Thursday, February 12, 2009

ಸೇನೆ ಹಾಗು ಪಬ್!!!


ಈಗ ಎಲ್ಲಿ ನೋಡಿದರು ಶ್ರೀ ರಾಮ ಸೇನಾ ಯ ಸುದ್ದಿ ಯೋ ಸುದ್ದಿ!! ಮಂಗಳೂರಿನ ಪಬ್ ಧಾಳಿ ಇಂದ ಹಿಡಿದು, ವ್ಯಾಲಿಂಟೈನ್ಸ್ ಡೇ ತನಕ ಅವರದ್ದೇ ಮಾತು. ಈ ಸಂದರ್ಭದಲ್ಲಿ ಸಮಾಜದಲ್ಲಿ ಆಯಾ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಕೆಲವು ಆಯ್ದ ವ್ಯಕ್ತಿಗಳ ಅನಿಸಿಕೆ ಯನ್ನು ಕೇಳಲಾಯಿತು, ಅವರ ಮಾತನ್ನು ನೇರವಾಗಿ ಹಾಗೆ ಕೊಡಲಾಗಿದೆ.


ರೋಹಿತ್ ಶೆಟ್ಟಿ ( ಪ್ರಭಾವಿ ಇಂಡಸ್ಟ್ರಿಯಲಿಸ್ಟ್ ಒಬ್ಬರ ಮಗ, ಮಂಗಳೂರು ) . ನೋಡಿ ಈ ಶ್ರೀ ರಾಮ ಸೇನೆ ಯವರಿಗೆ ಬುದ್ದಿ ಎ ಇಲ್ಲ, ಬರಿ ಪ್ರಚಾರಕ್ಕೆ ಹೀಗೆ ಮಾಡ್ತಾ ಇದ್ದಾರೆ, ನಾವು ಇಲ್ಲಿ ದುಡ್ಡು ಕೊಟ್ಟು ವಿದೇಶಿ ಮದ್ಯ ವನ್ನು ಕುಡಿತ ಇರಬೇಕಾದರೆ, ಅವರು ಒಮ್ಮೆಲೇ ಧಾಳಿ ಮಾಡಿ, ವದೆ ಕೊಟ್ಟರು, ಆ ಏಟಿಗೆ ನನಗೆ ಕುಡಿದ ಮತ್ತೆಲ್ಲ ಹೊರಟು ಹೋಯಿತು, ನೋಡಿ ನಾನು ಇನ್ನೊಮ್ಮೆ ಹೇಳ್ತೇನೆ, ಇವರಿಗೆ ಬುದ್ದಿಯೆ ಇಲ್ಲ, ನಾನು ಅಷ್ಟು ದುಡ್ಡು ಕೊಟ್ಟು ಕುಡಿದ ಮದ್ಯದ ಅಮಲನ್ನು ಒಮ್ಮೆಲೇ ಇಳಿಯುವ ಹಾಗೆ ಮಾಡಿದರು. ಸಾವಿರ ರೂಪೈ ಪಾಕೆಟ್ ಮನೀ ತಗೋಬೇಕಾದ್ರೆ ನನಗೆ ಎಷ್ಟು ಕಷ್ಟ ಆಗ್ತದೆ, ಅಂತದ ರಲ್ಲಿ ಇವರು ಹೀಗೆ ಮಾಡಿದ್ದು ಸರಿನ? ಸೇನೆ ಗೆ ದಿಕ್ಕಾರ!!!!


ಸ್ವದೇಶಿ ವಸ್ತು ಜಾಗರನ ಮಂಚ್ ಅಧ್ಯಕ್ಷ ಹಾಗೂ ಧರ್ಮ ಪ್ರಚಾರಕ: ಹಿಂದೂ ಧರ್ಮ ದಲ್ಲಿ ಎಲ್ಲೂ ಕುಡಿತವನ್ನು ತಪ್ಪು ಎಂದು ಹೇಳಿಲ್ಲ, ಹಿಂದೆಲ್ಲ ರಾಜ ರು ರಾಮ ರಸ ವನ್ನು ಕುಡಿಯುತ್ತಾ ಇದ್ದರು, ಇಂದ್ರ ನು ರಂಭೆ ಮೇನಕೆ ಯರ ನೃತ್ಯ ವನ್ನು ಆನಂದಿಸುತ್ತಾ ಇದ್ದರು, ಆದ್ದರಿಂದ ಅದೋ ತಪ್ಪಲ್ಲ. ತಪ್ಪು ಅಂದ್ರೆ ವಿದೇಶಿ ಮಧ್ಯ, ವಿದೇಶಿ ಮದ್ಯ ವನ್ನು ಬಿಡಿ, ಕೇವಲ ರಾಮ ರಸ, ಕಳ್ಳು, ಕೊಟ್ಟೆ ಸಾರಾಯಿ ಯನ್ನು ಕುಡಿಯಿರಿ, ಆವಾಗ ನೀವು ಕೂಡ ಹಿಂದೂ ಸೇವಕ ರೆಂದು ಪ್ರೇರೇಪಿತ ರಾಗಿ ಯಾವ ಸೇನೆ ಯವರು ಧಾಳಿ ಮಾಡಲಾರರು. ಭಗವಂತನು ನಿಮಗೆ ಒಳ್ಳೆಯದು ಮಾಡಲಿ.


ಅಂಬಿಕಾ, ಕೈ ಪಕ್ಷದ ಸಚಿವೆ: ಶ್ರೀ ರಾಮ ಸೇನೆ ಅವರು ಕೋಮುವಾದ ಹರಡುತ್ತಾ ಇದ್ದಾರೆ, ಇದು ಭಾರತ, ಇಲ್ಲಿ ಎಲ್ಲರಿಗೂ ಸ್ವಾತಂತ್ರ್ಯ ಇದೆ, ಪಬ್ ಗೆ ಹೋಗಬೇಡ ಅನ್ನಲು ಅವರು ಯಾರು? ನಮ್ಮದು ಮಹಾತ್ಮ ಗಾಂಧಿ ಪಕ್ಷ, ಅವರು ಅಂದು ಅರೆ ಬೆತ್ತಲೆ ಆಗಿ, ಉಪವಾಸ ಮಾಡಿ ಫ್ರೀಡಮ್ ಬಂದ ಮೇಲೂ ಕುಡಿ ಬೇಡಿ, ಹುಡುಗಿ ಸೊಂಟ ಹೂಡಿದು ಕುಣಿಬೇಡಿಅನ್ನಲು ಅವರಾರು? ನಾನು, ನಂ ಮಗಳು ಎಲ್ಲರೂ ಪಬ್ ಗೆ ಹೋಗ್ತೀವಿ, ಗಾಂಧಿ ಉಪ್ಪಿನ ಸತ್ಯಾಗ್ರಹ ಮಾಡಿದ ಹಾಗೆ ನಾವು ಪಬ್ ಚಳುವಳಿ ಮಾಡ್ತೀವಿ, ಎಲ್ಲರೂ ಕುಡಿಬೇಕು, ಕುಣೀಬೇಕು, ಇದು ಜಾತ್ಯತೀತ, ಬಹು ಸಂಸ್ಕೃತಿ ದೇಶ!!!!!


ಜಯಂತ ಮೂರ್ತಿ( ಸ್ವಘೊಷಿತ ಬುದ್ದಿ ಜೀವಿ): ಇದು ಹಿಂದೂ ತಾಲಿಬಾನಿಕರಣ , ಕೇಂದ್ರ ಸರ್ಕಾರವು ಕೂಡಲೇ ರಾಜ್ಯ ಸರ್ಕಾರವನ್ನು ವಜಾ ಮಾಡಬೇಕು, ಹಾಗೂ ಪಬ್ ಗೆ ಹೋಗುವ ವರಿಗೆ ಪ್ರೋತ್ಸಾಹ ವನ್ನು ಕೊಡಬೇಕು, ನಾನು ಹಿಂದೆ ಪಬ್ ರಾತ್ರೆ ಬೇಗ ಮುಚ್ಚುವುದರ ಬಗ್ಗೆ ಬೀದಿ ಗಲಾಟೆ ಮಾಡಿದ್ದೆ,ಈಗಲೂ ಗಲಾಟೆ ಮಾಡುವೆ!!!

Monday, December 15, 2008

ದೆವ್ವ ಗಳು ಸಾರ್ ದೆವ್ವಗಳು!!!



ದೆವ್ವಗಳು ಅಥವಾ ಭೂತ ಅನ್ನೋದು ನಂಗೆ ಮೊದಲಿನಿಂದಲೂ ಬಹಳ ಕೂತುಹಲಕರ ವಿಷಯ, ಅಪ್ಪಿ ತಪ್ಪಿನು ದೇವಸ್ತಾನದ ಹತ್ತಿರ ಸುಳಿಯಾದ ನಾನು ದೆವ್ವ ನ ಹುಡುಕಿ ಕೊಂಡು ಸ್ಮಶಾನ ದ ಹತ್ತಿರ, ಮದ್ಯ ರಾತ್ರೆ ಹೊಳೆ ದಂಡೇ ಹೀಗೆ ಮುಂತಾದ ಕಡೆ ಹುಡುಕಾಡಿದ್ದು ಇದೆ. ಆದ್ರೆ ದುರ ದೃಷ್ಟಕ್ಕೆ ಒಂದಾದ್ರೂ ದೆವ್ವ ಕಣ್ಣಿಗೆ ಬೀಳ ಬಾರದೇ? ದೇವರಂತೂ ಸಿಗೋಲ್ಲ ಬಿಡಿ, ಕೊನೇ ಪಕ್ಷ ದೆವ್ವ ನದರೂ ಕಾಣಿಸ ಬಾರದೇ? ಅವುಗಳ ಕಣ್ಣಿಗೂ ನಾನು ನಾನೊಬ್ಬ ಯಕಶ್ಚಿತ್ ಮಾನವ ಪ್ರಾಣಿ ಆದೇನ? ಗೊತ್ತಿಲ್ಲ.. ಅಂತೂ ಇಂತೂ ನನ್ನ ಅದೃಷ್ಟ ವೋ ಏನೋ ಒಂದು ದೆವ್ವ ಮೊನ್ನೆ ಕನಸಲ್ಲಿ ಬಂತು, ಇಂತಹ ಅವಕಾಶಕ್ಕೆ ಕಾದಿದ್ದ ನಾನು ಸಡನ್ ಆಗಿ ಆ ದೆವ್ವದ ಸಂದರ್ಶನ ಮಾಡಿದೆ. ಅದರ ಸಾರಾಂಶ ಇಲ್ಲಿ ಕೊಟ್ಟಿರುವೆ…

1. ದೇವ್ವಗಳು ರಾತ್ರೆ ನೇ ಯಾಕೆ ಬಂದು ಕಾಟ ಕೊಡುತ್ತೆ?
ಡೇ ಟೈಮ್ ನಲ್ಲಿ ಸಿಕ್ಕಪಟ್ಟೆ ಟ್ರ್ಯಾಫಿಕ್ ಇರುತ್ತೆ, ನಾವು ಆನ್‌ಟೈಮ್ ಗೆ ಹೋಗಿ ಕ್ಲೈಂಟ್ ಗೆ ಕಾಟ ಕೊಡೋಕೆ ಆಗೋಲ್ಲ.. ಸೋ ನಾವು ರಾತ್ರೆ ನ ಪ್ರಿಫರ್ ಮಾಡ್ತಿವಿ!!

2. ಮೋಸ್ಟ್ ಆಫ್ ಟೈಮ್ಸ್ ಕೈಯಲ್ಲಿ ಮೊಂಬತ್ಟಿ ಇರುತ್ತೆ ಯಾಕೆ?
ಬೆಳಕು ಬರಲಿ ಅಂತ!!! ( ನಂಗೆ ಗೊತ್ತೇ ಇರಲಿಲ್ಲ)

3. ದೆವ್ವ ಒಳಗೆ ಬಂದಾಗ ಹಚ್ಚಿದ ಕ್ಯಾಂಡಲ್ ಕೆಟ್ಟೊಗುತ್ತೆ ಯಾಕೆ?
ನಾವು ಹ್ಯಾಪೀ ಬರ್ತ್ ಡೇ ಮಡ್ಕೋತೀವಿ…

4.ಯಾವಾಗ್ಲೂ ಮಹಿಳಾ ದೆವ್ವಗಳೆ ಯಾಕೆ ಕಾಣುತ್ತೆ? ಸಿನಿಮಾ ಗಳಲ್ಲೂ ಲೇಡೀ ದೆವ್ವ ಗಳೆ ಜಾಸ್ತಿ.. ಗಂಡಸರು ದೆವ್ವ ಆಗೋದು ಕಡಿಮೆ ನ?
ಗ್ಲ್ಯಾಮರ್ ಲೋಕ ಸ್ವಾಮಿ, ರಾಜ್ ಫಿಲ್ಮ್ ನೋಡಿ, ಒಳ್ಳೇ ಸೆಕ್ಸೀ ಹುಡುಗಿ ಇದ್ದರೆ, ಅದನ್ನ ಜನ ಕಣ್ಣು ಬಾಯೀ ಬಿಟ್ಟು ನೋಡ್ತಾರೆ!!! ಗಂಡಸರು ದೆವ್ವ ಆಗ್ತಾರೆ, ಬಟ್ ಸಿನಿಮಾ ದವರು ನಮ್ಮನ್ನ ಅಷ್ಟಾಗಿ ಪರಿಗಣಿಸಿಲ್ಲ!!

5. ನಿಮ್ ಮೆಚ್ಚಿನ ಕನ್ನಡ ನಟ ಯಾರು?
ರವಿ ಚಂದ್ರನ್, ( ಶ್ರೀ ರಾಮ ಚಂದ್ರ ಮೂವೀ ನಲ್ಲಿ ಗಂಡು ದೆವ್ವ ಇದೆ!!!)

6. ನಿಮಗೆ ಇಷ್ಟವಾಗುವ ಆಹಾರ ಯಾವುದು? ಬಿಸಿ ರಕ್ತ ಅಂಡ್ ಹಸಿ ಮಾಂಸ ಅಂತಾರೆ ನಿಜ ನ?
ಬಿಸಿ ರಕ್ತ? ಹಸಿ ಮಾಂಸ? ರಿ ಸ್ವಾಮಿ ನೀವು ಮಾತ್ರ ಪೆಪ್ಸೀ ಕೋಕ್ ಕುಡಿದು, ಚಿಕನ್ 65, ಮಟನ್ ಬಿರಿಯಾನಿ ತಿನ್ನ ಬೇಕು, ನಾವು ಉಪ್ಪು ಕಾರ ಇಲ್ಲದ ಹಸಿ ಮಾಂಸ ತಿನ್ನೋಕೆ ನಾವೇನೂ ಕಾಡು ಮನುಷ್ರ? ನಮ್ಗೆ ಅದು ಇಷ್ಟ ಇಲ್ಲ. ಇನ್ಮೂಂದೆ ನಂಗೆ ಒಳ್ಳೇ ನಾನ್ ವೆಜ್ ಡಿಶಸ್ ಕೊಡಿ. ( ಕೋಲಿ ಬಲಿ ಬದಲು ಒಳ್ಳೇ ಒಳ್ಳೇ ಚಿಕನ್ 65 ಕೊಡಿ)

7. ದೆವ್ವಗಳದ್ದು ಏನಾದ್ರೂ ಕಾಲ್ ಸೆಂಟರ್ ಇದೆಯಾ? ನಮ್ಗೆ ಏನಾದ್ರೂ ಡೌಟ್ ಬಂದ್ರೆ ಆನ್ಸರ್ ಮಾಡೋಕೆ.
ಒಂದು ಕಾಲ್ ಸೆಂಟರ್ ಓಪನ್ ಮಾಡೋ ಪ್ಲಾನ್ ಇತ್ತು, ಈಗ ರಿಸೆಶನ್ ನೋಡಿ, ಅದಕ್ಕೆ ಇಡೀ ಪ್ರಾಜೆಕ್ಟ್ ಆನ್ ಹೋಲ್ಡ್ ನಲ್ಲಿ ಇದೆ.

8. ನೀವು ಬರಿ ಕಾಟ ಕೊಡ್ತೀರೋ ಅಥವಾ ಹೆಲ್ಪ್ ಕೂಡ ಮಾಡ್ತೀರೋ? ಹೆಲ್ಪ್ ಮಾಡೋದಾದ್ರೆ ನಂ ಹತ್ತಿರ ದೊಡ್ಡ ಲಿಸ್ಟ್ ಇದೆ.
ಅದೆಲ್ಲ ನಂ ಮ್ಯಾನೇಜರ್ ಹೇಳಿದ ಹಾಗೆ ಆಗುತ್ತೆ, ಕಾಟ ಕೊಡು ಅಂದ್ರೆ ಕಾಟ, ಹೆಲ್ಪ್ ಅಂದ್ರೆ ಹೆಲ್ಪ್. ಹೆಲ್ಪ್ ಬೇಕಿದ್ರೆ ಬೇಗ ಸತ್ತು ದೆವ್ವ ಆಗಿ, ಮ್ಯಾನೇಜರ್ ನ ಮೀಟ್ ಮಾಡಿ!!!

9. ನಿಮ್ಮ ವರ್ಕಿಂಗ್ ಅವರ್ಸ್ ಏನು?
ಜಸ್ಟ್ 8 ಘಂಟೆ. .ಮದ್ಯ 3 ಬ್ರೇಕ್!!!

10. ನಿಮ್ಗು ಟಾರ್ಗೆಟ್ಸ್ ಇರುತ್ತ?
ಹೂನ್… ನಂಗೂ ಮ್ಯಾನೇಜರ್ ಗಳು ಇರ್ತವೆ ಅಂತ ಹೇಳಿಡ್ನಲ್ಲ…( ಅಳುತ್ತಾ!!!)

11. ನೀವು ಗಳು ಹಳೆ ಕಿತ್ಟೋದ ಬಂಗಲೇ ಗಳಲ್ಲೇ ಯಾಕೆ ಜಾಸ್ತಿ ಇರೋದು?ಹೊಸ ಮನೆ ಪೈಂಟ್ ವಾಸನೆ ಮೂಗಿಗೆ ಆಗೋಲ್ವಾ?
ರೆಂಟ್ ಪ್ರಾಬ್ಲಮ್ ಸ್ವಾಮಿ, ಹಳೆ ಮನೆಗೆ ರೆಂಟ್ ಕಡಿಮೆ, ಈಗ ರಿಯಲ್ ಎಸ್ಟೇಟ್ ಬಿದ್ದೊಗೀರೊದ್ರಿಂದ ನಾವು ಹೊಸ ಫ್ಲಾಟ್ ಗಳಲ್ಲಿ ಸೆಟ್ಲ್ ಆಗ ಬಹುದು ಅನ್ಸುತ್ತೆ!!

12. ನೀವು ಕ್ಯಾಮರ ಗಳಲ್ಲಿ ಕೆಲವು ಸಲ ಕಾಣಿಸಿ ಕೋತೀರ, ನಂ ಕಣ್ಣಿಗೆ ಕಾಣೋಲ್ಲ ಯಾಕೆ?
ಯಾಕೆ ನಾವು ಫೋಟೋ ಗೆ ಪೋಸ್ ಕೊಡ ಬಾರದ?


ಇನ್ನೇನು ಮುಂದಿನ ಪ್ರಶ್ನೆ ಕೇಳ ಬೇಕು ಅನ್ನುವುದರಲ್ಲಿ .. ಇಲ್ಲಿ ನಂ ರೂಮ್ ಮೇಟ್ ಜಿತಿನ್ ಅನ್ನೋ ಜೀವಿ ಜೋರಾಗಿ ಗೊರಕೆ ಹೊಡೆದು ನಾನು ಎದ್ದೆಳೊ ಹಾಗೆ ಆಯಿತು!! ದೆವ್ವ ನು ಡಿಸಪಿಯರ್ ಆಯಿತು.!!!

Friday, December 5, 2008

ಮೊಬೈಲ್ ಬಿಲ್ ಕಡಿಮೆ ಮಾಡೋದು ಹೇಗೆ?

ಕಳೆದ ಒಂದು ತಿಂಗಳಿಂದ ಬ್ಲಾಗ್ ಬರೆಯಲು ಆಗಲೇ ಇಲ್ಲ, ಅದಕ್ಕೆತುಂಬ, ಕೈ ತುಂಬ ಕೆಲಸ ಇತ್ತು ಅಂತ ಅಲ್ಲ, ಅದು ಆಫೀಸ್ ನಲ್ಲಿ ಟೈಮ್ ಪಾಸು ಮಾಡುತ್ತ ಕೂತಿದ್ದ ರಿಂದ ಬ್ಲಾಗ್ ಗೆ ಸಮಯ ಸಿಗಲಿಲ್ಲ ಅಷ್ಟೆ. ಇಗ ದುಬೈ ಎಂಬ ಊರಲ್ಲಿ ಕೂತು ಇದನ್ನ ಬರೀತಾ ಇದ್ದೀನಿ, ಇಲ್ಲಿ ಮೊಬೈಲ್ ಉಪಯೋಗಿಸಿ ಊರಿಗೆ ಕಾಲ್ ಮಾಡಿ ಬಿಲ್ಲು ಹೆಚ್ಚು ಬರುವ ಸಾಧ್ಯತೆ ಇದೆ... ಸೊ ಮೊಬೈಲ್ ಬಿಲ್ ಕಡಿಮೆ ಮಾಡೋದು ಹೇಗೆ ಅಂತ ಕೆಲವೊಂದು ಟಿಪ್ಸ್ ಗಳನ್ನ ಕೊಟ್ಟಿರುವೆ ನಿಮಗೆ ಇಷ್ಟ ವಾಗಬಹುದು ಅಂತ, ನಿಮಗೂ ಬೇರೆ ಗೊತ್ತಿದ್ದರೆ, ತಿಳಿಸಿ

೧.ನಿಮ್ ಗರ್ಲ್ ಫ್ರೆಂಡ್ ಜೊತೇನೆ ಮಲಕ್ಕೊಳಿ, ಸೊ ಅವಳು ರಾತ್ರೆ ಇಡಿ ನಿಮಗೆ ಮಿಸ್ ಕಾಲ್ ಕೊಟ್ಟು, ನೀವು ಮತ್ತೆ ಕಾಲ್ ಮಾಡಿ, ನಿಮಗೆ ಹೆವಿ ಬಿಲ್ ಬರೋದು ಎಲ್ಲ ತಪ್ಪುತ್ತೆ... ( ತುಂಬ ಅಧ್ಬುತ ವಾದ ಐಡಿಯಾ ಅಲ್ವ? )

೨. ಮಾಹಿತಿ ಕಳಿಸೋಕೆ ಕಾಳಿದಾಸನ ಮೇಘ ಸಂದೇಶ ಹೇಗೆ? ನೀವು ಆಫೀಸ್ ಗೆ ಬರ್ತಾ ಇಲ್ಲ ಅಂತ ನಿಮ್ ಮ್ಯಾನೇಜರ್ ಗೆ ಒಂದು ಮೇಘ ಸಂದೇಶ ಕಳ್ಸಿ!!!!

3. ಕಂಡ ಕಂಡವರಿಗೆ ಮೊಬೈಲ್ ನಿಂದ ಆರೋಗ್ಯಕ್ಕೆ ಹಾನಿ, ಅದರಿಂದ ಪ್ರೈವಸಿ ಅನ್ನೋದೇ ಹೋಗಿದೆ, ನಾನು ಮೊಬೈಲ್ ಕಡಿಮೆ ಉಪಯೋಗಿಸುವೆ ಅಂತ ಪುಂಗಿ ಊದಿ. ನೀವು ಯಾರಿಗೂ ಫೋನ್ ಮಾಡದೇ ಇದ್ರೂ ಯಾರು ನಿಮ್ಮನ್ನ ತಪ್ಪು ತಿಳಿಯೋಲ್ಲ.

4.ಅ ದಯಾಮಯ ನಾದ ಭಗವಂತ ಆಫೀಸ್ ನಲ್ಲಿ ಫೋನ್ ಗಳನ್ನ ಕೊಟ್ಟಿರೋದೆ ನಾವು ನಮಗೆ ಬೇಕಾದವರಿಗೆ, ಬೇಕಾದಷ್ಟು ಹೊತ್ತು ಮಾತಾಡಲಿ ಅಂತ... ದಯಮಾಡಿ ಉಪಯೋಗಿಸಿ....

೫.ಅಗತ್ಯ ಬಿದ್ದಾಗ ಮಾತ್ರ ಫೋನ್ ಮಾಡಿ.. ಆದರೆ ಮಾತಿನ ನಡುವೆ.. ಏನು ಹೇಳ್ಬೇಕು ಅಂತ ಇದ್ದೆ ಅಂದ್ರೆ, ........ ಯಾಕೋ ಸರಿಯಾಗಿ ಕೇಳಿಸ್ತಾ ಇಲ್ಲ. ಸಿಗ್ನಲ್ ಕಡಿಮೆ ಇದೆ, ಕೇಳಿಸ್ತಾ ಇಲ್ಲ.. ಅಂತ ಬಡಕೊಂಡು ಲೈನ್ ಕಟ್ ಮಾಡಿಬಿಡಿ, ಆಮೇಲೆ ಅವರೇ ಕಾಲ್ ಮಾಡ್ತಾರೆ, ನೀವು ಆರಾಮಾಗಿ ಮಾತಾಡಿ.

೬. ಬಿ.ಎಸ್.ಏನ್.ಎಲ್ ಕನೆಕ್ಷನ್ ತಗೊಂಡು ಬಿಡಿ, ನೀವು ಕಾಲ್ ಮಾಡಬೇಕು ಅಂದ್ರು ನಿಮಗೆ ಸಿಗ್ನಲ್ ಸಿಗೋಲ್ಲ... ನಾನು ಅ ಬಿ ಎಸ್ ಏನ್ ಎಲ್ ನೆ ಉಪಯೋಗಿಸ್ತಾ ಇರೋದು... ನಂಗೆ ಸಿಕ್ಕಾಪಟ್ಟೆ ಕಡಿಮೆ ಬಿಲ್ ಬರುತ್ತೆ... ಇಗ ದುಬೈ ನಲ್ಲಿ ಆಫೀಸ್ ಮೊಬೈಲ್ ಇದೆ... ಚೆನ್ನಾಗಿ ಉಪಯೋಗಿಸುತ್ತಾ ಇರುವೆ!!!

೭. ಆದಷ್ಟು ಮಿಸ್ ಕಾಲ್ ಕೊಟ್ಟು ಅವರೇ ಕಾಲ್ ಮಾಡೋ ಹಾಗೆ ಮಾಡಿ, ಆದ್ರೆ ನಿಮ್ ಮನೆಗೆ ಬೆಂಕಿ ಬಿದ್ರೆ, ಅಥವಾ ನೀವು ಲಿಫ್ಟ್ ನಲ್ಲಿ ಸಿಕ್ಕಿ ಹಾಕಿ ಕೊಂಡರೆ, ಫೈರ್ ಇಂಜಿನ್ ಗೆ, ಪೋಲಿಸ್ ಸ್ಟೇಷನ್ ಗೆ ಮಿಸ್ ಕಾಲ್ ಕೊಡ ಬೇಡಿ ಕಾಲ್ ಮಾಡಿ.

೮. ಇನ್ನು ಸಿಕ್ಕಾಪಟ್ಟೆ ಒಳ್ಳೆ ಪ್ಲಾನ್ ಅಂದ್ರೆ ನಿಮ್ ಮೊಬೈಲ್ ಕನೆಕ್ಷನ್ ತೆಗೆದು ಬಿಡಿ. ಮೊಬೈಲ್ ಲೇ ಇಲ್ಲ ಅಂದ್ರೆ ಬಿಲ್ ಹೇಗೆ ಬರುತ್ತೆ?

ಹೀಗೆ ಮಾಡಿದ್ರೆ ನಿಮ್ ಮೊಬೈಲ್ ಬೀ ಸಿಕ್ಕಪಟ್ಟೆ ಉಳಿಯುತ್ತೆ, ಆ ದುಡ್ಡನ್ನ ನಂಗೆ ದಾನ ಮಾಡಿ ಕೃತಾರ್ತರಾಗಿ.

Tuesday, October 28, 2008

ಸಾಯುವ ಸುಲಭ ಮಾರ್ಗಗಳು!!


ನೋಡಿ ಬದುಕು ಸಿಕ್ಕಾಪಟ್ಟೆ ಕಷ್ಟ ಆಗಿದೆ, ಆಫೀಸ್ ಹೋದ್ರೆ ಮ್ಯಾನೇಜರ್ ಗಳು ಅನ್ನೋ ಅನ್ಯ ಗ್ರಹ ಜೀವಿಗಳ ಕಾಟ, ರಸ್ತೇಲಿ ನಡಕೊಂಡು ಹೊರಟರೆ ಸಾಲ ಗಾರರ ಕಾಟ, ಮನೆಗೆ ಹೋದ್ರೆ ಹೆಂಡತಿ ಕಾಟ, (ಮದುವೆ ಆಗಿಲ್ಲದೇ ಇದ್ರೆ ಗರ್ಲ್ ಫ್ರೆಂಡ್.. ಫೋನ್ ನಲ್ಲಿ) ಯಾರು ಇಲ್ಲ ಅಂದ್ರೆ ಮತ್ತದೇ ಹಳೆ ಗೆಳಯರ ಜೊತೆ, ಯಾವತ್ತು ಕೇಳಿದ ಜೋಕು ಅದೇ ಬಾರು, ಏನು ಬದಲಾವಣೆ ನೆ ಇಲ್ಲ.




ಮಾರ್ಕೆಟ್ ತೀರ ಕುಸಿದು ಹೋಗಿದೆ, ನೀನು ಮನೆಗೆ ಹೋಗಪ್ಪ ಅಂತ ಮ್ಯಾನೇಜರ್ ಹೇಳ್ತಾನೆ, ಮನೇಲಿ ಹಬ್ಬಕ್ಕೆ ಏನು ಗಿಫ್ಟ್ ಕೊಡ್ತಿರಿ ಅಂತ ಕೇಳ್ತಾಳೆ? ಬದುಕು ಎಷ್ಟು ಬರಬಾತ್ ಅಲ್ವ? ನಮ್ಮ ಕರ್ಮಕ್ಕೆ ಜೀವನ ಬೇಜಾರ್ ಆಗಿದೆ ನಾನು ಸಾಯ್ತೀನಿ ಅಂತ ಹೇಳೋದು ಕೂಡ ತಪ್ಪೆ, ಅಕಸ್ಮಾತ್ ಜೀವ ಹೋಗಲಿಲ್ಲ ಅಂದ್ರೆ ಸೆರೆಮನೆ ಗೆ ಹೋಗಬೇಕು!!!




ನಂಗಂತೂ ಅ ನೇಣು, ವಿಷ, ರೈಲಿನ ಕೆಳಗೆ ತಲೆ ಕೊಡೋದು.. ಎಲ್ಲ ಹಳೆದು ಅಂತ ಅನ್ನಿಸ್ತ ಇದೆ. ಸಾಯೋಕೆ ಏನಾದ್ರು ಹೋಸ ಐಡಿಯಾ ಇದೆಯಾ ಅಂತ ಯೋಚಿಸಿದಾಗ ತಿಳಿದವು ಇಷ್ಟು. (ನಾನೇನು ಪ್ರಯೋಗ ಮಾಡಿ ಇದನ್ನ ಹೇಳ್ತಿಲ್ಲ, ನಾನು ಇನ್ನು ಜೀವಂತ ಇದ್ದೀನಿ. ದಿವಂಗತ ಆಗಿಲ್ಲ. ಇದು ಸಾಯೋ ಮಾರ್ಗ ಗಳು ಅಷ್ಟೆ.)






೧. ನೀವು ಕನ್ನಡ ಅಭಿಮಾನಿ ಆಗಿದ್ದರೆ, ಸತತ ವಾಗಿ ಉದಯ ಟಿವಿ ನೋಡಿ, ಅವರ ಕೆಟ್ಟ ಕನ್ನಡ ನೋಡಿ, ನಿಮ್ಮ ಆತ್ಮ ನೊಂದು ದೇಹ ದಿಂದ ಹೊರ ಹೋಗುತ್ತೆ!!!




೨. ದೂರದರ್ಶನ್ ಹಾಕಿ, ಲೋಕ ಸಭಾ ಕಾರ್ಯ ಕ್ರಮ ನೋಡಿ, ನಿಮ್ಮ ಹಣ ಹೇಗೆ ಪೋಲು ಆಗುತ್ತಾ ಇದೆ ಅಂತಅ ತಿಳಿದು ನಿಮಗೆ ಬೇಸರ ಆಗಿ, ಬೇಸರ ಜಿಗುಪ್ಸೆ ಆಗಿ, ಅದು ಪ್ರಾಣಂತಿಕ ಆಗುತ್ತೆ.




೩. ನಿಮ್ಮ ಇರೋ ಬಾರೋ ಆಸ್ತಿ ನೆಲ್ಲ ಮಾರಿ ಷೇರು ಮಾರುಕಟ್ಟೆ ಲಿ ಹಾಕಿರಿ. ( ಇಗ ಮಾರುಕಟ್ಟೆ ತುಂಬ ಚೆನ್ನಾಗಿದೆ) ನಿಮ್ಮ ಹಣ ತಕ್ಷಣ ತಿರುಪತಿ ಹುಂಡಿ ಗೆ ಸೇರುತ್ತೆ.. ನಿಮಗೆ ಕಂಡಿತ ಹಾರ್ಟ್ ಅಟ್ಯಾಕ್ ಆಗುತ್ತೆ!!!




೪. ನಿಮ್ಮ ತಲೆ ಕೆರಕೊಂಡು, ಸಣ್ಣಕೆ ಗಾಯ ಮಾಡಿಕೊಂಡು ಸರ್ಕಾರೀ ಹಾಸ್ಪಿಟಲ್ ಸೇರ್ಕೊಳ್ಳಿ, ಅವರು ಕೊಡೊ ಔಷಧಿ ಇಂದ ಯಾವುದಾದರು ೭ ದೊಡ್ಡ ಆಗಿ, ರಸಿಗೆ ಆಗಿ, ಕೊನೆಗೆ ಡಾಕ್ಟರ್ ನಿಮ್ಮ ತಲೆ ನೆ ತೆಗಿಬೇಕು ಅಂತಾರೆ. ( ಮುಂಗಾರು ಮಳೆ ಕೃಪೆ)




೫. ನಮ್ಮ ಆಫೀಸ್ ಅಡ್ರೆಸ್ ಕೊಡ್ತಿನಿ, ಬಂದು ನಮ್ ಟಿಮ್ ಸೆರ್ಕೊಳ್ಳಿ ಕಂಡಿತಾ ನೀವು ಭಗವಂತ ನ ಪಾದ ಸೇರ್ತಿರ. ( ನಾನು ಹೇಗೆ ಬದುಕಿದ್ದೇನೆ ಅನ್ನೋದು ನಂಗೆ ಗೊತ್ತಾಗ್ತಾ ಇಲ್ಲ... ಪಾಪಿ ಚಿರಾಯು ಅನ್ಸುತ್ತೆ)




೬. ನೀವು ಸಿಕ್ಕಪಟ್ಟೆ ಪ್ರಾಮಾಣಿಕವಾಗಿ ಯಾರನ್ನಾದರೂ ಪ್ರೀತಿಸಿ... ಆಮೇಲೆ ದಿನ ಸಾಯ್‌ತನೆ ಇರ್ತೀರ. ( ಇದು ಮಾತ್ರ ಅನುಭವ ಹೊಂದಿದವರ ಮಾತು.)



7. ಇಷ್ಟೆಲ್ಲಾ ಮಾಡಿನು ನೀವು ಇನ್ನು ಬದುಕೇ ಇದ್ದಿರೋ... ಏನು ಚಿಂತಿಸ ಬೇಡಿ. ನೀವು ಬೆಂಗಳೂರಲ್ಲಿ ಮಳೆ ಬಂದಾಗ, ನೀರೆಲ್ಲ ರಸ್ತೆ ಮೇಲೆ ಹರೀತ ಇರೋವಾಗ, ನೀವು ರಸ್ತೆ ಮೇಲೆ ಓಡಾಡಿ, ನೀವು ನೀರಲ್ಲಿ ಕೊಚ್ಚಿ ಹೋಗೋ ಸಾದ್ಯತೆ ಇರುತ್ತದೆ, ಇಲ್ಲವೇ ಯಾವುದಾದರೂ ಮ್ಯಾನ್ ಹೋಲ್ ನಲ್ಲಿ ಬೀಳುವ ಸಾಧ್ಯತೆ ಇದೆ.

ಸೂಚನೆ: ಈ ಮಾರ್ಗಗಳನ್ನ ಅನುಸರಿಸಿ ನೀವು ದೆವ್ವ ಆಗಿ ಬಂದು ನನ್ನ ಗೋಳು ಹೋಯಕೋ ಬೇಡಿ!!!