ಮಾಡೋಕೆ ಏನು ಕೆಲಸ ಇಲ್ಲದೇ ಇದ್ದಾಗ, ಬೋರ್ ಆಗ್ತಾ ಇದೆ ಅಂದಾಗ, ಮ್ಯಾನೇಜರ್ ತಲೆ ಮೇಲೆ ಕೂತು, ತಲೆ ಕೆಡಿಸಿದಾಗ... ತುಟಿ ಗಳ ಮೇಲೆ ಕಿರು ನಗೆ ಗೆ... ಈ ಬ್ಲಾಗ್.
Sunday, May 17, 2009
ಸುಖ ಸಂಸಾರಕ್ಕೆ ಸಪ್ತ ಸೂತ್ರಗಳು.
ಇತ್ತೀಚೆಗೆ ದೇಶದಲ್ಲಿ ವಿವಾಹ ವಿಚ್ಚೇದನ ಗಳು ಜಾಸ್ತಿ ಆಗ್ತಾ ಇದೆ ಅಂತ ಸುದ್ದಿ. ಮದುವೆ ಆಗಿ 3-4 ವರ್ಷದ ನಂತರ ನಿನ್ ವ್ಯಾಲಿಡಿಟಿ ಮುಗೀತು ಅಂತ ಬೇರೊಬ್ಬ ಸಂಗಾತಿ ನ ಹುಡುಕೋದು ಸದ್ಯದ ಫ್ಯಾಶನ್. ಹೀಗೆ ಮಾಡುತ್ತಾ ಹೋದರೆ, ಮುಂದೊಮ್ಮೆ ಫಾದರ್ಸ್ ಡೇ, ಮದರ್ಸ್ ಮಾಡುವ ಹಾಗೆ ಗಂಡಂಡಿರ ದಿನ, ಹೆಂಡತಿರ ದಿನ ಅಂತ ಮಾಡಬೇಕಾಗಬಹುದು.
ಆದ್ದರಿಂದ ಮುಂದಾಗಬಹುದಾದ ಅಪಾಯವನ್ನು ತಪ್ಪಿಸಿ ಸಂಸಾರವೆಂಬ ನೌಕೆಯನ್ನು ಸುಖಮಯವಾಗಿ ನಡೆಸುವುದಕ್ಕೆ ಕೆಲವು ಸೂತ್ರಗಳನ್ನು ಪರಿಣಿತರೊಂದಿಗೆ ಚರ್ಚಿಸಿ ಕೆಳಗೆ ಕೊಡಲಾಗಿದೆ.
1. ಮನೆಯ ಯಜಮಾನರು ಯಾರು ಅಂತ ಯಾವತ್ತೂ ಚರ್ಚೆ ಮಾಡೋಕೆ ಹೋಗಬೇಡಿ!! ನೀವಲ್ಲ ಅಂತ ಗೊತ್ತಿರುವಾಗ ವಿಷ್ಯ ಕೆದಕಿ ಜಗಳ ಯಾಕೆ?
2. ಒಬ್ಬ ಶಾಸಕ ಕೈ ಕೊಟ್ಟರೆ ಸೆಫ್ಟಿ ಗೆ ಇರಲಿ ಅಂತ ಆಪಶನ್ ಕಮಲ ಮಾಡಿದ ಹಾಗೆ, ಆಪಶನ್ ಹೆಂಡತಿ / ಗಂಡ ಮಾಡಬೇಡಿ!!! (ಎನ್ ಡಿ ಎ, ಯು ಪಿ ಯೆ, ತೃತೀಯ,,,,, ತರ ಅಕ್ರಮ ಕೂಡಿಕೆ ಬೇಡ )
3. ಮನುಷ್ಯ ಕುಡಿದಾಗ ಸತ್ಯ ಹೇಳ್ತಾನೆ ಅಂತೆ, ಆದ್ದರಿಂದ ಮತ್ತೇರಿದಾಗ ನಿಮ್ಮ ಸಂಗಾತಿ ಹತ್ತಿರ ಕಾಲೇಜ್ ಜೀವನದ ಬಗ್ಗೆ ಮತಾಡ ಬೇಡಿ. ಕೆಲವೊಂದು ಕೃಷ್ಣ ಲೀಲೆ ಗಳು ಹೊರಬಾರದೇ ಇರುವುದು ಉತ್ತಮ ಅಲ್ಲವೇ.
4. ನಿಮ್ ಮೈಲ್ ಇಡಿ ಗೆ ಪಾಸ್ ವರ್ಡ್ ಆಗಿರೋ ನಿಮ್ ಹಳೆ ಗರ್ಲ್ ಫ್ರೆಂಡ್ / ಬಾಯ್ ಫ್ರೆಂಡ್ ಹೆಸ್ರನ್ನ ತೆಗೆದು ಬಿಡಿ!! ಯಾವತ್ತಾದ್ರೂ ನಿಮ್ ಪಾಸ್‌ವರ್ಡ್ ಗೊತ್ತಾಗಿ, ಗಲಾಟೆ ಆಗಬಹುದು.
5. ಹೆಂಡತಿ ಹಾಡು ಹೇಳೋಕೆ ಶುರು ಮಾಡಿದ್ರೆ ಗಂಡ ಹೊರಗೆ ಹೋಗಿ ಕುಳಿತು ಕೊಳ್ಳೋದು ಒಳಿತು, ಇದರಿಂದ ನೀವು ಹೆಂಡತಿಗೆ ಹೊಡಿತ ಇದ್ದೀರ ಅಂತ ಜನ ತಪ್ಪು ತಿಳಿಯೋಲ್ಲ.
6. ಹೆಂಡತಿಗೆ ಸಿಟ್ಟು ಬಂದಾಗ ಅಡುಗೆ ಮನೆಗೆ ಬಿಡಬೇಡಿ…ಅಲ್ಲಿ ಅವರ ವೆಪನ್ಸ್ ಇರ್ತವೆ ಲೈಕ್ ಲಟ್ಟಣಿಗೆ , ಮಗಚೋ ಕೈ…
7. ಸಾಫ್ಟ್ ವೇರ್ ಇಂಜಿನಿಯರ್ ನ ಮದುವೆ ಆಗೋದು ಒಳ್ಳೆಯದು ಅನ್ಸುತ್ತೆ, ಅವರು ಹಗಲು ಯಾವಾಗ್ಲೂ ಓಫೀಸ್ ನಲ್ಲೇ ಇರ್ತಾರೆ, ವೀಕ್ ಎಂಡ್ ಮನೇಲಿ ಇದ್ರು ಲ್ಯಾಪ್ ಟಾಪ್ ಹಿಡಿದು ಕೆಲ್ಸಾ ಮಾಡ್ತಾ ಇರ್ತಾರೆ, ಇವರಿಗೆ ಜಗಳ ಮಾಡೋ ಅಷ್ಟು ಟೈಮ್ ಕೂಡ ಇರೋಲ್ಲ!!!!
ವಿಶೇಷ ಸೂಚನೆ: ಈ ಸೂತ್ರ ಗಳು ಕುಮ್ಮಿ ಮತ್ತು ರಾಧಿಕಾಗೆ ಸಂಬಂಧಿಸಿರುವುದಿಲ್ಲ ಹಾಗೆಯೇ ಗಣಿ ರೆಡ್ಡಿ ಗಳಿಗು ಕೂಡ.
Subscribe to:
Post Comments (Atom)
13 comments:
Maduvene Aagadidre henge...?
ಶಾಸ್ತ್ರಿಗಳೇ,
ತಮಾಷೆಯಾಗಿದೆ, ನಿಮಗೆ ಮದುವೆಯಾಗಿದೆಯೋ ಇಲ್ಲವೊ ನನಗೆ ಗೊತ್ತಿಲ್ಲ, ಬಹುಶಃ ಆಗಿಲ್ಲ ಅ೦ತ ನನ್ನೆಣಿಕೆ, ಆದರೆ ಅನುಭವ ಇದ್ದ೦ಗಿದೆ. ಚೆನ್ನಾಗಿದೆ. ಎಲ್ಲ ಓಕೆ, ಕುಮ್ಮಿ-ರಾಧಿಕಾ ಯಾಕೆ ?
ಬಾಲು ಸರ್,
ಸೂತ್ರಗಳು ಚೆನ್ನಾಗಿವೆ...ಆದ್ರೆ ನಾನು ಹನ್ನೆರಡು ನಿರೀಕ್ಷಿಸಿದ್ದೆನಲ್ಲ...[ಸುಖ ಸಂಸಾರಕ್ಕೆ ಹನ್ನೆರಡು ಸೂತ್ರಗಳು]ಸಾದ್ಯವಾದರೆ ನಿಮ್ಮ ಪರಿಣಿತರೊಂದಿಗೆ ಚರ್ಚಿಸಿ..ನಮ್ಮ ಬೇಡಿಕೆ ಈಡೇರಿಸಿ...
ಧನ್ಯವಾದಗಳು..
ಹೆಂಡತಿ ಹಾಡು ಹೇಳೊವಾಗ ಹೊರಗೆ ಹೋಗಿ ಕುಳಿತುಕೋಳ್ಳೊದು ಓಳಿತು ಓದಿ ಬಿದ್ದಿ ಬಿದ್ದು ನಕ್ಕೆ... ನನ್ನ ಬ್ಲಾಗ ಓದಿದ ಮೇಲೂ ಸಾಪ್ಟವೇರ ಇಂಜನೀಯರುಗಳಿಗೆ ಜಗಳಕ್ಕೆ ಸಮಯ ಇರುವುದಿಲ್ಲ ಅಂತ ಹೇಗೆ ಅನ್ನಿಸಿತು ನಿಮಗೆ ಅಂತೀನಿ, ನನ್ನಾಕೆ ನಂದು ಯಾವಾಗಲೂ ಕಿತ್ತಾಟವೇ..(ಸುಮ್ನೆ ತಮಾಶೆಗೆ ಹೇಳ್ದೆ ಬೇಜಾರು ಮಾಡಿಕೊಳ್ಳಬೇಡಿ...)
ಲೋ ಮದುವೆ ಆಗೋ ಹುಡುಗರಿಗೆಲ್ಲ ಯಾಕೋ ಈ ಬ್ಲಾಗ್ ಗಳನ್ನೂ ಬರೆದು ತಲೆ ಕೆಡಿಸ್ತಿಯಾ ? ಸಂಸಾರ ಇಷ್ಟು ಕಷ್ಟ ಅಂತ ನಾನೇನಾದ್ರು ಮದುವೆ ಆಗಲಿಲ್ಲ ವೆಂದರೆ ನಿನ್ನನ್ನು ಹೊಣೆ ಮಾಡಿ ಕುಮ್ಮಿ ಮತ್ತು ರಾದಿಕ ಸಂಮುಕದಲ್ಲಿ ನಿನ್ನ ಮೇಲೆ ನ್ಯಾಯಾಲಯದಲ್ಲಿ ಮೊಕದ್ದಮೆ . ಇದು ನಿನಗ ಕಟ್ಟಿಟ್ಟ ಬುತ್ತಿ!
ಹ್ಹಾ ಹ್ಹಾ ಹ್ಹಾ...
ಒಳ್ಳೆ ಸೂತ್ರಗಳು
super aagide ri :)
end nalli Kummi, Radhika.. Gani Reddi... idu artha aaglilla. swalpa clear madtira? :)
8) ಹೆ೦ಡತಿ ಕೈ ಗೆ ನಿಮ್ಮ ಕ್ರೆಡಿಟ್ ಕರ್ಡ್ ಡೀಟೀಲ್ಸ್ ಅಪ್ಪಿ ತಪ್ಪಿ ಕೊಡಬೆಡಿ
9) ನಿಮ್ಮ ಅತ್ತೆ ಅವರ ವಿಚಾರ ಅಪ್ಪಿ ತಪ್ಪಿ ಎತ್ತ ಕ್ಕೆ ಹೂಗ ಕೂಡದು
10) ಕೆಲಸಕ್ಕೆ ಹೊಗುವ ಹೆ೦ಡತಿ ಅದುಗೆ ಮನೆ ಕಡೆ ಹೊಗ್ತಾಳೆ ಅ೦ತ ಆಸೆ ಇಟ್ಟು ಕೊಳ್ಳುವುದು ಅಪಾಯಕಾರಿ
ನಿಮ್ಮ ಸೂತ್ರಗಳು ಚೆನ್ನಾಗಿವೆ... ಆದರೆ ಆ ವಿಶೇಷ ಸೂಚನೆ ಅರ್ಥವಾಗಲಿಲ್ಲ.. :-)
ಅರುಣ: ಅದು ಅಲ್ಟಿಮೇಟ್ ಐಡಿಯಾ ಕಣೋ.
ಪರಾಂಜಪೆ ಅವರೇ, ದೇವರ ದಯೆ ನಂಗೆ ಇನ್ನು ಮದುವೆ ಆಗಿಲ್ಲ!!!
ಶಿವು: ನಾನು ಹನ್ನೆರಡು ಸೂತ್ರ ಗಳನ್ನೂ ಬರೆಯೋ ಹಾಗೆ ಇಲ್ಲ. ನನ್ನ ಸ್ನೇಹಿತ ವಕೀಲ ಇದ್ದಾನೆ, ಎಲ್ಲ ಸಂಸಾರ ಗಳು ಸುಖ, ಶಾಂತಿ ಇಂದ ಇದ್ದಾರೆ ಅವನಿಗೆ ಶ್ಯಾನೆ ಬೇಜಾರ ಆಗುತ್ತೆ!! ಆದರು ಪ್ರಯತ್ನ ಪಡುವೆ!
ಪ್ರಭು: ನೀವು ನಿಮ್ಮ ಪತ್ನಿಯೊಂದಿಗೆ ಮಾಡುವ ಕೀಟಲೆ ಯನ್ನು ಜಗಳ ಎಂದು ಪರಿಗಣಿಸಲು ಸಾದ್ಯ ವಿಲ್ಲ!!
ಚಂದ್ರು: ನಿಂಗೆ ರಾಗಿ ಮುದ್ದೆ ಮತ್ತೆ ಕೋಳಿ ಸಾರು ಕೊಡಿಸುವೆ, ಕೋರ್ಟು ಕೇಸು ಬೇಡ!!
ಶಿವ ಪ್ರಕಾಶ್: ಧನ್ಯವಾದ ಗಳು!!
ರಾಣಿ: ಕೆಲಸಕ್ಕೆ ಹೋಗೋ ಹೆಂಡತಿ ಅಡುಗೆ ಮಾಡೋಲ್ವಾ? ಸ್ವಲ್ಪ ನಂಗೆ ಮಹಾರಾಜರ ನಂಬರ್ ಕೊಡು!!
ವಿಶ್ವ ಮತ್ತೆ ಗೋರೆ avare
ವಿಶೇಷ ಸೂಚನೆ ಬಗ್ಗೆ ವಿವರಣೆ:
ಸೂತ್ರಗಳು ಸಂಸಾರಿಗಳಿಗೆ ಮಾತ್ರ ಅಂತ. ಕುಮ್ಮಿ ಮತ್ತು ರಾಧಿಕ ಅ ಕೆಟಗೊರಿ ಗೆ ಬರೋದಿಲ್ಲ, ಇನ್ನು ರೆಡ್ಡಿ ಗಳು ಕೂಡಿಕೆ ಮಾಡೋದ್ರಲ್ಲಿ ಎತ್ತಿದ ಕೈ ಅಲ್ಲವೇ? ಅಪೇರಶನ್ ಕಮಲ ಖ್ಯಾತಿ ಅವರಿಗೆ ಇದೆ ಅಲ್ಲ.
ಬಾಲು ಸರ್....
ಸೂಪರ್....!
ಇನ್ನೊಂದು ಸೂತ್ರ ನನಗೆ ಗೊತ್ತಿದೆ....
ಮಡದಿ ಹೇಳುವದನ್ನು ಕೇಳಿಸಿಕೊಳ್ಳಿ..
ಅಥವಾ ನೀವು ಸುಮ್ಮನಿರಿ....
ನಿಮ್ಮ ಐದನೇ ಸೂತ್ರ ಮಸ್ತ್ ಆಗಿದೆ....
ಬಾಲು,
ನಿಮ್ಮ ಬಾಲು ಸಿಕ್ಸರಿಗೋ, ಬೌಂಡರಿಗೋ ಹೋಗಿದ್ದುಂಟೇ..??
ಹಾಗಿದ್ದರೆ...ಹೆಚ್ಚಾಗಿ ಉತ್ತೇಜಿತರಾಗಿ ಕೂಗಬೇಡಿ...ಇದೂ ಒಂದು ಕಾರಣ ಆಗಬಹುದು..
ಇಲ್ಲ ನೀವು ಔಟ್ ಅಂತ ನಿಮ್ಮ ಹೆಂಡ್ತಿ ಹೇಳಿದ್ರೆ ನಿಮ್ಮ ಗರ್ಲ್ ಫ್ರೆಂಡ್ ಅಂಪೈರ್ ಗೆ ರೆಫರ್ ಮಾಡಬೇಡೀ...
ಸುಮ್ಮನೆ ಪೆವಲಿಯನ್ ಕಡೆಗೆ ಹೊರಟುಬಿಡಿ..
ಇದೂ ಒಂದು ಸೂತ್ರಾನೇ...??
ಹಹಹ...ಮಜವಾಗಿದೆ ನಿಮ್ಮ ಸೂತ್ರಾವಲೋಕನ...
ಬನ್ನೀ ಅಲ್ಲ ನಮ್ಮ ಮನ್ಎಗೂ ಒಮ್ಮೆ...ಧರಿತ್ರಿಯವರ ಬ್ಲಾಗ್ ನಲ್ಲಿ ನಿಮ್ಮ ಪ್ರತಿಕ್ರಿಯೆನೋಡಿ ನಿಮ್ಮ ಗೂಡಿಗೆ ಬಂದೆ...
ಏನೋ ಈ ಪುಳಚಾರಿಗೆ ಕೋಳಿ ಸಾರು ಮುದ್ದೇನ! ಇವಾಗ ಇನ್ನು ಸ್ಟ್ರಾಂಗ್ ಸಾಕ್ಷಿ ಸಿಕ್ತು ಕೇಸ್ ಹಾಕೋಕೆ.. ನಿನ್ನ ಬಿಡಲ್ಲ ....
Post a Comment