Monday, December 15, 2008

ದೆವ್ವ ಗಳು ಸಾರ್ ದೆವ್ವಗಳು!!!



ದೆವ್ವಗಳು ಅಥವಾ ಭೂತ ಅನ್ನೋದು ನಂಗೆ ಮೊದಲಿನಿಂದಲೂ ಬಹಳ ಕೂತುಹಲಕರ ವಿಷಯ, ಅಪ್ಪಿ ತಪ್ಪಿನು ದೇವಸ್ತಾನದ ಹತ್ತಿರ ಸುಳಿಯಾದ ನಾನು ದೆವ್ವ ನ ಹುಡುಕಿ ಕೊಂಡು ಸ್ಮಶಾನ ದ ಹತ್ತಿರ, ಮದ್ಯ ರಾತ್ರೆ ಹೊಳೆ ದಂಡೇ ಹೀಗೆ ಮುಂತಾದ ಕಡೆ ಹುಡುಕಾಡಿದ್ದು ಇದೆ. ಆದ್ರೆ ದುರ ದೃಷ್ಟಕ್ಕೆ ಒಂದಾದ್ರೂ ದೆವ್ವ ಕಣ್ಣಿಗೆ ಬೀಳ ಬಾರದೇ? ದೇವರಂತೂ ಸಿಗೋಲ್ಲ ಬಿಡಿ, ಕೊನೇ ಪಕ್ಷ ದೆವ್ವ ನದರೂ ಕಾಣಿಸ ಬಾರದೇ? ಅವುಗಳ ಕಣ್ಣಿಗೂ ನಾನು ನಾನೊಬ್ಬ ಯಕಶ್ಚಿತ್ ಮಾನವ ಪ್ರಾಣಿ ಆದೇನ? ಗೊತ್ತಿಲ್ಲ.. ಅಂತೂ ಇಂತೂ ನನ್ನ ಅದೃಷ್ಟ ವೋ ಏನೋ ಒಂದು ದೆವ್ವ ಮೊನ್ನೆ ಕನಸಲ್ಲಿ ಬಂತು, ಇಂತಹ ಅವಕಾಶಕ್ಕೆ ಕಾದಿದ್ದ ನಾನು ಸಡನ್ ಆಗಿ ಆ ದೆವ್ವದ ಸಂದರ್ಶನ ಮಾಡಿದೆ. ಅದರ ಸಾರಾಂಶ ಇಲ್ಲಿ ಕೊಟ್ಟಿರುವೆ…

1. ದೇವ್ವಗಳು ರಾತ್ರೆ ನೇ ಯಾಕೆ ಬಂದು ಕಾಟ ಕೊಡುತ್ತೆ?
ಡೇ ಟೈಮ್ ನಲ್ಲಿ ಸಿಕ್ಕಪಟ್ಟೆ ಟ್ರ್ಯಾಫಿಕ್ ಇರುತ್ತೆ, ನಾವು ಆನ್‌ಟೈಮ್ ಗೆ ಹೋಗಿ ಕ್ಲೈಂಟ್ ಗೆ ಕಾಟ ಕೊಡೋಕೆ ಆಗೋಲ್ಲ.. ಸೋ ನಾವು ರಾತ್ರೆ ನ ಪ್ರಿಫರ್ ಮಾಡ್ತಿವಿ!!

2. ಮೋಸ್ಟ್ ಆಫ್ ಟೈಮ್ಸ್ ಕೈಯಲ್ಲಿ ಮೊಂಬತ್ಟಿ ಇರುತ್ತೆ ಯಾಕೆ?
ಬೆಳಕು ಬರಲಿ ಅಂತ!!! ( ನಂಗೆ ಗೊತ್ತೇ ಇರಲಿಲ್ಲ)

3. ದೆವ್ವ ಒಳಗೆ ಬಂದಾಗ ಹಚ್ಚಿದ ಕ್ಯಾಂಡಲ್ ಕೆಟ್ಟೊಗುತ್ತೆ ಯಾಕೆ?
ನಾವು ಹ್ಯಾಪೀ ಬರ್ತ್ ಡೇ ಮಡ್ಕೋತೀವಿ…

4.ಯಾವಾಗ್ಲೂ ಮಹಿಳಾ ದೆವ್ವಗಳೆ ಯಾಕೆ ಕಾಣುತ್ತೆ? ಸಿನಿಮಾ ಗಳಲ್ಲೂ ಲೇಡೀ ದೆವ್ವ ಗಳೆ ಜಾಸ್ತಿ.. ಗಂಡಸರು ದೆವ್ವ ಆಗೋದು ಕಡಿಮೆ ನ?
ಗ್ಲ್ಯಾಮರ್ ಲೋಕ ಸ್ವಾಮಿ, ರಾಜ್ ಫಿಲ್ಮ್ ನೋಡಿ, ಒಳ್ಳೇ ಸೆಕ್ಸೀ ಹುಡುಗಿ ಇದ್ದರೆ, ಅದನ್ನ ಜನ ಕಣ್ಣು ಬಾಯೀ ಬಿಟ್ಟು ನೋಡ್ತಾರೆ!!! ಗಂಡಸರು ದೆವ್ವ ಆಗ್ತಾರೆ, ಬಟ್ ಸಿನಿಮಾ ದವರು ನಮ್ಮನ್ನ ಅಷ್ಟಾಗಿ ಪರಿಗಣಿಸಿಲ್ಲ!!

5. ನಿಮ್ ಮೆಚ್ಚಿನ ಕನ್ನಡ ನಟ ಯಾರು?
ರವಿ ಚಂದ್ರನ್, ( ಶ್ರೀ ರಾಮ ಚಂದ್ರ ಮೂವೀ ನಲ್ಲಿ ಗಂಡು ದೆವ್ವ ಇದೆ!!!)

6. ನಿಮಗೆ ಇಷ್ಟವಾಗುವ ಆಹಾರ ಯಾವುದು? ಬಿಸಿ ರಕ್ತ ಅಂಡ್ ಹಸಿ ಮಾಂಸ ಅಂತಾರೆ ನಿಜ ನ?
ಬಿಸಿ ರಕ್ತ? ಹಸಿ ಮಾಂಸ? ರಿ ಸ್ವಾಮಿ ನೀವು ಮಾತ್ರ ಪೆಪ್ಸೀ ಕೋಕ್ ಕುಡಿದು, ಚಿಕನ್ 65, ಮಟನ್ ಬಿರಿಯಾನಿ ತಿನ್ನ ಬೇಕು, ನಾವು ಉಪ್ಪು ಕಾರ ಇಲ್ಲದ ಹಸಿ ಮಾಂಸ ತಿನ್ನೋಕೆ ನಾವೇನೂ ಕಾಡು ಮನುಷ್ರ? ನಮ್ಗೆ ಅದು ಇಷ್ಟ ಇಲ್ಲ. ಇನ್ಮೂಂದೆ ನಂಗೆ ಒಳ್ಳೇ ನಾನ್ ವೆಜ್ ಡಿಶಸ್ ಕೊಡಿ. ( ಕೋಲಿ ಬಲಿ ಬದಲು ಒಳ್ಳೇ ಒಳ್ಳೇ ಚಿಕನ್ 65 ಕೊಡಿ)

7. ದೆವ್ವಗಳದ್ದು ಏನಾದ್ರೂ ಕಾಲ್ ಸೆಂಟರ್ ಇದೆಯಾ? ನಮ್ಗೆ ಏನಾದ್ರೂ ಡೌಟ್ ಬಂದ್ರೆ ಆನ್ಸರ್ ಮಾಡೋಕೆ.
ಒಂದು ಕಾಲ್ ಸೆಂಟರ್ ಓಪನ್ ಮಾಡೋ ಪ್ಲಾನ್ ಇತ್ತು, ಈಗ ರಿಸೆಶನ್ ನೋಡಿ, ಅದಕ್ಕೆ ಇಡೀ ಪ್ರಾಜೆಕ್ಟ್ ಆನ್ ಹೋಲ್ಡ್ ನಲ್ಲಿ ಇದೆ.

8. ನೀವು ಬರಿ ಕಾಟ ಕೊಡ್ತೀರೋ ಅಥವಾ ಹೆಲ್ಪ್ ಕೂಡ ಮಾಡ್ತೀರೋ? ಹೆಲ್ಪ್ ಮಾಡೋದಾದ್ರೆ ನಂ ಹತ್ತಿರ ದೊಡ್ಡ ಲಿಸ್ಟ್ ಇದೆ.
ಅದೆಲ್ಲ ನಂ ಮ್ಯಾನೇಜರ್ ಹೇಳಿದ ಹಾಗೆ ಆಗುತ್ತೆ, ಕಾಟ ಕೊಡು ಅಂದ್ರೆ ಕಾಟ, ಹೆಲ್ಪ್ ಅಂದ್ರೆ ಹೆಲ್ಪ್. ಹೆಲ್ಪ್ ಬೇಕಿದ್ರೆ ಬೇಗ ಸತ್ತು ದೆವ್ವ ಆಗಿ, ಮ್ಯಾನೇಜರ್ ನ ಮೀಟ್ ಮಾಡಿ!!!

9. ನಿಮ್ಮ ವರ್ಕಿಂಗ್ ಅವರ್ಸ್ ಏನು?
ಜಸ್ಟ್ 8 ಘಂಟೆ. .ಮದ್ಯ 3 ಬ್ರೇಕ್!!!

10. ನಿಮ್ಗು ಟಾರ್ಗೆಟ್ಸ್ ಇರುತ್ತ?
ಹೂನ್… ನಂಗೂ ಮ್ಯಾನೇಜರ್ ಗಳು ಇರ್ತವೆ ಅಂತ ಹೇಳಿಡ್ನಲ್ಲ…( ಅಳುತ್ತಾ!!!)

11. ನೀವು ಗಳು ಹಳೆ ಕಿತ್ಟೋದ ಬಂಗಲೇ ಗಳಲ್ಲೇ ಯಾಕೆ ಜಾಸ್ತಿ ಇರೋದು?ಹೊಸ ಮನೆ ಪೈಂಟ್ ವಾಸನೆ ಮೂಗಿಗೆ ಆಗೋಲ್ವಾ?
ರೆಂಟ್ ಪ್ರಾಬ್ಲಮ್ ಸ್ವಾಮಿ, ಹಳೆ ಮನೆಗೆ ರೆಂಟ್ ಕಡಿಮೆ, ಈಗ ರಿಯಲ್ ಎಸ್ಟೇಟ್ ಬಿದ್ದೊಗೀರೊದ್ರಿಂದ ನಾವು ಹೊಸ ಫ್ಲಾಟ್ ಗಳಲ್ಲಿ ಸೆಟ್ಲ್ ಆಗ ಬಹುದು ಅನ್ಸುತ್ತೆ!!

12. ನೀವು ಕ್ಯಾಮರ ಗಳಲ್ಲಿ ಕೆಲವು ಸಲ ಕಾಣಿಸಿ ಕೋತೀರ, ನಂ ಕಣ್ಣಿಗೆ ಕಾಣೋಲ್ಲ ಯಾಕೆ?
ಯಾಕೆ ನಾವು ಫೋಟೋ ಗೆ ಪೋಸ್ ಕೊಡ ಬಾರದ?


ಇನ್ನೇನು ಮುಂದಿನ ಪ್ರಶ್ನೆ ಕೇಳ ಬೇಕು ಅನ್ನುವುದರಲ್ಲಿ .. ಇಲ್ಲಿ ನಂ ರೂಮ್ ಮೇಟ್ ಜಿತಿನ್ ಅನ್ನೋ ಜೀವಿ ಜೋರಾಗಿ ಗೊರಕೆ ಹೊಡೆದು ನಾನು ಎದ್ದೆಳೊ ಹಾಗೆ ಆಯಿತು!! ದೆವ್ವ ನು ಡಿಸಪಿಯರ್ ಆಯಿತು.!!!

13 comments:

shivu.k said...
This comment has been removed by the author.
NilGiri said...

ದೆವ್ವಕ್ಕೆ ಸುಧಾರಿಸಿಕೊಳ್ಳಲೂ ಟೈಮ್ ಕೊಡದಂತೆ ನೀವು ತೆಗೆದುಕೊಂಡ ಸಂದರ್ಶನ ಚೆನ್ನಾಗಿದೆ.

shivu.k said...

ಬಾಲು ಸಾರ್,
ಇದೇನ್ ಸಾರ್ ಇದು ಮಲಗೋ ಹೊತ್ತಲ್ಲಿ !
ನಾನಂತೂ ಓದಿ ಜೋರಾಗಿ ನಕ್ಕು ಬಿಟ್ಟೆ. ನಾನು ನನ್ನ ಕ್ಯಾಮೆರಾ ಹಿಂದೆ ಬ್ಲಾಗಿನಲ್ಲಿ ಹೊಸ ಲೇಖನ ಹಾಕುತ್ತಾ ನಿಮ್ಮ ಬ್ಲಾಗಿನಲ್ಲಿ ಇಣುಕಿದಾಗ ನೀವು ಹೊಸದೇನನ್ನೋ ತಳ್ಳುತ್ತಿರುವುದು ತಿಳಿದು ಇಲ್ಲಿಗೆ ಬಂದರೆ ನಮಗೆ ದೆವ್ವ ತೋರಿಸುವುದೆ...ಮಾತಾಡಿಸುವುದೇ....ಛೇ...

Varun said...

Devva na hudkondu smashanakke yake hogthiya sumne kannadi nodkobarda?

Harisha - ಹರೀಶ said...

ಹ್ಮ್.. ಮುಂದಿನ ಸಲ ದೆವ್ವ ಸಿಕ್ಕಾಗ ನಿಮ್ಮ ಸಂದರ್ಶನ ಮುಂದುವರೆಸಿ.. ನಂತರ ಇಲ್ಲಿ ಬರೆದು ಹಾಕಿ...

ವಿ.ರಾ.ಹೆ. said...

ಬಂದಿದ್ದು ಗಂಡ್ ದೆವ್ವನೋ ಹೆಣ್ ದೆವ್ವನೋ ಅಥವಾ ’ಅದೋ’? :)

Vidya Parameswaraiah said...

nangu kannaDadalli blog maaDbeku - hEge antha hELikoDtheera?

ಬಾಲು said...

ನೀಲ್ - ಗಿರಿ: ಧನ್ಯವಾದಗಳು

ಶಿವು: ಏನು ಮಾಡೋದು ರಿ, ರಾತ್ರೆ ಹೊತ್ತು ದೇವರು ರೆಸ್ಟ್ ತಗೊತ ಇರ್ತಾನೆ, ದೆವ್ವಗಳು ಮಾತ್ರ ಸಿಗ್ತಾವೆ!!

ವರುಣ: ಕನ್ನಡಿ ನೋಡಿದ್ರೆ ದೆವ್ವ ಸಿಗಲ್ಲ, ರಾಕ್ಷಸ ಕಾಣುತ್ತೆ!!

ಹರೀಶ್: ಮುಂದಿನ ಬಾರಿ ಸಿಕ್ಕರೆ ಇಲ್ಲಿ ಬಂದು ಹಾಕುವೆ!!

ವಿಕಾಸ್: ಅದು ಗಂಡು ದೆವ್ವ ಮಾರಾಯಿರೆ!!

ವಿದ್: ಕಂಡಿತಾ!!!

ಮನಸ್ವಿ said...

13.ಅಲ್ಲಾ ಹೆಣ್ಣು ದೆವ್ವ ಯಾಕೆ ಬಿಳಿ ಸೀರೇನೆ ಉಡೋದು, ಸಿನೇಮಾದಲ್ಲಂತೂ ಯಾವಾಗಲೂ ಹೊಕ್ಕಳು ಕಾಣುವಂತೇನೆ ಸೀರೆ ಉಡ್ಸೋದು (ಉಟ್ಗೊಂಡು ಬರೋದು)ಏಕೆ?
"ಓಹ್ ಸಾರಿ ಹೆಂಗಸರು ಮಾತ್ರಾ ಸೀರೆ ಉಡ್ತಾರಲ್ವ!"(ಸ್ವಗತ!!). ದೆವ್ವ ಕಲರ್ ಕಲರ್ ಸೀರೆಲಿ ಬಂದ್ರೆ ಪಾಪ ಸಿನೇಮಾ ಮಾಡುವವರಿಗೆ ಕಾಷ್ಟ್ಯೂಮ್(ಡೆವಿಲ್ಯೂಮ್) ಡಿಸೈನ್ ಮಾಡೋದು ಕಷ್ಟ ಆಗುತ್ತೇ ಅಂತಾನೋ?
14 ಗೆಜ್ಜೆ ಸದ್ದು ಮಾಡ್ತಾನೆ ದೆವ್ವ ಬರೋದು ಯಾಕೆ?
15.ದೆವ್ವ ಮೊದಲು ನಾಯಿಗೆ ಕಾಣಿಸುತ್ತಂತೆ ಹೌದಾ?
16.ನೀವ್ ಬಂದ್ರೆ ನಾವೇನು ಮಾಡ್ಬೇಕು??.. ನೀವು ಇನ್ನೊ-ಸೆಂಟಾ!, ಕ್ರು-ಯೆಲ್ಲಾ! ನಮ್ಗೆ ಗೊತ್ತಾಗೋದು ಹೇಗೆ? ಭಯವಾದ್ರೆ ಏನ್ ಮಾಡಬೇಕು??ನಿಮ್ಗೆ ರಾತ್ರಿ ಒಬ್ಬೊಬ್ರೆ ಬರೋಕೆ ಹೆದರಿಕೆ ಆಗೋಲ್ವಾ?
ಅಗೇನ್ ಸಾರಿ ಕಣ್ರಿ.. ನಾನು ಕೊನೆ ಪ್ರಶ್ನೆನ ನೇರವಾಗೆ ದೆವ್ವದ ಹತ್ರ ಕೇಳ್ಬಿಟ್ಟೆ ಹೆದರಿಕೆಯಾಗಿ, ಮುಂದಿನ ಸಲ ನಿಮಗೆ ದೆವ್ವದ ಭೇಟಿಯಾದಾಗ ನನ್ನ ಪ್ರಶ್ನೆಗಳನ್ನು ಕೇಳಲು ಮರೆಯಬೇಡಿ!

shivu.k said...

ಬಾಲು ಸರ್,

ಮತ್ತೆ ನಿಮ್ಮ ಬ್ಲಾಗಿನಲ್ಲಿ ಹೊಸದೇನಾದ್ರು ಇದೆಯ ಅಂತ ಬಂದೆ..ಮತ್ತೊಮ್ಮೆ ದೆವ್ವದ ಸಂದರ್ಶನ ನೋಡಿ ಖುಷಿಯಾಯ್ತು....

ಆಹಾಂ! ಮನಃಪೂರ್ವಕವಾಗಿ ನಗಬೇಕೆ...ಹಾಗಾದರೆ ನೋಡಬನ್ನಿ ನಡೆದಾಡುವ ಭೂಪಟಗಳ!!
http://chaayakannadi.blogspot.com/

Anonymous said...

ಹ್ಹ ಹ್ಹ ಹ್ಹ

Shrinidhi Hande said...

ಕೆಲವು ದೆವ್ವಗಳು ತಮ್ಮದೇ ಆದ ಬ್ಲಾಗನ್ನೂ ಪ್ರಾರ೦ಭಿಸಿವೆಯ೦ತೆ.. ಹೌದಾ?

Shashank said...

THUMBA CHANNAGI ITUU NIMMA BHOTHAADA SANDARSHANA .