Saturday, April 11, 2009

ಬೇಗ ಎದ್ದೆಳೊ ಸುಲಭೊಪಾಯಗಳು!!

ಬೆಳಿಗ್ಗೆ ಎದ್ದು, ವ್ಯಾಯಾಮ, ಯೋಗ, ಜಾಗಿಂಗ್ ಮಾಡಿದ್ರೆ ಆರೋಗ್ಯ ಚೆನ್ನಾಗಿ ಇರುತ್ತೆ ಅಂತ ಎಲ್ಲ ಹೇಳ್ತಾರೆ. ಅದನ್ನು ನಾವು ಕೂಡ ಮುಲಾಜಿಲ್ಲದೇ ಒಪ್ಪಿಕೊಂಡಿದ್ದೀವಿ. ನಂಗೆ ಯೋಗ, ಜಾಗಿಂಗ್ ಬಗ್ಗೆ ಏನು ತಕರಾರಿಲ್ಲ, ತಕರಾರು ಇರೋದು ಬೆಳಿಗ್ಗೆ 4-5 ಗಂಟೆ ಅನ್ನೋದರಲ್ಲಿ!!!

ಆದ್ದರಿಂದ ಬೆಳಿಗ್ಗೆ ಬೇಗ ಎದ್ದೆಳೋದು ಹೇಗೆ ಅಂತ ಸ್ನೇಹಿತ ರೋಡಗೂಡಿ ಯೋಚಿಸಿ, ಚರ್ಚಿಸಿ, ಚಿಂತಿಸಿ ಕಂಡು ಹಿಡಿದಿರುವ ಮಾರ್ಗೋಪಾಯ ಗಳು ಇಂತಿವೆ!!

1. ಮನೆ ತುಂಬಾ ತಿಗಣೆ, ಸೊಳ್ಳೆ ಸಾಕಿ, ಅವು ಕಚ್ಚಿ, ನಿಮ್ಗೆ ನಿದ್ದೆ ಮಾಡೋಕೆ ಬಿಡದೆ, 4 ಕೆ ಏನು, 3 ಕೆ ಎದ್ದು ಓಡ್ತೀರ.. ಬೇಕಿದ್ರೆ ನಿಮ್ಮ ಶೂಸ್ ನಲ್ಲೂ ಕೂಡ ತಿಗಣೆ ಹಾಕ್ಕೋಳಿ, ನಿಮ್ಮ ರನ್ನಿಂಗ್ ಸ್ವಲ್ಪ ಸ್ಪೀಡ್ ಆಗಿ ಇರುತ್ತೆ.


2. ಗರ್ಲ್ ಫ್ರೆಂಡ್, ಬಾಯ್ ಫ್ರೆಂಡ್ ಗಳಿಗೆ 4 ಕೆ ಕಾಲ್ ಮಾಡೋಕೆ ಹೇಳೋದು.. ಕಾಲ್ ಮಾಡ್ಥಾವೆ.. ಎದ್ದಿಲ್ಲ ಅಂದ್ರೆ ಆಮೇಲೆ ಮಾರಿ ಹಬ್ಬ ಇದ್ದಿದ್ದೆ. (ಇದರಲ್ಲಿ ಸ್ವಲ್ಪ ರಿಸ್ಕ್ ಇದೆ ಅನ್ಸುತ್ತೆ, ಆದ್ರೂ ಅದು ಡಿಪೆಂಡ್ ಆಗುತ್ತೆ!!)


3. ನಿಮ್ ಆಫೀಸ್, ನಿಮ್ ಮ್ಯಾನೇಜೇರ್, ಡೆಡ್ ಲೈನ್ ಗಳ ಬಗ್ಗೆ ಯೋಚಿಸಿ, ಬರಲಿರೋ ಪರ್ಫಾರ್ಮೆನ್ಸ್ ರಿವ್ಯೂ ಬಗ್ಗೆ ಯೋಚಿಸಿ, ದೆವ್ರಾಣೆ ನಿದ್ದೆ ಬರೋಲ್ಲ.


4. ಚಿಕ್ಕ ಮಕ್ಕಳು ಆಟ ಆಡೋ ಎಲೆಕ್ಟ್ರಾನಿಕ್ ಟ್ರೈನ್ ತಂದು, ಟೈಮ್ ಫಿಕ್ಸ್ ಮಾಡಿ, ಕೀ ಕೊಟ್ಟು ಮುಖಕ್ಕೆ ಬಡಿಯೋ ಹಾಗೆ ಇಟ್ಕೊಂಡು ಮಲಗಿ, ಬೆಳಿಗ್ಗೆ ಅದು ಬಂದು ಹೊಡೆದು, ಆಕ್ಸಿಡೆಂಟ್ ಆಗಿ, ನಿಮ್ ಮೂತಿ ಸೊಟ್ಟ ಆದ್ರೂ ಪರವಾಗಿಲ್ಲ. ಆಮೇಲೆ ನಿಮ್ಗೆ ನಿದ್ದೆ ಅಂತೂ ಬರೋಲ್ಲ!!!


5. ಯಾವುದಾದ್ರೂ ದೇವಸ್ಥಾನ, ಮಸೀದಿ ಹತ್ತಿರ ಮನೆ ಮಾಡಿ. ಅವರು ಬೇಳಿಗೆ ನಾಲ್ಕು ಗಂಟೆ ಗೆ ಭಜನೆ ಶುರು ಮಾಡ್ತಾರೆ, ನಿಮ್ಗೆ ಎಚ್ಚರ ಆಗುತ್ತೆ!!!


6. ನಿದ್ದೆ ಮಾಡದೇ ಇದ್ರೆ ಆಯಿತು!!! ಆವಾಗ ಬೆಳಿಗ್ಗೆ ಎಳೊ ತೊಂದರೆ ನೇ ಇರೋಲ್ಲ. (ಎಂತ ಭಯಾನಕ ಐಡಿಯಾ ಅಲ್ವ?)


7. ಮಲಾಗೊ ಕಿಂತ ಮುಂಚೆ ನ್ಯೂಸ್ ಪೇಪರ್ಸ್ ನ ಓದಬೇಡಿ, ಅದರಲ್ಲಿ ಮಣ್ಣಿನ ಮಗ, ಭವಿಷ್ಯ ಪ್ರಧಾನಿ ಎಂದು ಬಿಂಬಿತ ದೇವೆ ಗೌಡ್ರು ನಿದ್ದೆ ಮಾಡ್ತಾ ಇರೋ ಫೋಟೋ ಇದ್ರು ಇರಬಹುದು!!! (ಇದು ಅವರ ಕನಸು, ನನಸು ಆದ್ರೂ ಆಗಬಹುದು.. ಯಾರಿಗೆ ಗೊತ್ತು!!!) ಫೋಟೋ ನೋಡಿದ್ರೆ ನಿಮ್ಗೆ ಬೆಳಿಗ್ಗೆ ಎಚ್ಚರ ಆಗುತ್ತೆ ಅನ್ನೋದಕ್ಕೆ ಏನು ಗ್ಯಾರೆಂಟೀ ಇಲ್ಲ.


8. ಹೊಸ ರುಚಿ ಟ್ರೈ ಮಾಡಿ ತಿನ್ನಿ, ಆದ್ರೆ ಒಗ್ಗರಣೆ ಗೆ ಹರಳೆನ್ನೆ ಹಾಕಿ ಅಷ್ಟೇ. (ಉಳಿದಿದ್ದೆಲ್ಲ ಆದಾಗೇ ಆಗುತ್ತೆ ಬಿಡಿ)


9. ಒಬ್ಬ / ಒಬ್ಬಳು ಕೆಟ್ಟ ಸಂಗಾತಿಯನ್ನ ಹುಡುಕಿ ಮದುವೆ ಆಗಿ ಬಿಡಿ, ಆಗ ಜೀವನ ದಲ್ಲಿ ಸುಖ, ಶಾಂತಿ, ನೆಮ್ಮದಿ ಎಲ್ಲ ಕಾಣೆಯಾಗಿ... 24/7 ಎದ್ದಿರುತ್ತೀರ!!


10. ಇಲ್ಲ ಅಂದ್ರೆ ನಂಗೆ ತಿಂಗಳಿಗೆ 25 ಸಾವಿರ ದುಡ್ಡು ಕೊಡಿ, ಬೆಳಿಗ್ಗೆ ದೊಣ್ಣೆ ತಗೊಂಡು ಬಂದು, ಬಡಿದು ಎಬ್ಬಿಸುತ್ತಿನಿ!!! (ಇದು ಮಾತ್ರ ಕಂಡಿತ ವರ್ಕ್ ಆಗುತ್ತೆ... )


ಅರ್ಪಣೆ: ನಿದ್ರೆ ಗುಮ್ಮ ಚಂದ್ರು, ಆಫೀಸ್ ನಲ್ಲೂ ನಿದ್ದೆ ಮಾಡೋ ಚೀಕು ಹಾಗೂ 24/7 ತೂಕಡಿಸುತ್ತಲೇ ಇರುವ ಕಿತ್ತೂರ್ ರಾಣಿ ಚೆನ್ನಮ್ಮ ನಿಗೆ!!

15 comments:

Anonymous said...

ಅಬ್ಬ! ಏನೇನ್ ಐಡಿಯಾ ಕೊಡ್ತೀರಾ!
ಇಲೆಕ್ಟ್ರಾನಿಕ್ ಟ್ರೈನ್ ಮುಖಕ್ಕೆ ಹೊಡಿಯೋ ಹಾಗೆ ಒಂದ್ ದಿನ ಇಟ್ರೆ ಸಾಕು! ಸುಮಾರ್ ದಿನ ನಿದ್ದೆ ಬರಲ್ಲ ಬಿಡಿ..
ಹಿಂಗೆ ಐಡಿಯಾ ಕೊಡ್ತಾ ಇರಿ. :-)

shivu.k said...

ಬಾಲು ಸರ್,

ನಿಮ್ಮ ಐಡಿಯಾಗಳೆಲ್ಲಾ ಸಕ್ಕತ್ತಾಗಿವೆ...ಕೆಲವಂತೂ ಸೂಪರ್ಬ್....ಸಾಧ್ಯವಾದರೆ ಕೊನೆಯದನ್ನು ಪೇಟೆಂಟ್ ಮಾಡಿಸಿಬಿಡಿ...ಸಿಕ್ಕಾಪಟ್ಟೇ ಸಂಪಾದನೆ...
ವಿಶೇಷ ಸೂಚನೆ: ಇದ್ಯಾವುದು ನನಗಲ್ಲ...ಏಕೆಂದರೆ ನಾನು ಕಳೆದ ೧೫ ವರ್ಷದಿಂದ ೪ ಗಂಟೆಗೆ ಏಳುತ್ತಿದ್ದೇನೆ...
ಧನ್ಯವಾದಗಳು...

PARAANJAPE K.N. said...

ಇದರಲ್ಲಿ ನೀವು ಯಾವುದನ್ನು ಫಾಲೋ ಮಾಡ್ತಿದೀರಿ ಹೇಳಿ ಗುರೂ

Chandru said...

ಲೋ ಮಗ ಸಚಿನ್ ಕವರ್ ಡ್ರೈ , ಸ್ವೀಪ್ ಲಾಂಗ್ ಆನ್/ ಆಪ್ ಕಡೆ ಬ್ಯಾಟ್ ಬಿಸ್ದಗೆ ನೀನು ಎಲ್ಲ ಥರ ಯೋಚನೆ ಮಾಡಿದ್ಯ? ಗುಡ್ ಮಗನೆ... ಕೀಪ್ ಇಟ್ ಅಪ್.... ಸರಿ ಇದೊಂದ್ ಸೇರಿಸ್ಬಿದು ಗುಮ್ಮನನ್ನು ಎಚ್ಚರಿಸುವುದಕ್ಕೆ ಗುಮ್ಮನ ಬರಬೇಕು.. ಮಲ್ಲಿಕಾರ್ಜುನ ಖರ್ಗೆಯ ಯಾವ್ದೋ ಚುನಾವಣ ಭಾಷಣದಲ್ಲಿ ಎದ್ದೇಳಿ ಯುವಕರೇ ಅಂದಹಾಗಿತು. ಖರ್ಗೆ ಕೇಳಬೇಕೆ ಬುಸ್ಸ್ಸ್ ಬುಸ್ಸ್ಸು ಅಂತ 'ಯುವಕರೇ' ಅನ್ನೋದನ್ನ ರೆಕಾರ್ಡ ಮಾಡಿ ಮೊಬೈಲ್ ಗೋ ಅಥವಾ ನಿಮ್ಮ ಅಲಾರಂ ಗೋ ಹಾಕಿದ್ರೆ ಬೆಳಗ್ಗೆ ಖರ್ಗೆ 'ಬುಸ್ಸ್ಸ್ ' ಅಂದ್ರೆ ಯಾವ ಯುವಕನಿಗೆ ನಿದ್ದೆ ಬರುತೆ ರೀ...!

Ittigecement said...

ಬಾಲು ಸರ್...

ಈ ಗೊಡವೆಗಳೇ ಬೇಕಿಲ್ಲ....

ಬೆಳಿಗ್ಗೆ ಎಚ್ಚರಾಗಿ...
ಈ ಕೆಳಗಿನವುಗಳನ್ನು..
ಮನಸ್ಸಿನಲ್ಲೇ ಕಲ್ಪನೆ ಮಾಡಿಕೊಳ್ಳಿ...

ಬಾಗಿಲು ತೆಗೆದು ಹೊರಗೆ ಹೋಗಿ...

ರಸ್ತೆಗೆ ಇಳಿದು ಓಡಿರಿ... (ಮನಸ್ಸಿನಲ್ಲೇ)..

ಹಾಗೇ ಓಡುತ್ತ ಹತ್ತಿರದ ಪಾರ್ಕಿಗೆ ಹೋಗಿ.. ಅಲ್ಲೂ ಜಾಗಿಂಗ ಮಾಡಿ...
ಮನಸ್ಸಿನಲ್ಲೇ..
ಹೀಗೇ ಒಡು ಅರ್ಧ ಗಂಟೆ ಜಾಗ್ ಮಾಡಿ ಮನೆಗೆ ಬಂದು ಬಾಗಿಲು ಹಾಕಿ
ಪೇಪರ್ ಓದಲು ಶುರು ಮಾಡಿ.. ಬೆಚ್ಚಗಿನ ಕಾಫೀ ಸಂಗಡ ಇರಲಿ...
(ಇದನ್ನು ನಿಜವಾಗಿಯೂ ಮಾಡಿ...)

ತೂಕ ಇಳಿಸುವ ಬಗೆಗೆ ಗ್ಯಾರೆಂಟಿ ಇಲ್ಲ....

ಚಂದದ ಲೇಖನ ದಿಂದ ನಗಿಸಿದ್ದಕ್ಕೆ...
ಧನ್ಯವಾದಗಳು...

Madhooo said...

Sakat aagiruva ideas kottidira. Beligge munche elodu ishtu sulabha antaane gottirlilla.:)

ಸಾಗರದಾಚೆಯ ಇಂಚರ said...

ಒಳ್ಳೊಳ್ಳೆ ಐಡಿಯಾಗಳಿವೆ, ಬೇಗನೆ ಪೇಟೆಂಟ್ ತಗೊಂಡು ಬಿಡಿ

ಬಾಲು said...

ಜ್ಯೋತಿ: ಧನ್ಯವಾದಗಳು, ನೀವು ಇಲ್ಲಿಗೆ ಭೇಟಿ ಕೊಡ್ತಾ ಇರಿ.

ಶಿವು: ನೀವು ನನ್ನ ಸಹಾಯ ಪಡೆದು ಕೊಳ್ಳಿ, ಬೆಳಿಗ್ಗೆ 3ಕೆ ಬೇಕಾದ್ರೂ ಎಬ್ಬಿಸುವೆ, ನಿಮಗೆ ಸ್ವಲ್ಪ ಕನ್ಸೆಶನ್ ಕೊಡುವ!!!!

ಪರಂಜಪೆ : ನಾನು ಯಾವುದನ್ನು ಫಾಲೊ ಮಾಡೋಲ್ಲ... ನಾನು ಸೂರ್ಯ ವಂಶಸ್ತ

ಚಂದ್ರು: ನಿನ್ ಐಡಿಯಾ ಚೆನ್ನಾಗಿದೆ, ಆದ್ರೆ ಚುನಾವಣೆ ನೀತಿ ಸಂಹಿತೆ ಅಡ್ಡ ಬಂದ್ರೆ ಕಷ್ಟ!!!

ಪ್ರಕಾಶ್ : ನಿಮ್ ಐಡಿಯಾ ಸೂಪರ್ ಇದೆ, ಇದನ್ನು ನಾನು ಬೇರೆಯವರಿಗೆ ಮಾರಿ ಕೊಳ್ಳುವೆ!!!

ಮಧೂ: ಬೆಳಿಗ್ಗೆ ಎದ್ದೆಲೋದು ಬಹಳ ಸುಲಭ ರಿ, ನಂ ಅಪ್ಪ ನಂಗೆ ತುಂಬಾ ಚೆನ್ನಾಗಿ ಎಳಿಸ್ತ ಇದ್ರು... (ಚೆನ್ನಾಗಿ ವದ್ದು ಎಬ್ಬಿಸ್ತಾ ಇದ್ರು!!)

ಸಾಗರ ದಾಚೆ: ಬಂದು ವೀಕ್ಷಿಸಿದಕ್ಕೆ ಥ್ಯಾಂಕ್ಸ್, ಪೇಟೆಂಟ್ ಮಾಡಿಸುವ ಐಡಿಯಾ ಇದೆ.

Prabhuraj Moogi said...

super... I can also try some of these... bahaLa chennagide blog...

ಧರಿತ್ರಿ said...

ಬೊಂಬಾಟಾಗೈತೆ ಮಾರಾಯ್ರೆ ನಿಮ್ಮ ಐಡಿಯಾಗಳು...ಈವಾಗ ನಿಮ್ಮ ಐಡಿಯಾಗಳನ್ನು ಓದಿ ಇವತ್ತು ರಾತ್ರಿ ನನ್ನ ನಿದ್ದೆ ಕೆಡುತ್ತೋ ಅಂತ ಭಯ ಶುರುವಾಗಿದೆ!!!
" ಒಬ್ಬ / ಒಬ್ಬಳು ಕೆಟ್ಟ ಸಂಗಾತಿಯನ್ನ ಹುಡುಕಿ ಮದುವೆ ಆಗಿ ಬಿಡಿ, ಆಗ ಜೀವನ ದಲ್ಲಿ ಸುಖ, ಶಾಂತಿ, ನೆಮ್ಮದಿ ಎಲ್ಲ ಕಾಣೆಯಾಗಿ... 24/7 ಎದ್ದಿರುತ್ತೀರ!! " ಎಂಥದ್ದು ? ಯಾರಿಗಾದ್ರೂ ಹಂಗೆ ಮನಸ್ಸು ಬರುತ್ತಾ?!!

ನಕ್ಕುಬಿಟ್ಟೆ..ನಿಮ್ಮ ಬರಹ ನೋಡಿ!!
-ಧರಿತ್ರಿ

ಧರಿತ್ರಿ said...

ಬಾಲು ಸರ್..ಬಲು ಬೇಸರ ಸರ್. ನೀವೆಂಥ ಬೇಗ ಏಳೋ ಉಪಾಯ ಹೇಳಿಕೊಟ್ಟ ಮೇಲೆ ಮತ್ತೆ ಯಾವ ಉಪಾಯನೂ ಹೇಳಿಕೊಡ್ತಿಲ್ಲ..ಸ್ವಲ್ಪ ಬೇಗ ಪುರುಸೋತ್ತು ಮಾಡಿಕೊಂಡು ಆಪ್ ಡೇಟ್ ಮಾಡ್ತೀರಾ! ಲೇಟ್ ಎಳೋದಕ್ಕೆ ಏನಾದ್ರೂ ಐಡಿಯಾ ಇದ್ರೆ...ತಿಳಿಸಿ..ನಮ್ಗೂ ಉಪಯೋಗ ಆಗೈತೆ!!
-ಧರಿತ್ರಿ

Unknown said...

ಹೋಹೋ ... ನಿಮ್ಮ ಉಪಾಯಗಳು ಚೆನ್ನಾಗಿವೆ.. ಇದಕಿಂತ ನಾನು ಸಾಯಂಕಾಲ ವ್ಯಾಯಾಮ , ಯೋಗ ಎಲ್ಲ ಮಾಡ್ಕೊತೀನಿ...

ಬಾಲು said...

@PRABHU: bahala dhanyavaadagalu.

@Gore: Adu ultimate idea bidi. beligge bega eddelo agathya ne irolla!!

@Dharithri: ayyo e chunavane time nalli deshada bagge chinthisa beku. so yaaru nidde kadime madi chinthisi!!!

nanu heavy chinthistha irodrinda blog bareelikke time siktha illa!!!

ಜಿ.ಎಸ್.ಬಿ. ಅಗ್ನಿಹೋತ್ರಿ said...

ಕತರ್ನಾಕ್...

ಧರಿತ್ರಿ said...

ಬೇಗ ಲಕ್ಯರೆ ಐಡಿಯಾ ಪಂಡ್ ತ್ ಈರ್ ದೂರ ಪೋತ್ ನಿ...? ಸುದ್ದಿನೇ ಇಜ್ಜಿ. ದಾನೆ ಎಂಕುಲೆನ್ ಲಕ್ಕತ್ ಈರ್ ಜೆತ್ತಿನಾ? ಲಕಕ್ ಲೆ...ಬೇಗ ಪೊಸತು ಬರೆಲೆ ಸರ್.

-ಧರಿತ್ರಿ