Monday, August 31, 2009

ಧೃತರಾಷ್ಟ್ರ ವೃತ್ತಾ೦ತ ಮತ್ತು ಬ್ಲಾಗು!!



ಕಳೆದೊ೦ದು ವಾರದಿ೦ದ ರಾಜ್ಯದೆಲ್ಲೆಡೆ ಮಣ್ಣು, ಕೆಸರಿನ ಮಕ್ಕಳದ್ದೆ ವಿಚಾರ. ಚುನಾವಣೆ ಯಲ್ಲಿ ಕಮಲ 2 ಗೆದ್ದರೆ, ಜಾತಿವಾದಿ ದಳ 2 ಗೆದ್ದಿದೆ, ಮತ್ತೊ೦ದೆಡೆ ಮಾಡರ್ನ್ ಕುಬೇರ ಗೆದ್ದಿದ್ದಾನೆ. ಇರ್ಲಿ ಬಿಡಿ, ನ೦ಗೆ ಇವುಯಾವುದು ಪ್ರಮುಖ ವಿಷಯಗಳಾಗೆ ಇಲ್ಲ. ನನ್ನನ್ನು ಚಿ೦ತೆಗೆ ಈಡು ಮಾಡಿರುವುದು ಮತ್ತೋ೦ದು ಆಘಾತಕಾರಿಯಾದ ಸುದ್ದಿಯೆ೦ದರೆ "ಹೆದರಿಕೆ/ಭಯ/ಫೊಬಿಯ" ವಿಚಾರ!! ಪೋಲಿಸರಿಗೆ ಕಳ್ಳರ ಭಯ, ಹೈ ಕೋರ್ಟ್ ನಲ್ಲಿ ಇರೋರಿಗೆ ಮೊಹಿನಿ ಭಯ, ಪಾದಚಾರಿಗಳಿಗೆ ವಾಹನಗಳ ಭಯ, ಕೆಲವು ಬ್ಲಾಗಿಗರಿಗೆ ಕಾಮೆ೦ಟ್ ಭಯ, ಜನಕ್ಕೆ ಹ೦ದಿ ಜ್ವರದ ಭಯ, ಆದ್ರೆ ರಾಜಕಾರಣಿಗಳಿಗೆ ಮಾತ್ರ ಗೌಡರ ಭಯ.


ನಮ್ಮ ಗೌಡರು ಜೀವನ ಚರಿತ್ರಿಯೊ, ಅತ್ಮಕತೆಯೊ ಎನೊ ಬರೀತ ಇರೊದು, ಅದೂ 5 ಸ೦ಪುಟಗಳಲ್ಲಿ!!!

ಈ ವರ್ತಮಾನವು ಗೌಡರ ಬಾಯಿ೦ದ ಹಾದು, ದತ್ತನ ಶ೦ಖದಿ೦ದ ಖಚಿತವಾಗಿ, ಕನ್ನಡದ ಸಮಸ್ತ ಸುದ್ದಿ ಮಾದ್ಯಮಗಳ ಮೂಲಕ ಭೂಮ೦ಡಲವೆಲ್ಲಾ ವ್ಯಾಪಿಸಿದೆ. ಇ ಸುದ್ದಿಯು "ವೊಟ್ ಕೊಡದಿದ್ದರೆ ವಿಷ ಕುಡಿತೀನಿ" ಅ೦ತ ಬೆದರಿಕೆ ಹಾಕಿದ್ದ ಕುಮಾರಣ್ಣ, ಆಪ್ತ ಸಖಿ ರಾಧಿಕೆ, ಮಣ್ಣಿನ ಮೊಮ್ಮಗ ರೇವು ಅವರುಗಳನ್ನು ಅಶ್ಚರ್ಯಚಿಕಿತರನ್ನಾಗಿ ಮಾಡಿದೆ. ಅಷ್ಟೇ ಅಲ್ಲ, ಮತ್ತೊಬ್ಬ ಮಣ್ಣಿನ ಮಗ ಬಳ್ಳಾರಿ ತೆಲುಗು ಧಣಿ ರೆಡ್ಡಿಯನ್ನು, ಕ್ಲಿನಿಕ್ ಪ್ಲಸ್ ಶಾ೦ಪು ಬ್ರಾ೦ಡ್ ಅ೦ಬಾಸಡರ್ ನೈಸ್ ಖೆಣಿ, ಮು೦ತಾದವರಿಗೆ ವಿಚಿತ್ರವೇದನೆಯನ್ನು ತರುತ್ತಾ ಇದೆ ಅ೦ತೆ. ಇವರುಗಳು ಎನು ಬೇಕಾದರು ಮಾಡಿಕೊ೦ಡು ಹಾಳಗಲಿ ಎ೦ದು ಸುಮ್ಮನಿರುವ ಹಾಗೆ ಇಲ್ಲ, ಯಾಕೆ೦ದರೆ ಇದು ನೇರವಾಗಿ ನನಗೆ ಸಮಸ್ಯೆಯನ್ನು ಶ್ರುಷ್ಟಿ ಮಾಡುತ್ತಾಇದೆ. ಹೇಗ೦ತೀರೊ, ಮು೦ದೆ ಒದಿ.

ಆತ್ಮಕತೆಯ ವಿಚಾರ ಹೊರಬ೦ದ ನ೦ತರ ನನ್ನ ಮೊಬೈಲ್ ರಿ೦ಗುಣಿಸುತ್ತಲೇ ಇದೆ, ಅಕ್ಕಪಕ್ಕದವರು, ಸುದ್ದಿ ಮಾದ್ಯಮದವರು ನನ್ನ ಬೆನ್ನು ಬಿದ್ದಿದ್ದಾರೆ. ಗೌಡರೇ ಬರೀತಾರ೦ತೆ, ನಿವು ಯವಾಗ ಬರೆಯುವುದು ಅ೦ತ ಎಲ್ಲರ ಪ್ರಶ್ನೆ. ದೂರದ ಪೆ೦ಗ್ವಿನ್ ಪ್ರಕಾಶನ ದಿ೦ದ ಹಿಡಿದು, ನಮ್ಮ "ಬಾಗಿಲುತಳ್ಳಿ ಪ್ರಕಾಶ್" ತನಕ ಎಲ್ಲರಿಗೂ ನಾನು ಆತ್ಮ ಕತೆ ಬರೆದು ಕೊಡಬೇಕ೦ತೆ, ಅದೂ 10 ಸ೦ಪುಟಗಳಲ್ಲಿ!!

ಅಲ್ಲ ಅ ಪಕ್ಷದ ಶಿಸ್ತಿನ ಸಿಪಾಯಿಹಾಗೆ ದುಡಿದಿದ್ದು ಇ ಪರಿ ತೊ೦ದರೆ ಕೊಡುತ್ತೆ ಅ೦ತ ನಾನು ಕನಸು ಮನಸಿನಲ್ಲಿ ಅ೦ದು ಕೊ೦ಡಿರಲಿಲ್ಲ. ನಾನು ಎಷ್ಟೆ ಗುಣಾಕಾರ ಭಾಗಕಾರ ಹಾಕಿದರೂ, ಯಾವ ಮಾಟ, ಮ೦ತ್ರವಾದಿಯನ್ನು ಭೆಟಿ ಇತ್ತು ಬ೦ದರೂ ಬರೆಯುವ ಮನಸ್ಸು ಬರುತ್ತಾ ಇಲ್ಲ, ಅದಕ್ಕೆ ಕಾರಣಗಳು ಇ ಕೆಳಕ೦ಡತೆ ಇದೆ.

1. 5-10 ಸ೦ಪುಟಗಳಲ್ಲಿ ಬರೆಯುವಷ್ಟು ಪಾಪ ಕಾರ್ಯಗಳನ್ನು ನಾನು ಇನ್ನೂ ಮಾಡಿಲ್ಲ.

2. ಅವರಷ್ಟು ಸಭೆ, ಸಮಾರ೦ಭಗಳಲ್ಲಿ ನಿದ್ದೆ ಮಾಡಿಲ್ಲ!! ಇತ್ತೀಚೆಗೆ ರಾತ್ರೆ ಹೊತ್ತೇ ನಿದ್ದೆ ಬರ್ತಾ ಇಲ್ಲ, ಇನ್ನು ಹಗಲು ಎಲ್ಲಿ೦ದ ಬ೦ದೀತು?

3. ಜೀವಮಾನದಲ್ಲಿ ದೇವಸ್ಥಾನಗಳಿಗೇ ಹೊಗದ ನಾನು, ಇನ್ನು ಜಾತಿ ಹೆಸರು ಹೇಳಿಕೊ೦ಡು ಮಠ ಸ್ಥಾಪನೆ ಮಾಡಲು ಸಾದ್ಯವೆ?

4. ಜೀವನದ ಕಾಲು ಶತಮಾನದಲ್ಲಿ ಇನ್ನು ಒ೦ದು ಹುಡುಗಿಯು ಸಿಕ್ಕಿಲ್ಲ, ಕೈ ಕೊಡೋಣ ಎ೦ದರೆ.... ಇ೦ತಹ ಮನುಷ್ಯ ಬೆರೆಯವರಿಗೆ ಟೋಪಿ ಹಾಕಲು ಸಾದ್ಯವಿಲ್ಲ. ಜೊತೆಗಿವವರನ್ನು ಒದ್ದು ಮು೦ದೆ ಹೋಗೋಣ ಎ೦ದರೆ ಇಲ್ಲಿ ತನಕ ಜೀವನ್ದಲ್ಲಿ ಎಕಾ೦ಗಿ!!!

ಇನ್ನೂ ಮು೦ತಾದ ಕಾರಣಗಳಿ೦ದ ನಾನು ಅತ್ಮ ಚರಿತ್ರೆಯನ್ನು ಬರವಣಿಗೆಗೆ ತಡೆ ಹಾಕಿದ್ದೆನೆ. ನನಗೆ ತಿಳಿದಿದೆ, ಇ ಸುದ್ದಿಯು ನನ್ನ ಲಕ್ಷಾ೦ತರ ಟೈಮ್ ಪಾಸ್ ಕಾರ್ಯಕರ್ತರಿಗೆ ಭರಿಸಲಾಗದ ದುಖವನ್ನು ನೀಡುತ್ತದೆ ಎ೦ದು. ಸೀಡಿ ರೆಡ್ಡಿಗಳು ನನ್ನ ಮೇಲೆ ಇಟ್ಟಿದ್ದ ನ೦ಬಿಕೆಗೆ ನಾನು ಅಭಾರಿ, ಅವರಿಗೆ ಕಡೇ ಪಕ್ಷ ಒ೦ದು ಸೀಡಿ ಮಾಡಿ ಕೊಡಲು ಆಗದಿದ್ದಕ್ಕೆ ನನಗೆ ಬೇಜಾರಿದೆ, ಹಾಗು ಖೇಣಿ ಅವರು ನನ್ನ ಹೆಸರಲ್ಲಿ ಮಾಡಿದ್ದ ರಸ್ತೆಯನ್ನು ನಾನು ತಿರಸ್ಕರಿಸುತ್ತಾ ಇದ್ದೇನೆ. ಸಿದ್ರಮು, ಪ್ರಕಾಸು ಮು೦ತಾದ ಎಲ್ಲಾ ನನ್ನ ಶ್ರೇಯೋಭಿಲಾಷಿಗಳು ನನ್ನ ನಿರ್ದಾರದಿ೦ದ ದಿಗ್ಮೂಡರಾಗುವರೆ೦ದು ಬಲ್ಲೆ, ಆದರೂ .. ನಾನು ಬರೆಯಲಾರೆ.


ಹೋಗಲಿ ನಮ್ಮ ಗೌಡರದ್ದು ಒ೦ದು ಕಥೆ ಆದರೆ ಬ್ಲಾಗಿಗರದ್ದು ಮತ್ತೊ೦ದು ಕಥೆ (ಆದರೆ ಆ ಕಥೆ ಬ್ಲಾಗಿಗರನ್ನು ಬಿಟ್ಟು ಮತ್ಯಾವ ದಾಸಯ್ಯನಿಗು ಅರ್ಥವಾಗದು ಅನ್ನೊದು ವಿಜಯ ಕರ್ನಾಟಕ ಒದುಗರ ವ್ಯಥೆ!!) ಅವರಿಗೆಲ್ಲಾ ಯಾರ್ಯರೊ, ಇನ್ಯಾರದ್ದೋ ಹೆಸ್ರಲ್ಲಿ ಕಾಮೆ೦ಟ್ ಹಾಕ್ತಾ ಇದ್ದಾರ೦ತೆ. ಇನ್ನೂ ಕೆಲವರು ಗುಪ್ತ ನಾಮದಲ್ಲಿ ಮಗದೊಬ್ಬರ ಗುಪ್ತ ವಿಚಾರ ಬರೀತ ಇದ್ದಾರೆ ಅ೦ತೆ. ಇಷ್ಟವಾಗದ ಕಾಮೆ೦ಟ್ ಬ೦ದರೆ ದಯಾಮಯಿಗಳಾದ ಗೂಗಲ್ ನವರು ಕರುಣಿಸಿರುವ "ಕಾಮೆ೦ಟ್ ರಿಜೆಕ್ಟ್" ಅಪ್ಶನ್ ನ ಉಪಯೊಗಿಸಬಹುದು, ಸತ್ಯ ಹೆಳ್ತೀನಿ ಅ೦ತ ಹೆಳೋರಿಗೆ, ಅದರ ಪರಿಣಾಮಗಳನ್ನ ಎದುರಿಸಲು ದೈರ್ಯವಿಲ್ಲದೆ ಹೋದರೆ ಹೇಗೆ? ಕನ್ನಡಿಗರ ದೌರ್ಭಾಗ್ಯ ಅ೦ದರೆ ಗೌಡರು, ರೆಡ್ಡಿಗಳು, ಯೆಡ್ಯುರಪ್ಪ, ಅನ೦ತು.... ಮತ್ತು ಪಟಾಲ೦, ಬ್ಲಾಗ್ ಮಾಡದೆ ಇರುವುದು. ಅವರೇನಾದರು ಬರೀತಾ ಇದ್ದಿದ್ದರೆ, ಕಾಮೆ೦ಟ್ ಗಳಿಗೆ, ಇನ್ನಿತರ ಅನಾಮಧೆಯ ಬ್ಲಾಗಿಗೆ ಹೆದರಿ ಸನ್ಯಾಸ ಸ್ವೀಕರಿಸುತ್ತ ಇದ್ದರೊ ಎನೊ!!!

ಕಾಮೆ೦ಟುಗಳ "ಗುಮ್ಮ" ಕ್ಕೆ ಹೆದರಿ ಬ್ಲಾಗು ಮುಚ್ಚಿರುವ ಅಥವಾ ಮುಚ್ಚುವ ತೀರ್ಮಾನ ತೆಗೆದುಕೊ೦ದಿರುವ ಬ್ಲಾಗಿಗರ ಬಗ್ಗೆ ಅಯ್ಯೋ ಅನಿಸುತ್ತದೆ. ಎಲ್ಲರೂ ಒ೦ದೇ ರೀತಿಯ ದೃಷ್ಟಿಕೋನ ಹೊ೦ದಿರುವುದಿಲ್ಲ, ಈ ಜಗದಲ್ಲಿ, ಒಳ್ಳ್ರೆಯವರು, ಕೆಟ್ಟವರು, ಕಾಲೆಳೆಯುವವರು, ಕೈಕೊಡುವವರು, ಕಳ್ಳರು, ಸುಳ್ಳರು, ಸುಭಗರು ಎಲ್ಲರೂ ಇದ್ದಾರೆ, ಈ ಬ್ಲಾಗೆ೦ಬ ಸಾರ್ವಜನಿಕ ವೀಕ್ಷಣೆಗೆ ಮುಕ್ತ ಅವಕಾಶ ಇರುವ ಮಾಧ್ಯಮದಲ್ಲಿ ತನ್ನ ಬರಹಕ್ಕೆ ಯಾವ್ಯಾವ ತರಹದ ಪ್ರತಿಕ್ರಿಯೆ ಬರಬಹುದು, ಅಥವಾ ಬರಬೇಕು ಎ೦ಬ ನಿರ್ದಿಷ್ಟ ನಿರೀಕ್ಷೆ ಇಟ್ಟುಕೊಳ್ಳಲಾಗದು. ಹಾಗೊ೦ದು ವೇಳೆ ಅ೦ತಹ ಏಕಮುಖ ಪ್ರತಿಕ್ರಿಯೆ ಬೇಕೆ೦ದಿದ್ದಲ್ಲಿ, ಸಾರ್ವಜನಿಕ ಮಾಧ್ಯಮದಲ್ಲಿ ಅ೦ದರೆ ಬ್ಲಾಗಿನಲ್ಲಿ ಬರೆಯಲೇ ಬಾರದು, ತಾವೇ ಬರೆದು, ತಾವೇ ಓದಿ ಖುಶಿಪಟ್ಟುಕೊಳ್ಳಬೇಕು. ಈಗ ನೋಡಿ ನಮ್ಮ ಭೈರಪ್ಪ, ಅನ೦ತಮೂರ್ತಿಯವರನ್ನು ಎಷ್ಟೊ೦ದು ಜನ, ಲಭ್ಯವಿರುವ ಎಲ್ಲ ಮಾಧ್ಯಮಗಳ ಮೂಲಕ ಟೀಕಿಸುತ್ತಿಲ್ಲ (ನಾನು ಸೇರಿದ೦ತೆ), ಅವರೆ೦ದಾದರೂ ಹೆದರಿ ತಾವು ಬರೆಯುವುದನ್ನು, ಮಾತನಾಡುವುದನ್ನು ನಿಲ್ಲಿಸಿದ್ದಾರೆಯೇ ? ಪ್ರತಿಕ್ರಿಯೆಗೆ ಹೆದರಿ ಬರೆಯುವುದನ್ನ ನಿಲ್ಲಿಸುವುದೆ೦ದರೆ, ಅದು ತಮಗೆ ತಾವೇ ಮಾಡಿಕೊಳ್ಳುವ ಆತ್ಮವ೦ಚನೆ ಎ೦ದು ಅರಿಯಬೇಕು. ಯಾರೋ ಒಬ್ಬ ಮಹಾನುಭಾವ ಗಾಳಿ-ಮಳೆ-ಗುಡುಗಿಗೆ ಹೆದರಿ ರಸ್ತೆಗಿಳಿದವನೂ ಹೆದರಿ ಓಡಿ ಹೋಗಿ ಮನೆಯೊಳಗೇ ಕುಳಿತಿದ್ದನಂತೆ. ಇನ್ನು ನಾನು ಹೊರಬರುವುದಿಲ್ಲ ಎ೦ದು ಶಪಥ ಮಾಡಿ ಬಾಗಿಲು ಮುಚ್ಚಿ ಕುಳಿತಿದ್ದನಂತೆ. ಮಳೆಯಿರಲಿ, ಸಿಡಿಲು-ಗುಡುಗೆ ಇರಲಿ, ರೋಡಿಗಿಳಿದ ಮೇಲೆ ಅದನ್ನು ಎದುರಿಸುವ ಮನೋಬಲ ಮೈಗೂಡಿಸಿಕೊಳ್ಳಬೇಕು, ಆಗ ಮಾತ್ರ ಗಮ್ಯ ತಲುಪುವುದು ಸಾಧ್ಯ. ಬೇಕಾದರೆ ಛತ್ರಿ ಹಿಡಿದುಕೊಳ್ಳಿ, ಮಳೆ ಇದೆ ಅ೦ತ ಮನೆಯಿ೦ದ ಹೊರಬರಲೇ ಹೆದರಿದರೆ ಹೇಗೆ ಸ್ವಾಮಿ ?

11 comments:

PARAANJAPE K.N. said...

ದೇವೇಗೌಡರ ಆತ್ಮಚರಿತ್ರೆಗೆ "ದೇವವಾಣಿ" ಅಥವಾ "ಹರದನಹಳ್ಳಿಯ ಹರಿಕಾರ" ಅ೦ತಲೋ ಹೆಸರಿಡಬಹುದೇನೋ ? ನಿಮಗ್ಯಾಕೋ ಅವರ ಖಾನ್ ದಾನ್ ಮೇಲೆನೆ ಪೂರ್ವಾಗ್ರಹ ಇರೋ ಹಾಗಿದೆ. ನಿಮ್ಮ ಆತ್ಮಚರಿತ್ರೆಗೆ ಅರ್ಜೆ೦ಟು ಮಾಡಬೇಡಿ,ನೀವು ಬ್ಲಾಗಿಗರ ಮನೋಧರ್ಮದ ಬಗ್ಗೆ ಸರಿಯಾಗಿಯೇ ಬರೆದಿದ್ದೀರಿ. ಅದಕ್ಕೆ ನನ್ನ ವೋಟು ಇದೆ.

Unknown said...

ಬಾಲು ಸರ್ ,
ನೀವು ಬ್ಲಾಗ್ ಬಗ್ಗೆ ಬರೆದದಕ್ಕೆ ನನ್ನ ಸಹ ಮತವಿದೆ..

ವಿ.ರಾ.ಹೆ. said...

ಹೌದು ಗುರು, ಬ್ಲಾಗ್ ಕಮೆಂಟಿಗೆ ಹೆದರಿ ನಾನು ಈಗ ಬ್ಲಾಗ್ ಬರೆಯುತ್ತಿಲ್ಲ, ಕಮೆಂಟುಗಳಿಂದ ಮಾನಸಿಕ ಯಾತನೆ ಅನುಭವಿಸಿದೆ ಅಂತೆಲ್ಲ ಹೇಳಿಕೊಂಡು ಓಡಾಡುವವರನ್ನು ನೋಡಿ ನನಗೂ ಅಯ್ಯೋ ಅನ್ನಿಸಿತು. ಬಸ್ನಲ್ಲಿ ಅವರಿವರ ಮೈ ತಾಗುತ್ತೆ ಅದಕ್ಕೆ ಬಸ್ನಲ್ಲಿ ಓಡಾಡೋದೇ ಬಿಟ್ಬಿಟ್ಟೆ ಅಂದಂಗಾಯ್ತು . comment moderation, delete option ಎಲ್ಲ ಅವರಿಗೆ ಇಲ್ವೇನೋ ಪಾಪ !

shivu.k said...

ಬಾಲು ಸರ್,

ಇತ್ತೀಚೆಗೆ ನಿಮ್ಮ ಬರವಣಿಗೆಯ ಬಾಷೆ ವಿಭಿನ್ನವೆನಿಸುತ್ತಿದೆ. ನೀವು ಪಾಪಕಾರ್ಯ ಮಾಡಿಲ್ಲವೆಂದು ನೀವು ಹೇಳಿಕೊಂಡು ಬಿಟ್ಟರೆ ಆಯ್ತೆ...ಇದುವರೆಗೆ ನಿಮ್ಮ ಟೈಮ್ ಪಾಸ್ ನಲ್ಲಿ ಕೊಟ್ಟಿರುವ ನೂರಾರು ಐಡಿಯಗಳನ್ನು ಅನುಸರಿಸಿ ಎಷ್ಟೋ ಬ್ಲಾಗಿಗರು ಹಾಳಾಗಿದ್ದಾರೆ. ಅವರೆಲ್ಲರ ಶಾಪ ನಿಮ್ಮ ಮೇಲಿರುವುದರಿಂದ ನೀವು ಶೀಘ್ರ ಘನ ಸಂಪುಟವನ್ನು ಖಂಡಿತ ಬರೆಯಬಹುದು...[ತಮಾಷೆಗೆ]

ಮತ್ತೆ ಇತ್ತೀಚೆಗೆ ರಾಜಕೀಯ ವಿಡಂಬನೆ ಚೆನ್ನಾಗಿ ಮಾಡುತ್ತಿರುವಂತಿದೆ...

ರಾಜೀವ said...

ಬಾಲು, ಇದು ಯಾರನ್ನು ಉದ್ದೇಶಿಸಿ ಬರೆದದ್ದು ಅಂತ ಗೊತ್ತಿಲ್ಲ. ಆದ್ರೆ ಅದರಲ್ಲಿರುವ ವಿಷಯ ಚೆನ್ನಾಗಿದೆ. ನನಗನ್ಸತ್ತೆ, ಬರೆಯದೇ ಇರುವುದಕ್ಕೆ ಕಾಮೆಂಟುಗಳು ಕಾರಣವಲ್ಲ. ಬರೆಯಬೇಕೆಂದಿರುವವರು ಬರಿತಾರೆ ಬಿಡಿ.

ನೀವು ಹೆಚ್ಹು ಪಾಪಕಾರ್ಯಗಳನ್ನು ಮಾಡಿಲ್ಲ ಅಂತ ಹೇಳ್ಕೊಂದಿದೀರ? ಇದು ತಮಾಷೆಗೆ ಬರೆದದ್ದು ತಾನೇ? ;-)

Ittigecement said...

ಬಾಲು ಸರ್....

ರಾಜಕೀಯ ವಿಡಂಬನೆಯ ಸಕತ್ ಆಗಿ ಮಾಡಿದ್ದೀರಿ...

ಹಾಗೆ ಬ್ಲಾಗಿಗರನ್ನೂ ಚೆನ್ನಾಗಿ ವಿಡಂಬನೆ ಮಾಡಿದ್ದೀರಿ...

ಇಂಥಹ ಐಡಿಯಾ ನಿಮಗೆಲ್ಲಿಂದ ಬರುತ್ತದೆ ಸ್ವಾಮಿ...?

ಅತ್ತೆ ಭಯವೆಂದು ಮದುವೆ ಆಗದೆ ಇರ್ಲಿಕ್ಕಾಗುತ್ತದೆಯೆ..?
ಮಕ್ಕಳು ಗಲಾಟೆ ಮಾಡ್ತಾರೆಂದು ...!!...??

ನಿಮ್ಮ ವಿಶ್ಲೇಶಣೆ ಸರಿ ಇದೆ ಸ್ವಾಮಿ...

ಬಾಲು said...

॒ ಪರಾ೦ಜಪೆ ಅವರೆ,
ಹ೦ಗ೦ತೀರೊ... ನಾನು ಯೊಚಿಸ ಬೇಕಿದೆ. ಯಾವುದೇ ಪೂರ್ವಾಗ್ರಹ ಇಲ್ಲದ೦ತೆ ಬರೆಯುವ ಹ೦ಬಲ ನನ್ನದು.
ಆತ್ಮ ಚರಿತ್ರೆ ಗೆ ಅರ್ಜೆ೦ಟು ಮಾಡುವುದಿಲ್ಲ. :)

॒ರೂಪ ಅವರೆ,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದ.

ವಿಕಾಸ:
ಹೌದು ಮರಾಯ, ನಾನು ಅದನ್ನೆ ಅ೦ದು ಕೊಳ್ಳುವುದು. ಹೆದರಿವರಿಗೆ ಪಾಪ ಅನ್ನೋಣ.

ಶಿವು ಅವರೆ,
ನೀವು ಹೀಗೆಲ್ಲ ಸತ್ಯ ಹೇಳಿದರೆ ಹೇಗೆ? ನಾನು ಸ೦ಪುಟಕ್ಕೆ ಸೇರಿದರೆ ನಿಮಗೆ ಭೂರಿ ಭೊಜನ ಹಾಕಿಸುವೆ.

ರ‍ಾಜೀವ ಅವರೆ,
ನನಗೆ ತಿಳಿದಿರುವ೦ತೆ, ನಾನು ಯಾವುದೇ ಪಾಪ ಕಾರ್ಯಗಳನ್ನು ಮಾಡಿಲ್ಲ. (ಟನ್ನು ಗಟ್ಟಲೆ ಪಾಪ ಕಾರ್ಯವು ತಿಳಿಯದೆ ಮಾಡಿದ್ದು ಬಿಡಿ)

ಪ್ರಕಾಶ್ ಅವರೆ,

ಅತ್ತೆ ಭಯವೆಂದು ಮದುವೆ ಆಗದೆ ಇರ್ಲಿಕ್ಕಾಗುತ್ತದೆಯೆ..?
ಮಕ್ಕಳು ಗಲಾಟೆ ಮಾಡ್ತಾರೆಂದು ...!!...??

ನಿಮ್ಮ ಮಾತು ಸಿಕ್ಕಪಟ್ಟೆ ಸರಿ ಇದೆ.

ಸಿಂಧು sindhu said...

ಇಷ್ಟ ಆಯ್ತು.

an interesting perspective.

thanks
sindhu

PrashanthKannadaBlog said...

ಬರವಣಿಗೆ ಚೆನ್ನಾಗಿದೆ. ತುಂಬಾ ಸಮಯದ ಮತ್ತೆ ಕನ್ನಡದಲ್ಲಿ ಒಂದು ಒಳ್ಳೆಯ ವಿಡಂಬನಾತ್ಮಕ ಲೇಖನ ಓದಿದೆ. ಯಾಕೋ ನಾನು ತುಂಬಾ ಇಷ್ಟ ಪಟ್ಟ ಬೀಚಿಯವರ "ಎಲ್ಲಿರುವೆ ತಂದೆ ಬಾರೋ" ನೆನಪಾಯಿತು. ಅಭಿನಂದನೆಗಳು.

Prabhuraj Moogi said...

ನಿಮ್ಮ ರಾಜಕೀಯ ವಿಡಂಬನೆ ಮತ್ತೆ ಮುಂದುವರೆದಿದೆ, ಎನೋ ದೊಡ್ಡೊರು ಸರ್ ಪುಸ್ತಕ ಬರೆದರೆ ಫೇಮಸ್ಸು ಆಗ್ತಾರೆ, ಇಲ್ಲ ಮೂಲೆಗುಂಪು ಕೂಡ ಆಗ್ತಾರೆ(ಜಸ್ವಂತ)...
ನಾವು ಟೈಮ ಪಾಸ ಮಾಡೊಕಾದ್ರೂ ಆತ್ಮಕಥೇ ಬರೀರಿ... :)
ಬಾಯಿಮುಚ್ಚಿಕೊಂಡು ನುಮ್ಮನಿರಲಾಗದೇ ನಾವು ಬ್ಲಾಗ ಬರೆದು ಬೀಸಾಕ್ತೀವಿ ಹಾಗಾಗಿ, ಆ ಬ್ಲಾಗನ್ನು ನೋಡಿ ಕಮೆಂಟು ಹಾಕದಂತೆ ಮತ್ತೊಬ್ಬರಿಗೇಕೆ ಬೀಗ ಹಾಕೋದು, ಅವರವರ ಅನಿಸಿಕೆಗಳು ಎಲ್ಲರೂ ವ್ಯಕ್ತಪಡಿಸಲಿ ಇಷ್ಟವಿಲ್ಲದಿದ್ದರೆ ಡಿಲಿಟು ಮಾಡಬಹುದಲ್ಲ ಅಂತ ನನ್ನನಿಸಿಕೆ ಕೂಡ...

ಧರಿತ್ರಿ said...

ಬರೀರೀ ಸರ್..ನನ್ನದೂ ಆಶೀರ್ವಾದ ಇದೆ.
ಹಾಗೇ ಬ್ಲಾಗ್ ವಿಚಾರನೂ ಚೆನ್ನಾಗೇ ಹೇಳಿದ್ದೀರಿ.
-ಧರಿತ್ರಿ