Tuesday, September 30, 2008

ಎಲ್ಲ ಓಕೇ, ಮದುವೆ ಯಾಕೆ?

ನಂಗೆ ಬಹಳ ದಿನಗಳಿಂದ ಒಂದು ಸಂದೇಹ… ಯಾಕೆ ಎಲ್ಲರೂ ಮದುವೆ ಆಗ್ತಾರೆ ಅಂತ, ಎಷ್ಟು ಯೋಚಿಸಿದರು ಏನು ತಿಳಿಯಲೇ ಇಲ್ಲ, ಕೊನೆಗೆ ಹಲವಾರು ಕ್ಷೇತ್ರಗಳಲ್ಲಿ ಅವಿಸ್ಮರಣೀಯ ಸಾಧನೆ ಗೈದಿರುವ ಹಲವು ಗಣ್ಯರನ್ನ ಭೇಟಿ ಆಗಿ, ಹಲವು ಉಪಯುಕ್ತಕರ ವಾದ ವಿಚಾರಗಳನ್ನು ತಿಳಿದಿರುವೆ… ನಿಮಗೂ ಕುಶಿ ಕೊಡಬಹುದೇನೋ……………















ಹುಡುಗರಿಗೆ ಈ ಕೆಳಕಂಡಂತ ಉಪಯೋಗ ಗಳು ಮಧುವೆ ಆಗೋದರಿಂದ ಇದೆ.




1. ಹುಡುಗರಿಗೆ ಬೆಂಗಳೂರ್ ನಲ್ಲಿ ಮನೆ ಬಾಡಿಗೆಗೆ ಸಿಗೋದು ಕಷ್ಟ.. ಬ್ಯಾಚಲರ್ಸ್ ಅಂತ ಹೇಳಿ.. ಕೊಡೋಲ್ಲ.. ಮದುವೆ ಆದ್ರೆ ಮನೆ ಸುಲಭವಾಗಿ ಹುಡುಕ ಬಹುದು…

2. ಮಾಡಿದ ತಪ್ಪುಗಳಿಂದ ಬುದ್ದಿ ಕಲಿ ಬೇಕು… ಹೆಂಡತಿ ಅನ್ನೊಳು ಇದ್ರೆ.. ನಿಮ್ಮ ತಪ್ಪುಗಳನ್ನು ಯಾವಾಗಲೂ ಎತ್ತಿ ತೋರಿಸ್ತ ಇರ್ತಾಳೆ. (ಹೆಂಡತಿ ಒಂಥರ ಪರ್ಮನೆಂಟ್ ಮೆಮೋರೀ )

3. ನಿಮ್ಮ ಸೋಮಾರಿ ಜಿಪುಣ ಶೆಟ್ಟಿ ಗೆಳೆಯರಿಂದ,ಉಡುಗೊರೆ ಗಳನ್ನ ತಗೊಳೊಕೆ ಮದುವೆ ಒಂದು ಹೇಳಿ ಮಾಡಿಸಿದ ಕಾರ್ಯಕ್ರಮ

4. ಎಷ್ಟು ದಿನ ಅಂತ ಮ್ಯಾನೇಜರ್ ಜೊತೆ. ಫ್ರೆಂಡ್ಸ್ ಜೊತೆ ಜಗಳ ಆಡ್ತೀರಿ? ಮನೇಲಿ ಅದಕ್ಕೆ ಅಂತ ಒಬ್ರು ಪರ್ಮನೆಂಟ್ ಆಗಿ ಇದ್ರೆ ಲಾಭ ಅಲ್ಲವೇ??

5. ಹೊಟೆಲ್ ಗಳು 24/7 ಓಪನ್ ಆಗಿರೋಲ್ಲ…

6. ಜೀವನದಲ್ಲಿ ಕುಶಿ ಆಗಿ ಇರುವು ದೊಂಧೆ ದ್ಯೆಯ ಅಲ್ಲ… ಸೋ ಮದುವೆ ಆಗಿ.




ಹುಡುಗಿಯರಿಗೆ ಮಧುವೆ ಆಗೋದರಿಂದ ಇ ಲಾಭ ಗಳು ಇವೆ!!

1. ಸಂತೆ ಗೆ / ಮಾರ್ಕೆಟ್ ಗೆ ಹೋದಾಗ ಸಾಮಾನು ಹಿಡ್‌ಕೊಳಕ್ಕೆ ಗಂಡ ಅನ್ನೋನು ಇದ್ರೆ ನಿಯತ್ತಾಗಿ ಮನೆ ತನಕ ಹಿಡ್ಕೊಂಡು ಬರ್ತನೆ ( ಹುಡುಗಿಯರೇ ಗಮನಿಸಿ, ಈ ಮಾತನ್ನು ಹೇಳಿದವನು ಕೃಷ್ಣ….. ಯಾರು ಬೇಕಾದ್ರೂ ಅವನಿಗೆ ಅಪ್ಲೈ ಮಾಡಬಹುದು.)

2. ಕೆಲವೊಂದು ಸಲ ATM ವರ್ಕ್ ಆಗದೇ ಇರೋ ಚಾನ್ಸಸ್ ಇರುತ್ತೆ

3. ಒಳ್ಳೇ ಕೆಲಸ ದವರು ಈಗಿನ ಕಾಲದಲ್ಲಿ ಸಿಗೋದು ಕಷ್ಟ.. ಸೋ

4. ಫ್ರೀ ಪಿಕ್ ಅಪ್ ಅಂಡ್ ಡ್ರಾಪ್ ಫೇಸಿಲಿಟೀ ಸಿಗುತ್ತೆ, ಆಫೀಸ್ ಗೆ.

5. ಹೊಸ ರುಚಿ ಪ್ರಯೋಗ ಮಾಡೋಕೆ ಗಂಡಂಗಿಂತ ಒಳ್ಳೇ ಬಕ್ರ ಯಾರು ಸಿಗೋಲ್ಲ.



ಚೀಕು ಅವರು ಭಯಾನಕ ಐಡಿಯಾ ಗಳನ್ನ ಕೊಡ್ತಾ ಇದ್ದಾರೆ, ಅವರನ್ನು ಮಧುವೆ ಆಗೋ ಹುಡುಗನಿಗೆ ನನ್ನ ಕಡೆ ಇಂದ ಎರಡು ನಿಮಿಷದ ಮೌನಾಚರಣೆ. ( ದುಃಖಕ್ಕೆ .. ಪಾಪ ಅ ವ್ಯಕ್ತಿ. )

8 comments:

Chandru said...

Maga Maduve Annodu huduga hudugi agrre aagi Hallakke Biluva process Antha Yake bhardille. An way good work. Keep Going!!!

Suma Rao said...

Sadyakke no comments, madve aadmele with experience and reality comments kodthini ;)

roopa said...

i think neenu & ninna e oduva ..bareyuva team members ella swalpa life ge bele kodi please....aadikolluvudu tumba sulabha....blogs e thara bari beku ansidre reality madya bore agade iradikke e tharada jokes hakidre adu work out agutte n oduva madya fun irutte....adu bittu bari edanne baridre silly ness anisutte...illa andre guys U ALL NEED TO GROW UP...childish ness bittu ...meaturity inda baridre innu chennagi irutte anta nanna opinion.

ಬಾಲು said...

@Chandru: :)

@Suma: kanditha....


@roopa:
ಡಿಯರ್ ರೂಪ,
ಈ ಬ್ಲೋಗ್ ಇರೋದು ಜಸ್ಟ್ ಫಾರ್ ಟೈಮ್ ಪಾಸ್, ಕೇವಲ ಟೈಮ್ ಇದ್ದಾಗ, ಮ್ಯಾನೇಜರ್, ಕ್ಲೈಂಟ್ ಗಳ ರಗಳೆ ಇಂದ ಹೊರ ಬರುವುದಕ್ಕೆ ಮಾತ್ರ. ತುಟಿಗಳ ಮೇಲೆ ಕಿರು ನಗೆ ಬಂದರೆ ಅಷ್ಟೇ ಸಾರ್ಥಕ.

ಇಲ್ಲಿ ಜೀವನ, ಸತ್ಯ ಮತ್ತು ಸೌಂದರ್ಯ, ಸಾಹಿತ್ಯ ದ ಬಗ್ಗೆ ಚರ್ಚಿಸೋಲ್ಲ. ಸತ್ಯ ಅನ್ನೋದು ಯೂನಿವರ್ಸಲ್ ಆಗಿ ಇರಬೇಕು ಅಂತ ಅಂದುಕೊಳ್ಳೋದು ಮೂರ್ಖತನ. ನೀನು ಕಂಡಿರುವ ಸತ್ಯ ನಂಗೆ ಉಪಯೋಗ ವಿಲ್ಲದ್ದು ಅನ್ನಿಸಬಹುದು. ನನ್ನ ಪಾಲಿನ ಬದುಕು ನಿನಗೆ ವೇಸ್ಟ್ ಆಗಿ ಕಾಣಬಹುದು. ಬದುಕಿನ ಸತ್ಯಗಳೂ ಅನುಭವ ದಿಂದ ಬರಬೇಕೆ ಹೊರತು ಲೇಖನ ದಿಂದ ಅಲ್ಲ.

ಬದುಕೋ ಮಾರ್ಗ ಗಳ ಬಗ್ಗೆ ಕಾರಂತ, ಡಿ. ವಿ. ಜಿ, ಬೇಂದ್ರೆ ಎಲ್ಲರೂ ಹೇಳಿದ್ದಾರೆ, ಟಾಲ್ ಸ್ಟಾಯ್ ಹೇಳಿರೋ ಮಾತು ಗಳು ಸರ್ವಕಾಲಿಕ ಅನ್ನಿಸುತ್ತೆ, ಆದರೆ ನಾವು ಎಷ್ಟನ್ನು ಪಾಲಿಸುತ್ತಾ ಇದ್ದೀವಿ ಅನ್ನೋದು ಮುಕ್ಯ ಅಲ್ಲವ?

ನಿನ್ನ ಅಭಿಪ್ರಾಯಕ್ಕಾಗಿ ಧನ್ಯವಾದ. :)

ವಿ.ರಾ.ಹೆ. said...

:-))

shivu.k said...

ಸಾರ್, ನಿಮ್ಮ ಆಷ್ಟೂ ಬರವಣಿಗೆ ಕಾಯಾ, ವಾಚ, ಮನಸಾ ಸತ್ಯವಿದೆ. ಏಕೆಂದರೆ ಅದರ ಗಾಢ ಅನುಭವ ನನಗಿದೆ.

ಶಿವು.ಕೆ

Santhosh Rao said...

ಡಿಯರ್ ಬಾಲು.. ಸಕತ್ತಾಗಿದೆ .. ಒಳ್ಳೆ ಅಡ್ವಿಸು :)

Unknown said...

cannagide. nimma matinalli helodadare illi eddu kanodu swarta matra. gandaninda hendati, hendatiyinda ganda estu help takobahudu anta.