ತೀರ ಹಿಂದಲ್ಲ.
ಮೊಬೈಲ್ ಜಗತ್ತಿಗಿಂತ ಹಿಂದಿನ ಪ್ರಪಂಚ ಚೆನ್ನಾಗಿತ್ತು.
ಇಷ್ಟ ಪಟ್ಟ ಹುಡುಗಿ ಮನೆಯ ಫೋನ್ ನಂಬರ್ ಬೇಕು ಅಂದ್ರೆ ಹರಸಾಹಸ ಮಾಡಬೇಕಿತ್ತು. ಮೊದಲು ಅವರಪ್ಪನ ಹೆಸರು ಪತ್ತೆ ಮಾಡಬೇಕು, ಆಮೇಲೆ ಅಡ್ರೆಸ್ ಕಂಡು ಹಿಡಿಬೇಕು. ಕೊನೆಗೆ ಬಿ ಎಸ ಏನ್ ಎಲ್ ನವರ ಟೆಲಿಫೋನ್ ಡೈರೆಕ್ಟರಿ ಗೆ ಶರಣು ಹೊಡೆದು.. ಪ್ರಯತ್ನಿಸಬೇಕು.
ಇಷ್ಟೆಲ್ಲಾ ಸಾಹಸ ಗಾಥೆಯ ನಂತರವೂ ಕಾಲ್ ನ ನಮಗೆ ಬೇಕಾದವರೇ ಎತ್ತುತ್ತಾರೆ ಅನ್ನೋದಕ್ಕೆ ಏನೂ ಖಾತರಿ ಇರುತ್ತಿರಲಿಲ್ಲ. ಹುಡುಗಿಯ ಅಪ್ಪನೋ, ಅಣ್ಣನೋ ಎತ್ತಿದರೋ... ಮುಗೀತು. ಸಾಕು ಸಹಸ್ರ ಮಾನಕ್ಕೆ ಸಾಕಾಗುವಷ್ಟು ಬೈದು ಫೋನು ಕುಕ್ಕುತ್ತಿದ್ದರು.
ಹಾಗಾಗಿ, ಇಂತಾ ದುರಂತ ಸಂದರ್ಭಗಳಿಂದ ನಮ್ಮಂತ ಸುಸಂಸ್ಕೃತ ಗಂಡು ಮಕ್ಕಳನ್ನು ಕಾಪಾಡಲು ಒಂದು ವ್ಯವಸ್ತೆ ಜಾರಿಯಲ್ಲಿ ಇತ್ತು. ಎರಡು ಬಾರಿ ರಿಂಗ್ ಮಾಡಿ ಕಟ್ ಮಾಡಿ ಮತ್ತೆ ಪ್ರಯತ್ನಿಸಿದರೆ, ಅದು ಆ ಮನೆಯಲ್ಲಿರುವ ನಮಗೆ ಬೇಕಾದ ವ್ಯಕ್ತಿಯೇ ಫೋನ್ ಎತ್ತುತ್ತಿದ್ದರು. :)
ಆಗಿನ ಕಾಲದಲ್ಲಿ ಪ್ರೇಮಿಸುವುದು, ಒಂದು ಮೆಸೇಜ್ ಕಳಿಸಿದಷ್ಟು ಸುಲಭದ್ದು ಆಗಿರಲಿಲ್ಲ. ಪ್ರೇಮ ಪತ್ರ ಬರೆದು ಕೊಡುವ ನೆಪದಲ್ಲಿ ಕೈ ಬರಹ ಹಾಗು ಕಾಗುಣಿತ ಕೂಡ ಸಹನೀಯವಾಗಿಯೇ ಇರುತ್ತಿತ್ತು. ಈಗ ವಾಟ್ಸ್ ಅಪ್ ನಲ್ಲಿ ನೀಲಿ ಬಣ್ಣಕ್ಕೆ ತಿರುಗಿಲ್ಲ, ರಿಪ್ಲೈ ಎರಡು ನಿಮಿಷ ಆದರೂ ಬಂದಿಲ್ಲ ಅಂದ್ರೆ ಯಾಕೋ ಮನಸು ದಿಗಿಲು ಗೋಳ್ಳುತ್ತೆ.
ಊಹಿಸಿ ಆಗಿನ ಕಾಲವನ್ನು.
ಪತ್ರವನ್ನು ಬರೆಯುವುದು ಬಹಳ ಕಷ್ಟ ಆದರೆ ಇಷ್ಟ. ಅಂಚೆ ಕಚೇರಿಗೆ ಹೋಗಿ ಹಾಕಿ ಬಂದ್ರೆ ಹೆದರಿಕೆ ಶುರು. ಪತ್ರದಲ್ಲಿ ಏನೇ ಶೂರತ್ವದಿಂದ ಬಂಡಲು ಬಿಟ್ಟಿದ್ದರೂ, ಹುಡುಗಿ ಅಪ್ಪನ ಕೈಗೆ ಸಿಕ್ಕರೆ ಏನು ಗತಿ?
ಆಮೇಲೆ ಪೋಸ್ಟ್ ಕಾರ್ಡ್, ಅಥವಾ ಎನ್ವೆಲೋಪ್ ಗಳ ಬಗ್ಗೆ ಮಾಹಿತಿ ಕೂಡ ಅಗತ್ಯ ಇರಬೇಕಿತ್ತು. ಒಮ್ಮೆ ಪರಿಚಿತರೊಬ್ಬರು ಒಂದು ರುಪಾಯಿಯ ಅಂಚೆ ಚೀಟಿ ಅಂಟಿಸಬೇಕಾದಲ್ಲಿ ಒಂದು ರುಪಾಯಿಯ ರೆವೆನ್ಯೂ ಸ್ಟ್ಯಾಂಪ್ ಹಾಕಿ ಕಳಿಸಿದ್ರು. ಎರಡು ದಿನ ಆದಮೇಲೆ ಅಂಚೆಯಣ್ಣ ಬಂದು, ಬಾಯಿ ತುಂಬ ಉಗಿದು, ವಾಪಸು ಕೊಟ್ಟು ಹೋಗಿದ್ದ!
ಇರಲಿ, ಈ ಪ್ರೇಮ ಪತ್ರಗಳನ್ನು ಹಾಗೆಯೇ ಜತನವಾಗಿ ಇಟ್ಟುಕೊಳ್ಳುವುದರಲ್ಲಿ ಇರುವ ಸುಖ, ಅವುಗಳ ಮೇಲೆ ಆಗಾಗ ಕೈ ಆಡಿಸಿದಾಗ ಸಿಗುವ ಆನಂದ, ಮೊಬೈಲ್ ಮುಟ್ಟಿದ ಮಾತ್ರಕ್ಕೆ ಸಿಗುತ್ತಾ? ಇರಲಾರದು.

ಆದರೆ ಮೊಬೈಲ್ ಬಂದ ಕೂಡ್ಲೇ ಎಲ್ಲಾ ಬದಲಾಯಿತು ಎಂದಲ್ಲ. 2000 ದಶಕದ ಆದಿಯಲ್ಲಿ "ಜೆ ಟಿ ಎಂ ನಿಂದ ಶ್ರೀನಾಥ್ ಅವರು ಮೊಬೈಲ್ ಆದರು, ಇನ್ನು ನೀವು?" ಉದಯ ಟೀವಿಯಲ್ಲಿ ಜಾಹಿರಾತು ಬರುತ್ತಿತ್ತು. ಆದರೆ ಸಾಕುವುದು ಉದ್ಯೋಗಪತಿ ಗಳಿಗೇ ಸಾದ್ಯ ಆಗ್ತಾ ಇರಲಿಲ್ಲ. ಇನ್ನು ಕಾಲೇಜು ಮಕ್ಕಳಿಗೆ ದೂರದ ಮಾತು ಆಯಿತು.
ಅದೂ ಅಲ್ಲದೆ, ಅದನ್ನ ಪ್ಯಾಂಟ್ ಜೇಬಲ್ಲಿ ಇಟ್ಟು ಕೊಂಡಲ್ಲಿ ಕಿಡ್ನಿ ಗೆ ತೊಂದರೆ, ಶರ್ಟ್ ಜೇಬಲ್ಲಿ ಇಟ್ಟರೆ ಹಾರ್ಟ್ ಅಟ್ಯಾಕ್ ಆಗುತ್ತೆ ಅನ್ನುವ ಅಪವಾದವೂ ಇತ್ತು.
ಈಗ ಎಷ್ಟು ಜನರ ಕಿಡ್ನಿ ಹೋಗಿದೆಯೋ ಮಾಹಿತಿ ಇಲ್ಲ.
ಆದರೆ ಆಗಿನ ಕಾಲದ ರೀತಿಯ ಪ್ರೇಮ ಪ್ರಕರಣಗಳು ಕಾಣುತ್ತಿಲ್ಲ.
ಒಂದು ಮೆಸಜು, ಫೇಸ್ಬುಕ್ ನಲ್ಲಿ ಅನ್ ಫ್ರೆಂಡ್ ಮಾಡಿದ ಮಾತ್ರಕ್ಕೆ ಸಂಬಂಧ ಮುಗೀತಾ ಇರಲಿಲ್ಲ.
ಯಾಕೋ ಹಂಗೆ ಅನ್ನಿಸ್ತು.
ಕೊಸರು: ಇದರರ್ಥ ನಂಗೆ ವಯಸ್ಸು ಆಗಿದೆ, ಹಳೆ ಲ್ಯಾಂಡ್ ಲೈನ್ ಜಮಾನದವನು ಅಂತ ಅಲ್ಲ. ಹಿರಿಯರು ಹೇಳಿಲ್ವೇ? ಪ್ರೇಮಕ್ಕೆ ಕಣ್ಣಿಲ್ಲ... ಹಾಗೆಯೇ ವಯಸ್ಸು ಕೂಡ ಇಲ್ಲ. :)