Saturday, August 30, 2008

ಆಫೀಸ್ ನಲ್ಲಿ ಟೈಮ್ ಪಾಸ್ ಮಾಡೋ ವಿಧಾನ ಗಳು

ನೋಡಿ ನಮ್ಮ ಬ್ಯಾಡ್ ಲಕ್ ಎಷ್ಟಿದೆ ಅಂದ್ರೆ ವಾರಕ್ಕೆ ಒಂದೇ ಒಂದು ಶನಿವಾರ/ ಭಾನುವಾರ!!!!! ಉಳಿದ ದಿನಗಳು ಮಾಡೋ ಕೆಲಸಗಳು ಕೂಡ ಅಷ್ಟರಲ್ಲೇ ಇರುತ್ತೆ ಅನ್ನೋದು ನಿಜ. ಅ ಉಳಿದ ೫ / ೬ ದಿನಗಳನ್ನ ಹೇಗೆ ಆಫೀಸ್ ನಲ್ಲಿ ಕಳೆಯೋದು ಅನ್ನೋದರ ಬಹಳ ಚಿಂತನೆ ನಡಿಸಿ, ಸಂಶೋಡಿಸಿಇ ಕೆಳಕಂಡ ಉಪಾಯಗಳನ್ನು ಹುಡುಕಿರುವೆ!!! ನಿಮಗೂ ಮಾಡಲು ಕೆಲಸವಿಲ್ಲದೆ ಇದ್ದಾಗ, ಇದ್ದರೂ ಮಾಡುವ ಮನಸಿಲ್ಲದೇ ಇದ್ದಾಗ, ಇದನ್ನು ಪ್ರಯೋಗಿಸ ಬಹುದು. ಇವೆಲ್ಲವೂ ಆಫೀಸ್ ಎಂಬ ಪ್ರಯೋಗ ಶಾಲೆಯಲ್ಲಿ ಯಶಸ್ವಿ ಆಗಿದೆ ಎನ್ನುವುದನ್ನು ತಿಳಿಸಲು ಇಚ್ಚಿಸುವೆ!!!1. ಬೆಳಿಗ್ಗೆ ಬಂದ ಕೂಡಲೇ ಟೀ, ಕಾಫೀ ಮತ್ತೆ ತಿಂಡಿ ಗೆ ಸಾಕಷ್ಟು ಟೈಮ್ ತಗೋಳಿ

2. ಅವತ್ತು ಬಂದ ಎಲ್ಲ ಈಮೇಲ್ ನೋಡಿ, ಅದನ್ನ ಮತ್ತೆ ಎಲರಿಗೂ ಫಾರ್ವರ್ಡ್ ಮಾಡಿ.

3. ಆಫೀಸ್ ನಲ್ಲಿ ಯಾವ ಯಾವ ಹುಡುಗೀರು ಹೇಗೆ ಡ್ರೆಸ್ ಮಾಡಿ ಕೊಂಡು ಬಂದಿದ್ದಾರೆ ಅಂತ ಗಮನಿಸಿ

4.ಜಿ ಟಾಕ್, ಯಾಹೂ ಮೆಸೆಂಜರ್ ನಲ್ಲಿ ಲೊಗಿನ್ ಆಗಿರಿ

5. ಓರ್ಕುಟ್ ನಲ್ಲಿ ಯಾರು ಸ್ಕ್ರ್ಯಾಪ್ ಮಾಡದೇ ಇದ್ರೆ ನೀವೇ ಎಲರಿಗೂ ಸ್ಕ್ರ್ಯಾಪ್ಸ್ ಮಾಡಿ, ರಿಪ್ಲೈ ಗೆ ವೇಟ್ ಮಾಡಿ

6. ಸಾಕಷ್ಟು ಗೇಮ್ಸ್ ಆನ್‌ಲೈನ್ ನಲ್ಲಿ ಇರುತ್ತೆ, ಆಟ ಆದಿ, ನೆಟ್ ಕನೆಕ್ಶನ್ ಇಲ್ಲ ಅಂದ್ರೆ, ನಿಮ್ ಕಂಪ್ಯೂಟರ್ ನಲ್ಲಿ ಸಾಲಿಟೇರ್ ಅನ್ನೋ ಗೇಮ್ ಇದೆ ಅನ್ನೋದನ್ನ ಮರೀಬೇಡಿ.

7. ನಿಮ್ಮ ಪಕ್ಕದಲ್ಲಿ ಇರೋರಿಗೆ ಬಗ್ ಫಿಕ್ಸ್ ಮಾಡೋದಿಕ್ಕೆ ನಿಮ್ಮಿಂದ ಹೆಲ್ಪ್ ಬೇಕಾ ಕೇಳಿ, ಬಟ್ ಮಾಡಬೇಡಿ.

8. ನಿಮ್ ಮ್ಯಾನೇಜರ್ ಮೇಲೆ ಒಂದು ಒಳ್ಳೇ ಹಾಡನ್ನ ರೀಮಿಕ್ಸ್ ಮಾಡೋಕೆ ಆಗುತ್ತಾ ಟ್ರೈ ಮಾಡಿ

9. ಕಂಪ್ಯೂಟರ್ ನ ರಸ್ಟಾರ್ಟ್ ಮಾಡಿ, ಅದು ತಗೊಳೊ ಟೈಮ್ ನ ಕ್ಯಾಲ್ಕ್ಯುಲೇಟ್ ಮಾಡಿ

10. ಪರ್ಸನೆಲ್ ಮೈಲ್ ಅಂಡ್ ಅಫೀಶಿಯಲ್ ಮೇಲ್ಸ್ ನಲ್ಲಿ ಯಾವುದು ಸ್ಪೀಡ್ ಅಂತ ಚೆಕ್ ಮಾಡಿ.

11. ಆಫೀಸ್ ನಲ್ಲಿ ಯಾರು ಯಾರು ಕೆಲ್ಸಾ ಬಿಡಬೇಕು ಅಂತ ಇದ್ದಾರೆ ಅನ್ನೋದನ್ನ ಸರ್ಚ್ ಮಾಡಿ, ಆಕ್ಟ್ ಲೈಕ್ ಆ ಡೀಟೆಕ್ಟಿವ್ ಏಜೆಂಟ್.

12. ನಿಮ್ಮ ರೆಸ್ಯೂಮೆ ನ ಅಪ್‌ಡೇಟ್ ಮಾಡಿ

13. ಆಫೀಸ್ ಲೆಟರ್ ಹೆಡ್ ನ ಉಂಡೆ ಮಾಡಿ, ಡಸ್ಟ್ ಬಿನ್ ಗೆ ಥ್ರೋ ಮಾಡಿ. ( ಅಭಿನವ್ ಬಿಂದ್ರ ತರ ಗೋಲ್ಡ್ ಬರಬಹುದು)

14. ಆಫೀಸ್ ಫೋನ್ ಇರೋದು ನಿಮ್ಮ ಗರ್ಲ್ / ಬಾಯ್ ಫ್ರೆಂಡ್ ಜೊತೆ ಡೇಟ್ ಫಿಕ್ಸ್ ಮಾಡೋಕೆ ಅನ್ಸುತ್ತೆ...

15. ಆಫೀಸ್ ಟೈಮ್ 9 ಕ್ಕೆ ಇದ್ರೆ ಟ್ರ್ಯಾಫಿಕ್ ಜಾಮ್ ಪ್ರಯುಕ್ತ 10:30 ಆರ್ 11 ಕ್ಕೆ ಆಫೀಸ್ ಬರುವುದು.

16. ಎಲ್ಲರೂ ಆಫೀಸ್ ಗೆ ಬರುವ ಮುಂಚೆ ಅಂದ್ರೆ 8:45 ಗೆ ಆಫೀಸ್ ಗೆ ಬಂದು 7 ಕ್ಕೆ ಬಂದೆ ಅಂತ ಬೈ ಬಡ್ಕೊಂಡು ಬೇಗ ಮನೆಗೆ ಹೋಗೋದು.

17. ಬೇಗ ಆಫೀಸ್ ಬಂದ ದಿನ ಊಟಕ್ಕೆ 11 ಕ್ಕೆ ಹೋಗಿ ಒಂದು ಮಾರ್ನಿಂಗ್ ಶೋ ನೋಡಿ ಕೊಂಡು 2 ಕ್ಕೆ ವಾಪಸ್ ಆಫೀಸ್ ಗೆ ಬರೋದು

18. ಆಫೀಸ್ ನಲ್ಲಿ ಏಸೀ ಸರಿ ಇಲ್ಲ ಜಾಸ್ತಿ / ಕಮ್ಮಿ ಇದೆ ಅಂತ ಫೇಸಿಲಿಟೀ ಡಿಪಾರ್ಟ್‌ಮೆಂಟ್ ಗೆ ಫೋನ್ ಮಾಡಿ ಅವರ ತಲೆ ತಿನ್ನೋದು

19. ಪೇಪರ್ ನ ಪ್ರಿಂಟರ್ ನಲ್ಲಿ ಬೇಕಂತ ಜಾಮ್ ಮಾಡಿಸಿ.. ಹೀರೊ ತರಹ ಫೇಸಿಲಿಟೀ ಡಿಪಾರ್ಟ್ ಮೆಂಟ್ ನವರಿಗೆ ಕಾಲ್ ಮಾಡಿ ಪ್ರಿಂಟರ್ ರೇಪೇರಿ ಮಾಡಿಸೋದು.

20. ಟೆಸ್ಟ್ / ಡೆವೆಲಪ್ ಮಾಡೋ ಅಪ್ಲಿಕೇಶನ್ ಓಪನ್ ಮಾಡಿ ಅದ್ರ ಮದ್ಯ ಚಾಟ್ ವಿಂಡೊ ನ ಸಿಕ್ಕಿಸಿ ಚಾಟ್ ಮಾಡೋದು ( ಬ್ಯಾಕ್ ಗ್ರೌಂಡ್ ನಲ್ಲಿ ಅಪ್ಲಿಕೇಶನ್ ಇರುತ್ತೆ, ಫೋರ್‌ಗ್ರೌಂಡ್ ನಲ್ಲಿ ಚ್ಯಾಟ್ ವಿಂಡೊ / ಬ್ರೌಸರ್ ಇರುತ್ತೆ)

21. ಬೇರೆ ಕ್ಯೂಬಿಕಲ್ ಮೇಟ್ಸ್ ಗೆ ಯಾವುದೋ ಕಿತ್ತೋಡಾ ಫಿಲ್ಮ್ ಕಥೆ ಹೇಳೋದು.

22. ಇನ್ನೊಬ್ಬರ ಕ್ಯೂಬಿಕಲ್ ಗೆ ಹೋಗಿ ಅವರು ತಂದ ಟಿಫಿನ್ ಬಾಕ್ಸ್ ನಲ್ಲಿ ಏನಿದೆ ಅಂತ ಇನ್ವೆಸ್ಟಿಗೇಶನ್ ಮಾಡೋದು

23. ಆವ್ರು ಬಿಸೀ ಇದ್ದಾಗ ಹೋಗಿ ಹೋಗಿ ಸಿಲ್ಲೀ ಸಿಲ್ಲೀ ಆದ ಡೌಟ್ಸ್ ಕೇಳಿ ಅವರಿಗೆ ರೇಗಿಸಿ ಮಜ ತೊಗೋಳ್ಳೋದು

24. ಅವರಿಗೆ ವೀಕ್ ಎಂಡ್ ನೀನು ಹೇಗೆ ಕಳಿದೆ ಅನ್ನೋಬಗ್ಗೆ ಡೀಟೇಲ್ ಮಾಹಿತಿ ಕೊಟ್ಟು ಹುಚ್ಚು ಹಿಡಿಸೋದು

25. ಇನ್ನೂ ಟೈಮ್ ಪಾಸ್ ಆಗದೇ ಇದ್ರೆ... ಟೈಮ್ ಪಾಸ್ ಮಾಡೋ ಹೊಸ ವಿಧಾನ ಕಂಡು ಹಿಡಿದು ನಮಗೆ ತಿಳಿಸಿ!!!ನನ್ನೊಡನೆ ಸಂಶೋದನೆ ಮಾಡಿದ ರಾಣಿ, ಚೀಕು ಹಾಗು ನಾನು ಅತ್ಯುತ್ತಮ ಕೆಲಸಗಾರ ನೆಂದು ಕುರುಡು ನಂಬಿಕೆ ಯಿಂದ ನನ್ನನು ಅಷ್ಟಾಗಿ ಗಮನಿಸದೆ ಸಹಕರಿಸಿದ ಶ್ರೀಮಾನ್ / ಶ್ರೀ/ ಶ್ರೀಮತಿ .... ಮ್ಯಾನೇಜರ್ ಅವರಿಗೆ ನನ್ನ ಸಹಸ್ರ ವಂದನೆಗಳು!!!