದ್ದರಿಂದ ಸನ್ ಆಫ್ ಸಾಯಿಲ್ ನು ಮಧ್ಯ ರಾಜ್ಯದ ಮಾಯಾಂಗನೆ ಯನ್ನು, ಪಶ್ಚಿಮದ ಕ್ಯಾರೆಟ್ಟು ಮತ್ತು "ವೃ೦ದಾ" ವನ ವನ್ನು ಹೆಗಲಿಗೇರಿಸಿ ಸೇನೆಯನ್ನು ಅಣಿಗೊಳಿಸಿದನಂತೆ. ಮಹಾ ಸಜ್ಜನನೂ , ಪ್ರಾಮಾಣಿಕನು, ದೇಶ ಭಕ್ತನು ಆದ ಅವನು ತನ್ನ ಇಡೀ ಪರಿವಾರವನ್ನೇ ಭರತ ಭೂಖ೦ಡಕ್ಕೆ ಮೀಸಲಿಟ್ಟಿದ್ದ ನಂತೆ.



ತನ್ನ ಕೊನೆಯ ಚುನಾವಣೆಯೆಂದು ಘೋಷಿಸಿ, ಕೈಲಾದಷ್ಟು ದಿನ ಮಣ್ಣಿನ ಸೇವೆ ಮಾಡಿ, ತಾಯಿಯ ಋಣ ತೀರಿಸಲು ಪ್ರಯತ್ನ ಪಡುವುದಾಗಿ ಘೊಷಿಸಿದ್ದ ಮಣ್ಣಿನ ಮಗನು, ಚುನಾವಣೆ ಗೆಲ್ಲಲು ಹಣೆಯ ಮೇಲೆ ಬರೆಯ ಬಹುದಾದಂತ ಪೆನ್ನು ಪಿಡಿದಿರುವ ಭ್ರಹ್ಮ ನ ತಪ್ಪಸ್ಸು ಆರಂಬಿಸಿದನಂತೆ, ದೈವ ವನ್ನು ಸಂತೃಪ್ತಿಗೊಳಿಸಲು ಕುರಿ, ಟಗರು ಮುಂತಾದ ಆಹಾರ ಪದಾರ್ಥ ಗಳನ್ನು ಕೊಟ್ಟು, ಅವನಿಗೆ ಚಿಕನ್ 65 ರುಚಿ ತೋರಿಸಿ, ಜೊತೆಗೊಂದು ರಾಗಿ ಮುದ್ದೆ ಯನ್ನು ಇತ್ತು ನೈವೇದ್ಯ ಮಾಡಿದನಂತೆ. ನಂತರ ಥೇಟ್ ಕನ್ನಡ ಸಿನೆಮಾ ದ ತರ ಚಿತ್ರ ನಟಿಯಿ೦ದ ಒಂದು ಐಟಮ್ ಸಾಂಗು ಮಾಡಿಸಿ, ಸಂಗೀತ-ನಾಟ್ಯಂ ಸಮರ್ಪಯಾಮಿ ಅಂದನಂತೆ. ಆಶರೀರ ವಾಣಿಯೊಂದು ತಥಾಸ್ತು ಎಂದು ಮೊಳಗಿಯೂ ಬಿಟ್ಟಿತಂತೆ.



ಇತ್ತ ತೆಗಳೋ ಪಕ್ಷದವರು ಮಲೆನಾಡಿನಲ್ಲಿ ಹೋಮ ಹವನ ಮಾಡಿ, ದೇವರಿಗೆ ಪೂಸಿ ಹೊಡೆಯಲು ಪ್ರಯತ್ನಿಸಿದರ೦ತೆ. ಮತದಾರ ಪ್ರಭುಗಳಿಗೆ, ಕೈಗೆ ಬಳೆ, ಉಡಲು ಸೀರೆ ಕೊಟ್ಟು ಮತ ಯಾಚನೆ ಮಾಡಿಠಂತೆ. ಆದರೆ ಅಳುವ ಪಕ್ಷ ಮಾತ್ರ ಜನರ ಕಿವಿಗೆ ಚಂದ ಚಂದ ದ ಹೂವು ಗಳನ್ನು ಮಾಡಿ ಇಟ್ಟು ವಿಶ್ರಮಿಸಿದರಂತೆ.



ಅಂತೂ ಚುನಾವಣೆಗಳು ನಡೆದು ಆಡಳಿತ ಪಕ್ಷವು ವಿಜಯಲಕ್ಷ್ಮಿಯನ್ನು ಅಪ್ಪಿಕೊಳ್ಳಲು ಸಫಲರಾದರಂತೆ.ತೆಗಳುವ ಪಕ್ಷಕ್ಕೆ ಇದರಿಂದ ಭಾರಿ ಖೇದ ವಾಗಿ ನೇರವಾಗಿ ಭವಿಷ್ಯ ಪ್ರವಚಕ ರಾದ ಶಾರದೆ ಪುತ್ರ ನ ಬಳಿ ಸಾಗಿದರಂತೆ. ಇವರ ದುಃಖವನ್ನು ಆಲಿಸಿದ ಅವರು, ಇದಕ್ಕೆ ರಾಹುಕಾಟ ವೆಂದು ಹೇಳುತ್ತ “ತಪ್ಪು ನಿಮ್ಮದೇ, ಭೂದೇವಿಯನ್ನು ಕೊಡುತ್ತಾ, ಸರಸ್ವತಿ ಪುತ್ರರಾಗಿರುವರಿಂದ ನೀವು ಆಪರೇಶನ್ ಅನ್ನು ಮಾಡಿದ್ದಲ್ಲಿ, ಯಾವಾಗಲು ರಿನ್ ಶುಭ್ರತೆಯ ರಾಹುಲನು ನಿಮ್ಮ ಪಕ್ಷಕ್ಕೆ ತರಬಹುದಿತ್ತೆಂದು ಹೇಳಿ, ಶೃಂಗೇರಿ ಗೆ ಪುಷ್ಪಕ ವಿಮಾನ ಏರಿದರಂತೆ.”



ಇತ್ತ ಮಣ್ಣಿನ ಮಗ ವಿಷಯವನ್ನು ತಿಳಿದು ಸೂತ್ರಧಾರನ ಮೇಲೆ ಕೆಂಡಾ ಮಂಡಲ ವಾದನಂತೆ. ಭಕ್ತನನ್ನು ಮಿಸ್ ಮಾಡಿಕೊಂಡರೆ, ಅವನ ಪಾರ್ಟೀಯವರು ಯಾರೂ ಮುಂದೆ ಹುಂಡಿ ಗೆ ಹಣ ಹಾಕುವುದಿಲ್ಲವೆಂದು ಬೆದರಿದ ಭಗವಂತನು ಭೂದೇವಿಯ ಪುತ್ರ ನಿಗೆ ತನ್ನ ದರುಶನ ಕೊಟ್ಟು ಕಾರಣ ಪೇಳಲು ಶುರು ವಿಟ್ಟ ನಂತೆ . ನೀನು ನನ್ನನ್ನು ಪೂಜಿಸಿ ನನ್ನ ಮತ್ತೆ ಮಗನನ್ನು ಗೆಲ್ಲಿಸೆ೦ದು ಪೂಜಿಸಿದೆ, ಇಷ್ಟ ಪದಾರ್ಥಗಳನೆಲ್ಲ ನೈವೇದ್ಯ ಮಾಡಿದೆ, ಸಂತೃಪ್ತ ಗೊಂಡ ನಾನು ಖುಶಿ ಜಾಸ್ತಿ ಆಗಿ ಒಂದು ಹೆಚ್ಚಿಗೆ ಸೀಟ್ ಕೂಡ ಫ್ರೀ ಆಗಿ ಕೊಟ್ಟಿದ್ದೇನೆ ಎಂದು ಹೇಳಿದನಂತೆ. ನೀನು ಗೆಲ್ಲಲಿ ಎಂದು ಪ್ರಾರ್ಥಿಸಿದೆಯೇ ಹೊರತು ಆಡಳಿತ ಪಕ್ಷ ಸೋಲಲಿ ಎಂದು ಚಿಕನ್ 65 ನೈವೇದ್ಯ ಮಾಡಿರಲಿಲ್ಲ ವೆಂದು…. ಅದಕ್ಕೆ ಅವರು ಗೆದ್ಡಿದ್ದಾರೆ ಎಂದು ಹೇಳುತ್ತ ಅ೦ತರ್ಧಾನ ನಾದನ೦ತೆ .ಇಲ್ಲಿಗೆ ಕಥೆಯೂ ಸಮಾಪ್ತಿಯು.....

Sunday, May 17, 2009

ಸುಖ ಸಂಸಾರಕ್ಕೆ ಸಪ್ತ ಸೂತ್ರಗಳು.






ಇತ್ತೀಚೆಗೆ ದೇಶದಲ್ಲಿ ವಿವಾಹ ವಿಚ್ಚೇದನ ಗಳು ಜಾಸ್ತಿ ಆಗ್ತಾ ಇದೆ ಅಂತ ಸುದ್ದಿ. ಮದುವೆ ಆಗಿ 3-4 ವರ್ಷದ ನಂತರ ನಿನ್ ವ್ಯಾಲಿಡಿಟಿ ಮುಗೀತು ಅಂತ ಬೇರೊಬ್ಬ ಸಂಗಾತಿ ನ ಹುಡುಕೋದು ಸದ್ಯದ ಫ್ಯಾಶನ್. ಹೀಗೆ ಮಾಡುತ್ತಾ ಹೋದರೆ, ಮುಂದೊಮ್ಮೆ ಫಾದರ್ಸ್ ಡೇ, ಮದರ್ಸ್ ಮಾಡುವ ಹಾಗೆ ಗಂಡಂಡಿರ ದಿನ, ಹೆಂಡತಿರ ದಿನ ಅಂತ ಮಾಡಬೇಕಾಗಬಹುದು.

ಆದ್ದರಿಂದ ಮುಂದಾಗಬಹುದಾದ ಅಪಾಯವನ್ನು ತಪ್ಪಿಸಿ ಸಂಸಾರವೆಂಬ ನೌಕೆಯನ್ನು ಸುಖಮಯವಾಗಿ ನಡೆಸುವುದಕ್ಕೆ ಕೆಲವು ಸೂತ್ರಗಳನ್ನು ಪರಿಣಿತರೊಂದಿಗೆ ಚರ್ಚಿಸಿ ಕೆಳಗೆ ಕೊಡಲಾಗಿದೆ.

1. ಮನೆಯ ಯಜಮಾನರು ಯಾರು ಅಂತ ಯಾವತ್ತೂ ಚರ್ಚೆ ಮಾಡೋಕೆ ಹೋಗಬೇಡಿ!! ನೀವಲ್ಲ ಅಂತ ಗೊತ್ತಿರುವಾಗ ವಿಷ್ಯ ಕೆದಕಿ ಜಗಳ ಯಾಕೆ?


2. ಒಬ್ಬ ಶಾಸಕ ಕೈ ಕೊಟ್ಟರೆ ಸೆಫ್ಟಿ ಗೆ ಇರಲಿ ಅಂತ ಆಪಶನ್ ಕಮಲ ಮಾಡಿದ ಹಾಗೆ, ಆಪಶನ್ ಹೆಂಡತಿ / ಗಂಡ ಮಾಡಬೇಡಿ!!! (ಎನ್ ಡಿ ಎ, ಯು ಪಿ ಯೆ, ತೃತೀಯ,,,,, ತರ ಅಕ್ರಮ ಕೂಡಿಕೆ ಬೇಡ )


3. ಮನುಷ್ಯ ಕುಡಿದಾಗ ಸತ್ಯ ಹೇಳ್ತಾನೆ ಅಂತೆ, ಆದ್ದರಿಂದ ಮತ್ತೇರಿದಾಗ ನಿಮ್ಮ ಸಂಗಾತಿ ಹತ್ತಿರ ಕಾಲೇಜ್ ಜೀವನದ ಬಗ್ಗೆ ಮತಾಡ ಬೇಡಿ. ಕೆಲವೊಂದು ಕೃಷ್ಣ ಲೀಲೆ ಗಳು ಹೊರಬಾರದೇ ಇರುವುದು ಉತ್ತಮ ಅಲ್ಲವೇ.


4. ನಿಮ್ ಮೈಲ್ ಇಡಿ ಗೆ ಪಾಸ್ ವರ್ಡ್ ಆಗಿರೋ ನಿಮ್ ಹಳೆ ಗರ್ಲ್ ಫ್ರೆಂಡ್ / ಬಾಯ್ ಫ್ರೆಂಡ್ ಹೆಸ್ರನ್ನ ತೆಗೆದು ಬಿಡಿ!! ಯಾವತ್ತಾದ್ರೂ ನಿಮ್ ಪಾಸ್‌ವರ್ಡ್ ಗೊತ್ತಾಗಿ, ಗಲಾಟೆ ಆಗಬಹುದು.


5. ಹೆಂಡತಿ ಹಾಡು ಹೇಳೋಕೆ ಶುರು ಮಾಡಿದ್ರೆ ಗಂಡ ಹೊರಗೆ ಹೋಗಿ ಕುಳಿತು ಕೊಳ್ಳೋದು ಒಳಿತು, ಇದರಿಂದ ನೀವು ಹೆಂಡತಿಗೆ ಹೊಡಿತ ಇದ್ದೀರ ಅಂತ ಜನ ತಪ್ಪು ತಿಳಿಯೋಲ್ಲ.


6. ಹೆಂಡತಿಗೆ ಸಿಟ್ಟು ಬಂದಾಗ ಅಡುಗೆ ಮನೆಗೆ ಬಿಡಬೇಡಿ…ಅಲ್ಲಿ ಅವರ ವೆಪನ್ಸ್ ಇರ್ತವೆ ಲೈಕ್ ಲಟ್ಟಣಿಗೆ , ಮಗಚೋ ಕೈ…


7. ಸಾಫ್ಟ್ ವೇರ್ ಇಂಜಿನಿಯರ್ ನ ಮದುವೆ ಆಗೋದು ಒಳ್ಳೆಯದು ಅನ್ಸುತ್ತೆ, ಅವರು ಹಗಲು ಯಾವಾಗ್ಲೂ ಓಫೀಸ್ ನಲ್ಲೇ ಇರ್ತಾರೆ, ವೀಕ್ ಎಂಡ್ ಮನೇಲಿ ಇದ್ರು ಲ್ಯಾಪ್ ಟಾಪ್ ಹಿಡಿದು ಕೆಲ್ಸಾ ಮಾಡ್ತಾ ಇರ್ತಾರೆ, ಇವರಿಗೆ ಜಗಳ ಮಾಡೋ ಅಷ್ಟು ಟೈಮ್ ಕೂಡ ಇರೋಲ್ಲ!!!!






ವಿಶೇಷ ಸೂಚನೆ: ಈ ಸೂತ್ರ ಗಳು ಕುಮ್ಮಿ ಮತ್ತು ರಾಧಿಕಾಗೆ ಸಂಬಂಧಿಸಿರುವುದಿಲ್ಲ ಹಾಗೆಯೇ ಗಣಿ ರೆಡ್ಡಿ ಗಳಿಗು ಕೂಡ.

Thursday, May 7, 2009

ಲಲ್ಲೂ, ಮಾಯಾ ಪ್ರಧಾನಿ ಆದ್ರೆ?

ಭಾಗಶಃ ಮುಂದಿನ ಕೆಲವು ದಿನಗಳು ಡೆಲ್ಲಿ ಯಲ್ಲಿ ಕುರ್ಚಿ ಗಾಗಿ ಬಹು ದೊಡ್ಡ ಸಂಗ್ರಾಮ, ಹಾಗೂ ಹೋರಾಟವೇ ನಡೆಯಲಿದೆ. ಗೌಡ ರಿಂದ ಕಾರಟ್ ವರೆಗೂ, ಜಯ ಇಂದ ಮಾಯಾ ವರೆಗೂ ಎಲ್ಲರಿಗೂ ಪ್ರಧಾನ ಮಂತ್ರಿ ಹುದ್ದೆ ಮೇಲೆ ಕಣ್ಣು. ದೇಶ ಸೇವೆ ಮಾಡಲು ಇಷ್ಟೊಂದು ಜನ ತುದಿ ಗಾಲಲ್ಲಿ ನಿಂತಿರುವುದು ಭಾರತೀಯರಾದ ನಮ್ಮ ಸೌಭಾಗ್ಯ!! (ಯಾವ ಆಂಗಲ್ ನಿಂದ ಸೌಭಾಗ್ಯ ಅಂತ ಕೇಳಬೇಡಿ)


ಸರಿ, ಎಲ್ಲ ಓಕೆ, ವಿಷ್ಯಕ್ಕೆ ಬಂದಿಲ್ಲ ಯಾಕೆ ಅಂತೀರಾ? ಇದೋ ಬಂದೆ. ಈ ಕೆಳ ಕಂಡ ಮಹನೀಯರು ಪ್ರಧಾನಿ ಆದರೆ ಏನಾಗ ಬಹುದು ಅನ್ನೋದು ಈಗಿನ ಚಿಂತನೆ, ಹಾಗೂ ಕಲ್ಪನೆ.


ಮೊದಲಿಗೆ ಮಣ್ಣಿನ ಮಗ ದೇವೆ ಗೌಡ್ರು:













1. ಆಫೀಸ್ ನಲ್ಲಿ ನಿದ್ದೆ ಮಾಡೋರಿಗೆ ನಿದ್ದೆ ಬತ್ಯೆ


2. ಶಾಲೆ ಗಳಲ್ಲಿ ಬಿಸಿ ಊಟಕ್ಕೆ ರಾಗಿ ಮುದ್ದೆ ಮತ್ತೆ ಕೋಳಿ ಸಾರು!!!

3. ಕುಮಾರ ಸ್ವಾಮಿ ಮುಖ್ಯ ಮಂತ್ರಿ ಯನ್ನಾಗಿ ಮಾಡೋಕೆ ಎಲ್ಲ ಪ್ರಯತ್ನ, ರೇವಣ್ಣ ಎಲ್ಲಾದ್ರೂ ರಾಜ್ಯ ಪಾಲ, ಹಾಗೂ ಕುಮಾರಣ್ಣನ ನ ಮಗ ಹರದಾನ ಹಳ್ಳಿ ಪಂಚಾಯಿತಿ ಅಧ್ಯಕ್ಷ ಆಗ್ತಾನೇ.


4. ರಾಧಿಕ ಬಂದು ಪುಕ್ಕಟೆ ಡ್ಯಾನ್ಸ್ ಮಾಡಲಿ ಅನ್ನೋದು ನಮ್ಮ ಶುದ್ದ ಪೋಲಿ ಬೇಡಿಕೆ ಬಿಡಿ.




ದೊಡ್ಡ ರಾಜ್ಯದ ಮುಖ್ಯ ಮಂತ್ರಿ, ಮಾಯವತಿ ಪ್ರಧಾನಿ ಆದರೆ ಹೇಗೆ?ಅದು ಹೇಗೂ ಇರಲಿ, ನಮ್ಮೆಲ್ಲ ಸರ್ಕಾರೇತರ ಸಂಸ್ಥೆಗಳಿಗೆ 3 ದಿನ ಎಕ್ಸ್‌ಟ್ರಾ ರಜೆ ಸಿಗುತ್ತೆ. (ಸರ್ಕಾರಿ ಸಂಸ್ಥೆಗಳಿಗೆ ಬೀದಿ, ಸುಲಬಕ್ಕೆ ಸಿಗುತ್ತೆ)













1. ಅಂಬೇಡ್ಕರ್ ಜಯಂತಿ


2. ಕನ್ಶಿರಮ್ ಜಯಂತಿ

3. ಮಾಯವತಿ ಹುಟ್ಟಿದ ಹಬ್ಬ



ಲಲ್ಲೂ ಪ್ರಸಾದ್ ಯಾದವ್ ಆದ್ರೆ?












1. ಗಂಡ ತಪ್ಪು ಮಾಡಿ ಜೈಲಿಗೆ ಹೋದ್ರೆ ಹೆಂಡತಿಗೆ ಆ ಕೆಲ್ಸಾ (ಲಾಲೂ ಕುಟುಂಬವೇ ಇದಕ್ಕೆ ಆದರ್ಶ)


2. ಹಿಂದೆ ಮೇವು ಹಗರಣ ಮಾಡಿದ ಹಾಗೆ, ಈಗ ಪಶು ಹಗರಣ!!!!

3. ಅಕಸ್ಮಾತ್ ನಾವೇನಾದ್ರೂ ತಪ್ಪು ಮಾಡಿದ್ರೆ ನಮ್ ಮೇಲೆ ರೋಡ್ ರೋಲರ್!!



ಸತ್ಯಂ ರಾಜು ಪ್ರಧಾನಿ ಆದರೆ?

1. INDIA ಹೋಗಿ AIDNI ಆಗುತ್ತೆ!!!


2. ಶ್ರೀನಿವಾಸ್ ಹೊಸ ಅರ್ಥ ಸಚಿವ!!!


3. ಭಾರತ ಅಭಿವೃದ್ದಿ ಹೊಂದಿದ ದೇಶ ಅಂತ ಕಾಗದದಲ್ಲಿ ಘೊಷಣೆ.




ಇನ್ನೂ ನಮ್ಮ ಸಾಫ್ಟ್‌ವೇರ್ ಇಂಜಿನಿಯರ್ ಆದ್ರೆ ಏನಾಗ ಬಹುದು?

1. ಪ್ರತಿಯೊಬ್ಬರಿಗೂ ಓರ್ಕುಟ್ ಅಕೌಂಟ್ ಕ್ರಿಯೇಟ್ ಮಾಡಲಾಗುತ್ತದೆ.


2. ಈ ವೋಟಿಂಗ್ ಸೌಲಬ್ಯ!!!

3. ತಪ್ಪು ಮಾಡಿದವರಿಗೆ ಜೈಲಿಗೆ ಕಳಿಸೋ ಬದಲು, ಅವರ ಕಂಪ್ಯೂಟರ್ ಗೆ ಒಂದಿಷ್ಟು ವೈರುಸ್ ಬಿಡೋದು!!!



ಮೇಲಿನದೆಲ್ಲವು ಸತ್ಯ ಆದರೆ, ಅದಕ್ಕೆ ನಾನು ಜವಾಬುದಾರ ಅಲ್ಲ. ಸತ್ಯ ಆದರೆ ಕಾಕತಾಳೀಯವೂ ಅಲ್ಲ.

Saturday, April 11, 2009

ಬೇಗ ಎದ್ದೆಳೊ ಸುಲಭೊಪಾಯಗಳು!!

ಬೆಳಿಗ್ಗೆ ಎದ್ದು, ವ್ಯಾಯಾಮ, ಯೋಗ, ಜಾಗಿಂಗ್ ಮಾಡಿದ್ರೆ ಆರೋಗ್ಯ ಚೆನ್ನಾಗಿ ಇರುತ್ತೆ ಅಂತ ಎಲ್ಲ ಹೇಳ್ತಾರೆ. ಅದನ್ನು ನಾವು ಕೂಡ ಮುಲಾಜಿಲ್ಲದೇ ಒಪ್ಪಿಕೊಂಡಿದ್ದೀವಿ. ನಂಗೆ ಯೋಗ, ಜಾಗಿಂಗ್ ಬಗ್ಗೆ ಏನು ತಕರಾರಿಲ್ಲ, ತಕರಾರು ಇರೋದು ಬೆಳಿಗ್ಗೆ 4-5 ಗಂಟೆ ಅನ್ನೋದರಲ್ಲಿ!!!

ಆದ್ದರಿಂದ ಬೆಳಿಗ್ಗೆ ಬೇಗ ಎದ್ದೆಳೋದು ಹೇಗೆ ಅಂತ ಸ್ನೇಹಿತ ರೋಡಗೂಡಿ ಯೋಚಿಸಿ, ಚರ್ಚಿಸಿ, ಚಿಂತಿಸಿ ಕಂಡು ಹಿಡಿದಿರುವ ಮಾರ್ಗೋಪಾಯ ಗಳು ಇಂತಿವೆ!!

1. ಮನೆ ತುಂಬಾ ತಿಗಣೆ, ಸೊಳ್ಳೆ ಸಾಕಿ, ಅವು ಕಚ್ಚಿ, ನಿಮ್ಗೆ ನಿದ್ದೆ ಮಾಡೋಕೆ ಬಿಡದೆ, 4 ಕೆ ಏನು, 3 ಕೆ ಎದ್ದು ಓಡ್ತೀರ.. ಬೇಕಿದ್ರೆ ನಿಮ್ಮ ಶೂಸ್ ನಲ್ಲೂ ಕೂಡ ತಿಗಣೆ ಹಾಕ್ಕೋಳಿ, ನಿಮ್ಮ ರನ್ನಿಂಗ್ ಸ್ವಲ್ಪ ಸ್ಪೀಡ್ ಆಗಿ ಇರುತ್ತೆ.


2. ಗರ್ಲ್ ಫ್ರೆಂಡ್, ಬಾಯ್ ಫ್ರೆಂಡ್ ಗಳಿಗೆ 4 ಕೆ ಕಾಲ್ ಮಾಡೋಕೆ ಹೇಳೋದು.. ಕಾಲ್ ಮಾಡ್ಥಾವೆ.. ಎದ್ದಿಲ್ಲ ಅಂದ್ರೆ ಆಮೇಲೆ ಮಾರಿ ಹಬ್ಬ ಇದ್ದಿದ್ದೆ. (ಇದರಲ್ಲಿ ಸ್ವಲ್ಪ ರಿಸ್ಕ್ ಇದೆ ಅನ್ಸುತ್ತೆ, ಆದ್ರೂ ಅದು ಡಿಪೆಂಡ್ ಆಗುತ್ತೆ!!)


3. ನಿಮ್ ಆಫೀಸ್, ನಿಮ್ ಮ್ಯಾನೇಜೇರ್, ಡೆಡ್ ಲೈನ್ ಗಳ ಬಗ್ಗೆ ಯೋಚಿಸಿ, ಬರಲಿರೋ ಪರ್ಫಾರ್ಮೆನ್ಸ್ ರಿವ್ಯೂ ಬಗ್ಗೆ ಯೋಚಿಸಿ, ದೆವ್ರಾಣೆ ನಿದ್ದೆ ಬರೋಲ್ಲ.


4. ಚಿಕ್ಕ ಮಕ್ಕಳು ಆಟ ಆಡೋ ಎಲೆಕ್ಟ್ರಾನಿಕ್ ಟ್ರೈನ್ ತಂದು, ಟೈಮ್ ಫಿಕ್ಸ್ ಮಾಡಿ, ಕೀ ಕೊಟ್ಟು ಮುಖಕ್ಕೆ ಬಡಿಯೋ ಹಾಗೆ ಇಟ್ಕೊಂಡು ಮಲಗಿ, ಬೆಳಿಗ್ಗೆ ಅದು ಬಂದು ಹೊಡೆದು, ಆಕ್ಸಿಡೆಂಟ್ ಆಗಿ, ನಿಮ್ ಮೂತಿ ಸೊಟ್ಟ ಆದ್ರೂ ಪರವಾಗಿಲ್ಲ. ಆಮೇಲೆ ನಿಮ್ಗೆ ನಿದ್ದೆ ಅಂತೂ ಬರೋಲ್ಲ!!!


5. ಯಾವುದಾದ್ರೂ ದೇವಸ್ಥಾನ, ಮಸೀದಿ ಹತ್ತಿರ ಮನೆ ಮಾಡಿ. ಅವರು ಬೇಳಿಗೆ ನಾಲ್ಕು ಗಂಟೆ ಗೆ ಭಜನೆ ಶುರು ಮಾಡ್ತಾರೆ, ನಿಮ್ಗೆ ಎಚ್ಚರ ಆಗುತ್ತೆ!!!


6. ನಿದ್ದೆ ಮಾಡದೇ ಇದ್ರೆ ಆಯಿತು!!! ಆವಾಗ ಬೆಳಿಗ್ಗೆ ಎಳೊ ತೊಂದರೆ ನೇ ಇರೋಲ್ಲ. (ಎಂತ ಭಯಾನಕ ಐಡಿಯಾ ಅಲ್ವ?)


7. ಮಲಾಗೊ ಕಿಂತ ಮುಂಚೆ ನ್ಯೂಸ್ ಪೇಪರ್ಸ್ ನ ಓದಬೇಡಿ, ಅದರಲ್ಲಿ ಮಣ್ಣಿನ ಮಗ, ಭವಿಷ್ಯ ಪ್ರಧಾನಿ ಎಂದು ಬಿಂಬಿತ ದೇವೆ ಗೌಡ್ರು ನಿದ್ದೆ ಮಾಡ್ತಾ ಇರೋ ಫೋಟೋ ಇದ್ರು ಇರಬಹುದು!!! (ಇದು ಅವರ ಕನಸು, ನನಸು ಆದ್ರೂ ಆಗಬಹುದು.. ಯಾರಿಗೆ ಗೊತ್ತು!!!) ಫೋಟೋ ನೋಡಿದ್ರೆ ನಿಮ್ಗೆ ಬೆಳಿಗ್ಗೆ ಎಚ್ಚರ ಆಗುತ್ತೆ ಅನ್ನೋದಕ್ಕೆ ಏನು ಗ್ಯಾರೆಂಟೀ ಇಲ್ಲ.


8. ಹೊಸ ರುಚಿ ಟ್ರೈ ಮಾಡಿ ತಿನ್ನಿ, ಆದ್ರೆ ಒಗ್ಗರಣೆ ಗೆ ಹರಳೆನ್ನೆ ಹಾಕಿ ಅಷ್ಟೇ. (ಉಳಿದಿದ್ದೆಲ್ಲ ಆದಾಗೇ ಆಗುತ್ತೆ ಬಿಡಿ)


9. ಒಬ್ಬ / ಒಬ್ಬಳು ಕೆಟ್ಟ ಸಂಗಾತಿಯನ್ನ ಹುಡುಕಿ ಮದುವೆ ಆಗಿ ಬಿಡಿ, ಆಗ ಜೀವನ ದಲ್ಲಿ ಸುಖ, ಶಾಂತಿ, ನೆಮ್ಮದಿ ಎಲ್ಲ ಕಾಣೆಯಾಗಿ... 24/7 ಎದ್ದಿರುತ್ತೀರ!!


10. ಇಲ್ಲ ಅಂದ್ರೆ ನಂಗೆ ತಿಂಗಳಿಗೆ 25 ಸಾವಿರ ದುಡ್ಡು ಕೊಡಿ, ಬೆಳಿಗ್ಗೆ ದೊಣ್ಣೆ ತಗೊಂಡು ಬಂದು, ಬಡಿದು ಎಬ್ಬಿಸುತ್ತಿನಿ!!! (ಇದು ಮಾತ್ರ ಕಂಡಿತ ವರ್ಕ್ ಆಗುತ್ತೆ... )


ಅರ್ಪಣೆ: ನಿದ್ರೆ ಗುಮ್ಮ ಚಂದ್ರು, ಆಫೀಸ್ ನಲ್ಲೂ ನಿದ್ದೆ ಮಾಡೋ ಚೀಕು ಹಾಗೂ 24/7 ತೂಕಡಿಸುತ್ತಲೇ ಇರುವ ಕಿತ್ತೂರ್ ರಾಣಿ ಚೆನ್ನಮ್ಮ ನಿಗೆ!!