Friday, December 5, 2008

ಮೊಬೈಲ್ ಬಿಲ್ ಕಡಿಮೆ ಮಾಡೋದು ಹೇಗೆ?

ಕಳೆದ ಒಂದು ತಿಂಗಳಿಂದ ಬ್ಲಾಗ್ ಬರೆಯಲು ಆಗಲೇ ಇಲ್ಲ, ಅದಕ್ಕೆತುಂಬ, ಕೈ ತುಂಬ ಕೆಲಸ ಇತ್ತು ಅಂತ ಅಲ್ಲ, ಅದು ಆಫೀಸ್ ನಲ್ಲಿ ಟೈಮ್ ಪಾಸು ಮಾಡುತ್ತ ಕೂತಿದ್ದ ರಿಂದ ಬ್ಲಾಗ್ ಗೆ ಸಮಯ ಸಿಗಲಿಲ್ಲ ಅಷ್ಟೆ. ಇಗ ದುಬೈ ಎಂಬ ಊರಲ್ಲಿ ಕೂತು ಇದನ್ನ ಬರೀತಾ ಇದ್ದೀನಿ, ಇಲ್ಲಿ ಮೊಬೈಲ್ ಉಪಯೋಗಿಸಿ ಊರಿಗೆ ಕಾಲ್ ಮಾಡಿ ಬಿಲ್ಲು ಹೆಚ್ಚು ಬರುವ ಸಾಧ್ಯತೆ ಇದೆ... ಸೊ ಮೊಬೈಲ್ ಬಿಲ್ ಕಡಿಮೆ ಮಾಡೋದು ಹೇಗೆ ಅಂತ ಕೆಲವೊಂದು ಟಿಪ್ಸ್ ಗಳನ್ನ ಕೊಟ್ಟಿರುವೆ ನಿಮಗೆ ಇಷ್ಟ ವಾಗಬಹುದು ಅಂತ, ನಿಮಗೂ ಬೇರೆ ಗೊತ್ತಿದ್ದರೆ, ತಿಳಿಸಿ

೧.ನಿಮ್ ಗರ್ಲ್ ಫ್ರೆಂಡ್ ಜೊತೇನೆ ಮಲಕ್ಕೊಳಿ, ಸೊ ಅವಳು ರಾತ್ರೆ ಇಡಿ ನಿಮಗೆ ಮಿಸ್ ಕಾಲ್ ಕೊಟ್ಟು, ನೀವು ಮತ್ತೆ ಕಾಲ್ ಮಾಡಿ, ನಿಮಗೆ ಹೆವಿ ಬಿಲ್ ಬರೋದು ಎಲ್ಲ ತಪ್ಪುತ್ತೆ... ( ತುಂಬ ಅಧ್ಬುತ ವಾದ ಐಡಿಯಾ ಅಲ್ವ? )

೨. ಮಾಹಿತಿ ಕಳಿಸೋಕೆ ಕಾಳಿದಾಸನ ಮೇಘ ಸಂದೇಶ ಹೇಗೆ? ನೀವು ಆಫೀಸ್ ಗೆ ಬರ್ತಾ ಇಲ್ಲ ಅಂತ ನಿಮ್ ಮ್ಯಾನೇಜರ್ ಗೆ ಒಂದು ಮೇಘ ಸಂದೇಶ ಕಳ್ಸಿ!!!!

3. ಕಂಡ ಕಂಡವರಿಗೆ ಮೊಬೈಲ್ ನಿಂದ ಆರೋಗ್ಯಕ್ಕೆ ಹಾನಿ, ಅದರಿಂದ ಪ್ರೈವಸಿ ಅನ್ನೋದೇ ಹೋಗಿದೆ, ನಾನು ಮೊಬೈಲ್ ಕಡಿಮೆ ಉಪಯೋಗಿಸುವೆ ಅಂತ ಪುಂಗಿ ಊದಿ. ನೀವು ಯಾರಿಗೂ ಫೋನ್ ಮಾಡದೇ ಇದ್ರೂ ಯಾರು ನಿಮ್ಮನ್ನ ತಪ್ಪು ತಿಳಿಯೋಲ್ಲ.

4.ಅ ದಯಾಮಯ ನಾದ ಭಗವಂತ ಆಫೀಸ್ ನಲ್ಲಿ ಫೋನ್ ಗಳನ್ನ ಕೊಟ್ಟಿರೋದೆ ನಾವು ನಮಗೆ ಬೇಕಾದವರಿಗೆ, ಬೇಕಾದಷ್ಟು ಹೊತ್ತು ಮಾತಾಡಲಿ ಅಂತ... ದಯಮಾಡಿ ಉಪಯೋಗಿಸಿ....

೫.ಅಗತ್ಯ ಬಿದ್ದಾಗ ಮಾತ್ರ ಫೋನ್ ಮಾಡಿ.. ಆದರೆ ಮಾತಿನ ನಡುವೆ.. ಏನು ಹೇಳ್ಬೇಕು ಅಂತ ಇದ್ದೆ ಅಂದ್ರೆ, ........ ಯಾಕೋ ಸರಿಯಾಗಿ ಕೇಳಿಸ್ತಾ ಇಲ್ಲ. ಸಿಗ್ನಲ್ ಕಡಿಮೆ ಇದೆ, ಕೇಳಿಸ್ತಾ ಇಲ್ಲ.. ಅಂತ ಬಡಕೊಂಡು ಲೈನ್ ಕಟ್ ಮಾಡಿಬಿಡಿ, ಆಮೇಲೆ ಅವರೇ ಕಾಲ್ ಮಾಡ್ತಾರೆ, ನೀವು ಆರಾಮಾಗಿ ಮಾತಾಡಿ.

೬. ಬಿ.ಎಸ್.ಏನ್.ಎಲ್ ಕನೆಕ್ಷನ್ ತಗೊಂಡು ಬಿಡಿ, ನೀವು ಕಾಲ್ ಮಾಡಬೇಕು ಅಂದ್ರು ನಿಮಗೆ ಸಿಗ್ನಲ್ ಸಿಗೋಲ್ಲ... ನಾನು ಅ ಬಿ ಎಸ್ ಏನ್ ಎಲ್ ನೆ ಉಪಯೋಗಿಸ್ತಾ ಇರೋದು... ನಂಗೆ ಸಿಕ್ಕಾಪಟ್ಟೆ ಕಡಿಮೆ ಬಿಲ್ ಬರುತ್ತೆ... ಇಗ ದುಬೈ ನಲ್ಲಿ ಆಫೀಸ್ ಮೊಬೈಲ್ ಇದೆ... ಚೆನ್ನಾಗಿ ಉಪಯೋಗಿಸುತ್ತಾ ಇರುವೆ!!!

೭. ಆದಷ್ಟು ಮಿಸ್ ಕಾಲ್ ಕೊಟ್ಟು ಅವರೇ ಕಾಲ್ ಮಾಡೋ ಹಾಗೆ ಮಾಡಿ, ಆದ್ರೆ ನಿಮ್ ಮನೆಗೆ ಬೆಂಕಿ ಬಿದ್ರೆ, ಅಥವಾ ನೀವು ಲಿಫ್ಟ್ ನಲ್ಲಿ ಸಿಕ್ಕಿ ಹಾಕಿ ಕೊಂಡರೆ, ಫೈರ್ ಇಂಜಿನ್ ಗೆ, ಪೋಲಿಸ್ ಸ್ಟೇಷನ್ ಗೆ ಮಿಸ್ ಕಾಲ್ ಕೊಡ ಬೇಡಿ ಕಾಲ್ ಮಾಡಿ.

೮. ಇನ್ನು ಸಿಕ್ಕಾಪಟ್ಟೆ ಒಳ್ಳೆ ಪ್ಲಾನ್ ಅಂದ್ರೆ ನಿಮ್ ಮೊಬೈಲ್ ಕನೆಕ್ಷನ್ ತೆಗೆದು ಬಿಡಿ. ಮೊಬೈಲ್ ಲೇ ಇಲ್ಲ ಅಂದ್ರೆ ಬಿಲ್ ಹೇಗೆ ಬರುತ್ತೆ?

ಹೀಗೆ ಮಾಡಿದ್ರೆ ನಿಮ್ ಮೊಬೈಲ್ ಬೀ ಸಿಕ್ಕಪಟ್ಟೆ ಉಳಿಯುತ್ತೆ, ಆ ದುಡ್ಡನ್ನ ನಂಗೆ ದಾನ ಮಾಡಿ ಕೃತಾರ್ತರಾಗಿ.

12 comments:

Chandru said...

Maga first one Is super...


ಇನ್ನೊಂದು ಉಪಾಯವಿದೆ ಕೇಳು.. ನಿಮ್ಮ ಆಫೀಸಲ್ಲಿ ಕಾಂಫಾರೆನ್ಸೆ ಕಾಲ್ ಮಾಡುವ ಸಾಧ್ಯತೆ ಇದ್ದರೆ ನಿಮ್ಮ ಗೆಳಯರಿಗೆ ಕಾಂಫಾರೆನ್ಸೆ ಮೂಲಕ ಮಾತಾಡಿ ಆಗ ನಿಮ್ಮ ಮೊಬೈಲ್ ಬಿಲ್ ಉಳಿಯುವುದು ಅಲ್ಲದೆ ೩-೪ ಗೆಳೆಯರ ಜೊತೆ ಮಾತಾಡಿದ ಹಾಗೆ ಆಗುತೆ ... ಏನಂತಿರ..

shivu.k said...

ಬಾಲುರವರೆ,

ನಿಮ್ಮ ಪ್ಲಾನ್ ತುಂಬಾ ಚೆನ್ನಾಗಿದೆ. ಅದು ಗೆಳೆಯರು ಮತ್ತು ನಮಗಿಂತ ದೊಡ್ಡವರತ್ರ ನಿಮ್ಮ ಪ್ಲಾನ್ ವರ್ಕೌಟ್ ಆಗುತ್ತೆ. ಇದನ್ನೇ ನಾನು ನನ್ನ ದಿನಪತ್ರಿಕೆ ಬೀಟ್ ಬಾಯ್ಸ್ ಬಳಿ ಮಾಡಿದರೆ ನನ್ನ ಕತೆ ಮುಗಿದಂತೆಯೇ. ಇಲ್ಲಿ ಮಿಸ್ ಕಾಲ್ ಕೊಡೋದು ನಮ್ಮ ಹುಡುಗರು. ವಿಧಿಯಿಲ್ಲದೆ ಫೋನ್ ಮಾಡೋದು ನಾನು ಇದು ನಡೆಯದಿದ್ದರೆ ಎಲ್ಲಾ ಮನೆಗೂ ನಾನೊಬ್ಬನೇ ಮಟಮಟಾ ಮದ್ಯಾಹ್ನದವರೆಗೆ ಮನೆಮನೆಗೆ ಪೇಪರ್ ಹಂಚಿಬೇಕಾಗುತ್ತೆ. ಅದ್ರೆ ಓದೋಕೆ ನಿಮ್ಮ ಟಿಪ್ಸ್ ಚೆನ್ನಾಗಿದೆ.
ಆಹಾಂ! ನನ್ನ ಕ್ಯಾಮೆರಾ ಹಿಂದೆ ಬ್ಲಾಗಿನಲ್ಲಿ ಒಬ್ಬ ಹಿರಿಯಜ್ಜ ಬನ್ನಿ ನೋಡಿ.

ಮನಸ್ವಿ said...

ಮೊದಲನೆಯ ಸಲಹೆ ಇಷ್ಟವಾಯಿತು..ಜೊತೆಗೆ ನಿಮ್ಮ ಗರ್ಲ್ ಫ್ರೆಂಡ್ ಮೊಬೈಲನ್ನು ಆಪ್ ಮಾಡಿಸಿ ಇಲ್ಲವೆಂದರೆ ಎದ್ದು ಹೋಗಿ ಬೇರೆಯವರಿಗೆ ಫೋನ್ ಹಚ್ಚಿದರೆ ನಿಮಗೆ ನಿದ್ದೇನೂ ಇಲ್ಲ, ನೆಮ್ಮದಿನೂ ಇಲ್ಲ!
ಪ್ರೀ ಪೇಡ್ ಕನೆಕ್ಷನ್ ತಗೊಂಡರು ಬಿಲ್ಲು ಬರೋಲ್ಲ, ಕರೆನ್ಸಿ ಹಾಕಿಸಿಕೊಳ್ಳುವ ಖರ್ಚು ಮಾತ್ರ ಬರುತ್ತೆ!...
ಅಂದಹಾಗೆ ಈಗ ಬಿ.ಎಸ್ ಎನ್ ಎಲ್ ಕನೆಕ್ಷನ್ ತಗೊಂಡರೆ ತೊಂದರೆ, ಎಲ್ಲಾ ಕಡೆಗೂ ಸಿಗ್ನಲ್ ಸಿಗುತ್ತಿವೆ, ನಿಮಗೆ ಕರೆ ಮಾಡಲಾಗದಿದ್ದರು ಮಿಸ್ ಕಾಲ್ ನೀವು ಪಡೆಯಬಲ್ಲಷ್ಟು ಸಿಗ್ನಲ್ ಇರುತ್ತೆ..
ಇವೆಲ್ಲಾ ಮಾಡೋಕಿಂತ ಆಫೀಸಿನ ಪೋನನ್ನು ನಿಮ್ಮದೆ ಫೋನ್ ಅಂತ ತಿಳ್ಕೊಂಡು ಯಾರ್ಯಾರಿಗೆ ಎಷ್ಟೆಷ್ಟು ಹೊತ್ತು ಮಾತಾಡ್ತಿರೋ ಮಾತಾಡಿ..

Admin said...

ಯಾರಿಗೂ ಕಾಲ್ ಮಾಡಬೇಡ. ಅವರೇ ಕಾಲ್ ಮಾಡಿದರೆ ಮಿಸ್ಟೇಕ್ ಆಗಿ ನಿಮ್ಮ ನಂಬರ್ ಡಿಲೀಟ್ ಆಗಿತ್ತು ಅದಕ್ಕೆ ಕಾಲ್ ಮಾಡಕಾಗಿಲ್ಲ ಅಂತ ಹೇಳು.

ಅದೂ ಬೇಡ ಅಂದ್ರೆ ಮೊಬೈಲ್ ನ ನಂಗೆ ಕೊಟ್ಟು ಬಿಡು. ನಿಂಗೆ ನೋ ಮೊಬೈಲ್ ಬಿಲ್.

ಬಾಲು said...

@ಚಂದ್ರು: ನಿನ್ ಐಡಿಯಾ ಏನೋ ಚೆನ್ನಾಗಿದೆ, ಆದ್ರೆ ಬ್ಯಾಡ್ ಲಕ್ ಅಂದ್ರೆ ನಂ ಆಫೀಸ್ ನಲ್ಲಿ ಕಾನ್ಫರೆನ್ಸ್ ಕಾಲ್ ಮಾಡೋ ಹಾಗೆ ಇಲ್ಲ!!!!ಮ್ಯಾನೇಜರ್ ಗೆ ಆ ಫೇಸಿಲಿಟೀ ಕೊಡೋಕೆ ಹೇಳ್ತೀನಿ ತಡಿ.


@ಶಿವು : ನಿಮಗೆ ಈ ಐಡಿಯಾ ಗಳು ವರ್ಕ್ ಔಟ್ ಆಗೋಲ್ಲ. ನಾವುಗಳು ಬೇಕಿದ್ರೆ ನಿಮ್ಗೆ ಮಿಸ್ ಕಾಲ್ ಕೊಡಬಹುದು. ಬಟ್ ನೀವೇ ಕಸ್ಟಮರ್ ಗಳಿಗೆ ಮಿಸ್ ಕಾಲ್ ಕೊಡೋಕೆ ಆಗೋಲ್ಲ. ನೀವು ಆದಷ್ಟು ಕಡಿಮೆ ಜನರಿಗೆ ನಂಬರ್ ಕೊಡೋದು ಬೆಟರ್, ಅದರಲ್ಲೂ ಮಿಸ್ ಕಾಲ್ ಪಾರ್ಟೀ ಗಳಿಗೆ ಕೊಡಬೇಡಿ!!!


@ಮಸಸ್ವಿ: ಹೌದು ಸ್ವಾಮಿ, ಗರ್ಲ್ ಫ್ರೆಂಡ್ ಜೊತೆ ಇರಬೇಕಾದ್ರೆ ಆ ಫೋನ್ ನು ನಾವೇ ತೆಗೆದು ಇಟ್ಟುಕೊಳ್ಳೋದು ಉತ್ತಮ. ಇಲ್ಲ ಅಂದ್ರೆ, ಆ ಹುಡುಗಿ ನಂ ಪಾಲಿಗೆ ಮಿಸ್ ಕಾಲ್ ಆದ್ರೆ ಕಷ್ಟ.


@ ಅರುಣ: ನಿಂಗೆ ಡುಬೈ ನಿಂದ ನಿಂಗೆ ಕಾಲ್ ಮಾಡೋಣ ಅಂದ್ರೆ ಇಲ್ಲಿ ನಿನ್ ನಂಬರ್ ಇಲ್ಲ ಮಾರಾಯ!!!!
ಮಗ ನಿನ್ ಐಡಿಯಾ ಯಾರ್ರ ಬೀರ್ರೀ ಸೂಪರ್ ಆಗಿದೆ!! ಈಗಿಂದಲೇ ನಾನು ಅದನ್ನ ಇಂಪ್ಲಿಮೆಂಟ್ ಮಾಡಿಕೊಂಡೆ!!!

Lakshmi Shashidhar Chaitanya said...

megha sandesha idea...cheap and best-u...

you are extremely witty :)

Ramesh BV (ಉನ್ಮುಖಿ) said...

ಎಂತೆತಾ ಐಡಿಯಾ ಕಂಡುಹಿಡಿದುಬಿಟ್ಟಿದ್ದೀರಿ.. ಇವೆಲ್ಲಾ ಫ್ರೀ ತಾನೇ..?

Ittigecement said...

ಬಾಲು....
ನಿಮ್ಮ ಉಪಾಯಗಳೆಲ್ಲ ಮಜವಾಗಿವೆ...
ನಾನು ಬಿ,ಎಸ್.ಎನ್.ಎಲ್ ಈಗ ಉಪಯೋಗಿಸ್ತಾ ಇದ್ದೀನಿ .ನಂಗೆ ಬಿಲ್ಲ್ ಕಡಿಮೆ ಬರ್ತಾ ಇರೋದಂತೂ ನಿಜ...
ಚೆನ್ನಾಗಿದೆ...
ಅಭಿನಂದನೆಗಳು...

mruganayanee said...

Simply witty...
colege studentsಗೆ ಯಾವುದಾದರು ಐಡಿಯಾ ಕೊಡಿ..

ಬಾಲು said...
This comment has been removed by the author.
ಬಾಲು said...

ಲಕ್ಷ್ಮಿ: :)

ರಮೇಶ್: ಇವೆಲ್ಲ ಕಂಡಿತಾ ಉಚಿತ.....

ಪ್ರಕಾಶ್: ನಾವೆಲ್ಲ ಸೇರಿ ಬಿ ಎಸ್ ಎನ್ ಎಲ್ ಗೆ ಒಂದು ಥ್ಯಾಂಕ್ಸ್ ಹೇಳೋಣ.. ಏನಂತೀರಿ?

ಮೃಗನಯನೀ: ಕಾಲೇಜ್ ಹುಡುಗಿರಿಗೆ ಯಾವಾಗ್ಲೂ ಮೊಬೈಲ್ ಬಿಲ್ ಕಡಿಮೆ ಬರುತ್ತೆ, ಮಿಸ್ ಕಾಲ್ ಕೊಡೋ ಪದ್ದತಿ ಜಾಸ್ತಿ ಅವರಿಂದ ಅಂತ ನನ್ನ ಭಾವನೆ.ಇನ್ನೂ ಹುಡುಗರು, ಹುಡುಗೀರ ಹಿಂದೆ ಸುತ್ತೋದು ಕಡಿಮೆ ಮಾಡಿದ್ರೆ ಬಿಲ್ಲ ತಾನಾಗೇ ಕಡಿಮೆ ಆಗುತ್ತೆ ಅನ್ಸುತ್ತೆ.

ಎಲ್ಲಕ್ಕೂಬೆಸ್ಟ್ ಅಂದ್ರೆ ಎಲ್ಲ ರಿಗೂ ಮೆಸೇಜ್ ಮಾಡಿ, ನಂ ನನ್ನ ಸೆಲ್ ನಿಂದ ಔಟ್ ಗೋಯಿಂಗ್ ಕಟ್ ಆಗಿದೆ, ಇನ್ನೂ ಒಂದು ವೀಕ್ ಆಗುತ್ತೆ ಸರಿ ಆಗೋಕೆ, ಅಂತ ಪುಂಗಿ ಊದಿ ಬಿಡೋದು ಬೆಟರ್ ಐಡಿಯಾ.

Shrinidhi Hande said...

ನಿ೦ ಬಾಸ್ ಅಡ್ರೆಸ್ ಕೊಡಿ... ಆಫೀಸ್ ದೂರವಾಣಿ ದುರುಪಯೋಗದ ಬಗ್ಗೆ ದೂರು ಕೊಡ್ಬೇಕು