Wednesday, December 2, 2009

ಹೀಗೊಂದು ಸಾಹಿತ್ಯ ಪ್ರಸವ!!



ಈ ತರದ ಹುಚ್ಚು ಯಾವಾಗ ನನಗೆ ಹಿಡಿತು ಗೊತ್ತಿಲ್ಲ, ತುಂಬಾ ದಿನಗಳಿಂದ ಕೂತಲ್ಲಿ ನಿಂತಲ್ಲಿ, ಮನೆಯಲ್ಲಿ, ಆಫೀಸ್ ನಲ್ಲಿ ನಿದ್ದೆ ಮಾಡುವಾಗ ಒಂದೇ ಯೋಚನೆ, ಒಂದೇ ಆಸೆ, "ನಾನು ಒಂದು ಕಾದಂಬರಿ ಬರೀಬೇಕು" ಅಂತ. ಕಾದಂಬರಿ ಅಂದ್ರೆ ಉಡುಪಿ ಉಪಹಾರ ನಲ್ಲಿ ಮಸಾಲೆ ದೋಸೆ ತಿಂದಷ್ಟು ಸುಲಭಾನ? ಬರಹಗಾರರಿಗೆ ಇನ್ನು ಬರೆಯದೇ ಇರಲು ಸಾದ್ಯವೇ ಇಲ್ಲ ಅಂತ ಅನ್ನಿಸಿದಾಗ ಅವರು ಬರೀತಾರೆ ಅಂತೆ, ಅವರ ತಲೇಲಿ ಕಥೆ ಮೊಟ್ಟೆ ತರ ಕೂತು, ಕಾವು ಪಡೆದು ಕೊನೆಗೆ ಪ್ರಸವ ವೇದನೆ ಅನುಭವಿಸಿ ಬರೀತಾರೆ ಅಂತ ಎಲ್ಲೋ ಕೇಳಿದ್ದ ನೆನಪು. ನಂಗು ಹೆಚ್ಚು ಕಡಿಮೆ ಇದೆ ತರದ ಸ್ಥಿತಿ!! ಆದ್ರೆ ಏನು ಬರೀಬೇಕು ಅಂತ ಮಾತ್ರ ಹೊಳಿತ ಇಲ್ಲ.


ಹಿಂದೆ ಎಲ್ಲೋ ಕೇಳಿದ್ದ ನೆನಪು, ಕುಮಾರವ್ಯಾಸ ಐ ಮೀನ್ ಗದುಗಿನ ನಾರಣಪ್ಪ ಬೆಳಗಿನ ಮುಂಜಾವು ಸ್ನಾನ ಮಾಡಿ, ಮಡಿ ಉಟ್ಟು ಗುಡಿಯ ನಿರ್ದಿಷ್ಟ ಜಾಗದಲ್ಲಿ ಕೂತು ಬರೀತಾ ಇದ್ದನಂತೆ . ಹಾಗೆ ಧ್ಯಾನಸ್ತನಾಗಿ ಕೂತಾಗ ಅವನಲ್ಲಿ ಕಾವ್ಯ ಮೂಡುತ್ತಿತ್ತು ಅಂತೆ.


ಸರಿ ಹೇಗೂ ಬರೆಯಲೇಬೇಕು ಅಂತ ತೀರ್ಮಾನ ಮಾಡಿ ಆಗಿರುವುದರಿಂದ ನಾನು ಕೂಡ ಕುಮಾರವ್ಯಾಸನ ಮಾದರಿಯನ್ನೇ ಅನುಸರಿಸಿ ಬಿಡುವುದು ಎಂದುಕೊಂಡೆ. ಬೆಂಗಳೂರಿನಲ್ಲಿ 3-4 ಗಂಟೆಗೆ ದೇವಸ್ತಾನಕ್ಕೆ ಹೊರಟರೆ ಬೀದಿ ನಾಯಿಗಳು ಅಟ್ಟಿಸಿಕೊಂಡು ಬರುವ ಸಾದ್ಯತೆ ಇರುವುದರಿಂದ ಮನೆಯಲ್ಲೇ ಕೂತು, ಆಥವಾ ಟೆರೇಸಿಗೆ ಹೋಗಿ ಬರೆಯುವುದು ಅಂತ ತೀರ್ಮಾನಿಸಿದೆ. ಅಂಗಡಿಯಿಂದ ಒಂದಿಷ್ಟು A4 ಪೇಪರ್, ಒಂದು ರಟ್ಟು ಮತ್ತೆ ರೆನಾಲ್ಡ್ ಪೆನ್ ತಗೊಂಡು ಬಂದೆ. ಶುಭಸ್ಯ ಶೀಘ್ರಂ ಅಂತ ಒಂದು ಶುಭ ಶನಿವಾರದ ಬೆಳಿಗ್ಗೆ ಶುರುಮಾಡುವುದು ಅಂತ ತಯಾರಾದೆ. 2 ದಿನ ರಜೆ ಇರುವುದರಿಂದ ಯಾವ ಮ್ಯಾನೇಜರ್ ಗಳ ತೊಂದರೆ ಇಲ್ಲದೇನೆ ಅಧ್ಬುತ ಕಾವ್ಯ ಕೃಷಿಯ ಕನಸು ಕಂಡೆ.


ಶುಕ್ರವಾದ ಸಂಜೆ ಆಫೀಸ್ ನಿಂದ ಬೇಗನೆ ಹೊರಬಿದ್ದು, ಮನೆಗೆ ಹೋದರೂ ಮಾರನೆ ದಿನದ ಬೆಳಿಗಿನ ಬಗ್ಗೆಯೇ ಚಿಂತೆ. ಪಕ್ಕದ ದರ್ಶಿನಿಯಲ್ಲಿ ಚೆನ್ನಾಗಿ ತಿಂದು ಬಂದರೂ ಸರಿಯಾಗಿ ನಿದ್ದೆ ಬರಲಿಲ್ಲ. 4 ಗಂಟೆಗೆ ಅಲರಾಂ ಇಟ್ಟಿದ್ದರಿಂದ ಬೇಗನೆ ಎದ್ದು ನೀರು ಕಾಯಿಸಿ, ಸ್ನಾನ ಮಾಡಿ, ಮಡಿ ಉಟ್ಟು ಪೇಪರ್ ಮುಂತಾದ ಸಾಮಗ್ರಿಗಲೊಡನೆ ಟೆರೆಸ್ ಗೆ ನಡೆದೆ. ನೀರಿನ ಟ್ಯಾಂಕ್ ಬಳಿ ಪ್ರತಿಷ್ಟಾಪನೆ ಆಗಿದ್ದೂ ಆಯಿತು. ಹುಮ್ಮಸ್ಸಿನಲ್ಲಿ ಪೆನ್ನು ಹಿಡಿದು ಕೂತೆ. 5 ನಿಮಿಷ ಆಯಿತು ಏನೂ ತೋಚಲಿಲ್ಲ, 10 ನಿಮಿಷ, ನಿಮಿಷಗಳು ಕಳೆದಂತೆ ಬೆಂಗಳೂರಲ್ಲಿ ಬೆಳಗ್ಗೆ ಮುಂಚೆ ಸ್ವಲ್ಪ ಚಳಿ ಇರುತ್ತೆ ಅನ್ನುವ ಸತ್ಯ ಗೊತ್ತಾಯಿತೆ ಹೊರತು ಬೇರೇನೂ ಆಗಲಿಲ್ಲ. ವದ್ದೆ ಬಟ್ಟೆ ಉಟ್ಟ ಪರಿಣಾಮ ಸ್ವಲ್ಪ ಜಾಸ್ತಿ ಚಳಿ ನೆ ಆಯಿತು. ಇದೊಳ್ಳೆ ಕಥೆ ಆಯಿತಲ್ಲ, ನಮ್ಮ ಏಕಾಗ್ರತೆಯನ್ನು ಕೆಡಿಸಲು ವಾಯು ದೇವ ಏನಾದರು ಮಸಲತ್ತು ಮಾಡುತ್ತಿದ್ದನೋ ಏನೋ ಅನ್ನುವ ಅನುಮಾನವೂ ಕಾಡಿತು. ಸಮ್ಮ ಕೆಲವು ಸಾಹಿತಿಗಳಿಗೆ ಬರೆಯುವಾಗ ಸಿಗರೆಟ್ ಸೇದುವರಂತೆ, ಅದು ತಲೆಯಲ್ಲಿ ಇರುವ ಕಥೆಗಳಿಗೆ ಕಾವು ಕೊಡುತ್ತದಂತೆ, ಆದರೆ ನನ್ನಂತ ಸಾಹಿತ್ಯ ಲೋಕದ "ಫ್ರೆಶರ್" ಗಳು ಏನು ಮಾಡುತ್ತಾರೋ ತಿಳಿಯದು. ಆದರೂ ಕೆಲ ಸಮಯದ ದ ನಂತರ ಈ ಚಳಿಗೆ ಕಾಫಿ ಕುಡಿಯುವ ಮನಸಾಗಿ ಓಡೋಡಿ ಕೆಳಗಿದು ಬಂದು ಬಿಸಿ ಹಾಲಿನಲ್ಲಿ ಬ್ರೂ ಸೇರಿಸಿ ಕುಡಿದಾಗ ಚಳಿ ಮಾಯಾವಗಿತ್ತು. ಅಂತು ಮೊದಲ ವೈರಿಯ ವಿರುದ್ದ ಸೆಣೆಸಿ ಜಯ ದಾಖಲಿಸಿದ ಕುಶಿ ಸಿಕ್ಕಿತು, ಸರಿ ಇನ್ನು ತಡ ಮಾಡಬಾರದು ಬರೆಯಬೇಕು ಅಂತ ಅನ್ನಿಸಿ ಪೇಪರ್ ಕೈಗೆ ತೆಗೆದು ಕೊಳ್ಳುವಷ್ಟರಲ್ಲಿ ಸೂರ್ಯ ಮೂಡುತ್ತಾ ಇದ್ದ, ಅಕ್ಕ ಪಕ್ಕದ ಮನೆಯವರು ತಮ್ಮ ತಮ್ಮ ನೇಯ್ಗೆ ಯಂತ್ರಗಳಿಂದ ಕಟ ಕಟ ಶಬ್ದ ಶುರು ಮಾಡಿದ್ದರು. (ಬೆಂಗಳೂರಿನ ಸಂಪಂಗಿ ರಾಮ ನಗರ ಉದಯೋನ್ಮುಖ ಸಾಹಿತಿಗಳಿಗೆ ತಕ್ಕು ದಾದ ಸ್ಥಳ ಅಲ್ಲವೋ ಏನೋ? ) ಇನ್ನು ಕೂತು ಪ್ರಯೋಜನ ಇಲ್ಲವೆಂದು ಕೆಳಗೆ ಬಂದೆ. ಆದರೂ ಬರೆಯುವ ಹಂಬಲ ಎಳ್ಳಷ್ಟೂ ಕಡಿಮೆ ಆಗಿರಲಿಲ್ಲ. ಸೋಲೇ ಗೆಲುವಿನ ಮೊದಲ ಮೆಟ್ಟಿಲು ಎಂಬ ಥೇಟ್ ಭಾರತೀಯ ಕ್ರೀಡಾ ಪಟು ತರ ಸಮಾಧಾನ ಮಾಡಿಕೊಂಡೆ.


ಭಾನುವಾರ ಬೆಳಿಗ್ಗೆ ಬರೆಯಲು ಶುರು ಮಾಡಲೇ ಬೇಕು ಎನ್ನುವ ಹಂಬಲ ಇದ್ದಿದ್ದರಿಂದ ಕೆಲವು ಮುಂಜಾಗೃತಾ ಕ್ರಮ ಕೈಗೊಂಡೆ, ಸ್ನಾನದ ನಂತರ ಒದ್ದೆ ಬಟ್ಟೆ ಬೇಡ, ಚಳಿ ಆಗುವುದರಿಂದ ಸ್ವೆಟರ್ ಹಾಕ್ಕೊಂಡು ಹೋಗೋದು, ಕಿವಿಗೆ ಹತ್ತಿ ಅಥವಾ ಮಂಕಿ ಕ್ಯಾಪ್, ಮದ್ಯೆ ಮದ್ಯೆ ಕುಡಿಯಲು ಫ್ಲಾಸ್ಕ್ ಪೂರ ಕಾಫಿ, ಹಾಗು 4 ಗಂಟೆ ಬದಲು 2 ಗಂಟೆ ಗೆ ಬರೆಯಲು ಶುರು ಮಾಡುವುದು ಅಂತೆಲ್ಲ ಪಟ್ಟಿ ಮಾಡಿದೆ. ಹಿಂದಿನ ದಿನ ನಿದ್ದೆ ಇಲ್ಲದ್ದಕ್ಕೋ ಏನೋ ಶನಿವಾರ ರಾತ್ರೆ ಕಣ್ಣು ಮುಚ್ಚಿದಾಕ್ಷಣ ನಿದ್ದೆ ಬಂತು. ಹಿಂದಿನ ದಿನದಂತೆ ಅಲರಾಂ ಬಾರಿಸಿದಾಗ ಎದ್ದು ನೀರು ಕಾಯಿಸಿ ಸ್ನಾನ ಮಾಡಿ, ಯುದ್ದಕ್ಕೆ ಸಿದ್ದನಾದ ಸೈನಿಕನ ಹಾಗೆ ಸಿದ್ದ ನಾದೆ, ಜೆನ್ಸ್ ಪ್ಯಾಂಟು, ಸ್ವೆಟರ್, ಮಂಕಿ ಕ್ಯಾಪ್, ಕಾಲಿಗೆ ಸಾಕ್ಸ್ ಎಲ್ಲ ಧರಿಸಿ, ಟೆರೆಸ್ ಗೆ ನುಗ್ಗಿದೆ. ಬೀಸುವ ತಂಗಾಳಿ, ಬೆಚ್ಚನೆ ಸ್ವೆಟರ್, ಹಭೆ ಯಾಡುವ ಕಾಫಿ, ಅಹಹ್ ಸ್ವರ್ಗ ಸುಖ ಎನ್ನಿಸಿತು. ಹಾಗೆಯೇ ಅಲ್ಲೇ ಇದ್ದ ನೀರಿನ ಟ್ಯಾಂಕ್ ಗೆ ಒರಗಿ ಕೊಂಡು, ಧ್ಯಾನಸ್ತ ಸ್ಥಿತಿಯಲ್ಲಿ ಯೋಚಿಸ ತೊಡಗಿದೆ, ಕಥೆ ಹೇಗಿರಬೇಕು, ಸಂಸಾರಿಕ ಕಥೆನೋ, ಜನಾರ್ಧನ ಮಹರ್ಷಿ ಸಿನೆಮಾ ಕಥೆ ಬರೆದ ಹಾಗೆ ಅವರಿವರದ್ದನ್ನು ಕದ್ದು ಒಂದು ರಚನೆ ಮಾಡಬೇಕೋ, ಅಥವಾ ಈಗಿನ ಕತೆಗಾರರ ತರ ತಲೆ ಬುಡ ಅರ್ಥ ಆಗದ ಹಾಗೆ ಬರೆಯಲೋ ಯೋಚಿಸ ತೊಡಗಿದೆ. ಹಾಗೆ ಎಷ್ಟು ಹೊತ್ತು ಯೋಚಿಸಿದೆನೋ ತಿಳಿಯದು, ಕಣ್ಣು ಬಿಟ್ಟಾಗ ಸೂರ್ಯ ಕುಕ್ಕುತ್ತಾ ಇದ್ದ, ಅಕ್ಕ ಪಕ್ಕದ ಮಕ್ಕಳು ಅಲ್ಲಿ ಕುಣಿತಾ ಇದ್ವು ಪರಿಸ್ಥಿತಿಯ ಅರ್ಥ ಮಾಡಿಕೊಳ್ಳಲು ಹಲವು ನಿಮಿಷಗಳೇ ಬೇಕಾದವು, ನಂತರ ನಿದ್ರಾ ದೇವಿಗೆ ಒಂದೆರಡು ದಿಕ್ಕಾರ ಕೂಗಿ ರೂಮಿಗೆ ಬಂದು, ನನ್ನ ಕಾದಂಬರಿಯ ಕನಸನ್ನ ಅನಿರ್ದಿಷ್ಟಾವಧಿ ಕಾಲಕ್ಕೆ ಮುಂದೂಡಿ, ಪಕ್ಕದ ಉಡುಪಿ ಉಪಹಾರದಲ್ಲಿ ಮಸಾಲೆ ದೋಸೆ ತಿನ್ನಲು ಹೊರ ನಡೆದೆ.

ವಿ ಸೂ: ಶೀರ್ಷಿಕೆಯನ್ನ ಚಂದ್ರು ಇಂದ ಕಡ ತಂದದ್ದು.

23 comments:

ಸವಿಗನಸು said...

chennagidhe.....innashtu bareyiri...

Chandru said...

'ಗಣೇಶನ್ನು ಮಾಡೋಕೆ ಹೋಗಿ ಅವರಪ್ಪನ ಮಡಿದ ಹಾಗೆ' ಸಾಹಿತಿಯಗೋಕೆ ಹೋಗಿ ಉಡುಪಿ ಹೋಟೆಲ್ ಗಿರಾಕಿ ಆಗಿ ಬಿಟ್ಯಲ್ಲೋ... ಸರಿ ಮುಂದೆ ದೋಸೆ ತಿನುತಾನಾದ್ರು ನಿಂಗೆ ಬರೆಯುವ 'ಮೂಡು' ಬಂದ್ರೆ ಸಾಕು.. ನಿನ್ನ ಮೊದಲ ಕಾದಂಬರಿ ಪುಸ್ತಕ ಬಿಡುಗಡೆಗಾಗಿ ಪುಸ್ಕಟ್ಟೆ ಪ್ರಚಾರ ಕೊಟ್ಟು ನಾನೇ ಅತಿಥಿಯಾಗಿ ಬರಿತ್ತೇನೆ. !! ಬರಿ ಬರಿ ಮಗ ಬರಿ ಬಿಡಬೇಡ ಅದನ್ನ.....

PARAANJAPE K.N. said...

ವತ್ಸಾ,
ನಿನ್ನ ಕಥೆ/ಕಾದ೦ಬರಿ ಬರೆಯುವ ಹುಚ್ಚು ಹೆಚ್ಚಾಗಲಿ, ಉಡುಪಿ ಉಪಾಹಾರಕ್ಕೆ ಒಳ್ಳೆಯ ವ್ಯಾಪಾರವಾಗಲಿ, ಇನ್ನಷ್ಟು ಮಸಾಲೆ ದೋಸೆಗಳು ಖಾಲಿಯಾಗಿ, ಒ೦ದು ಮಸಾಲೆ ಕಥೆಯ ಸುಖ ಪ್ರಸವವಾಗಲಿ, ಶುಭವಾಗಲಿ

ವಿ.ರಾ.ಹೆ. said...

ಅದು ಹಂಗಲ್ಲ ಶಿವಾ.ಧ್ಯಾನಸ್ಥ ಸ್ಥಿತಿಯಲ್ಲೆಲ್ಲಾ ಬರೆಯೋಕಾಗಲ್ಲ.ಬರೆದು ಆದ ಮೇಲೆ ಯಾರಾದರೂ ಚೆನ್ನಾಗಿದೆ ಅಂದರೆ ನಾನು ಧ್ಯಾನಸ್ಥ ಸ್ಥಿತಿಯಲ್ಲಿದ್ದು ಬರೆದೆ ಅಂತ ಹೇಳ್ಕೊಂಡು ತಿರುಗಾಡಬೇಕು :) ನಿಂದೊಳ್ಳೆ ಪ್ರಸವ.

Unknown said...

ಅಯ್ಯೋ ಸ್ವಾಮೀ... ನಿಮ್ಮದು ಇದೊಳ್ಳೆ ಕಥೆ ಆಯ್ತಲ್ಲ ಮಾರಾಯ್ರೇ... ಪೆನ್ನು ಪೇಪರ್ ಬಿಟ್ಟು ಕಾಫಿ -ದೋಸೆ ಕಡೆ ಹೋಗಿಬಿಟ್ರಲ್ಲ.. ಇರಲಿ ಬಿಡಿ.. ನಿಮ್ಮ ಕಾದಂಬರಿಯದು ಬಹುಶ ಗಜಗರ್ಭ ವಿರಬೇಕು.. ಪ್ರಸವಕ್ಕೆ ತುಂಬಾ ಸಮಯ ಹಿಡಿಯುತ್ತದೆ... ಆದರೆ ಪ್ರಯತ್ನ ಜಾರಿಯಲ್ಲಿರಲಿ...

shiva said...

oh sad...Next time ge..check up madsi..delivery date na correct agi tilkondu terrace hattu...:)

Shiv@zürich

Nirvana said...

Baalu besar beda....prasava prakriye sahjavaagirali....ati pryatna/avasara apaayakaari........yarige gottu mele namoodisidante Gajagarbhave aadalli ....bari Kaadambariyenu , avismaraneeya Kaavya, Mahakaavyagala janana aashcharyavenalla....hogli ee wekend olle nidde maadi...nidraadevi nimmannu ondu atyuttama kathavastuvinondige haarysali !!!!

ರಾಜೀವ said...

ಹಳೆಯ ಕಾಲದಲ್ಲಿ ಮನೆಯ ಸ್ತ್ರೀಯರು ಬೆಳಗ್ಗೆ ಬೇಗ ಎದ್ದು ಹೊಳೆಗೆ ಹೋಗಿ ನೀರು ತರುತ್ತಿದ್ದರು. ಆ ಸಮಯದಲ್ಲಿ ಎದ್ದು ಕೂತರೆ ಅವರನ್ನು ನೋಡಿ, ಸಾಹಿತ್ಯಕ್ಕೆ ಪ್ರೇರಣೆಯನ್ನು ಪಡೆಯಬಹುದಿತ್ತು. ಈಗ ನೀವು ಏನು ಮಾಡಬೇಕು ಅಂತ ಗೊತ್ತಾಯಿತಲ್ವಾ? ಟ್ರೈ ಮಾಡಿ ಏನಾಯಿತೆಂದು ತಿಳಿಸಿ. ಆಲ್ ದ ಬೆಸ್ಟ್.

ಸಾಗರದಾಚೆಯ ಇಂಚರ said...

ಸೊಗಸಾಗಿದೆ
ಹೆಚ್ಚೆಚ್ಚು ಬರೆಯಿರಿ
ಬ್ರಹತ ಕಾದಂಬರಿ ನಿಮ್ಮದಾಗಲಿ

ಶಿವಪ್ರಕಾಶ್ said...

Ha ha ha.. Channagide...
by the by, Never Give up... try another time :)

Gowtham said...

ಚೆನ್ನಾಗಿದೆ. :-) ಅಂತೂ ಪ್ರಸವ ವೇದನೆ ಅನುಭವಿಸಿದಿರಿ!

Ittigecement said...

ಬಾಲು ಸರ್...

ಸೂಪರ್...!

ಮಸ್ತ್ ಆಗಿದೆ. ನಿಮ್ಮ ಅನುಭವ..!

ಮರಳಿ ಯತ್ನವ ಮಾಡಿ..!

ನಮ್ಮನ್ನೆಲ್ಲ ನಗಿಸಿದ್ದಕ್ಕೆ
ನಿಮಗೆ ಸಲಾಮ್..!

Nagaraj MM said...

Chennagide shastriji......

andre mundhe yello yavudardu book house ge hodre nimma kadambari kannige bidru ashcharya illa antira?


Nagaraj MM

shivu.k said...

ಬಾಲು ಸರ್,

ನಿಮ್ಮ ಕತೆ ಬರೆಯುವ ಪ್ರಕರಣವೇ ಒಂದು ಕತೆಯಂತೆ ಇದೆಯಲ್ಲಾ...ಒಳ್ಳೆಯ ಹಾಸ್ಯಪ್ರಹಸನವನ್ನು ಬರೆದಿದ್ದೀರಿ....ಕೊನೆಗೆ ಮಸಾಲೆ ದೋಸೆಯನ್ನು ತಿಂದರೂ ಮುಂದೆ ಒಂದು ದಿನ ಬರೆದೇ ತೀರುತ್ತೀರಿ ಬಿಡಿ..

ಮನಸು said...

ಬಾಲು,
ನಿಜ ಹೇಳಲಾ ನೀವು ಕಥೆ ಬರಿಬೇಕು ಬರಿಬೇಕು ಎಂಬ ಸಾಹಸನೇ ಕಥೆಯ ರೀತಿ ಇದೆ... ಇದೇ ಮೊದಲ ಸಣ್ಣ ಕಥೆ, ಮುಂದೆ ಹಲವು ಕಥೆಗಳನ್ನು ಬರೆಯುತ್ತೀರಿ, ಯೋಚಿಸದಿರಿ... ನಿಮಗೆ ಶುಭವಾಗಲಿ.

Prabhuraj Moogi said...

ಹ ಹ ಹ.. ಬರೀಬೇಕೂಂತಾ ಪಟ್ಟಾಗಿ ಕೂತರೂ ಹೀಗೆ ಬರೆಯೋಕೇ ಆಗಲ್ಲ ನಿಜ... ಏನೊ ನೆಪ ಮಾಡಿ ಮನಸು ಓಡಿಬಿಡುತ್ತದೆ... ಒಂದು ಕಾದಂಬರಿ ಬರೆಯುವ ಬಗ್ಗೇನೇ ಕಾದಂಬರಿ ಬರೆದುಬಿಡಿ :) ಕಾದಂಬರಿ.. ಕಾದು ಕಾದು ಅಂತೂ ಬರೆದ್ದು ಅಂತ....

ದೀಪಸ್ಮಿತಾ said...

ಕಾದಂಬರಿ ಬರೆದರೋ ಇಲ್ಲವೋ, ಉತ್ತಮ ಹಾಸ್ಯ ಲೇಖನವಂತೂ ಸಿದ್ಧವಾಯಿತು. ಚೆನ್ನಾಗಿದೆ

Anonymous said...

Hosa prayatnagalanna maaduttale iri. anveshane yaarobbara svattalla.:-)

ಮನಮುಕ್ತಾ said...

ಚೆನ್ನಾಗಿದೆ...ನಗು ಬ೦ತು...
ನಗಿಸಿದ್ದಕ್ಕೆ ಧನ್ಯವಾದಗಳು...ಬರಹಗಳು ಬರುತ್ತಿರಲಿ...

ಶ್ವೇತ said...

Tumba chennagide. nakku naliyalu olleya taana nimma blog

ಬಾಲು said...

ಸವಿಗನಸು: ಧನ್ಯವಾದ :)

ಚಂದ್ರು: ಕಾದಂಬರಿ ಬಿಡುಗಡೆಯ ದಿನ ನಿನಗೆ ಪುಕ್ಕಟೆ ಮಸಾಲೆ ದೋಸೆ :)

ಪರಾಂಜಾಪೆ ಅವರೇ ನಿಮ್ಮ ಹಾರೈಕೆ ಸದಾ ಇರಲಿ.

ವಿಕಾಸ: ಹ್ಞೂ ಕಣಪ್ಪ

ರವಿಕಾಂತ ಗೋರೆ: ಏನು ಮಾಡೋದು, some times ಮನಸ್ಸು ಕಾದಂಬರಿ ಬರಿಯೋ ಬದಲು ಖಾಲಿ ದೋಸೆ, ಮಾಸಲೇ ದೋಸೆ ಅಂತ ರಗಳೆ ಮಾಡುತ್ತೆ. ಆದರೆ ಪ್ರಯತ್ನ ನಿರಂತರ ಜಾರಿಯಲ್ಲಿದೆ :) :) ಪ್ರತಿಕ್ರಿಯೆಗೆ ಧನ್ಯವಾದ.

ಶಿವ: ನೀನು ಹೇಗಿದ್ರು ವಿಜ್ಞಾನಿ, ಕಾದಂಬರಿ ಬರೀಲಿಕ್ಕೆ ಯಾಕೆ ಒಂದು ಫಾರ್ಮುಲ ಕಂಡು ಹಿಡಿ ಬಾರದು?

ನಿರ್ವಾಣ: ಮಾರಾಯರೇ ಅದು ಸಾಹಿತ್ಯ ಪ್ರಸವ, ಈ ಶಿವು ಇಂದ ಅದು ಯಾಕೋ ಎಲ್ಲೋ ಹೋಯಿತು ಅನ್ಸುತ್ತೆ. :) ಮತ್ತೆ ನಿಮ್ಮ ಹಾರೈಕೆಗೆ ಥ್ಯಾಂಕ್ಸ್. ನನ್ನ ಮೊದಲ ಕಾದಮಬರಿ ನ ನಿಮಗೆ ಉಚಿತವಾಗಿ ಕೊಡುವೆ. (ಆದರೆ ಅದನ್ನು ಓದುವುದನ್ನ ಶಿಕ್ಷೆ ಅಂತ ಭಾವಿಸಬೇಡಿ ಅಷ್ಟೇ. )

ರಾಜೀವ ಅವರೇ: ನೀವು ಸಿಕ್ಕಾ ಪಟ್ಟೆ ಸೀಕ್ರೆಟ್ ವಿಷಯನ ಅ ಹೇಳುತ್ತಾ ಇದ್ದೀರಿ. ನಿಮ್ಮ ಬಳಿ ಈ ತರ ಹಲವಾರು ಐಡಿಯಾ ಇರಬಹುದು. ದಿನ ಸಂಜೆ ಟ್ಯುಶನ್ ಗೆ ಬರಲೇ? :) :) ಪ್ರತಿಕ್ರಿಯೆಗೆ ಧನ್ಯವಾದ.

ಗುರುಮೂರ್ತಿ ಹೆಗಡೆ ಅವರೇ: ಪ್ರತಿಕ್ರಿಯೆಗೆ ಧನ್ಯವಾದಗಳು.

ಶಿವಪ್ರಕಾಶ್: ಹೌದು, ಮತ್ತೊಮ್ಮೆ, ಮಗದೊಮ್ಮೆ ಪ್ರಯತ್ನಿಸುವೆ.

ಗೌತಮ್: ಹೌದು ಸಿಕ್ಕಾಪಟ್ಟೆ ಅನುಭವಿಸಿದೆ.

ಬಾಲು said...

ಪ್ರಕಾಶ್ ಅವರೇ: ಹೌದು ಮರಳಿ ಪ್ರಯತ್ನ ಮಾಡುತ್ತಾ ಇರುವೆ.

ನಾಗರಾಜ್: ಅಷ್ಟೆಲ್ಲಾ ಬರೆಲಿಕ್ಕೆ ಬರಲ್ಲ ಬಿಡಿ. ಪ್ರತಿಕ್ರಿಯೆಗೆ ಧನ್ಯವಾದಗಳು.

ಶಿವು: ಪ್ರತಿಕ್ರಿಯೆಗೆ ಧನ್ಯವಾದಗಳು ನಿಮ್ಮ ಹಾರೈಕೆಗು ಕೂಡ.

ಮನಸು: ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ. ನಾನು ಕಾದಂಬರಿ, ಕಥೆ ಎಲ್ಲ ಬರೆದರೆ ಓದುವ ಕಷ್ಟ ನಿಮಗೆಲ್ಲ ಬಂದೊದಗಲಿದೆ.

ಪ್ರಭುರಾಜ್: ಹೌದು, ಮನಸ್ಸು ಒಂತರ ಛತ್ರಿ :) ನೀವು ಹೇಳಿದ ವಿಷ್ಯ ಕೂಡ ಚೆನ್ನಾಗಿದೆ, ಅದರ ಬಗ್ಗೆನೇ ಒಂದು ಕಾದಂಬರಿ ಬರೆದು ಬಿಡಬಹುದು.

ದೀಪಸ್ಮಿತ: ಪ್ರತಿಕ್ರಿಯೆಗೆ ಧನ್ಯವಾದಗಳು.

ಪಂಚ ಲೈನ್: ಹೌದು, ಪ್ರತಿಕ್ರಿಯೆಗೆ ಧನ್ಯವಾದಗಳು.

ಮನಮುಕ್ತ: ಓದಿದ್ದಕ್ಕೆ, ನಕ್ಕಿದಕ್ಕೆ ಮತ್ತು ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.

ಶ್ವೇತ: ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್.

ಜಲನಯನ said...

ಬಾಲು, ಬಹಳ ದಿನಗಳ ನಂತರ ಬ್ಲಾಗಿಸಿದ್ದೀರಿ....ಆದರೆ ನೀವು ಕಾದಂಬರಿತ್=ಯ ಕನಸಲ್ಲಿ ಇಷ್ಟು ದಿನ ಕಸರತ್ತು ಮಾಡುತ್ತಿದ್ದುದು ಈಗ್ಲೇ ಗೊತ್ತಾಗಿದ್ದು...ನನ್ನ scientific ಪ್ರಬಂಧದ ಗೋಳನೋಪಾದಿಯಲ್ಲೇ ..ನಿಮ್ಮ ಕಥನ ಮುಂದುವರೆದಿದೆ...ಇನ್ನೇನ್ಮಾಡ್ತಾರೆ..? ...ಕಡೆಗೆ ಇದರದ್ದೇ ಒಂದು ಒಳ್ಲೆಯ ಪ್ರಹಸನ ಎಂದು ಅನಿಸಿದ್ದು ಮತ್ತೊಮ್ಮೆ ನಿಮ್ಮ ಬ್ಲಾಗ್ ಓದಿದಾಗಲೇ.