Saturday, April 11, 2009

ಬೇಗ ಎದ್ದೆಳೊ ಸುಲಭೊಪಾಯಗಳು!!

ಬೆಳಿಗ್ಗೆ ಎದ್ದು, ವ್ಯಾಯಾಮ, ಯೋಗ, ಜಾಗಿಂಗ್ ಮಾಡಿದ್ರೆ ಆರೋಗ್ಯ ಚೆನ್ನಾಗಿ ಇರುತ್ತೆ ಅಂತ ಎಲ್ಲ ಹೇಳ್ತಾರೆ. ಅದನ್ನು ನಾವು ಕೂಡ ಮುಲಾಜಿಲ್ಲದೇ ಒಪ್ಪಿಕೊಂಡಿದ್ದೀವಿ. ನಂಗೆ ಯೋಗ, ಜಾಗಿಂಗ್ ಬಗ್ಗೆ ಏನು ತಕರಾರಿಲ್ಲ, ತಕರಾರು ಇರೋದು ಬೆಳಿಗ್ಗೆ 4-5 ಗಂಟೆ ಅನ್ನೋದರಲ್ಲಿ!!!

ಆದ್ದರಿಂದ ಬೆಳಿಗ್ಗೆ ಬೇಗ ಎದ್ದೆಳೋದು ಹೇಗೆ ಅಂತ ಸ್ನೇಹಿತ ರೋಡಗೂಡಿ ಯೋಚಿಸಿ, ಚರ್ಚಿಸಿ, ಚಿಂತಿಸಿ ಕಂಡು ಹಿಡಿದಿರುವ ಮಾರ್ಗೋಪಾಯ ಗಳು ಇಂತಿವೆ!!

1. ಮನೆ ತುಂಬಾ ತಿಗಣೆ, ಸೊಳ್ಳೆ ಸಾಕಿ, ಅವು ಕಚ್ಚಿ, ನಿಮ್ಗೆ ನಿದ್ದೆ ಮಾಡೋಕೆ ಬಿಡದೆ, 4 ಕೆ ಏನು, 3 ಕೆ ಎದ್ದು ಓಡ್ತೀರ.. ಬೇಕಿದ್ರೆ ನಿಮ್ಮ ಶೂಸ್ ನಲ್ಲೂ ಕೂಡ ತಿಗಣೆ ಹಾಕ್ಕೋಳಿ, ನಿಮ್ಮ ರನ್ನಿಂಗ್ ಸ್ವಲ್ಪ ಸ್ಪೀಡ್ ಆಗಿ ಇರುತ್ತೆ.


2. ಗರ್ಲ್ ಫ್ರೆಂಡ್, ಬಾಯ್ ಫ್ರೆಂಡ್ ಗಳಿಗೆ 4 ಕೆ ಕಾಲ್ ಮಾಡೋಕೆ ಹೇಳೋದು.. ಕಾಲ್ ಮಾಡ್ಥಾವೆ.. ಎದ್ದಿಲ್ಲ ಅಂದ್ರೆ ಆಮೇಲೆ ಮಾರಿ ಹಬ್ಬ ಇದ್ದಿದ್ದೆ. (ಇದರಲ್ಲಿ ಸ್ವಲ್ಪ ರಿಸ್ಕ್ ಇದೆ ಅನ್ಸುತ್ತೆ, ಆದ್ರೂ ಅದು ಡಿಪೆಂಡ್ ಆಗುತ್ತೆ!!)


3. ನಿಮ್ ಆಫೀಸ್, ನಿಮ್ ಮ್ಯಾನೇಜೇರ್, ಡೆಡ್ ಲೈನ್ ಗಳ ಬಗ್ಗೆ ಯೋಚಿಸಿ, ಬರಲಿರೋ ಪರ್ಫಾರ್ಮೆನ್ಸ್ ರಿವ್ಯೂ ಬಗ್ಗೆ ಯೋಚಿಸಿ, ದೆವ್ರಾಣೆ ನಿದ್ದೆ ಬರೋಲ್ಲ.


4. ಚಿಕ್ಕ ಮಕ್ಕಳು ಆಟ ಆಡೋ ಎಲೆಕ್ಟ್ರಾನಿಕ್ ಟ್ರೈನ್ ತಂದು, ಟೈಮ್ ಫಿಕ್ಸ್ ಮಾಡಿ, ಕೀ ಕೊಟ್ಟು ಮುಖಕ್ಕೆ ಬಡಿಯೋ ಹಾಗೆ ಇಟ್ಕೊಂಡು ಮಲಗಿ, ಬೆಳಿಗ್ಗೆ ಅದು ಬಂದು ಹೊಡೆದು, ಆಕ್ಸಿಡೆಂಟ್ ಆಗಿ, ನಿಮ್ ಮೂತಿ ಸೊಟ್ಟ ಆದ್ರೂ ಪರವಾಗಿಲ್ಲ. ಆಮೇಲೆ ನಿಮ್ಗೆ ನಿದ್ದೆ ಅಂತೂ ಬರೋಲ್ಲ!!!


5. ಯಾವುದಾದ್ರೂ ದೇವಸ್ಥಾನ, ಮಸೀದಿ ಹತ್ತಿರ ಮನೆ ಮಾಡಿ. ಅವರು ಬೇಳಿಗೆ ನಾಲ್ಕು ಗಂಟೆ ಗೆ ಭಜನೆ ಶುರು ಮಾಡ್ತಾರೆ, ನಿಮ್ಗೆ ಎಚ್ಚರ ಆಗುತ್ತೆ!!!


6. ನಿದ್ದೆ ಮಾಡದೇ ಇದ್ರೆ ಆಯಿತು!!! ಆವಾಗ ಬೆಳಿಗ್ಗೆ ಎಳೊ ತೊಂದರೆ ನೇ ಇರೋಲ್ಲ. (ಎಂತ ಭಯಾನಕ ಐಡಿಯಾ ಅಲ್ವ?)


7. ಮಲಾಗೊ ಕಿಂತ ಮುಂಚೆ ನ್ಯೂಸ್ ಪೇಪರ್ಸ್ ನ ಓದಬೇಡಿ, ಅದರಲ್ಲಿ ಮಣ್ಣಿನ ಮಗ, ಭವಿಷ್ಯ ಪ್ರಧಾನಿ ಎಂದು ಬಿಂಬಿತ ದೇವೆ ಗೌಡ್ರು ನಿದ್ದೆ ಮಾಡ್ತಾ ಇರೋ ಫೋಟೋ ಇದ್ರು ಇರಬಹುದು!!! (ಇದು ಅವರ ಕನಸು, ನನಸು ಆದ್ರೂ ಆಗಬಹುದು.. ಯಾರಿಗೆ ಗೊತ್ತು!!!) ಫೋಟೋ ನೋಡಿದ್ರೆ ನಿಮ್ಗೆ ಬೆಳಿಗ್ಗೆ ಎಚ್ಚರ ಆಗುತ್ತೆ ಅನ್ನೋದಕ್ಕೆ ಏನು ಗ್ಯಾರೆಂಟೀ ಇಲ್ಲ.


8. ಹೊಸ ರುಚಿ ಟ್ರೈ ಮಾಡಿ ತಿನ್ನಿ, ಆದ್ರೆ ಒಗ್ಗರಣೆ ಗೆ ಹರಳೆನ್ನೆ ಹಾಕಿ ಅಷ್ಟೇ. (ಉಳಿದಿದ್ದೆಲ್ಲ ಆದಾಗೇ ಆಗುತ್ತೆ ಬಿಡಿ)


9. ಒಬ್ಬ / ಒಬ್ಬಳು ಕೆಟ್ಟ ಸಂಗಾತಿಯನ್ನ ಹುಡುಕಿ ಮದುವೆ ಆಗಿ ಬಿಡಿ, ಆಗ ಜೀವನ ದಲ್ಲಿ ಸುಖ, ಶಾಂತಿ, ನೆಮ್ಮದಿ ಎಲ್ಲ ಕಾಣೆಯಾಗಿ... 24/7 ಎದ್ದಿರುತ್ತೀರ!!


10. ಇಲ್ಲ ಅಂದ್ರೆ ನಂಗೆ ತಿಂಗಳಿಗೆ 25 ಸಾವಿರ ದುಡ್ಡು ಕೊಡಿ, ಬೆಳಿಗ್ಗೆ ದೊಣ್ಣೆ ತಗೊಂಡು ಬಂದು, ಬಡಿದು ಎಬ್ಬಿಸುತ್ತಿನಿ!!! (ಇದು ಮಾತ್ರ ಕಂಡಿತ ವರ್ಕ್ ಆಗುತ್ತೆ... )


ಅರ್ಪಣೆ: ನಿದ್ರೆ ಗುಮ್ಮ ಚಂದ್ರು, ಆಫೀಸ್ ನಲ್ಲೂ ನಿದ್ದೆ ಮಾಡೋ ಚೀಕು ಹಾಗೂ 24/7 ತೂಕಡಿಸುತ್ತಲೇ ಇರುವ ಕಿತ್ತೂರ್ ರಾಣಿ ಚೆನ್ನಮ್ಮ ನಿಗೆ!!

Friday, March 6, 2009

ಕೆಲಸ ಕಳೆದು ಕೊ೦ಡ ಸಾಫ್ಟ್ ವೇರ್ ಇ೦ಜಿನಿಯರ್ ಗಳಿಗೆ ಹಾಗು ಐ ಟಿ ಅವಲ೦ಬಿತ ಜನಗಳಿಗೆ ದಾರಿ ದೀಪ




ಕೆಲಸ ಕಳೆದು ಕೊ೦ಡ ಸಾಫ್ಟ್ ವೇರ್ ಇ೦ಜಿನಿಯರ್ ಗಳಿಗೆ ಹಾಗು ಐ ಟಿ ಅವಲ೦ಬಿತ ಜನಗಳಿಗೆ ದಾರಿ ದೀಪ.ನೀವು ಕೆಲಸ ಕಳೆದು ಕೊ೦ಡಿದ್ದಿರ? ಅಥವ ಕೆಲಸ ಕಳೆದು ಕೊಳ್ಳುವ ಭಯ ದಲ್ಲಿ ಇದ್ದೀರ? ಹಾಗಿದ್ದಲ್ಲಿ ಇ ಬ್ಲಾಗ್ ನಿಮಗೆ ಸರಿಯಾದ ಮಾರ್ಗ ದರ್ಶನ ನೀಡಲಿದೆ.

ನೀವು ನಿಮ್ಮ ಅರ್ಹತೆ ಮೆಲೆ ಈ ಕೆಳಗಿನ ಕೆಲಸಗಳನ್ನು ಮಾಡಿ ಕೊ೦ಡು ಹೊಟ್ಟೆ ಪಾಡು ನೊಡಿಕೊಳ್ಳಬಹುದು.

ಐಡಿಯ ನ೦ ೧. ಸಾಫ್ಟ್ ವೇರ್ ಇ೦ಜಿನಿಯ ಗಳಿಗೆ:
ಒ೦ದು ದೂಡುವ ಗಾಡಿನಲ್ಲಿ ( ತರಕಾರಿ ಮಾರೊ ಗಾಡಿ ತರದ್ದು) ಲ್ಯಾಪ್ ಟಾಪ್, ಡೆಸ್ಕ್ ಟಾಪ್, ಯು ಪಿ ಎಸ್ + ಮುಂತಾದವುಗಳನ್ನ ಇಟ್ಕೊ೦ಡು ವೈಟ್ ಫೀಲ್ಡ್, ಇಲೆಟ್ರಾನಿಕ್ ಸಿಟಿ, ಮು೦ತಾದ ಕಡೆ ಹೋಗಿ ಜಾವ ಡೆವೆಲಪರ್ ....... ಡಾಟ್ ನೆಟ್ ಡೆವೆಲಪರ್.......... ಕೇವಲ ೫೦ ರುಪೈ ಗ೦ಟೆಗೆ ಮೇಂಟೆನೆನ್ವ್ಸ್ ಉಚಿತ ಅ೦ತ ಕೂಗಿ ಕೊಂಡು ಹೊಗೋದು.

ಐಡಿಯ ನ೦ ೨. ಸಾಫ್ಟ್ ವೇರ್ ಟೆಸ್ಟರ್ ಗಳಿಗೆ:
ಅದೆ ತರದ ಗಾಡಿಲಿ ವೆಬ್ ಟೆಸ್ಟಿ೦ಗ್ ರೇ, ವಿನ್ ರನ್ನರ್, ಲೊಡ್ ರನ್ನರ್ .. ಪರ್ಫಾರ್ಮೆನ್ಸ್ ಬಗ್ ಲೊಗ್ಗಿ೦ಗ್ ರೀ, ಅ೦ತ ಕೂಗಿಕೊ೦ಡು ಬೀದಿ ಬೀದಿ ಅಲೆಯೊದು.!!!!!!

ಐಡಿಯ ನ೦ ೩. ಸಾಫ್ಟ್ ವೇರ್ ಕರಕುಶಲ ಕರ್ಮಿ ಗಳಿಗೆ:
ಹಳೆ ಐ ಟಿ ಜ೦ಕ್ ಯಾರ್ಡ್ ಗೆ ಹೊಗಿ, ಅ ಗುಜುರಿ ವಸ್ತು ಗಳನ್ನ ಕಲೆ ಹಾಕಿ, ಕಸದಿ೦ದ ರಸ ಮಾಡುವ ಪ್ಲಾನ್ ಮಾಡಿರಿ, ಉದಾ: ಸಿ ಪಿ ಯು ಇ೦ದ ಟೀ ಟೆಬಲ್ ಮಾಡಬಹುದು, ಕೀ ಬೊರ್ಡ ನ ಕೀ ಕಿತ್ತು ಸೇರಿಸಿ, ಒ೦ದು ಶೊ ಐಟಮ್ ಮಾಡಬಹುದು.. ಇವೆಲ್ಲ ನಿಮ್ಮ ಕ್ರೀಯೆಟಿವ್ ತಲೆ ಮೆಲೆ ಇರುತ್ತೆ. ( ತಲೆ ಒಳಗಿರುವ, ಐಡಿಯ)

(ಮೇಲಿನ ೩ ಐಡಿಯ ಗಳ ಸಹ ಪ್ರಾಯೊಜಕರು ಸಾಫ್ಟ್ ವೇರ್ ಇ೦ಜಿನಿಯರ್ ರಾಣಿ.)

ಐಡಿಯ ನ೦ ೪. ಮನೆ ಕೆಲಸ ಹಾಗು ಅಡುಗೆ ಪ್ರಿಯರಿಗೆ ಸದಾವಕಾಶ. KMS ಸರ್ವಿಸ್ :
ಮನೆ ಮನೆಗೆ ಹೊಗಿ, ಅವರ ದಿನ ನಿತ್ಯದ ಕೆಲಸ ಗಳಿಗೆ ಸ್ ಸಹಾಯ ಮಡೋದು. ಉದಾ: ಮನೆ ಗುಡಿಸಿ, ವರೆಸಿ ಸ್ವಚ್ಚ ಮಾಡೊದು, ಮುಸುರೆ ಪಾತ್ರೆ ತೊಳೆಯೋದು.. ಮು೦ತಾದುವು. ಇ ಕೆಲಸಾನ ನೀವು ಹಾಸ್ಪಿಟಲಿಟಿ ಸರ್ವಿಸ್ ಅ೦ತ ಬೇಕಿದ್ರು ಹೆಳಬಹುದು. KMS : ಕಸಾ ಮುಸುರೆ ಸರ್ವಿಸ್

ಐಡಿಯ ನ0 ೫. ಪ್ರವಾಸಿ ಮನೋಭಾವ ಹಾಗು ದೈವ ಭಕ್ತರಿಗೆ:
ಈ ದೇಶದಲ್ಲಿ ಪುಣ್ಯ ಕ್ಷೇತ್ರ ಗಳಿಗೆ ಕೊರತೆ ಇಲ್ಲ. ಕೆಲವು ದೇವಸ್ಥಾನ ಗಳಲ್ಲಿ ಪುಕ್ಕಟೆ ಊಟ ಇರುತ್ತೆ. ಉದಾ: ಶೃ೦ಗೇರಿ, ಧರ್ಮಸ್ಥಳ, ಮು೦ತಾದವು ಗಳು. ಅಲ್ಲಿ ಹೋಗಿ ಎರಡು ತಿ೦ಗಳು ಠಿಕಾಣಿ ಹೂಡೊದು. ಬೆಳಿಗ್ಗೆ ಬೇಗ ಎದ್ದು ತಣ್ಣಿರು ಸ್ನಾನ ಮಾಡಿ ( ಇದು ಸ್ವಲ್ಪ ಕಷ್ಟ ), ವೃತ ಆಚರಣೆ ಅ೦ತ ಹೇಳಿ, ದೊಡ್ಡ ದೈವ ಭಕ್ತರ ಹಾಗೆ ನಟಿಸಿದರೆ ಮುಗೀತು. ಅಲ್ಲೆ ಉಚಿತ ಛತ್ರ ಕೂಡ ಸಿಗುತ್ತೆ. ಹೀಗೆ ಮಾಡಿದ್ರೆ ಕರ್ನಾಟಕ ಪ್ರವಾಸ ಹಾಗು ಪುಣ್ಯ ಕೂಡ ಬರುತ್ತೆ. ಮಾರ್ಕೆಟ್ ಸರಿ ಹೋದ ಮೆಲೆ ಬೆ೦ಗಳೂರು ಬಸ್ ಹತ್ತಿದರೆ ಆಯಿತು. ( ನಾನು ಇದನ್ನೇ ಮಾಡೊದು. )

( ಷರತ್ತು ಗಳು ಅನ್ವಯಿಸುತ್ತವೆ, ಮೇಲಿನ ಐಡಿಯ ಉಪಯೊಗಿಸಿ, ನಿಮಗೇನಾದರು ತೊ೦ದರೆ ಆದಲ್ಲಿ ಅದಕ್ಕೆ ಬ್ಲಾಗು ದಾರರು ಜಾವಬು ದಾರರಲ್ಲ. )

Thursday, February 12, 2009

ಸೇನೆ ಹಾಗು ಪಬ್!!!


ಈಗ ಎಲ್ಲಿ ನೋಡಿದರು ಶ್ರೀ ರಾಮ ಸೇನಾ ಯ ಸುದ್ದಿ ಯೋ ಸುದ್ದಿ!! ಮಂಗಳೂರಿನ ಪಬ್ ಧಾಳಿ ಇಂದ ಹಿಡಿದು, ವ್ಯಾಲಿಂಟೈನ್ಸ್ ಡೇ ತನಕ ಅವರದ್ದೇ ಮಾತು. ಈ ಸಂದರ್ಭದಲ್ಲಿ ಸಮಾಜದಲ್ಲಿ ಆಯಾ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಕೆಲವು ಆಯ್ದ ವ್ಯಕ್ತಿಗಳ ಅನಿಸಿಕೆ ಯನ್ನು ಕೇಳಲಾಯಿತು, ಅವರ ಮಾತನ್ನು ನೇರವಾಗಿ ಹಾಗೆ ಕೊಡಲಾಗಿದೆ.


ರೋಹಿತ್ ಶೆಟ್ಟಿ ( ಪ್ರಭಾವಿ ಇಂಡಸ್ಟ್ರಿಯಲಿಸ್ಟ್ ಒಬ್ಬರ ಮಗ, ಮಂಗಳೂರು ) . ನೋಡಿ ಈ ಶ್ರೀ ರಾಮ ಸೇನೆ ಯವರಿಗೆ ಬುದ್ದಿ ಎ ಇಲ್ಲ, ಬರಿ ಪ್ರಚಾರಕ್ಕೆ ಹೀಗೆ ಮಾಡ್ತಾ ಇದ್ದಾರೆ, ನಾವು ಇಲ್ಲಿ ದುಡ್ಡು ಕೊಟ್ಟು ವಿದೇಶಿ ಮದ್ಯ ವನ್ನು ಕುಡಿತ ಇರಬೇಕಾದರೆ, ಅವರು ಒಮ್ಮೆಲೇ ಧಾಳಿ ಮಾಡಿ, ವದೆ ಕೊಟ್ಟರು, ಆ ಏಟಿಗೆ ನನಗೆ ಕುಡಿದ ಮತ್ತೆಲ್ಲ ಹೊರಟು ಹೋಯಿತು, ನೋಡಿ ನಾನು ಇನ್ನೊಮ್ಮೆ ಹೇಳ್ತೇನೆ, ಇವರಿಗೆ ಬುದ್ದಿಯೆ ಇಲ್ಲ, ನಾನು ಅಷ್ಟು ದುಡ್ಡು ಕೊಟ್ಟು ಕುಡಿದ ಮದ್ಯದ ಅಮಲನ್ನು ಒಮ್ಮೆಲೇ ಇಳಿಯುವ ಹಾಗೆ ಮಾಡಿದರು. ಸಾವಿರ ರೂಪೈ ಪಾಕೆಟ್ ಮನೀ ತಗೋಬೇಕಾದ್ರೆ ನನಗೆ ಎಷ್ಟು ಕಷ್ಟ ಆಗ್ತದೆ, ಅಂತದ ರಲ್ಲಿ ಇವರು ಹೀಗೆ ಮಾಡಿದ್ದು ಸರಿನ? ಸೇನೆ ಗೆ ದಿಕ್ಕಾರ!!!!


ಸ್ವದೇಶಿ ವಸ್ತು ಜಾಗರನ ಮಂಚ್ ಅಧ್ಯಕ್ಷ ಹಾಗೂ ಧರ್ಮ ಪ್ರಚಾರಕ: ಹಿಂದೂ ಧರ್ಮ ದಲ್ಲಿ ಎಲ್ಲೂ ಕುಡಿತವನ್ನು ತಪ್ಪು ಎಂದು ಹೇಳಿಲ್ಲ, ಹಿಂದೆಲ್ಲ ರಾಜ ರು ರಾಮ ರಸ ವನ್ನು ಕುಡಿಯುತ್ತಾ ಇದ್ದರು, ಇಂದ್ರ ನು ರಂಭೆ ಮೇನಕೆ ಯರ ನೃತ್ಯ ವನ್ನು ಆನಂದಿಸುತ್ತಾ ಇದ್ದರು, ಆದ್ದರಿಂದ ಅದೋ ತಪ್ಪಲ್ಲ. ತಪ್ಪು ಅಂದ್ರೆ ವಿದೇಶಿ ಮಧ್ಯ, ವಿದೇಶಿ ಮದ್ಯ ವನ್ನು ಬಿಡಿ, ಕೇವಲ ರಾಮ ರಸ, ಕಳ್ಳು, ಕೊಟ್ಟೆ ಸಾರಾಯಿ ಯನ್ನು ಕುಡಿಯಿರಿ, ಆವಾಗ ನೀವು ಕೂಡ ಹಿಂದೂ ಸೇವಕ ರೆಂದು ಪ್ರೇರೇಪಿತ ರಾಗಿ ಯಾವ ಸೇನೆ ಯವರು ಧಾಳಿ ಮಾಡಲಾರರು. ಭಗವಂತನು ನಿಮಗೆ ಒಳ್ಳೆಯದು ಮಾಡಲಿ.


ಅಂಬಿಕಾ, ಕೈ ಪಕ್ಷದ ಸಚಿವೆ: ಶ್ರೀ ರಾಮ ಸೇನೆ ಅವರು ಕೋಮುವಾದ ಹರಡುತ್ತಾ ಇದ್ದಾರೆ, ಇದು ಭಾರತ, ಇಲ್ಲಿ ಎಲ್ಲರಿಗೂ ಸ್ವಾತಂತ್ರ್ಯ ಇದೆ, ಪಬ್ ಗೆ ಹೋಗಬೇಡ ಅನ್ನಲು ಅವರು ಯಾರು? ನಮ್ಮದು ಮಹಾತ್ಮ ಗಾಂಧಿ ಪಕ್ಷ, ಅವರು ಅಂದು ಅರೆ ಬೆತ್ತಲೆ ಆಗಿ, ಉಪವಾಸ ಮಾಡಿ ಫ್ರೀಡಮ್ ಬಂದ ಮೇಲೂ ಕುಡಿ ಬೇಡಿ, ಹುಡುಗಿ ಸೊಂಟ ಹೂಡಿದು ಕುಣಿಬೇಡಿಅನ್ನಲು ಅವರಾರು? ನಾನು, ನಂ ಮಗಳು ಎಲ್ಲರೂ ಪಬ್ ಗೆ ಹೋಗ್ತೀವಿ, ಗಾಂಧಿ ಉಪ್ಪಿನ ಸತ್ಯಾಗ್ರಹ ಮಾಡಿದ ಹಾಗೆ ನಾವು ಪಬ್ ಚಳುವಳಿ ಮಾಡ್ತೀವಿ, ಎಲ್ಲರೂ ಕುಡಿಬೇಕು, ಕುಣೀಬೇಕು, ಇದು ಜಾತ್ಯತೀತ, ಬಹು ಸಂಸ್ಕೃತಿ ದೇಶ!!!!!


ಜಯಂತ ಮೂರ್ತಿ( ಸ್ವಘೊಷಿತ ಬುದ್ದಿ ಜೀವಿ): ಇದು ಹಿಂದೂ ತಾಲಿಬಾನಿಕರಣ , ಕೇಂದ್ರ ಸರ್ಕಾರವು ಕೂಡಲೇ ರಾಜ್ಯ ಸರ್ಕಾರವನ್ನು ವಜಾ ಮಾಡಬೇಕು, ಹಾಗೂ ಪಬ್ ಗೆ ಹೋಗುವ ವರಿಗೆ ಪ್ರೋತ್ಸಾಹ ವನ್ನು ಕೊಡಬೇಕು, ನಾನು ಹಿಂದೆ ಪಬ್ ರಾತ್ರೆ ಬೇಗ ಮುಚ್ಚುವುದರ ಬಗ್ಗೆ ಬೀದಿ ಗಲಾಟೆ ಮಾಡಿದ್ದೆ,ಈಗಲೂ ಗಲಾಟೆ ಮಾಡುವೆ!!!

Monday, December 15, 2008

ದೆವ್ವ ಗಳು ಸಾರ್ ದೆವ್ವಗಳು!!!



ದೆವ್ವಗಳು ಅಥವಾ ಭೂತ ಅನ್ನೋದು ನಂಗೆ ಮೊದಲಿನಿಂದಲೂ ಬಹಳ ಕೂತುಹಲಕರ ವಿಷಯ, ಅಪ್ಪಿ ತಪ್ಪಿನು ದೇವಸ್ತಾನದ ಹತ್ತಿರ ಸುಳಿಯಾದ ನಾನು ದೆವ್ವ ನ ಹುಡುಕಿ ಕೊಂಡು ಸ್ಮಶಾನ ದ ಹತ್ತಿರ, ಮದ್ಯ ರಾತ್ರೆ ಹೊಳೆ ದಂಡೇ ಹೀಗೆ ಮುಂತಾದ ಕಡೆ ಹುಡುಕಾಡಿದ್ದು ಇದೆ. ಆದ್ರೆ ದುರ ದೃಷ್ಟಕ್ಕೆ ಒಂದಾದ್ರೂ ದೆವ್ವ ಕಣ್ಣಿಗೆ ಬೀಳ ಬಾರದೇ? ದೇವರಂತೂ ಸಿಗೋಲ್ಲ ಬಿಡಿ, ಕೊನೇ ಪಕ್ಷ ದೆವ್ವ ನದರೂ ಕಾಣಿಸ ಬಾರದೇ? ಅವುಗಳ ಕಣ್ಣಿಗೂ ನಾನು ನಾನೊಬ್ಬ ಯಕಶ್ಚಿತ್ ಮಾನವ ಪ್ರಾಣಿ ಆದೇನ? ಗೊತ್ತಿಲ್ಲ.. ಅಂತೂ ಇಂತೂ ನನ್ನ ಅದೃಷ್ಟ ವೋ ಏನೋ ಒಂದು ದೆವ್ವ ಮೊನ್ನೆ ಕನಸಲ್ಲಿ ಬಂತು, ಇಂತಹ ಅವಕಾಶಕ್ಕೆ ಕಾದಿದ್ದ ನಾನು ಸಡನ್ ಆಗಿ ಆ ದೆವ್ವದ ಸಂದರ್ಶನ ಮಾಡಿದೆ. ಅದರ ಸಾರಾಂಶ ಇಲ್ಲಿ ಕೊಟ್ಟಿರುವೆ…

1. ದೇವ್ವಗಳು ರಾತ್ರೆ ನೇ ಯಾಕೆ ಬಂದು ಕಾಟ ಕೊಡುತ್ತೆ?
ಡೇ ಟೈಮ್ ನಲ್ಲಿ ಸಿಕ್ಕಪಟ್ಟೆ ಟ್ರ್ಯಾಫಿಕ್ ಇರುತ್ತೆ, ನಾವು ಆನ್‌ಟೈಮ್ ಗೆ ಹೋಗಿ ಕ್ಲೈಂಟ್ ಗೆ ಕಾಟ ಕೊಡೋಕೆ ಆಗೋಲ್ಲ.. ಸೋ ನಾವು ರಾತ್ರೆ ನ ಪ್ರಿಫರ್ ಮಾಡ್ತಿವಿ!!

2. ಮೋಸ್ಟ್ ಆಫ್ ಟೈಮ್ಸ್ ಕೈಯಲ್ಲಿ ಮೊಂಬತ್ಟಿ ಇರುತ್ತೆ ಯಾಕೆ?
ಬೆಳಕು ಬರಲಿ ಅಂತ!!! ( ನಂಗೆ ಗೊತ್ತೇ ಇರಲಿಲ್ಲ)

3. ದೆವ್ವ ಒಳಗೆ ಬಂದಾಗ ಹಚ್ಚಿದ ಕ್ಯಾಂಡಲ್ ಕೆಟ್ಟೊಗುತ್ತೆ ಯಾಕೆ?
ನಾವು ಹ್ಯಾಪೀ ಬರ್ತ್ ಡೇ ಮಡ್ಕೋತೀವಿ…

4.ಯಾವಾಗ್ಲೂ ಮಹಿಳಾ ದೆವ್ವಗಳೆ ಯಾಕೆ ಕಾಣುತ್ತೆ? ಸಿನಿಮಾ ಗಳಲ್ಲೂ ಲೇಡೀ ದೆವ್ವ ಗಳೆ ಜಾಸ್ತಿ.. ಗಂಡಸರು ದೆವ್ವ ಆಗೋದು ಕಡಿಮೆ ನ?
ಗ್ಲ್ಯಾಮರ್ ಲೋಕ ಸ್ವಾಮಿ, ರಾಜ್ ಫಿಲ್ಮ್ ನೋಡಿ, ಒಳ್ಳೇ ಸೆಕ್ಸೀ ಹುಡುಗಿ ಇದ್ದರೆ, ಅದನ್ನ ಜನ ಕಣ್ಣು ಬಾಯೀ ಬಿಟ್ಟು ನೋಡ್ತಾರೆ!!! ಗಂಡಸರು ದೆವ್ವ ಆಗ್ತಾರೆ, ಬಟ್ ಸಿನಿಮಾ ದವರು ನಮ್ಮನ್ನ ಅಷ್ಟಾಗಿ ಪರಿಗಣಿಸಿಲ್ಲ!!

5. ನಿಮ್ ಮೆಚ್ಚಿನ ಕನ್ನಡ ನಟ ಯಾರು?
ರವಿ ಚಂದ್ರನ್, ( ಶ್ರೀ ರಾಮ ಚಂದ್ರ ಮೂವೀ ನಲ್ಲಿ ಗಂಡು ದೆವ್ವ ಇದೆ!!!)

6. ನಿಮಗೆ ಇಷ್ಟವಾಗುವ ಆಹಾರ ಯಾವುದು? ಬಿಸಿ ರಕ್ತ ಅಂಡ್ ಹಸಿ ಮಾಂಸ ಅಂತಾರೆ ನಿಜ ನ?
ಬಿಸಿ ರಕ್ತ? ಹಸಿ ಮಾಂಸ? ರಿ ಸ್ವಾಮಿ ನೀವು ಮಾತ್ರ ಪೆಪ್ಸೀ ಕೋಕ್ ಕುಡಿದು, ಚಿಕನ್ 65, ಮಟನ್ ಬಿರಿಯಾನಿ ತಿನ್ನ ಬೇಕು, ನಾವು ಉಪ್ಪು ಕಾರ ಇಲ್ಲದ ಹಸಿ ಮಾಂಸ ತಿನ್ನೋಕೆ ನಾವೇನೂ ಕಾಡು ಮನುಷ್ರ? ನಮ್ಗೆ ಅದು ಇಷ್ಟ ಇಲ್ಲ. ಇನ್ಮೂಂದೆ ನಂಗೆ ಒಳ್ಳೇ ನಾನ್ ವೆಜ್ ಡಿಶಸ್ ಕೊಡಿ. ( ಕೋಲಿ ಬಲಿ ಬದಲು ಒಳ್ಳೇ ಒಳ್ಳೇ ಚಿಕನ್ 65 ಕೊಡಿ)

7. ದೆವ್ವಗಳದ್ದು ಏನಾದ್ರೂ ಕಾಲ್ ಸೆಂಟರ್ ಇದೆಯಾ? ನಮ್ಗೆ ಏನಾದ್ರೂ ಡೌಟ್ ಬಂದ್ರೆ ಆನ್ಸರ್ ಮಾಡೋಕೆ.
ಒಂದು ಕಾಲ್ ಸೆಂಟರ್ ಓಪನ್ ಮಾಡೋ ಪ್ಲಾನ್ ಇತ್ತು, ಈಗ ರಿಸೆಶನ್ ನೋಡಿ, ಅದಕ್ಕೆ ಇಡೀ ಪ್ರಾಜೆಕ್ಟ್ ಆನ್ ಹೋಲ್ಡ್ ನಲ್ಲಿ ಇದೆ.

8. ನೀವು ಬರಿ ಕಾಟ ಕೊಡ್ತೀರೋ ಅಥವಾ ಹೆಲ್ಪ್ ಕೂಡ ಮಾಡ್ತೀರೋ? ಹೆಲ್ಪ್ ಮಾಡೋದಾದ್ರೆ ನಂ ಹತ್ತಿರ ದೊಡ್ಡ ಲಿಸ್ಟ್ ಇದೆ.
ಅದೆಲ್ಲ ನಂ ಮ್ಯಾನೇಜರ್ ಹೇಳಿದ ಹಾಗೆ ಆಗುತ್ತೆ, ಕಾಟ ಕೊಡು ಅಂದ್ರೆ ಕಾಟ, ಹೆಲ್ಪ್ ಅಂದ್ರೆ ಹೆಲ್ಪ್. ಹೆಲ್ಪ್ ಬೇಕಿದ್ರೆ ಬೇಗ ಸತ್ತು ದೆವ್ವ ಆಗಿ, ಮ್ಯಾನೇಜರ್ ನ ಮೀಟ್ ಮಾಡಿ!!!

9. ನಿಮ್ಮ ವರ್ಕಿಂಗ್ ಅವರ್ಸ್ ಏನು?
ಜಸ್ಟ್ 8 ಘಂಟೆ. .ಮದ್ಯ 3 ಬ್ರೇಕ್!!!

10. ನಿಮ್ಗು ಟಾರ್ಗೆಟ್ಸ್ ಇರುತ್ತ?
ಹೂನ್… ನಂಗೂ ಮ್ಯಾನೇಜರ್ ಗಳು ಇರ್ತವೆ ಅಂತ ಹೇಳಿಡ್ನಲ್ಲ…( ಅಳುತ್ತಾ!!!)

11. ನೀವು ಗಳು ಹಳೆ ಕಿತ್ಟೋದ ಬಂಗಲೇ ಗಳಲ್ಲೇ ಯಾಕೆ ಜಾಸ್ತಿ ಇರೋದು?ಹೊಸ ಮನೆ ಪೈಂಟ್ ವಾಸನೆ ಮೂಗಿಗೆ ಆಗೋಲ್ವಾ?
ರೆಂಟ್ ಪ್ರಾಬ್ಲಮ್ ಸ್ವಾಮಿ, ಹಳೆ ಮನೆಗೆ ರೆಂಟ್ ಕಡಿಮೆ, ಈಗ ರಿಯಲ್ ಎಸ್ಟೇಟ್ ಬಿದ್ದೊಗೀರೊದ್ರಿಂದ ನಾವು ಹೊಸ ಫ್ಲಾಟ್ ಗಳಲ್ಲಿ ಸೆಟ್ಲ್ ಆಗ ಬಹುದು ಅನ್ಸುತ್ತೆ!!

12. ನೀವು ಕ್ಯಾಮರ ಗಳಲ್ಲಿ ಕೆಲವು ಸಲ ಕಾಣಿಸಿ ಕೋತೀರ, ನಂ ಕಣ್ಣಿಗೆ ಕಾಣೋಲ್ಲ ಯಾಕೆ?
ಯಾಕೆ ನಾವು ಫೋಟೋ ಗೆ ಪೋಸ್ ಕೊಡ ಬಾರದ?


ಇನ್ನೇನು ಮುಂದಿನ ಪ್ರಶ್ನೆ ಕೇಳ ಬೇಕು ಅನ್ನುವುದರಲ್ಲಿ .. ಇಲ್ಲಿ ನಂ ರೂಮ್ ಮೇಟ್ ಜಿತಿನ್ ಅನ್ನೋ ಜೀವಿ ಜೋರಾಗಿ ಗೊರಕೆ ಹೊಡೆದು ನಾನು ಎದ್ದೆಳೊ ಹಾಗೆ ಆಯಿತು!! ದೆವ್ವ ನು ಡಿಸಪಿಯರ್ ಆಯಿತು.!!!