Friday, September 18, 2009

ಕುಡುಕರು ಮತ್ತು ಕು.ರ.ವೇ


ಕಳೆದ ವಾರ ಕಛೆರಿ ಕೆಲ್ಸ ಮುಗಿಸಿ ಕೊ೦ಡು ಮನೆ ಕಡೆ ಹೊಗ್ತಾ ಇದ್ದೆ, ಮನೆ ಸಮೀಪನೆ ನೆ ಜನರೆಲ್ಲ ಗು೦ಪು ಗೂಡಿದ್ದರು, ಎನೆನೋ ಗುಸು ಗುಸು, ಕೆಲವರು ಗಾಬರಿಯಲ್ಲಿ, ಇನ್ನು ಕೆಲವರು ಮನೆ ಟೆರೇಸ್ ನಿ೦ದ ನೋಡ್ತಾ ಇದ್ದರು. ಒನ್ದು ಜೋರಾಗಿ ಹೆಣ್ಣು ದ್ವನಿ ಕೇಳುತ್ತಾ ಇತ್ತು, ಮದ್ಯೆ ಮದ್ಯೆ ಅಳು ಬೇರೆ, ಒಹ್ ಯಾವುದೊ ವರದಕ್ಷಿಣೆ ಗಲಾಟೆ ಇರಬೆಕೆ೦ದು ನೋಡಿದರೆ ಹೆ೦ಡತಿ ಕೈಯಲ್ಲಿ ಪೊರಕೆ ಹಿಡಿದು ನಿ೦ತಿದ್ದರೆ, ಗ೦ಡ ದೂರದಲ್ಲಿ ನಿ೦ತಿದ್ದ. "ದಿನಾ ಕುಡಿದು ಬರುತ್ತಿಯ? ಎಷ್ಟು ಸಲ ಹೆಳೊದು ನಿ೦ಗೆ?" ಅ೦ತ ಹೇಳಿ ಸಾರ್ವಜನಿಕವಾಗಿಯೆ ತದುಕುತ್ತಾ ಇದ್ದಳು!! ಆತ ಹೆ೦ಡತಿಯ ಕೈಯಿ೦ದ ಪೆಟ್ಟು ತಿ೦ದು ಇ೦ಗು ತಿ೦ದ ಮ೦ಗನ ತರ ಆಗಿದ್ದ!!

ಪಾಪ ಒ೦ದು ಬಾಟಲು ಕುಡಿದರೆ ಇಷ್ಟೆಲ್ಲಾ ಕಷ್ಟ ಪಡಬೇಕ? ಅದಕ್ಕಾಗಿ ಸಮಾಜದಿ೦ದ ತಿರಸ್ಕಾರ ಗೊಳಗಾಗ ಬೇಕ?

ನಂಗೆ ಅನ್ನಿಸುತ್ತೆ ಕುಡುಕರ ಬಗ್ಗೆ ಈ ಸಮಾಜಕ್ಕೆ ಒಳ್ಳೆಯ ಭಾವನೆಯೇ ಇಲ್ಲ, ಅವರನ್ನು ಮನುಷ್ಯರಂತೆ ನೋಡೋದೇ ಕಡಿಮೆ! ಕುಡುಕನ ಹೆ೦ಡತಿ ಅ೦ದರೆ ಹೊಟ್ಟೆಗೆ ಇಲ್ಲದವಳು, ದಿನಾ ಗ೦ಡನ ಕೈಲಿ ಪೆಟ್ಟು ತಿನ್ನುವವಳು, ಅವನು ಮಕ್ಕಳಿಗೆ ಮದುವೆ ಮಾಡುವುದೇ ಇಲ್ಲ, ಇನ್ನು ಮು೦ತಾದುವು ಎಲ್ಲರ ಅಭಿಪ್ರಾಯ! ಅವನು ಎಷ್ಟೇ ಒಳ್ಳೆ ಮಾತು ಹೇಳಿದ್ದರು ಅದು ಗಣನೆಗೆ ಬರೋಲ್ಲ. ಭಾಗಷ್ಯ ಇಂತಹ ಸಮಸ್ಯೆಯನ್ನು ಹೋಗಲಾಡಿಸಲಿಕ್ಕೆ ಕುಡುಕರೆಲ್ಲ ಸೇರಿ ಚಳುವಳಿ ಮಾಡಬೇಕೇನೋ, ಎಂ ಜಿ ರಸ್ತೆ ಲಿ, ಗಾಂಧಿ ಪ್ರತಿಮೆ ಬಳಿ ಸಮಾನ ಹಕ್ಕಿಗಾಗಿ ಹೋರಾಟ ನಡೆಸಬೇಕಾದ ಜರೂರತ್ತು ಇದೆ.

ನನ್ನ ಮಟ್ಟಿಗೆ ಹೇಳೋದಾದ್ರೆ ಕುಡುಕರೇ ನಿಜವಾದ ದೇಶಪ್ರೇಮಿಗಳು, ಹಾಗು ಮಾನವತಾ ವಾದಿಗಳು. ಕುಡಿಯುವುದರಿ೦ದ ಆಗುವ ಲಾಭ, ಅದರ ಸತ್ಪರಿಣಾಮಗಳು ಎಲ್ಲಾ ಇದೆ. ಹೆಗಂತಿರೋ... ಮುಂದೆ ಓದಿ

1. ಒಬ್ಬ ನೂರು ರುಪಾಯಿಯ ಹೆಂಡ ಕುಡಿದ ಅಂದ್ರೆ ದೇಶದ ಬೊಕ್ಕಸಕ್ಕೆ ನೂರು ರೂಪಾಯಿ ಬಂತು ಅಂತ ಅರ್ಥ!! ಇ ದೇಶಕ್ಕೆ, ದೇಶದ ಉದ್ಯಮಿಗಳಿಗೆ ಕುಡುಕರಿಂದ ಎಷ್ಟೆಲ್ಲ ಪ್ರಯೋಜನ ಇದೆ. ಕುಡುಕರೇ ಇಲ್ಲದಿದ್ದರೆ ಮಲ್ಯ ಇರುತ್ತಿದ್ದನ? (ಅವನ ಕ್ಯಾಲೆಂಡರ್ ಇರುತ್ತಿತ್ತಾ? ) ದೇಶದ ಗಡಿ ಯನ್ನ ಸೈನಿಕರು ಕಾಯುತ್ತಾ ಇದ್ದರೆ, ಕುಡುಕರು ತಮ್ಮ ಜೇಬಿನಿಂದ ದೇಶದ ಅರ್ಥ ವ್ಯವಸ್ಥೆಯನ್ನು ಬಲಪಡಿಸುತ್ತಾ ಇದ್ದಾರೆ. ಈಗ ನೀವೇ ಹೇಳಿ ಯಾರು ನಿಜವಾದ ದೇಶ ಪ್ರೇಮಿಗಳು?

2. ಇಂದು ಮಾರುಕಟ್ಟೆಯಲ್ಲಿ ಲಬ್ಯವಿರುವ ಬಹು ಪಾಲು ಮಧ್ಯ ಗಳು ಸಸ್ಯಾಹಾರಿ ವಸ್ತುಗಳಿಂದ ತಯಾರಾಗಿದೆ. ಆದ್ದರಿಂದ ಪೀಟ ಸಂಘಟನೆಯು ಬೆತ್ತಲೆ ಹುಡುಗಿರನ್ನು ಬಿಟ್ಟು ಕಂಠ ಪೂರ ಕುಡಿದವರನ್ನು ರೂಪದರ್ಶಿಗಲಾಗಿ ನೆಮಿಸಿಕೊಳ್ಳ ಬೇಕಿದೆ!!

3. ಕುಡಿದವರು ಸಾಮಾನ್ಯವಾಗಿ ಪ್ರಾಮಾಣಿಕವಾಗಿ ನಡೆದುಕೊತಾರೆ, ಹಾಗು ಬಹಳಷ್ಟು ಸಮಯದಲ್ಲಿ ಸತ್ಯವನ್ನೇ ಹೇಳುತ್ತಾರೆ. ಆದರೆ ಕುಡಿದು ಊಟ ಮಾಡುವಾಗ ಅಡುಗೆ ಚೆನ್ನಾಗಿಲ್ಲ ಅಂದರೆ, ಅವನು ಕುಡಿದು ಮನೆಗೆ ಬಂದು ಗಲಾಟೆ ಮಾಡುವ ಪತಿರಾಯ ಆಗಿ ಬಿಡುತ್ತಾನೆ.!!

4. ಕುಡಿಯುವುದರಿ೦ದ ನೆನಪಿನ ಶಕ್ತಿ ಕಡಿಮೆ ಆಗುತ್ತದೆ ಇದರಿಂದಲೇ ದಿನ ಬೆಳಿಗ್ಗೆ ಅದೇ ಹೆ೦ಡತಿ ಯ ಮುಖ ನೊಡಲು ಸಾದ್ಯವಾಗುತ್ತಾ ಇರುವುದು!!

5. ಜನಸ೦ಖ್ಯೆ ಕಡಿಮೆ ಮಾಡಲು ಸರ್ಕಾರಗಳು ಎಷ್ಟೆಲ್ಲಾ ಬ೦ಬಡ ಹೊಡೆದುಕೊ೦ಡರು ಎನೂ ಸಾದ್ಯ ಆಗ್ತ ಇಲ್ಲ. ನಮ್ಮ ಕುಡುಕರು, ಕುಡಿದು ವಾಹನ ಚಲಾಯಿಸಿ, ದೇಶಕ್ಕೆ ತಮ್ಮ ಕೈಲಾದ ಸಹಾಯ ಮಾಡುತ್ತಾ ಇದ್ದಾರೆ!!

6. ಜೀವನವನ್ನು ಸುಖ ಮತ್ತು ಕುಶಿಯಿ೦ದ ಕಳೆಯಲು ಹಲವು ಮಾರ್ಗಗಳು ಇವೆ, ಆದರೆ ಅವುಗಳಲ್ಲಿ ಬಹುಪಾಲು ಸಿಕ್ಕಪಟ್ಟೆ ದುಭಾರಿ. ಉದಾ: ಡ್ರಗ್ಸ್, ಮತ್ತೆ ಗರ್ಲ್ ಫೆ೦ಡ್!! ಇದನ್ನ ಗಮನಿಸಿದಾಗ ಕುಡಿತವೊ೦ದೆ ಸುಲಭ ಮಾರ್ಗ!!

7. ಹಕ್ಕಿತರ ಹಾರಬೇಕು ಅ೦ತ ಎಲ್ಲರಿಗೂ ಆಸೆ ಇರುತ್ತದೆ, ಆದರೆ ಎಲ್ಲರಿಗು ಎಲ್ಲಿ ಸಾದ್ಯ? ಒಮ್ಮೆ ವಿಮಾನ ಹತ್ತಿ ಬ೦ದರೆ ಜೇಬು ಹಗುರ ಆಗಿ ಬಿಡುತ್ತದೆ, ಹಾಗಾಗಿ ಹಕ್ಕಿ ತರ ಹಾರಬೇಕು ಅ೦ತ ಅನ್ನಿಸಿದಲ್ಲಿ, ಒಂದು 90 ಹೊಡಿಬೇಕು!!! ಅಕಾಶದಲ್ಲಿ ತೇಲಿದ ಹಾಗೆ ಆಗುತ್ತದೆ.!!!


ಈಗ ನೀವೆ ಹೇಳಿ ಆತ ಕುಡಿತಾನೆ ಅ೦ದ ಮಾತ್ರಕ್ಕೆ ಅವನು ಕೆಟ್ಟವನ?ಚುನಾವಣಾ ಸಮಯದಲ್ಲಿ ಮಾತ್ರ ಕುಡುಕರ ಬಗ್ಗೆ ಚಿಂತಿಸುವ ರಾಜಕೀಯ ಪಕ್ಷಗಳು, ಚುನಾವಣಾ ನಂತರವೂ ಅವರಿಗೆ ಸುಲಭವಾಗಿ ಕುಡಿಯುವಂತೆ ಆಗಲು ಸಾಕಷ್ಟು ಕೆಲಸಗಳನ್ನು ಮಾಡಬೇಕಿದೆ. ಚುನಾವಣೆಯಲ್ಲಿ ಹೆಂಡ ಹಂಚೋಕೆ ಅಂತಲೇ ಒಬ್ಬ ಮಂತ್ರಿಯನ್ನು ಮಾಡಿದರೆ ಚೆನ್ನಾಗಿರುವುದು. ಮಹಿಳೆ ಮತ್ತು ಮದಿರೆ ಇಷ್ಟ ಅಂತ ಹೇಳಿಕೆ ಕೊಟ್ಟಿದ್ದ ದಿವಂಗತ ಪಟೇಲರನ್ನ ಇದಕ್ಕೆ ಪ್ರೇರಣೆ ಅಂತ ಕೊಚ್ಚಿಕೊಳ್ಳಬಹುದು.


ಕುಡುಕರ ರಕ್ಷಣೆಗೆ ಕುರವೇ ಸ್ಥಾಪನೆ ಮಾಡಬೇಕು. (ಕುಡುಕರ ರಕ್ಷಣಾ ವೇದಿಕೆ) ಹಾಗೂ ಅದರ ಸದಸ್ಯರಿಗೆ ಸಬ್ಸಿಡಿ ದರದಲ್ಲಿ ಮದ್ಯ ದೊರೆಯುವಂತೆ ಮಾಡಬೇಕು.

ಇವುಗಳು ನನ್ನ ಹಾಗೂ ಸಮಸ್ತ ಕುಡುಕರ ಆಲೋಚನೆ, ಅನಿಸಿಕೆ ಮತ್ತು ಅಗತ್ಯ ಎಂದು ಕೊಟ್ಟೆ ಸಾರಾಯಿ ಮೇಲೆ ಪ್ರಮಾಣಿಸಲಾಗಿದೆ.


ಸೂಚನೆ: ಸ್ತ್ರೀವ್ಯಾದಿಗಳು ಯಾರೂ ನನ್ನ ಮೇಲೆ ದ೦ಡೆತ್ತಿ ಬರಬಾರದಾಗಿ ವಿನ೦ತಿ!! (ಬೆ೦ಗಳೂರ೦ತ ಊರಲ್ಲಿ ಹುಡುಗ ಇರಲಿ, ಹುಡುಗಿ ಕುಡಿಯೊದು ಕೂಡ ಸರ್ವೆ ಸಾಮನ್ಯ, ಆದರೆ ಈ ಅದೃಷ್ಟ ಬೇರೆ ಊರುಗಳ ಜನಕ್ಕೆ ಇಲ್ಲವಲ್ಲ...) ಕುರವೆ ಸಂಘಟನೆಯ ಅಗತ್ಯದ ಬಗ್ಗೆ ಒತ್ತಿ ಒತ್ತಿ ಹೇಳಿದವರು ಶ್ರೀಯುತ ಪರಾ೦ಜಪೆ ಮತ್ತು ರಾಣಿ ಅವರು. ಅವರು ನಾ ಗೌ ತರಹ ಮಿಂಚಬೇಕು ಅಂತ ಇದ್ದಾರೋ ಗೊತ್ತಿಲ್ಲ.