ಮಾಡೋಕೆ ಏನು ಕೆಲಸ ಇಲ್ಲದೇ ಇದ್ದಾಗ, ಬೋರ್ ಆಗ್ತಾ ಇದೆ ಅಂದಾಗ, ಮ್ಯಾನೇಜರ್ ತಲೆ ಮೇಲೆ ಕೂತು, ತಲೆ ಕೆಡಿಸಿದಾಗ... ತುಟಿ ಗಳ ಮೇಲೆ ಕಿರು ನಗೆ ಗೆ... ಈ ಬ್ಲಾಗ್.
Wednesday, June 17, 2009
ನೋಡಿ ಸ್ವಾಮಿ ನಾವಿರೋದೆ ಹೀಗೆ!!!!
ನಮಗೆ ತೀರಾ ನೆಗೇಟಿವ್ ಆಲೋಚನೆ ಗಳೇ ಬರುತ್ತೆ, ಅನ್ನೋದಕ್ಕೆ ಉದಾಹರಣೆ ನಮ್ಮ ಪತ್ರಿಕೆಗಳು, ಸಾಹಿತಿ ಗಳು ಮತ್ತೆ ಸಿನಿಮಾ ದವರೇ ಸಾಕ್ಷಿ. ದಿನ ಬೆಳಿಗ್ಗೆ ಆದ್ರೆ ಸಾಕು, ಆ ರಾಜಕಾರಣಿ ಹಂಗೆ ಮೋಸ ಮಾಡಿದ್ರೂ, ಜನಕ್ಕೆ ಟೋಪಿ ಹಾಕಿದ್ರೂ ಅಂತೆಲ್ಲ ಬರೀಯೋದು. ಇನ್ನೂ ನಾಮ ಸಾಹಿತಿಗಳೋ ಭಾರತ ದಲ್ಲಿ ಅದಿಲ್ಲ, ಮೂಲಭೂತ ವ್ಯವಸ್ತೆ ಇಲ್ಲ, ಮಾತು ಸೋತ ಭಾರತ, ದಾರಿ ತಪ್ಪಿದ ಭಾರತ ಅಂತೆಲ್ಲಾ ಪುಂಗಿ ಊದಿ ಬೂಕರ್, ಪಾಕರ್ ಎಲ್ಲ ತಗೋತಾರೆ. ಇನ್ನೂ ಸಿನಿಮಾ ದವರಂತೂ ಕೇಳೋದೇ ಬೇಡ, ರಾಷ್ಟ್ರೀಯ ಮಟ್ಟದಲ್ಲಿ ಅಂತರ ರಾಷ್ಟ್ರೀಯಮಟ್ಟದಲ್ಲಿ ಕೊಳಚೆ ವಾಸಿ ಗಳ ಬಗ್ಗೆ ಸಿನಿಮಾ ಮಾಡಿ ಜನರಿಗೆ ಭಾರತ ದ ಬಗ್ಗೆ ತೀರಾ ತಪ್ಪು ಕಲ್ಪನೆ ಬರೋ ಹಾಗೆ ಮಾಡ್ತಾ ಇದ್ದಾರೆ.
ಇದು ನಿಜಕ್ಕೂ ಬೇಸರದ ಸಂಗತಿ, ಯಾಕೆ ನಾವೆಲ್ಲಾ ಪಾಸಿಟಿವ್ ಥಿಂಕ್ ಮಾಡೋಲ್ಲ. ಯಾಕೆ ಕಷ್ಟ ದಲ್ಲಿ ಇದ್ದಿವಿ ಅಂತ ಭಾವಿಸ ಬೇಕು? ಪಾಲಿಗೆ ಬಂದದ್ದು ಪಂಚಾಮೃತ, ಹಾಸಿಗೆ ಇದ್ದಷ್ಟೇ ಕಾಲು ಚಾಚು ಎಂಬ ಗಾದೆಗಳನ್ನು ನೆನ್ಪಿಸಿ ಕೊಂಡು, ಇರಬಹುದಲ್ಲ. ನಮಗೆ ಇರಲಿಕ್ಕೆ ಮನೆ ಇಲ್ಲದೆ ಹೋದರೆ ಅದು ದೊಡ್ಡ ಕಷ್ಟ ವೆ? ಪಾಂಡವರು ದಂಡಕಾರಣ್ಯ ದಲ್ಲಿ ವನವಾಸ ಹೋಗಿದ್ದರಲ್ಲ ಅವರಿಗೇನು ಅಲ್ಲಿ ಎ ಸಿ ಸಿ ಸಿಮೆಂಟಿನಿಂದ ಕಟ್ಟಿದ ತಾರಸಿ ಮನೆಗಳು ಇದ್ದವ? ಇಲ್ಲ ತಾನೆ. ಮಲಗಲು ಮನೆ ಇಲ್ಲ ಅಂದರೆ, ಇ ಭೂಮಿಯೇ ಹಾಸಿಗೆ, ಆಕಾಶವೇ ಹೊದಿಕೆ ಎಂದು ಭಾವಿಸಿದರೆ ಆಯಿತು.
ಸರ್ಕಾರ ಕೊಟ್ಟ ಆಶ್ರಯ ಮನೆ ಸೊರ ಬಹುದು , ಗಾಳಿ ಗೆ ಬೀಳಲು ಬಹುದು, ಅದರ ತಪ್ಪು ಗಾಳಿ ಹಾಗು ಮಳೆ. ವರುಣ ಮತ್ತು ವಾಯು ವಿಗೆ ಯಾವುದಾದರು ಕೋರ್ಟ್ ನಲ್ಲಿ ದಾವ ಹಾಕುವುದು ಸಾಧ್ಯವಿದ್ದರೆ ಚೆನ್ನಿತ್ತು. ಅದನ್ನ ಬಿಟ್ಟು ಅಧಿಕಾರಿಗಳನ್ನ, ಕಾಂಟ್ರಾಕ್ಟು ದಾರರಿಗೆ ಬೈದರೆ ಏನು ಪ್ರಯೋಜನ.
ನಮ್ಮ ದೇಶದಲ್ಲಿ ಭಯೋತ್ಪಾದನೆ ಇದೆ ನಿಜ, ಹಾಗಂತ ಅದರ ಬಗ್ಗೆ ನಾವು ಯಾಕೆ ಅಷ್ಟು ಗಂಟಲು ಹರಿಯೋ ಹಾಗೆ ಕೂಗಿಕೋ ಬೇಕು? ಎಲ್ಲೋ ತಿಂಗಳಿಗೆ 2-3 ಕಡೆ ಬಾಂಬ್ ಡಮ್ ಎಂದು ಸಿಡಿದು ಒಂದಿಷ್ಟು ಜನ ಸತ್ತಿರಬಹುದು, ಆದರೆ ನಾವು ಇನ್ನೂ ಬದುಕೇ ಇದ್ದಿವಲ್ಲ! ಉಗ್ರಗಾಮಿ ಗಳು ಇನ್ನೂ ನಮ್ಮ ಮನೆಯೊಳಗೆ ನುಗ್ಗಿ ಬಾಂಬ್ ಇಟ್ಟಿಲ್ಲ, ಇದು ಕುಶಿ ಪಡಬೇಕಾದ ವಿಚಾರ ಅಲ್ವಾ? 110 ಕೊಟಿ ಜನರಲ್ಲಿ ಒಂದು ನೂರು ಹೋದರೆ ತಲೆ ಕೆಡಿಸಿ ಕೋಬೇಕಾ?
ಈಗ ನಮ್ಮ ರಾಜ್ಯನೆ ತಗೋಳಿ, ನಿಜಕ್ಕೂ ನಾವು ಸಿಕ್ಕಾಪಟ್ಟೆ ಅಭಿವೃದ್ದಿ ಆಗಿದ್ದೀವಿ ಅಂತೆ, ಎಲ್ಲ ಕಡೆ ಮೂಲಭೂತ ಸೌಕರ್ಯ ಸಿಕ್ಕಿ, ನಾವೆಲ್ಲಾ ಕುಶಿ ಲೀ ಇದ್ದೀವಿ ಅಂತೆ! ಹಿಂದೆ ಬಿ ಜೆ ಪಿ ನೇತೃತ್ವದ ಎನ್ ಡಿ ಎ ಅಧಿಕಾರದಲ್ಲಿ ಇದ್ದಾಗ ಭಾರತ ಶೈನಿಂಗ್ ಅಂತ ಸಾರಿದ್ರೂ. ಅದು ಸ್ವಲ್ಪ ಹಳೆ ವಿಚಾರ ಆಯಿತು ಬಿಡಿ. ಆದ್ರೆ ನಾವು ಮುಂದುವರಿದಿಲ್ಲ ಅಂತ ಯಾಕೆ ಬಡಕೋ ಬೇಕು? ರೆಡ್ಡಿ ಗಳು ದೊಡ್ಡ ಹಗ್ಗ ಕಟ್ಟಿ ಕರ್ನಾಟಕ ನ ಮುಂದೆ ಯೆಳೀತ ಇದ್ದಾರೆ ಅನ್ಸಲ್ವಾ? ಪಾಪ ಅವರಿಗೆ ಜಯವಾಗಲಿ.
ಎಲ್ಲರೂ ಕೇಳಿರುತ್ತಾರೆ ಯುವಕರೇ ದೇಶದ ಶಕ್ತಿ, ಅವರೇ ದೇಶ ರೂಪಿಸುವವರು ಅಂತ. ಇಂತಹ ಯುವಕರ, ಯುವತಿಯರ ಬಗ್ಗೆ ನಮ್ಮ ಸರ್ಕಾರ ಗಳಿಗೆ ಸಿಕ್ಕಾಪಟ್ಟೆ ಗೌರವ. ಅವರ ಕುಶಿಯೇ ತಮ್ಮ ಕುಶಿ ಎಂದು ಭಾವಿಸಿವೆ. ಯಾವ ರೇಡಿಯೋ, ಟೀವೀ ಹಾಕಿದ್ರೂ ನಿರೋಧ್ ಬಳಸಿ, ನಿರೋಧ್ ಬಳಸಿ ಅಂತ. ಮದುವೆಗೆ ಮುನ್ನ ಅವೆಲ್ಲ ಬೇಡ ಅನ್ನುವ ನೈತಿಕತೆ ಯಾರಿಗೆ ಬೇಕಿದೆ? ಇನ್ನೂ ಸುಪ್ರಸಿದ್ದ ಕಾನ್ವೆಂಟ್ ಗಳಲ್ಲಿ ಹುಡುಗಿಯರು ಚಿಕ್ಕ ಚಿಕ್ಕ ಸ್ಕರ್ಟ್ ನ ಯೂನಿಫಾರ್ಮ್ ಅಂತ ಹಾಕ್ಕೊಂದು ಹೋಗ್ತಾರೆ. ಅವರು ಹಾಗೆ ಹೋಗೋದರಿಂದ ತಾನೆ ನನ್ನಂಥ ಬಿಸಿ ರಕ್ತದ ಯುವಕರಿಗೆ ಜೀವನೋತ್ಸಾಹ ಬರುವುದು. ಇದರಿಂದ ಯಾವ ಸಂಸ್ಕೃತಿ ನಾಶ ಆಗ್ತಾ ಇದೆ? ಯುವಕರು ಕುಶಿ ಇಂದ ಇರುವುದನ್ನು ಸಹಿಸದ ಕೆಲವು ಮೂಲಭೂತ ವಾದಿಗಳು ಭಾರತೀಯ ಸಂಸ್ಕೃತಿಯ ಅವನತಿ, ನೈತಿಕ ಅದೊಗತಿ ಅಂತೆಲ್ಲ ಅರ್ಥ ವಾಗದ ಪದಗಳ ಬಳಸಿ ಜನರ ನೆಮ್ಮದಿ ಕೆಡಿಸುವ ಪಿತೂರಿ ಇದು ಎಂಬ ಭಾವನೆ ನನಗೆ.
ಇನ್ನು ಮಧ್ಯ ರಾತ್ರೆ ಟಿ ವಿ ಗಳಲ್ಲಿ ಮಿಡ್ ನೈಟ್ ಮಸಾಲಾ ಕಾರ್ಯಕ್ರಮ ಗಳು ಬರುತ್ತವೆ. ಅವುಗಳು ಬಾಲಕರನ್ನು ಯುವಕರನ್ನಗಿಸಿ, ಯುವಕರನ್ನು ಮಂಚ ವಿದ್ಯಾ ಪ್ರವೀಣ ರನ್ನಾಗಿಸಿ.. ತನ್ಮೂಲಕ ದೇಶದಲ್ಲಿ ಜನ ಸಂಖ್ಯೆಯ ಬೀಜ ಬಿತ್ತ ಬೇಡವೇ? ಹುಡುಗಿಯರ ಸೊಂಟ ಹಿಡಿದು ಸುತ್ತ ಬೇಕಾದ ವಯಸ್ಸಲ್ಲಿ ಕ್ರಾಂತಿ ಯಾರಿಗೆ ಬೇಕಾಗಿದೆ ಸ್ವಾಮೀ? ಅಂದು ವಿವೇಕಾನಂದರು ಹೇಳಿದ್ದರು ಯುವಕರೇ ಏಳಿ, ಎದ್ದೇಳಿ ಅಂತ. ಈಗ ನೀವೇ ಹೇಳಿ ಬೇಗ ಎದ್ದು ಮಾಡುವುದೇನಿದೆ?
ನಮ್ಮ ದೇಶ, ಜನ ಗಳ ಬಗ್ಗೆ ಇಷ್ಟೆಲ್ಲಾ ಮಹಾದೋಪಕಾರ ಮಾಡಿರುವ ನಮ್ಮ ರಾಜಕಾರಣಿಗಳನ್ನ ಬೈಯುವ್ಯುದೇ? ಅಕಟಕಟಾ.. ಇನ್ನೂ ಅವರು ಚುನಾವಣೆ ಸಮಯದಲ್ಲಿ ದುಡ್ಡು ಕೊಟ್ಟು, ಹೆಂಡ, ಸೀರೆ, ನಂಗ ನಾಚ್ ಎಲ್ಲಾ ಮಾಡಿ ವೋಟ್ ಹಾಕಿಸಿಕೊಳ್ಳೋದ್ರಲ್ಲಿ ತಪ್ಪೇನಿದೆ? ನಾವು ಅಷ್ಟೇ ದುಡ್ಡು ತಗೊಂಡು ವೋಟ್ ಮಾಡೋದ್ರಲ್ಲಿ ಏನು ಅಪರಾದ ಅಡಗಿದೆ? ನಮ್ ವೋಟ್ ಏನು ಪುಕ್ಸಟ್ಟೆ ನ? ಅದಕ್ಕೆ ಎಲ್ಲರೂ ಅಬ್ಯರ್ಥಿಯ ಶಕ್ತ್ಯಾನುಸಾರ ದುಡ್ಡು ಪೀಕೊದು.
ಹೋಗಲಿ ಬಿಡಿ, ನಾವೆಲ್ಲಾ ಚೆನ್ನಾಗಿದ್ದೇವೆ. ನಾಳೆಯ ಚಿಂತೆ ನಮಗಿಲ್ಲ. ಅದರ ಅಗತ್ಯವೂ ಇಲ್ಲ. ನಿನ್ನೆಯ ಹಂಗಿಲ್ಲದೆ, ನಾಳೆಯ ಕನಸಿಲ್ಲದೆ, ಇಂದಿನ ಜೀವನ ಮಾತ್ರ ನೋಡುವ ತತ್ವ ಜ್ಞಾನಿಗಳ ನಾಡು ನಮ್ಮದು. ಪಕ್ಕದ ಮನೆಯವರು ಹೊಸ ಫ್ರಿಜ್ ತಗೊಂಡರೆ ಮಾತ್ರ ನಾವು ಯೋಚಿಸ ಬೇಕಾಗಿದೆ ಹೊರತು, ಅವರ ಮನೆ ಮಕ್ಕಳು ಮೋರಿ ಲೀ ಬಿದ್ದು ಸತ್ತರೆ ಯೋಚಿಸ ಬೇಕಾ? ಸುತಾರಾಂ ಇಲ್ಲ. ನಾವೆಲ್ಲಾ ವಿಧ್ಯಾವಂತರೆಂದು ಪೋಸ್ ಕೊಡುತ್ತಾ ಸಂತೋಷವಾಗಿ ಇರೋಣ. ಬೇಕಿದ್ದರೆ ಸತ್ತ ಸೈನಿಕರಿಗೆ ಒಂದು ಸಲಾಂ ಹೊಡೆದು, ನಮ್ಮ ಮಕ್ಕಳನ್ನು ಅಮೆರಿಕೆ ಯಲ್ಲಿ ಪ್ರತಿಷ್ಠಾಪನೆ ಮಾಡುವುದು ಹೇಗೆಂದು ಚಿಂತಿಸುವ.
ನಾವುಗಳು ಇಷ್ಟೆಲ್ಲಾ ಸುಖ, ಶಾಂತಿ ಮತ್ತು ನೆಮ್ಮದಿಲಿ ಇರಲು ಕಾರಣ ರಾಗಿರುವ ಎಲ್ಲ ಮತ ಬಾಂದವರಿಗೆ , ಹಾಗು ನಾಯಕರುಗಳಿಗೆ ಜೈ ಹೋ.
Subscribe to:
Post Comments (Atom)
9 comments:
ಬಾಲು,
ನಿಮ್ಮ ಬರಹದ ಮೇಲ್ಪದರದಲ್ಲಿ ಲೇವಡಿಯ/ತಿಳಿಹಾಸ್ಯದ ಲೇಪನವಿದ್ದರೂ, ಆ೦ತರ್ಯದಲ್ಲಿ ವ್ಯವಸ್ಥೆಯ ವಿರುದ್ಧ ನಿಮಗಿರುವ ಅಸಹನೆಯಾ ಪಡಿಯಚ್ಚು ಅಲ್ಲಲ್ಲಿ ಕಾಣುತ್ತಿದೆ. ನೀವ೦ದಿದ್ದು ಮಾರ್ಮಿಕ ಸತ್ಯ. ಎಲ್ಲರೂ ವಿಚಾರ ಮಾಡಬೇಕಾದ ವಿಷಯ. ನಮ್ಮ ಸುತ್ತ ನಡೆಯುವ ಅನೇಕ ಘಟನೆಗಳಿಗೆ ನಾವು ಕುರುಡರ೦ತೆ, ಕುವುಡರ೦ತೆ ಮೂಗರ೦ತೆ ಪ್ರತಿಸ್ಪ೦ದನೆ ಇಲ್ಲದೆ ಪರೋಕ್ಷ ಪ್ರೋತ್ಸಾಹ ಕೊಡುತ್ತಲೇ ಇದ್ದೇವೆ. ಮಾತುಸೋತ ಭಾರತ, ಮಾತುಸತ್ತ ಭಾರತ ಎ೦ದು ಪು೦ಗಿ ಊದುವವರು ಸಹ, ಮಾಡುವುದು ಅದನ್ನೇ ? ಚೆನ್ನಾಗಿದೆ.
Dear Balu Avare
Nimma Mathugalu nammanu bahu dodda chinthange yede made kottithu.
ಬಾಲು ಅವರೇ,
ಎಲ್ಲರಿಗೂ ಸಕತ್ ಕ್ಲಾಸ್ ತಂಗೊಂಡ್ಬಿಟ್ರಲ್ಲ ...
ಚನ್ನಾಗಿದೆ ನಿಮ್ಮ ಹೊಗಳುತ ಬೈಯುವ ಲೇಖನ... :)
enappa rochhige edh bittidiya....
-Shiv
lEKana sogasaagi ide. i0taha dEshadalli Iga badukuttiruva naavu bahaLa puNya maaDiddEve. jai ho.. .. namma hiriyarige holisidare naavE puNyava0taru ..
puNyava0taru .. naavu puNyava0taru
i0ta naaDalli janisida naavE puNyava0taru ..
.
.
.
(Baagyava0taru calanachitrada geete)
ಚೆನ್ನಾಗಿದೆ ವ್ಯಂಗ್ಯ...
ಬಾಲು ಸರ್,
ಲೇಖನದಲ್ಲಿ ಮೇಲುನೋಟಕ್ಕೆ ಹಾಸ್ಯದಲ್ಲಿದ್ದರೂ ಸೂಕ್ಷ್ಮವಾಗಿ ಕೆಲವು ವಿಚಾರಗಳನ್ನು ಹೇಳಿದ್ದೀರಿ....
ವ್ಯಂಗ್ಯವನ್ನು ಕೂಡ ಚೆನ್ನಾಗಿ ಬರೆಯುತ್ತೀರಿ...
ಧನ್ಯವಾದಗಳು..
ಪರಾಂಜಪೆ:
ನೀವು ಹೇಳುತ್ತಾ ಇರುವುದು ಸರಿ ಇದೆ, ಆದರ್ಶ ಪುರುಷರ ನೆರಳಲ್ಲಿ ಕಟ್ಟಿದ ನಾಡು ಹೀಗೆ ಆಗಬಾರದಿತ್ತು ಅನ್ನೋದೇ ನನ್ನ ಅಸಹನೆ.
ವರುಣ: ನೀನು ಯೋಚನೆ ಮಾಡುವ ಹಾಗೆ ಆಯ್ತಾ? ಅಷ್ಟಾದರೆ ನಾನು ಬರೆದ ಉದ್ದೇಶ ಸಾರ್ಥಕ ಆದ ಹಾಗೆ.
ಶಿವ ಪ್ರಕಾಶ್;
ಧನ್ಯವಾದಗಳು
ಶಿವ:
ಹಾಗೇನೂ ಇಲ್ಲ, ಕೂಡಲೇ ಕ್ರಾಂತಿ ಅನ್ನುತ್ತಾ ಹೋರಾಟ ಮಾಡುವ ಇರಾದೆ ಇಲ್ಲ ಬಿಡು.
ರೂಪ:
ನಾವುಗಳು ಪುಣ್ಯವಂತರೆ ಸರಿ.
ರವಿ ಕಾಂತ :
ಧನ್ಯವಾದಗಳು
ಶಿವೂ:
ನಿಮ್ಮ ಅಭಿಪ್ರಾಯ ಹಾಗು ಪ್ರೋತ್ಸಾಹ ಕೆ ಧನ್ಯವಾದಗಳು.
ನಾವೆಲ್ಲ ಹೇಳ್ಕೊಳಲ್ಲ ನೀ ಹೇಳ್ಕೊಂಡಿದ್ಯ... ಒಂದ್ ಬ್ಲಾಗ್ ನಿಂದ ಈ ದೇಶ ಚೇಂಜ್ ಅಗೊದಿದ್ದ್ರೆ ನಾವೇಕೆ ಒಬ್ಬರಿಗೊಬ್ಬರು ಈ ಥರ ಬರಿತಾ ಇದ್ವಿ ಅಲ್ವಾ? ಸದಾ ಹಾಸ್ಯ ಪ್ರಜ್ಞೆಯಿಂದ ಮುಳುಗಿದುಥಿದ್ದ ಈ ನಿನ್ನ ಬ್ಲಾಗ್ ಗಳು ಈಗ ನಿನ್ನ ಅಭಿಮಾನಿಗಳಿಗೆ ಸ್ವಲ್ಪ ಬೇರೆ ಯಾಗಿ ಸಮಾಜದ ಸ್ತಿಥಿಗತಿಯನು ಯೋಚನೆಗೆ ಒರೆ ಹಚಿರಬೇಕು (ಒಂಥರಾ ತಲೆಗೆ ಹುಳ ಬಿಟ್ಟ ಹಾಗೆ ಅಯ್ಯೋ ಶಾಸ್ತ್ರಿ ಹೀಗೂ ಇದಾನ ಅಂತ) ಅದಿಕ್ಕೆ ಹೇಳೋದು ನಾವಿರೋದು ಹೀಗೆ ಸಾಮಿ ನೋಡಿ ಅಂತ..!
Post a Comment