ಅಂತು ಇಂತೂ ನಮ್ಮ ದೊಡ್ದಣ್ಣಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಕ್ಕಿದೆ, ವಿಶ್ವದ ಎಲ್ಲ ಉಗ್ರರನ್ನು ಮಟ್ಟ ಹಾಕಲು ಗುತ್ತಿಗೆ ಪಡೆದಿರುವ ಒಬಾಮಾಗೆ ಇ ಪ್ರಶಸ್ತಿಯು ಅತ್ಯಂತ ಸೂಕ್ತ ಎಂದು ಹಲವಾರು ಜನ ಅಭಿಪ್ರಾಯಿಸಿದ್ದಾರೆ.
ಇಂದು ಇ ಪ್ರಪಂಚ ಇಷ್ಟೆಲ್ಲಾ ಶಾಂತಿ, ನೆಮ್ಮದಿ ಮತ್ತು ಕುಶಿ ಇಂದ ಇರಲು ಅಮೆರಿಕ ಮತ್ತು ಅಮೇರಿಕಾವೇ ಕಾರಣವಾಗಿದೆ ಎಂದರೂ ತಪ್ಪಾಗಾಲಾರದು. ಅದರೂ ಅವರಿಗಿಂತ ಹೆಚ್ಚು ಶಾಂತಿ ಪ್ರಿಯ ಜನನಾಯಕರು ನಮ್ಮ ಸುತ್ತಮುತ್ತಲ ಇದ್ದರೂ ನಾವು ಅವರನ್ನು ಗುರುತಿಸದೆ ಇರುವುದು ಅತ್ಯಂತ ದೌರ್ಭಾಗ್ಯ. ಅ ಪ್ರಶಸ್ತಿಗೆ ಒಬಾಮಾನಷ್ಟೇ ಸೂಕ್ತವಾದ ವ್ಯಕ್ತಿಗಳ ಪಟ್ಟಿ ಇ ಕೆಳಕಂಡಂತೆ ತಯಾರಿಸಿರುವೆ.
ಇವರು ಕೇವಲ ೧೦ ತಿಂಗಳು ಪ್ರಧಾನಿ ಆಗಿದ್ದರು, ಜನಸೇವೆಗೆ ತಮ್ಮ ಇಡೀ ಕುಟುಂಬವನ್ನೇ ಮುಡುಪು ಇಟ್ಟಿರುವರು. ಕೋಮುವಾದಿಗಳಿಗೆ ಅಧಿಕಾರ ಕೊಟ್ಟು ಜನ ಗಲಭೆಗಳಲ್ಲಿ ತೊಡಗಿ ಸಾಯುವುದನ್ನು ತಪ್ಪಿಸಲು ಶತ್ರುವಿನೊಡನೆ ಮೈತ್ರಿ ಮಾಡಿಕೊಂಡರು, ನಂತರ ಮುಖ್ಯ ಮಂತ್ರಿ ಎಂಬ ಕೆಟ್ಟ ಖಾತೆಗೆ ಮಗನನ್ನು ಕೂಡಿಸಿ ಜನಕ್ಕೆ ಹರುಷವನ್ನು ಉಂಟುಮಾಡಿದರು. ರಾಜ್ಯದ ೫ ಕೋಟಿ ಜನರ ಸುಖ, ಶಾಂತಿಗಾಗಿ ಹಲವಾರು ಜನರಿಗೆ ರಾಜಕೀಯ ಸನ್ಯಾಸ ದೀಕ್ಷೆ ನೀಡಿ, ಎಲ್ಲ ಕಷ್ಟಗಳನ್ನು ತಮ್ಮ ಹೆಗಲ ಮೇಲೆ ಹೊತ್ತು ನಡೆಯುತ್ತಿರುವರು, ಸಭೆ, ಸಮಾರಂಬ, ಸಂಸತ್ತು ಮುಂತಾದೆಡೆ ಧ್ಯಾನವಸ್ತೆಯಲ್ಲಿ ದೇಶದ ಬಗ್ಗೆ ಚಿಂತಿಸುವ ಇವರು ಯಾವ ಶಾಂತಿ ಧೂತನಿಗು ಕಡಿಮೆ ಇಲ್ಲವೆಂಬುದು ನಮ್ಮ ಅನಿಸಿಕೆ.
ಮಹಾನುಭಾವರು ಜನಹಿತಕ್ಕಾಗಿ, ಸ್ವ ಹಿತವನ್ನು ಬಳಿ ಕೊಟ್ಟಿರುವುದನ್ನು ನಾವು ಇತಿಹಾಸದಲ್ಲಿ ಕಾಣಬಹುದು. ಆದರೆ ವರ್ತಮಾನದಲ್ಲಿ ಅ ಕೆಲಸವನ್ನು ಮಾಡಿರುವುದು ನಮ್ಮ ಯಡ್ಡಿ ಮತ್ತು ರೆಡ್ಡಿ ಗಳು, ಜನಕ್ಕೆ ಸ್ಥಿರ ಸರ್ಕಾರವನ್ನು ನೀಡಲು ಪಕ್ಷದ ಹಿತವನ್ನು ಕಡೆಗಣಿಸಿದರು, ಗಡಿಗಳನ್ನು ಮಾರಟಕ್ಕೆ ಇಟ್ಟರು. ಆಪರೇಷನ್ ಕಮಲ ಮಾಡಿ ರುವ ಇರನ್ನು ನಾವು ಮರೆಯುವ ಹಾಗೆಯೇ ಇಲ್ಲ. ನೊಬೆಲ್ ಸಂಘಟನೆಯು ಇವರ ಸಾಧನೆಯನ್ನು ಗಮನಿಸಿ ಶಾಂತಿ ಪ್ರಶಸ್ತಿಯನ್ನು ಮುಂದಿನ ದಿನಗಳಲ್ಲಿ ನೀಡಬಹುದು ಎಂದು ನಾವು ಆಶಿಸುತ್ತೇವೆ.
"ಮುಂದೆ ಬಂದರೆ ಹಾಯಬೇಡಿ, ಹಿಂದೆ ಬಂದರೆ ಓದೆಯ ಬೇಡಿ" ಎನ್ನುವ ಇವರು ಥೇಟ್ ಕಾಮಧೇನು ಇದ್ದ ಹಾಗೆ, ಇಪ್ಪತ್ತು ತಿಂಗಳು ಮುಖ್ಯಮಂತ್ರಿ ಆಗಿ ಇದ್ದರು, ದೇವೇ ಗೌಡ ಎಂಬ ಪತ್ರಕರ್ತ ( ಸರ್ಕಾರಕ್ಕೆ ಒಂದರ ಮೇಲೆ ಒಂದು ಪತ್ರ ಬರೀತಾ ಇದ್ರಲ್ಲ ಅದಕ್ಕೆ ಹಾಗೆ ಹೇಳಿದ್ದು) ಕಾಟವನ್ನು ತಡೆದುಕೊಂಡು ಸೂಜಿಯ ಮೊನೆಯ ಮೇಲೆ ಅಷ್ಟು ಕಾಲ ಕೂತಿದ್ದು ಮಹಾನ್ ಸಾಧನೆಯೇ ಸರಿ!! ನಮ್ಮ ದರ್ಮ ಸಿಂಗರಿಗೊಂದು ಜೈ ಇರಲಿ.
ಮನಮೋಹನ ಸಿಂಗರು ನಮ್ಮ ಧರ್ಮು ದೊಡ್ಡಣ್ಣ ಇದ್ದಂಗೆ, ಮೇಡಂ ಮುಂದೆ ಕೈ ಕಟ್ಟಿ, ಚಿಕ್ಕ ಸಾಹೇಬರಿಗೆ ಸೀಟು ಕಾದಿರಿಸಿ, ಚೀನಾಕ್ಕೆ ನಮಸ್ಕರಿಸಿ, ಪಾಕಿಸ್ತಾನದ ಉಗ್ರರ ಬಗ್ಗೆ ಅನುಕಂಪ ಹೊಂದಿರುವ ಇವರು ಅನೇಕ ಯುದ್ದ ಗಳನ್ನು ಕೆಲವೇ ಕೆಲವು ಜನರ ಬಲಿಯೊಂದಿಗೆ ನಿಲ್ಲಿಸಿದ್ದಾರೆ. ಮುಂಬೈ ಧಾಳಿಯ ನಂತರ ಪಾಕಿಗೆ ದೊಡ್ದಗೊಂದು ಸಂದೇಶ ತಲುಪಿಸಲು ವಿಫಲವಾಗಿರುವ ಇವರು ನಮ್ಮ ಕಾಲದ ಶಾಂತಿ ಪ್ರಿಯ ರಾಜಕಾರಣಿಯೇ ಸರಿ!!
ಇ ಕಲಿಯುಗದಲ್ಲಿ ಜನರ ಸಮಾಜಿಕ ಸ್ಥಿತಿಗತಿಗಳನ್ನು ಕಾಯಲು, ತೆತ್ರಾಯುಗದ ರಾಮನ ಪರಮ ಭಕ್ತರಾದ ಮತಾಲಿಕರು ಕೆಲವೇ ಕೆಲವು ಹೆಂಗಳೆಯರಿಗೆ ಒದೆ ಕೊಡುವ ಮೂಲಕ ಶಾಂತಿಯುತ ಚಳುವಳಿಯನ್ನು ಆರಂಬಿಸಿದ್ದಾರೆ. ಅವರೂ ಕೂಡ ಅ ಪ್ರಶಸ್ತಿಗೆ ಅರ್ಹರು. ಇಷ್ಟೇ ಅಲ್ಲದೆ ಮಚ್ಚು ಕತ್ತಿ ಉಪಯೋಗಿಸುವುದರಿಂದ ರಕ್ತ ಬರುತ್ತದೆ, ಎಂಬಂತಾ ಸಂದೇಶ ಹೊತ್ತ ಸಿನಿಮಾಗಳನ್ನು ಇಡೀ ಚಿತ್ರರಂಗ ಮಾಡುತ್ತಾ ಇದೆ. ಇವರಿಗೆ ನೊಬೆಲ್ ಶಾಂತಿ ಪುರಸ್ಕಾರ ಕೊಡಲು ಸಾಧ್ಯವಾಗದೆ ಇದ್ದಲ್ಲಿ ಶಾಂತಿ ಆಸ್ಕರ್ ಕೊಡಬೇಕಿದೆ.
ಇರಲಿ ನನ್ನೆಲ್ಲ ತಲೆಹರಟೆ ಬರಹ (ಬರಹ!! ???) ಗಳನ್ನು ಅತ್ಯಂತ ಕಷ್ಟಪಟ್ಟು ಓದುವ ನಿಮಗಳಿಗೆ, ನಿಮ್ಮ ಶಾಂತಿ, ಸಹನೆಗೆ ಒಂದು ಸಲಾಮು. ನಾನೇನಾದ್ರು ಅ ಆಯ್ಕೆ ಸಮಿತಿಯಲ್ಲಿ ಇದ್ದಲ್ಲಿ ನಿಮ್ಮಗಳ ಹೆಸರನ್ನು ರೆಕಮಂಡ್ ಮಾಡುತ್ತಿದ್ದೆ.
ಇ ಸಂಚಿಕೆಯ ಎಲ್ಲಾ ಪ್ರಾಯೋಜಕರು ಮಲ್ಯ ಬ್ರಾಂಡ್ಸ್!! ಹೊಟ್ಟೆಯಲ್ಲಿ ನಮ್ಮ ಪಾನೀಯ ಇದ್ದರೆ, ಲೋಕಕ್ಕೆ ನೀವೇ ಕಿಂಗು, ಗಾಂದಿ ತಾತನ ಕನ್ನಡಕ ತಂದಿರುವ ನಾವುಗಳು ನಿಮಗಳಿಗೆ ನೆಮ್ಮದಿಯ ಜೀವನ ಕೋರುವೆ. - ಶ್ರೀ ಮಲ್ಯ.
9 comments:
ಇವರು ಕೇವಲ ೧೦ ತಿಂಗಳು ಪ್ರಧಾನಿ ಆಗಿದ್ದರು, ಜನಸೇವೆಗೆ ತಮ್ಮ ಇಡೀ ಕುಟುಂಬವನ್ನೇ ಮುಡುಪು ಇಟ್ಟಿರುವರು.
hha hha..
ಈ ಬರಹ ಓದಿ ನಗ್ತಾ ನಗ್ತಾ ಟೈಂಪಾಸ್ !
ನಿಮ್ಮ ಬರಹ ಒಳ್ಳೆಯದಿದೆ . ಒಳ್ಳೆಯ ಟೈಮ್ ಪಾಸು :-) :-) ಆದರೆ ಈ ಬರಹದಲ್ಲಿ ನಿಮ್ಮ ಯಾವಾಗಿನ ಮೊನಚು ಕಮ್ಮಿಯಾಗಿದೆ . ಮಲ್ಯನ ಪಾನಿಯದ ಋಣ ತೀರಿಸಲು ಹೀಗೆ ಬರೆದಿದ್ದೀರಿ ಎ೦ದು ಭಾವಿಸುತ್ತೇನೆ . :-)
Ha Ha Ha...
Channagide...
Sakath punching...
ನಿಮ್ಮ ೧೦ ತಿಂಗಳ ಪ್ರಧಾನಿ ಖುಷಿಯಾಯಿತು
ಒಳ್ಳೆಯ ಬರಹ
ನನಗೆ ಯಾರೋ ಹೇಳಿದರು, ಒಬಾಮಾಗೆ ನೊಬೆಲ್ ಪ್ರಶಸ್ತಿ ಕೊಡುವುದರಿಂದ ಮುಂದೆ ಅಮೆರಿಕ ಯಾವ ದೇಶದಮೇಲೂ ತನ್ನ ಮಿಸ್ಸೈಲ್ಸ್ ಬಿಡುವುದಿಲ್ಲ ಅಂತ. ಇದು ಒಂತರಾ ಮುಂದಾಲೋಚನೆಯಂತೆ ;-)
ಯುಬಿ ಗ್ರೂಪಿಗೆ ಮಾರ್ಕೆಟಿಂಗ್ ಇಂಜಿನೀರ್ ಆಗಿ ಸೇರಿಕೊಂಡರಾ?
ಒಬಾಮಾಗೆ ಶಾಂತಿ ಪ್ರಶಸ್ತಿ ಈಗಲೆ ಯಾಕೆ ಕೊಟ್ಟದ್ದು ಯಾಕೊ ಗೊತ್ತಿಲ್ಲ, ಯಾರ ಮೇಲೂ ಯುದ್ಧ ಮಾಡದಿರಲಿ ಅಂತಲೋ ಏನೊ... ನಿಮ್ಮ ಕ್ಯಾಂಡಿಡೇಟಗಳಲ್ಲಿ ಸಿಗುವುದಾದರೆ ಇಪ್ಪತ್ತುತಿಂಗಳು ಮಂತ್ರಿಗಳಿಗೆ ಮಂತ್ರಿಯಾಗಿದ್ದಕ್ಕೆ ಕೊಡಬಹುದೇನೊ....
ಬಾಲು ಸರ್,
ಟೈಂ ಪಾಸ್ ಮಾಡಲಿಕ್ಕೆ ನಿಮ್ಮ ಬರಹವೇ ಸರಿ. ಒಬಾಮನಿಂತ ನೀವು ತಿಳಿಸಿದ ಇಲ್ಲಿರುವವರೆಲ್ಲಾರು ನೋಬಲ್ಲಿಗೆ ಅರ್ಹರೆಂದು ನಾನು ಒಪ್ಪುತ್ತೇನೆ..
ಅತ್ತಣ ಸಿಂಗಳು ಇತ್ತ ಗೌಡ್ರು ಮತ್ತೊಂದು ಕಡೆ ಯಡ್ಡಿ ರೆಡ್ಡಿ ಗಳು 'ಒಂತರ ಶಾಂತಿ' ಪ್ರಯತ್ನಿಸುತಿದ್ದರೆ,, ಈ ಕಡೆ ನಮ್ಮ ಕ್ರಿಷ್ಣನ್ನನವರು ಆಸ್ತ್ರಲಿಯಾ ಜನಾಂಗೀಯ ನಿಂದನೆಗೆ ಭಾರತೀಯರು ಯೇಸ್ಥು ಅಹಿಂಸಾ ಪ್ರೇಮಿಗಳೆಂದು ನವದೆಹಲಿಯ ತಮ್ಮ ಸೊ ಕಾಲ್ಡ್ ಹೈಟೆಕ್ 'ಕೃಷ್ಣ ಲೀಲಾ' ಗೃಹದಲ್ಲಿ ಶಾಂತಿ ಮಂತ್ರ ಜಪಿಸುವಂತಿದೆ.. !!.
ಒಬಾಮಗೆ ಶಾಂತಿ ಪ್ರಶಸ್ತಿ ಅಂತ ಓದಿಮೇಲೆ ಇದೆಲ್ಲೂ ಗಾಳಿ ಸುದ್ದಿ ಇರ್ಬೇಕು ಅಂತ ಬಾರೀ ಆಲೋಚನೆಯಲ್ಲಿದ್ದೆ. ಈಗ ಉದಾಹರಣೆ ಮತ್ತೆ ಸಕಾರಣಗಳ ಸಮೇತ ನೀಡಿರುವ ನಿಮ್ಮ ಬರಹಕ್ಕೆ ಅಭಿನಂದನೆಗಳು.
ಮಲ್ಯಮೇಲೆ ಕೋಪ ಮಾಡ್ಕೋ ಬೇಡ್ರಿ. :)
Post a Comment