
ಮಾಡೋಕೆ ಏನು ಕೆಲಸ ಇಲ್ಲದೇ ಇದ್ದಾಗ, ಬೋರ್ ಆಗ್ತಾ ಇದೆ ಅಂದಾಗ, ಮ್ಯಾನೇಜರ್ ತಲೆ ಮೇಲೆ ಕೂತು, ತಲೆ ಕೆಡಿಸಿದಾಗ... ತುಟಿ ಗಳ ಮೇಲೆ ಕಿರು ನಗೆ ಗೆ... ಈ ಬ್ಲಾಗ್.
Tuesday, October 28, 2008
ಸಾಯುವ ಸುಲಭ ಮಾರ್ಗಗಳು!!

Saturday, October 25, 2008
ಚಂದಿರ ನ ಬಗ್ಗೆ.... ದೂರಾಲೋಚನೆ!!!
ನಾನು ಬ್ಲಾಗ್ ಕಡೆ ತಲೆ ಹಾಕದೆ ೨ ವಾರ ಆಗಿತ್ತು!! ಯಾಕೆ ಅಂದ್ರೆ ಇಸ್ರೋ ದವರು ಚಂದಿರನ ಹತ್ತಿರ ಉಪಗ್ರಹ ಬಿಟ್ಟ ಹಾಗೆ ನಾವು ಸೂರ್ಯನ ಬಳಿಗೆ ಮಾನವ ಸಹಿತ ನೌಕೆ ಯನ್ನು ಕಳಿಸುವ ಯೋಜನೆ ಯನ್ನು ಹಂಮಿಕೊಂಡಿದ್ದಿವಿ, ಆದರೆ ಕೊನೆಯ ಸಮಯ ದಲ್ಲಿ ಕೆಲವು ಧಾರ್ಮಿಕ ಕಾರಣ ಗಳು ಅಡ್ಡ ಬಂದು ಯೋಜನೆಯನ್ನೇ ನಿಲ್ಲಿಸ ಬೇಕಾಯಿತು. ( ಸೂರ್ಯ ಕಣ್ಣಿಗೆ ಕಾಣೋ ದೇವರು, ಹಾಗೆಲ್ಲ ಪ್ರಯೋಗ ಮಾಡೋಕೆ ಹೋಗಬಾರದು ಅಂಥ ಮಠದಿ ಪತಿಗಳು ಅಡ್ಡಿ ಪಡಿಸಿದರು, ಅದೆಲ್ಲೋ ವ್ಯಟಿಕಾನ್ ನಲ್ಲಿ ಕೂತಿರೋ ವೃದ್ದ ಪೋಪ್ ಹಿಂದೂ ಗಳು ದೇವರ ಹತ್ತಿರ ಡೈರೆಕ್ಟ್ ಹೋಗಿ ಬಿಟ್ಟರೆ ಅಂತ ಹೆದರಿ , ಅವರ ಮತದ ದೇವರ ಹಾಗು ಜನರ ಮದ್ಯೆ ಇರುವ ಮಧ್ಯವರ್ತಿಗೆ ಬೆಲೆ ಇಲ್ಲ ಆಗುತ್ತೆ ಅಂಥ ಅವರು ಬೆದರಿಕೆ ಹಾಕಿದರು.... ). ಒಟ್ಟಿನಲ್ಲಿ ನಮ್ಮ ಸೂರ್ಯ ಯಾನ - ೧ ಕ್ಕೆ ತೊಂದರೆ ಆಗಿ ಪ್ರಯೋಗವನ್ನೇ ನಿಲ್ಲಿಸಬೇಕಾಯಿತು.
ಆದರೇನು ಇಸ್ರೋ ದವರ ಪ್ರಯೋಗದ ದಿಂದ ಚಂದ್ರನಲ್ಲಿ ಏನೆಲ್ಲಾ ಇವೆ, ಅದರಿಂದ ಏನೆಲ್ಲಾ ಪ್ರಯೋಜನ ಇದೆ ಅಂತ ಲೆಕ್ಕ ಹಾಕಲಿದ್ದಾರೆ. ಅಲ್ಲೂ ಕಬ್ಬಿಣ ಮುಂತಾದ ಲೋಹ ಗಳು ಸಿಗುತ್ತೆ ಅನ್ನುವುದಾದರೆ ನಮ್ಮ ಗಣಿ ಧಣಿ ಗಳು ಅಲ್ಲೂ ಮೈನಿಂಗ್ ಮಾಡಿ ಚೀನಾ ಕೆ ಕಳಿಸುವ ಯೋಜನೆ ಹಾಕಿದ್ದರಂತೆ. ಬೆಂಗಳೂರಿನಲ್ಲಿ ಇರೋ ಬರೊ ಕೆರೆ ನೆಲ್ಲ ನುಂಗಿರುವ ನಮ್ಮ ರಿಯಲ್ ಎಸ್ಟೇಟ್ ನಾಯಕರು ಅಲ್ಲಿ ಭೂಮಿ ಕೊಳ್ಳೋ ಪ್ಲಾನ್ ಮಾಡಿದ್ದರೆ ಅಂತ ವರದಿ ಇದೆ. ಆದರಿಂದ ಭವಿಷ್ಯದಲ್ಲಿ ಮಕ್ಕಳಿಗೆ ಊಟ ಮಾಡಿಸ ಬೇಕಾದರೆ ಚಂದಿರನ ತೋರಿಸ ಬೇಕಾದರೂ ಟ್ಯಾಕ್ಸ್ ಕಟ್ಟ ಬೇಕಾಗಬಹುದು.
ಚಂದ್ರ ಯಾನ ಯಶಾಸ್ಸಾಗಿ, ಅಲ್ಲೂ ಮಾನವ ವಾಸ ಶುರು ಆದರೆ, ಗೌಡರು ತಮ್ಮ ಎರಡನೆ ಮಗನನ್ನು ಅಲ್ಲಿ ಮುಖ್ಯ ಮಂತ್ರಿ ಮಾಡುವ ಆಲೋಚನೆ ಇದೆ ಅಂತೆ. ಇನ್ನೂ ಲಾಲು ಅಲ್ಲಿನ ರಿಕ್ರೂಟ್ ಮೆಂಟ್ ಗೆ ಬಿಹಾರ ದಿಂದ ಚಂದ್ರ ನಿಗೆ ರೈಲು ಬಿಡವ ಯೋಜನೆ ಹಾಕಿದ್ದು, ರಾಜ್ ಟಾಕ್ರೆ ಅದನ್ನು ವಿರೋಧಿಸಿ ಮುಂಬೈ ಬಂಧ್ ಮಾಡಲು ಕರೆ ಮುಂದಾಗಿದ್ದಾರೆ. ಇನ್ನು ಉಳಿದ ನಾಯಕರು ಗಳಿಗೆ ಈ ಯೋಜನೆ ಯ ಬಗ್ಗೆ ಅಷ್ಟಾಗಿ ಆಸಕ್ತಿ ಇದ್ದಂತಿಲ್ಲ. ಇಸ್ರೋ ದವರು ಬಿಟ್ಟಿದ್ದು, ಉಪಗ್ರಹವೋ, ಕ್ಶಿಪಣಿಯೊ ಅನ್ನೋದು ಗೊತ್ತಿಲ್ಲ ಅನ್ಸುತ್ತೆ, ಅವರೆಲ್ಲ ಪೋಲೀಸ್ ರನ್ನ ಟ್ರಾನ್ಸ್ಫರ್ ಮಾಡೋದ್ರಲ್ಲಿ, ಮುಂದಿನ ಬೈ ಎಲೆಕ್ಶನ್ ಗೆ ಹೆಂಡ ಹಂಚೋಡ್ರಲ್ಲಿ ಬ್ಯೂಸಿ ಇದ್ದಾರೆ ಅಂತ ಕಾಣಿಸುತ್ತಾ ಇದೆ.
ಮುಂದೊಂದು ದಿನ ಹಚ್ ನಾಯಿ ಗಗನ ಯಾನಿ ನ ಅಟ್ಟಿಸಿ ಕೊಂಡು ಹೋಗುತ್ತಿರುವ ಜಾಹಿರಾತು ಬರಬಹುದು. ನೀವು ಚಂದಿರನ ಬಳಿ ಹೋದರೂ ನಮ್ಮ ನೆಟ್ವರ್ಕ್ ಇರುತ್ತೆ ಅಂತ ಅವರು ಹೇಳಬಹುದು. ಮೈಕ್ರೋಸಾಫ್ಟ್ ನವರು ವಿಂಡೊಸ್ ಮೂನ್ ಎಡಿಶನ್ ತರಬಹುದು. ಟಾಟಾ ದವರು ಅಲ್ಲಿ ನ್ಯಾನೋ ಬದಲು ಮೂನೋ ಅನ್ನೋ ಕಾರು ತರುವ ಎಲ್ಲ ಸಾಧ್ಯತೆ ಇದೆ.
ಒಂಟಿ ಕೊಪ್ಪಲ್ ಪಂಚಾಂಗ ಮಂದಿರದಲ್ಲಿ ಚಂದ್ರ ನಿಗೆ ಅಂತೇಲೆ ಬೇರೆ ಪಂಚಾಗ ಬರುವ ಸಾದ್ಯಾತೆಯನ್ನು ಅಲ್ಲ ಗೆಳೆಯುವಂತಿಲ್ಲ. ಶ್ರೀ ಶ್ರೀ ಶ್ರೀ ----- ಸ್ವಾಮಿ ಗಳು ಅಲ್ಲೊಂದು ಮಠ ಮಾಡಲು ಶಿಷ್ಯ ರನ್ನು ಹುಡುಕುತ್ತಾ ಇದ್ದಾರಂತೆ. ಈ ಬಗ್ಗೆ ವಿಸ್ರುತ ವರದಿಗೆ ಹಾಯ್ ಬೆಂಗಳೂರ್ ಮುಂದಿನ ದಿನಗಳಲ್ಲಿ ನೋಡಬಹುದು.
ಏನೇ ಆಗಲಿ ಚಂದ್ರ ಭೂಮಿ ತರ ಆದರೆ, ಕವಿ ಗಳಿಗೆ ಹೋಲಿಕೆಗೆ ಕಷ್ಟ ವಾಗಬಹುದು. ಚಂದ್ರ ಮುಖಿ ಅನ್ನೋದು ನಾಪತ್ತೆ ಆಗಬಹುದು. ಪ್ರೇಮಿಗಳಿಗೆ ಚಂದ್ರ ಈಗಿನಷ್ಟು ರೊಮ್ಯಾಂಟಿಕ್ ಆಗದೆ ಹೋಗಬಹುದು.!!!!!
Thursday, October 9, 2008
ರೆಸಿಗ್ನೇಶನ್ ಲೆಟರ್ ಬರೆಯೋದು ಹೇಗೆ?
ಹಲವಾರು ಜನ ಅಗಾಗ ಕೇಳ್ತಾ ಇರ್ತಾರೆ, ರೆಸಿಗ್ನಶನ್ ಲೆಟರ್ ಹೇಗೆ ರೆಡಿ ಮಾಡೋದು ಅಂತ. ಅದ್ದರಿಂದ ಇಲ್ಲಿ ಕೆಳಗೆ ಕೆಲವು ಕ್ರಿಯೇಟಿವ್ ರಾಜಿನಾಮೆ ಪತ್ರ ಗಳ ಮಾದರಿ ಕೊಟ್ಟಿರುವೆ. ನೀವು ಉಪಯೋಗಿಸಿ ಕೊಳ್ಳ ಬಹುದು.
ಮಾದರಿ ಒಂದು.
------------------------------------------------------------------
ಡಿಯರ್ ಬಾಸ್,
ನಾನು ಯಾಕೆ ರಿಸೈನ್ ಮಾಡ್ತಾ ಇದ್ದೀನಿ ಗೊತ್ತಾ?
ನಾನು ನಿಮ್ಮ ಕಂಪನೀ ಗಾಗಿ ಬಹಳ ಪ್ರಾಮಾಣಿಕ ವಾಗಿ ಕೆಲ್ಸಾ ಮಾಡ್ತಾ ಇದ್ದೇನೆ, ಹೀಗಾಗಿ ನನಗೆ ನನ್ ಬ್ಲಾಗ್ ಗೆ ಬರೆಯಲು ಸಮಯ ಸಿಗುತ್ತಾ ಇಲ್ಲ. ಬ್ಲಾಗ್ ಓದುಗರು ನನ್ನ ದ್ವೇಷಿಸ್ತ ಇದ್ದಾರೆ. ಓದುಗರು ದ್ವೇಷಿಸಲಿಕ್ಕೆ ಶುರು ಮಾಡಿದ ಮೇಲೆ ಅವರು ನನ್ನ ಬ್ಲಾಗ್ ಗೆ ಬರೋಲ್ಲ, ಅವರು ಬರದೇ ಇದ್ದಾರೆ ನನ್ನ ಹಿಟ್ ಕೌಂಟ್ಸ್ ಕಡಿಮೆ ಆಗುತ್ತದೆ. ಆವಾಗ ನಾನು ಬಹಳ ದುಃಖಿತ ನಾಗುತ್ತೇನೆ. ನನಗೆ ದುಃಖವಾದಾಗ ಹೆಚ್ಚಾಗಿ ತಿನ್ನಲು ಶುರು ಮಾಡುವೆ , ಹೆಚ್ಚು ತಿಂದರೆ ದೇಹದಲ್ಲಿ ಕೊಬ್ಬು ಶೇಕರಣೆ ಗೊಂದು ಡುಮ್ಮ ಆಗುವೆ, ಅದು ಕಂಪನೀ ಯ ಇಮೇಜ್ ಗೆ ತೊಂದರೆ ಆಗುತ್ತದೆ. ಆಗ ನಿಮ್ಮ ಬಿಸಿನೆಸ್ ಗೆ ತೊಂದರೆ ಆಗುತ್ತದೆ. ಬುಸಿನೆಸ್ಸ್ ಗೆ ತೊಂದರೆ ಆದರೆ ನೀವು ಕೂಡ ದುಃಖಿತರಾಗುತ್ತೀರಿ, ಪರಿಣಾಮವಾಗಿ ನೀವು ಕೂಡ ತುಂಬಾ ತಿನ್ನಲು ಶುರು ಮಾಡುತ್ತೀರಿ. ಆಮೇಲೆ ನೀವು ಕೂಡ ದಪ್ಪ ಆಗುತ್ತೀರಿ. ನನಗೆ ನಿಮ್ಮನ್ನು ಡುಮ್ಮಗೆ ಕಲ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
ನೋಡಿ ಬಾಸ್ ಇದೊಂದು ದೊಡ್ಡ ವಿಷ ಚಕ್ರ, ನಾನು ಇಲ್ಲಿ ತನಕ ಕಂಪನೀ ಯ ಒಳಿತೆಗೆ ಕೆಲಸ ಮಾಡಿರುವೆ, ಈಗಲೂ ಒಳಿತಿಗಾಗಿ ಕೆಲಸ ಬಿಡುತ್ತಾ ಇರುವೆ.
ಆದ್ದರಿಂದ ನನಗೆ ಹೋಗಲು ಬಿಡಿ.
ನಿಮ್ಮ ಅತ್ಯಂತ ನಂಬುಗೆಯ ಹಾಗೂ ನಿಮ್ಮ ಹಿತೈಷಿ!!!
( ಸಹಿ)
------------------------------------------------------------------
ಮಾದರಿ ಎರಡು.
------------------------------------------------------------------
ಡಿಯರ್ ಬಾಸ್,
ನಿಮಗೆ ನೆನಪಿರಬಹುದು, ಎರಡು ತಿಂಗಳ ಹಿಂದೆ ನೇ ಹೇಳಿದ್ದೆ, ನನ್ನ ಸಂಬಳ ಜಾಸ್ತಿ ಮಾಡದೇ ಇದ್ದಲ್ಲಿ ಕೆಲಸ ಬಿಡುವೆ ಅಂತ. ಆದರೂ ನೀವು ಜಾಸ್ತಿ ಮಾಡಿಲ್ಲ. ಆದ್ದರಿಂದ ನಾನು ಕೆಲಸ ಬಿಡುತ್ತಾ ಇದ್ದೇನೆ. ನನಗೆ ಮತ್ತೊಂದು MNC ನಲ್ಲಿ ಶೇಕಡ ನೂರು ಹೈಕ್ ಸಿಕ್ಕಿದೆ, ಸತತ ಮೂರು ವರ್ಷ ಆನ್ಸೈಟ್ ಗೆ ಪ್ರಯತ್ನಿಸಿದರು ನಂಗೆ ಇಲ್ಲಿ ಅವಕಾಶ ಸಿಕ್ಕಲಿಲ್ಲ, ಆ ಕಂಪನೀ ಯಲ್ಲಿ ಆನ್ಸೈಟ್ ಅವಕಾಶಗಳು ವಿಫುಲ ವಾಗಿ ಇದೆ. ಅದು ಇಲ್ಲದೇ ಹೋದರೂ ಸ್ಯಾಲರೀ ಕುಶಿ ಕೊಡೋ ಅಷ್ಟು ಇದೆ. ಸೋ ಇಂದಿಗೆ ಸರಿಯಾಗಿ ಒಂದು ತಿಂಗಳ ನಂತರ ನನ್ನನ್ನು ರಿಲೀವ್ ಮಾಡಿ.
ನಿಮ್ಮನ್ನು ಆ ದಯಾಮಯ ನಾದ ಭಗವಂತನು ಸದಾ ಕಾಪಾಡಲಿ.
ಇಂತೀ ನಿಮ್ಮಿಂದ ಸತತ ಮೂರು ವರ್ಷ ದೌರ್ಜನ್ಯಕ್ಕೆ ಒಳಗಾದ ಅಮಾಯಾಕ ನೌಕರ!!
( ಸಹಿ)
------------------------------------------------------------------
ಮಾದರಿ ಮೂರು.
------------------------------------------------------------------
ಡಿಯರ್ ಬಾಸ್,
ಇದು ನನ್ನ ರಾಜೀನಾಮೆ ಪತ್ರ.
ದನ್ಯವಾದಗಳು
(ಸಹಿ)
------------------------------------------------------------------
ಮಾದರಿ ನಾಲ್ಕು.
-----------------------------------------------------------------
ಸಧ್ಯದಲ್ಲೇ ನಾನು ಕೆಲಸ ಬಿಡಬೇಕಾಗಿ ಬರಬಹುದು, ಅಥವಾ ಅವರೇ ಒಡಿಸ ಬಹುದು... ಸೊ ಕೊನೆಯ ಮಾದರಿಯನ್ನು ಕೊಡೋಣ ಅಂಥ ಇದ್ದೇನೆ!!! ಎನಂತಿರಿ?