ಮಾಡೋಕೆ ಏನು ಕೆಲಸ ಇಲ್ಲದೇ ಇದ್ದಾಗ, ಬೋರ್ ಆಗ್ತಾ ಇದೆ ಅಂದಾಗ, ಮ್ಯಾನೇಜರ್ ತಲೆ ಮೇಲೆ ಕೂತು, ತಲೆ ಕೆಡಿಸಿದಾಗ... ತುಟಿ ಗಳ ಮೇಲೆ ಕಿರು ನಗೆ ಗೆ... ಈ ಬ್ಲಾಗ್.
Friday, July 3, 2009
ಕಾಂಗ್ರೆಸ್ ಗೆ ಒಂದು ಸಲಹೆ...
ಕಳೆದ 2- 3 ದಿನಗಳಿಂದ ನನಗೆ ವಿಪರೀತ ಕುಶಿ ಆಗ್ತಾ ಇದೆ, ಕಾರಣ ಏನು ಅಂತೀರಾ? ಇದೋ ಕೇಳಿ. ಅಂತೂ ಇಂತು ಮುಂಬೈ ನಲ್ಲಿ ಕಟ್ಟಿರೊ ಒಂದು ದೊಡ್ಡ ಸೇತುವೆ ಗೆ ರಾಜೀವ್ ಗಾಂದಿ ಹೆಸ್ರು ಈಡೋ ತೀರ್ಮಾನ ಆಗಿದೆ ಅಂತೆ, ಇದು ಪವಾರ್ ಅವರು ಕೊಡ್ತಾ ಇರೋ ಸಲಹೆ. ಇದನ್ನು ಕೇಳಿ ನಂಗೆ ಹಾಲು ಕುಡಿದಷ್ಟು ಸಂತೋಷ ಆಯಿತು. ರಾಜೀವ್ ವಿಮಾನ ನಿಲ್ದಾಣ, ರಾಜೀವ್ ಬಸ್ ನಿಲ್ದಾಣ, ಇಂದಿರ ಅವಾಸ, ರಾಜೀವ್ ಯುವ ಕೇಂದ್ರ, ಅಂತೆಲ್ಲಾ ಇದ್ರು ನಂಗೆ ಸಮಾಧಾನ ಆಗಿರಲಿಲ್ಲ.
ನವ ಭಾರತ ನಿರ್ಮಾತೃ, ದೇಶಕ್ಕಾಗಿ ಕುಟುಂಬವನೆ ಮುಡುಪು ಇಟ್ಟಿರೋ ನೆಹ್ರು ಮನೆತನದ ದವರ ಹೆಸ್ರು ಇಡೋದು ಅತ್ಯಂತ ಸೂಕ್ತ ಅಂತ ನನ್ನ ಭಾವನೆ. ಆದ್ದರಿಂದ ನನ್ನ ಕಡೆ ಇಂದ ಕೇಂದ್ರ ಸರಕಾರಕ್ಕೆ ಕೆಲವೊಂದು ಸಲಹೆ, ಇನ್ನೂ ಎಲ್ಲೆಲ್ಲಿ ಆ ಮಹಾನು ಭಾವರ ಹೆಸ್ರು ಇಡಬಹುದು ಅಂತ. ದೇಶದಲ್ಲಿ ಇನ್ನೂ ಹಲವು ಯೋಜನೆ ಹಾಗೂ ಸ್ಥಳ ಗಳಿಗೆ ಅವರ ಹೆಸರು ಇಡಬಹುದಾಗಿದೆ. ಇಲ್ಲಿ ಬರೆದಿರುವ ಯೋಜನೆಗಳ ಕರ್ತೃ ನಾನೇ ಆಗಿರುತ್ತೇನೆ, ದಯಮಾಡಿ ಯಾವ ಕಾಂಗ್ರೆಸ್ ಕಾರ್ಯಕರ್ತರು ಇದನ್ನು ಕದಿಯ ಬಾರದು.
ನಮ್ಮ ದೇಶದಲ್ಲಿ ಒಳ್ಳೆಯ ರಾಜಕಾರಣಿ ಗಳು ಬಹಳ ಕಡಿಮೆ, ಒಳ್ಳೆಯ ಜನ ಇದ್ರೂ ಅವರು ರಾಜಕೀಯ ದಿಂದ ನಿವೃತ್ತ ರಾಗಿದ್ದಾರೆ, ಆದ್ದರಿಂದ ಈ ವಂಚಕ ಮಹಾ ಪ್ರಭುಗಳಿಗೆ ಅಂತ ಒಂದು ಜೈಲು ನಿರ್ಮಾಣ ಮಾಡಬೇಕು. ಅವರ ತಪ್ಪು ಗಳು ಸಾಬೀತು ಆಗುವುದು ಬಹಳ ಕಡಿಮೆ, ಆದರೂ ಒಂದು ಜೈಲು ಕಟ್ಟಿಸಬೇಕು, ಹಾಗೂ ಅದಕ್ಕೆ “ರಾಜೀವ್ ಬೋಫರ್ಸ್” ಕಾರಾಗೃಹ ಅಂತ ಹೆಸರಿಸ ಬೇಕು.
ನಮ್ಮ ದೇಶದಲ್ಲಿ ಯಾವಾಗ ಬೇಕಾದ್ರೂ ಬಾಂಬು ಗಳು ಸಿಡಿದು ನಾವೆಲ್ಲ ಸ್ವರ್ಗಸ್ತರಾಗ ಬಹುದು. ಉಗ್ರಗಾಮಿಗಳು ಬಂದು ಗುಂಡಿನ ಮಳೆ ಗೆರೆಯ ಬಹುದು. ಹಾಗಾಗಿ ಉಗ್ರಗಾಮಿಗಳಿಂದ ಸತ್ತವರ ಸಮಾಧಿಗೆ ಅಂತ ರಾಜೀವ್ ರುದ್ರ ಭೂಮಿ ಮಾಡಿಸಬೇಕು. ಮುಂಬೈ, ಕಾಶ್ಮೀರ್ ಗಳಲ್ಲಿ ಜನ ಉಗ್ರರಿಂದ ಸಾಯೋ ಸ0ಖ್ಯೆ ಜಾಸ್ತಿ ಇರೋದ್ರಿಂದ ಅಲ್ಲೆಲ್ಲ ರಾಜೀವ್ ವಿಧ್ಯುತ್ ಚಿತಾಗಾರ ಮಾಡಿದರೆ ಇನ್ನೂ ಒಳ್ಳೇದು.
ನಮ್ಮಲ್ಲಿ ಹಿಂದೂ ಅಂತರ್ಜಾತೀಯ ವಿವಾಹಕ್ಕೆ ಆರ್ಯ ಸಮಾಜ ಇದೆ, ಸರ್ಕಾರವು ಕೂಡಲೇ ಇದನ್ನು ನಿಷೇದಿಸಿ, ಪ್ರತಿ ಊರಲ್ಲೂ ಪ್ರಿಯಾಂಕ ಛತ್ರ ಮಾಡಿಸಬೇಕು. ಮದುವೆ ಏ ಆಗೋಲ್ಲ, ಬರಿ ಇಷ್ಟ ಬಂದಷ್ಟು ದಿನ ಮಜ ಮಾಡ್ಕೊಂಡು ಒಟ್ಟಿಗೆ ಇರ್ತೀವಿ ಅನ್ನೋರಿಗೆ ರಾಹುಲ್ ಗಾಂದಿ ಯೋಜನೆ ಮಾಡಿ ಅವರಿಗೆ ಧನ ಸಹಾಯ ಮಾಡಬೇಕು.
ಬಾಂದ್ರಾ ಮತ್ತು ವೊರ್ಲಿ ಸೇತುವೆ ಗೆ ರಾಜೀವ್ ಹೆಸ್ರು ಇಟ್ಟಾಗಿದೆ, ಆದರೆ ಅದರ ಕೆಳಗಿನ ಸಮುದ್ರದ ಮೀನುಗಳಿಗೆ ರಾಜೀವ್ ಹೆಸ್ರು ಇಟ್ಟಿಲ್ಲ ಅಂತ ಮೀನು ಗಳು ಗೊಳೋ ಅನ್ನುತ್ತಾ ಇದ್ದಾವೆ ಅಂತ ಸುದ್ದಿ ಬಂದಿದೆ. ಆದ್ದರಿಂದ ಸರ್ಕಾರವು ಇನ್ನೂ ಮುಂದೆ ಇಂತಹ ಅವಗಡ ಗಳು ನಡೆಯದಂತೆ , ರಾಜೀವ್ ಅಥವಾ ಇಂದಿರ ಹೆಸರಿಟ್ಟ ಪೋಷಕರಿಗೆ ಉಚಿತ ಸೀರೆ, ಗಂಡಸರಿಗೆ ಎಣ್ಣೆ ಕೊಡಬೇಕು. ಮುಂದೆ ಮಕ್ಕಳಿಗೆ ನಿರುದ್ಯೊಗ ಬತ್ಯೆ ಕೊಡಬೇಕು.
ವಿರೋಧ ಪಕ್ಷಗಳು ಈಗಾಗಲೇ ಈ ಹೆಸರಿಡೊ ಪದ್ದತಿ ಅನುಸರಿಸುತ್ತಾ ಇದ್ದಾವೆ, ಉದಾಹರಣೆಗೆ ಬೆಂಗಳೂರಿನಲ್ಲಿ ಅಟಲ್ ಸಾರಿಗೆ. ಆದ್ದರಿಂದ ಯಾವುದೇ ಸರ್ಕಾರಿ ಯೋಜನೆ ಗಳಿಗೆ ಹೆಸರುಗಳು ಯಾವತ್ತೂ ರಾಜೀವ ಅಥವಾ ಇಂದಿರ ಅಂತಲೇ ಇರಬೇಕೆಂದೂ ಒಂದು ಕಾಯಿದೆ ಅನ್ನು ಹೊರತರ ಬೇಕು..
ನಮ್ಮಲ್ಲಿ ಕೊಡುವ ಬಹುತೇಕ ಪ್ರಶಸ್ತಿ ಗಳಿಗೆ ರಾಜೀವ್ ಮತ್ತೆ ಇಂದಿರ ಹೆಸರಿದೆ. ಆದರೆ ಅತ್ಯುನ್ನತ ಪ್ರಶಸ್ತಿ ಗಳಿಗೆ ಅವರ ಹೆಸರಿಲ್ಲದೇ ಇರುವುದು ನನಗೆ ಪಿಚ್ಚೆನಿಸುತ್ತಾ ಇದೆ. ಕೂಡಲೇ ಭಾರತ ರತ್ನ ವನ್ನು ರಾಜೀವ್ ರತ್ನವೆಂದು, (ರಾಜೀವ್ ಗಾಂದಿ ಖೇಲ್ ರತ್ನ ಇದೆ ಆದ್ರೆ ಅದು ಬೇರೆ) ಜ್ಞಾನ ಪೀಠ ವನ್ನು ಇಂದಿರಾ ಪೀಠ ವೆಂದು ಬದಲಿಸ ಬೇಕು.
ಆಮೇಲೆ ಇಲ್ಲಿ ಬೆಂಗಳೂರಲ್ಲಿ ಇನ್ಫೋಸಿಸ್ ಸುಧಾ ಮೂರ್ತಿ ಅವರು ನಗರದ ಜನನಿಬಿಡ ಸ್ಥಳ ಗಳಲ್ಲಿ “ಪ್ರಕೃತಿ ಕರೆ” ಒಗೋಡಲು ಹಲವು “ನಿರ್ಮಲ ಬೆಂಗಳೂರು” ಮಾಡಿದ್ದಾರೆ, ಕೂಡಲೇ ಸರ್ಕಾರವು ಇದನ್ನು ರಾಷ್ಟ್ರೀಕರಣ ಮಾಡಿ ರಾಜೀವ್ ಹೆಸರು ಇಟ್ಟರೆ ಬಹಳ ಚೆನ್ನಾಗಿರುವುದು.
ಇನ್ನು ಕೋನೇದಾಗಿ ಈ ದೇಶದ ಹೆಸ್ರನ್ನೇ ಬದಲಿಸಿ ಬಿಟ್ಟರೆ ಆಯಿತು, ಇಂಡಿಯಾ ಬದಲು ಇಂದಿರ ಅಂತ ಮಾಡಿದ್ರೆ ಮುಗೀತು.
ಈ ಬೇಡಿಕೆಗಳು ಕೂಡಲೇ ಜಾರಿಗೆ ಬರಬೇಕೆಂದು ನಾನು ಸರ್ಕಾರವನ್ನು ಈ ಬ್ಲಾಗಿನ ಮೂಲಕ ಒತ್ತಾಯ ಪಡಿಸುತ್ತಾ ಇದ್ದೇನೆ. (ಅವರ್ಯಾರು ಇದನ್ನ ನೋಡಲ್ಲ, ಆದ್ರೂ … ಕೂಡ ಹೆವೀ ಒತ್ತಾಯ) ಹಾಗೂ ಸರ್ಕಾರವು ನನ್ನ ಮನವಿ ಯನ್ನು ಅತ್ಯಂತ ಸೂಕ್ಷ್ಮವಾಗಿ ಅವಲೋಕಿಸಿ, ಕಾರ್ಯರೂಪಕ್ಕೆ ತರುತ್ತದೆ ಅಂತ ನಾನು ಭಾವಿಸುವೆ. ನೀವೇನಂತೀರಿ?
ನನ್ನ ಸ್ನೇಹಿತ ಕಳಿಸಿದ ಫೋಟೋ ಇದು. ಸೇತುವೆ ಉದ್ಘಾಟನೆ ಅನಾಮಿಕ ನಿಂದ!!!!!!
Subscribe to:
Post Comments (Atom)
16 comments:
haha hahahhaaha, too good
ಯಾಕೆ ಬಾಲಣ್ಣ,
ನಿಮಗೆ ತಮಾಶಿ ಮಾಡಕ್ಕೆ ನನ್ನ ಹೆಸರೇ ಸಿಕ್ಕಿತೆ? ;)
ಪರವಾಗಿಲ್ಲ ಬಿಡಿ. ಕಾಂಗ್ರೆಸ್-ಗೆ ಉದ್ದೇಶಿಸಿ ಬರೆದಿದ್ದೀರ. ನನಗೂ ಅದಕ್ಕೂ ಬಹಳ ಅಂತರ ಇದೆ.
<< ನಮ್ಮ ದೇಶದಲ್ಲಿ ಯಾವಾಗ ಬೇಕಾದ್ರೂ ಬಾಂಬು ಗಳು ಸಿಡಿದು ನಾವೆಲ್ಲ ಸ್ವರ್ಗಸ್ತರಾಗ ಬಹುದು. >>
ಹೀಗೆ ಹೇಳಿಬಿಟ್ಟರೆ ಹೇಗೆ? ನಾನು ಕನಿಷ್ಠಪಕ್ಷ ಇನ್ನು ೧೨೦ ವರುಷಗಳಾದರೂ ಇರಬೇಕೆನ್ದುಕೊಂಡಿದ್ದೇನೆ.
ತಮಾಶಿಯಾಗಿದ್ದರೂ ನಿಮ್ಮ ಈ ವಿಷಯ ಗಂಭೀರವಾದುದ್ದೆ.
ನಮ್ಮದೂ ಸಹಮತವಿದೆ ! :)
janaardana poojaariyavara blaagina hesaru haago yaava kaa0gres sadasyara dUravaaNi sa0kye nanage gotilla :-( :-( Ce !!! e0tha kelasavaayitu ...!!!! neevu i0tha o0du oLLeya salahe koDuttIra a0ta gottiddare naanu janaardana poojaariyavara na0bra tegedukoLLuttidde ... Iga avaru patte illa. Ce!!!!
It should be an eye opener...
ಗುರುಮೂರ್ತಿ ಅವರೇ ಧನ್ಯವಾದಗಳು.
ರಾಜೀವ್: ನಿಮ್ಮ ಬಗ್ಗೆ ಅಲ್ಲ ಸ್ವಾಮಿ ನಾನು ಹೇಳಿದ್ದು!! :) :)
ನೀವು ಇನ್ನು ೧೨೦ ವರುಷಗಳು ಬದುಕುವಿರೋ? ಬಹಳ ಒಳ್ಳೆಯದು.
ರಾಹುಲ್ ಗಾಂದಿ ಯಾ ಮರಿ ಮಕ್ಕಳು ಪ್ರಧಾನಿ ಆಗುವುದನ್ನು ನೀವು ಕಾಣುವಿರಿ ಅನ್ನಿಸುತ್ತದೆ.
ಅದೃಷ್ಟ ವಂತರು ನೀವು. ಒಳ್ಳೆದಾಗಲಿ :) :)
ವಿಕಾಸ್: ಹ್ಞೂ ಕಣೋ.
ರೂಪ: ಛೆ ಎಂತ ಅವಕಾಶ ಮಿಸ್ ಆಯಿತು. ನಿರುದ್ಯೋಗ ಬತ್ಯೆ ಕೊಡುವೆ ಅಂತ ಹೇಳಿದ್ದ ಪೂಜಾರಿ ಇಗ ಎಲ್ಲಿದ್ದಾರೋ...
ನೀವು ಹೇಳಿದ ಹಾಗೆ.. ನನಗೂ ಅವಕಾಶ ಮಿಸ್ ಆಗ್ತಾ ಇದೆ, ಇ ಸಲಹೆ ನ ನಾನೇ ಮೇಡಮ್ಮಿಗೆ ಕೊಟ್ಟರೆ ನನ್ನ ಎಲ್ಲಾದರೂ ಮಂತ್ರಿ ಮಾಡಬಹುದು. :)
ರವಿ: ದನ್ಯವಾದಗಳು.
ಸೇತುವೆ ಕೂಡ ರಾಜೀವ್ ಗಾಂಧಿತರ ಬೇಗ ಬೀಳದಿದ್ದರೆ ಸಾಕು...
ಇಂಡಿಯ ಬದಲು ಇಂದಿರಾ, ಮೂರ್ನಾಲ್ಕು ರಾಜ್ಯಗಳನ್ನು ರಾಜೀವ್ ಪ್ರದೇಶ್ ಎಂದು ಕರೆಯಲೇಬೇಕು ಎಂಬುದು ನಮ್ಮ ಬಲವಾದ ಆಶಯ. ಎಲ್ಲಾ ರಾಜ್ಯಗಳಲ್ಲೂ ರಾಜೀವ್ ನಗರ, ಇಂದಿರಾ ನಗರಗಳು ಇರಲೇಬೇಕು. ಇದಕ್ಕಾಗಿ ನಾಳೆಯಿಂದಲೇ ಧರಣಿ, ಸತ್ಯಾಗ್ರಹ ಕೂಡಲಿದ್ದೇವೆ. ಜೈ ರಾಜೀವ್, ಜೈ ಇಂದಿರಾ, ಜೈ ಸೋನಿಯಾ, ಜೈ ರಾಹುಲ್, ಜೈ ಪ್ರಿಯಾಂಕಾ, ಜೈ ...., ಅಂದಹಾಗೆ ಪ್ರಿಯಾಂಕಾ ಮಕ್ಕಳ ಹೆಸರೇನು...?
ಇನ್ನು ಮಾಯಾವತಿ ಏನಾದರೂ ಪ್ರಧಾನಿಯಾದರೆ, ಎಲ್ಲೆಲ್ಲೂ ಅಂಬೇಡ್ಕರ್, ಕಾನ್ಶಿರಾಂ, ಮಾಯಾವತಿ ಹೆಸರುಗಳೇ ತುಂಬಬಹುದು. ಭಾರತ ಅಂಬೇಡ್ಕರ್ ದೇಶ್ ಆಗಬಹುದು.
ಅಬ್ಬಾ ಬಾಲು ಸರ್ ಒಂದಕ್ಕಿಂತ ಒಂದು ಐಡಿಯಾಗಳು ಚೆನ್ನಾಗಿವೆ, ಕೊನೆಗೆ ದೇಶದ ಹೆಸರು ಬದಲಾಯಿಸುವ ಐಡಿಯ ಅಂತೂ ಸೂಪರ. ರಾಹುಲ ಯೋಜನೆ ಬಂದ್ರೆ ನಮಗೊಂದು ಸ್ವಲ್ಪ ಹೇಳಿ, ನಮಗೂ ಮದುವೆಯಾಗಿಲ್ಲ ಏನೊ ನಾವು ಫಲಾನುಭವಿಗಳಾಗೋಣ!
ಬಾಲು
ಸೂಪರ್ ಐಡಿಯಾ ಕೊಡುವ ನಿಮ್ಮನ್ನು ನಮ್ಮ ರಾಜಕೀಯ ನಾಯಕರು ಗಮನಿಸಿದ್ದಾರೆ. ಇ೦ದಿನ ಬಜೆಟಿನಲ್ಲಿ ಹೊಸದಾಗಿ "ರಾಜೀವ ಪುನರುಜ್ಜೀವನ ನಿಗಮ" ಅ೦ತ ಒ೦ದು ಹೊಸ ಸ೦ಸ್ಥಾಪನೆ ಶುರು ಆಗುವ ಬಗ್ಗೆ ಪ್ರಸ್ತಾವನೆ ಇದೆಯ೦ತೆ. ನಿಲೇಕಣಿಯವರಿಗೆ ಕ್ಯಾಬಿನೆಟ್ ಸ್ಥಾನಮಾನ ಕೊಟ್ಟು ಕೇ೦ದ್ರ ಸರಕಾರ ಹೊಸ ಜವಾಬ್ದಾರಿ ವಹಿಸಿಕೊಟ್ಟಿರುವ೦ತೆ, ನಿಮಗೆ ಈ ಹೊಸ ನಿಗಮದ ಅಧ್ಯಕ್ಷತೆ ವಹಿಸಿ ಕೊಟ್ಟು ನಿಮ್ಮ ವಿನೂತನ ಐಡಿಯಾ ಗಳನ್ನೂ ಕಾರ್ಯರೂಪಕ್ಕೆ ತರಲು ಅವಕಾಶ ಮಾಡಿಕೊಡುವ ಯೋಚನೆ ಇದೆಯ೦ತೆ. ಜೈ ಹೋ.
ಬಾಲು ಸರ್,
ನಿಮ್ಮ ಐಡಿಯಾಗಳು ತುಂಬಾ ಚೆನ್ನಾಗಿರುತ್ತವೆ..ನೀವು ರಾಜತಾಂತ್ರಿಕ[ರಾಜಕೀಯದವರಿಗೆ ಅದರಲ್ಲೂ ಕಾಂಗ್ರೆಸ್ ಪಕ್ಷಕ್ಕೆ]ತಂತ್ರಗಳನ್ನು ಹೇಳುವ ಕೆಲಸಕ್ಕೆ ಸೇರಿಬಿಡಿ...
ಅಂದಹಾಗೆ ನಾನು ಕಾಂಗ್ರೆಸ್ ಪಕ್ಷಕ್ಕೆ ನಿಮ್ಮ ಹೆಸರನ್ನು ಮೇಲ್ ಮಾಡಿಬಿಟ್ಟಿದ್ದೇನೆ...ಮುಂದೆ ಒಳ್ಳೆಯದಾದರೇ ನನ್ನನ್ನು ನೆನೆಸಿಕೊಂಡರೇ ಸಾಕು...
ಧನ್ಯವಾದಗಳು.
hushragir bekappa...
nam hesrannu badalayisi bittaru konege..
Ninge gothildene votal list ali
'BALA RAJEEV SHATRY' antha badlayisi bittaru...
-SHiv
ಹಾ ಹಾ ಹಾ ಹಾ ಹಾ.... ಒಳ್ಳೆ ಸಲಹೆ ಸ್ವಾಮೀ....
ಶಿವ ಶಂಕರ ರೆ:
ಟೈಮ್ ಪಾಸ್ ಗೆ ಸ್ವಾಗತ. ನನ್ನೆಲ್ಲ ಸಲಹೆ ಗಳನ್ನ ದಿಲ್ಲಿ ಮೇಡಂ ಗೆ ಇಮೇಲ್ ಮಾಡುವವ ನಿದ್ದೇನೆ.
ನೋಡೋಣ ನಾನು ಯಾವುದಾದರು ಮಂತ್ರಿ ಪದವಿ ಗಿಟ್ಟಿಸ ಬಹುದು.
ಅರುಣ್: ಹ್ಞೂ ಕಣೋ, ಅದು ದೀರ್ಘ ಬಾಳಿಕೆ ಬರಲಿ.
ದೀಪ:
ಮಾಯಮತಿ ಆದರೆ, ದೇಶದ ತುಂಬೆಲ್ಲ ಆಕೆಯ ಪ್ರತಿಮೆ ಗಳೇ ತುಂಬಿ ಕೊಳ್ಳುತ್ತವೆ. ಹಾಗು ಅ ಪ್ರತಿಮೆ ಗಳನ್ನೂ ಆಕೆಯೇ ಉದ್ಘಟಿಸುತ್ತಾಳೆ. ನೋಡುವ ಕರ್ಮ ನಮ್ಮದು.
ಸಧ್ಯಕ್ಕೆ ನೆಹರು ಕುಟುಂಬಕ್ಕೆ ಜೈ, ಪ್ರಿಯಾಂಕ ಮಕ್ಕಳಿಗೂ ಜೈ ಇರಲಿ.
ಪ್ರಭುರಾಜ್:
ಹೌದು ಹೌದು, ನಾನು ಕೂಡ ಅಂತಹ ಯೋಜನೆ ಗೆ ಕಾಯುತ್ತಾ ಇದ್ದೇನೆ, ನಾವುಗಳು ಫಲನು ಭಾವಿಗಳು ಆಗೋಣ!! :)
ಪರಾಂಜಪೆ ಅವರೇ:
ನಿಮ್ಮ ಹಾರೈಕೆ ನಿಜ ಆದಲ್ಲಿ, ನಿಮ್ಮನ್ನು ಯಾವುದಾದರು ಒಂದು ರಾಜ್ಯಕ್ಕೆ ರಾಜ್ಯ ಪಾಲರನ್ನಗಿ ನೇಮಕ ಮಾಡಲು ಶಿಫಾರಸು ಮಾಡುವೆ.
ಶಿವೂ:
ಇಮೇಲ್ ಮಾಡಿದ್ದಿರ? ನಿಮ್ಮ ಅಭಿಮಾನಕ್ಕೆ ತುಂಬಾ ಋಣಿ. ಅಧಿಕಾರ ಸಿಕ್ಕ ಮೇಲೆ ನಿಮ್ಮನ್ನು ತುಂಬಾ ನೆನೆಸಿ ಕೊಳ್ಳುವೆ, ಕೇಳಿದ್ದು ಕೊಡುವೆ. (ನಾನು ಆಶ್ವಾಸನೆ ಕೊಡೋದನ್ನ ಕಲಿತ ಇದ್ದೀನಿ!!! )
ಶಿವ:
ಹ್ಞೂ ಮಾರಾಯ ಕೊಪ್ಪದಲ್ಲಿ ಮೊದಲು ನನ್ನ ವೋಟ್ ಲಿಸ್ಟ್ ನ ಪರೀಕ್ಷೆ ಮಾಡಬೇಕು. ಹೆಸರು ಬದಲಾಗಿದ್ದರು ಆಗಿರಬಹುದು. ನಂಬೋಕೆ ಆಗೋಲ್ಲ. ನೀನು ಇರೋ ದೇಶದಲ್ಲಿ ಇಂಥಹ ಅವಕಾಶ ಇದೆಯಾ?
ಅಗ್ನಿಹೊತ್ರಿಗಳೇ: ಹ್ಞೂ, ಸಧ್ಯದಲ್ಲೇ ಇ ಸಲಹೆ ಗಳು ನಿಜವಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಹಲೋ ಚಾಲು ಸರ್..ಭಾಳ ದಿನಗಳ ನಂತರ ನಿಮ್ಮ ಬ್ಲಾಗಿಗೆ ಬಂದು ಹೊಟ್ಟೆತುಂಬಾ ನಕ್ಕಿದ್ದೇನೆ. ಥ್ಯಾಂಕ್ಯೂ ಸರ್.
"ನವ ಭಾರತ ನಿರ್ಮಾತೃ, ದೇಶಕ್ಕಾಗಿ ಕುಟುಂಬವನೆ ಮುಡುಪು ಇಟ್ಟಿರೋ ನೆಹ್ರು ಮನೆತನದ ದವರ ಹೆಸ್ರು ಇಡೋದು ಅತ್ಯಂತ ಸೂಕ್ತ ಅಂತ ನನ್ನ ಭಾವನೆ.." ಹಿಂಗಂತ ಯಾರ್ರೀ ಹೇಳಿದ್ದು? ...ಥತ್! ಇರಲಿ ಬಿಡಿ..ನೀವಿಟ್ಟಿರೋ ಹೆಸರುಗಳು ಸೂಪರ್ಬ್.
ಬಾಲು ಸರ್..ಗಂಭಿರವಾದ ವಿಷಯಗಳನ್ನು ಹಾಸ್ಯದ ಮೂಲಕ ಹೇಗೆ ಬರೆಯಬಹುದು ಎನ್ನುವುದಕ್ಕೆ ನಿಮ್ಮ ಬ್ಲಾಗ್ ನಿದರ್ಶನ. ಇಂಥ ವಿಚಾರಗಳು ವಾಸ್ತವವಾದರೂ ಎಲ್ಲೂ ಚರ್ಚೆಯಾಗೊಲ್ಲ,..ಗುಡ್. ತುಂಬಾ ಖುಷಿಯಾಯಿತು. ಹೀಗೇ ಬರೆಯುತ್ತಿರಿ..
ಧನ್ಯವಾದಗಳು
-ಧರಿತ್ರಿ
ಸರ್,
ಸೇತುವೆ ಉದ್ಘಾಟನೆ ನೋಡಿ ನಗು ಬಂತು.
ನಿಮ್ಮ ಐಡಿಯಾಗಳಿಗೆ ಪೇಟೆಂಟ್ ಮಾಡಿಸಬೇಕು. ಸಕತ್ ತಮಾಷೆಯಾಗಿ ಬರೀತೀರ.
Post a Comment