Friday, November 20, 2009

ಗ೦ಡಾ೦ತರ ವಿಲ್ಲದ ಗ೦ಡಸರು


ನಿನ್ನೆ "ವಿಶ್ವ ಗಂಡಸರ ದಿನ" ಆಚರಣೆ ಆಗಿದೆ. ಅದರ ಅರ್ಥ ಈ ಪ್ರಪಂಚದಲ್ಲಿ ಗಂಡಸರು ಕೂಡ ಗುರುತಿಸಲ್ಪಟ್ಟಿದ್ದಾರೆ. :) ನಮ್ಮಲ್ಲಿ ತುಳಿತಕ್ಕೆ ಒಳಪಟ್ಟವರು, ದೌರ್ಜನ್ಯಕ್ಕೆ ಒಳಗಾದವರ ಬಗ್ಗೆ ಹೋರಾಡಲು ಸಾಕಷ್ಟು ಸಂಘ ಸಂಸ್ಥೆ ಗಳು ಇವೆ, ಆದರೆ ಅವು ಯಾವುದು ಕೂಡ ಮದುವೆ ಯಾದ ಗಂಡಸರನ್ನು ರಕ್ಷಿಸುವ ಕೆಲಸ ಮಾಡಿದ್ದು ಕೇಳಿಲ್ಲ. ಇರಲಿ ನಾನು ಈಗ ಗಂಡಸಾಗಿ ಹುಟ್ಟುವುದರ ಲಾಭಗಳನ್ನು ಅಥವಾ ಗಂಡಸರಿಗಿರುವ ಅನುಕೂಲತೆ ಗಳ ಬಗ್ಗೆ ಹೇಳುವೆ, ಇವೆಲ್ಲವೂ ಗಳನ್ನೂ ಓದಿದರೆ ಗಂಡಸರಿಗೆ ಸ್ವಲ್ಪ ವಾದರೂ ಹೆಮ್ಮೆ, ಗೌರವ ಬರುತ್ತದೆ ಅಂತ ನನ್ನ ಭಾವನೆ.


1. ಸುಖ ಎಂದರೆ ಏನು? ಅಂದರೆ ನನ್ನ ಮಟ್ಟಿಗೆ, ಕಜ್ಜೀನ ತುರಿಸಿ ಕೊಂಡಾಗ ಅಥವಾ ಬಹಳ ಸಮಯದ ನಂತರ ಪ್ರಕೃತಿ ಕರೆಗೆ ಓಗೊಟ್ಟಾಗ! ಗಂಡಸರಿಗೆ ಈ ಪ್ರಪಂಚವೇ ದೊಡ್ಡ ಮೂತ್ರಲಯ, ಎಲ್ಲಿ, ಯಾವಾಗ ಹೇಗಿದ್ದರೂ.. ಉಪಯೋಗಿಸ ಬಹುದು.

2.ಅಪ್ಪಿ ತಪ್ಪಿ ಎಲ್ಲಾದರು ಏನಾದ್ರೂ ಆದ್ರೆ, ಗಂಡಸರು "ಬಸುರಿ" ಆಗೋಲ್ಲ. ಇದಕಿಂತ ದೊಡ್ಡ ಲಾಭ ಮತ್ತೊಂದು ಸಿಗಲಾರದು.

3. ಮನೆ ಇಂದ ಹೊರ ಹೋಗಬೇಕು ಅಂದರೆ ಕೈಗೆ ಸಿಕ್ಕ ಯಾವುದೋ ಒಂದು ಅಂಗಿ ಹಾಕಿಕೊಂಡು ಹೋಗಬಹುದು. ಯಾವುದೂ ಸಿಗಲಿಲ್ಲ ಅಂದರೆ ಶರ್ಟ್ ಇಲ್ಲದೆ ಹೋದರು ನಡೆಯುತ್ತೆ. ಇಷ್ಟೇ ಅಲ್ಲ ಸಿನಿಮಾ ರಂಗದಲ್ಲಿ ಸಲ್ಮಾನ್ ಖಾನ್ ತರ ಖಾಲಿ ಚಡ್ಡಿ ಹಾಕ್ಕೊಂಡು ಕುಣಿದರೂ ಅದು ಅಶ್ಲೀಲ ಆಗೋಲ್ಲ.

4. ಯಾರ ಜೊತೆಗಾದರೂ ಮಾತನಾಡುವಾಗ ಕಣ್ಣಲ್ಲಿ ಕಣ್ಣಿಟ್ಟು ಮಾತಾಡಬಹುದು. ಅರ್ಥ ಆಯಿತು ಅಂದುಕೊಳ್ಳುವೆ.

5. ಇಂಟರ್ವ್ಯೂ ಗಳಿಗೆ ಹೋದಾಗ ನಮ್ಮ ಫಿಗರ್ ಮುಖ್ಯ ಆಗೋಲ್ಲ.

6. ಸಮಯದ ಉಳಿತಾಯ ಗಂಡಸರಿಂದ ಮಾತ್ರ ಸಾದ್ಯ, ಹೊರಗೆ ಅಡ್ಡಾಡೋಕೆ ಹೊರಡಲು ಕೇವಲ ೫-೧೦ ನಿಮಿಷ ಸಾಕು.

7. 5-6 ದಿನಗಳ ಪ್ರವಾಸಕ್ಕೆ ಕೇವಲ ಒಂದು ಸೂಟ್ ಕೇಸ್ ಸಾಕು.

8. ಒಂದು ಜೊತೆ ಶೂ ಮತ್ತೆ ೩ ಜೊತೆ ಸಾಕ್ಸ್ ಸಾಕೋ ಸಾಕು. ಸಾಕ್ಸ್ ಗಳನ್ನ ಯಾವಾಗಲು ತೊಳಿತಾ ಇರಬೇಕು ಅನ್ನುವ ಕಾಯಿದೆ ಯಾವುದು ಇಲ್ಲ.

9 ಕೆಂಪು, ಕಪ್ಪು, ಬಿಳಿ, ಹಸಿರು .. ಬಿಟ್ಟು ಇನ್ಯಾವುದೇ ಬಣ್ಣ ಗುರುತಿಸದೆ ಇದ್ದರೆ ಜನ ತಪ್ಪು ತಿಳಿಯೋಲ್ಲ.

10. ನಮ್ಮ ಕೊನೆಯ ಹೆಸರು ಯಾವಾಗಲು ಒಂದೇ ಆಗಿರುತ್ತದೆ. (ಲಾಸ್ಟ್ ನೇಮ್)

11. ಮೊಬೈಲ್ ಮಾತು ಕಥೆ ಕೇವಲ ೩೦ ಸೆಕಂಡ್ ನಲ್ಲಿ ಮುಗಿಯುತ್ತದೆ.

12. ಯಾರಾದರು ಒಂದು ಸಮಾರಂಭಕ್ಕೆ ಕರೆಯಲಿಲ್ಲ ಅಂದರೂ ಕೂಡ ಅವರು ನಮ್ಮ ಸ್ನೇಹಿತರಾಗೆ ಇರುತ್ತಾರೆ.

13. ವಯಸ್ಸು ಮೂವತ್ತಕಿಂತ ಜಾಸ್ತಿ ಆಗಿ, ಇನ್ನು ಮದುವೆ ಆಗಿಲ್ಲ ಅಂದ್ರೂನು ಯಾರು ಗಮನಿಸೋಲ್ಲ, ಅಥವಾ ಕಣ್ಣು ಹಾಕೋಲ್ಲ.. :D

14. ಅಮ್ಮ ನ ಜೊತೆ ಜಗಳ ಆಡದೇನೆ ಇರಲು ಸಾಧ್ಯವಿದೆ. (ನನ್ನ ಮೇಲೆ ದಯವಿಟ್ಟು ಜಗಳಕ್ಕೆ ಬರಬೇಡಿ, ಕಣ್ಣಾರೆ ಕಂಡಿರುವೆ, ನೋಡುತ್ತಲೂ ಇರುವೆ. )

15. ಕಡೇ ಪಕ್ಷ ಸರ್ಕಾರಿ ಲೆಕ್ಕದಲ್ಲಿ ಮನೆಯ ಯೆಜಮಾನ ಅನ್ನುವ ಬಿರುದು ಬಾವಲಿ ಸಿಗುತ್ತದೆ.


ಇನ್ನೂ ಸಾಕಷ್ಟು ಇದೆ, ಆದರೆ ಈಗ ಇಷ್ಟು ಸಾಕು ಬಿಡಿ.
ನನ್ನೆಲ್ಲಾ ಮಾತುಗಳನ್ನ ಎಲ್ಲಾ ಗಂಡಸರು ಮತ್ತು ಅವರ ಮಕ್ಕಳು ಒಪ್ಪುತ್ತಾರೆ ಅಂತ ಭಾವಿಸುವೆ. :) :)

15 comments:

PARAANJAPE K.N. said...

"ವಿಶ್ವ ಗ೦ಡಸರ ದಿನ" ವನ್ನು "ವಿಶ್ವ ಗ೦ಡಾ೦ತರ ದಿನ" ಎ೦ದು ಬದಲಾಯಿಸಬೇಕೆ೦ದು ಮಹಿಳಾ ಸ೦ಘಟನೆ ಗಳು ಒತ್ತಾಯಿಸುತ್ತಿವೆಯ೦ತೆ.ನೀವು merits ಮಾತ್ರ ಹೇಳಿದ್ದಿರಿ demerits ಬಗ್ಗೆ ಸ್ವಲ್ಪ ಬೆಳಕು ಚೆಲ್ಲಿದ್ದರೆ ಚೆನ್ನಿರುತ್ತಿತ್ತು

ರಾಜೀವ said...

ಬಹಳ ಮಟ್ಟಿಗೆ ನನ್ನ ಒಪ್ಪಿಗೆ ಇದೆ.
ಆದರೆ ಮೂರನೆ ಪಾಯಿಂಟು ಈಗ ಗಂಡಸರಿಗೆ ಮಾತ್ರ ಸೀಮಿತವಲ್ಲ (ಬೆಂಗಳೂರಿನಲ್ಲಿ).
ಗಂಡಸರಿಗಿಂತ ನಾವೇನು ಕಡಿಮೆ ಇಲ್ಲ ಅಂತ ಅವರೂ ಸಲ್ಮಾನ್ ಖಾನ್ ರೀತಿ ಇರ್ತಾರೆ.

ಶಿವಪ್ರಕಾಶ್ said...

Ha ha ha... Olle advantages idave :D

ಸವಿಗನಸು said...

ಇಷ್ಟೆಲ್ಲಾ ಉಪಯೋಗಗಳು ಇದೆ ಅಂತ ಗೊತ್ತೆ ಇರಲಿಲ್ಲ.......
ಸಾರ್ಥಕವಾಯಿತು......

Santhosh Rao said...

abbaa.. Gandu janma Sarthaka.. :)
Nice one..!!

ಗೌತಮ್ ಹೆಗಡೆ said...

ಉಪಯೋಗ ತುಂಬಾ ಇದೆ. ಆದರೆ ಪರಾಂಜಪೆ ಸರ್ ಹೇಳಿದಂತೆ ಅಪಾಯಗಳ ಬಗ್ಗೆನು ಬೆಳಕು ಚೆಲ್ಲಿ :)

Prabhuraj Moogi said...

5,9,10,15 ನೇ ಪಾಯಿಂಟಗಳು ಅಂತೂ ಸೂಪರ್, ಈ ಒಳ್ಳೊಳ್ಳೆ ಐಡಿಯಾಗಳು ಹೇಗೆ ಹೊಳೆಯುತ್ತವೆ ನಿಮಗೆ ಅಂತ... ಮದುವೆಯಾದ ಗಂಡಸರ ಅವರ ಪರ ದನಿ ಎತ್ತಲು ಸಂಘ ತೆರೆಯಲು ಅವರ ಪತ್ನಿಯರು ಬಿಡುತ್ತಿಲ್ಲ ವಂತೆ ಅದಕ್ಕೇ ಯಾರೂ ಸಂಘ ಕಟ್ಟಿಲ್ಲ.. :)

shivu.k said...

ಬಾಲು ಸರ್,

ವಿಶ್ವ ಗಂಡಸರ ದಿನದಂದೂ ಗಂಡಸರ ಅನುಕೂಲತೆಗಳನ್ನು ಚೆನ್ನಾಗಿ ಪಟ್ಟಿ ಮಾಡಿದ್ದೀರಿ. ಓದಿ ಖುಷಿಯಾಯ್ತು. ಮತ್ತೆ ಇನ್ನಷ್ಟು ಇಂಥವು ಬರೆಯಿರಿ. ನಮಗೂ ನಮ್ಮ ಹಕ್ಕುಗಳನ್ನು ಮಂಡಿಸಲು ಅನುಕೂಲವಾಗಬಹುದು.

ಮತ್ತೆ ನಮ್ಮ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಕೆಲಸ ಒತ್ತಡ ಜಾಸ್ತಿ ಇದ್ದಿದ್ದರಿಂದ ಬರಲಿಲ್ಲವೆಂದುಕೊಳ್ಳುತ್ತೇನೆ. ತುಂಬಾ ಜನ ಬಂದಿದ್ದರು. ನೀವು ಇದ್ದಿದ್ದರೇ ಚೆನ್ನಾಗಿತ್ತು.
ಧನ್ಯವಾದಗಳು.

ಸುಪ್ತವರ್ಣ said...

ಚೆನ್ನಾಗಿವೆ! ನನ್ನ ಬಳಿಯೂ ಒಂದಷ್ಟು point ಗಳಿವೆ. ಇರಿ ನನ್ನ ಹೆಂಡತಿಯನ್ನು ಕೇಳಿ ಬರುತ್ತೇನೆ!

ಸಾಗರದಾಚೆಯ ಇಂಚರ said...

ತುಂಬಾ ಚೆನ್ನಾಗಿದೆ ನಿಮ್ಮ ತರ್ಕಬದ್ದ ಲೇಖನ,
ಗಂಡಸರ ದಿನವೋ, ಗಂಡಾಂತರ ದಿನವೋ ದೇವರೇ ಬಲ್ಲ :)

ಜಲನಯನ said...

ಬಾಲು...ಪ್ರಭು ಹೇಳೋ ಪರಕಾರ....ಸಾರಿ ಪ್ರಕಾರ ..ಅವ್ರು ತಮ್ಮಾKಗೆ ಹೆದರಿ ಸಂಘಕ್ಕೆ ಸೇರ್ಕೊಂಡಿಲ್ಲ ಅಂದ್ರೂ ಸಂಗ ಇದ್ದರಾ ಇಲ್ಲವಾ ಕೇಳಿ..?? ನನಗೆ..ಕಳಿಸಿ ಕೊಡೀಪಾ ಆ ಮೆಂಬರ್ ಶಿಪ್ ಫಾ-ರಮ್ಮು......ಹಹಹ...ಬಹಳ ಚನ್ನಾಗಿ ಬರೆದಿದ್ದೀರಿ....ಕಡೆಗೆ ಒಬ್ಬರಾದರೂ ಸಿಕ್ಕರಲ್ಲ ನಮ್ಮ ಪರ ವಕಾಲತ್ತು ಮಾಡೋರು...

Anonymous said...

;) nanna Yajumaanra duradrushta nodi Ration card alli kooda nanna yesranne YAJAMANI anta madidare :)

so neevella seri santvana helbeku nanna husband ge ;)

Good one!

Unknown said...

ವಿಶ್ವ ಗಂಡಾಂತರ ದಿನಕ್ಕೆ ಉತ್ತಮ ಲೇಖನ ಬರ್ದಿದ್ದೀರ... :-)

ಚುಕ್ಕಿಚಿತ್ತಾರ said...

ನೋಡಿ ಇವರೇ.....

ನಿಮಗೆ ಇಷ್ಟೆಲ್ಲಾ ಸವಲತ್ತು , ಸೌಲಭ್ಯ ಇದ್ದ ಮೇಲೂ ಹೆಮ್ಮಕ್ಕಳಿಗೆ ಇರುವ ಅಷ್ಟೋ ಇಷ್ಟೋ ಸವಲತ್ತನ್ನು ಅಪಹರಿಸಲು ಗ೦ಡಸರ ದಿನ ಅ೦ತ ಬೇರೆ ಆಚರಿಸ್ತೀರಲ್ರೀ....
ಏನು ಗ೦ಡಸರಪ್ಪಾ.... !!!!!
ನಿಜವಾಗಿಯೂ ಗ೦ಡಾ೦ತರ ಈಗ ಶುರುವಾಗುತ್ತಿದೆ.....


ಏಳಿ... ಎದ್ದೇಳಿ.. ಮಹಿಳೆಯರೇ... ಸೌಟು ತಗೋಳ್ಳಿ......!!!!!

ಬಾಲು said...

ಪರಂಜಾಪೆ ಅವರೇ ಗಂಡಾಂತರ ದಿನವೇ? demerits ಬಗ್ಗೆ ನು ಸ್ವಲ್ಪ ಸಂಶೋದನೆ ಮಾಡುವೆ.

ಶಿವ ಪ್ರಕಾಶ್: ಹೌದು ಒಳ್ಳೆ advantages ಇದಾವೆ.

ರಾಜೀವ: ನಿಮ್ಮ ಮಾತು ಒಪ್ಪುವೆ.

ಸವಿ ಗನಸು : ಹೌದು ಹೌದು ಎಲ್ಲಾ ಗಂಡಸರಿಗೂ ಜಯವಾಗಲಿ.

ಸಂತೋಷ್: :) :) :)

ಗೌತಮ್: ಹ್ಞೂ... ಬರೀಬಹುದು, ಆದರೆ ಅದರ advantages ನ ಮಹಿಳೆಯರು ತಗೊಂಡ್ರೆ ಅಂತ ಭಯ.

ಶಿವೂ: ಹೌದು ಎಲ್ಲ ಸೇರಿ ಹಕ್ಕು ಗಳನ್ನೂ ಮಂಡಿಸೋಣ

ಪ್ರಭು ರಾಜರೇ: ನಿಮ್ಮ ಮಾತಲ್ಲಿ ಸತ್ಯ ಇರಬಹುದು, ಎಲ್ಲ ಕಲಿ ಗಾಲ, ಗಂಡಸರಿಗೆ ರಕ್ಷಣೆ ಯೇ ಇಲ್ಲ ವಾಗಿದೆ. :)

ಸುಪ್ತ ವರ್ಣ: ನಿಮ್ಮ ಮನೆಯವರನ್ನ ಕೇಳಿದಿರಾ? ಅನುಮತಿ ಕೊಟ್ಟರ?

ಗುರು ಮೂರ್ತಿ ಗಳೇ: :) :)

ಜಲನಯನ: ಸಂಘದ ಫಾರಂ ಅನ್ನು ನಿಮಗೆ ಕಂಡಿತಾ ಕಳುಹಿಸಿ ಕೊಡಲಾಗುವುದು.

ಅನಾಮಿಕರೆ: ನಿಮ್ಮ ಮನೆಯವರಿಗೆ ನನ್ನ ಕಡೆ ಯಿಂದ ಸಾಂತ್ವಾನ ತಿಳಿಸಿರಿ. :) :) :) ಮತ್ತು ಮೆಚ್ಚಿದಕ್ಕೆ ಥ್ಯಾಂಕ್ಸ್

ರವಿ ಕಾಂತ ಗೋರೆ : ಇದೊಳ್ಳೆ ಕಥೆ ಆಯಿತಲ್ಲ. ಅದು ಗಂಡಸರ ದಿನ ಮರಾಯಿರೆ. ಅದು ಗಂಡಸರ ದಿನ, ಗಂಡಾಂತರ ಅಲ್ಲ!!

ಚುಕ್ಕಿ ಚಿತ್ತಾರ: ಅಯ್ಯಯ್ಯೋ ಅಡ್ಡ ಬಿದ್ದೆ.
ದಯಮಾಡಿ ನೀವುಗಳು ಸೌಟನ್ನು ಕೇವಲ ಅಡುಗೆ ಮಾಡಲು ಮಾತ್ರ ಉಪಯೋಗಿಸಿ. ನಿರುಪ್ರದವಿ ಗಂಡಂದಿರ ಮೇಲೆ ಯುದ್ದ ಬೇಡ.
ಶಾಂತಿ ಶಾಂತಿ ಶಾಂತಿ..

ನಿಮಗೆ ಟೈಮ್ ಪಾಸು ಬ್ಲಾಗಿಗೆ ಸ್ವಾಗತ.